ವಿಭಾಗ 7 • ಅಪೊಸ್ತಲರ ಕಾರ್ಯ 18:23–21:17
‘ಎಲ್ರ ಮುಂದೆ ಮತ್ತು ಮನೆಮನೆಯಲ್ಲೂ ಕಲಿಸಿ’
ನಾವು ಬೇರೆಯವ್ರಿಗೆ ಕಲಿಸುವಾಗ ಯಾಕೆ ದೀನತೆ ತೋರಿಸಬೇಕು? ಯಾಕೆ ಬೇರೆಯವರ ಅಗತ್ಯಗಳಿಗೆ ತಕ್ಕ ಹಾಗೆ ಹೊಂದ್ಕೊಬೇಕು? ಸಿಹಿಸುದ್ದಿ ಸಾರೋ ಮುಖ್ಯ ವಿಧಾನ ಯಾವುದು? ನಮ್ಮ ಸಂತೋಷಕ್ಕಿಂತ ದೇವರ ಇಷ್ಟ ಮಾಡೋದೇ ನಮಗೆ ಮುಖ್ಯ ಅಂತ ತೋರಿಸೋದು ಹೇಗೆ? ಈ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಕೆ, ಪೌಲನ ಮೂರನೇ ಅಂದ್ರೆ ಕೊನೇ ಮಿಷನರಿ ಪ್ರಯಾಣದ ಮಾಹಿತಿ ಸಹಾಯ ಮಾಡುತ್ತೆ.