ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಗೆ:

ವಾಚಕರಿಗೆ:

ವಾಚಕರಿಗೆ:

ನಿಮಗೆ ಸ್ವಂತ ಸಮಸ್ಯೆಗಳಿವೆಯೆಂದು ನಮಗೆ ಖಂಡಿತ ಗೊತ್ತು. ಪ್ರತಿಯೊಬ್ಬನಿಗೆ ಇರುತ್ತವೆ. ಶಾಲೆ ಯಾ ಕೆಲಸ ಸ್ಥಳದಲ್ಲಿ ನಿಮ್ಮನ್ನು ಪಂಥಾಹ್ವಾನಿಸುವ ಸಾರ್ವಸ್ಯಕರ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆದರೆ ಇನ್ನು ಕೆಲವು ಸಮಸ್ಯೆಗಳು ಹೆಚ್ಚು ಸಂಕಟಕರ. ನೀವು ಬಡವರಾಗಿರುವಲ್ಲಿ ಉಣ್ಣಲು ಸಾಕಷ್ಟನ್ನು ಪಡೆಯುವುದೇ ಮುಂದುವರಿಯುವ ಪಂಥಾಹ್ವಾನವಾಗಬಲ್ಲದು. ಕುಟುಂಬದಲ್ಲಿ ಬರುವ ಕಾಯಿಲೆ, ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಕೆಡಿಸುತ್ತದೆ. ಅಸಂತುಷ್ಟ ವಿವಾಹ, ದುರಾಭಿಪ್ರಾಯ, ನ್ಯಾಯರಹಿತ ವ್ಯವಹಾರ, ರಾಜಕೀಯ ಅಶಾಂತಿ ಮತ್ತು ಆರ್ಥಿಕ ಅಸ್ಥಿರತೆಗಳು ಜೀವನವನ್ನು ಇನ್ನೂ ಹೆಚ್ಚು ಕಷ್ಟಕರವನ್ನಾಗಿ ಮಾಡುತ್ತವೆ.

ಇಂಥ ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವೇ? ಇದೇ ಈ ಪ್ರಕಾಶನದ ಮುಖ್ಯ ವಿಷಯ. ಈ ಪ್ರಶ್ನೆಯನ್ನು ಎರಡು ಕುಟುಂಬಗಳ ಮಧ್ಯೆ ನಡಿಸುವ ಸಂಭಾಷಣೆಗಳಲ್ಲಿ ಚರ್ಚಿಸಲಾಗಿದೆ. ಸಂಭಾಷಣೆಗಳೂ ಕುಟುಂಬಗಳೂ ಕಾಲ್ಪನಿಕ. ಆದರೆ ಚರ್ಚಿಸಲ್ಪಟ್ಟಿರುವ ವಿಷಯಗಳು ವಾಸ್ತವಿಕ. ಮತ್ತು ಅಂತಿಮ ಪರಿಹಾರ ಮಾರ್ಗಗಳು ನಿಜವಾಗಿಯೂ ಕಾರ್ಯಸಾಧಕ. ಈ ಪ್ರಕಾಶನ ಹೇಳುವುದನ್ನು ನೀವು ಅಧ್ಯಯನಿಸಿ ಅನ್ವಯಿಸಿಕೊಳ್ಳುವಲ್ಲಿ, ಈ ಮಾಹಿತಿ ನಿಮ್ಮ ಜೀವನವನ್ನು ನಿಜವಾಗಿಯೂ ಹೆಚ್ಚು ಉತ್ತಮಗೊಳಿಸುವುದು. 30ನೇ ಪುಟದಲ್ಲಿ ಈ ವಿಷಯವನ್ನು ಪುನರ್ವಿಮರ್ಶಿಸಲು ಉಪಯೋಗಿಸಬಹುದಾದ ಪ್ರಶ್ನೆಗಳಿವೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉದ್ಧರಿಸಲ್ಪಟ್ಟ ಶಾಸ್ತ್ರ ವಚನಗಳು ‘ಇಂಡಿಯಾ ಸಿಲೋನ್‌ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್‌’ನಿಂದ ತೆಗೆಯಲ್ಪಟ್ಟವುಗಳು

[ಪುಟ 3 ರಲ್ಲಿರುವ ಚಿತ್ರ]

ನಿಮ್ಮಲ್ಲಿ ಉತ್ತರ ಗಳಿವೆಯೇ?