ವಿಭಾಗ 6 • ಅಪೊಸ್ತಲರ ಕಾರ್ಯ 15:36–18:22
‘ನಾವು ಮತ್ತೆ ಹೋಗಿ ಅಲ್ಲಿನ ಸಹೋದರರನ್ನ ಭೇಟಿಮಾಡೋಣ’
ಕ್ರೈಸ್ತ ಸಭೆಯಲ್ಲಿ ಸಂಚರಣ ಮೇಲ್ವಿಚಾರಕರಿಗೆ ಯಾವ ದೊಡ್ಡ ಜವಾಬ್ದಾರಿ ಇದೆ? ನಾವು ಮನಸಾರೆ ನೇಮಕಗಳನ್ನ ಸ್ವೀಕರಿಸಿದ್ರೆ ಯಾವ ಆಶೀರ್ವಾದಗಳು ಸಿಗುತ್ತೆ? ನಾವು ಬೈಬಲನ್ನ ಬಳಸಿ ಚೆನ್ನಾಗಿ ವಿವರಿಸಿ ಹೇಗೆ ತರ್ಕ ಮಾಡೋದು? ಸಭಿಕರಿಗೆ ತಕ್ಕ ಹಾಗೆ ನಮ್ಮ ಮಾತುಗಳನ್ನ ಯಾಕೆ ಹೊಂದಿಸ್ಕೊಬೇಕು? ನಾವೀಗ ಅಪೊಸ್ತಲ ಪೌಲನ ಎರಡನೇ ಮಿಷನರಿ ಪ್ರಯಾಣದ ಬಗ್ಗೆ ತಿಳ್ಕೊಂಡಾಗ ಈ ಪ್ರಶ್ನೆಗಳಿಗೆ ಮತ್ತು ಬೇರೆ ಪ್ರಶ್ನೆಗಳಿಗೂ ಉತ್ರ ಸಿಗುತ್ತೆ.