ಯೇಸು ಕ್ರಿಸ್ತನು ದೇವರ ಜ್ಞಾನಕ್ಕೆ ಕೀಲಿ ಕೈ
ಆಧ್ಯಾಯ 4
ಯೇಸು ಕ್ರಿಸ್ತನು ದೇವರ ಜ್ಞಾನಕ್ಕೆ ಕೀಲಿ ಕೈ
1, 2. ಲೋಕದ ಧರ್ಮಗಳು ದೇವರ ಜ್ಞಾನಕ್ಕಿರುವ ಕೀಲಿ ಕೈಯ ಮಧ್ಯೇ ಹೇಗೆ ಕೈಹಾಕಿವೆ?
ನೀವು ಬಾಗಿಲಲ್ಲಿ ನಿಂತುಕೊಂಡು ನಿಮ್ಮ ಕೀಲಿ ಕೈಗಳಿಗಾಗಿ ತಡಕಾಡುತ್ತಿದ್ದೀರಿ. ಹೊರಗಡೆ ಚಳಿ ಮತ್ತು ಕತ್ತಲೆಯಿದೆ, ಮತ್ತು ನೀವು ಒಳಗೆ ಹೋಗಲು ಆತುರದಿಂದಿದ್ದೀರಿ—ಆದರೆ ಕೀಲಿ ಕೈ ತಾಗುವುದಿಲ್ಲ. ಅದು ಸರಿಯಾದದ್ದೆಂದು ಕಂಡರೂ, ಬೀಗ ತೆರೆಯುವುದಿಲ್ಲ. ಎಂತಹ ಹತಾಶೆ! ನಿಮ್ಮ ಕೀಲಿ ಕೈಗಳನ್ನು ನೀವು ಪುನಃ ನೋಡುತ್ತೀರಿ. ಸರಿಯಾಗಿರುವುದನ್ನೇ ಉಪಯೋಗಿಸುತ್ತಿದ್ದೀರೊ? ಯಾರಾದರೂ ಆ ಕೀಲಿ ಕೈಯನ್ನು ಹಾಳುಮಾಡಿದ್ದಾರೆಯೆ?
2 ಈ ಜಗತ್ತಿನ ಧಾರ್ಮಿಕ ಗಲಿಬಿಲಿಯು ದೇವರ ಜ್ಞಾನದೊಂದಿಗೆ ಏನು ಮಾಡಿದೆಯೊ, ಅದರ ಒಂದು ಯೋಗ್ಯ ಚಿತ್ರಣವು ಅದಾಗಿದೆ. ಕಾರ್ಯತಃ, ಅನೇಕರು ಅದನ್ನು ನಮ್ಮ ತಿಳಿವಳಿಕೆಗೆ ತೆರೆಯುವ ಕೀಲಿ ಕೈ—ಯೇಸು ಕ್ರಿಸ್ತ—ಯ ಮಧ್ಯೇ ಕೈಹಾಕಿದ್ದಾರೆ. ಕೆಲವು ಧರ್ಮಗಳು ಆ ಕೀಲಿ ಕೈಯನ್ನು—ಯೇಸುವನ್ನು ಪೂರ್ತಿ ಅಲಕ್ಷ್ಯಮಾಡುತ್ತಾ—ತೆಗೆದು ಬಿಟ್ಟಿವೆ. ಇತರರು ಯೇಸುವನ್ನು ಸರ್ವಶಕ್ತ ದೇವರೆಂದು ಆರಾಧಿಸುತ್ತಾ, ಅವನ ಪಾತ್ರವನ್ನು ವಿರೂಪಣೆ ಮಾಡಿದ್ದಾರೆ. ಏನೇ ಇರಲಿ, ಈ ಪ್ರಧಾನ ವ್ಯಕ್ತಿಯಾದ ಯೇಸು ಕ್ರಿಸ್ತನ ಕುರಿತ ನಿಷ್ಕೃಷ್ಟ ತಿಳಿವಳಿಕೆಯ ಹೊರತು, ದೇವರ ಜ್ಞಾನವು ನಮಗೆ ಮರೆಯಾಗಿರುತ್ತದೆ.
3. ಯೇಸುವನ್ನು ದೇವರ ಜ್ಞಾನಕ್ಕೆ ಕೀಲಿ ಕೈಯೆಂದು ಏಕೆ ಕರೆಯಬಹುದು?
3 ಯೇಸು ಹೀಗೆ ಹೇಳಿದ್ದನ್ನು ನೀವು ಜ್ಞಾಪಿಸಿಕೊಂಡೀರಿ: “ಒಬ್ಬನೇ ಸತ್ಯದೇವರಾದ ನಿನ್ನ ಮತ್ತು ನೀನು ಕಳುಹಿಸಿ ಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಅವರು ಪಡೆದುಕೊಳ್ಳುವುದು—ಇದೇ ನಿತ್ಯಜೀವವು.” (ಯೋಹಾನ 17:3, NW) ಇದನ್ನು ಹೇಳಿದಾಗ ಯೇಸು ಜಂಬ ಕೊಚ್ಚುತ್ತಿದ್ದುದಲ್ಲ. ಶಾಸ್ತ್ರಗಳು ಪದೇ ಪದೇ ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ಆವಶ್ಯಕತೆಯನ್ನು ಒತ್ತಿಹೇಳುತ್ತವೆ. (ಎಫೆಸ 4:13; ಕೊಲೊಸ್ಸೆ 2:2; 2 ಪೇತ್ರ 1:8; 2:20) “ಆತನ [ಯೇಸು ಕ್ರಿಸ್ತನ] ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿಹೇಳಿದ್ದಾರೆ,” ಎಂದು ಅಪೊಸ್ತಲ ಪೇತ್ರನು ಗಮನಿಸಿದನು. (ಅ. ಕೃತ್ಯಗಳು 10:43) ಮತ್ತು ಅಪೊಸ್ತಲ ಪೌಲನು ಬರೆದುದು: “ಅವನಲ್ಲಿ [ಯೇಸುವಿನಲ್ಲಿ] ವಿವೇಕ ಮತ್ತು ಜ್ಞಾನದ ಸಕಲ ನಿಕ್ಷೇಪಗಳು ಜೋಕೆಯಿಂದ ಗೋಪ್ಯವಾಗಿರಿಸಲ್ಪಟ್ಟಿವೆ.” (ಕೊಲೊಸ್ಸೆ 2:3, NW) ಯೆಹೋವನ ಸಕಲ ವಾಗ್ದಾನಗಳು ಯೇಸುವಿನ ಕಾರಣದಿಂದಲೆ ಸತ್ಯವಾಗುತ್ತವೆಂದೂ ಪೌಲನು ನುಡಿದನು. (2 ಕೊರಿಂಥ 1:20) ಹೀಗೆ ಯೇಸು ಕ್ರಿಸ್ತನು ದೇವರ ಜ್ಞಾನಕ್ಕೆ ಸಾಕ್ಷಾತ್ ಕೀಲಿ ಕೈಯಾಗಿದ್ದಾನೆ. ನಮಗಿರುವ ಯೇಸುವಿನ ಜ್ಞಾನವು ಅವನ ಪ್ರಕೃತಿಯ ಸಂಬಂಧದಲ್ಲಿ ಮತ್ತು ದೇವರ ಏರ್ಪಾಡಿನಲ್ಲಿ ಅವನಿಗಿರುವ ಪಾತ್ರದ ಸಂಬಂಧದಲ್ಲಿ ಯಾವುದೇ ವಿರೂಪಣೆಗಳಿಂದ ಮುಕ್ತವಾಗಿರತಕ್ಕದ್ದು. ಆದರೆ ಯೇಸುವಿನ ಹಿಂಬಾಲಕರು, ಅವನು ದೇವರ ಉದ್ದೇಶಗಳ ಕೇಂದ್ರವಾಗಿದ್ದಾನೆಂದು ಪರಿಗಣಿಸುವುದೇಕೆ?
ವಾಗ್ದಾನಿತ ಮೆಸ್ಸೀಯನು
4, 5. ಮೆಸ್ಸೀಯನ ಮೇಲೆ ಯಾವ ನಿರೀಕ್ಷೆಗಳು ಕೇಂದ್ರೀಕೃತವಾದವು, ಮತ್ತು ಯೇಸುವಿನ ಶಿಷ್ಯರು ಅವನನ್ನು ಹೇಗೆ ವೀಕ್ಷಿಸಿದರು?
4 ನಂಬಿಗಸ್ತ ಮನುಷ್ಯನಾದ ಹೇಬೆಲನ ದಿನಗಳಿಂದ ಹಿಡಿದು ದೇವರ ಸೇವಕರು, ಯೆಹೋವ ದೇವರು ತಾನೆ ಮುಂತಿಳಿಸಿದ ಸಂತಾನಕ್ಕಾಗಿ ಆತುರದಿಂದ ಮುನ್ನೋಡಿದ್ದರು. (ಆದಿಕಾಂಡ 3:15; 4:1-8; ಇಬ್ರಿಯ 11:4) ಆ ಸಂತಾನವು ಮೆಸ್ಸೀಯ, ಎಂದರೆ “ಅಭಿಷಿಕ್ತ” ನೋಪಾದಿ ದೇವರ ಉದ್ದೇಶಗಳನ್ನು ನಿರ್ವಹಿಸಲಿತ್ತು ಎಂದು ಪ್ರಕಟಿಸಲ್ಪಟ್ಟಿತ್ತು. ಅವನು ‘ಅಪರಾಧಗಳನ್ನು ನಿವಾರಿಸಲಿದ್ದನು,’ ಮತ್ತು ಅವನ ರಾಜ್ಯದ ಮಹಿಮೆಗಳು ಕೀರ್ತನೆಗಳಲ್ಲಿ ಮುಂತಿಳಿಸಲ್ಪಟ್ಟಿದ್ದವು. (ದಾನಿಯೇಲ 9:24-26; ಕೀರ್ತನೆ 72:1-20) ಯಾರು ಆ ಮೆಸ್ಸೀಯನಾಗಿ ಪರಿಣಮಿಸಲಿದ್ದನು?
5 ನಜರೇತಿನ ಯೇಸುವಿನ ಮಾತುಗಳನ್ನು ಕೇಳಿದಾಗ, ಅಂದ್ರೆಯ ಎಂಬ ಹೆಸರಿನ ಒಬ್ಬ ಯುವ ಯೆಹೂದ್ಯನಿಂದ ಅನುಭವಿಸಲ್ಪಟ್ಟ ಉದ್ರೇಕವನ್ನು ಭಾವಿಸಿರಿ. ಅಂದ್ರೆಯನು ತನ್ನ ಸಹೋದರ ಸೀಮೋನ ಪೇತ್ರನ ಬಳಿ ಧಾವಿಸಿ ಅವನಿಗೆ, “ಮೆಸ್ಸೀಯನು ನಮಗೆ ಸಿಕ್ಕಿದನು,” ಎಂದು ಹೇಳಿದನು. (ಯೋಹಾನ 1:41) ಯೇಸುವೇ ವಾಗ್ದಾನಿತ ಮೆಸ್ಸೀಯನೆಂದು ಅವನ ಶಿಷ್ಯರಿಗೆ ಮನವರಿಕೆಯಾಗಿತ್ತು. (ಮತ್ತಾಯ 16:16) ಮತ್ತು ಯೇಸುವು ನಿಶ್ಚಯವಾಗಿಯೂ ಮುಂತಿಳಿಸಲ್ಪಟ್ಟ ಮೆಸ್ಸೀಯ ಅಥವಾ ಕ್ರಿಸ್ತನೆಂಬ ನಂಬಿಕೆಗಾಗಿ ಸತ್ಯ ಕ್ರೈಸ್ತರು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಲು ಇಚ್ಛಿತರಾಗಿದ್ದರು. ಅವರಿಗೆ ಯಾವ ರುಜುವಾತು ಇತ್ತು? ನಾವು ರುಜುವಾತಿನ ಮೂರು ಶ್ರೇಣಿಗಳನ್ನು ಪರಿಗಣಿಸೋಣ.
ಯೇಸುವು ಮೆಸ್ಸೀಯನಾಗಿದ್ದನೆಂಬುದರ ರುಜುವಾತು
6. (ಎ) ಯಾವ ವಂಶ ಪರಂಪರೆಯು ವಾಗ್ದಾನಿತ ಸಂತಾನವನ್ನು ಉತ್ಪಾದಿಸಲಿತ್ತು, ಮತ್ತು ಯೇಸು ಅದೇ ವಂಶದಲ್ಲಿ ಬಂದನೆಂದು ನಮಗೆ ಹೇಗೆ ಗೊತ್ತು? (ಬಿ) ಸಾ.ಶ. 70ರ ಬಳಿಕ ಜೀವಿಸಿದ ಯಾವನಿಗೂ, ತಾನು ಮೆಸ್ಸೀಯನಾಗಿರುವ ವಾದವನ್ನು ರುಜುಪಡಿಸುವುದು ಏಕೆ ಅಸಾಧ್ಯ?
6 ಯೇಸುವಿನ ವಂಶ ಪರಂಪರೆ ಅವನು ವಾಗ್ದಾನಿತ ಮೆಸ್ಸೀಯನೆಂದು ಗುರುತಿಸಲು ಮೊದಲನೆಯ ಆಧಾರವನ್ನೊದಗಿಸುತ್ತದೆ. ಯೆಹೋವನು ತನ್ನ ಸೇವಕನಾದ ಅಬ್ರಹಾಮನಿಗೆ, ವಾಗ್ದಾನಿತ ಸಂತಾನವು ಅವನ ವಂಶದಿಂದ ಬರುವುದೆಂದು ಹೇಳಿದ್ದನು. ಅಬ್ರಹಾಮನ ಮಗ ಇಸಾಕನು, ಇಸಾಕನ ಮಗ ಯಾಕೋಬನು, ಮತ್ತು ಯಾಕೋಬನ ಮಗ ಯೆಹೂದನು, ಇದೇ ರೀತಿಯ ವಾಗ್ದಾನವನ್ನು ಪಡೆದರು. (ಆದಿಕಾಂಡ 22:18; 26:2-5; 28:12-15; 49:10) ಶತಮಾನಗಳ ನಂತರ, ರಾಜ ದಾವೀದನಿಗೆ, ಅವನ ವಂಶವು ಇವನನ್ನು ಉತ್ಪಾದಿಸುವುದೆಂದು ಹೇಳಲ್ಪಟ್ಟಾಗ, ಮೆಸ್ಸೀಯನ ವಂಶ ಪರಂಪರೆಯು ಸಂಕುಚಿತಗೊಂಡಿತು. (ಕೀರ್ತನೆ 132:11; ಯೆಶಾಯ 11:1, 10) ಮತ್ತಾಯ ಮತ್ತು ಲೂಕ ಅವರ ಸುವಾರ್ತಾ ವೃತ್ತಾಂತಗಳು, ಯೇಸು ಅದೇ ವಂಶ ಪರಂಪರೆಯಾಗಿ ಬಂದನೆಂದು ದೃಢೀಕರಿಸುತ್ತವೆ. (ಮತ್ತಾಯ 1:1-16; ಲೂಕ 3:23-38) ಯೇಸುವಿಗೆ ಅನೇಕ ಕಡುವೈರಿಗಳಿದ್ದರೂ, ಅವರಲ್ಲಿ ಯಾವನೂ ಅವನ ಸುವಿದಿತವಾದ ವಂಶ ಪರಂಪರೆಯನ್ನು ಪಂಥಾಹ್ವಾನಿಸಲಿಲ್ಲ. (ಮತ್ತಾಯ 21:9, 15) ಹಾಗಾದರೆ, ಅವನ ವಂಶ ಪರಂಪರೆ ನಿರ್ವಿವಾದವೆಂಬುದು ಸ್ಪಷ್ಟ. ಆದರೂ, ಯೆಹೂದ್ಯರ ವಂಶ ದಾಖಲೆಗಳು, ರೋಮನರು ಸಾ.ಶ. 70 ರಲ್ಲಿ ಯೆರೂಸಲೇಮನ್ನು ಸೂರೆ ಮಾಡಿದಾಗ ನಾಶಗೊಂಡವು. ಮುಂದಿನ ದಿನಗಳಲ್ಲಿ, ಯಾವನೂ ತಾನು ವಾಗ್ದಾನಿತ ಮೆಸ್ಸೀಯ ಹಕ್ಕುದಾರನೆಂಬ ವಾದವನ್ನು ರುಜು ಮಾಡಸಾಧ್ಯವಿರಲಿಲ್ಲ.
7. (ಎ) ಯೇಸುವು ಮೆಸ್ಸೀಯನಾಗಿದ್ದನು ಎಂಬುದಕ್ಕೆ ರುಜುವಾತಿನ ಎರಡನೆಯ ಶ್ರೇಣಿ ಯಾವುದು? (ಬಿ) ಯೇಸುವಿನ ಸಂಬಂಧದಲ್ಲಿ ಮೀಕ 5:2 ಹೇಗೆ ನೆರವೇರಿತು?
7 ನೆರವೇರಿದ ಪ್ರವಾದನೆ ರುಜುವಾತಿನ ಎರಡನೆಯ ಶ್ರೇಣಿಯಾಗಿದೆ. ಹೀಬ್ರು ಶಾಸ್ತ್ರದ ಹತ್ತಾರು ಪ್ರವಾದನೆಗಳು ಮೆಸ್ಸೀಯನ ಜೀವನಗತಿಯ ವಿವಿಧ ಭಾಗಗಳನ್ನು ವರ್ಣಿಸುತ್ತವೆ. ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಈ ಮಹಾ ಪ್ರಭುವು ಅಮುಖ್ಯ ಪಟ್ಟಣವಾದ ಬೇತ್ಲೆಹೇಮಿನಲ್ಲಿ ಜನಿಸುವನೆಂದು ಪ್ರವಾದಿ ಮೀಕನು ಮುಂತಿಳಿಸಿದನು. ಇಸ್ರಾಯೇಲಿನಲ್ಲಿ ಎರಡು ಪಟ್ಟಣಗಳಿಗೆ ಬೇತ್ಲೆಹೇಮ್ ಎಂದು ಹೆಸರಿದ್ದರೂ ಈ ಪ್ರವಾದನೆಯು ಅದು ಯಾವುದೆಂದು ನಿರ್ದಿಷ್ಟವಾಗಿ ಹೇಳಿತು: ಅರಸ ದಾವೀದನು ಹುಟ್ಟಿದ್ದ ಎಫ್ರಾತದ ಬೇತ್ಲೆಹೇಮ್. (ಮೀಕ 5:2) ಯೇಸುವಿನ ಹೆತ್ತವರಾದ ಯೋಸೇಫ ಮತ್ತು ಮರಿಯ, ಬೇತ್ಲೆಹೇಮಿನ ಸುಮಾರು 150 ಕಿಲೋಮೀಟರ್‌ಗಳಷ್ಟು ಉತ್ತರಕ್ಕಿರುವ ನಜರೇತಿನಲ್ಲಿ ವಾಸಿಸಿದರು. ಆದರೆ ಮರಿಯಳು ಗರ್ಭಿಣಿಯಾಗಿದ್ದಾಗ, ರೋಮನ್ ಪ್ರಭು ಕೈಸರ ಔಗುಸ್ತನು ಸಕಲ ಜನರು ತಮ್ಮ ಹುಟ್ಟೂರುಗಳಲ್ಲಿ ರೆಜಿಸ್ಟರ್ ಮಾಡಿಕೊಳ್ಳಬೇಕೆಂದು ಆಜ್ಞಾಪಿಸಿದನು. * ಹೀಗೆ ಯೋಸೇಫನಿಗೆ ತನ್ನ ಗರ್ಭಿಣಿ ಪತ್ನಿಯನ್ನು, ಎಲ್ಲಿ ಯೇಸು ಹುಟ್ಟಿದನೊ, ಆ ಬೇತ್ಲೆಹೇಮಿಗೆ ಕರೆದುಕೊಂಡು ಹೋಗಬೇಕಾಯಿತು.—ಲೂಕ 2:1-7.
8. (ಎ) ಯಾವಾಗ ಮತ್ತು ಯಾವ ಘಟನೆಯೊಂದಿಗೆ 69 “ವಾರಗಳು” ಪ್ರಾರಂಭಿಸಿದವು? (ಬಿ) ಆ 69 “ವಾರಗಳು” ಎಷ್ಟು ಉದ್ದವಿದ್ದವು, ಮತ್ತು ಅವು ಮುಗಿದಾಗ ಏನು ಸಂಭವಿಸಿತು?
8 ಸಾ.ಶ.ಪೂ. ಆರನೆಯ ಶತಮಾನದಲ್ಲಿ ಪ್ರವಾದಿ ದಾನಿಯೇಲನು, ಯೆರೂಸಲೇಮಿನ ದುರಸ್ತು ಮತ್ತು ಪುನರ್ನಿರ್ಮಾಣಕ್ಕೆ ಆಜ್ಞೆ ಹೊರಟ ಬಳಿಕ 69 “ವಾರಗಳಲ್ಲಿ” “ಅಭಿಷಿಕ್ತನಾದ ಪ್ರಭು” ತೋರಿಬರುವನೆಂದು ಮುಂತಿಳಿಸಿದನು. (ದಾನಿಯೇಲ 9:24, 25) ಈ “ವಾರಗಳಲ್ಲಿ” ಪ್ರತಿಯೊಂದು, ಏಳು ವರ್ಷಕಾಲ ದೀರ್ಘವಾಗಿತ್ತು. * ಬೈಬಲ್ ಮತ್ತು ಐಹಿಕ ಇತಿಹಾಸಕ್ಕನುಸಾರ, ಯೆರೂಸಲೇಮಿನ ಪುನರ್ನಿರ್ಮಾಣಾಜ್ಞೆ ಸಾ.ಶ.ಪೂ. 455 ರಲ್ಲಿ ಕೊಡಲ್ಪಟ್ಟಿತು. (ನೆಹೆಮೀಯ 2:1-8) ಆದಕಾರಣ, ಮೆಸ್ಸೀಯನು ಸಾ.ಶ.ಪೂ. 455ರ ತರುವಾಯ 483 (7 ಬಾರಿ 69) ವರ್ಷಗಳಲ್ಲಿ ತೋರಿಬರಬೇಕಾಗಿತ್ತು. ಅದು ನಮ್ಮನ್ನು ಸಾ.ಶ. 29ಕ್ಕೆ, ಯೆಹೋವನು ಯೇಸುವನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದ ಅದೇ ವರ್ಷಕ್ಕೆ ತರುತ್ತದೆ. ಯೇಸುವು ಹೀಗೆ “ಕ್ರಿಸ್ತ” (“ಅಭಿಷಿಕ್ತ” ನೆಂದು ಅರ್ಥ), ಅಥವಾ ಮೆಸ್ಸೀಯನಾದನು.—ಲೂಕ 3:15, 16, 21, 22.
9. (ಎ) ಕೀರ್ತನೆ 2:2 ಹೇಗೆ ನೆರವೇರಿತು? (ಬಿ) ಯೇಸುವಿನಲ್ಲಿ ನೆರವೇರಿದ ಇನ್ನಿತರ ಪ್ರವಾದನೆಗಳಾವುವು? (ತಖ್ತೆ ನೋಡಿ.)
9 ಪ್ರತಿಯೊಬ್ಬನೂ ಯೇಸುವನ್ನು ವಾಗ್ದಾನಿತ ಮೆಸ್ಸೀಯನೆಂದು ಅಂಗೀಕರಿಸಲಿಲ್ಲ, ನಿಶ್ಚಯ, ಮತ್ತು ಶಾಸ್ತ್ರಗಳು ಇದನ್ನು ಮುಂತಿಳಿಸಿದ್ದವು. ಕೀರ್ತನೆ 2:2 ರಲ್ಲಿ ದಾಖಲೆಯಾಗಿರುವಂತೆ, ರಾಜ ದಾವೀದನು ಹೀಗೆ ಮುಂತಿಳಿಸುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟನು: “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ.” ಒಂದಕ್ಕಿಂತ ಹೆಚ್ಚು ದೇಶಗಳ ಮುಖಂಡರು, ಯೆಹೋವನ ಅಭಿಷಿಕ್ತ ಅಥವಾ ಮೆಸ್ಸೀಯನ ಮೇಲೆ ಆಕ್ರಮಣ ನಡೆಸಲಿಕ್ಕಾಗಿ ಒಟ್ಟು ಸೇರುವರೆಂದು ಈ ಪ್ರವಾದನೆ ಸೂಚಿಸಿತು. ಮತ್ತು ಹಾಗೆಯೇ ಆಯಿತು. ಯೆಹೂದಿ ಧಾರ್ಮಿಕ ಮುಖಂಡರು, ಅರಸ ಹೆರೋದನು ಮತ್ತು ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನು—ಇವರೆಲ್ಲರೂ ಯೇಸುವನ್ನು ಮರಣಕ್ಕೊಪ್ಪಿಸುವುದರಲ್ಲಿ ಒಂದು ಪಾತ್ರ ವಹಿಸಿದರು. ಅಂದಿನಿಂದ ಆ ಹಿಂದಿನ ವೈರಿಗಳಾದ ಹೆರೋದ ಮತ್ತು ಪಿಲಾತರು ಗಾಢ ಸ್ನೇಹಿತರಾದರು. (ಮತ್ತಾಯ 27:1, 2; ಲೂಕ 23:10-12; ಅ. ಕೃತ್ಯಗಳು 4:25-28) ಯೇಸುವು ಮೆಸ್ಸೀಯನೆಂಬುದಕ್ಕೆ ಹೆಚ್ಚಿನ ರುಜುವಾತಿಗಾಗಿ, “ಕೆಲವು ಗಮನಾರ್ಹ ಮೆಸ್ಸೀಯ ಸಂಬಂಧಿತ ಪ್ರವಾದನೆಗಳು” ಎಂಬ, ಜೊತೆಗಿರುವ ಶಿರೋನಾಮವುಳ್ಳ ತಖ್ತೆಯನ್ನು ದಯವಿಟ್ಟು ನೋಡಿರಿ.
10. ಯೇಸುವು ತನ್ನ ವಾಗ್ದಾನಿತ ಅಭಿಷಿಕ್ತನೆಂದು ಯೆಹೋವನು ಯಾವ ವಿಧಗಳಲ್ಲಿ ಸಾಕ್ಷಿ ನೀಡಿದನು?
10 ಯೆಹೋವ ದೇವರ ಸಾಕ್ಷ್ಯವು ಯೇಸುವಿನ ಮೆಸ್ಸೀಯತ್ವವನ್ನು ಬೆಂಬಲಿಸುವ ರುಜುವಾತಿನ ಮೂರನೆಯ ಶ್ರೇಣಿ. ವಾಗ್ದಾನಿತ ಮೆಸ್ಸೀಯನು ಯೇಸುವೇ ಎಂದು ಜನರು ತಿಳಿಯುವಂತೆ ಯೆಹೋವನು ದೇವದೂತರನ್ನು ಕಳುಹಿಸಿದನು. (ಲೂಕ 2:10-14) ವಾಸ್ತವವೇನಂದರೆ, ಯೇಸುವಿನ ಭೂಜೀವಿತದ ಸಮಯದಲ್ಲಿ, ಯೆಹೋವನು ತಾನೇ ಯೇಸುವಿಗೆ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾ, ಸ್ವರ್ಗದಿಂದ ಮಾತಾಡಿದನು. (ಮತ್ತಾಯ 3:16, 17; 17:1-5) ಯೇಸುವು ಅದ್ಭುತಗಳನ್ನು ಮಾಡುವಂತೆ ಯೆಹೋವ ದೇವರು ಶಕ್ತಿಕೊಟ್ಟನು. ಇವುಗಳಲ್ಲಿ ಪ್ರತಿಯೊಂದು, ಯೇಸುವೇ ಮೆಸ್ಸೀಯನೆಂಬುದಕ್ಕೆ ಹೆಚ್ಚಿನ ದೈವಿಕ ರುಜುವಾತನ್ನು ಕೊಟ್ಟಿತು, ಏಕೆಂದರೆ, ಒಬ್ಬ ವಂಚಕನು ಅದ್ಭುತಗಳನ್ನು ಮಾಡುವಂತೆ ದೇವರು ಎಂದಿಗೂ ಶಕ್ತಿಕೊಡನು. ಸುವಾರ್ತಾ ವೃತ್ತಾಂತಗಳು ಪ್ರೇರಿಸಲ್ಪಡುವಂತೆ ಸಹ ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು. ಹೀಗೆ ಯೇಸುವಿನ ಮೆಸ್ಸೀಯತ್ವವು, ಇತಿಹಾಸದಲ್ಲಿ ಅತಿ ವ್ಯಾಪಕವಾಗಿ ಭಾಷಾಂತರಿತವಾಗಿರುವ ಮತ್ತು ವಿತರಣೆ ಹೊಂದಿರುವ ಗ್ರಂಥವಾದ ಬೈಬಲಿನ ಭಾಗವಾಯಿತು.—ಯೋಹಾನ 4:25, 26.
11. ಯೇಸುವು ಮೆಸ್ಸೀಯನಾಗಿದ್ದನೆಂಬುದಕ್ಕೆ ಎಷ್ಟು ರುಜುವಾತಿದೆ?
11 ಮೊತ್ತದಲ್ಲಿ, ರುಜುವಾತಿನ ಈ ವರ್ಗಗಳಲ್ಲಿ, ಯೇಸುವನ್ನು ವಾಗ್ದಾನಿತ ಮೆಸ್ಸೀಯನೋಪಾದಿ ಗುರುತಿಸುವ ನೂರಾರು ನಿಜತ್ವಗಳು ಸೇರಿವೆ. ಹೀಗೆ, ಸತ್ಯ ಕ್ರೈಸ್ತರು ಯೋಗ್ಯವಾಗಿಯೇ ಅವನನ್ನು, ‘ಪ್ರವಾದಿಗಳೆಲ್ಲರಿಂದ ಸಾಕ್ಷಿ ನೀಡಲ್ಪಟ್ಟಿರುವವನು’ ಮತ್ತು ದೇವರ ಜ್ಞಾನಕ್ಕೆ ಕೀಲಿ ಕೈಯಾಗಿ ವೀಕ್ಷಿಸಿದ್ದಾರೆಂಬುದು ಸ್ಪಷ್ಟ. (ಅ. ಕೃತ್ಯಗಳು 10:43) ಆದರೆ ಯೇಸು ಕ್ರಿಸ್ತನ ವಿಷಯದಲ್ಲಿ, ಅವನು ಮೆಸ್ಸೀಯನಾಗಿದ್ದನು ಎಂಬ ನಿಜತ್ವಕ್ಕಿಂತ ಹೆಚ್ಚನ್ನು ಕಲಿಯಲಿಕ್ಕಿದೆ. ಅವನು ಎಲ್ಲಿ ಆರಂಭಗೊಂಡನು? ಅವನು ಎಂಥವನಾಗಿದ್ದನು?
ಯೇಸುವಿನ ಮಾನವಪೂರ್ವ ಅಸ್ತಿತ್ವ
12, 13. (ಎ) ಭೂಮಿಗೆ ಬರುವ ಮೊದಲು ಯೇಸು ಸ್ವರ್ಗದಲ್ಲಿ ಅಸ್ತಿತ್ವದಲ್ಲಿದ್ದನೆಂದು ನಮಗೆ ಹೇಗೆ ಗೊತ್ತು? (ಬಿ) “ವಾಕ್ಯವು” ಯಾರು, ಮತ್ತು ಮನುಷ್ಯನಾಗುವ ಮೊದಲು ಅವನು ಏನು ಮಾಡಿದನು?
12 ಯೇಸುವಿನ ಜೀವನಗತಿಯನ್ನು ಮೂರು ಹಂತಗಳಾಗಿ ವಿಭಾಗಿಸಬಹುದು. ಒಂದನೆಯದು, ಅವನು ಭೂಮಿಯಲ್ಲಿ ಹುಟ್ಟುವುದಕ್ಕಿಂತ ಎಷ್ಟೋ ಮೊದಲು ಆರಂಭಗೊಂಡಿತು. ಮೆಸ್ಸೀಯನ ಮೂಲವು, “ಪುರಾತನವೂ ಅನಾದಿಯೂ ಆದದ್ದು” ಎಂದು ಮೀಕ 5:2 ಹೇಳಿತು. ಮತ್ತು ಯೇಸುವು ಸ್ಪಷ್ಟವಾಗಿ, ತಾನು “ಮೇಲಿನವನು,” ಅಂದರೆ ಸ್ವರ್ಗದಿಂದ ಬಂದಿದ್ದವನು ಎಂದು ಹೇಳಿದನು. (ಯೋಹಾನ 8:23; 16:28) ಭೂಮಿಗೆ ಬರುವ ಮೊದಲು ಅವನು ಸ್ವರ್ಗದಲ್ಲಿ ಎಷ್ಟು ದೀರ್ಘಕಾಲ ಅಸ್ತಿತ್ವದಲ್ಲಿದ್ದನು?
13 ಯೆಹೋವನು ಯೇಸುವನ್ನು ನೇರವಾಗಿ ಸೃಷ್ಟಿಸಿದ ಕಾರಣ, ಅವನು ದೇವರ, “ಒಬ್ಬನೇ [“ಏಕಜಾತ,” NW] ಮಗ” ನೆಂದು ಕರೆಯಲ್ಪಟ್ಟನು. (ಯೋಹಾನ 3:16) “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ” ನೋಪಾದಿ, ಯೇಸುವನ್ನು ದೇವರು ಆ ಬಳಿಕ ಬೇರೆ ಎಲ್ಲ ವಿಷಯಗಳನ್ನು ಸೃಷ್ಟಿಸಲು ಉಪಯೋಗಿಸಿದನು. (ಕೊಲೊಸ್ಸೆ 1:15; ಪ್ರಕಟನೆ 3:14) “ವಾಕ್ಯ” (ಯೇಸು, ಅವನ ಮಾನವಪೂರ್ವ ಅಸ್ತಿತ್ವದಲ್ಲಿ) “ಆದಿಯಲ್ಲಿ” ದೇವರ ಬಳಿಯಲ್ಲಿತ್ತು ಎಂದು ಯೋಹಾನ 1:1 ಹೇಳುತ್ತದೆ. ಹೀಗೆ ‘ಆಕಾಶವೂ ಭೂಮಿಯೂ’ ಉಂಟುಮಾಡಲ್ಪಟ್ಟಾಗ ಆ ವಾಕ್ಯವೆಂಬವನು ಯೆಹೋವನ ಬಳಿಯಲ್ಲಿದ್ದನು. “ನಮ್ಮ ಸ್ವರೂಪದಲ್ಲಿ . . . ಮನುಷ್ಯರನ್ನು ಉಂಟುಮಾಡೋಣ,” ಎಂದು ಹೇಳಿದಾಗ, ದೇವರು ಆ ವಾಕ್ಯವನ್ನು ಸಂಬೋಧಿಸುತ್ತಿದ್ದನು. (ಆದಿಕಾಂಡ 1:1, 26) ತದ್ರೀತಿ, ಆ ವಾಕ್ಯ, ವ್ಯಕ್ತೀಕರಿಸಲ್ಪಟ್ಟ ವಿವೇಕವಾಗಿ ಜ್ಞಾನೋಕ್ತಿ 8:22-31 ರಲ್ಲಿ ವರ್ಣಿಸಲ್ಪಟ್ಟಿರುವ, ಸಕಲ ವಿಷಯಗಳ ನಿರ್ಮಾಣದಲ್ಲಿ ಯೆಹೋವನ ಪಕ್ಕದಲ್ಲಿ ಶ್ರಮಿಸುತ್ತಿದ್ದ ದೇವರ ಪ್ರಿಯ “[“ಕುಶಲ,” NW] ಶಿಲ್ಪಿ” ಯಾಗಿದ್ದಿರಬೇಕು. ಯೆಹೋವನು ಅವನನ್ನು ಅಸ್ತಿತ್ವಕ್ಕೆ ತಂದಮೇಲೆ, ಆ ವಾಕ್ಯ, ಭೂಮಿಯ ಮೇಲೆ ಮನುಷ್ಯನಾಗುವ ಮೊದಲು ಅನೇಕ ಯುಗಗಳಲ್ಲಿ ದೇವರ ಬಳಿಯಲ್ಲಿದ್ದನು.
14. ಯೇಸುವನ್ನು “ಅದೃಶ್ಯನಾದ ದೇವರ ಪ್ರತಿರೂಪ” ವೆಂದು ಏಕೆ ಕರೆಯಲಾಗುತ್ತದೆ?
14 ಕೊಲೊಸ್ಸೆ 1:15 ಯೇಸುವನ್ನು, “ಅದೃಶ್ಯನಾದ ದೇವರ ಪ್ರತಿರೂಪನು” ಎಂದು ಕರೆಯುವುದು ಆಶ್ಚರ್ಯವಲ್ಲ! ಅಗಣಿತ ವರ್ಷಗಳ ನಿಕಟ ಒಡನಾಟದಿಂದಾಗಿ, ಆ ವಿಧೇಯ ಪುತ್ರನು ತನ್ನ ತಂದೆಯಾದ ಯೆಹೋವನಂತೆಯೇ ಪರಿಣಮಿಸಿದನು. ದೇವರ ಜೀವದಾಯಕ ಜ್ಞಾನಕ್ಕೆ ಯೇಸುವು ಏಕೆ ಕೀಲಿ ಕೈ ಎಂಬುದಕ್ಕೆ ಇದು ಇನ್ನೊಂದು ಕಾರಣ. ಯೇಸುವು ಭೂಮಿಯಲ್ಲಿದ್ದಾಗ ಮಾಡಿದ ಪ್ರತಿಯೊಂದು ಸಂಗತಿಯು ಯೆಹೋವನು ಏನು ಮಾಡುತ್ತಿದ್ದನೋ ಅದರಷ್ಟು ನಿಖರವಾಗಿತ್ತು. ಆದಕಾರಣ, ಯೇಸುವಿನ ಪರಿಚಯ ಮಾಡಿಕೊಳ್ಳುವುದು, ನಮಗಿರುವ ಯೆಹೋವನ ಜ್ಞಾನವನ್ನೂ ಹೆಚ್ಚಿಸುವುದೆಂದರ್ಥ. (ಯೋಹಾನ 8:28; 14:8-10) ಹಾಗಾದರೆ, ಯೇಸು ಕ್ರಿಸ್ತನ ವಿಷಯ ಹೆಚ್ಚು ಕಲಿತುಕೊಳ್ಳುವುದು ಪ್ರಾಮುಖ್ಯವೆಂಬುದು ಸ್ಪಷ್ಟ.
ಭೂಮಿಯ ಮೇಲೆ ಯೇಸುವಿನ ಜೀವನಗತಿ
15. ಯೇಸುವು ಒಂದು ಪರಿಪೂರ್ಣ ಶಿಶುವಾಗಿ ಹೇಗೆ ಹುಟ್ಟಿಬಂದನು?
15 ಯೇಸುವಿನ ಜೀವನಗತಿಯ ಎರಡನೆಯ ಹಂತವು ನಡೆದದ್ದು ಇಲ್ಲಿ ಭೂಮಿಯಲ್ಲಿ. ದೇವರು ಅವನ ಜೀವವನ್ನು ಮರಿಯ ಎಂಬ ಹೆಸರಿನ ನಂಬಿಗಸ್ತ ಯೆಹೂದಿ ಕನ್ಯೆಯ ಗರ್ಭಕ್ಕೆ ಸ್ಥಾನಾಂತರಿಸಿದಾಗ, ಅವನು ಇಚ್ಛಾಪೂರ್ವಕವಾಗಿ ಅಧೀನನಾದನು. ಯೆಹೋವನ ಬಲಾಢ್ಯವಾದ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯು ‘ನೆರಳನ್ನು’ ಹಾಕಿ ಮರಿಯಳು ಗರ್ಭಿಣಿಯಾಗುವಂತೆ ಮತ್ತು ಕ್ರಮೇಣ ಒಂದು ಪರಿಪೂರ್ಣ ಶಿಶುವಿಗೆ ಜನ್ಮಕೊಡುವಂತೆ ಮಾಡಿತು. (ಲೂಕ 1:34, 35) ಯೇಸುವಿನ ಜೀವವು ಒಂದು ಪರಿಪೂರ್ಣ ಮೂಲದಿಂದ ಬಂದ ಕಾರಣ, ಯೇಸು ಯಾವುದೇ ಅಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆಯಲಿಲ್ಲ. ಅವನು ಒಂದು ನಿರಾಡಂಬರದ ಮನೆಯಲ್ಲಿ, ಬಡಗಿ ಯೋಸೇಫನ ದತ್ತುಮಗನಾಗಿ ಬೆಳೆಸಲ್ಪಟ್ಟು, ಅನೇಕ ಮಕ್ಕಳ ಕುಟುಂಬದಲ್ಲಿ ಚೊಚ್ಚಲು ಮಗನಾಗಿದ್ದನು.—ಯೆಶಾಯ 7:14; ಮತ್ತಾಯ 1:22, 23; ಮಾರ್ಕ 6:3.
16, 17. (ಎ) ಅದ್ಭುತಗಳನ್ನು ಮಾಡಲು ಯೇಸುವಿಗೆ ಶಕ್ತಿ ಎಲ್ಲಿಂದ ಸಿಕ್ಕಿತು, ಮತ್ತು ಅವುಗಳಲ್ಲಿ ಕೆಲವು ಯಾವುವು? (ಬಿ) ಯೇಸುವು ತೋರಿಸಿದ ಕೆಲವು ಗುಣಗಳಾವುವು?
16 ಯೇಸುವು 12 ವರ್ಷ ವಯಸ್ಸಿನವನಾಗಿದ್ದಾಗ, ಅವನಿಗೆ ಯೆಹೋವನ ಕಡೆಗಿದ್ದ ಆಳವಾದ ಭಕ್ತಿ ಆಗಲೇ ಪ್ರತ್ಯಕ್ಷವಾಗಿತ್ತು. (ಲೂಕ 2:41-49) ಬೆಳೆದಾದ ಮೇಲೆ ಮತ್ತು 30 ನೆಯ ವಯಸ್ಸಿನಲ್ಲಿ ತನ್ನ ಶುಶ್ರೂಷೆಯನ್ನು ಪ್ರಾರಂಭಿಸಿದ ಮೇಲೆ, ಯೇಸು ತನ್ನ ಜೊತೆ ಮಾನವರಿಗೆ ಸಹ ತನ್ನ ಅಗಾಧ ಪ್ರೀತಿಯನ್ನು ಪ್ರದರ್ಶಿಸಿದನು. ದೇವರ ಪವಿತ್ರಾತ್ಮವು ಅದ್ಭುತಗಳನ್ನು ಮಾಡುವ ಶಕ್ತಿಯನ್ನು ಅವನಿಗೆ ಕೊಟ್ಟಾಗ, ಅವನು ಕನಿಕರದಿಂದ ರೋಗಿಗಳನ್ನು, ಕುಂಟರನ್ನು, ಅಂಗವಿಕಲರನ್ನು, ಕುರುಡರನ್ನು, ಕಿವುಡರನ್ನು ಮತ್ತು ಕುಷ್ಠರೋಗಿಗಳನ್ನು ವಾಸಿಮಾಡಿದನು. (ಮತ್ತಾಯ 8:2-4; 15:30) ಯೇಸು ಹಸಿದಿದ್ದ ಸಾವಿರಾರು ಜನರಿಗೆ ಉಣಿಸಿದನು. (ಮತ್ತಾಯ 15:35-38) ತನ್ನ ಮಿತ್ರರ ಭದ್ರತೆಗೆ ಅಪಾಯ ತಂದ ಒಂದು ಚಂಡಮಾರುತವನ್ನು ಅವನು ಶಾಂತಗೊಳಿಸಿದನು. (ಮಾರ್ಕ 4:37-39) ವಾಸ್ತವವೇನಂದರೆ, ಅವನು ಮೃತರನ್ನೂ ಎಬ್ಬಿಸಿದನು. (ಯೋಹಾನ 11:43, 44) ಈ ಅದ್ಭುತಗಳು ಇತಿಹಾಸದ ಸುಸ್ಥಾಪಿತ ನಿಜತ್ವಗಳು. ಯೇಸುವಿನ ವೈರಿಗಳು ಸಹ ಅವನು ‘ಬಹು ಸೂಚಕಕಾರ್ಯಗಳನ್ನು ನಡೆಸುತ್ತಾನೆ,’ ಎಂಬುದನ್ನು ಒಪ್ಪಿದರು.—ಯೋಹಾನ 11:47, 48.
17 ಯೇಸು ತನ್ನ ಸ್ವದೇಶದಾದ್ಯಂತ, ಜನರಿಗೆ ದೇವರ ರಾಜ್ಯದ ಕುರಿತು ಕಲಿಸುತ್ತಾ ಪ್ರಯಾಣಿಸಿದನು. (ಮತ್ತಾಯ 4:17) ಅವನು ತಾಳ್ಮೆ ಮತ್ತು ವಿವೇಚನಾ ಶಕ್ತಿಯ ಒಂದು ಅಪ್ಪಟ ಮಾದರಿಯನ್ನೂ ಇಟ್ಟನು. ಅವನ ಶಿಷ್ಯರು ಅವನನ್ನು ನಿರೀಕ್ಷೆಗೆಡಿಸಿದಾಗಲೂ, ಅವನು ಸಹಾನುಭೂತಿಯಿಂದ, “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು,” ಎಂದು ಹೇಳಿದನು. (ಮಾರ್ಕ 14:37, 38) ಆದರೆ ಸತ್ಯವನ್ನು ಧಿಕ್ಕರಿಸಿ, ಸಹಾಯಶೂನ್ಯರನ್ನು ಪೀಡಿಸುವವರ ಎದುರು ಯೇಸು ಧೈರ್ಯವಂತನೂ ನಿರ್ದಾಕ್ಷಿಣ್ಯನೂ ಆಗಿದ್ದನು. (ಮತ್ತಾಯ 23:27-33) ಎಲ್ಲಕ್ಕಿಂತ ಮೇಲಾಗಿ, ಅವನು ತನ್ನ ತಂದೆಯ ಪ್ರೀತಿಯ ಕುರಿತಾದ ಮಾದರಿಯನ್ನು ಪರಿಪೂರ್ಣವಾಗಿ ಅನುಕರಿಸಿದನು. ಅಪರಿಪೂರ್ಣ ಮಾನವ ಕುಲಕ್ಕೆ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯಿರುವಂತೆ ಅವನು ಸಾಯಲು ಸಹ ಇಚ್ಛಿತನಾಗಿದ್ದನು. ಹಾಗಾದರೆ, ಯೇಸುವು ದೇವರ ಜ್ಞಾನಕ್ಕಿರುವ ಕೀಲಿ ಕೈ ಎಂದು ಅವನನ್ನು ಸೂಚಿಸಿ ನಾವು ಹೇಳುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಹೌದು, ಅವನು ಜೀವಿಸುತ್ತಿರುವ ಕೀಲಿ ಕೈ! ಆದರೆ ಜೀವಿಸುತ್ತಿರುವ ಕೀಲಿ ಕೈ ಎಂದು ನಾವು ಹೇಳುವುದೇಕೆ? ಇದು ನಮ್ಮನ್ನು ಅವನ ಜೀವನಗತಿಯ ಮೂರನೆಯ ಹಂತಕ್ಕೆ ತರುತ್ತದೆ.
ಯೇಸುವು ಇಂದು
18. ನಾವು ಇಂದು ಯೇಸು ಕ್ರಿಸ್ತನನ್ನು ಹೇಗೆ ಚಿತ್ರಿಸಿಕೊಳ್ಳಬೇಕು?
18 ಬೈಬಲು ಯೇಸುವಿನ ಮರಣವನ್ನು ವರದಿಸುತ್ತದಾದರೂ, ಅವನು ಈಗ ಜೀವಂತನಾಗಿದ್ದಾನೆ! ವಾಸ್ತವವಾಗಿ, ಸಾ.ಶ. ಒಂದನೆಯ ಶತಮಾನದಲ್ಲಿ ಜೀವಿಸುತ್ತಿದ್ದ ನೂರಾರು ಜನರು, ಅವನು ಪುನರುತ್ಥಾನಗೊಳಿಸಲ್ಪಟ್ಟಿದ್ದನು ಎಂಬ ನಿಜತ್ವಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. (1 ಕೊರಿಂಥ 15:3-8) ಪ್ರವಾದಿಸಲ್ಪಟ್ಟಂತೆ, ಅವನು ಆ ಬಳಿಕ ತನ್ನ ತಂದೆಯ ಬಲ ಪಕ್ಕದಲ್ಲಿ ಕುಳಿತು, ಸ್ವರ್ಗದಲ್ಲಿ ರಾಜ್ಯಾಧಿಕಾರವನ್ನು ಪಡೆಯಲಿಕ್ಕಾಗಿ ಕಾದನು. (ಕೀರ್ತನೆ 110:1; ಇಬ್ರಿಯ 10:12, 13) ಆದಕಾರಣ, ನಾವು ಯೇಸುವನ್ನು ಇಂದು ಹೇಗೆ ಚಿತ್ರಿಸಿಕೊಳ್ಳಬೇಕು? ಗೋದಲಿಯಲ್ಲಿರುವ ಒಂದು ಸಹಾಯಶೂನ್ಯ ಶಿಶುವಿನಂತೆ ನಾವು ಅವನ ಕುರಿತು ಯೋಚಿಸಬೇಕೊ? ಅಥವಾ ಕೊಲ್ಲಲ್ಪಡುತ್ತಿರುವ ಒಬ್ಬ ಕಷ್ಟಾನುಭವಿ ಮನುಷ್ಯನಂತೆಯೊ? ಇಲ್ಲ. ಅವನು ಬಲಿಷ್ಠನಾದ, ಆಳುತ್ತಿರುವ ಅರಸನು! ಮತ್ತು ಈಗ ಅತಿ ಬೇಗನೆ, ಅವನು ತನ್ನ ಆಳಿಕೆಯನ್ನು ನಮ್ಮ ತ್ರಾಸ ತುಂಬಿದ ಭೂಮಿಯ ಮೇಲೆ ವ್ಯಕ್ತಪಡಿಸುವನು.
19. ಯೇಸುವು ಸಮೀಪದ ಭವಿಷ್ಯದಲ್ಲಿ ಯಾವ ಕ್ರಮವನ್ನು ಕೈಕೊಳ್ಳುವನು?
19 ಪ್ರಕಟನೆ 19:11-15 ರಲ್ಲಿ, ಅರಸ ಯೇಸು ಕ್ರಿಸ್ತನನ್ನು, ದುಷ್ಟರನ್ನು ನಾಶಮಾಡಲು ಮಹಾ ಶಕ್ತಿಯಿಂದ ಬರುವವನಾಗಿ ಸವಿವರವಾಗಿ ವರ್ಣಿಸಲಾಗಿದೆ. ಇಂದು ಕೋಟ್ಯಂತರ ಮಂದಿಯನ್ನು ಬಾಧಿಸುತ್ತಿರುವ ಕಷ್ಟಾನುಭವವನ್ನು ಅಂತ್ಯಗೊಳಿಸಲು ಈ ಪ್ರೀತಿಯ ಸ್ವರ್ಗೀಯ ಪ್ರಭುವು ಎಷ್ಟು ತವಕಪಡುತ್ತಿರಬೇಕು! ಮತ್ತು ತಾನು ಭೂಮಿಯಲ್ಲಿದ್ದಾಗ ಇಟ್ಟಿದ್ದ ಆ ಪರಿಪೂರ್ಣ ಮಾದರಿಯನ್ನು ಅನುಕರಿಸಲು ಪ್ರಯತ್ನಿಸುವವರಿಗೆ ಸಹಾಯಮಾಡಲು ಕೂಡ ಅವನು ಅಷ್ಟೇ ತವಕದಿಂದಿದ್ದಾನೆ. (1 ಪೇತ್ರ 2:21) ಅವರು ದೇವರ ಸ್ವರ್ಗೀಯ ರಾಜ್ಯದ ಭೂಪ್ರಜೆಗಳಾಗಿ ಸದಾ ಜೀವಿಸಸಾಧ್ಯವಾಗುವಂತೆ, ವೇಗದಿಂದ ಸಮೀಪಿಸುತ್ತಿರುವ, ಅನೇಕ ವೇಳೆ ಅರ್ಮಗೆದೋನ್ ಎಂದು ಕರೆಯಲ್ಪಡುವ, “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ದಲ್ಲಿ ಅವರನ್ನು ಸಂರಕ್ಷಿಸಲು ಅವನು ಬಯಸುತ್ತಾನೆ.—ಪ್ರಕಟನೆ 7:9, 14; 16:14, 16.
20. ತನ್ನ ಸಾವಿರ ವರ್ಷಗಳ ಆಳಿಕೆಯಲ್ಲಿ ಯೇಸು ಮಾನವ ಕುಲಕ್ಕಾಗಿ ಏನು ಮಾಡುವನು?
20 ಯೇಸುವಿನ ಮುಂತಿಳಿಸಲ್ಪಟ್ಟ ಸಾವಿರ ವರ್ಷಗಳ ಶಾಂತಿಯ ಆಳಿಕೆಯಲ್ಲಿ, ಅವನು ಸಕಲ ಮಾನವ ಕುಲದ ಪರವಾಗಿ ಅದ್ಭುತಗಳನ್ನು ಮಾಡುವನು. (ಯೆಶಾಯ 9:6, 7; 11:1-10; ಪ್ರಕಟನೆ 20:6) ಯೇಸುವು ಸಕಲ ಕಾಯಿಲೆಗಳನ್ನು ವಾಸಿಮಾಡಿ, ಮರಣಕ್ಕೆ ಅಂತ್ಯವನ್ನು ತರುವನು. ಅವನು ಕೋಟ್ಯಂತರ ಜನರನ್ನು, ಅವರಿಗೂ ಭೂಮಿಯಲ್ಲಿ ಸದಾ ಜೀವಿಸುವ ಸಂದರ್ಭವು ದೊರೆಯುವಂತೆ, ಪುನರುತ್ಥಾನಗೊಳಿಸುವನು. (ಯೋಹಾನ 5:28, 29) ಅವನ ಮೆಸ್ಸೀಯ ಸಂಬಂಧಿತ ರಾಜ್ಯದ ಕುರಿತು ಮುಂದಿನ ಒಂದು ಅಧ್ಯಾಯದಲ್ಲಿ ಹೆಚ್ಚನ್ನು ಕಲಿಯಲು ನೀವು ರೋಮಾಂಚಗೊಳ್ಳುವಿರಿ. ಈ ಖಾತರಿಯು ನಿಮಗಿರಲಿ: ರಾಜ್ಯದಾಳಿಕೆಯಡಿಯಲ್ಲಿ ನಮ್ಮ ಜೀವನಗಳು ಎಷ್ಟು ಬೆರಗುಗೊಳಿಸುವುವುಗಳಾಗಿರುವುವೆಂದು ನಮಗೆ ಭಾವಿಸುವುದು ಕೂಡ ಅಸಾಧ್ಯ. ಯೇಸು ಕ್ರಿಸ್ತನ ಹೆಚ್ಚಿನ ಪರಿಚಯ ಮಾಡಿಕೊಳ್ಳುವುದು ಅದೆಷ್ಟು ಪ್ರಾಮುಖ್ಯ! ಹೌದು, ಯಾವುದು ನಮ್ಮನ್ನು ನಿತ್ಯಜೀವಕ್ಕೆ ನಡೆಸುತ್ತದೆಯೋ, ಆ ದೇವರ ಜ್ಞಾನಕ್ಕೆ ಜೀವಂತ ಕೀಲಿ ಕೈಯಾಗಿರುವ ಯೇಸುವು ನಮ್ಮ ದೃಷ್ಟಿಗೆ ಎಂದಿಗೂ ಮರೆಯಾಗದಿರುವಂತೆ ನೋಡುವುದು ಆವಶ್ಯಕ.
[ಪಾದಟಿಪ್ಪಣಿಗಳು]
^ ಈ ರೆಜಿಸ್ಟ್ರೇಶನ್, ರೋಮನ್ ಸಾಮ್ರಾಜ್ಯವು ಕಂದಾಯ ವಸೂಲಿಯನ್ನು ಹೆಚ್ಚು ಉತ್ತಮವಾಗಿ ಮಾಡುವಂತೆ ಸಾಧ್ಯಮಾಡಿತು. ಹೀಗೆ ಔಗುಸ್ತನು, ‘ರಾಜ್ಯವನ್ನು ದೋಚಿಕೊಳ್ಳುವ’ ಒಬ್ಬ ಪ್ರಭುವಿನ ಕುರಿತ ಪ್ರವಾದನೆ ನೆರವೇರುವಂತೆ ಅರಿವಿಲ್ಲದೆ ಸಹಾಯ ಮಾಡಿದನು. ಅದೇ ಪ್ರವಾದನೆಯು, “ನಿಬಂಧನಾಧಿಪತಿ,” ಅಥವಾ ಮೆಸ್ಸೀಯನು, ಆ ಪ್ರಭುವಿನ ಉತ್ತರಾಧಿಕಾರಿಯ ದಿನಗಳಲ್ಲಿ “ಭಂಗ” ವಾಗುವನೆಂದೂ ಮುಂತಿಳಿಸಿತು. ಯೇಸುವು ಔಗುಸ್ತನ ಉತ್ತರಾಧಿಕಾರಿ ತಿಬೇರಿಯನ ಆಳಿಕೆಯ ಸಮಯದಲ್ಲಿ ಕೊಲ್ಲಲ್ಪಟ್ಟನು.—ದಾನಿಯೇಲ 11:20-22.
^ ಪೂರ್ವಕಾಲದ ಯೆಹೂದ್ಯರು ಸಾಮಾನ್ಯವಾಗಿ ವರ್ಷಗಳಿರುವ ವಾರಗಳ ಪರಿಭಾಷೆಯಲ್ಲಿ ಯೋಚಿಸಿದರು. ದೃಷ್ಟಾಂತಕ್ಕೆ, ಪ್ರತಿ ಏಳನೆಯ ದಿನವು ಸಬ್ಬತ್ ದಿನವಾಗಿದ್ದಂತೆಯೆ, ಪ್ರತಿ ಏಳನೆಯ ವರ್ಷವು ಸಬ್ಬತ್ ವರ್ಷವಾಗಿತ್ತು.—ವಿಮೋಚನಕಾಂಡ 20:8-11; 23:10, 11.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಯೇಸುವಿನ ವಂಶ ಪರಂಪರೆಯು, ಮೆಸ್ಸೀಯನಾಗಿದ್ದಾನೆಂಬ ಅವನ ಹಕ್ಕುಸಾಧನೆಯನ್ನು ಹೇಗೆ ಬೆಂಬಲಿಸಿತು?
ಯೇಸುವಿನಲ್ಲಿ ನೆರವೇರಿದ ಕೆಲವು ಮೆಸ್ಸೀಯ ಸಂಬಂಧಿತ ಪ್ರವಾದನೆಗಳಾವುವು?
ಯೇಸುವು ತನ್ನ ಅಭಿಷಿಕ್ತನೆಂದು ದೇವರು ಹೇಗೆ ನೇರವಾಗಿ ತೋರಿಸಿದನು?
ದೇವರ ಜ್ಞಾನಕ್ಕೆ ಯೇಸುವು ಏಕೆ ಜೀವಂತ ಕೀಲಿ ಕೈಯಾಗಿದ್ದಾನೆ?
[ಅಧ್ಯಯನ ಪ್ರಶ್ನೆಗಳು]
[ಪುಟ 37ರಲ್ಲಿರುವ ಚಾರ್ಟು]
ಕೆಲವು ಪ್ರಮುಖ ಮೆಸ್ಸೀಯ ಸಂಬಂಧಿತ ಪ್ರವಾದನೆಗಳು
ಪ್ರವಾದನೆ ಘಟನೆ ನೆರವೇರಿಕೆ
ಅವನ ಆರಂಭದ ಜೀವನ
ಯೆಶಾಯ 7:14 ಕನ್ಯೆಯಿಂದ ಹುಟ್ಟಿದ್ದು ಮತ್ತಾಯ 1:18-23
ಯೆರೆಮೀಯ 31:15 ಅವನ ಜನನಾನಂತರ ಕೂಸುಗಳು
ಕೊಲ್ಲಲ್ಪಟ್ಟದ್ದು ಮತ್ತಾಯ 2:16-18
ಅವನ ಶುಶ್ರೂಷೆ
ಯೆಶಾಯ 61:1, 2 ದೇವರಿಂದ ಅವನಿಗಿದ್ದ ಆಜ್ಞೆ ಲೂಕ 4:18-21
ಯೆಶಾಯ 9:1, 2 ಶುಶ್ರೂಷೆಯು ಜನರು ಒಂದು
ಮಹಾಬೆಳಕನ್ನು ನೋಡುವಂತೆ
ಮಾಡಿತು ಮತ್ತಾಯ 4:13-16
ಕೀರ್ತನೆ 69:9 ಯೆಹೋವನ ಆಲಯಕ್ಕಾಗಿ
ಹುರುಪು ಯೋಹಾನ 2:13-17
ಯೆಶಾಯ 53:1 ಅವನಲ್ಲಿ ನಂಬದೆ ಹೋದದ್ದು ಯೋಹಾನ 12:37, 38
ಜೆಕರ್ಯ 9:9; ಯೆರೂಸಲೇಮಿಗೆ ಕತ್ತೆಯ ಮರಿಯ
ಕೀರ್ತನೆ 118:26 ಮೇಲೆ ಕುಳಿತು ಪ್ರವೇಶ;
ರಾಜನೆಂದು ಮತ್ತು ಯೆಹೋವನ
ಹೆಸರಿನಲ್ಲಿ ಬರುವವನೆಂದು ಜಯಕಾರ ಮತ್ತಾಯ 21:1-9
ಅವನಿಗೆ ಬಗೆದ ದ್ರೋಹ ಮತ್ತು ಮರಣ
ಕೀರ್ತನೆ 41:9; 109:8 ಒಬ್ಬ ಅಪೊಸ್ತಲನು ಅವಿಶ್ವಾಸಿಯಾದದ್ದು;
ಯೇಸುವಿಗೆ ದ್ರೋಹ ಬಗೆಯುತ್ತಾನೆಮತ್ತು
ಆ ಸ್ಥಾನದ ಭರ್ತಿ ಅ. ಕೃತ್ಯಗಳು 1:15-20
ಜೆಕರ್ಯ 11:12 30 ಬೆಳ್ಳಿಯ ನಾಣ್ಯಗಳಿಗೆ
ದ್ರೋಹ ಬಗೆದದ್ದು ಮತ್ತಾಯ 26:14, 15
ಕೀರ್ತನೆ 27:12 ಆತನ ವಿರುದ್ಧವಾಗಿ ಸುಳ್ಳು
ಸಾಕ್ಷಿಗಳನ್ನು ಉಪಯೋಗಿಸಲಾಯಿತು ಮತ್ತಾಯ 26:59-61
ಕೀರ್ತನೆ 22:18 ಆತನ ವಸ್ತ್ರಗಳಿಗಾಗಿ ಚೀಟಿ ಹಾಕಿದ್ದು ಯೋಹಾನ 19:23, 24
ಯೆಶಾಯ 53:12 ಪಾಪಿಗಳೊಂದಿಗೆ ಎಣಿಸಲ್ಪಟ್ಟದ್ದು ಮತ್ತಾಯ 27:38
ಕೀರ್ತನೆ 22:7, 8 ಸಾಯುತ್ತಿದ್ದಾಗ ದೂಷಿಸಲ್ಪಟ್ಟದ್ದು ಮಾರ್ಕ 15:29-32
ಕೀರ್ತನೆ 69:21 ಹುಳಿ ಮದ್ಯ ಕೊಡಲ್ಪಟ್ಟದ್ದು ಮಾರ್ಕ 15:23, 36
ಯೆಶಾಯ 53:5; ಇರಿಯಲ್ಪಟ್ಟದ್ದು ಯೋಹಾನ 19:34, 37
ಯೆಶಾಯ 53:9 ಧನಿಕರೊಂದಿಗೆ ಹೂಣಲ್ಪಟ್ಟದ್ದು ಮತ್ತಾಯ 27:57-60
NW ಪಾದಟಿಪ್ಪಣಿ ಕೊಳೆಯುವ ಮೊದಲು
ಎಬ್ಬಿಸಲ್ಪಟ್ಟದ್ದು ಅ. ಕೃತ್ಯಗಳು 2:25-32; 13:34-37
[ಪುಟ 35ರಲ್ಲಿರುವ ಚಿತ್ರ]
ದೇವರು ಯೇಸುವಿಗೆ ರೋಗಿಗಳನ್ನು ವಾಸಿ ಮಾಡುವ ಶಕ್ತಿಯನ್ನು ಕೊಟ್ಟನು