ಚಿತ್ರಗಳ ವಿಷಯಸೂಚಿ
ಪುಟ ಸಂಖ್ಯೆಗೆ ತಕ್ಕ ಹಾಗೆ ಪಟ್ಟಿಮಾಡಲಾಗಿದೆ
ಮುಖ ಪುಟಗಳು ಪೌಲ, ತಬಿಥಾ, ಗಲ್ಲಿಯೋನ, ಲೂಕ, ಅಪೊಸ್ತಲರ ಜೊತೆ ದೇವಾಲಯದ ಅಧಿಕಾರಿ, ಸದ್ದುಕಾಯ, ಪೌಲನನ್ನ ಕೈಸರೈಯಕ್ಕೆ ಕರ್ಕೊಂಡು ಹೋಗ್ತಿದ್ದಾರೆ, ಆಧುನಿಕ ದಿನದಲ್ಲಿ ಸೌಂಡ್ ಕಾರ್ ಮತ್ತು ಫೋನೋಗ್ರಾಫ್ ಬಳಸಿ ಸಾಕ್ಷಿ ಕೊಡ್ತಿದ್ದಾರೆ.
ಪುಟ 1 ರೋಮಿಗೆ ಹೋಗ್ತಿರೋ ಸರಕು ಹಡಗಲ್ಲಿ ಲೂಕ ಮತ್ತು ಸರಪಳಿಯಿಂದ ಕಟ್ಟಿರೋ ಪೌಲ ಇದ್ದಾರೆ.
ಪುಟ 2, 3 ಭೂಪಟದ ಮುಂದೆ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಸಹೋದರ ಜೆ. ಇ. ಬಾರ್ ಮತ್ತು ಟಿ. ಜಾರಸ್ ನಿಂತಿದ್ದಾರೆ.
ಪುಟ 11 ಗಲಿಲಾಯದ ಒಂದು ಬೆಟ್ಟದಲ್ಲಿ ಯೇಸು ತನ್ನ 11 ನಂಬಿಗಸ್ತ ಅಪೊಸ್ತಲರಿಗೆ ಮತ್ತು ಬೇರೆ ಶಿಷ್ಯರಿಗೆ ಒಂದು ಕೆಲಸ ಕೊಡ್ತಿದ್ದಾನೆ.
ಪುಟ 14 ಯೇಸು ಸ್ವರ್ಗಕ್ಕೆ ಏರಿಹೋಗ್ತಿದ್ದಾನೆ. ಅಪೊಸ್ತಲರು ನೋಡ್ತಾ ನಿಂತಿದ್ದಾರೆ.
ಪುಟ 20 ಐವತ್ತನೇ ದಿನದ ಹಬ್ಬದ ಸಮಯದಲ್ಲಿ ಶಿಷ್ಯರು ಸಂದರ್ಶಕರ ಹತ್ರ ಅವ್ರ ಸ್ವಂತ ಭಾಷೆಗಳಲ್ಲಿ ಮಾತಾಡ್ತಿದ್ದಾರೆ.
ಪುಟ 36 ಕೋಪ-ರೋಷದಿಂದ ಮಾತಾಡ್ತಿರೋ ಕಾಯಫನ ಮುಂದೆ ಅಪೊಸ್ತಲರು ನಿಂತಿದ್ದಾರೆ. ಅಪೊಸ್ತಲರನ್ನ ಬಂಧಿಸಲು ಹಿರೀಸಭೆಯ ಅನುಮತಿ ಪಡ್ಕೊಳ್ಳೋಕೆ ದೇವಾಲಯದ ಅಧಿಕಾರಿಗಳು ಕಾಯ್ತಿದ್ದಾರೆ.
ಪುಟ 44 ಕೆಳಗೆ: 2ನೇ ಮಹಾಯುದ್ಧ ಆದ್ಮೇಲೆ ಪೂರ್ವ ಜರ್ಮನಿಯ ಕೋರ್ಟ್ ಯೆಹೋವನ ಸಾಕ್ಷಿಗಳು ಅಮೆರಿಕದ ಗುಪ್ತಚರರು ಅಂತ ಆರೋಪ ಹಾಕ್ತು.—ಅಕ್ಟೋಬರ್ 3, 1950ರ ನೊಯು ಬರ್ಲಿನರ್ ಇಲ್ಲುಸ್ಟ್ರಿಯಟ ನಿಯತಕಾಲಿಕ
ಪುಟ 46 ಆರೋಪ ಹೊತ್ತ ಸ್ತೆಫನ ಹಿರೀಸಭೆ ಮುಂದೆ ನಿಂತಿದ್ದಾನೆ. ಅವನ ಮುಂದೆ ಎಡಗಡೆಯಲ್ಲಿ ಶ್ರೀಮಂತ ಸದ್ದುಕಾಯರಿದ್ದಾರೆ, ಬಲಗಡೆಯಲ್ಲಿ ತುಂಬ ಕಟ್ಟುನಿಟ್ಟಿನ ಫರಿಸಾಯರಿದ್ದಾರೆ.
ಪುಟ 54 ಪೇತ್ರ ಹೊಸ ಶಿಷ್ಯನ ಮೇಲೆ ಕೈಯಿಟ್ಟಿದ್ದಾನೆ; ಸೀಮೋನ ಹಣದ ಚೀಲ ಹಿಡ್ಕೊಂಡು ನಿಂತಿದ್ದಾನೆ.
ಪುಟ 75 ಪೇತ್ರ ಮತ್ತು ಅವನ ಜೊತೆಗಾರರು ಕೊರ್ನೇಲ್ಯನ ಮನೆಯೊಳಗೆ ಹೋಗ್ತಿದ್ದಾರೆ. ಕೊರ್ನೇಲ್ಯನ ಎಡ ಭುಜದ ಮೇಲಿರೋ ವಿಶೇಷ ಬಟ್ಟೆ ಅವನೊಬ್ಬ ಶತಾಧಿಪತಿ ಅಂತ ತೋರಿಸುತ್ತೆ.
ಪುಟ 83 ದೇವದೂತ ಪೇತ್ರನನ್ನ ಕರ್ಕೊಂಡು ಹೋಗ್ತಿದ್ದಾನೆ; ಪೇತ್ರನನ್ನ ಬಹುಶಃ ಆ್ಯಂಟೋನಿಯ ಕೋಟೆಯಲ್ಲಿ ಬಂಧನದಲ್ಲಿ ಇಟ್ಟಿರಬೇಕು.
ಪುಟ 84 ಕೆಳಗೆ: ಕ್ವಿಬೆಕ್‌ನ ಮಾಂಟ್ರೀಯಲ್ ಹತ್ರ 1945ರಲ್ಲಿ ಆದ ಗಲಭೆ—ಜುಲೈ 1956ರ ವೀಕೆಂಡ್ ಮ್ಯಾಗಜಿನ್ ನಿಯತಕಾಲಿಕ.
ಪುಟ 91 ಪೌಲ ಮತ್ತು ಬಾರ್ನಬನನ್ನ ಪಿಸಿದ್ಯದ ಅಂತಿಯೋಕ್ಯದಿಂದ ಹೊರಗೆ ಹಾಕಿದ್ದಾರೆ. ಮೇಲೆ, ಒಂದನೇ ಶತಮಾನದ ಆರಂಭದಲ್ಲಿ ಕಟ್ಟಿದ ಪಟ್ಟಣದ ಹೊಸ ಮೇಲುಕಾಲುವೆ ಕಾಣಿಸ್ತಿದೆ.
ಪುಟ 94 ಲುಸ್ತ್ರದಲ್ಲಿ ಪೌಲ ಮತ್ತು ಬಾರ್ನಬ ಜನ್ರ ಆರಾಧನೆಯನ್ನ ತಿರಸ್ಕರಿಸ್ತಿದ್ದಾರೆ. ಸಾರ್ವಜನಿಕವಾಗಿ ಬಲಿ ಅರ್ಪಿಸೋ ಸಂದರ್ಭಗಳು ರಂಗುರಂಗಾಗಿ ಇರ್ತಿತ್ತು, ಸದ್ದುಗದ್ದಲ ಮತ್ತು ಸಂಭ್ರಮದ ಸಂಗೀತನೂ ಇರ್ತಿತ್ತು.
ಪುಟ 100 ಮೇಲೆ: ಯೂದ ಮತ್ತು ಸೀಲ ಸಿರಿಯದ ಅಂತಿಯೋಕ್ಯದಲ್ಲಿರೋ ಸಭೆಯನ್ನ ಪ್ರೋತ್ಸಾಹಿಸ್ತಿದ್ದಾರೆ. (ಅ. ಕಾ. 15:30-32) ಕೆಳಗೆ: ಒಬ್ಬ ಸಂಚರಣ ಮೇಲ್ವಿಚಾರಕ ಯುಗಾಂಡದ ಒಂದು ಸಭೆಯಲ್ಲಿ ಭಾಷಣ ಕೊಡ್ತಿದ್ದಾರೆ.
ಪುಟ 107 ಯೆರೂಸಲೇಮಿನ ಒಂದು ಮನೇಲಿ ಸಭೆ ಸೇರಿಬರ್ತಿದ್ರು.
ಪುಟ 124 ರೋಮಿನ ವ್ಯಾಪಾರದ ಹಡಗಲ್ಲಿ ಪೌಲ ಮತ್ತು ತಿಮೊತಿ ಪ್ರಯಾಣ ಮಾಡ್ತಿದ್ದಾರೆ. ದೂರದಲ್ಲಿ ಒಂದು ದೀಪಸ್ತಂಭ ಕಾಣಿಸ್ತಿದೆ.
ಪುಟ 139 ರೊಚ್ಚಿಗೆದ್ದಿರೋ ಜನ್ರ ಕೈಗೆ ಸಿಗದ ಹಾಗೆ ಪೌಲ ಮತ್ತು ಸೀಲ ಬಾಗಿಲು ಹಾಕಿ ಆವರಣದ ಒಳಗಿದ್ದಾರೆ.
ಪುಟ 155 ಪೌಲನ ಮೇಲೆ ದೂರು ಹೇಳೋರನ್ನ ಗಲ್ಲಿಯೋನ ಗದರಿಸ್ತಿದ್ದಾನೆ. ಅವನು ತನ್ನ ಸ್ಥಾನಕ್ಕೆ ತಕ್ಕ ಬಟ್ಟೆ ಅಂದ್ರೆ ಅಗಲವಾದ ನೇರಳೆ ಅಂಚಿನ ರಾಜಮನೆತನದ ಟೋಗಾ ಅನ್ನೋ ಬಿಳಿ ಬಟ್ಟೆ ಮತ್ತು ಕ್ಯಾಲ್ಸಿ ಅನ್ನೋ ಚಪ್ಪಲಿ ಹಾಕೊಂಡಿದ್ದಾನೆ.
ಪುಟ 158 ದೇಮೇತ್ರಿಯ ಎಫೆಸದಲ್ಲಿ ಬೆಳ್ಳಿ-ಅಕ್ಕಸಾಲಿಗರ ಒಂದು ಅಂಗಡಿಯ ಕೆಲಸಗಾರರ ಜೊತೆ ಮಾತಾಡ್ತಿದ್ದಾನೆ. ಅರ್ತೆಮೀ ದೇವಿಯ ಬೆಳ್ಳಿಯ ಚಿಕ್ಕ ಗುಡಿಗಳನ್ನ ಸ್ಮಾರಕವಸ್ತುಗಳಾಗಿ ಮಾರ್ತಿದ್ದಾರೆ.
ಪುಟ 171 ಪೌಲ ಮತ್ತು ಅವನ ಜೊತೆಗಾರರು ಹಡಗು ಹತ್ತುತ್ತಿದ್ದಾರೆ. ಮೇಲೆ, ಕ್ರಿ.ಪೂ. ಒಂದನೇ ಶತಮಾನದಲ್ಲಿ ಕಟ್ಟಿದ ದ ಗ್ರೇಟ್ ಹಾರ್ಬರ್ ಮೊನ್ಯುಮೆಂಟ್ ಕಾಣಿಸ್ತಿದೆ.
ಪುಟ 180 ಕೆಳಗೆ: 1940ರ ದಶಕದಲ್ಲಿ ನಮ್ಮ ಪ್ರಕಾಶನಗಳನ್ನ ಕೆನಡದಲ್ಲಿ ನಿಷೇಧಿಸಿದಾಗ ಒಬ್ಬ ಯುವ ಸಾಕ್ಷಿ ಅದನ್ನ ಗುಟ್ಟಾಗಿ ಸಾಗಿಸ್ತಿದ್ದಾನೆ. (ಪುನರಭಿನಯ)
ಪುಟ 182 ಪೌಲ ಹಿರಿಯರು ಹೇಳಿದ ಮಾತನ್ನ ಕೇಳ್ತಾನೆ. ಲೂಕ ಮತ್ತು ತಿಮೊತಿ ಹಿಂದೆ ಕೂತಿದ್ದಾರೆ, ಕಾಣಿಕೆಗಳನ್ನ ತಲಪಿಸೋ ಕೆಲಸದಲ್ಲಿ ಸಹಾಯ ಮಾಡ್ತಿದ್ದಾರೆ.
ಪುಟ 190 ಪೌಲನ ಸೋದರಳಿಯ ಆ್ಯಂಟೋನಿಯ ಕೋಟೆಯಲ್ಲಿ ಕ್ಲೌದ್ಯ ಲೂಸ್ಯನ ಹತ್ರ ಮಾತಾಡ್ತಿದ್ದಾನೆ. ಆಗ ಪೌಲ ಅಲ್ಲೇ ಜೈಲಲ್ಲಿ ಇದ್ದಿರಬೇಕು. ಹಿಂದೆ ಆಲಯ ಕಾಣ್ತಿದೆ.
ಪುಟ 206 ಪೌಲ ಸರಕು ಹಡಗಿನ ಸಾಮಾನು ಇಡೋ ಜಾಗದಲ್ಲಿ ಸುಸ್ತಾಗಿರೋ ಪ್ರಯಾಣಿಕರಿಗೋಸ್ಕರ ಪ್ರಾರ್ಥನೆ ಮಾಡ್ತಿದ್ದಾನೆ.
ಪುಟ 222 ಬೇಡಿ ಹಾಕಿರೋ ಪೌಲನನ್ನ ರೋಮನ್ ಸೈನಿಕನ ಕೈಗೆ ಸರಪಳಿಯಿಂದ ಕಟ್ಟಿದ್ದಾರೆ, ಪೌಲ ರೋಮ್ ನಗರದ ಒಂದು ಭಾಗವನ್ನ ನೋಡ್ತಾ ನಿಂತಿದ್ದಾನೆ.