ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಸಿಹಿ ಮತ್ತು ಕಹಿ ಸಂದೇಶ

ಒಂದು ಸಿಹಿ ಮತ್ತು ಕಹಿ ಸಂದೇಶ

ಅಧ್ಯಾಯ 24

ಒಂದು ಸಿಹಿ ಮತ್ತು ಕಹಿ ಸಂದೇಶ

ದರ್ಶನ 6—ಪ್ರಕಟನೆ 10:1—11:19

ವಿಷಯ: ಚಿಕ್ಕ ಸುರುಳಿಯ ದರ್ಶನ; ದೇವಾಲಯದ ಅನುಭವಗಳು; ಏಳನೆಯ ತುತೂರಿಯ ಊದುವಿಕೆ

ನೆರವೇರಿಕೆಯ ಸಮಯ: 1914 ರಲ್ಲಿ ಕ್ರಿಸ್ತ ಯೇಸುವು ಸಿಂಹಾಸನಾಸೀನನಾದಂದಿನಿಂದ ಮಹಾ ಸಂಕಟದ ತನಕ

1, 2. (ಎ) ಎರಡನೆಯ ವಿಪತ್ತು ಯಾವುದನ್ನು ಫಲಿಸಿತು, ಮತ್ತು ಈ ವಿಪತ್ತು ಅಂತ್ಯಗೊಂಡಿದೆಯೆಂದು ಯಾವಾಗ ಘೋಷಿಸಲಾಗುವುದು? (ಬಿ) ಪರಲೋಕದಿಂದ ಯಾರು ಇಳಿದುಬರುವುದನ್ನು ಈಗ ಯೋಹಾನನು ನೋಡುತ್ತಾನೆ?

ಎರಡನೆಯ ವಿಪತ್ತು ಅತಿ ಮಾರಕವಾಗಿತ್ತು. ಅದು ಕ್ರೈಸ್ತಪ್ರಪಂಚವನ್ನು ಮತ್ತು ಅವಳ ಮುಖಂಡರನ್ನು, “ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗವನ್ನು” ಬಾಧಿಸಿದೆ, ಈ ಮೂಲಕ ಆತ್ಮಿಕವಾಗಿ ಸತ್ತಿದ್ದಾರೆಂದು ಅವರು ಬಯಲುಗೊಳಿಸಲ್ಪಟ್ಟರು. (ಪ್ರಕಟನೆ 9:15) ಮೂರನೆಯ ವಿಪತ್ತು ಒಂದು ವೇಳೆ ಏನು ತರಬಲ್ಲದೆಂದು ಯೋಹಾನನು ಅನಂತರ ಯೋಚಿಸಿರಬೇಕು. ಆದರೆ ನಿಲ್ಲಿರಿ! ಎರಡನೇ ವಿಪತ್ತು ಇನ್ನೂ ಮುಗಿದಿಲ್ಲ—ಪ್ರಕಟನೆ 11:14 ರಲ್ಲಿ ದಾಖಲಿಸಿದ ವಿಷಯದ ಬಿಂದುವನ್ನು ನಾವು ಮುಟ್ಟುವ ತನಕ ಅದು ಮುಗಿಯುವುದಿಲ್ಲ. ಅದಕ್ಕಿಂತ ಮುಂಚೆ, ಯೋಹಾನನು ಯಾವುದರಲ್ಲಿ ಸಕ್ರಿಯ ಭಾಗವನ್ನು ತೆಗೆದುಕೊಳ್ಳುತ್ತಾನೋ, ಆ ಘಟನೆಗಳ ಬದಲಾಗುವಿಕೆಗೆ ಅವನು ಸಾಕ್ಷಿಯಾಗಲಿದ್ದಾನೆ. ಅದು ಒಂದು ಭಯಭಕ್ತಿ ಹುಟ್ಟಿಸುವ ನೋಟದೊಂದಿಗೆ ಆರಂಭಗೊಳ್ಳುತ್ತದೆ:

2“ಮತ್ತು ಒಂದು ಮೇಘವನ್ನು ಧರಿಸಿಕೊಂಡ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು, ಮತ್ತು ಅವನ ತಲೆಯ ಮೇಲೆ ಒಂದು ಮುಗಿಲುಬಿಲ್ಲು ಇತ್ತು, ಮತ್ತು ಅವನ ಮುಖವು ಸೂರ್ಯನೋಪಾದಿ ಇತ್ತು, ಮತ್ತು ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು.”—ಪ್ರಕಟನೆ 10:1, NW.

3. (ಎ) “ಬಲಿಷ್ಠನಾದ ದೇವದೂತನು” ಯಾರಾಗಿದ್ದಾನೆ? (ಬಿ) ಅವನ ತಲೆಯ ಮೇಲಿರುವ ಮುಗಿಲುಬಿಲ್ಲು ಯಾವುದನ್ನು ಸೂಚಿಸುತ್ತದೆ?

3 ಈ “ಬಲಿಷ್ಠನಾದ ದೇವದೂತನು” ಯಾರು? ಇವನು ಇನ್ನೊಂದು ಪಾತ್ರದಲ್ಲಿರುವ ಮಹಿಮಾಭರಿತ ಯೇಸು ಕ್ರಿಸ್ತನಾಗಿದ್ದಾನೆಂದು ವ್ಯಕ್ತವಾಗುತ್ತದೆ. ಆತನು ಅದೃಶ್ಯತೆಯ ಮೇಘವನ್ನು ಧರಿಸಿಕೊಂಡಿದ್ದಾನೆ. ಇದು ಯೇಸುವಿನ ಕುರಿತು ಯೋಹಾನನ ಹಿಂದಿನ ಮಾತುಗಳನ್ನು ನಮಗೆ ನೆನಪಿಸುತ್ತದೆ: “ಇಗೋ, ಮೇಘಗಳೊಂದಿಗೆ ಬರುತ್ತಾನೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು.” (ಪ್ರಕಟನೆ 1:7; ಹೋಲಿಸಿರಿ ಮತ್ತಾಯ 17:2-5.) ಅವನ ತಲೆಯ ಮೇಲಿನ ಮುಗಿಲುಬಿಲ್ಲು ಅದರೊಂದಿಗೆ “ಪಚ್ಚೆಯಂತೆ ತೋರುತ್ತಿದ್ದ ಮುಗಿಲುಬಿಲ್ಲನ್ನು” ನೋಡಿದ ಯೆಹೋವನ ಸಿಂಹಾಸನದ ಯೋಹಾನನ ಹಿಂದಿನ ದರ್ಶನವನ್ನು ನಮಗೆ ನೆನಪಿಸುತ್ತದೆ. (ಪ್ರಕಟನೆ 4:3; ಹೋಲಿಸಿರಿ ಯೆಹೆಜ್ಕೇಲ 1:28.) ಆ ಮುಗಿಲುಬಿಲ್ಲು ಯೆಹೋವನ ಸಿಂಹಾಸನದ ಸುತ್ತಲಿರುವ ಪ್ರಸನ್ನತೆ ಮತ್ತು ಶಾಂತಿಯನ್ನು ಸೂಚಿಸಿತು. ತದ್ರೀತಿಯಲ್ಲಿ, ದೇವದೂತನ ತಲೆಯ ಮೇಲಿರುವ ಈ ಮುಗಿಲುಬಿಲ್ಲು ಒಬ್ಬ ವಿಶೇಷ ಶಾಂತಿದೂತನಾಗಿ ಯೆಹೋವನ ಮುಂತಿಳಿಸಲ್ಪಟ್ಟ “ಸಮಾಧಾನದ ಪ್ರಭು” ವನ್ನು ಗುರುತಿಸುತ್ತದೆ.—ಯೆಶಾಯ 9:6, 7.

4. (ಎ) ಬಲಿಷ್ಠ ದೇವದೂತನ ಮುಖವು “ಸೂರ್ಯನೋಪಾದಿ ಇತ್ತು” (ಬಿ) ಅವನ ಪಾದಗಳು “ಬೆಂಕಿಯ ಕಂಬಗಳಂತಿದ್ದವು” ಎನ್ನುವುದರಿಂದ ಏನು ಸೂಚಿಸಲ್ಪಟ್ಟಿರುತ್ತದೆ?

4 ಬಲಿಷ್ಠನಾದ ದೇವದೂತನ ಮುಖವು “ಸೂರ್ಯನೋಪಾದಿ” ಇತ್ತು. ಈ ಮೊದಲು, ದೈವಿಕ ಆಲಯದಲ್ಲಿ ಯೇಸುವಿನ ಮುಖಭಂಗಿಯು “ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು” ಎಂದು ಯೋಹಾನನು ತನ್ನ ದರ್ಶನದಲ್ಲಿ ಯೇಸುವಿನ ಬಗ್ಗೆ ಗಮನಿಸಿದ್ದನು. (ಪ್ರಕಟನೆ 1:16) ಯೇಸುವು “ಧರ್ಮವೆಂಬ ಸೂರ್ಯ” ನೋಪಾದಿ, ಯೆಹೋವನ ನಾಮಕ್ಕೆ ಭಯಪಡುವವರ ಪ್ರಯೋಜನಕ್ಕೋಸ್ಕರ ತನ್ನ ರೆಕ್ಕೆಗಳಲ್ಲಿ ವಾಸಿಮಾಡುವಿಕೆಯುಳ್ಳವನಾಗಿ ಪ್ರಕಾಶಿಸುತ್ತಾನೆ. (ಮಲಾಕಿಯ 4:2) ಕೇವಲ ಮುಖ ಮಾತ್ರವೇ ಅಲ್ಲ, ಆದರೆ ಈ ದೇವದೂತನ ಪಾದಗಳು ಕೂಡ “ಬೆಂಕಿಯ ಕಂಬಗಳಂತೆ” ಮಹಿಮಾಭರಿತವಾಗಿವೆ. ಅವನ ದೃಢಭಂಗಿಯು, ಯಾರಿಗೆ ಯೆಹೋವನು “ಪರಲೋಕದಲ್ಲಿಯೂ ಭೂಮಿಯಲ್ಲಿಯೂ ಎಲ್ಲಾ ಅಧಿಕಾರವನ್ನು” ಕೊಟ್ಟಿದ್ದಾನೋ ಅವನಂತೆ ಇದೆ.—ಮತ್ತಾಯ 28:18; ಪ್ರಕಟನೆ 1:14, 15.

5. ಬಲಿಷ್ಠ ದೇವದೂತನ ಕೈಯಲ್ಲಿ ಏನಿರುವುದನ್ನು ಯೋಹಾನನು ಕಾಣುತ್ತಾನೆ?

5 ಯೋಹಾನನು ಮುಂದಕ್ಕೆ ಅವಲೋಕಿಸುವುದು: “ಮತ್ತು ಅವನ ಕೈಯಲ್ಲಿ ಬಿಚ್ಚಿದ್ದ ಒಂದು ಚಿಕ್ಕ ಸುರುಳಿ ಇತ್ತು. ಮತ್ತು ಅವನು ಬಲಗಾಲನ್ನು ಸಮುದ್ರದ ಮೇಲೆ, ಆದರೆ ಎಡಗಾಲನ್ನು ಭೂಮಿಯ ಮೇಲೆ ಇಟ್ಟನು.” (ಪ್ರಕಟನೆ 10:2, NW)  ಇನ್ನೊಂದು ಸುರುಳಿ? ಹೌದು, ಆದರೆ ಈ ಸಾರಿ ಇದಕ್ಕೆ ಮುದ್ರೆ ಒತ್ತಿಲ್ಲ. ಯೋಹಾನನೊಂದಿಗೆ, ಹೆಚ್ಚಿನ ರೋಮಾಂಚಕಾರಿ ಪ್ರಕಟನೆಗಳನ್ನು ಬೇಗನೇ ನೋಡುವುದನ್ನು ನಾವು ನಿರೀಕ್ಷಿಸಬಲ್ಲೆವು. ಆದರೂ, ಮೊದಲು ಹಿಂಬಾಲಿಸಲಿರುವುದರ ಹಿನ್ನೆಲೆಯು ನಮಗೆ ಕೊಡಲ್ಪಟ್ಟಿದೆ.

6. (ಎ) ಯೇಸುವಿನ ಪಾದಗಳು ಭೂಮಿ ಮತ್ತು ಸಮುದ್ರದ ಮೇಲೆ ಇರುವುದು ತಕ್ಕದ್ದಾಗಿದೆ ಯಾಕೆ? (ಬಿ) ಕೀರ್ತನೆ 8:5-8 ಯಾವಾಗ ಪೂರ್ಣವಾಗಿ ನೆರವೇರಿತು?

6 ಯೇಸುವಿನ ವರ್ಣನೆಯ ಕಡೆಗೆ ನಾವೆಲ್ಲರೂ ಹಿಂದಿರುಗೋಣ. ಆತನ ಬೆಂಕಿಯಂತಿದ್ದ ಪಾದಗಳು ಯಾವುದರ ಮೇಲೆ ಈಗಾತನು ಪೂರ್ಣ ಅಧಿಕಾರವನ್ನು ಚಲಾಯಿಸುತ್ತಾನೋ ಆ ಭೂಮಿ ಮತ್ತು ಸಮುದ್ರದ ಮೇಲೆ ಇವೆ. ಇದು ಪ್ರವಾದನಾ ಕೀರ್ತನೆಯಲ್ಲಿ ಹೇಳಿದಂತೆಯೇ ಇರುತ್ತದೆ: “ನೀನು [ಯೆಹೋವನು] ಅವನನ್ನು [ಯೇಸುವನ್ನು] ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿ. ನೀನು ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ ಅನುಗ್ರಹಿಸಿದಿ; ನೀನು ಎಲ್ಲಾ ಕುರಿದನಗಳನ್ನು ಮಾತ್ರವೇ ಅಲ್ಲದೆ ಕಾಡುಮೃಗಗಳು, ಆಕಾಶಪಕ್ಷಿಗಳು, ಸಮುದ್ರದ ಮೀನುಗಳು, ಅದರಲ್ಲಿ ಸಂಚರಿಸುವ ಸಕಲವಿಧವಾದ ಜೀವಜಂತುಗಳು ಇವೆಲ್ಲವನ್ನೂ ಅವನಿಗೆ ಅಧೀನಮಾಡಿದ್ದೀಯಲ್ಲವೇ.” (ಕೀರ್ತನೆ 8:5-8; ಇಬ್ರಿಯ 2:5-9 ಸಹ ನೋಡಿರಿ.) ಯೇಸುವು ದೇವರ ರಾಜ್ಯದ ರಾಜನಾಗಿ ಸ್ಥಾಪಿಸಲ್ಪಟ್ಟ ಮತ್ತು ಕಡೇ ದಿವಸಗಳ ಸಮಯವು ಪ್ರಾರಂಭಿಸಿದ 1914 ರಲ್ಲಿ ಈ ಕೀರ್ತನೆಯು ಪೂರ್ಣವಾಗಿ ನೆರವೇರಿತು. ಹೀಗೆ, ಯೋಹಾನನು ಇಲ್ಲಿ ದರ್ಶನದಲ್ಲಿ ನೋಡಿದವುಗಳು ಆ ವರ್ಷದಿಂದ ಹಿಡಿದು ಅನ್ವಯವಾಗುತ್ತವೆ.—ಕೀರ್ತನೆ 110:1-6; ಅ. ಕೃತ್ಯಗಳು 2:34-36; ದಾನಿಯೇಲ 12:4.

ಏಳು ಗುಡುಗುಗಳು

7. ಬಲಿಷ್ಠ ದೇವದೂತನು ಯಾವ ರೀತಿಯಲ್ಲಿ ಕೂಗುತ್ತಾನೆ, ಮತ್ತು ಆತನ ಕೂಗಿನ ಮಹತ್ವವೇನಾಗಿರುತ್ತದೆ?

7 ಈ ಬಲಿಷ್ಠ ದೇವದೂತನ ಕುರಿತಾದ ಯೋಹಾನನ ಚಿಂತನೆಯು ಅದೇ ದೇವದೂತನಿಂದ ತಾನೇ ಅಡಯಿಸ್ಡಲ್ಪಡುತ್ತದೆ: “ಮತ್ತು ಅವನು [ದೇವದೂತನು] ಸಿಂಹವು ಗರ್ಜಿಸುವಾಗ ಹೇಗೋ ಹಾಗೆಯೇ ಮಹಾ ಶಬ್ದದಿಂದ ಕೂಗಿದನು. ಮತ್ತು ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಸ್ವಂತ ಧ್ವನಿಗಳನ್ನು ಉಚ್ಚರಿಸಿದವು.” (ಪ್ರಕಟನೆ 10:3, NW) ಇಂಥ ಒಂದು ಬಲವಾದ ಕೂಗು ಯೋಹಾನನ ಗಮನವನ್ನು ಸೆರೆಹಿಡಿದು, ಯೇಸುವು ನಿಜವಾಗಿ “ಯೂದಾಕುಲದಲ್ಲಿ ಜನಿಸಿದ ಸಿಂಹ” ವಾಗಿದ್ದಾನೆಂದು ದೃಢೀಕರಿಸಿತು. (ಪ್ರಕಟನೆ 5:5) ಯೆಹೋವನು ಕೂಡ ಕೆಲವೊಮ್ಮೆ “ಗರ್ಜಿಸು” ತ್ತಾನೆಂದು ಹೇಳಿರುವುದರ ಅರಿವು ಯೋಹಾನನಿಗೆ ಇತ್ತು. ಪ್ರವಾದನಾತ್ಮಕವಾಗಿ, ಯೆಹೋವನ ಗರ್ಜಿಸುವಿಕೆಯು ಆತ್ಮಿಕ ಇಸ್ರಾಯೇಲಿನ ಪುನಃ ಒಟ್ಟುಗೂಡಿಸುವಿಕೆಯನ್ನು ಮತ್ತು ನಾಶನಕಾರಿ “ಯೆಹೋವನ ದಿನದ” ಆಗಮನವನ್ನು ಘೋಷಿಸುತ್ತದೆ. (ಹೋಶೇಯ 11:10; ಯೋವೇಲ 3:14, 16; ಆಮೋಸ 1:2; 3:7, 8) ಸ್ಪಷ್ಟವಾಗಿ, ಹಾಗಾದರೆ, ಈ ಬಲಿಷ್ಠ ದೇವದೂತನ ಸಿಂಹದಂತಿರುವ ಕೂಗು ಸಮುದ್ರಕ್ಕೆ ಮತ್ತು ಭೂಮಿಗೆ ತದ್ರೀತಿಯ ಮಹಾ ಘಟನೆಗಳನ್ನು ಮುನ್‌-ಸೂಚಿಸುತ್ತದೆ. ಇದು ಏಳು ಗುಡುಗುಗಳು ಮಾತಾಡುವಂತೆ ಕರೆನೀಡುತ್ತದೆ.

8. ‘ಏಳು ಗುಡುಗುಗಳ ವಾಣಿಗಳು’ ಏನಾಗಿವೆ?

8 ಯೋಹಾನನು ಈ ಮುಂಚೆ ಯೆಹೋವನ ಸಿಂಹಾಸನದೊಳಗಿಂದ ತಾನೇ ಗುಡುಗುಗಳು ಹೊರಡುವುದನ್ನು ಕೇಳಿದ್ದಾನೆ. (ಪ್ರಕಟನೆ 4:5) ಹಿಂದೆ ದಾವೀದನ ದಿನಗಳಲ್ಲಿ, ಅಕ್ಷರಾರ್ಥ ಗುಡುಗುಗಳು “ಯೆಹೋವನ ಧ್ವನಿ” ಯೆಂದು ಕೆಲವೊಮ್ಮೆ ಹೇಳಲಾಗಿದೆ. (ಕೀರ್ತನೆ 29:3) ಯೇಸುವಿನ ಭೂ ಶುಶ್ರೂಷೆಯ ದಿನಗಳಲ್ಲಿ ತನ್ನ ಸ್ವಂತ ನಾಮವನ್ನು ಮಹಿಮೆಪಡಿಸುವ ತನ್ನ ಉದ್ದೇಶವನ್ನು ಯೆಹೋವನು ಕೇಳಿಸುವಂತೆ ವ್ಯಕ್ತಪಡಿಸಿದಾಗ, ಅನೇಕರಿಗೆ ಅದು ಗುಡುಗಿನಂತೆ ಧ್ವನಿಸಿತು. (ಯೋಹಾನ 12:28, 29) ಆದುದರಿಂದ ‘ಏಳು ಗುಡುಗುಗಳ ಕೂಗುಗಳು’ ಆತನ ಉದ್ದೇಶಗಳ ಕುರಿತಾಗಿ ಯೆಹೋವನ ಸ್ವಂತ ಮಾತುಗಳೇ ಆಗಿವೆಯೆಂಬ ಸಮಾಪ್ತಿಗೆ ಬರುವುದು ಸಮಂಜಸವಾಗಿದೆ. “ಏಳು” ಗುಡುಗುಗಳು ಇದ್ದವೆಂಬ ನಿಜತ್ವವು ಯೋಹಾನನು ಪೂರ್ತಿಯಾಗಿ ಕೇಳಿದನೆಂಬುದನ್ನು ಸೂಚಿಸುತ್ತದೆ.

9. ಪರಲೋಕದಿಂದ ಹೊರಟುಬಂದ ಒಂದು ವಾಣಿಯು ಯಾವ ಆಜ್ಞೆಯನ್ನು ಕೊಡುತ್ತದೆ?

9 ಆದರೆ ಆಲಿಸಿರಿ! ಇನ್ನೊಂದು ಕೂಗು ಧ್ವನಿಸುತ್ತದೆ. ಯೋಹಾನನಿಗೆ ವಿಚಿತ್ರವೆಂದು ತೋರುವ ಒಂದು ಆಜ್ಞೆಯನ್ನು ಅದು ತರುತ್ತದೆ: “ಈಗ ಆ ಏಳು ಗುಡುಗುಗಳು ನುಡಿದಾಗ, ನಾನು ಇನ್ನೇನು ಬರೆಯಬೇಕೆಂದಿದ್ದೆನು; ಆದರೆ ಪರಲೋಕದಿಂದ ನಾನು ಒಂದು ವಾಣಿಯು ಹೇಳುವುದನ್ನು ಕೇಳಿದೆನು: ‘ಆ ಏಳು ಗುಡುಗುಗಳು ನುಡಿದ ಸಂಗತಿಗಳನ್ನು ಮುದ್ರೆ ಹಾಕು, ಮತ್ತು ಅವುಗಳನ್ನು ಬರೆಯಬೇಡ.’” (ಪ್ರಕಟನೆ 10:4, NW) ಇಂದು ಯೋಹಾನ ವರ್ಗವು ಯೆಹೋವನ ದೈವಿಕ ಉದ್ದೇಶಗಳನ್ನು ಪ್ರಕಾಶಿಸಲಿಕ್ಕಾಗಿ ಅವುಗಳ ಬಹಿರಂಗಪಡಿಸುವಿಕೆಗೆ ಆತನೆಡೆಗೆ ಉತ್ಸುಕತೆಯಿಂದ ಕಾದುನಿಲ್ಲುವಂತೆ, ಆ ಗುಡುಗಿನ ಸಂದೇಶಗಳನ್ನು ಆಲಿಸಲು ಮತ್ತು ದಾಖಲಿಸಲು ಯೋಹಾನನು ಉತ್ಸುಕನಾಗಿದ್ದಿರಬೇಕು. ಇಂಥ ಪ್ರಕಟನೆಗಳು ಯೆಹೋವನ ನೇಮಿತ ಸಮಯದಲ್ಲಿ ಮಾತ್ರ ಬರುತ್ತವೆ.—ಲೂಕ 12:42; ದಾನಿಯೇಲ 12:8, 9 ಸಹ ನೋಡಿರಿ.

ಪವಿತ್ರ ರಹಸ್ಯದ ಮುಕ್ತಾಯ

10. ಬಲಿಷ್ಠ ದೇವದೂತನು ಯಾರ ಮೇಲೆ ಆಣೆಯಿಡುತ್ತಾನೆ, ಮತ್ತು ಯಾವ ಪ್ರಕಟನೆಯೊಂದಿಗೆ?

10 ಈ ನಡುವೆ, ಯೆಹೋವನ ಹತ್ತಿರ ಯೋಹಾನನಿಗೆ ಮತ್ತೊಂದು ಆದೇಶವಿದೆ. ಏಳು ಗುಡುಗುಗಳು ಧ್ವನಿಸಲ್ಪಟ್ಟ ಅನಂತರ, ಬಲಿಷ್ಠ ದೇವದೂತನು ಪುನಃ ಒಮ್ಮೆ ಮಾತಾಡುತ್ತಾನೆ: “ಮತ್ತು ನನಗೆ ಕಾಣಿಸಿದ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತುಕೊಂಡು, ತನ್ನ ಬಲಗೈಯನ್ನು ಪರಲೋಕದ ಕಡೆಗೆ ಎತ್ತಿ, ಮತ್ತು ಪರಲೋಕವನ್ನು ಮತ್ತು ಅದರಲ್ಲಿರುವ ಸಂಗತಿಗಳನ್ನು ಮತ್ತು ಭೂಮಿಯನ್ನು ಮತ್ತು ಅದರಲ್ಲಿರುವ ಸಂಗತಿಗಳನ್ನು ಮತ್ತು ಸಮುದ್ರವನ್ನು ಮತ್ತು ಅದರಲ್ಲಿರುವ ಸಂಗತಿಗಳನ್ನು ಸೃಷ್ಟಿಸಿದವನೂ, ಯುಗಯುಗಾಂತರಗಳಲ್ಲಿ ಜೀವಿಸುವವನೂ ಆಗಿರುವಾತನ ಮೇಲೆ ಆಣೆಯಿಟ್ಟು ಹೇಳಿದ್ದು: ‘ಇನ್ನು ಮುಂದೆ ಸಾವಕಾಶವೇ ಇರದು.’” (ಪ್ರಕಟನೆ 10:5, 6, NW) ಈ ಬಲಿಷ್ಠ ದೇವದೂತನು ಯಾರ ಮೇಲೆ ಆಣೆಯಿಡುತ್ತಾನೆ? ಮಹಿಮೆಗೇರಿಸಲ್ಪಟ್ಟ ಯೇಸುವು, ಸ್ವತಃ ತನ್ನ ಮೇಲೆ ಅಲ್ಲ, ಬದಲಾಗಿ ಎಲ್ಲದಕ್ಕಿಂತ ಅತ್ಯುನ್ನತ ಅಧಿಕಾರಿ, ಭೂಮ್ಯಾಕಾಶಗಳ ಅಮರ ಸೃಷ್ಟಿಕರ್ತ ಯೆಹೋವನ ಮೇಲೆ ಆಣೆಯಿಡುತ್ತಾನೆ. (ಯೆಶಾಯ 45:12, 18) ಈ ಆಣೆಯೊಂದಿಗೆ, ದೇವರ ಪಕ್ಷದಿಂದ ಯಾವುದೇ ಹೆಚ್ಚಿನ ಸಾವಕಾಶವಿರುವುದಿಲ್ಲ ಎಂದು ದೇವದೂತನು ಯೋಹಾನನಿಗೆ ಭರವಸೆ ಕೊಡುತ್ತಾನೆ.

11, 12. (ಎ) ಇನ್ನು “ಸಾವಕಾಶವಿರದು” ಎನ್ನುವುದರ ಅರ್ಥವೇನು? (ಬಿ) ಯಾವುದು ಮುಕ್ತಾಯಕ್ಕೆ ತರಲ್ಪಡುತ್ತದೆ?

11 ಇಲ್ಲಿ ಭಾಷಾಂತರಿಸಲ್ಪಟ್ಟ “ಸಾವಕಾಶ” ವೆಂಬ ಗ್ರೀಕ್‌ ಪದ ಕ್ರೋ’ನೊಸ್‌ ಅಕ್ಷರಶಃ “ಸಮಯ” ವೆಂಬ ಅರ್ಥವನ್ನು ಕೊಡುತ್ತದೆ. ಈ ರೀತಿಯಲ್ಲಿ, ದೇವದೂತನ ಈ ಪ್ರಕಟನೆಯು ಹೀಗೆ ಭಾಷಾಂತರಿಸಲ್ಪಡಬೇಕಿತ್ತೆಂದು ಕೆಲವರು ಭಾವಿಸುತ್ತಾರೆ: “ಇನ್ನು ಸಮಯವೇ ಇರದು,”—ನಮಗೆ ಗೊತ್ತಿರುವ ಸಮಯವು ಮುಕ್ತಾಯಗೊಳ್ಳಲಿರುವದೊ ಎಂಬಂತೆ. ಆದರೆ ಕ್ರೋ’ನೊಸ್‌ ಎಂಬ ಪದವು ಇಲ್ಲಿ ಯಾವುದೇ ನಿರ್ದೇಶಕ ಗುಣವಾಚಿ ಇಲ್ಲದೇ ಬಳಸಲ್ಪಟ್ಟಿದೆ. ಆದುದರಿಂದ ಒಂದು ಸಾಮಾನ್ಯ ಅರ್ಥದ ಸಮಯವಲ್ಲ, ಬದಲಾಗಿ “ಒಂದು ಗಳಿಗೆ” ಯಾ “ಒಂದು ಸಮಯಾವಧಿ” ಎಂಬ ಅರ್ಥದಲ್ಲಿ ಇದು ಇದೆ. ಇನ್ನೊಂದು ಮಾತಿನಲ್ಲಿ, ಇನ್ನೂ ಹೆಚ್ಚಿನ ಸಮಯಾವಧಿ (ಯಾ, ತಡ) ಯೆಹೋವನಿಂದ ಆಗಲಾರದು. ಕ್ರೋ’ನೊಸ್‌ ನಿಂದ ಬಂದ ಇನ್ನೊಂದು ಗ್ರೀಕ್‌ ಕ್ರಿಯಾಪದವು ಇಬ್ರಿಯ 10:37 ರಲ್ಲಿಯೂ ಕೂಡ ಬಳಸಲ್ಪಟ್ಟಿದೆ, ಅಲ್ಲಿ ಪೌಲನು ಹಬಕ್ಕೂಕ 2:3, 4 ರಿಂದ ಉದ್ಧರಿಸುತ್ತಾ “ಬರುವಾತನು . . . ತಡಮಾಡುವುದಿಲ್ಲ” ಎಂದು ಬರೆಯುತ್ತಾನೆ.

12 “ಇನ್ನು ಸಾವಕಾಶವೇ ಇರದು”—ಈ ಮಾತುಗಳು ಇಂದು ವೃದ್ಧಾಪ್ಯದ ಯೋಹಾನ ವರ್ಗಕ್ಕೆ ಎಷ್ಟು ಹಿಡಿಸುತ್ತವೆ! ಯಾವ ವಿಷಯದಲ್ಲಿ ಸಾವಕಾಶವಿರುವದಿಲ್ಲ? ಯೋಹಾನನು ನಮಗೆ ತಿಳಿಸುವುದು: “ಆದರೆ ಏಳನೆಯ ದೇವದೂತನು ಉದ್ಘೋಷಿಸುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವುದಕ್ಕಿರುವಾಗ, ದೇವರು ಪ್ರವಾದಿಗಳಾದ ತನ್ನ ದಾಸರಿಗೆ ಘೋಷಿಸಿದ ಸುವಾರ್ತೆಗೆ ಅನುಸಾರವಾದ ಆತನ ಪವಿತ್ರ ರಹಸ್ಯವು ನಿಶ್ಚಯವಾಗಿಯೂ ಮುಕ್ತಾಯಕ್ಕೆ ತರಲ್ಪಡುತ್ತದೆ.” (ಪ್ರಕಟನೆ 10:7, NW) ತನ್ನ ಪವಿತ್ರ ರಹಸ್ಯವನ್ನು ಅದರ ಮಹಿಮಾಭರಿತ ಯಶಸ್ಸಿನೊಂದಿಗೆ ಸಂತೋಷದ ಪರಾಕಾಷ್ಠೆಗೆ ತರಲು ಯೆಹೋವನ ಸಮಯವು ಬಂದಿದೆ!

13. ದೇವರ ಪವಿತ್ರ ರಹಸ್ಯ ಏನಾಗಿದೆ?

13 ಈ ಪವಿತ್ರ ರಹಸ್ಯವು ಏನಾಗಿದೆ? ಮೊದಲಾಗಿ ಏದೆನಿನಲ್ಲಿ ವಾಗ್ದಾನಿಸಿದ, ಪ್ರಧಾನವಾಗಿ ಯೇಸು ಕ್ರಿಸ್ತನಾಗಿ ಪರಿಣಮಿಸಿದ ಸಂತತಿಯನ್ನು ಇದು ಒಳಗೊಂಡಿರುತ್ತದೆ. (ಆದಿಕಾಂಡ 3:15; 1 ತಿಮೊಥೆಯ 3:16) ಯಾರ ಮೂಲಕ ಸಂತತಿಯು ಬರುತ್ತದೆಯೋ ಆ ಸ್ತ್ರೀಯ ಗುರುತಿಸುವಿಕೆಯೊಂದಿಗೂ ಇದು ಸಂಬಂಧಿಸಿದೆ. (ಯೆಶಾಯ 54:1; ಗಲಾತ್ಯ 4:26-28) ಇನ್ನೂ ಹೆಚ್ಚಾಗಿ, ಅದು ಸಂತತಿ ವರ್ಗದ ದ್ವಿತೀಯ ಸದಸ್ಯರನ್ನು ಮತ್ತು ಸಂತತಿಯು ಆಳಲಿರುವ ರಾಜ್ಯವನ್ನು ಸಹ ಸೇರಿಸುತ್ತದೆ. (ಲೂಕ 8:10; ಎಫೆಸ 3:3-9; ಕೊಲೊಸ್ಸೆ 1:26, 27; 2:2; ಪ್ರಕಟನೆ 1:5, 6) ಈ ಅದ್ವಿತೀಯ ಸ್ವರ್ಗೀಯ ರಾಜ್ಯದ ಕುರಿತಾದ ಶುಭವರ್ತಮಾನವು ಅಂತ್ಯದ ಸಮಯದಲ್ಲಿ ಭೂಮಿಯಲ್ಲಿಲ್ಲಾ ಸಾರಲ್ಪಡಲೇ ಬೇಕು.—ಮತ್ತಾಯ 24:14.

14. ಮೂರನೆಯ ವಿಪತ್ತು ದೇವರ ರಾಜ್ಯದೊಂದಿಗೆ ಯಾಕೆ ಜೋಡಿಸಲ್ಪಟ್ಟಿದೆ?

14 ನಿಶ್ಚಯವಾಗಿಯೂ, ಇದು ವಾರ್ತೆಗಳಲ್ಲಿ ಅತಿ ಅತ್ಯುತ್ತಮವಾಗಿದೆ. ಆದರೂ, ಪ್ರಕಟನೆ 11:14, 15 ರಲ್ಲಿ, ಮೂರನೆಯ ವಿಪತ್ತು ರಾಜ್ಯದೊಂದಿಗೆ ಜೋಡಿಸಲ್ಪಟ್ಟಿದೆ. ಯಾಕೆ? ಯಾಕಂದರೆ ಸೈತಾನನ ವಿಷಯಗಳ ವ್ಯವಸ್ಥೆಯನ್ನು ಇಷ್ಟಪಡುವ ಮಾನವಕುಲದವರಿಗೆ ದೇವರ ಪವಿತ್ರ ರಹಸ್ಯವನ್ನು ಅದರ ಮುಕ್ತಾಯಕ್ಕೆ ತರಲಾಗಿದೆ—ಅಂದರೆ ದೇವರ ಮೆಸ್ಸೀಯ ಸಂಬಂಧಿತ ರಾಜ್ಯವು ಇಲ್ಲಿದೆ—ಎಂಬ ಶುಭವರ್ತಮಾನದ ಊದುವಿಕೆಯು ಒಂದು ವಿಪತ್ಕಾರಕ ವಾರ್ತೆಯಾಗಿದೆ. (ಹೋಲಿಸಿರಿ 2 ಕೊರಿಂಥ 2:16.) ಅವರು ಬಹಳವಾಗಿ ಮೆಚ್ಚುವಂಥ ಲೋಕ ವ್ಯವಸ್ಥೆಯು ನಾಶಮಾಡಲ್ಪಡುವಷ್ಟು ಹತ್ತಿರವಿದೆ ಎಂಬರ್ಥದಲ್ಲಿದೆ. ಇಂಥ ಅನಿಷ್ಟವಾದ ಬಿರುಗಾಳಿಯ ಎಚ್ಚರಿಕೆಗಳನ್ನೊಳಗೊಂಡ ಏಳು ಗುಡುಗಿನ ಧ್ವನಿಗಳು ಯೆಹೋವನ ಮುಯ್ಯಿತೀರಿಸುವ ಮಹಾ ದಿನದ ಸಮೀಪಿಸುವಿಕೆಯೊಂದಿಗೆ ಇನ್ನೂ ಸ್ಪಷ್ಟವಾಗುತ್ತವೆ ಮತ್ತು ಬಲಗೊಳ್ಳುತ್ತವೆ.—ಚೆಫನ್ಯ 1:14-18.

ಬಿಚ್ಚಿದ ಸುರುಳಿ

15. ಪರಲೋಕದಿಂದ ಬಂದ ಶಬ್ದವು ಮತ್ತು ಬಲಿಷ್ಠ ದೇವದೂತನು ಯೋಹಾನನಿಗೆ ಏನನ್ನು ಹೇಳುತ್ತಾರೆ, ಮತ್ತು ಯೋಹಾನನ ಮೇಲೆ ಅದರ ಪರಿಣಾಮವೇನು?

15 ಈ ಏಳನೆಯ ತುತೂರಿಯ ಊದುವಿಕೆಗೆ ಮತ್ತು ದೇವರ ಪವಿತ್ರ ರಹಸ್ಯವನ್ನು ಮುಕ್ತಾಯಕ್ಕೆ ತರುವುದಕ್ಕೆ ಯೋಹಾನನು ಕಾದಿರುವಾಗ, ಅವನಿಗೆ ಇನ್ನೊಂದು ನೇಮಕಾತಿಯನ್ನು ಕೊಡಲಾಗುತ್ತದೆ: “ಮತ್ತು ಸ್ವರ್ಗದಿಂದ ನನಗೆ ಕೇಳಿಸಿದ್ದ ಧ್ವನಿಯು ನನ್ನೊಂದಿಗೆ ಪುನಃ ಮಾತಾಡುತ್ತಾ ಹೇಳುವುದು: ‘ಹೋಗು, ಸಮುದ್ರ ಮತ್ತು ಭೂಮಿಯ ಮೇಲೆ ನಿಂತಿರುವ ಆ ದೂತನ ಕೈಯಿಂದ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೋ.’ ಮತ್ತು ನಾನು ಆ ದೇವದೂತನ ಬಳಿಗೆ ಹೋಗಿ ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಹೇಳಿದೆನು. ಮತ್ತು ಅವನು ನನಗೆ ಹೇಳಿದ್ದು: ‘ಇದನ್ನು ತೆಗೆದುಕೋ ಮತ್ತು ತಿಂದುಬಿಡು, ಮತ್ತು ಇದು ನಿನ್ನ ಹೊಟ್ಟೆಯನ್ನು ಕಹಿ ಮಾಡುವುದು, ಆದರೆ ನಿನ್ನ ಬಾಯಲ್ಲಿ ಇದು ಜೇನಿನಂತೆ ಸಿಹಿಯಾಗಿರುವುದು.’ ಮತ್ತು ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದೆನು, ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಆದರೆ ನಾನು ತಿಂದಾದ ಮೇಲೆ ನನ್ನ ಹೊಟ್ಟೆ ಕಹಿಯಾಯಿತು. ಮತ್ತು ಅವರು ನನಗೆ ಹೇಳುವುದು: ‘ಪ್ರಜೆಗಳ, ಜನಾಂಗಗಳ, ಭಾಷೆಗಳ ಮತ್ತು ಅನೇಕ ರಾಜರ ಸಂಬಂಧದಲ್ಲಿ ಪುನಃ ಪ್ರವಾದಿಸಬೇಕು.’”—ಪ್ರಕಟನೆ 10:8-11, NW. 

16. (ಎ) ಯೋಹಾನನಿಗೆ ಆದಂಥ ತದ್ರೀತಿಯ ಅನುಭವವು ಪ್ರವಾದಿ ಯೆಹೆಜ್ಕೇಲನಿಗೆ ಹೇಗೆ ಆಯಿತು? (ಬಿ) ಯೋಹಾನನಿಗೆ ಚಿಕ್ಕ ಸುರುಳಿಯು ಏಕೆ ಸಿಹಿಯಾಗಿ ರುಚಿಸಿತು, ಆದರೆ ಜೀರ್ಣಿಸಲು ಅದು ಕಹಿಯಾದದೇಕ್ದೆ?

16 ಬಾಬೆಲಿನ ದೇಶದಲ್ಲಿ ದೇಶಭ್ರಷ್ಟನಾಗಿದ್ದ ಸಮಯದಲ್ಲಿ ಪ್ರವಾದಿ ಯೆಹೆಜ್ಕೇಲನ ಅನುಭವಕ್ಕೆ ಸರಿಸಮಾನವಾದ ಅನುಭವವು ಯೋಹಾನನದ್ದಾಗಿದೆ. ಅವನಿಗೂ ಕೂಡ ತನ್ನ ಬಾಯಿಯಲ್ಲಿ ಸಿಹಿಯಾಗುವ ಒಂದು ಸುರುಳಿಯನ್ನು ತಿನ್ನಬೇಕೆಂದು ಆಜ್ಞಾಪಿಸಲಾಯಿತು, ಆದರೆ ಅದು ಅವನ ಹೊಟ್ಟೆಯನ್ನು ತುಂಬಿದಾಗ, ದಂಗೆಕೋರ ಇಸ್ರಾಯೇಲ್‌ ಮನೆತನಕ್ಕೆ ಕಹಿಯಾದ ಸಂಗತಿಗಳನ್ನು ಮುನ್ನುಡಿಯುವಂತೆ ಆತನನ್ನು ಅದು ಜವಾಬ್ದಾರನನ್ನಾಗಿ ಮಾಡಿತು. (ಯೆಹೆಜ್ಕೇಲ 2:8–3:15) ತದ್ರೀತಿ, ಮಹಿಮಾಭರಿತ ಯೇಸು ಕ್ರಿಸ್ತನು ಯೋಹಾನನಿಗೆ ನೀಡುವ ಬಿಚ್ಚಿದ ಸುರುಳಿಯು ಒಂದು ದೈವಿಕ ಸಂದೇಶವಾಗಿದೆ. ಯೋಹಾನನಿಗೆ “ಪ್ರಜೆಗಳ, ಜನಾಂಗಗಳ, ಭಾಷೆಗಳ ಮತ್ತು ಅನೇಕ ರಾಜರ” ಸಂಬಂಧದಲ್ಲಿ ಸಾರಲಿಕ್ಕಿತ್ತು. ಈ ಸುರುಳಿಯನ್ನು ತಿನ್ನುವುದು ಅವನಿಗೆ ಸಿಹಿಯಾಗಿತ್ತು ಯಾಕಂದರೆ ಅದು ದೈವಿಕ ಮೂಲವೊಂದರಿಂದ ಬಂದಿದೆ. (ಹೋಲಿಸಿರಿ ಕೀರ್ತನೆ 119:103; ಯೆರೆಮೀಯ 15:15, 16.) ಆದರೆ ಅದನ್ನು ಜೀರ್ಣಿಸಲು ಅವನಿಗೆ ಕಹಿಯಾಗುತ್ತದೆ ಯಾಕಂದರೆ—ಈ ಮುಂಚೆ ಯೆಹೆಜ್ಕೇಲನಿಗೆ ಆದಂತೆ—ಅದು ದಂಗೆಕೋರ ಮಾನವರಿಗೆ ರುಚಿಸದ ಸಂಗತಿಗಳನ್ನು ಮುನ್ನುಡಿಯುತ್ತದೆ.—ಕೀರ್ತನೆ 145:20.

17. (ಎ) ಯೋಹಾನನಿಗೆ “ಪುನಃ” ಪ್ರವಾದಿಸಲು ಹೇಳಿದವರು ಯಾರು, ಮತ್ತು ಅದರ ಅರ್ಥವೇನು? (ಬಿ) ಯೋಹಾನನಿಂದ ನೋಡಲ್ಪಟ್ಟ ನಾಟಕೀಯ ಚಿತ್ರಣವು ಯಾವಾಗ ನೆರವೇರಲಿತ್ತು?

17 ಪುನಃ ಒಮ್ಮೆ ಪ್ರವಾದಿಸಬೇಕೆಂದು ಯೋಹಾನನಿಗೆ ಹೇಳುವವರು ನಿಸ್ಸಂದೇಹವಾಗಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಆಗಿದ್ದಾರೆ. ಯೋಹಾನನು ಪತ್ಮೊಸ್‌ ದ್ವೀಪದಲ್ಲಿ ಗಡೀಪಾರುಮಾಡಲ್ಪಟ್ಟಿದ್ದರೂ, ಈಗಾಗಲೇ ಪ್ರಕಟನೆ ಪುಸ್ತಕದಲ್ಲಿ ದಾಖಲಿಸಿದ ಸಮಾಚಾರದ ಮೂಲಕ ಅನೇಕವಾಗಿರುವ ಪ್ರಜೆಗಳು, ಜನಗಳು, ಭಾಷೆಗಳು ಮತ್ತು ರಾಜರು ಇವರ ಸಂಬಂಧದಲ್ಲಿ ಪ್ರವಾದಿಸಿದ್ದಾನೆ. “ಪುನಃ” ಎಂಬ ಶಬ್ದದ ಅರ್ಥವೇನಂದರೆ ಪ್ರಕಟನೆಯಲ್ಲಿ ದಾಖಲಾದ ಇನ್ನುಳಿದ ಸಮಾಚಾರವನ್ನು ಅವನು ಬರೆದು, ಪ್ರಕಟಿಸಬೇಕೆಂದಾಗಿದೆ. ಆದರೆ ನೆನಪಿನಲ್ಲಿಡಿರಿ, ಯೋಹಾನನು ನಿಜವಾಗಿಯೂ ಇಲ್ಲಿ ಪ್ರವಾದನಾ ದರ್ಶನದಲ್ಲಿ ಪಾಲುತೆಗೆದುಕೊಳ್ಳುತ್ತಿದ್ದಾನೆ. ಅವನು ದಾಖಲಿಸಿದ್ದು, ವಾಸ್ತವದಲ್ಲಿ, ಬಲಿಷ್ಠ ದೇವದೂತನು ಭೂಮಿ ಮತ್ತು ಸಮುದ್ರದ ಮೇಲೆ ತನ್ನ ಅಧಿಕಾರವನ್ನು ತೆಗೆದುಕೊಂಡಾಗ, 1914ರ ಅನಂತರ ನೆರವೇರಲಿರುವ ಒಂದು ಪ್ರವಾದನೆಯಾಗಿದೆ. ಹಾಗಾದರೆ, ಈ ನಾಟಕೀಯ ಚಿತ್ರಣವು ಇಂದಿರುವ ಯೋಹಾನ ವರ್ಗದವರಿಗೆ ಯಾವ ಅರ್ಥದಲ್ಲಿದೆ?

ಇಂದು ಚಿಕ್ಕ ಸುರುಳಿ

18. ಕರ್ತನ ದಿನದ ಪ್ರಾರಂಭದಲ್ಲಿ, ಪ್ರಕಟನೆ ಪುಸ್ತಕದಲ್ಲಿ ಯೋಹಾನ ವರ್ಗದವರು ಯಾವ ಆಸಕ್ತಿಯನ್ನು ತೋರಿಸಿದರು?

18 ಯೋಹಾನನು ನೋಡಿದ ಸಂಗತಿಗಳು ಕರ್ತನ ದಿನದ ಪ್ರಾರಂಭದಲ್ಲಿ ಯೋಹಾನ ವರ್ಗದವರ ಅನುಭವವನ್ನು ಗಮನಾರ್ಹವಾಗಿ ಮುನ್‌ಚಿತ್ರಿಸಿತು. ಯೆಹೋವನ ಉದ್ದೇಶಗಳ ಅವರ ತಿಳಿವಳಿಕೆಯು, ಏಳು ಗುಡುಗುಗಳ ಅರ್ಥವಿವರಣೆಯ ಸಹಿತ ಆಗ ಅಸಂಪೂರ್ಣವಾಗಿತ್ತು. ಹಾಗಿದ್ದರೂ, ಅವರಿಗೆ ಪ್ರಕಟನೆಯಲ್ಲಿ ಆಳವಾದ ಆಸಕ್ತಿಯಿತ್ತು ಮತ್ತು ಚಾರ್ಲ್ಸ್‌ ಟೇಜ್‌ ರಸಲ್‌ ತಮ್ಮ ಜೀವಮಾನಕಾಲದಲ್ಲಿ ಅದರ ಅನೇಕ ಭಾಗಗಳ ಮೇಲೆ ಹೇಳಿಕೆಯನ್ನಿತ್ತರು. ಇಸವಿ 1916 ರಲ್ಲಿ ಅವರ ಮರಣದ ನಂತರ, ಅವರ ಅನೇಕ ಬರವಣಿಗೆಗಳು ಒಟ್ಟುಗೂಡಿಸಲ್ಪಟ್ಟವು ಮತ್ತು ದ ಫಿನಿಶ್ಡ್‌ ಮಿಸ್ಟರಿ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರಕಾಶಿಸಲ್ಪಟ್ಟವು. ಆದರೂ ಸಕಾಲದಲ್ಲಿ, ಈ ಪುಸ್ತಕವು ಪ್ರಕಟನೆಯ ವಿವರಣೆಯೋಪಾದಿ ಅತೃಪ್ತಿಕರವಾಗಿ ಪರಿಣಮಿಸಿತು. ಆ ಪ್ರೇರಿತ ದಾಖಲೆಯ ಸ್ಪಷ್ಟ ತಿಳಿವಳಿಕೆಗಾಗಿ, ದರ್ಶನಗಳು ನೆರವೇರುವುದಕ್ಕೆ ಪ್ರಾರಂಭವಾಗುವ ವರೆಗೆ ಕ್ರಿಸ್ತನ ಸಹೋದರರ ಉಳಿಕೆಯವರಿಗೆ ಸ್ವಲ್ಪ ಸಮಯ ಕಾಯಬೇಕಾಗಿತ್ತು.

19. (ಎ) ಏಳು ಗುಡುಗುಗಳ ಕೂಗುಗಳು ಪೂರ್ಣವಾಗಿ ಪ್ರಕಾಶಿಸಲ್ಪಡುವ ಮೊದಲೇ ಯೋಹಾನ ವರ್ಗವು ಯೆಹೋವನಿಂದ ಹೇಗೆ ಉಪಯೋಗಿಸಲ್ಪಟ್ಟಿತು? (ಬಿ) ಬಿಚ್ಚಿದ ಚಿಕ್ಕ ಸುರುಳಿಯು ಯೋಹಾನ ವರ್ಗದವರಿಗೆ ಯಾವಾಗ ಕೊಡಲ್ಪಟ್ಟಿತು, ಮತ್ತು ಇದು ಅವರಿಗೆ ಯಾವ ಅರ್ಥದಲ್ಲಿತ್ತು?

19 ಆದಾಗ್ಯೂ, ಯೋಹಾನನಂತೆ ಅವರು, ಏಳು ಗುಡುಗುಗಳ ಕೂಗುಗಳು ಪೂರ್ಣವಾಗಿ ಪ್ರಕಾಶಿಸಲ್ಪಡುವ ಮುಂಚೆಯೇ ಯೆಹೋವನಿಂದ ಉಪಯೋಗಿಸಲ್ಪಟ್ಟರು. ಅವರು 1914 ಕ್ಕಿಂತ ಮುಂಚೆ 40 ವರ್ಷ ಪರಿಶ್ರಮದಿಂದ ಸಾರಿದ್ದರು ಮತ್ತು ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಕ್ರಿಯಾಶೀಲರಾಗಿ ಉಳಿಯಲು ಅವರು ಹೆಣಗಾಡಿದರು. ಯಜಮಾನನು ಬಂದಾಗ ತನ್ನ ಮನೆಯಾಳುಗಳಿಗೆ ಸರಿಯಾದ ಸಮಯಕ್ಕೆ ಆಹಾರಕೊಡುವವರಾಗಿ ಅವರು ಪರಿಣಮಿಸಿದರು. (ಮತ್ತಾಯ 24:45-47) ಹೀಗೆ, 1919 ರಲ್ಲಿ ಬಿಚ್ಚಿದ ಚಿಕ್ಕ ಸುರುಳಿಯು—ಅಂದರೆ, ಮಾನವ ಕುಲಕ್ಕೆ ಸಾರುವ ಒಂದು ತೆರೆದ ಸಂದೇಶ—ಇವರಿಗೆ ಕೊಡಲ್ಪಟ್ಟಿತು. ದೇವರನ್ನು ಸೇವಿಸುತ್ತೇವೆಂದು ಅವರು ಹೇಳಿಕೊಳ್ಳುವದಾದರೂ, ವಾಸ್ತವದಲ್ಲಿ ಹಾಗಿಲದ್ಲಿರುವ ಅಪನಂಬಿಗಸ್ತ ಸಂಸ್ಥೆಗೆ—ಕ್ರೈಸ್ತಪ್ರಪಂಚಕ್ಕೆ—ಅವರಲ್ಲಿ ಯೆಹೆಜ್ಕೇಲನಂತೆ ಒಂದು ಸಂದೇಶ ಇತ್ತು. ಯೋಹಾನನಂತೆ ಅವರಿಗೆ ಅನೇಕ “ಪ್ರಜೆಗಳ ಜನಾಂಗಗಳ ಭಾಷೆಗಳ ಮತ್ತು ರಾಜರ” ಸಂಬಂಧದಲ್ಲಿ ಇನ್ನೂ ಹೆಚ್ಚು ಸಾರಲೇಬೇಕಿತ್ತು.

20. ಯೋಹಾನನಿಂದ ಸುರುಳಿ ತಿನ್ನುವಿಕೆಯು ಏನನ್ನು ಚಿತ್ರಿಸಿತು?

20 ಯೋಹಾನನಿಂದ ಸುರುಳಿಯ ತಿನ್ನುವಿಕೆಯು ಯೇಸುವಿನ ಸಹೋದರರು ಈ ನೇಮಕವನ್ನು ಸ್ವೀಕರಿಸಿದರೆಂದು ಚಿತ್ರಿಸುತ್ತದೆ. ಅದು ಎಷ್ಟರ ವರೆಗೆ ಅವರ ಭಾಗವಾಯಿತು ಅಂದರೆ ಅವರೀಗ ದೇವರ ಪ್ರೇರಿತ ವಾಕ್ಯದ ಈ ಭಾಗದೊಂದಿಗೆ ಗುರುತಿಸಲ್ಪಡುತ್ತಾರೆ, ಮತ್ತು ಅದರಿಂದ ಪುಷ್ಟೀಕರಿಸಲ್ಪಡುತ್ತಿದ್ದಾರೆ. ಆದರೆ ಅವರೇನನ್ನು ಸಾರಲಿಕ್ಕಿತ್ತೋ, ಅದು ಮಾನವ ಕುಲದ ಅನೇಕರಿಗೆ ರುಚಿಸದಂತಹ ಯೆಹೋವನ ನ್ಯಾಯತೀರ್ಪಿನ ಅಭಿವ್ಯಕ್ತಿಗಳನ್ನು ಒಳಗೂಡಿದ್ದವು. ನಿಜವಾಗಿಯೂ, ಪ್ರಕಟನೆ 8 ನೆಯ ಅಧ್ಯಾಯದಲ್ಲಿ ಮುಂತಿಳಿಸಿದಂತಹ ಬಾಧೆಗಳು ಇದರಲ್ಲಿ ಒಳಗೂಡಿದ್ದವು. ಆದಾಗ್ಯೂ, ಈ ಯಥಾರ್ಥ ಕ್ರೈಸ್ತರಿಗೆ ಈ ನ್ಯಾಯತೀರ್ಪುಗಳನ್ನು ತಿಳಿಯುವುದು ಮತ್ತು ಅವುಗಳನ್ನು ಘೋಷಿಸಲು ಯೆಹೋವನಿಂದ ಪುನಃ ತಮ್ಮನ್ನು ಉಪಯೋಗಿಸಲಾಗಿದೆಯೆಂದು ಅರಿಯುವುದು ಸಿಹಿಯಾಗಿತ್ತು.—ಕೀರ್ತನೆ 19:9, 10.

21. (ಎ) ಚಿಕ್ಕ ಸುರುಳಿಯ ಸಂದೇಶವು ಮಹಾ ಸಮೂಹದವರಿಗೆ ಕೂಡ ಹೇಗೆ ಸಿಹಿಯಾಗಿದೆ? (ಬಿ) ಶುಭವಾರ್ತೆಯು ಆಡುಗಳಂತಿರುವ ಜನರಿಗೆ ದುರ್ವಾರ್ತೆಯಾಗಿದೆ ಯಾಕೆ?

21 ಸಕಾಲದಲ್ಲಿ, ಕ್ರೈಸ್ತಪ್ರಪಂಚದಲ್ಲಿ ತಾವು ನೋಡಿದ ಅಸಹ್ಯ ವಸ್ತುಗಳಿಂದಾಗಿ ನಿಟ್ಟುಸಿರುಬಿಡುವವರಾಗಿ ಕಂಡುಕೊಳ್ಳಲ್ಪಟ್ಟ “ಸಕಲ ಜನಾಂಗ ಕುಲ ಪ್ರಜೆಗಳವರಿಂದ ಬಂದವರಾದ . . . ಮಹಾ ಸಮೂಹ” ದವರಿಗೆ ಕೂಡ ಈ ಸುರುಳಿಯ ಸಂದೇಶವು ಸಿಹಿಯಾಯಿತು. (ಪ್ರಕಟನೆ 7:9; ಯೆಹೆಜ್ಕೇಲ 9:4) ಇವರು ಕೂಡ ಸುವಾರ್ತೆಯನ್ನು ಪರಿಶ್ರಮಪೂರ್ವಕವಾಗಿ ಘೋಷಿಸುತ್ತಾರೆ, ಕುರಿಗಳಂಥ ಕ್ರೈಸ್ತರಿಗೆ ಯೆಹೋವನ ಆಶ್ಚರ್ಯಕರವಾದ ಒದಗಿಸುವಿಕೆಯನ್ನು ವರ್ಣಿಸಲು ಸಿಹಿಯಾದ ದಯಾಭರಿತ ಮಾತುಗಳನ್ನುಪಯೋಗಿಸುತ್ತಾರೆ. (ಕೀರ್ತನೆ 37:11, 29; ಕೊಲೊಸ್ಸೆ 4:6) ಆದರೆ ಆಡುಗಳಂಥ ಜನರಿಗೆ ಇದೊಂದು ದುರ್ವಾರ್ತೆಯಾಗಿದೆ. ಯಾಕೆ? ಅದರ ಅರ್ಥ ಅವರು ಭರವಸೆಯಿಟ್ಟಿರುವ ವ್ಯವಸ್ಥೆಯು—ಮತ್ತು ಅವರಿಗೆ ಯಾವುದು ಕ್ಷಣಿಕವಾದ ತೃಪ್ತಿಯನ್ನು ತಂದಿರಲೂಬಹುದೋ ಅದು—ಹೋಗಲೇಬೇಕು. ಅವರಿಗೆ ಶುಭವಾರ್ತೆಯು ನಾಶನದ ವಿಪರೀತಾರ್ಥವನ್ನು ಹೇಳುತ್ತದೆ.—ಮತ್ತಾಯ 25:31-34, 41, 46; ಹೋಲಿಸಿರಿ ಧರ್ಮೋಪದೇಶಕಾಂಡ 28:15; 2 ಕೊರಿಂಥ 2:15, 16.

[ಅಧ್ಯಯನ ಪ್ರಶ್ನೆಗಳು]

[ಪುಟ 271 ರಲ್ಲಿರುವ ಚಿತ್ರಗಳು]

ಯೋಹಾನ ವರ್ಗದವರು ಮತ್ತು ಅವರ ಸಂಗಾತಿಗಳು ಸಿಹಿ ಮತ್ತು ಕಹಿ ಸಂದೇಶವೊಂದನ್ನು ಎಲ್ಲಾ ಮಾನವ ಕುಲಕ್ಕೆ ಘೋಷಿಸುತ್ತಾರೆ