ಭಾಗ 3
“ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ”
ಯೇಸುವನ್ನು ಹಿಂಬಾಲಿಸುತ್ತಾ ಇರುವಂತೆ ನಮಗೆ ಯಾವುದು ಪ್ರೇರಣೆ ನೀಡುತ್ತದೆ? ಅಪೊಸ್ತಲ ಪೌಲನು ಇದಕ್ಕೆ ಉತ್ತರ ನೀಡಿದ್ದು: “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ.” (2 ಕೊರಿಂಥ 5:14) ಈ ಭಾಗದಲ್ಲಿ ನಾವು ಯೇಸುವಿನ ಪ್ರೀತಿಯ ಕುರಿತು ಅಂದರೆ, ಯೇಸು ಯೆಹೋವನ ಮೇಲಿಟ್ಟಿರುವ ಪ್ರೀತಿ, ಮಾನವಕುಲದ ಮೇಲಿಟ್ಟಿರುವ ಪ್ರೀತಿ ಹಾಗೂ ನಮ್ಮಲ್ಲಿ ಪ್ರತಿಯೊಬ್ಬನ ಮೇಲಿಟ್ಟಿರುವ ಪ್ರೀತಿಯ ಕುರಿತು ಅಧ್ಯಯನ ಮಾಡಲಿದ್ದೇವೆ. ಅಂಥ ಅಧ್ಯಯನ ನಿಜಕ್ಕೂ ನಮ್ಮನ್ನು ಪ್ರೇರೇಪಿಸುತ್ತದೆ. ನಮ್ಮ ಮನಃಸ್ಪರ್ಶಗೊಂಡು, ನಮ್ಮ ನಾಯಕನ ಮಾದರಿಯನ್ನು ಹೆಚ್ಚೆಚ್ಚು ಅನುಸರಿಸುತ್ತಾ ಹೋಗುವಂತೆ ಅದು ನಮ್ಮನ್ನು ಒತ್ತಾಯಮಾಡುತ್ತದೆ.