ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’

ಈ ಪುಸ್ತಕದಲ್ಲಿ, ಒಂದನೇ ಶತಮಾನದಲ್ಲಿ ಕ್ರೈಸ್ತ ಸಭೆ ಹೇಗೆ ಶುರು ಆಯ್ತು, ಅದ್ರಿಂದ ನಮಗಿರೋ ಪಾಠಗಳೇನು ಅಂತ ಇದೆ.

ಭೂಪಟಗಳು

ಈ ಭೂಪಟದಲ್ಲಿ ಈಗ ಯಾವುದನ್ನ ಪವಿತ್ರ ದೇಶ ಅಂತ ಕರಿತಾರೋ ಅದನ್ನ ನೋಡಬಹುದು ಮತ್ತು ಅಪೊಸ್ತಲ ಪೌಲ ಮಾಡಿದ ಮಿಷನರಿ ಪ್ರಯಾಣಗಳ ಬಗ್ಗೆನೂ ನೋಡಬಹುದು.

ಆಡಳಿತ ಮಂಡಲಿಯಿಂದ ಒಂದು ಪತ್ರ

ನಾವು ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’ ಕೊಡೋಕೆ ನಮ್ಮ ಕೈಲಾದ ಪ್ರಯತ್ನ ಹಾಕೋವಾಗ ದೇವರು ನಮಗೆ ಸಹಾಯ ಮಾಡ್ತಾನೆ ಅಂತ ಯಾಕೆ ನಂಬಬಹುದು?

ಅಧ್ಯಾಯ 1

‘ಹೋಗಿ ಜನ್ರಿಗೆ ಶಿಷ್ಯರಾಗೋಕೆ ಕಲಿಸಿ’

ದೇವರ ಆಳ್ವಿಕೆ ಬಗ್ಗೆ ಇರೋ ಸಂದೇಶ ಎಲ್ಲಾ ದೇಶಗಳಿಗೆ ಸಾರಲಾಗುತ್ತೆ ಅಂತ ಯೇಸು ಭವಿಷ್ಯವಾಣಿ ಹೇಳಿದ್ದನು. ಅದು ಹೇಗೆ ನಿಜ ಆಯ್ತು?

ಅಧ್ಯಾಯ 2

‘ನೀವು ನನ್ನ ಬಗ್ಗೆ ಸಾಕ್ಷಿ ಕೊಡ್ತೀರ’

ಅಪೊಸ್ತಲರು ಮುಂದೆ ನಿಂತು ಸಿಹಿಸುದ್ದಿ ಸಾರೋಕೆ ಅವ್ರನ್ನ ಯೇಸು ಹೇಗೆ ತಯಾರಿ ಮಾಡಿದನು?

ಅಧ್ಯಾಯ 3

“ಪವಿತ್ರಶಕ್ತಿ ಸಿಕ್ತು”

ಕ್ರೈಸ್ತ ಸಭೆ ಶುರು ಆಗೋಕೆ ದೇವರ ಪವಿತ್ರಶಕ್ತಿ ಹೇಗೆ ಸಹಾಯ ಮಾಡ್ತು?

ಅಧ್ಯಾಯ 4

“ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ”

ಅಪೊಸ್ತಲರು ಧೈರ್ಯದಿಂದ ಸಾರಿದ್ರು, ಯೆಹೋವ ಅವ್ರನ್ನ ಆಶೀರ್ವದಿಸಿದನು.

ಅಧ್ಯಾಯ 6

ಸ್ತೆಫನ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’

ಯೆಹೂದ್ಯರ ಹೈಕೋರ್ಟಲ್ಲಿ ಸ್ತೆಫನ ಧೈರ್ಯವಾಗಿ ಮಾತಾಡಿದ್ರಿಂದ ನಾವೇನು ಕಲಿಬಹುದು?

ಅಧ್ಯಾಯ 7

“ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ

ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ಫಿಲಿಪ್ಪ ನಮಗೆ ಒಳ್ಳೇ ಮಾದರಿ.

ಅಧ್ಯಾಯ 8

ಸಭೆಯಲ್ಲಿ “ಸಮಾಧಾನ ಇತ್ತು”

ದಯೆನೇ ಇಲ್ಲದೆ ಹಿಂಸೆ ಕೊಡ್ತಿದ್ದ ಸೌಲ ಸಿಹಿಸುದ್ದಿ ಸಾರೋ ವ್ಯಕ್ತಿಯಾದ.

ಅಧ್ಯಾಯ 9

“ದೇವರು ಭೇದಭಾವ ಮಾಡಲ್ಲ”

ಸುನ್ನತಿ ಆಗದಿದ್ದ ಯೆಹೂದ್ಯರಲ್ಲದ ಜನ್ರಿಗೆ ಸಿಹಿಸುದ್ದಿ ಕೇಳಿಸ್ಕೊಳ್ಳೋ ಅವಕಾಶ ಸಿಕ್ತು.

ಅಧ್ಯಾಯ 10

“ಯೆಹೋವನ ಸಂದೇಶ ಎಲ್ಲ ಕಡೆ ಹಬ್ತಾ ಇತ್ತು”

ಪೇತ್ರನಿಗೆ ಬಿಡುಗಡೆ ಆಗುತ್ತೆ ಮತ್ತು ಹಿಂಸೆ ಇದ್ರೂ ಕ್ರೈಸ್ತರು ಸಿಹಿಸುದ್ದಿಯನ್ನೇ ಬೇರೆ ಬೇರೆ ಕಡೆಗೆ ಹಬ್ಬಿಸಿದ್ರು.

ಅಧ್ಯಾಯ 11

‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’

ಸಿಹಿಸುದ್ದಿ ಸಾರುವಾಗ ಜನ್ರು ಅದನ್ನ ಇಷ್ಟಪಡದಿದ್ರೆ, ಕೋಪದಿಂದ ನಡ್ಕೊಂಡ್ರೆ ಏನು ಮಾಡಬೇಕಂತ ಪೌಲ ನಮಗೆ ತೋರಿಸ್ಕೊಟ್ಟಿದ್ದಾನೆ.

ಅಧ್ಯಾಯ 12

‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’

ಪೌಲ ಮತ್ತು ಬಾರ್ನಬ ದೀನರಾಗಿದ್ರು, ಮತ್ತೆ ಮತ್ತೆ ಪ್ರಯತ್ನ ಮಾಡಿ ಸಿಕ್ಕಿದ ಕೆಲಸನ ಮುಗಿಸ್ತಿದ್ರು ಮತ್ತು ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತಿದ್ರು.

ಅಧ್ಯಾಯ 13

‘ವಾದ ವಿವಾದ ಆಯ್ತು’

ಸುನ್ನತಿ ಬಗ್ಗೆ ಇದ್ದ ವಿವಾದ ಆಡಳಿತ ಮಂಡಲಿವರೆಗೆ ತಲಪ್ತು.

ಅಧ್ಯಾಯ 14

“ನಾವೆಲ್ರೂ ಸೇರಿ ನಿರ್ಣಯ ಮಾಡಿದ್ವಿ”

ಸಭೆಯಲ್ಲಿ ಸುನ್ನತಿ ಬಗ್ಗೆ ಬಂದ ಸಮಸ್ಯೆಯನ್ನ ಆಡಳಿತ ಮಂಡಲಿ ಹೇಗೆ ಬಗೆಹರಿಸ್ತು, ಯಾವ ತೀರ್ಮಾನ ತಗೊಳ್ತು ಮತ್ತು ಅದ್ರಿಂದ ಸಭೆಗಳಲ್ಲಿ ಹೇಗೆ ಒಗ್ಗಟ್ಟು ಬಂತು ಅಂತ ಓದಿ ತಿಳ್ಕೊಳ್ಳಿ.

ಅಧ್ಯಾಯ 15

‘ಸಭೆಗಳನ್ನ ಬಲಪಡಿಸಿದ್ರು’

ಬೇರೆ ಬೇರೆ ಸಭೆಗಳಿಗೆ ಹೋಗೋ ಸಂಚರಣ ಮೇಲ್ವಿಚಾರಕರು ಸಹೋದರ ಸಹೋದರಿಯರ ನಂಬಿಕೆನ ಇನ್ನೂ ಜಾಸ್ತಿ ಮಾಡೋಕೆ ಸಹಾಯ ಮಾಡ್ತಾರೆ.

ಅಧ್ಯಾಯ 16

‘ಮಕೆದೋನ್ಯಕ್ಕೆ ಬನ್ನಿ’

ದೇವರು ಕೊಡೋ ಕೆಲಸನ ಮಾಡೋದ್ರಿಂದ ಮತ್ತು ಹಿಂಸೆನ ಸಂತೋಷವಾಗಿ ಸಹಿಸ್ಕೊಳ್ಳೋದ್ರಿಂದ ಆಶೀರ್ವಾದಗಳು ಸಿಗುತ್ತೆ.

ಅಧ್ಯಾಯ 17

‘ಅವನು ವಚನಗಳನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿದ’

ಥೆಸಲೊನೀಕ ಮತ್ತು ಬೆರೋಯದಲ್ಲಿರೋ ಯೆಹೂದ್ಯರಿಗೆ ಪೌಲ ಬೈಬಲ್‌ ಸತ್ಯಗಳ ಬಗ್ಗೆ ಚೆನ್ನಾಗಿ ವಿವರಿಸಿದ.

ಅಧ್ಯಾಯ 18

‘ದೇವರನ್ನ ಹುಡುಕಬೇಕು, ನಮಗೆ ಸಿಗ್ತಾನೆ’

ಜನರು ನಂಬೋ ಸಾಮಾನ್ಯ ವಿಷ್ಯಗಳ ಬಗ್ಗೆ ಮಾತಾಡಿದ್ರಿಂದ ಪೌಲನಿಗೆ ಸಾರೋಕೆ ಯಾವೆಲ್ಲ ಅವಕಾಶಗಳು ಸಿಕ್ತು?

ಅಧ್ಯಾಯ 19

“ಮಾತಾಡ್ತಾನೇ ಇರು, ಸುಮ್ಮನಿರಬೇಡ”

ಪೌಲ ಕೊರಿಂಥದಲ್ಲಿ ಮಾಡಿದ ಸೇವೆ ಬಗ್ಗೆ ತಿಳ್ಕೊಂಡ್ರೆ ನಮಗೂ ದೇವರ ಆಳ್ವಿಕೆ ಬಗ್ಗೆ ಚೆನ್ನಾಗಿ ಸಾರೋಕೆ ಪ್ರೋತ್ಸಾಹ ಸಿಗುತ್ತೆ. ಹೇಗೆ?

ಅಧ್ಯಾಯ 20

ಹಿಂಸೆ ಬಂದ್ರೂ ‘ಸಿಹಿಸುದ್ದಿ ಎಲ್ಲಾ ಕಡೆ ಹಬ್ಬಿತು, ತುಂಬಾ ಜನ ನಂಬಿದ್ರು’

ಸಿಹಿಸುದ್ದಿಯನ್ನ ಹಬ್ಬಿಸೋ ಸಲುವಾಗಿ ಅಪೊಲ್ಲೋಸ ಮತ್ತು ಪೌಲ ಏನೆಲ್ಲ ಮಾಡಿದ್ರು ಅಂತ ಕಲೀರಿ.

ಅಧ್ಯಾಯ 21

“ಯಾರಾದ್ರೂ ನಾಶವಾದ್ರೆ ಅದಕ್ಕೆ ನಾನು ಕಾರಣ ಅಲ್ಲ”

ಪೌಲ ಹುರುಪಿಂದ ಸೇವೆ ಮಾಡ್ತಾನೆ ಮತ್ತು ಹಿರಿಯರಿಗೆ ಸಲಹೆ ಕೊಡ್ತಾನೆ.

ಅಧ್ಯಾಯ 22

“ಯೆಹೋವನ ಇಷ್ಟ ಏನಿದ್ಯೋ ಅದೇ ಆಗಲಿ”

ಪೌಲ ಏನೇ ಆದ್ರೂ ದೇವರಿಗೆ ಏನಿಷ್ಟನೋ ಅದನ್ನೇ ಮಾಡಬೇಕು ಅಂತ ತೀರ್ಮಾನ ಮಾಡಿ ಯೆರೂಸಲೇಮಿಗೆ ಹೋಗ್ತಾನೆ.

ಅಧ್ಯಾಯ 23

“ನಾನು ಹೇಳೋದನ್ನ ಕೇಳಿಸ್ಕೊಳ್ಳಿ”

ಕೋಪಗೊಂಡಿದ್ದ ಜನರ ಗುಂಪಿನ ಮತ್ತು ಹಿರೀಸಭೆ ಮುಂದೆ ಪೌಲ ಸತ್ಯವನ್ನ ಸಮರ್ಥಿಸ್ತಾನೆ.

ಅಧ್ಯಾಯ 24

“ಧೈರ್ಯವಾಗಿರು!”

ಪೌಲ ತನ್ನ ವಿರುದ್ಧ ಹೆಣೆದ ಒಳಸಂಚಿಂದ ತಪ್ಪಿಸ್ಕೊಂಡು ರಾಜ್ಯಪಾಲ ಫೆಲಿಕ್ಸನ ಮುಂದೆ ತನ್ನ ವಾದ ಮಂಡಿಸ್ತಾನೆ.

ಅಧ್ಯಾಯ 25

“ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ”

ಸಿಹಿಸುದ್ದಿಯ ಪರವಾಗಿ ಮಾತಾಡೋದ್ರಲ್ಲಿ ಪೌಲ ಒಂದು ಒಳ್ಳೇ ಮಾದರಿ.

ಅಧ್ಯಾಯ 26

“ನಮ್ಮಲ್ಲಿ ಒಬ್ರೂ ಸಾಯಲ್ಲ”

ಹಡಗು ಒಡೆದು ಹೋದಾಗ ಪೌಲ ಬಲವಾದ ನಂಬಿಕೆಯನ್ನ ಮತ್ತು ಜನರ ಮೇಲೆ ತನಗಿರೋ ಪ್ರೀತಿಯನ್ನ ತೋರಿಸ್ತಾನೆ.

ಅಧ್ಯಾಯ 27

“ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸಿ”

ರೋಮಿನಲ್ಲಿ ಪೌಲನನ್ನ ಬಂಧಿಸಿದ್ರೂ ಸಾರೋದನ್ನ ನಿಲ್ಲಿಸದೇ ಮುಂದುವರಿಸ್ತಾನೆ.

ಅಧ್ಯಾಯ 28

‘ಇಡೀ ಭೂಮಿಯಲ್ಲಿ ಸಾಕ್ಷಿ ಕೊಡ್ತೀರ’

ಒಂದನೇ ಶತಮಾನದಲ್ಲಿದ್ದ ಯೇಸು ಕ್ರಿಸ್ತನ ಹಿಂಬಾಲಕರು ಶುರುಮಾಡಿದ ಕೆಲಸವನ್ನ ಯೆಹೋವನ ಸಾಕ್ಷಿಗಳು ಮುಂದುವರಿಸ್ಕೊಂಡು ಹೋಗ್ತಿದ್ದಾರೆ.

ಚಿತ್ರಗಳ ವಿಷಯಸೂಚಿ

ಈ ಪುಸ್ತಕದಲ್ಲಿರೋ ಮುಖ್ಯವಾದ ಚಿತ್ರಗಳ ಪಟ್ಟಿ.