ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2

‘ಬೋಧಿಸುವುದು ಮತ್ತು ಸುವಾರ್ತೆ ಸಾರುವುದು’

‘ಬೋಧಿಸುವುದು ಮತ್ತು ಸುವಾರ್ತೆ ಸಾರುವುದು’

ಯೇಸು ಬಡಗಿಯಾಗಿದ್ದನು, ಅದ್ಭುತಗಳನ್ನು ನಡೆಸಿದನು, ರೋಗಗಳನ್ನು ವಾಸಿಮಾಡಿದನು, ಇನ್ನೂ ಅನೇಕ ಕಾರ್ಯಗಳನ್ನು ಮಾಡಿದನು. ಆದರೆ ಜನರೆಂದೂ ಅವನನ್ನು ಈ ಕೆಲಸಕಾರ್ಯಗಳಿಂದ ಗುರುತಿಸಲಿಲ್ಲ. ಬದಲಾಗಿ, ಅವನನ್ನು ಬೋಧಕನೆಂದು ಕರೆದರು. ಹೌದು, ‘ಬೋಧಿಸುವುದು ಮತ್ತು ಸುವಾರ್ತೆ ಸಾರುವುದು’ ಅವನ ಬಾಳಕಾರ್ಯವಾಗಿತ್ತು. (ಮತ್ತಾಯ 4:23) ಯೇಸುವಿನ ಅನುಯಾಯಿಗಳಾಗಿರುವ ನಮಗೆ ಕೂಡ ಅದೇ ಕೆಲಸ ಮಾಡಲಿಕ್ಕಿದೆ. ಆ ಕೆಲಸವನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸುವ ಅವನ ಮಾದರಿಯ ಕುರಿತು ಈ ಭಾಗದಲ್ಲಿ ನಾವು ಕಲಿಯಲಿದ್ದೇವೆ.