ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೂತನ ಲೋಕದ ಅಸ್ತಿವಾರವು ಈಗ ರೂಪಿಸಲ್ಪಡುತ್ತಾ ಇದೆ

ನೂತನ ಲೋಕದ ಅಸ್ತಿವಾರವು ಈಗ ರೂಪಿಸಲ್ಪಡುತ್ತಾ ಇದೆ

ಭಾಗ 11

ನೂತನ ಲೋಕದ ಅಸ್ತಿವಾರವು ಈಗ ರೂಪಿಸಲ್ಪಡುತ್ತಾ ಇದೆ

1, 2. ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿ, ನಮ್ಮ ಕಣ್ಣುಗಳ ಮುಂದೆಯೇ ಏನು ಸಂಭವಿಸುತ್ತಿದೆ?

ಸೈತಾನನ ಹಳೇ ಲೋಕವು ಅವನತಿಗಿಳಿಯುತ್ತಾ ಇರುವಾಗ, ದೇವರ ನೂತನ ಲೋಕದ ಅಸ್ತಿವಾರವು ಈಗಾಗಲೇ ರೂಪಿಸಲ್ಪಡುತ್ತಾ ಇದೆ ಎಂಬ ವಾಸ್ತವಾಂಶವು ಎಷ್ಟೊಂದು ಬೆರಗುಗೊಳಿಸುವಂತಹ​ದ್ದಾಗಿದೆ. ನಮ್ಮ ಕಣ್ಣುಗಳ ಮುಂದೆಯೇ, ದೇವರು ಎಲ್ಲಾ ಜನಾಂಗ​ಗಳಿಂದ ಜನರನ್ನು ಒಟ್ಟುಗೂಡಿಸುತ್ತಾ ಇದ್ದಾನೆ ಮತ್ತು ಅವರನ್ನು ಇಂದಿನ ಅನೈಕ್ಯದ ಲೋಕವನ್ನು ಶೀಘ್ರದಲ್ಲಿಯೇ ಸ್ಥಾನಪಲ್ಲಟಗೊಳಿಸುವ ನೂತನ ಐಹಿಕ ಸಮಾಜದ ಅಸ್ತಿವಾರವಾಗಿ ರೂಪಿಸುತ್ತಾ ಇದ್ದಾನೆ. ಬೈಬಲಿನಲ್ಲಿ 2 ಪೇತ್ರ 3:13 ರಲ್ಲಿ, ಈ ಹೊಸ ಸಮಾಜವನ್ನು “ನೂತನ ಭೂಮಂಡಲ” ಎಂದು ಕರೆಯಲಾಗಿದೆ.

2 ಬೈಬಲ್‌ ಪ್ರವಾದನೆಯು ಇದನ್ನು ಸಹ ಹೇಳುತ್ತದೆ: “ಅಂತ್ಯಕಾಲದಲ್ಲಿ [ನಾವೀಗ ಜೀವಿಸುತ್ತಿರುವ ಸಮಯ] . . . ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ [ಅವನ ಸತ್ಯಾರಾಧನೆ], . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯ​ವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”—ಯೆಶಾಯ 2:2-3.

3. (ಎ) ಯೆಶಾಯನ ಪ್ರವಾದನೆಯು ಯಾರ ನಡುವೆ ನೆರವೇರುತ್ತಾ ಇದೆ? (ಬಿ) ಬೈಬಲಿನ ಕಡೆಯ ಪುಸ್ತಕವು ಈ ಬಗ್ಗೆ ಹೇಗೆ ಹೇಳಿಕೆಯನ್ನೀಯುತ್ತದೆ?

3 ಆ ಪ್ರವಾದನೆಯು ‘ದೇವರ ಮಾರ್ಗಗಳಿಗೆ’ ಅಧೀನರಾಗುವ ಮತ್ತು ‘ಆತನ ದಾರಿಗಳಲ್ಲಿ ನಡೆಯುವ’ ಜನರಲ್ಲಿ ಈಗ ನೆರವೇರುತ್ತಾ ಇದೆ. ಬೈಬಲಿನ ಕೊನೆಯ ಪುಸ್ತಕವು ಈ ಶಾಂತಿಪ್ರಿಯ ಜನರ ಅಂತಾರಾಷ್ಟ್ರೀಯ ಸಮಾಜದ ಕುರಿತು “ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದಾರೆ” ಎಂದು ಮಾತಾಡುತ್ತದೆ. ಅದು ದೇವರನ್ನು ಐಕ್ಯದಿಂದ ಸೇವಿಸುವ ಒಂದು ನೈಜ ಭೌಗೋಳಿಕ ಭ್ರಾತೃತ್ವವಾಗಿರುತ್ತದೆ. ಮತ್ತು ಬೈಬಲ್‌ ಇದನ್ನು ಸಹ ಹೇಳುತ್ತದೆ: “ಇವರು ಆ ಮಹಾ ಹಿಂಸೆಯನ್ನು ಅನುಭವಿಸಿ ಬಂದವರು.” ಅಂದರೆ, ಅವರು ಈ ವಿಷಯಗಳ ಕೆಟ್ಟ ವ್ಯವಸ್ಥೆಯ ಅಂತ್ಯವನ್ನು ಪಾರಾಗುವರು.—ಪ್ರಕಟನೆ 7:9, 14; ಮತ್ತಾಯ 24:3.

ನಿಜವಾದ ಒಂದು ಅಂತಾರಾಷ್ಟ್ರೀಯ ಭ್ರಾತೃತ್ವ

4, 5. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಭ್ರಾತೃತ್ವವು ಯಾಕೆ ಶಕ್ಯ​ವಾಗಿದೆ?

4 ಲಕ್ಷಾಂತರ ಯೆಹೋವನ ಸಾಕ್ಷಿಗಳು ದೇವರ ಬೋಧನೆಗಳೊಂದಿಗೆ ಮತ್ತು ಮಾರ್ಗಗಳೊಂದಿಗೆ ಸಹಮತದಲ್ಲಿ ಜೀವಿಸಲು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ. ನಿತ್ಯ ಜೀವದ ಅವರ ನಿರೀಕ್ಷೆಯು ದೇವರ ಹೊಸ ಲೋಕದ ಮೇಲೆ ಲಂಗರು ಹಾಕಿದೆ. ದೇವರ ನಿಯಮಗಳಿಗೆ ವಿಧೇಯತೆಯಲ್ಲಿ ದೈನಿಕ ಜೀವಿತಗಳನ್ನು ನಡಿಸಿಕೊಳ್ಳುವುದರಿಂದ, ಅವರು ಈಗಲೂ ಮತ್ತು ನೂತನ ಲೋಕದಲ್ಲೂ ಆಳಿಕೆಯ ಅವನ ವಿಧಾನಕ್ಕೆ ಅಧೀನರಾಗಲು ತಮ್ಮ ಇಚ್ಛೆಯನ್ನು ಅವನಿಗೆ ತೋರಿಸುತ್ತಾರೆ. ತಮ್ಮ ರಾಷ್ಟ್ರೀಯತೆ ಯಾ ಕುಲದ ಪರಿಗಣನೆಯಿಲ್ಲದೆ ಎಲ್ಲೆಲ್ಲಿಯೂ ಅವರು ಅದೇ ಮಟ್ಟಗಳಿಗೆ—ಆತನ ವಾಕ್ಯದಲ್ಲಿ ದೇವರು ಇಟ್ಟಿರುವವುಗಳು—ವಿಧೇಯರಾಗುತ್ತಾರೆ. ಆದುದರಿಂದಲೇ, ಅವರು ನೈಜವಾದ ಒಂದು ಅಂತಾರಾಷ್ಟ್ರೀಯ ಭ್ರಾತೃತ್ವವಾಗಿದ್ದಾರೆ, ದೇವರ ಉಂಟುಮಾಡುವಿಕೆಯ ಒಂದು ನೂತನ ಲೋಕ ಸಮಾಜವಾಗಿದೆ.—ಯೆಶಾಯ 54:13; ಮತ್ತಾಯ 22:37, 38; ಯೋಹಾನ 15:9, 14.

5 ತಾವು ಈ ಅಸದೃಶ ಭೌಗೋಳಿಕ ಭ್ರಾತೃತ್ವವಾಗಿ ಅಸ್ತಿತ್ವದಲ್ಲಿರುವುದಕ್ಕೆ ಯೆಹೋವನ ಸಾಕ್ಷಿಗಳು ಗೌರವವನ್ನು ತಕ್ಕೊಳ್ಳುವದಿಲ್ಲ. ಅವನ ನಿಯಮಗಳಿಗೆ ಅಧೀನರಾಗುವ ಜನರ ನಡುವೆ ದೇವರ ಶಕ್ತಿಯುತ ಆತ್ಮವು ಕಾರ್ಯವೆಸಗುವ ಫಲಿತಾಂಶವಾಗಿ ಇದಾಗಿದೆ ಎಂದವರು ತಿಳಿದಿರುತ್ತಾರೆ. (ಅ. ಕೃತ್ಯಗಳು 5:29, 32; ಗಲಾತ್ಯ 5:22, 23) ಅದು ದೇವರ ಮಾಡುವಿಕೆಯಾಗಿದೆ. ಯೇಸುವಂದಂತೆ, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ.” (ಲೂಕ 18:27) ಆದುದರಿಂದ ಬಾಳುವ ವಿಶ್ವವನ್ನು ಉಂಟುಮಾಡಲು ಶಕ್ತನಾದ ದೇವರು ಬಾಳುವ ನೂತನ ಲೋಕದ ಸಮಾಜವನ್ನು ಉಂಟುಮಾಡಲು ಕೂಡ ಶಕ್ತನಾಗಿದ್ದಾನೆ.

6. ಯೆಹೋವನ ಸಾಕ್ಷಿಗಳ ಭ್ರಾತೃತ್ವವನ್ನು ಒಂದು ಆಧುನಿಕ ಅದ್ಭುತವೆಂದು ಯಾಕೆ ಕರೆಯಬಲ್ಲೆವು?

6 ಹೀಗೆ, ಈಗ ರೂಪಿಸಲ್ಪಡುತ್ತಿರುವ ನೂತನ ಲೋಕದ ಅಸ್ತಿವಾರವನ್ನು ಅವನು ಉತ್ಪಾದಿಸುವುದರಲ್ಲಿ, ನೂತನ ಲೋಕದಲ್ಲಿ ಯೆಹೋವನ ಆಳಿಕೆಯ ವಿಧಾನವನ್ನು ಈಗಾಗಲೇ, ಕಾಣಸಾಧ್ಯವಿದೆ. ಮತ್ತು ಅವನು ತನ್ನ ಸಾಕ್ಷಿಗಳಲ್ಲಿ ಏನನ್ನು ಮಾಡಿದ್ದಾನೋ, ಅದು ಒಂದು ಅರ್ಥದಲ್ಲಿ, ಒಂದು ಆಧುನಿಕ ಅದ್ಭುತವಾಗಿರುತ್ತದೆ. ಯಾಕೆ? ಯಾಕಂದರೆ ಯೆಹೋವನ ಸಾಕ್ಷಿಗಳನ್ನು ಅವನು ನೈಜವಾದ ಒಂದು ಲೋಕವ್ಯಾಪಕ ಭ್ರಾತೃತ್ವವಾಗಿ ಕಟ್ಟಿರುತ್ತಾನೆ, ಅದು ವಿಭಜಿತ ರಾಷ್ಟ್ರೀಯ, ಕುಲವರ್ಣೀಯ, ಯಾ ಧಾರ್ಮಿಕ ಹಿತಾಸಕ್ತಿಗಳಿಂದ ಎಂದಿಗೂ ಮುರಿಯಲ್ಪಡಲಾರದು. ಸಾಕ್ಷಿಗಳು ಸಂಖ್ಯೆಯಲ್ಲಿ ಲಕ್ಷಗಳಷ್ಟು 200 ಕ್ಕಿಂತಲೂ ಅಧಿಕ ದೇಶಗಳಲ್ಲಿ ಇರುವುದಾದರೂ, ಅವರು ಮುರಿಯಲಶಕ್ಯವಾದ ಒಂದು ಬಂಧದೊಳಗೆ ಏಕೀಕೃತರಾಗಿದ್ದಾರೋ ಎಂಬಂತೆ ಅವರು ಒಟ್ಟಾಗಿ ಬಂಧಿಸಲ್ಪಟ್ಟಿರುತ್ತಾರೆ. ಈ ಲೋಕವ್ಯಾಪಕ ಭ್ರಾತೃತ್ವವು, ಇತಿಹಾಸದಲ್ಲೆಲ್ಲಾ ಅಸದೃಶವಾಗಿದ್ದು, ಖಂಡಿತವಾಗಿಯೂ ಒಂದು ಆಧುನಿಕ ಅದ್ಭುತ—ದೇವರ ಮಾಡುವಿಕೆ—ಆಗಿದೆ.—ಯೆಶಾಯ 43:10, 11, 21; ಅ. ಕೃತ್ಯಗಳು 10:34, 35; ಗಲಾತ್ಯ 3:28.

ದೇವರ ಜನರನ್ನು ಗುರುತಿಸುವುದು

7. ತನ್ನ ನಿಜ ಹಿಂಬಾಲಕರು ಗುರುತಿಸಲ್ಪಡುವುದು ಹೇಗೆ ಎಂದು ಯೇಸುವು ಹೇಳಿದ್ದಾನೆ?

7 ತನ್ನ ನೂತನ ಲೋಕದ ಬುನಾದಿಯೋಪಾದಿ ದೇವರು ಉಪಯೋಗಿಸುತ್ತಿರುವ ಜನರು ಯಾರೆಂದು ಇನ್ನಷ್ಟು ಖಚಿತಪಡಿಸಿಕೊಳ್ಳುವುದು ಹೇಗೆ ಸಾಧ್ಯ? ಒಳ್ಳೇದು, ಯೋಹಾನ 13:34, 35ರ ಯೇಸುವಿನ ಮಾತುಗಳನ್ನು ಯಾರು ನೆರವೇರಿಸುತ್ತಿದ್ದಾರೆ? ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಯೆಹೋವನ ಸಾಕ್ಷಿಗಳು ಯೇಸುವಿನ ಮಾತುಗಳನ್ನು ನಂಬುತ್ತಾರೆ ಮತ್ತು ಅದಕ್ಕನುಸಾರ ವರ್ತಿಸುತ್ತಾರೆ. ದೇವರ ವಾಕ್ಯವು ಉಪದೇಶಿಸುವಂತೆ, ಅವರಲ್ಲಿ “ಒಬ್ಬರಿಗೆ ಇನ್ನೊಬ್ಬರೊಂದಿಗೆ ಗಾಢವಾದ ಪ್ರೀತಿಯು” ಇದೆ. (1 ಪೇತ್ರ 4:8, NW) ಇದಕ್ಕೆ ಕೂಡಿಸಿ, ಅವರು “ಇದೆಲ್ಲಾದರ ಮೇಲೆ ಪ್ರೀತಿಯನ್ನು [ತಾವಾಗಿಯೇ] ಧರಿಸಿ”ಕೊಂಡಿದ್ದಾರೆ, “ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:14) ಹೀಗೆ ಸಹೋದರರ ಪ್ರೀತಿಯು ಲೋಕವ್ಯಾಪಕವಾಗಿ ಅವರನ್ನು ಒಟ್ಟಾಗಿ ಇರಿಸುವ “ಅಂಟು” ಆಗಿದೆ.

8. ಇನ್ನೂ ಹೆಚ್ಚಾಗಿ, 1 ಯೋಹಾನ 3:10-12 ದೇವ ಜನರನ್ನು ಹೇಗೆ ಗುರುತಿಸುತ್ತದೆ?

8 ಒಂದು ಯೋಹಾನ 3:10-12 ಸಹ ಹೇಳುವುದು: “ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾಕ್ಯವಾಗಿದೆ. ಕೆಡುಕಿನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು.” ಆದಕಾರಣ, ದೇವರ ಜನರು ಅಹಿಂಸಾತ್ಮಕರಾದ, ಭೌಗೋಳಿಕ ಭ್ರಾತೃತ್ವದವರಾಗಿದ್ದಾರೆ.

ಗುರುತಿಸುವ ಇನ್ನೊಂದು ವೈಶಿಷ್ಟ್ಯ

9, 10. (ಎ) ಕಡೇ ದಿವಸಗಳಲ್ಲಿ ಯಾವ ಕಾರ್ಯದ ಮೂಲಕ ದೇವರ ಸೇವಕರು ಗುರುತಿಸಲ್ಪಡುವರು? (ಬಿ) ಯೆಹೋವನ ಸಾಕ್ಷಿಗಳು ಮತ್ತಾಯ 24:14ನ್ನು ಹೇಗೆ ನೆರವೇರಿಸಿದ್ದಾರೆ?

9 ದೇವರ ಸೇವಕರನ್ನು ಗುರುತಿಸುವ ಇನ್ನೊಂದು ರೀತಿಯು ಇದೆ. ಲೋಕಾಂತ್ಯದ ಕುರಿತಾದ ತನ್ನ ಪ್ರವಾದನೆಯಲ್ಲಿ ಯೇಸುವು, ಕಡೇ ದಿವಸಗಳೋಪಾದಿ ಈ ಸಮಯಾವಧಿಯನ್ನು ಗುರುತಿಸುವ ಅನೇಕ ವಿಷಯಗಳ ಕುರಿತು ಹೇಳಿದನು. (9 ನೆಯ ಭಾಗವನ್ನು ನೋಡಿರಿ.) ಈ ಪ್ರವಾದನೆಯ ಒಂದು ಮೂಲಭೂತ ವೈಶಿಷ್ಟ್ಯವು ಮತ್ತಾಯ 24:14 ರಲ್ಲಿ ಅವನ ಮಾತುಗಳಲ್ಲಿ ತಿಳಿಸಲಾಗಿದೆ: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”

10 ಆ ಪ್ರವಾದನೆಯು ನೆರವೇರುತ್ತಿರುವುದನ್ನು ನಾವು ಕಂಡಿದ್ದೇವೋ? ಹೌದು. ಕಡೇ ದಿವಸಗಳು 1914 ರಲ್ಲಿ ಆರಂಭಿಸಿದಂದಿನಿಂದ, ಯೆಹೋವನ ಸಾಕ್ಷಿಗಳು, ಯೇಸುವು ಆಜ್ಞಾಪಿಸಿದಂತಹ ವಿಧಾನದಲ್ಲಿ, ಅಂದರೆ ಜನರ ಮನೆಗಳಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಲೋಕದಾದ್ಯಂತ ಸಾರುತ್ತಿದ್ದಾರೆ. (ಮತ್ತಾಯ 10:7, 12; ಅ. ಕೃತ್ಯಗಳು 20:20) ಲಕ್ಷಾಂತರ ಸಾಕ್ಷಿಗಳು ನೂತನ ಲೋಕದ ಕುರಿತು ಜನರೊಡನೆ ಮಾತಾಡಲು ಪ್ರತಿಯೊಂದು ರಾಷ್ಟ್ರದಲ್ಲಿ ಜನರಿಗೆ ಭೇಟಿ ನೀಡುತ್ತಾರೆ. ಆದು ತಾನೇ ಈ ಬ್ರೊಷರ್‌ ನಿಮಗೆ ದೊರಕುವಂತೆ ನಡಿಸಿದೆ, ಯಾಕಂದರೆ ಯೆಹೋವನ ಸಾಕ್ಷಿಗಳ ಕಾರ್ಯದಲ್ಲಿ ದೇವರ ರಾಜ್ಯದ ಕುರಿತಾಗಿ ಮುದ್ರಿಸುವುದು ಮತ್ತು ಕೋಟಿಗಟ್ಟಲೆ ಸಾಹಿತ್ಯಗಳ ಪ್ರತಿಗಳನ್ನು ವಿತರಿಸುವುದು ಸೇರಿರುತ್ತದೆ. ಲೋಕಾದ್ಯಂತ ದೇವರ ರಾಜ್ಯದ ಕುರಿತು ಮನೆಯಿಂದ ಮನೆಗೆ ಬೇರೆ ಯಾರಾದರೂ ಸಾರುವುದು ನಿಮಗೆ ತಿಳಿದಿದೆಯೇ? ಮತ್ತು ಮಾರ್ಕ 13:10 ತೋರಿಸುವುದೇನಂದರೆ ಅಂತ್ಯವು ಬರುವ “ಮೊದಲು” ಈ ಸಾರುವ ಮತ್ತು ಕಲಿಸುವ ಕಾರ್ಯವು ಮಾಡಲ್ಪಡಲೇ ಬೇಕು.

ಎರಡನೆಯ ಮಹಾ ವಿವಾದಾಂಶವನ್ನು ಉತ್ತರಿಸುವುದು

11. ದೇವರ ಆಳಿಕೆಗೆ ಅಧೀನರಾಗುವುದರಿಂದ ಯೆಹೋವನ ಸಾಕ್ಷಿಗಳು ಬೇರೆ ಏನನ್ನು ಪೂರೈಸುತ್ತಾರೆ?

11 ದೇವರ ನಿಯಮಗಳಿಗೆ ಮತ್ತು ತತ್ವಗಳಿಗೆ ಅಧೀನರಾಗುವುದರ ಮೂಲಕ, ಯೆಹೋವನ ಸಾಕ್ಷಿಗಳು ಬೇರೆ ಯಾವುದನ್ನೋ ಪೂರೈಸುತ್ತಿದ್ದಾರೆ. ಪರೀಕ್ಷೆಗಳ ಕೆಳಗೆ ದೇವರಿಗೆ ಮನುಷ್ಯನು ನಂಬಿಗಸ್ತನಾಗಿ ನಿಲ್ಲಶಕ್ತನಲ್ಲವೆಂದು ವಾದಿಸಿದಾಗ, ಸೈತಾನನು ಒಬ್ಬ ಸುಳ್ಳುಗಾರನಾಗಿದ್ದನೆಂದು ಅವರು ತೋರಿಸುತ್ತಾರೆ, ಹೀಗೆ ಮಾನವ ಸಮಗ್ರತೆಯನ್ನೊಳಗೊಂಡಿರುವ ಎರಡನೆಯ ಮಹಾ ವಿವಾದಾಂಶವನ್ನು ಅವರು ಉತ್ತರಿಸುತ್ತಾರೆ. (ಯೋಬ 2:1-5) ಎಲ್ಲಾ ಜನಾಂಗ​ಗಳಿಂದ ಬಂದ ಲಕ್ಷಾಂತರ ಜನರ ಒಂದು ಸಮಾಜವಾಗಿರುವುದರಿಂದ, ಒಂದು ಸಮೂಹದೋಪಾದಿ, ದೇವರ ಆಳಿಕೆಗೆ ನಿಷ್ಠೆಯನ್ನು ಯೆಹೋವನ ಸಾಕ್ಷಿಗಳು ಪ್ರದರ್ಶಿಸುತ್ತಾರೆ. ಅವರು ಅಪರಿಪೂರ್ಣ ಮನುಷ್ಯರಾಗಿರುವುದಾದರೂ ಕೂಡ, ವಿಶ್ವದ ಸಾರ್ವಭೌಮತೆಯ ವಿವಾದಾಂಶದಲ್ಲಿ ಸೈತಾನಿಕ ಒತ್ತಡಗಳು ಇದ್ದಾಗ್ಯೂ, ಅವರು ದೇವರ ಪಕ್ಷವನ್ನು ಎತ್ತಿಹಿಡಿಯುತ್ತಾರೆ.

12. ಅವರ ನಂಬಿಕೆಯಿಂದ, ಸಾಕ್ಷಿಗಳು ಯಾರನ್ನು ಅನುಕರಿಸುತ್ತಾರೆ?

12 ಇಂದು, ಲಕ್ಷಗಟ್ಟಲೆ ಯೆಹೋವನ ಸಾಕ್ಷಿಗಳು ಗತಕಾಲಗಳಲ್ಲಿ ದೇವರಿಗೆ ನಿಷ್ಠೆಯನ್ನು ತೋರಿಸಿದ ಇತರ ಸಾಕ್ಷಿಗಳ ಉದ್ದವಾದ ಸಾಲಿಗೆ ಅವರ ಪುರಾವೆಗಳನ್ನು ಕೂಡಿಸುತ್ತಾರೆ. ಹೇಬೆಲ, ನೋಹ, ಯೋಬ, ಅಬ್ರಹಾಮ, ಸಾರ, ಇಸಾಕ, ಯಾಕೋಬ, ದೆಬೋರಾ, ರೂತ, ದಾವೀದ, ಮತ್ತು ದಾನಿಯೇಲ ಎಂಬವರು ಇವರಲ್ಲಿ ಹೆಸರಿಸಬಹುದಾದ ಕೆಲವರು. (ಇಬ್ರಿಯ, ಅಧ್ಯಾಯ 11) ಬೈಬಲ್‌ ಹೇಳುವಂತೆ, ಅವರು ‘ನಂಬಿಗಸ್ತ ಸಾಕ್ಷಿಗಳ ಮಹಾ ಮೇಘದೋಪಾದಿ’ ಇರುತ್ತಾರೆ. (ಇಬ್ರಿಯ 12:1) ಇವರು ಮತ್ತು ಯೇಸುವಿನ ಶಿಷ್ಯರ ಸಹಿತ ಇನ್ನಿತರರು ದೇವರಿಗೆ ಸಮಗ್ರತೆಯನ್ನು ಕಾಪಾಡಿಕೊಂಡರು. ಮತ್ತು ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡ ಮೂಲಕ ಯೇಸು ಸ್ವತಃ ಅತಿ ಮಹತ್ತಾದ ಮಾದರಿಯನ್ನು ಒದಗಿಸಿದ್ದಾನೆ.

13. ಸೈತಾನನ ಕುರಿತಾದ ಯೇಸುವಿನ ಯಾವ ಮಾತುಗಳು ಸತ್ಯವೆಂದು ರುಜುವಾಗಿವೆ?

13 ಸೈತಾನನ ಕುರಿತು ಧಾರ್ಮಿಕ ಮುಂದಾಳುಗಳಿಗೆ ಯೇಸು ಏನಂದಿದ್ದನೋ ಅದು ಸತ್ಯವಾಗಿದೆಯೆಂದು ಇದು ರುಜುಪಡಿಸುತ್ತದೆ: “ನೀವು ಹಾಗೆ ಮಾಡದೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾದ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ; . . . ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.”—ಯೋಹಾನ 8:40, 44.

ನಿಮ್ಮ ಆಯ್ಕೆ ಏನು?

14. ನೂತನ ಲೋಕದ ಅಸ್ತಿವಾರಕ್ಕೆ ಈಗ ಏನು ಸಂಭವಿಸುತ್ತಾ ಇದೆ?

14 ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮಾಜದಲ್ಲಿ ದೇವರಿಂದ ಈಗ ರೂಪಿಸಲ್ಪಡುತ್ತಿರುವ ನೂತನ ಲೋಕದ ಅಸ್ತಿವಾರವು ದೃಢವೂ, ಭದ್ರವೂ ಆಗುತ್ತಾ ಇದೆ. ದೇವರ ಆಳಿಕೆಯನ್ನು ಸ್ವೀಕರಿಸಲು, ಸ್ಪಷ್ಟ ಜ್ಞಾನದ ಮೇಲಾಧರಿತವಾಗಿರುವ ತಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಲಕ್ಷಾಂತರ ಜನರು ಉಪಯೋಗಿಸುತ್ತಿದ್ದಾರೆ. ಅವರು ನೂತನ ಲೋಕ ಸಮಾಜದ ಭಾಗವಾಗುತ್ತಾರೆ, ವಿಶ್ವ ಸಾರ್ವಭೌಮತೆಯ ವಿವಾದಾಂಶದಲ್ಲಿ ದೇವರ ಪಕ್ಷವನ್ನು ಎತ್ತಿಹಿಡಿಯುತ್ತಾರೆ, ಮತ್ತು ಸೈತಾನನು ಒಬ್ಬ ಸುಳ್ಳುಗಾರನೆಂದು ರುಜುಪಡಿಸುತ್ತಾರೆ.

15. ನಮ್ಮ ದಿನಗಳಲ್ಲಿ ಯೇಸುವು ಯಾವ ವಿಂಗಡಿಸುವ ಕೆಲಸವನ್ನು ಮಾಡುತ್ತಾ ಇದ್ದಾನೆ?

15 ದೇವರಾಳಿಕೆಯನ್ನು ಆಯ್ಕೆಮಾಡುವುದರ ಮೂಲಕ, “ಆಡುಗಳಿಂದ” ಅವನು “ಕುರಿಗಳನ್ನು” ಪ್ರತ್ಯೇಕಿಸುವಾಗ, ಅವರು ಕ್ರಿಸ್ತನ “ಬಲಗಡೆಯಲ್ಲಿ” ಇರಲು ಅರ್ಹರಾಗುತ್ತಾರೆ. ಕಡೇ ದಿವಸಗಳ ತನ್ನ ಪ್ರವಾದನೆಯಲ್ಲಿ, ಯೇಸುವು ಮುಂತಿಳಿಸಿದ್ದು: “ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ತನ್ನ ಎಡಗಡೆಯಲ್ಲಿ ನಿಲ್ಲಿಸುವನು.” ಕುರಿಗಳು ದೇವರ ಆಳಿಕೆಗೆ ಅಧೀನರಾಗುತ್ತಾ, ಕ್ರಿಸ್ತನ ಸಹೋದರರೊಂದಿಗೆ ಸಹವಸಿಸುತ್ತಾ, ಅವರಿಗೆ ಬೆಂಬಲವನ್ನೀಯುವ ನಮ್ರ ಜನರಾಗಿದ್ದಾರೆ. ಆಡುಗಳು ಕ್ರಿಸ್ತನ ಸಹೋದರರನ್ನು ನಿರಾಕರಿಸುವ ಮತ್ತು ದೇವರಾಳಿಕೆಯನ್ನು ಬೆಂಬಲಿಸಲು ಏನನ್ನೂ ಮಾಡದ ಹಠಮಾರಿ ಜನರಾಗಿದ್ದಾರೆ. ಯಾವ ಫಲಿತಾಂಶಗಳೊಂದಿಗೆ? ಯೇಸುವು ಅಂದದ್ದು: “ಇವರು [ಆಡುಗಳು] ನಿತ್ಯ ಶಿಕ್ಷೆಗೂ ನೀತಿವಂತರು [ಕುರಿಗಳು] ನಿತ್ಯಜೀವಕ್ಕೂ ಹೋಗುವರು.”—ಮತ್ತಾಯ 25:31-46.

16. ಬರಲಿರುವ ಪ್ರಮೋದವನದಲ್ಲಿ ಜೀವಿಸಲು ಬಯಸುವುದಾದರೆ, ಯಾವ ಕೆಲಸವನ್ನು ನೀವು ಮಾಡತಕ್ಕದ್ದು?

16 ನಿಜವಾಗಿಯೂ, ದೇವರು ನಮ್ಮ ಕುರಿತು ಚಿಂತಿಸುತ್ತಾನೆ! ಬಲುಬೇಗನೆ ಅವನು ಒಂದು ಆಹ್ಲಾದಕರವಾದ ಐಹಿಕ ಪ್ರಮೋದವನವನ್ನು ಒದಗಿಸಲಿರುವನು. ಆ ಪ್ರಮೋದವನದಲ್ಲಿ ಜೀವಿಸಲು ನೀವು ಬಯಸುವಿರೋ? ಹಾಗಿರುವುದಾದರೆ, ಅವನ ಕುರಿತು ಕಲಿಯುವುದರ ಮೂಲಕ ಮತ್ತು ನೀವೇನನ್ನು ಕಲಿಯುತ್ತಿರೋ ಅದಕ್ಕನುಸಾರ ಕ್ರಿಯೆಗೈಯುವದರ ಮೂಲಕ ಯೆಹೋವನ ಒದಗಿಸುವಿಕೆಗಳಿಗೆ ನಿಮ್ಮ ಗಣ್ಯತೆಯನ್ನು ತೋರಿಸಿರಿ. “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.”—ಯೆಶಾಯ 55:6, 7.

17. ಯಾರನ್ನು ಸೇವಿಸುವುದು ಎಂಬ ವಿಷಯದಲ್ಲಿ ಆಯ್ಕೆ ಮಾಡುವುದರಲ್ಲಿ ಹಾಳುಮಾಡಲು ಸಮಯವಿಲ್ಲ ಏಕೆ?

17 ಹಾಳು ಮಾಡಲು ಸಮಯವಿಲ್ಲ. ಈ ಹಳೇ ವ್ಯವಸ್ಥೆಯ ಅಂತ್ಯವು ಅತಿ ಸನ್ನಿಹಿತವಾಗಿದೆ. ದೇವರ ವಾಕ್ಯವು ಹಿತೋಪದೇಶಿಸುವುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. . . . ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:15-17.

18. ದೇವರ ಅದ್ಭುತಕರ ನೂತನ ಲೋಕದಲ್ಲಿ ಜೀವಿಸುವುದನ್ನು ನೀವು ದೃಢತೆಯಿಂದ ಮುನ್ನೋಡಲು ಯಾವ ಕಾರ್ಯ ಪಥವು ನಿಮ್ಮನ್ನು ಶಕ್ತರನ್ನಾಗಿ ಮಾಡುವುದು?

18 ನೂತನ ಲೋಕದಲ್ಲಿ ನಿತ್ಯ ಜೀವಕ್ಕಾಗಿ ದೇವರ ಜನರು ಈಗಾಗಲೇ ತರಬೇತಿಸಲ್ಪಡುತ್ತಾ ಇದ್ದಾರೆ. ಅವರು ಪ್ರಮೋದವನದಲ್ಲಿ ವಿಕಸಿಸಲು ಆವಶ್ಯಕವಾದ ಆತ್ಮಿಕ ಮತ್ತು ಇತರ ಕೌಶಲಗಳನ್ನು ಕಲಿಯುತ್ತಿದ್ದಾರೆ. ಆಳುವವನಾಗಿ ದೇವರನ್ನು ಆರಿಸುವಂತೆ ಮತ್ತು ಇಂದು ಲೋಕದಲ್ಲೆಲ್ಲಾ ಅವನು ಮಾಡಿರುವ ಜೀವರಕ್ಷಕ ಕಾರ್ಯವನ್ನು ಬೆಂಬಲಿಸುವಂತೆ ನಾವು ನಿಮ್ಮನ್ನು ಪ್ರಚೋದಿಸುತ್ತೇವೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಧ್ಯಯನ ಮಾಡಿರಿ, ಮತ್ತು ನಿಮ್ಮ ಕುರಿತು ನಿಜವಾಗಿಯೂ ಚಿಂತಿಸುವ ಹಾಗೂ, ಕಷ್ಟಾನುಭವಕ್ಕೆ ಅಂತ್ಯವನ್ನು ತರಲಿರುವ ದೇವರ ಪರಿಚಯ ಮಾಡಿಕೊಳ್ಳಿರಿ. ಈ ರೀತಿಯಲ್ಲಿ ನೀವೂ ನೂತನ ಲೋಕದ ಅಸ್ತಿವಾರದ ಒಂದು ಭಾಗವಾಗಶಕ್ತರಾಗುವಿರಿ. ಅನಂತರ ದೇವರ ಮೆಚ್ಚಿಕೆಯನ್ನು ಪಡೆಯಲು ಮತ್ತು ಆ ಅದ್ಭುತ ನೂತನ ಲೋಕದಲ್ಲಿ ಸದಾ ಕಾಲ ಜೀವಿಸುವುದನ್ನು ನೀವು ದೃಢತೆಯಿಂದ ಮುನ್ನೋಡಬಲ್ಲಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 31ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳಲ್ಲಿ ನೈಜವಾದ ಒಂದು ಅಂತಾರಾಷ್ಟ್ರೀಯ ಭ್ರಾತೃತ್ವವಿದೆ

[ಪುಟ 32ರಲ್ಲಿರುವ ಚಿತ್ರ]

ದೇವರ ನೂತನ ಲೋಕದ ಅಸ್ತಿವಾರವು ಈಗ ರೂಪಿಸಲ್ಪಡುತ್ತಾ ಇದೆ