ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊನೆಪುಟ

ಕೊನೆಪುಟ

ನೀವೆಂದಾದರೂ ದಿಕ್ಕುತೋಚದೆ ಮಾರ್ಗದರ್ಶನಕ್ಕಾಗಿ ತಡಕಾಡಿದ್ದುಂಟೋ? ಪ್ರತಿಯೊಬ್ಬ ಮಾನವನನ್ನು ಮಾರ್ಗದರ್ಶಿಸಲಿಕ್ಕೆಂದೇ ದೇವರು ಯೇಸು ಕ್ರಿಸ್ತನನ್ನು ನಾಯಕನನ್ನಾಗಿ ನೇಮಿಸಿದ್ದಾನೆ. ಒಮ್ಮೆ ಯೇಸು, “ನಾನೇ ಒಳ್ಳೆಯ ಕುರುಬನು; . . . ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳು ನನ್ನನ್ನು ತಿಳಿದಿವೆ” ಎಂದು ಹೇಳಿದನು. (ಯೋಹಾನ 10:14, 15) ಒಳ್ಳೆಯ ಕುರುಬನನ್ನು ನೀವು ನಿಜವಾಗಿಯೂ ತಿಳಿದುಕೊಂಡಿದ್ದೀರೊ? ಅವನ ಸ್ವಭಾವ, ಅವನು ನೀಡಿದ ಸಂದೇಶ, ಮಾಡಿದ ಕೆಲಸ, ಅವನು ತೋರಿಸಿದ ಹುರುಪು, ಪ್ರೀತಿ ಇವುಗಳ ಕುರಿತು ನಿಮಗೆ ತಿಳಿದಿದೆಯೊ? ಈ ಪುಸ್ತಕವು ಯೇಸುವನ್ನು ಬಲು ಹತ್ತಿರದಿಂದ ಪರಿಚಯ ಮಾಡಿಕೊಳ್ಳಲು ನೆರವು ನೀಡುತ್ತದೆ. ಮಾತ್ರವಲ್ಲ, ಅವನನ್ನು ನಿಕಟವಾಗಿ ಹಿಂಬಾಲಿಸಲು ಸಹಾಯ ಮಾಡುತ್ತದೆ.