ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತಪ್ರಪಂಚದ ಮೇಲೆ ಯೆಹೋವನ ಉಪದ್ರವಗಳು

ಕ್ರೈಸ್ತಪ್ರಪಂಚದ ಮೇಲೆ ಯೆಹೋವನ ಉಪದ್ರವಗಳು

ಅಧ್ಯಾಯ 21

ಕ್ರೈಸ್ತಪ್ರಪಂಚದ ಮೇಲೆ ಯೆಹೋವನ ಉಪದ್ರವಗಳು

ದರ್ಶನ 5—ಪ್ರಕಟನೆ 8:1—9:21

ವಿಷಯ: ಏಳು ತುತೂರಿಗಳಲ್ಲಿ ಆರನ್ನು ಊದುವುದು

ನೆರವೇರಿಕೆಯ ಸಮಯ: 1914 ರಲ್ಲಿ ಕ್ರಿಸ್ತ ಯೇಸುವಿನ ಸಿಂಹಾಸನಾಸೀನನಾಗುವಿಕೆಯಿಂದ ಮಹಾ ಸಂಕಟದ ತನಕ

1. ಕುರಿಮರಿಯು ಏಳನೆಯ ಮುದ್ರೆಯನ್ನು ಒಡೆದಾಗ ಏನು ಸಂಭವಿಸುತ್ತದೆ?

“ನಾಲ್ಕು ಗಾಳಿಗಳನ್ನು” ಆತ್ಮಿಕ ಇಸ್ರಾಯೇಲಿನ 1,44,000 ಮಂದಿಯ ಮೇಲೆ ಮುದ್ರೆ ಒತ್ತಲ್ಪಡುವ ತನಕ ಮತ್ತು ಮಹಾ ಸಮೂಹವು ಪಾರಾಗುವಿಕೆಗಾಗಿ ಒಪ್ಪಿಗೆಯಾಗುವ ತನಕ ತಡೆಹಿಡಿಯಲಾಗಿತ್ತು. (ಪ್ರಕಟನೆ 7:1-4, 9) ಆದಾಗ್ಯೂ, ಭೂಮಿಯ ಮೇಲೆ ಬಿರುಗಾಳಿಯ ಚಂಡಮಾರುತವು ಹೊಡೆಯಲ್ಪಡುವ ಮುಂಚೆ, ಯೆಹೋವನ ಪ್ರತಿಕೂಲ ನ್ಯಾಯತೀರ್ಪು ಸಹ ಸೈತಾನನ ಲೋಕದ ವಿರುದ್ಧ ತಿಳಿಸಲ್ಪಡಲೇಬೇಕು! ಕುರಿಮರಿಯು ಏಳನೆಯ ಮತ್ತು ಕೊನೆಯ ಮುದ್ರೆಯನ್ನು ಒಡೆಯಲು ಮುಂದುವರಿದಂತೆ, ಯಾವುದು ಅನಾವರಣವಾಗಲಿದೆಯೋ ಅದನ್ನು ನೋಡಲು ಯೋಹಾನನು ಆಸಕ್ತಿಯಿಂದ ಕಾಯುತ್ತಿದ್ದಿರಬೇಕು. ಈಗ ಅವನು ನಮ್ಮೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ: “ಮತ್ತು ಆತನು [ಕುರಿಮರಿಯು] ಏಳನೆಯ ಮುದ್ರೆಯನ್ನು ಒಡೆದಾಗ, ಸುಮಾರು ಅರ್ಧ ಗಂಟೆಯ ವರೆಗೆ ಪರಲೋಕದಲ್ಲಿ ಮೌನವು ಸಂಭವಿಸಿತು. ಮತ್ತು ದೇವರ ಮುಂದೆ ನಿಲ್ಲುವ ಏಳು ಮಂದಿ ದೇವದೂತರನ್ನು ನಾನು ಕಂಡೆನು, ಮತ್ತು ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟವು.”—ಪ್ರಕಟನೆ 8:1, 2, NW.

ಕಟ್ಟಾಸಕ್ತಿಯ ಪ್ರಾರ್ಥನೆಗೆ ಸಮಯ

2. ಪರಲೋಕವು ಸಾಂಕೇತಿಕವಾಗಿ ಅರ್ಧತಾಸಿನ ವರೆಗೆ ನಿಶ್ಶಬ್ದವಾಗಿದ್ದ ವೇಳೆಯಲ್ಲಿ ಏನು ಸಂಭವಿಸುತ್ತದೆ?

2 ಇದೊಂದು ಮಹತ್ವಪೂರ್ಣ ನಿಶ್ಶಬ್ದತೆ! ಯಾವುದಾದರೊಂದು ಸಂಭವಿಸುವುದಕ್ಕೆ ನೀವು ಕಾಯುವಾಗ ಅರ್ಧ ತಾಸು ಒಂದು ದೀರ್ಘಾವಧಿಯಾಗಿ ಭಾಸವಾಗಬಲ್ಲದು. ಈಗ ಸ್ತುತಿಯ ಸತತ ಸ್ವರ್ಗೀಯ ಮೇಳಗೀತವು ಕೂಡ ಇನ್ನು ಮುಂದೆ ಕೇಳುವುದಿಲ್ಲ. (ಪ್ರಕಟನೆ 4:8) ಯಾಕೆ? ಯೋಹಾನನು ಕಾರಣವನ್ನು ದರ್ಶನದಲ್ಲಿ ನೋಡುತ್ತಾನೆ: “ಮತ್ತು ಇನ್ನೊಬ್ಬ ದೇವದೂತನು ಬಂದು ಯಜ್ಞವೇದಿಯ ಬಳಿಯಲ್ಲಿ ನಿಂತನು. ಅವನ ಕೈಯಲ್ಲಿ ಚಿನ್ನದ ಧೂಪಾರತಿ ಇತ್ತು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪವಿತ್ರಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸಲು ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು. ಮತ್ತು ಧೂಪದ ಹೊಗೆಯು ದೇವದೂತನ ಕೈಯೊಳಗಿನಿಂದ ಹೊರಟು, ಪವಿತ್ರ ಜನರ ಪ್ರಾರ್ಥನೆಗಳೊಂದಿಗೆ ದೇವರ ಸನ್ನಿಧಿಗೆ ಏರಿತು.”—ಪ್ರಕಟನೆ 8:3, 4, NW.

3. (ಎ) ಧೂಪದ ಸುಡುವಿಕೆಯು ಯಾವುದನ್ನು ನಮ್ಮ ನೆನಪಿಗೆ ತರುತ್ತದೆ? (ಬಿ) ಪರಲೋಕದಲ್ಲಿ ಸುಮಾರು ಅರ್ಧತಾಸಿನ ವರೆಗೆ ಮೌನದ ಉದ್ದೇಶ ಏನು?

3 ಯೆಹೂದಿ ವಿಷಯಗಳ ವ್ಯವಸ್ಥೆಯ ಕೆಳಗೆ ಧೂಪವನ್ನು ಪ್ರತಿದಿನ ಗುಡಾರದಲ್ಲಿ ಮತ್ತು ಅನಂತರದ ವರ್ಷಗಳಲ್ಲಿ ಯೆರೂಸಲೇಮಿನ ದೇವಾಲಯದಲ್ಲಿ ಸುಡಲಾಗುತಿತ್ತು ಎಂಬುದನ್ನು ಇದು ನಮ್ಮ ನೆನಪಿಗೆ ತರುತ್ತದೆ. (ವಿಮೋಚನಕಾಂಡ 30:1-8) ಇಂಥ ಧೂಪದ ಸುಡುವಿಕೆಯ ಕಾಲದಲ್ಲಿ, ಪವಿತ್ರ ಸ್ಥಳದ ಹೊರಗೆ ಕಾದುನಿಂತಿರುವ ಯಾಜಕರಲ್ಲದ ಇಸ್ರಾಯೇಲ್ಯರು, ಧೂಪದ ಹೊಗೆಯು ಯಾವನಿಗೆ ಏರಿಹೋಗುತ್ತಿತ್ತೋ ಅವನಿಗೆ ತಮ್ಮ ಹೃದಯಗಳಲ್ಲಿ ಮೌನವಾಗಿ ಪ್ರಾರ್ಥಿಸುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ. (ಲೂಕ 1:10) ಯೋಹಾನನು ಪರಲೋಕದಲ್ಲಿ ತದ್ರೀತಿಯ ಸಂಭವವನ್ನು ಈಗ ನೋಡುತ್ತಾನೆ. ದೇವದೂತನಿಂದ ಹೊರಟ ಧೂಪದ ಹೊಗೆಯನ್ನು “ಪವಿತ್ರಜನರೆಲ್ಲರ ಪ್ರಾರ್ಥನೆಗಳೊಂದಿಗೆ” ಜೊತೆಗೂಡಿಸಲಾಗುತ್ತದೆ. ವಾಸ್ತವದಲ್ಲಿ ಮುಂಚಿನ ಒಂದು ದರ್ಶನದಲ್ಲಿ ಧೂಪವು ಅಂಥ ಪ್ರಾರ್ಥನೆಗಳನ್ನು ಪ್ರತಿನಿಧಿಸುತ್ತದೆಂದು ಹೇಳಲಾಗಿದೆ. (ಪ್ರಕಟನೆ 5:8; ಕೀರ್ತನೆ 141: 1, 2) ಹಾಗಾದರೆ ಪರಲೋಕದಲ್ಲಿನ ಸಾಂಕೇತಿಕ ನಿಶ್ಶಬ್ದತೆಯು ಭೂಮಿಯ ಮೇಲಿನ ಪವಿತ್ರ ಜನರ ಪ್ರಾರ್ಥನೆಗಳು ಕೇಳಿಸಲ್ಪಡುವಂತೆ ಅನುಮತಿಸುತ್ತದೆ ಎಂಬುದು ಸುವ್ಯಕ್ತ.

4, 5. ನಿಶ್ಶಬ್ದತೆಯ ಸಾಂಕೇತಿಕ ಅರ್ಧತಾಸಿಗೆ ಸರಿಬೀಳುವ ಸಮಯಾವಧಿಯನ್ನು ನಿರ್ಧರಿಸಲು ಯಾವ ಐತಿಹಾಸಿಕ ಬೆಳವಣಿಗೆಗಳು ನಮಗೆ ಸಹಾಯ ಮಾಡುತ್ತವೆ?

4 ಇದು ಯಾವಾಗ ಸಂಭವಿಸಿತು ಎಂದು ನಾವು ನಿರ್ಧರಿಸಸಾಧ್ಯವೂ? ಹೌದು ಸಾಧ್ಯವಿದೆ, ಕರ್ತನ ದಿನದ ಆರಂಭದ ಐತಿಹಾಸಿಕ ಬೆಳವಣಿಗೆಗಳೊಂದಿಗೆ ಪೂರ್ವಾಪರ ಸನ್ನಿವೇಶವನ್ನು ಜತೆಯಾಗಿ ನಾವು ಪರೀಕ್ಷಿಸುವುದರ ಮೂಲಕ. (ಪ್ರಕಟನೆ 1:10) ಭೂಮಿಯ ಮೇಲಿನ ಘಟನೆಗಳು 1918 ಮತ್ತು 1919ರ ಸಮಯಗಳಲ್ಲಿ ಪ್ರಕಟನೆ 8:1-4 ರಲ್ಲಿ ವರ್ಣಿಸಲಾದ ದೃಶ್ಯದೊಂದಿಗೆ ಗಮನಾರ್ಹವಾಗಿ ಹೊಂದಿಕೆಯಲ್ಲಿದ್ದವು. ಬೈಬಲ್‌ ವಿದ್ಯಾರ್ಥಿಗಳು ಎಂದು ಆಗ ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳು 1914ರ ಮುಂಚೆ 40 ವರ್ಷಗಳಿಂದ ಧೈರ್ಯದಿಂದ ಪ್ರಚುರಪಡಿಸಿದ್ದೇನಂದರೆ ಅನ್ಯ ಜನಾಂಗಗಳ ಕಾಲವು ಆ ವರ್ಷದಲ್ಲಿ ಮುಗಿಯಲಿದೆ. ಅವರು ಸರಿಯೆಂದು 1914ರ ವಿಪತ್ಕಾರಕ ಘಟನೆಗಳು ರುಜುಪಡಿಸಿದವು. (ಲೂಕ 21:24, ಕಿಂಗ್‌ ಜೇಮ್ಸ್‌ ವರ್ಷನ್‌; ಮತ್ತಾಯ 24:3, 7, 8) ಆದರೆ 1914 ರಲ್ಲಿ ಈ ಭೂಮಿಯಿಂದ ತಮ್ಮ ಸ್ವರ್ಗೀಯ ಬಾಧ್ಯತೆಗೆ ತಮ್ಮನ್ನು ತೆಗೆದುಕೊಳ್ಳಲಾಗುವುದೆಂದು ಸಹ ಅನೇಕರು ನಂಬಿದರು. ಅದು ಸಂಭವಿಸಲಿಲ್ಲ. ಅದರ ಬದಲು ಒಂದನೆಯ ಲೋಕ ಯುದ್ಧದ ವೇಳೆಯಲ್ಲಿ ಅವರು ನಿಷ್ಠುರ ಹಿಂಸೆಯ ಸಮಯವನ್ನು ಸಹಿಸಿಕೊಂಡರು. ಅಕ್ಟೋಬರ 31, 1916 ರಲ್ಲಿ ವಾಚ್‌ ಟವರ್‌ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್‌ ಟಿ. ರಸಲ್‌ ಸತ್ತರು. ಅನಂತರ, ಜುಲೈ 4, 1918 ರಲ್ಲಿ ಹೊಸ ಅಧ್ಯಕ್ಷರಾದ ಜೋಸೆಫ್‌ ಎಫ್‌. ರಥರ್‌ಪರ್ಡ್‌ ಮತ್ತು ಸೊಸೈಟಿಯ ಇನ್ನಿತರ ಏಳು ಪ್ರತಿನಿಧಿಗಳು ಜಾರ್ಜಿಯಾದ ಅಟ್ಲಾಂಟ ಕಾರಾಗೃಹಕ್ಕೆ, ತಪ್ಪಾಗಿ ಶಿಕ್ಷಿಸಲ್ಪಟ್ಟವರಾಗಿ ಹಲವಾರು ವರ್ಷಗಳ ಸೆರೆಮನೆವಾಸಕ್ಕೆ ಕೊಂಡೊಯ್ಯಲ್ಪಟ್ಟರು.

5 ಯೋಹಾನ ವರ್ಗದ ಯಥಾರ್ಥ ಕ್ರೈಸ್ತರು ಕಳವಳಗೊಂಡರು. ಅವರು ಮುಂದೆ ಏನು ಮಾಡಬೇಕೆಂದು ದೇವರು ಅವರಿಂದ ಬಯಸಿದನು? ಅವರು ಯಾವಾಗ ಪರಲೋಕಕ್ಕೆ ಒಯ್ಯಲ್ಪಡಲಿದ್ದರು? “ಕೊಯ್ಲು ಮುಗಿದದೆ—ಯಾವುದು ಹಿಂಬಾಲಿಸಲಿದೆ?” ಎಂಬ ಶೀರ್ಷಿಕೆಯುಳ್ಳ ಲೇಖನವು ದ ವಾಚ್‌ಟವರ್‌ ಪತ್ರಿಕೆಯ ಮೇ 1, 1919ರ ಸಂಚಿಕೆಯಲ್ಲಿ ತೋರಿಬಂತು. ಅದು ಈ ಅನಿಶ್ಚಿತ ಸ್ಥಿತಿಯನ್ನು ಪ್ರತಿಬಿಂಬಿಸಿತು ಮತ್ತು ನಂಬಿಗಸ್ತರು ಸತತ ತಾಳ್ಮೆಯನ್ನು ಬೆಳೆಸಬೇಕೆಂದು ಪ್ರೋತ್ಸಾಹಿಸುತ್ತಾ, ಕೂಡಿಸಿದ್ದು: “ರಾಜ್ಯ ವರ್ಗದ ಕೊಯ್ಲು ಒಂದು ಮುಗಿದ ನೈಜತೆಯಾಗಿದೆ ಎಂಬುದು ಈಗ ನಿಜವಾದ ಮಾತು ಎಂಬುದನ್ನು ನಾವು ನಂಬುತ್ತೇವೆ, ಅಂಥವರೆಲ್ಲರೂ ಸಕಾಲದಲ್ಲಿ ಮುದ್ರೆ ಹೊಂದಿದ್ದಾರೆ ಮತ್ತು ಆ ದ್ವಾರವು ಮುಚ್ಚಲ್ಪಟ್ಟಿದೆ.” ಈ ಕಷ್ಟದ ಸಮಯಾವಧಿಯಲ್ಲಿ, ಯೋಹಾನ ವರ್ಗದ ಕಟ್ಟಾಸಕ್ತಿಯ ಪ್ರಾರ್ಥನೆಗಳು ಹೆಚ್ಚು ಧೂಪದ ದೊಡ್ಡ ಪ್ರಮಾಣದ ಹೊಗೆಯು ಹೇಗೋ ಹಾಗೆಯೇ ಏರುತ್ತಿದ್ದವು. ಮತ್ತು ಅವರ ಪ್ರಾರ್ಥನೆಗಳು ಆಲಿಸಲ್ಪಡುತ್ತಿದ್ದವು!

ಭೂಮಿಗೆ ಬೆಂಕಿಯನ್ನು ಬಿಸಾಡುವುದು

6. ಪರಲೋಕದಲ್ಲಿನ ನಿಶ್ಶಬ್ದತೆಯ ಅನಂತರ ಏನಾಗುತ್ತದೆ, ಮತ್ತು ಇದು ಯಾವುದರ ಪ್ರತಿಕ್ರಿಯೆಯಲ್ಲಿ?

6 ಯೋಹಾನನು ನಮಗನ್ನುವುದು: “ಆದರೆ ತಕ್ಷಣವೇ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು, ಯಜ್ಞವೇದಿಯ ಮೇಲಿದ್ದ ಬೆಂಕಿಯ ಕೆಂಡಗಳನ್ನು ತುಂಬಿಸಿ, ಅದನ್ನು ಭೂಮಿಗೆ ಬಿಸಾಡಿದನು. ಮತ್ತು ಗುಡುಗುಗಳು, ವಾಣಿಗಳು, ಮಿಂಚುಗಳು ಮತ್ತು ಒಂದು ಭೂಕಂಪವು ಉಂಟಾಯಿತು.” (ಪ್ರಕಟನೆ 8:5, NW)  ನಿಶ್ಶಬ್ದತೆಯ ಅನಂತರ, ಅಲ್ಲಿ ಥಟ್ಟನೆಯ ನಾಟಕೀಯ ಚಟುವಟಿಕೆಯು ಸಂಭವಿಸುತ್ತದೆ! ಇದು ಪವಿತ್ರ ಜನರ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಾಗಿ ನಡೆದಿದೆ ಎಂಬುದು ಸುಸ್ಪಷ್ಟ, ಯಾಕಂದರೆ ಅದು ಧೂಪದ ವೇದಿಯಿಂದ ತೆಗೆದ ಕೆಂಡದಿಂದ ಆರಂಭಿಸಲ್ಪಟ್ಟಿದೆ. ಹಿಂದೆ ಸಾ. ಶ. ಪೂ. 1513 ರಲ್ಲಿ ಸೀನಾಯಿ ಪರ್ವತದಲ್ಲಿ ಗುಡುಗುಗಳು ಮತ್ತು ಮಿಂಚುಗಳು, ಒಂದು ಮಹಾ ಶಬ್ದ, ಬೆಂಕಿ ಮತ್ತು ಬೆಟ್ಟದ ಕಂಪನ ಯೆಹೋವನು ತನ್ನ ಜನರ ಕಡೆಗೆ ಅವನ ಗಮನವನ್ನು ಹರಿಸಿದ್ದಾನೆಂದು ಸೂಚಿಸಿತು. (ವಿಮೋಚನಕಾಂಡ 19:16-20) ಯೋಹಾನನಿಂದ ವರದಿಸಲ್ಪಟ್ಟ ತದ್ರೀತಿಯ ವ್ಯಕ್ತಪಡಿಸುವಿಕೆಗಳು, ಭೂಮಿಯ ಮೇಲಿನ ತನ್ನ ಸೇವಕರೆಡೆಗೆ ಯೆಹೋವನ ಗಮನ ಕೊಡುವಿಕೆಯನ್ನು ಸೂಚಿಸುತ್ತದೆ. ಆದರೆ ಯೋಹಾನನು ಅವಲೋಕಿಸಿದವುಗಳು ಸಂಕೇತರೂಪಗಳಲ್ಲಿ ಕೊಡಲ್ಪಟ್ಟಿವೆ. (ಪ್ರಕಟನೆ 1:1) ಆದುದರಿಂದ, ಸಾಂಕೇತಿಕ ಬೆಂಕಿ, ಗುಡುಗುಗಳು, ವಾಣಿಗಳು, ಮಿಂಚುಗಳು ಮತ್ತು ಭೂಕಂಪವು ಇಂದು ಹೇಗೆ ಅರ್ಥೈಸಲ್ಪಡತಕ್ಕದ್ದು?

7. (ಎ) ಯೇಸುವು ತನ್ನ ಶುಶ್ರೂಷೆಯ ವೇಳೆಯಲ್ಲಿ ಭೂಮಿಯ ಮೇಲೆ ಯಾವ ಸಾಂಕೇತಿಕ ಬೆಂಕಿಯನ್ನು ಹೊತ್ತಿಸಿದನು? (ಬಿ) ಯೇಸುವಿನ ಆತ್ಮಿಕ ಸಹೋದರರು ಕ್ರೈಸ್ತಪ್ರಪಂಚದಲ್ಲಿ ಒಂದು ಬೆಂಕಿಯನ್ನು ಹೇಗೆ ಹೊತ್ತಿಸಿದರು?

7 ಒಂದು ಸಂದರ್ಭದಲ್ಲಿ, ಯೇಸು ತನ್ನ ಶಿಷ್ಯರಿಗೆ ಅಂದದ್ದು: “ನಾನು ಬೆಂಕಿಯನ್ನು ಭೂಮಿಯ ಮೇಲೆ ಹಾಕಬೇಕೆಂದು ಬಂದೆನು.” (ಲೂಕ 12:49) ನಿಜವಾಗಿಯೂ, ಆತನು ಬೆಂಕಿ ಹಚ್ಚಿದನು. ಆತನ ಹುರುಪಿನ ಸಾರುವಿಕೆಯಿಂದ ಯೇಸುವು ಯೆಹೂದಿ ಜನರ ಮುಂದೆ ದೇವರ ರಾಜ್ಯವನ್ನು ಶ್ರೇಷ್ಠ ವಾದಾಂಶವನ್ನಾಗಿ ಮಾಡಿದನು, ಮತ್ತು ಇದು ಜನಾಂಗದಲ್ಲಿಲ್ಲಾ, ಬಿಸಿ ವಾಗ್ವಾದದ ಕಿಡಿಯನ್ನು ಹೊತ್ತಿಸಿತು. (ಮತ್ತಾಯ 4:17, 25; 10:5-7, 17, 18) ಒಂದನೆಯ ಲೋಕ ಯುದ್ಧದ ಸಂಕಟಮಯ ದಿನಗಳಿಂದ ಪಾರಾದ ಅಭಿಷಿಕ್ತ ಕ್ರೈಸ್ತರ ಒಂದು ಸಣ್ಣ ಗುಂಪಾದ ಯೇಸುವಿನ ಭೂಮಿಯ ಮೇಲಿನ ಆತ್ಮಿಕ ಸಹೋದರರು, 1919 ರಲ್ಲಿ ಕ್ರೈಸ್ತಪ್ರಪಂಚದಲ್ಲಿ ತದ್ರೀತಿಯ ಬೆಂಕಿಯನ್ನು ಹೊತ್ತಿಸಿದರು. ಆ ವರ್ಷದ ಸಪ್ಟಂಬರದಲ್ಲಿ ಅಮೆರಿಕದ ಒಹೈಯೋದ ಸೀಡರ್‌ ಪಾಯಿಂಟ್‌ನಲ್ಲಿ, ದೂರದಿಂದಲೂ ಹತ್ತಿರದಿಂದಲೂ ಅವನ ನಿಷ್ಠೆಯ ಸಾಕ್ಷಿಗಳು ನೆರೆದುಬಂದಾಗ, ಯೆಹೋವನ ಆತ್ಮವು ಗಮನಾರ್ಹವಾಗಿ ವ್ಯಕ್ತವಾಯಿತು. ಸೆರೆಮನೆಯಿಂದ ಈಗಾಗಲೇ ಬಿಡುಗಡೆಗೊಳಿಸಲ್ಪಟ್ಟ ಮತ್ತು ಬೇಗನೇ ಸಂಪೂರ್ಣವಾಗಿ ದೋಷಮುಕ್ತರಾಗಲಿದ್ದ ಜೋಸೆಫ್‌ ಎಫ್‌. ರಥರ್‌ಫರ್ಡ್‌ ಆ ಅಧಿವೇಶನದಲ್ಲಿ ಧೈರ್ಯವಾಗಿ ಸಂಬೋಧಿಸುತ್ತಾ, ಹೀಗಂದರು: “ನಮ್ಮ ಧನಿಯ ಆಜ್ಞೆಗೆ ವಿಧೇಯತೆಯಲ್ಲಿ, ಮತ್ತು ಜನರನ್ನು ಇಷ್ಟು ಕಾಲ ಪಾಪದ ದಾಸತ್ವದಲ್ಲಿ ಇಟ್ಟ ಕೋಟೆಗಳ ವಿರುದ್ಧ ಹೋರಾಡಬೇಕೆನ್ನುವ ನಮ್ಮ ಸುಯೋಗ ಮತ್ತು ಕರ್ತವ್ಯಗಳನ್ನು ಅರಿತುಕೊಂಡು, ಮೆಸ್ಸೀಯನ ಒಳಬರಲಿರುವ ಮಹಿಮಾಭರಿತ ರಾಜ್ಯವನ್ನು ಸಾರುವುದೇ ನಮ್ಮ ಬಲವಾದ ನಿರ್ಧಾರವಾಗಿತ್ತು ಮತ್ತು ಆಗಿರುತ್ತದೆ.” ಅದೇ ಪ್ರಧಾನ ವಿವಾದಾಂಶ—ದೇವರ ರಾಜ್ಯ!

8, 9. (ಎ) ಸಂಕಟಮಯ ಯುದ್ಧದ ವರ್ಷಗಳ ವೇಳೆಯಲ್ಲಿ ಸೊಸೈಟಿಯ ಅಧ್ಯಕ್ಷರು ದೇವ ಜನರ ಮನೋಭಾವ ಮತ್ತು ಆಕಾಂಕ್ಷೆಗಳನ್ನು ಹೇಗೆ ವರ್ಣಿಸಿದರು? (ಬಿ) ಭೂಮಿಯ ಮೇಲೆ ಬೆಂಕಿ ಹೇಗೆ ಎಸೆಯಲ್ಪಟ್ಟಿತು? (ಸಿ) ಗುಡುಗುಗಳು, ವಾಣಿಗಳು, ಮಿಂಚುಗಳು ಮತ್ತು ಒಂದು ಭೂಕಂಪ ಹೇಗೆ ಉಂಟಾದವು?

8 ದೇವಜನರ ಇತ್ತೇಚೆಗಿನ ಕಠಿಣ ಅನುಭವಗಳನ್ನು ಉಲ್ಲೇಖಿಸುತ್ತಾ, ಭಾಷಣಕಾರರು ಹೇಳಿದ್ದು: “ವಿರೋಧಿಯ ಭೀಕರ ಆಕ್ರಮಣ ಎಷ್ಟೊಂದು ನಿರ್ದಾಕ್ಷಿಣ್ಯವಾಗಿತ್ತೆಂದರೆ ಕರ್ತನ ಪ್ರೀತಿಯ ಮಂದೆಯ ಅನೇಕರು ಆಘಾತಹೊಂದಿದರು ಮತ್ತು ವಿಸ್ಮಯದಿಂದ ಸ್ತಬ್ಧರಾಗಿ ನಿಂತರು ಮತ್ತು ಪ್ರಾರ್ಥಿಸುವುದರಲ್ಲಿ ಮತ್ತು ಕರ್ತನು ತನ್ನ ಚಿತ್ತವನ್ನು ಸೂಚಿಸುವುದಕ್ಕೆ ಕಾದರು. . . . ಆದರೆ ಕ್ಷಣಿಕ ನಿರುತ್ತೇಜನದ ಮಧ್ಯೆಯೂ ರಾಜ್ಯದ ಸಂದೇಶವನ್ನು ಪ್ರಚುರಪಡಿಸುವ ಉರಿಯುತ್ತಿರುವ ಆಕಾಂಕ್ಷೆ ಇತ್ತು.”—ದ ವಾಚ್‌ಟವರ್‌, ಸಪ್ಟಂಬರ 15, 1919ರ ಸಂಚಿಕೆಯ ಪುಟ 280ನ್ನು ನೋಡಿರಿ.

9 ಆ ಆಕಾಂಕ್ಷೆಯು 1919 ರಲ್ಲಿ ತೃಪ್ತಿಗೊಳಿಸಲ್ಪಟ್ಟಿತ್ತು. ಕೊಂಚವೇ ಆದರೂ, ಈ ಕ್ರಿಯಾಶೀಲ ಕ್ರೈಸ್ತರ ಗುಂಪು, ಆತ್ಮಿಕವಾಗಿ ಮಾತಾಡುವುದಾದರೆ, ಒಂದು ಲೋಕವ್ಯಾಪಕ ಸಾರುವಿಕೆಯ ಚಳುವಳಿಯನ್ನು ಪ್ರಾರಂಭಿಸಲಿಕ್ಕೋಸ್ಕರ ಬೆಂಕಿಯಂತೆ ಉತ್ತೇಜಿಸಲ್ಪಟ್ಟಿತ್ತು. (1 ಥೆಸಲೊನೀಕ 5:19 ಹೋಲಿಸಿರಿ.) ಬೆಂಕಿಯು ಭೂಮಿಗೆ ಬಿಸಾಡಲ್ಪಟ್ಟಿತು ಅಂದರೆ ದೇವರ ರಾಜ್ಯವನ್ನು ಒಂದು ದಹಿಸುವ ವಾದಾಂಶವನ್ನಾಗಿ ಮಾಡಲಾಯಿತು, ಮತ್ತು ಅದು ಹಾಗೆಯೇ ಮುಂದರಿಯುತ್ತಿದೆ! ಮಹಾ ಶಬ್ದಗಳು ನಿಶ್ಶಬ್ದತೆಯನ್ನು ಸ್ಥಾನಪಲ್ಲಟಗೊಳಿಸಿ, ರಾಜ್ಯ ಸಂದೇಶವನ್ನು ಸ್ಪಷ್ಟತೆಯೊಂದಿಗೆ ಧ್ವನಿಸಿತ್ತು. ಗುಡುಗಿನ, ಬಿರುಗಾಳಿಯ ಎಚ್ಚರಿಕೆಗಳು ಬೈಬಲಿನಿಂದ ಘಣಘಣಿಸಿದವು. ಮಿಂಚಿನ ಹೊಳಪುಗಳಂತೆ ಉಜ್ವಲಮಯ ಸತ್ಯದ ಬೆಳಕು ಯೆಹೋವನ ಪ್ರವಾದನಾ ವಾಕ್ಯದಿಂದ ಪ್ರಕಾಶಿಸಿತು, ಮತ್ತು ಒಂದು ಬಲವಾದ ಭೂಕಂಪದ ಮೂಲಕವೂ ಎಂಬಂತೆ, ಧಾರ್ಮಿಕ ಕ್ಷೇತ್ರವು ಅದರ ಅಸ್ತಿವಾರಗಳಲ್ಲಿ ಅಲುಗಾಡಿಸಲ್ಪಟ್ಟಿತ್ತು. ಮಾಡಲು ಬಹಳಷ್ಟು ಕೆಲಸವಿದೆಯೆಂದು ಯೋಹಾನ ವರ್ಗವು ಕಂಡುಕೊಂಡಿತು. ಮತ್ತು ಈ ದಿನದ ವರೆಗೂ ಸರ್ವ ನಿವಾಸಿತ ಭೂಮಿಯಲ್ಲೆಲ್ಲೂ ಈ ಮಹಿಮಾಭರಿತ ಕೆಲಸವು ವಿಸ್ತರಿಸಲ್ಪಡುವುದು ಮುಂದರಿಯುತ್ತಾ ಇದೆ!—ರೋಮಾಪುರ 10:18.

ತುತೂರಿಗಳ ಘೋಷಕ್ಕೆ ತಯಾರಿಸುವುದು

10. ಏಳು ದೇವದೂತರು ಏನು ಮಾಡಲು ಸಿದ್ಧವಾಗುತ್ತಾರೆ, ಮತ್ತು ಯಾಕೆ?

10 ಯೋಹಾನನು ಹೇಳುವುದನ್ನು ಮುಂದುವರಿಸುವುದು: “ಮತ್ತು ಏಳು ತುತೂರಿಗಳನ್ನು ಹಿಡಿದಿದ್ದ ಏಳು ದೇವದೂತರು ತುತೂರಿಗಳನ್ನೂದುವುದಕ್ಕೆ ಸಿದ್ಧಮಾಡಿಕೊಂಡರು.” (ಪ್ರಕಟನೆ 8:6, NW)  ತುತೂರಿಗಳನ್ನೂದುವುದರ ಅರ್ಥವೇನು? ಇಸ್ರಾಯೇಲಿನ ದಿನಗಳಲ್ಲಿ, ತುತೂರಿಗಳ ಘೋಷಗಳು ಪ್ರಾಮುಖ್ಯ ದಿನಗಳನ್ನು ಯಾ ಗಮನಾರ್ಹ ಘಟನೆಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಡುತ್ತಿದ್ದವು. (ಯಾಜಕಕಾಂಡ 23:24; 2 ಅರಸುಗಳು 11:14) ತದ್ರೀತಿಯಲ್ಲಿ, ಯೋಹಾನನು ಕೇಳಲಿರುವ ತುತೂರಿಗಳ ಘೋಷಗಳು ಜೀವ ಮತ್ತು ಮರಣ ಪ್ರಮುಖತೆಯ ಸಂಗತಿಗಳಿಗೆ ಗಮನವನ್ನು ಸೆಳೆಯುತ್ತವೆ.

11. ಯೋಹಾನ ವರ್ಗವು 1919 ರಿಂದ 1922ರ ವರೆಗೆ ಯಾವ ಪೂರ್ವಭಾವಿ ಕೆಲಸದಲ್ಲಿ ಕಾರ್ಯಮಗ್ನವಾಗಿ ಒಳಗೊಂಡಿತ್ತು?

11 ದೇವದೂತರು ಆ ತುತೂರಿಗಳನ್ನು ಊದಲು ಸಿದ್ಧಮಾಡಿಕೊಂಡಂತೆ, ಅವರು ಭೂಮಿಯ ಮೇಲೆ ಪೀಠಿಕಾರೂಪದ ಕೆಲಸಕ್ಕೆ ಮಾರ್ಗದರ್ಶನವನ್ನು ಸಹ ಕೊಡುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ. ಪುನಶ್ಚೈತನ್ಯಗೊಂಡ ಯೋಹಾನ ವರ್ಗವು 1919 ರಿಂದ 1922ರ ವರೆಗೆ ಬಹಿರಂಗ ಶುಶ್ರೂಷೆಯನ್ನು ಸ್ಥಾಪಿಸುವುದರಲ್ಲಿ ಮತ್ತು ಪ್ರಕಾಶನಾ ಸೌಕರ್ಯಗಳನ್ನು ಕಟ್ಟುವುದರಲ್ಲಿ ಕಾರ್ಯನಿರತವಾಗಿತ್ತು. ಇಂದು ಎಚ್ಚರ! (ಅವೇಕ್‌!) ಎಂದು ಕರೆಯಲ್ಪಡುತ್ತಿರುವ ಗೋಲ್ಡನ್‌ ಏಜ್‌ ಪತ್ರಿಕೆಯು 1919 ರಲ್ಲಿ “ವಾಸ್ತವಾಂಶದ, ನಿರೀಕ್ಷೆಯ ಮತ್ತು ಆತ್ಮವಿಶ್ವಾಸದ ಒಂದು ಪತ್ರಿಕೆಯಾಗಿ”—ಸುಳ್ಳು ಧರ್ಮದ ರಾಜಕೀಯ ಒಳಗೂಡುವಿಕೆಗಳನ್ನು ಬಯಲುಪಡಿಸುವುದರಲ್ಲಿ ತುತೂರಿಯಂತಹ ಉಪಕರಣವಾಗಿ ಪ್ರಮುಖ ಪಾತ್ರವನ್ನು ವಹಿಸುವ ಪತ್ರಿಕೆಯಾಗಿ—ಮುಂತರಲ್ಪಟ್ಟಿತು.

12. ಪ್ರತಿಯೊಂದು ತುತೂರಿಯ ಘೋಷದಿಂದ ಏನು ಕೇಳಿಬರುತ್ತದೆ, ಇದು ಮೋಶೆಯ ದಿನಗಳಲ್ಲಿನ ಯಾವುದನ್ನು ನಮ್ಮ ನೆನಪಿಗೆ ತರುತ್ತದೆ?

12 ನಾವೀಗ ನೋಡಲಿರುವಂತೆ, ಪ್ರತಿಯೊಂದು ತುತೂರಿಯ ಘೋಷವು ಭೂಮಿಯ ಭಾಗಗಳನ್ನು ಬಾಧಿಸುವ ಭಯಾನಕ ಉಪದ್ರವಗಳ ನಾಟಕೀಯ ದೃಶ್ಯವನ್ನು ಘೋಷಿಸುತ್ತದೆ. ಮೋಶೆಯ ದಿನಗಳಲ್ಲಿ ಐಗುಪ್ತ್ಯರನ್ನು ಶಿಕ್ಷಿಸಲು ಯೆಹೋವನು ಕಳುಹಿಸಿದ ಉಪದ್ರವಗಳಲ್ಲಿ ಕೆಲವು ನಮ್ಮ ನೆನಪಿಗೆ ತರಲ್ಪಡುತ್ತವೆ. (ವಿಮೋಚನಕಾಂಡ 7:19–12:32) ಇವುಗಳು ಆ ಜನಾಂಗದ ಮೇಲೆ ಯೆಹೋವನ ನ್ಯಾಯತೀರ್ಪಿನ ವ್ಯಕ್ತಪಡಿಸುವಿಕೆಗಳಾಗಿದ್ದವು, ಮತ್ತು ದೇವಜನರನ್ನು ದಾಸತ್ವದಿಂದ ತಪ್ಪಿಸಲು ಇವು ದಾರಿಯನ್ನು ತೆರೆದವು. ಯೋಹಾನನಿಂದ ನೋಡಲ್ಪಟ್ಟ ಉಪದ್ರವಗಳು ತದ್ರೀತಿಯ ಒಂದು ವಿಷಯವನ್ನು ಪೂರೈಸುತ್ತವೆ. ಆದಾಗ್ಯೂ, ಅವು ಅಕ್ಷರಾರ್ಥ ಉಪದ್ರವಗಳಲ್ಲ. ಅವು ಯೆಹೋವನ ನೀತಿಯುಳ್ಳ ನ್ಯಾಯತೀರ್ಪುಗಳನ್ನು ಸಂಕೇತಿಸುವ ಚಿಹ್ನೆಗಳಾಗಿವೆ.—ಪ್ರಕಟನೆ 1:1.

“ಮೂರನೆಯ ಒಂದು ಭಾಗವನ್ನು” ಗುರುತಿಸುವುದು

13. ಮೊದಲ ನಾಲ್ಕು ತುತೂರಿಗಳು ಊದಲ್ಪಟ್ಟಾಗ ಏನು ಸಂಭವಿಸುತ್ತದೆ, ಮತ್ತು ಇದು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?

13 ನಾವು ನೋಡಲಿರುವಂತೆ, ಮೊದಲ ನಾಲ್ಕು ತುತೂರಿಗಳು ಊದಲ್ಪಟ್ಟಾಗ, ಭೂಮಿಯ, ಸಮುದ್ರದ ಮತ್ತು ನೀರಿನ ಒರತೆಗಳ ಮತ್ತು ಭೂಮಿಯ ಬೆಳಕಿನ ಉಗಮಗಳ “ಮೂರನೆಯ ಒಂದು ಭಾಗವು” ಉಪದ್ರವಗಳಿಂದ ಬಾಧಿಸಲ್ಪಡುತ್ತದೆ. (ಪ್ರಕಟನೆ 8:7-12) ಮೂರನೆಯ ಒಂದು ಭಾಗವೆಂದರೆ ಯಾವುದಾದರೂ ಒಂದು ವಿಷಯದ ಗಮನಾರ್ಹ ಭಾಗವಾಗಿದೆ, ಆದರೆ ಪೂರ್ಣವಾಗಿರುವುದಿಲ್ಲ. (ಹೋಲಿಸಿರಿ ಯೆಶಾಯ 19:24; ಯೆಹೆಜ್ಕೇಲ 5:2; ಜೆಕರ್ಯ 13:8, 9.) ಹಾಗಾದರೆ, ಈ ಉಪದ್ರವಗಳಿಗೆ ಅತಿ ತಕ್ಕದ್ದಾಗಿರುವ “ಮೂರನೆಯ ಒಂದು ಭಾಗವು” ಯಾವುದು? ಮಾನವ ಕುಲದ ಅಧಿಕಾಂಶ ಭಾಗವು ಸೈತಾನ ಮತ್ತು ಆತನ ಸಂತತಿಯಿಂದ ಕುರುಡು ಮಾಡಲ್ಪಟ್ಟಿದೆ ಮತ್ತು ಭ್ರಷ್ಟಗೊಳಿಸಲ್ಪಟ್ಟಿದೆ. (ಆದಿಕಾಂಡ 3:15; 2 ಕೊರಿಂಥ 4:4) ಪರಿಸ್ಥಿತಿಯು ದಾವೀದನಿಂದ ವಿವರಿಸಲ್ಪಟ್ಟಂತೆ ಇದೆ: “ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ, ಪ್ರತಿಯೊಬ್ಬನು ದಾರಿ ತಪ್ಪಿದವನು. ಎಲ್ಲರೂ ಕೆಟ್ಟುಹೋದವರೇ.” (ಕೀರ್ತನೆ 14:3) ಹೌದು, ಮಾನವ ಕುಲವೆಲ್ಲವು ಒಂದು ಪ್ರತಿಕೂಲ ನ್ಯಾಯತೀರ್ಪನ್ನು ಪಡೆಯುವ ಅಪಾಯದಲ್ಲಿದೆ. ಆದರೆ ಒಂದು ಭಾಗವು ಇಲ್ಲಿ ನಿರ್ದಿಷ್ಟವಾಗಿ ದೋಷಿಯಾಗಿ ಕಂಡುಬಂದಿದೆ. ಆ “ಮೂರನೆಯ ಒಂದು ಭಾಗ” ಹೆಚ್ಚು ಉತ್ತಮ ಜ್ಞಾನವುಳ್ಳದ್ದಾಗಿರಬೇಕಿತ್ತು! ಆ “ಮೂರನೆಯ ಒಂದು ಭಾಗ” ಯಾವುದು?

14. ಯೆಹೋವನಿಂದ ಬಾಧಿಸುವ ಸಂದೇಶಗಳನ್ನು ಪಡೆಯುವ ಸಾಂಕೇತಿಕ ಮೂರನೆಯ ಒಂದು ಭಾಗವು ಏನಾಗಿದೆ?

14 ಅದು ಕ್ರೈಸ್ತಪ್ರಪಂಚ! 1920 ಗಳಲ್ಲಿ, ಅವಳ ಕ್ಷೇತ್ರವು ಮಾನವ ಕುಲದ ಮೂರನೆಯ ಒಂದು ಭಾಗವನ್ನು ಆವರಿಸಿತ್ತು. ಅವಳ ಧರ್ಮವು ನಿಜ ಕ್ರೈಸ್ತತ್ವದಿಂದ ಮಹಾ ಧರ್ಮಭ್ರಷ್ಟತೆಯಾಗಿದೆ—ಯೇಸು ಮತ್ತು ಆತನ ಶಿಷ್ಯರಿಂದ ಮುಂತಿಳಿಸಲ್ಪಟ್ಟ ಧರ್ಮಭ್ರಷ್ಟತೆ. (ಮತ್ತಾಯ 13:24-30; ಅ. ಕೃತ್ಯಗಳು 20:29, 30; 2 ಥೆಸಲೊನೀಕ 2:3; 2 ಪೇತ್ರ 2:1-3) ಕ್ರೈಸ್ತಪ್ರಪಂಚದ ವೈದಿಕರು ತಾವು ದೇವರ ಆಲಯದಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಕ್ರೈಸ್ತತ್ವದ ಉಪದೇಶಕರೋಪಾದಿ ತಮ್ಮನ್ನು ಪ್ರತಿನಿಧಿಸಿಕೊಳ್ಳುತ್ತಾರೆ. ಆದರೆ ಅವರ ಬೋಧನೆಗಳು ಬೈಬಲ್‌ ಸತ್ಯತೆಯಿಂದ ಬಹಳಷ್ಟು ದೂರದಲ್ಲಿರುತ್ತವೆ, ಮತ್ತು ಅವರು ಸತತವಾಗಿ ದೇವರ ನಾಮಕ್ಕೆ ದುಷ್ಕೀರ್ತಿಯನ್ನು ತರುತ್ತಾರೆ. ಸಾಂಕೇತಿಕ ಮೂರನೆಯ ಒಂದು ಭಾಗದಿಂದ ತಕ್ಕದಾಗಿ ಪ್ರತಿನಿಧಿಕರಿಸಲ್ಪಟ್ಟು, ಕ್ರೈಸ್ತಪ್ರಪಂಚವು ಯೆಹೋವನ ತೀಕ್ಷೈವಾದ, ಉಪದ್ರವಕಾರೀ ಸಂದೇಶಗಳನ್ನು ಪಡೆಯುತ್ತದೆ. ಮಾನವಕುಲದ ಆ ಮೂರನೆಯ ಒಂದು ಭಾಗವು ಯಾವುದೇ ರೀತಿಯ ದೈವಿಕ ಮೆಚ್ಚಿಕೆಗೆ ಅರ್ಹವಲ್ಲ!

15. (ಎ) ಪ್ರತಿಯೊಂದು ತುತೂರಿ ಊದುವಿಕೆಯು ಒಂದು ನಿರ್ದಿಷ್ಟ ವರ್ಷಕ್ಕೆ ಸೀಮಿತವಾಗಿದೆಯೋ? ವಿವರಿಸಿರಿ. (ಬಿ) ಯೆಹೋವನ ನ್ಯಾಯತೀರ್ಪನ್ನು ಪ್ರಚುರ ಪಡಿಸುವುದರಲ್ಲಿ ಯೋಹಾನ ವರ್ಗದವರೊಂದಿಗೆ ಯಾರ ಧ್ವನಿಯು ಕೂಡಿಸಲ್ಪಟ್ಟಿದೆ?

15 ತುತೂರಿಯ ಘೋಷಗಳ ಕ್ರಮಾನುಗತಿಯ ಸರದಿಯಲ್ಲಿ, 1922 ರಿಂದ 1928ರ ವರೆಗಿನ ಏಳು ಅಧಿವೇಶನಗಳಲ್ಲಿ ವಿಶೇಷ ಠರಾವುಗಳು ಮಾಡಲ್ಪಟ್ಟವು. ಆದರೆ ಊದುವಿಕೆಯು ಆ ವರ್ಷಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ತನ ದಿನವು ಪ್ರಗತಿಪರವಾಗಿ ಸಾಗುತ್ತಿದ್ದಂತೆ, ಕ್ರೈಸ್ತಪ್ರಪಂಚದ ದುಷ್ಟ ಮಾರ್ಗಗಳ ಬಲಿಷ್ಠವಾದ ಬಹಿರಂಗಪಡಿಸುವಿಕೆಯು ಸತತವಾಗಿ ಮುಂದೆ ಸಾಗುತ್ತಾ ಇದೆ. ಅಂತಾರಾಷ್ಟ್ರೀಯ ದ್ವೇಷ ಮತ್ತು ಹಿಂಸೆಗಳ ನಡುವೆಯೂ ಯೆಹೋವನ ನ್ಯಾಯತೀರ್ಪುಗಳು ಸಾರ್ವತ್ರಿಕವಾಗಿ ಎಲ್ಲ ಜನಾಂಗಗಳಿಗೆ ಘೋಷಿಸಲ್ಪಡತಕ್ಕದ್ದು. ಅನಂತರವೇ ಸೈತಾನನ ವ್ಯವಸ್ಥೆಯ ಅಂತ್ಯವು ಬರುವುದು. (ಮಾರ್ಕ 13:10, 13) ಸಂತೋಷಕರವಾಗಿ, ಲೋಕವ್ಯಾಪಕ ಮಹತ್ವದ ಗುಡುಗಿನಂತಹ ಪ್ರಕಟನೆಗಳನ್ನು ಮಾಡುವುದರಲ್ಲಿ ಯೋಹಾನ ವರ್ಗದೊಂದಿಗೆ ಮಹಾ ಸಮೂಹವು, ಈಗ ತನ್ನ ಧ್ವನಿಯನ್ನು ಕೂಡಿಸಿದೆ.

ಭೂಮಿಯ ಮೂರನೆಯ ಒಂದು ಭಾಗವು ಸುಟ್ಟುಹೋಯಿತು

16. ಮೊದಲ ದೇವದೂತನು ತನ್ನ ತುತೂರಿಯನ್ನು ಊದಿದಾಗ ಯಾವುದು ಹಿಂಬಾಲಿಸುತ್ತದೆ?

16 ದೇವದೂತರ ಕುರಿತು ವರದಿಸುತ್ತಾ, ಯೋಹಾನನು ಬರೆಯುವುದು: “ಮತ್ತು ಮೊದಲನೆಯವನು ತನ್ನ ತುತೂರಿಯನ್ನು ಊದಿದನು. ಮತ್ತು ಆಗ ರಕ್ತವು ಕಲಸಿದ್ದ ಆನೆಕಲ್ಲಿನ ಮಳೆ ಮತ್ತು ಬೆಂಕಿಯು ಸಂಭವಿಸಿತು, ಮತ್ತು ಅದು ಭೂಮಿಗೆ ಎಸೆಯಲ್ಪಟ್ಟಿತು; ಮತ್ತು ಭೂಮಿಯ ಮೂರನೆಯ ಒಂದು ಭಾಗವು ಸುಟ್ಟುಹೋಯಿತು, ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋಯಿತು, ಮತ್ತು ಹಸುರು ಸಸ್ಯವೆಲ್ಲ ಸುಟ್ಟುಹೋಯಿತು.” (ಪ್ರಕಟನೆ 8:7, NW)  ಇದು ಐಗುಪ್ತದ ಏಳನೆಯ ಉಪದ್ರವಕ್ಕೆ ಸಮಾನವಾಗಿದೆ, ಆದರೆ ನಮ್ಮ 20 ನೆಯ ಶತಮಾನಕ್ಕೆ ಅದು ಯಾವ ಅರ್ಥವನ್ನು ಕೊಡುತ್ತದೆ?—ವಿಮೋಚನಕಾಂಡ 9:24.

17. (ಎ) ಪ್ರಕಟನೆ 8:7 ರಲ್ಲಿ “ಭೂಮಿ” ಎಂಬ ಶಬ್ದದಿಂದ ಏನು ಪ್ರತಿನಿಧಿಸಲ್ಪಡುತ್ತದೆ? (ಬಿ) ಭೂಮಿಯ ಕ್ರೈಸ್ತಪ್ರಪಂಚವೆಂಬ ಮೂರನೆಯ ಒಂದು ಭಾಗವು ಹೇಗೆ ಸುಡಲ್ಪಡುತ್ತದೆ?

17 ಬೈಬಲಿನಲ್ಲಿ “ಭೂಮಿ” ಎಂಬ ಶಬ್ದವು ಆಗಿಂದಾಗ್ಗೆ ಮಾನವಕುಲವನ್ನು ಸೂಚಿಸುತ್ತದೆ. (ಆದಿಕಾಂಡ 11:1; ಕೀರ್ತನೆ 96:1) ಎರಡನೆಯ ಉಪದ್ರವವು ಸಮುದ್ರದ ಮೇಲೆ ಬಂದಿರುವುದರಿಂದ ಮತ್ತು ಅದು ಕೂಡ ಮಾನವಕುಲಕ್ಕೆ ಸಂಬಂಧಿಸಿರುವುದರಿಂದ, “ಭೂಮಿಯು” ಸೈತಾನನು ಕಟ್ಟಿರುವಂಥ ಮತ್ತು ನಾಶವಾಗಲಿಕ್ಕಿರುವಂತಹ, ಸ್ಥಿರವಾಗಿದೆ ಎಂದು ಭಾಸವಾಗುವ ಮಾನವ ಸಮಾಜವನ್ನು ಸೂಚಿಸುತ್ತಿರಬೇಕು. (2 ಪೇತ್ರ 3:7; ಪ್ರಕಟನೆ 21:1) ಭೂಮಿಯ ಕ್ರೈಸ್ತಪ್ರಪಂಚವೆಂಬ ಮೂರನೆಯ ಒಂದು ಭಾಗವು ಯೆಹೋವನ ಅಪ್ರಸನ್ನತೆಯ ದಹಿಸುವ ಶಾಖದಿಂದ ಬಾಡಿಹೋಗಿದೆ ಎಂದು ಉಪದ್ರವದ ವಿವರವು ಪ್ರಕಟಿಸುತ್ತದೆ. ಅವಳ ಪ್ರತಿಷ್ಠೆಯ ವ್ಯಕ್ತಿಗಳು—ಅವಳ ಮಧ್ಯದಲ್ಲಿ ಮರಗಳಂತೆ ನಿಂತಿರುವವರು—ಯೆಹೋವನ ಪ್ರತಿಕೂಲ ನ್ಯಾಯತೀರ್ಪಿನ ಘೋಷಣೆಯಿಂದಾಗಿ ಸುಟ್ಟುಹೋಗಿದ್ದಾರೆ. ಚರ್ಚಿನ ಹತ್ತಾರು ಕೋಟ್ಯಂತರ ಅವಳ ಸದಸ್ಯರುಗಳೆಲ್ಲಾ, ಕ್ರೈಸ್ತಪ್ರಪಂಚದ ಧರ್ಮಕ್ಕೆ ಬೆಂಬಲವನ್ನು ಕೊಡುವುದನ್ನು ಮುಂದುವರಿಸಿದರೆ, ಸುಟ್ಟುಹೋದ ಹುಲ್ಲಿನೋಪಾದಿ ಆಗಿ, ಆತ್ಮಿಕವಾಗಿ ದೇವರ ಕಣ್ಣಮುಂದೆ ಬಾಡಿಹೋಗುತ್ತಾರೆ.—ಕೀರ್ತನೆ 37:1, 2 ಹೋಲಿಸಿರಿ. *

18. ಯೆಹೋವನ ನ್ಯಾಯತೀರ್ಪಿನ ಸಂದೇಶವು 1922ರ ಸೀಡರ್‌ ಪಾಯಿಂಟ್‌ ಅಧಿವೇಶನದಲ್ಲಿ ಹೇಗೆ ಪ್ರಚುರಪಡಿಸಲ್ಪಟ್ಟಿತು?

18 ಈ ನ್ಯಾಯತೀರ್ಪಿನ ಸಂದೇಶವು ಹೇಗೆ ನೀಡಲ್ಪಡುತ್ತದೆ? ಸಾಮಾನ್ಯವಾಗಿ, ಲೋಕದ ಭಾಗವಾಗಿರುವ ಮತ್ತು ಆಗಿಂದಾಗ್ಗೆ ದೇವರ ‘ಆಳಿಗೆ’ ನಿಂದೆಯನ್ನು ತರುವ ಲೋಕದ ವಾರ್ತಾಮಾಧ್ಯಮದ ಮೂಲಕವಲ್ಲ. (ಮತ್ತಾಯ 24:45) ಇದನ್ನು ಸಪ್ಟಂಬರ 10, 1922ರ ಒಹೈಯೋದ ಸೀಡರ್‌ ಪಾಯಿಂಟ್‌ನಲ್ಲಿ ಜರುಗಿದ ದೇವ ಜನರ ಎರಡನೆಯ ಐತಿಹಾಸಿಕ ಅಧಿವೇಶನವೊಂದರಲ್ಲಿ ಗಮನಾರ್ಹ ರೀತಿಯಲ್ಲಿ ಘೋಷಿಸಲಾಯಿತು. ಇವರು ಸರ್ವಾನುಮತದಿಂದ ಮತ್ತು ಉತ್ಸಾಹದಿಂದ “ಲೋಕ ಮುಖಂಡರಿಗೆ ಒಂದು ಪಂಥಾಹ್ವಾನ” ವೆಂಬ ಹೆಸರುಳ್ಳ ಒಂದು ಠರಾವನ್ನು ಅಂಗೀಕರಿಸಿದರು. ಖಂಡಿತವಾದ ಸ್ಪಷ್ಟ ಮಾತುಗಳಲ್ಲಿ, ಅದು ಆಧುನಿಕ ದಿನದ ಸಾಂಕೇತಿಕ ಭೂಮಿಯನ್ನು ಈ ರೀತಿಯಲ್ಲಿ ಲಕ್ಷ್ಯಕ್ಕೆ ತಂದಿತ್ತು: “ಆದುದರಿಂದ ನಾವು ಭೂಮಿಯ ಜನಾಂಗಗಳಿಗೆ ಅವರ ಧುರೀಣರು ಮತ್ತು ಮುಖಂಡರುಗಳಿಗೆ, ಮತ್ತು ಭೂಮಿಯ ಎಲ್ಲಾ ವರ್ಗದ ಚರ್ಚುಗಳ ಪಾದ್ರಿವರ್ಗದವರಿಗೆ, ಅವರ ಅನುಯಾಯಿಗಳಿಗೆ ಮತ್ತು ಸಹ-ಆಪ್ತರಿಗೆ, ದೊಡ್ಡ ವ್ಯಾಪಾರ ಮತ್ತು ದೊಡ್ಡ ರಾಜಕೀಯಸ್ಥರಿಗೆ, ತಾವು ಭೂಮಿಯ ಮೇಲೆ ಶಾಂತಿ ಮತ್ತು ಏಳಿಗೆಯನ್ನು ಸ್ಥಾಪಿಸಬಲ್ಲೆವು ಮತ್ತು ಜನರಿಗೆ ಸಂತೋಷವನ್ನು ತರಬಲ್ಲೆವು ಎಂದು ಅವರು ತೆಗೆದುಕೊಂಡ ನಿಲುವಿನ ಸಮರ್ಥನೆಯಲ್ಲಿ ತಮ್ಮ ರುಜುವಾತನ್ನು ತರಲು ನಾವು ಕರೆ ನೀಡುತ್ತೇವೆ. ಮತ್ತು ಇದರಲ್ಲಿ ಅವರು ತಪ್ಪಿಬೀಳುವಾಗ ನಾವು ಕರ್ತನಿಗೆ ಸಾಕ್ಷಿಗಳಾಗಿ ನೀಡುವ ಸಾಕ್ಷ್ಯಗಳಿಗೆ ಕಿವಿಗೊಡುವಂತೆ ಅವರಿಗೆ ಕರೆನೀಡುತ್ತೇವೆ ಮತ್ತು ಆ ಮೇಲೆ ನಮ್ಮ ಸಾಕ್ಷ್ಯಗಳು ಸರಿಯಾಗಿವೆಯೋ ಇಲ್ಲವೋ ಎಂಬುದನ್ನು ಅವರು ಹೇಳಲಿ.”

19. ದೇವಜನರು ಕ್ರೈಸ್ತಪ್ರಪಂಚಕ್ಕೆ ದೇವರ ರಾಜ್ಯದ ಕುರಿತು ಯಾವ ಸಾಕ್ಷ್ಯವನ್ನು ನೀಡಿದರು?

19 ಈ ಕ್ರೈಸ್ತರು ಯಾವ ಸಾಕ್ಷ್ಯವನ್ನು ಒದಗಿಸಿದರು? ಇದನ್ನು: “ಮೆಸ್ಸೀಯನ ರಾಜ್ಯವು ಮಾನವ ಕುಲದ ಎಲ್ಲಾ ಅಸೌಖ್ಯಗಳಿಗೆ ಸಂಪೂರ್ಣ ನಿವಾರಕ ಔಷಧವಾಗಿದೆ ಮತ್ತು ಭೂಮಿಯ ಮೇಲೆ ಜನಾಂಗಗಳ ಬಯಕೆಯಾಗಿರುವ ಶಾಂತಿ ಮತ್ತು ಮನುಷ್ಯರೊಳಗೆ ಸುಚಿತ್ತವನ್ನು ತರುವುದು, ಮತ್ತು ಈಗಾಗಲೇ ಆರಂಭವಾಗಿರುವ ಆತನ ನೀತಿಯ ಆಳಿಕ್ವೆಗೆ ತಮ್ಮನ್ನು ಸ್ವ-ಚಿತ್ತದಿಂದ ಈಗ ಯಾರು ಅಧೀನಪಡಿಸಿಕೊಳ್ಳುತ್ತಾರೋ ಅವರು ಬಾಳುವ ಶಾಂತಿ, ಜೀವ, ಸ್ವಾತಂತ್ರ್ಯ ಮತ್ತು ಅನಂತ ಸಂತೋಷದಿಂದ ಆಶೀರ್ವದಿಸಲ್ಪಡುವರು ಎಂದು ನಾವು ದೃಢವಾಗಿ ನಂಬುತ್ತೇವೆ ಮತ್ತು ಘೋಷಿಸುತ್ತೇವೆ.” ಈ ಭ್ರಷ್ಟ ಸಮಯಗಳಲ್ಲಿ, ಮಾನವ ನಿರ್ಮಿತ ಸರಕಾರಗಳು ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿರುವವರು, ಲೋಕ ಸಮಸ್ಯೆಗಳನ್ನು ಪರಿಹರಿಸಲು ನಿರಾಶಾಜನಕವಾಗಿ ಸೋತಿರುವಾಗ, ಆ ತುತೂರಿಯ ಘೋಷದಂತಿರುವ ಪಂಥಾಹ್ವಾನವು 1922 ರಲ್ಲಿನ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕೇಳಿಬರುತ್ತದೆ. ಆತನ ವಿಜಯಿ ಕ್ರಿಸ್ತನ ಕೈಯಲ್ಲಿರುವ ದೇವರ ರಾಜ್ಯವು ಮಾತ್ರವೇ ಮಾನವ ಕುಲದ ಒಂದು ಮತ್ತು ಏಕೈಕ ನಿರೀಕ್ಷೆಯಾಗಿರುವುದು ಎಷ್ಟು ಸತ್ಯವು!

20. (ಎ) ಅಭಿಷಿಕ್ತ ಕ್ರೈಸ್ತರ ಸಭೆಯಿಂದ 1922 ರಲ್ಲಿ ಮತ್ತು ಅನಂತರದ ವರ್ಷಗಳಲ್ಲಿ ನ್ಯಾಯತೀರ್ಪಿನ ಸಂದೇಶಗಳು ಯಾವೆಲ್ಲಾ ರೀತಿಯಲ್ಲಿ ಘೋಷಿಸಲ್ಪಟ್ಟವು? (ಬಿ) ಮೊದಲ ತುತೂರಿಯ ಘೋಷಣೆಯಿಂದ ಕ್ರೈಸ್ತಪ್ರಪಂಚದಲ್ಲಿ ಏನು ಫಲಿಸುತ್ತದೆ?

20 ನಿರ್ಧಾರಗಳ, ಟ್ರ್ಯಾಕ್ಟ್‌, ಪುಸ್ತಿಕೆಗಳ, ಪುಸ್ತಕಗಳ, ಪತ್ರಿಕೆಗಳ ಮತ್ತು ಭಾಷಣಗಳ ಮೂಲಕ ಇದು ಮತ್ತು ಅನಂತರದ ಪ್ರಕಟನೆಗಳು ಅಭಿಷಿಕ್ತ ಕ್ರೈಸ್ತರ ಸಭೆಯ ಮೂಲಕ ಘೋಷಿಸಲ್ಪಟ್ಟವು. ಮೊದಲ ತುತೂರಿ ಘೋಷವು ಕ್ರೈಸ್ತಪ್ರಪಂಚವು ಜಜ್ಜುವ ಆನೆಕಲ್ಮಳೆಯ ನೀರ್ಗಲ್ಲಿನಿಂದ ಬಡಿಯಲ್ಪಡುವುದರಲ್ಲಿ ಫಲಿಸಿತು. ಈ 20 ನೆಯ ಶತಮಾನದ ಯುದ್ಧಗಳಲ್ಲಿ ಅವಳ ಪಾಲಿನ ಕಾರಣದಿಂದ ಅವಳ ರಕ್ತಪರಾಧವು ಬಯಲುಗೊಳಿಸಲ್ಪಟ್ಟಿದೆ ಮತ್ತು ಯೆಹೋವನ ಕ್ರೋಧದ ಬೆಂಕಿಯ ವ್ಯಕ್ತಪಡಿಸುವಿಕೆಗೆ ಅವಳು ಅರ್ಹಳೆಂದು ತೋರಿಸಲ್ಪಟ್ಟಿದ್ದಾಳೆ. ಯೋಹಾನ ವರ್ಗವು, ಆ ಮೇಲೆ ಮಹಾ ಸಮೂಹದ ಬೆಂಬಲದೊಂದಿಗೆ, ಕ್ರೈಸ್ತಪ್ರಪಂಚವು ನಾಶನಕ್ಕೆ ಯೋಗ್ಯವೆಂಬ ಯೆಹೋವನ ವೀಕ್ಷಣದ ಕಡೆಗೆ ಗಮನವನ್ನು ಸೆಳೆಯುತ್ತಾ ಮೊದಲಿನ ತುತೂರಿಯ ಘೋಷವನ್ನು ಪ್ರತಿಧ್ವನಿಸುವುದನ್ನು ಮುಂದುವರಿಸಿದೆ.—ಪ್ರಕಟನೆ 7:9, 15.

ಉರಿಯುವ ಬೆಟ್ಟದಂತೆ

21. ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದಾಗ ಏನು ಸಂಭವಿಸುತ್ತದೆ?

21“ಮತ್ತು ಎರಡನೆಯ ದೇವದೂತನು ತನ್ನ ತುತೂರಿಯನ್ನೂದಿದನು. ಮತ್ತು ಬೆಂಕಿ ಹತ್ತಿ ಉರಿಯುವ ದೊಡ್ಡ ಬೆಟ್ಟದಂತಿರುವ ಯಾವುದೋ ಒಂದು ವಸ್ತುವನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಮತ್ತು ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು; ಮತ್ತು ಸಮುದ್ರದಲ್ಲಿರುವ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತು ಹೋಯಿತು, ಮತ್ತು ನಾವೆಗಳೊಳಗೆ ಮೂರನೆಯ ಒಂದು ಭಾಗ ನಾಶವಾಯಿತು.” (ಪ್ರಕಟನೆ 8:8, 9, NW)  ಈ ಭಯಾನಕ ದೃಶ್ಯವು ಏನನ್ನು ಚಿತ್ರಿಸುತ್ತದೆ?

22, 23. (ಎ) ಎರಡನೆಯ ತುತೂರಿಯ ಧ್ವನಿಯ ಫಲಿತಾಂಶವಾಗಿ ಯಾವ ಠರಾವು ಹೊರಬಂತು? (ಬಿ) “ಸಮುದ್ರ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ” ಯಾವುದನ್ನು ಪ್ರತಿನಿಧಿಸುತ್ತದೆ?

22 ಆಗಸ್ಟ್‌ 18-26, 1923ರ ಅಮೆರಿಕದ ಕ್ಯಾಲಿಫಾರ್ನಿಯಾದ ಲಾಸ್‌ ಆ್ಯಂಜಲಿಸ್‌ನಲ್ಲಿ ಯೆಹೋವನ ಜನರು ನಡಿಸಿದ ಅಧಿವೇಶನವೊಂದರ ಹಿನ್ನೆಲೆಯಲ್ಲಿ ನಾವದನ್ನು ಅತ್ಯುತ್ತಮವಾಗಿ ತಿಳಿದುಕೊಳ್ಳಬಲ್ಲೆವು. ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರ ಶನಿವಾರ ಮಧ್ಯಾಹ್ನದ ಪ್ರಧಾನ ಭಾಷಣವು, “ಕುರಿಗಳು ಮತ್ತು ಆಡುಗಳು” ಎಂಬ ವಿಷಯದ ಮೇಲಿತ್ತು. “ಕುರಿ” ಗಳು ದೇವರ ರಾಜ್ಯದ ಭೂಕ್ಷೇತ್ರವನ್ನು ಬಾಧ್ಯವಾಗಿ ಹೊಂದುವ ನೀತಿಯನ್ನು ಪ್ರೀತಿಸುವ ಜನರಾಗಿದ್ದಾರೆಂದು ಸ್ಪಷ್ಟವಾಗಿ ಗುರುತಿಸಲಾಯಿತು. “ಧರ್ಮಭ್ರಷ್ಟ ಪಾದ್ರಿಗಳ ಮತ್ತು ಹಣಕಾಸಿನ ಮತ್ತು ರಾಜಕೀಯ ಪ್ರಭಾವ ಬಲವಾಗಿ ಇದ್ದ ಲೌಕಿಕ ಜನರಾಗಿರುವ ‘ಅವರ ಹಿಂಡಿನ ಪ್ರಮುಖರ’” ಕಪಟತನದ ಕಡೆಗೆ ಗಮನವನ್ನು ಸೆಳೆದ ಒಂದು ಠರಾವು ಹಿಂಬಾಲಿಸಿ ಬಂತು. “ವಿಭಾಗೀಯ ಚರ್ಚುಗಳಲ್ಲಿರುವ ಶಾಂತಿ ಮತ್ತು ಕ್ರಮಬದ್ಧತೆಯನ್ನು ಪ್ರೀತಿಸುವ ಸಹಸ್ರಾರು ವ್ಯಕ್ತಿಗಳು . . . ಕರ್ತನಿಂದ ‘ಬಾಬೆಲ್‌’ ಎಂದು ಹೆಸರಿಸಲ್ಪಟ್ಟ ಅನೀತಿಯ ಪುರೋಹಿತಶಾಹಿ ವ್ಯವಸ್ಥೆಗಳಿಂದ ತಮ್ಮನ್ನು ಬೇರ್ಪಡಿಸಿಕೊಳ್ಳಲು” ಮತ್ತು “ದೇವರ ರಾಜ್ಯದ ಆಶೀರ್ವಾದಗಳನ್ನು ಪಡೆಯಲು” ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಕರೆನೀಡಲಾಯಿತು.

23 ನಿಸ್ಸಂದೇಹವಾಗಿ, ಈ ಠರಾವು ಎರಡನೆಯ ತುತೂರಿಯ ಘೋಷಿಸುವಿಕೆಯ ಫಲವಾಗಿ ಬಂತು. ಸಕಾಲದಲ್ಲಿ ಆ ಸಂದೇಶಕ್ಕೆ ಪ್ರತಿಕ್ರಿಯಿಸುವವರು, “ದುಷ್ಟರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ ಬುರುದೆಯನ್ನೂ ಕಾರುತ್ತಲಿರುವುದು” ಎಂದು ಯೆಶಾಯನು ವರ್ಣಿಸಿದ ಆಡುಗಳಂತಿರುವ ಗುಂಪಿನಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿದ್ದರು. (ಯೆಶಾಯ 57:20; 17:12, 13) ಹೀಗೆ, “ಸಮುದ್ರವು” ಅಶಾಂತಿ ಮತ್ತು ಕ್ರಾಂತಿಯನ್ನು ಕುಲುಕಾಡುವ ಅವಿಶ್ರಾಂತ, ಗಲಿಬಿಲಿಯ ಮತ್ತು ದಂಗೆಯ ಮಾನವ ವರ್ಗವನ್ನು ಚೆನ್ನಾಗಿ ಚಿತ್ರಿಸುತ್ತದೆ. (ಪ್ರಕಟನೆ 13:1 ಹೋಲಿಸಿರಿ.) ಆ “ಸಮುದ್ರವು” ಇಲ್ಲದೆ ಹೋಗಲಿರುವ ಒಂದು ಸಮಯವು ಬರುವುದು. (ಪ್ರಕಟನೆ 21:1) ಈ ಮಧ್ಯೆ, ಎರಡನೆಯ ತುತೂರಿಯ ಘೋಷದೊಂದಿಗೆ, ಯೆಹೋವನು ಅದರ ಮೂರನೆಯ ಭಾಗ—ಕ್ರೈಸ್ತಪ್ರಪಂಚದ ಕ್ಷೇತ್ರದಲ್ಲಿಯೇ ಇರುವ ಸ್ವಚ್ಛಂದ ಭಾಗ—ದ ವಿರುದ್ಧ ನ್ಯಾಯತೀರ್ಪನ್ನು ಉಚ್ಚರಿಸುತ್ತಾನೆ.

24. ಸಮುದ್ರದೊಳಗೆ ಎಸೆಯಲ್ಪಟ್ಟ ಉರಿಯುವ ದೊಡ್ಡ ಬೆಟ್ಟದಂತಿರುವ ಒಂದು ವಸ್ತುವಿನಿಂದ ಏನು ಚಿತ್ರಿತವಾಗಿದೆ?

24 ಬೆಂಕಿ ಹತ್ತಿ ಉರಿಯುವ ಒಂದು ಮಹಾಬೆಟ್ಟದಂತಿರುವ ಭಾರಿ ವಸ್ತು ಈ “ಸಮುದ್ರ” ದೊಳಗೆ ಎಸೆಯಲ್ಪಡುತ್ತದೆ. ಹಲವಾರು ಬಾರಿ, ಬೈಬಲಿನಲ್ಲಿ ಬೆಟ್ಟಗಳು ಸರಕಾರಗಳನ್ನು ಸಂಕೇತಿಸುತ್ತವೆ. ಉದಾಹರಣೆಗೆ, ದೇವರ ರಾಜ್ಯವು ಒಂದು ಬೆಟ್ಟದೋಪಾದಿ ಚಿತ್ರಿಸಲ್ಪಡುತ್ತದೆ. (ದಾನಿಯೇಲ 2:35, 44) ವಿನಾಶಕಾರಿ ಬಾಬೆಲು “ನಾಶಕ ಪರ್ವತ” ವಾಯಿತು. (ಯೆರೆಮೀಯ 51:25) ಆದರೆ ಯೋಹಾನನು ಕಾಣುವ ಬೆಟ್ಟದಂತಿರುವ ವಸ್ತು ಇನ್ನೂ ಉರಿಯುತ್ತಾ ಇದೆ. ಮೊದಲ ಲೋಕ ಯುದ್ಧದ ವೇಳೆ ಮತ್ತು ತದನಂತರ ಮಾನವ ಕುಲದ ಮಧ್ಯೆ, ವಿಶೇಷವಾಗಿ ಕ್ರೈಸ್ತಪ್ರಪಂಚದ ದೇಶಗಳಲ್ಲಿ, ಸರಕಾರದ ಪ್ರಶ್ನೆಯು ಒಂದು ದಹಿಸುವ ವಾಗ್ವಾದವಾಗಿ ಹೇಗೆ ಪರಿಣಮಿಸಿತೆಂಬುದನ್ನು ಸಮುದ್ರದೊಳಗೆ ಅದರ ಎಸೆಯುವಿಕೆಯು ಬಹು ಚೆನ್ನಾಗಿ ಪ್ರತಿನಿಧಿಸುತ್ತದೆ. ಇಟೆಲಿಯಲ್ಲಿ, ಮೂಸಲೀನಿ ಸರ್ವಾಧಿಕಾರ ತತ್ವವನ್ನು ಆಚರಣೆಗೆ ತಂದನು. ಜರ್ಮನಿಯು ಹಿಟ್ಲರನ ನಾಜಿ ತತ್ವವನ್ನು ತಬ್ಬಿಕೊಂಡರೆ, ಇನ್ನಿತರ ದೇಶಗಳು ಸಮಾಜವಾದದ ವಿಭಿನ್ನ ಬಗೆಗಳನ್ನು ಪ್ರಯತ್ನಿಸಿದವು. ಒಂದು ತೀವ್ರಗಾಮಿ ಬದಲಾವಣೆಯು ರಶ್ಯದಲ್ಲಿ ಸಂಭವಿಸಿದ್ದರಿಂದ, ಬಾಲಿವ್ಷಿಕ್‌ ಕ್ರಾಂತಿಯು ಮೊದಲ ಕಾಮ್ಯೂನಿಸ್ಟ್‌ ರಾಷ್ಟ್ರವನ್ನು ಉತ್ಪಾದಿಸಿತು, ಫಲಿತಾಂಶವಾಗಿ ತಮ್ಮ ಭದ್ರ ಕೋಟೆಗಳಲ್ಲಿ ಮೊದಲು ಒಂದಾಗಿದ್ದ ಇದರಿಂದ, ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರು ಅಧಿಕಾರವನ್ನೂ, ಪ್ರಭಾವವನ್ನೂ ಕಳೆದುಕೊಂಡರು.

25. ಸರಕಾರವು ಎರಡನೆಯ ಲೋಕಯುದ್ಧದ ಅನಂತರ ಒಂದು ಉರಿಯುವ ವಾದಾಂಶವಾಗಿ ಹೇಗೆ ಮುಂದುವರಿಯಿತು?

25 ಸರ್ವಾಧಿಕಾರ ತತ್ವ ಮತ್ತು ನಾಜಿ ಪ್ರಯೋಗಗಳು ಎರಡನೆಯ ಲೋಕ ಯುದ್ಧದ ಮೂಲಕ ಇಲ್ಲವಾದವು, ಆದರೆ ಸರಕಾರವು ಒಂದು ಉರಿಯುತ್ತಿರುವ ವಾದಾಂಶವಾಗಿ ಇನ್ನೂ ಮುಂದುವರಿಯಿತು ಮತ್ತು ಮಾನವ ಸಮುದ್ರವು ಕುಲುಕಾಡುವುದರ ಮೂಲಕ ಹೊಸ ಕ್ರಾಂತಿಕಾರಕ ಸರಕಾರಗಳನ್ನು ಮುಂತರುವುದನ್ನು ಮುಂದರಿಸಿದೆ. ಇಸವಿ 1945ರ ದಶಕಗಳಿಂದ ಇವು ಚೀನಾ, ವಿಯೆಟ್ನಾಮ್‌, ಕ್ಯೂಬ ಮತ್ತು ನಿಕರಾಗುವ ಮುಂತಾದ ಅನೇಕ ಸ್ಥಳಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ಗ್ರೀಸ್‌ನಲ್ಲಿ, ಮಿಲಿಟರಿ ನಿರಂಕುಶ ಆಡಳಿತದ ಒಂದು ಪ್ರಯೋಗವು ವಿಫಲಗೊಂಡಿತು. ಕ್ಯಾಂಪಚೀಯ (ಕೆಂಬೊಡಿಯಾ) ದಲ್ಲಿ ಮೂಲಭೂತ ಕಾಮ್ಯೂನಿಸಮ್‌ನೊಳಗೆ ಒಂದು ವಿಹಾರಾರ್ಥದ ಸಂಚಾರವು, ವರದಿಗಳಿಗನುಸಾರ ಇಪ್ಪತ್ತು ಲಕ್ಷ ಮತ್ತು ಹೆಚ್ಚು ಸಾವುಗಳನ್ನು ಫಲಿಸಿತು.

26. ಬೆಂಕಿಯೊಂದಿಗೆ “ಉರಿಯುವ ಬೆಟ್ಟವು” ಮಾನವ ಕುಲದ ಸಮುದ್ರದಲ್ಲಿ ಹೇಗೆ ಅಲೆಗಳನ್ನು ಉಂಟುಮಾಡುವುದನ್ನು ಮುಂದುವರಿಸಿದೆ?

26 ಆ “ಬೆಂಕಿಹತ್ತಿ ಉರಿಯುತ್ತಿರುವ ಬೆಟ್ಟವು” ಮಾನವಕುಲದ ಸಮುದ್ರದಲ್ಲಿ ಅಲೆಯನ್ನು ಎಬ್ಬಿಸುವುದನ್ನು ಮುಂದುವರಿಸಿದೆ. ಸರಕಾರದ ಕುರಿತು ಸದಾ ಹೋರಾಟಗಳು ಆಫ್ರಿಕ, ಅಮೆರಿಕಗಳು, ಏಷಿಯ ಮತ್ತು ಪೆಸಿಫಿಕ್‌ ದ್ವೀಪಗಳಲ್ಲಿ ವರದಿಸಲ್ಪಡುತ್ತವೆ. ಇವುಗಳಲ್ಲಿ ಅನೇಕ ಹೋರಾಟಗಳು ಕ್ರೈಸ್ತಪ್ರಪಂಚದ ದೇಶಗಳಲ್ಲಿ ಯಾ ಎಲ್ಲಿ ಕ್ರೈಸ್ತ ಮಿಶನೆರಿಗಳು ತೀವ್ರವಾದಿಗಳಾಗಿದ್ದಾರೋ ಅಲ್ಲಿ ನಡೆಯುತ್ತವೆ. ರೋಮನ್‌ ಕ್ಯಾತೊಲಿಕ್‌ ಪಾದ್ರಿಗಳು ಕೂಡ ಅವರೊಂದಿಗೆ ಜತೆಗೂಡಿರುತ್ತಾರೆ ಮತ್ತು ಕಾಮ್ಯೂನಿಸ್ಟ್‌ ಗೆರಿಲ್ಲಾ ತಂಡಗಳ ಸದಸ್ಯರಾಗಿ ಹೋರಾಡಿದ್ದಾರೆ. ಅದೇ ಸಮಯದಲ್ಲಿ ಕಾಮ್ಯೂನಿಸ್ಟರು, “ಅಧಿಕಾರದ ಕ್ರೂರ ಮತ್ತು ನಿರ್ದಯದ ತೃಷೆ ಇರುವ” ವರೆಂದು ಹೇಳಿ ಅವರ ವಿರೋಧವಾಗಿ ಪ್ರಾಟೆಸ್ಟಂಟ್‌ ಸೌವಾರ್ತಿಕ ಗುಂಪುಗಳು ಮಧ್ಯ ಅಮೆರಿಕದಲ್ಲಿ ಕಾರ್ಯನಡಿಸಿವೆ. ಆದರೆ ಮಾನವಕುಲದ ಸಮುದ್ರದಲ್ಲಿನ ಈ ಯಾವುದೇ ಏರುಪೇರುಗಳು, ಶಾಂತಿ ಮತ್ತು ಭದ್ರತೆಯನ್ನು ತರಸಾಧ್ಯವಿಲ್ಲ.—ಹೋಲಿಸಿರಿ ಯೆಶಾಯ 25:10-12; 1 ಥೆಸಲೊನೀಕ 5:3.

27. (ಎ) “ಸಮುದ್ರದಲ್ಲಿ ಮೂರರಲ್ಲಿ ಒಂದು ಭಾಗವು” ಹೇಗೆ ರಕ್ತದಂತೆ ಆಯಿತು? (ಬಿ) ‘ಸಮುದ್ರ ಜೀವಿಗಳೊಳಗೆ ಮೂರರಲ್ಲಿ ಒಂದು ಭಾಗವು’ ಹೇಗೆ ಸತ್ತು ಹೋಗುತ್ತದೆ ಮತ್ತು “ನಾವೆಗಳೊಳಗೆ ಮೂರರಲ್ಲಿ ಒಂದು ಭಾಗಕ್ಕೆ” ಏನಾಗಲಿದೆ?

27 ದೇವರ ರಾಜ್ಯಕ್ಕೆ ಅಧೀನರಾಗುವ ಬದಲು ಈಗಿನ ಸರಕಾರದ ಕುರಿತು ಕ್ರಾಂತಿಕಾರಕ ಹೋರಾಟಗಳಲ್ಲಿ ಒಳಗೂಡುವ ಮಾನವಕುಲದವರು ರಕ್ತದೋಷಿಗಳು ಎಂದು ಎರಡನೆಯ ತುತೂರಿಯ ಊದುವಿಕೆಯು ಪ್ರಕಟಿಸುತ್ತದೆ. ವಿಶೇಷವಾಗಿ ಕ್ರೈಸ್ತಪ್ರಪಂಚದ “ಸಮುದ್ರದ ಮೂರನೆಯ ಒಂದು ಭಾಗವು” ರಕ್ತದಂತೆ ಆಗಿದೆ. ಅಲ್ಲಿರುವ ಎಲ್ಲಾ ಜೀವಂತ ಜೀವಿಗಳು ದೇವರ ದೃಷ್ಟಿಯಲ್ಲಿ ಸತ್ತಿವೆ. ಸಮುದ್ರದ ಮೂರನೆಯ ಒಂದು ಭಾಗದಲ್ಲಿ ನಾವೆಯಂತೆ ತೇಲಾಡುವ ತೀವ್ರಗಾಮಿ ಸಂಸ್ಥೆಗಳಲ್ಲಿ ಯಾವುದೊಂದೂ ಕಟ್ಟಕಡೆಯ ಹಡಗುನಷ್ಟವನ್ನು ತಪ್ಪಿಸಲಾರದು. ಇಕ್ಕಟ್ಟಾದ ರಾಷ್ಟ್ರೀಯತೆಯಲ್ಲಿ ಮತ್ತು ಆ ಸಮುದ್ರದ ರಕ್ತಪರಾಧದಲ್ಲಿ ಇನ್ನೂ ಹೊರಳಾಡುವವರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ತುತೂರಿಯ ಘೋಷದಂತಿರುವ ಕರೆಗೆ ಲಕ್ಷಾಂತರ ಕುರಿಗಳಂತಿರುವ ಜನರು ಈಗ ಕಿವಿಗೊಡುತ್ತಿದ್ದಾರೆ ಎಂಬುದಕ್ಕೆ ನಾವೆಷ್ಟು ಸಂತೋಷಿತರು!

ನಕ್ಷತ್ರವೊಂದು ಆಕಾಶದಿಂದ ಬೀಳುತ್ತದೆ

28. ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದಾಗ ಏನು ಆಗುತ್ತದೆ?

28“ಮತ್ತು ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಮತ್ತು ದೀಪದಂತೆ ಉರಿಯುತ್ತಿರುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಬಿತ್ತು, ಮತ್ತು ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ಮತ್ತು ನೀರುಗಳ ಒರತೆಗಳ ಮೇಲೆಯೂ ಬಿತ್ತು. ಮತ್ತು ಆ ನಕ್ಷತ್ರದ ಹೆಸರು ಮಾಚಿಪತ್ರೆ ಎಂದು ಕರೆಯಲ್ಪಡುತ್ತದೆ. ಮತ್ತು ನೀರುಗಳ ಮೂರನೆಯ ಒಂದು ಭಾಗ ಮಾಚಿಪತ್ರೆಯಾಗಿ ಬದಲಾಯಿತು, ಮತ್ತು ಅವುಗಳು ಕಹಿಯಾಗಿ ಮಾಡಲ್ಪಟ್ಟದರ್ದಿಂದ ಮನುಷ್ಯರಲ್ಲಿ ಅನೇಕರು ಆ ನೀರುಗಳಿಂದ ಸತ್ತರು.” (ಪ್ರಕಟನೆ 8:10, 11, NW)  ಈ ಶಾಸ್ತ್ರವಚನವು ಕರ್ತನ ದಿನದಲ್ಲಿ ಹೇಗೆ ಅನ್ವಯಿಸುತ್ತದೆಂಬುದನ್ನು ನೋಡಲು ಪುನಃ ಒಮ್ಮೆ ಬೈಬಲಿನ ಇತರ ಭಾಗಗಳು ನಮಗೆ ಸಹಾಯ ಮಾಡುತ್ತವೆ.

29. “ದೀಪದಂತೆ ಉರಿಯುವ ಮಹಾ ನಕ್ಷತ್ರದ” ಸಂಕೇತಾರ್ಥವನ್ನು ಯಾವುದು ನೆರವೇರಿಸುತ್ತದೆ, ಮತ್ತು ಯಾಕೆ?

29 ನಾವು ಈಗಾಗಲೇ ಏಳು ಸಭೆಗಳಿಗೆ ಕೊಡಲ್ಪಟ್ಟ ಯೇಸುವಿನ ಸಂದೇಶಗಳಲ್ಲಿ ನಕ್ಷತ್ರದ ಸಂಕೇತಾರ್ಥವನ್ನು ಓದಿ ತಿಳಿದಿದ್ದೇವೆ, ಇದರಲ್ಲಿ ಏಳು ನಕ್ಷತ್ರಗಳು ಸಭೆಗಳಲ್ಲಿನ ಹಿರಿಯರನ್ನು ಸೂಚಿಸುತ್ತವೆ. * (ಪ್ರಕಟನೆ 1:20) ಅಭಿಷಿಕ್ತ “ನಕ್ಷತ್ರಗಳು” ಇತರ ಎಲ್ಲಾ ಅಭಿಷಿಕ್ತರೊಂದಿಗೆ ಜತೆಗೂಡಿ, ತಮ್ಮ ಸ್ವರ್ಗೀಯ ಬಾಧ್ಯತೆಯ ಚಿಹ್ನೆಯಾಗಿ ಪವಿತ್ರಾತ್ಮದೊಂದಿಗೆ ಮುದ್ರೆಹೊಂದಿದ ಸಮಯದಂದಿನಿಂದ ಆತ್ಮಿಕ ಅರ್ಥದಲ್ಲಿ ಸ್ವರ್ಗೀಯ ಸ್ಥಳಗಳಲ್ಲಿ ವಾಸಿಸುತ್ತಾರೆ. (ಎಫೆಸ 2:6, 7) ಆದಾಗ್ಯೂ, ಇಂಥ ನಕ್ಷತ್ರದಂತಹವರ ಮಧ್ಯದಿಂದ ಹಿಂಡನ್ನು ತಪ್ಪು ದಾರಿಗೆ ಎಳೆಯುವ ಧರ್ಮಭ್ರಷ್ಟರು, ಭಿನ್ನಮತಾವಲಂಬಿಗಳು ಬರುವರೆಂದು ಅಪೊಸ್ತಲ ಪೌಲನು ಎಚ್ಚರಿಸಿದನು. (ಅ. ಕೃತ್ಯಗಳು 20:29, 30) ಇಂಥ ಅಪನಂಬಿಗಸ್ತಿಕೆಯು ಒಂದು ಮಹಾ ಧರ್ಮಭ್ರಷ್ಟತೆಯಲ್ಲಿ ಫಲಿಸುವುದು ಮತ್ತು ಈ ಪತನಗೊಂಡ ಹಿರಿಯರು ಮಾನವಕುಲದ ನಡುವೆ ದೇವರಂಥ ಸ್ಥಾನಕ್ಕೆ ತನ್ನನ್ನು ಹೆಚ್ಚಿಸಿಕೊಳ್ಳುವ ನಿಯಮರಾಹಿತ್ಯದ ಸಂಘಟಿತ ಪುರುಷನನ್ನಾಗಿ ಮಾಡಿಕೊಳ್ಳುವರು. (2 ಥೆಸಲೊನೀಕ 2:3, 4) ಕ್ರೈಸ್ತಪ್ರಪಂಚದ ವೈದಿಕ ವರ್ಗವು ಲೋಕರಂಗದ ಮೇಲೆ ತೋರಿಬಂದಾಗ ಪೌಲನ ಎಚ್ಚರಿಕೆಗಳು ನೆರವೇರಿದವು. “ದೀಪದಂತೆ ಉರಿಯುವ ಮಹಾ ನಕ್ಷತ್ರ”ದ ಸಂಕೇತದಿಂದ ಈ ಗುಂಪು ಸರಿಯಾಗಿಯೇ ಪ್ರತಿನಿಧಿಸಲ್ಪಟ್ಟಿದೆ.

30. (ಎ) ಬಾಬೆಲಿನ ರಾಜನು ಆಕಾಶದಿಂದ ಬಿದ್ದನೆಂದು ಹೇಳಿದಾಗ, ಯಾವ ಅರ್ಥವನ್ನು ಅದು ಕೊಟ್ಟಿತು? (ಬಿ) ಆಕಾಶದಿಂದ ಬೀಳುವಿಕೆಯು ಯಾವುದನ್ನು ಸೂಚಿಸಬಲ್ಲದು?

30 ಈ ನಿರ್ದಿಷ್ಟ ನಕ್ಷತ್ರವು ಪರಲೋಕದಿಂದ ಬೀಳುವುದನ್ನು ಯೋಹಾನನು ನೋಡುತ್ತಾನೆ. ಹೇಗೆ? ತಿಳಿದುಕೊಳ್ಳಲು ಒಬ್ಬ ಪುರಾತನ ರಾಜನ ಅನುಭವಗಳು ನಮಗೆ ಸಹಾಯಮಾಡುತ್ತವೆ. ಬಾಬೆಲಿನ ರಾಜನಿಗೆ ಸಂಬೋಧಿಸುತ್ತಾ ಯೆಶಾಯನು ಅಂದದ್ದು: “ಆಹಾ, ಉದಯನಕ್ಷತ್ರವೇ, ಬೆಳ್ಳಿಯೇ, ಆಕಾಶದಿಂದ ಹೇಗೆ ಬಿದ್ದೆ! ಜನಾಂಗಗಳನ್ನು ಕೆಡವಿದ ನೀನು ಕಡಿಯಲ್ಪಟ್ಟು ನೆಲಕ್ಕೆ ಉರುಳಿದೆಯಲ್ಲಾ!” (ಯೆಶಾಯ 14:12) ಕೋರೆಷನ ಸೈನ್ಯಗಳಿಂದ ಬಾಬೆಲು ಪರಾಭವಗೊಳಿಸಲ್ಪಟ್ಟು, ಅಪಮಾನಕರ ಸೋಲಿನಿಂದ ಅದರ ರಾಜನು ಲೋಕದ ಆಧಿಪತ್ಯದಿಂದ ಹಠಾತ್ತಾಗಿ ಅವರೋಹಣ ಮಾಡಿದಾಗ ಈ ಪ್ರವಾದನೆಯು ನೆರವೇರಿತು. ಹೀಗೆ, ಆಕಾಶದಿಂದ ಬೀಳುವಿಕೆಯು ಒಂದು ಉನ್ನತ ಸ್ಥಾನವನ್ನು ಕಳೆದುಕೊಳ್ಳುವುದನ್ನು ಮತ್ತು ಅಪಮಾನದೊಳಗೆ ಬೀಳುವುದನ್ನು ನಿರ್ದೇಶಿಸಬಲ್ಲದು.

31. (ಎ) ಕ್ರೈಸ್ತಪ್ರಪಂಚದ ವೈದಿಕರು ಒಂದು “ಸ್ವರ್ಗೀಯ” ಸ್ಥಾನದಿಂದ ಯಾವಾಗ ಬಿದ್ದರು? (ಬಿ) ವೈದಿಕರಿಂದ ನೀಡಲಾಗುತ್ತಿರುವ ನೀರುಗಳು “ಮಾಚಿಪತ್ರೆಗೆ” ಹೇಗೆ ಬದಲಾಯಿತು, ಮತ್ತು ಅನೇಕರಿಗೆ ಯಾವ ಪರಿಣಾಮದೊಂದಿಗೆ?

31 ಕ್ರೈಸ್ತಪ್ರಪಂಚದ ವೈದಿಕರು ನಿಜಕ್ರೈಸ್ತತ್ವದಿಂದ ಧರ್ಮಭ್ರಷ್ಟರಾದಾಗ, ಅಪೊಸ್ತಲ ಪೌಲನಿಂದ ಎಫೆಸ 2:6, 7 ರಲ್ಲಿ ವಿವರಿಸಲ್ಪಟ್ಟ ಉನ್ನತವಾಗಿರುವ “ಸ್ವರ್ಗೀಯ” ಸ್ಥಾನದಿಂದ ಅವರು ಬಿದ್ದರು. ಸತ್ಯದ ಶುದ್ಧನೀರನ್ನು ಒದಗಿಸುವ ಬದಲು ಅವರು “ಮಾಚಿಪತ್ರೆ” ಯನ್ನು ಅಂದರೆ ಕಹಿ ಮಿಥ್ಯೆಗಳಾದ ನರಕಾಗ್ನಿ, ಪರ್ಗೆಟರಿ, ತ್ರಯೈಕ್ಯ ಮತ್ತು ಆದಿನಿರ್ಧಾರದಂತಹವುಗಳನ್ನು ನೀಡಿದರು; ಮತ್ತು ಅವರು ದೇವರ ನೈತಿಕ ಸೇವಕರಾಗಿ ಜನಾಂಗಗಳನ್ನು ಕಟ್ಟಲು ವಿಫಲರಾಗಿ, ಅವರನ್ನು ಯುದ್ದಕ್ಕೆ ಸಹ ನಡಿಸಿದರು. ಫಲಿತಾಂಶ? ಮಿಥ್ಯೆಗಳನ್ನು ನಂಬಿದವರಿಗೆ ಆತ್ಮಿಕ ವಿಷವನ್ನು ಹಾಕಲಾಯಿತು. ಅವರ ವಿದ್ಯಮಾನವು ಯೆರೆಮೀಯನ ದಿನಗಳ ಅಪನಂಬಿಗಸ್ತ ಇಸ್ರಾಯೇಲ್ಯರದಕ್ಕೆ ಸಮಾನವಾಗಿತ್ತು. ಅವರಿಗೆ ಯೆಹೋವನು ಅಂದದ್ದು: “ಆಹಾ, ನಾನು ಈ ಜನರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು; ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲಿಲ್ಲಾ ಹರಡಿದೆಯಷ್ಟೆ.”—ಯೆರೆಮೀಯ 9:15; 23:15.

32. ಆತ್ಮಿಕ ಆಕಾಶಗಳಿಂದ ಕ್ರೈಸ್ತಪ್ರಪಂಚದ ಬೀಳುವಿಕೆಯು ಯಾವಾಗ ವ್ಯಕ್ತವಾಯಿತು, ಮತ್ತು ಅದು ಹೇಗೆ ನಾಟಕೀಕರಿಸಲ್ಪಟ್ಟಿತು?

32 ಕ್ರೈಸ್ತಪ್ರಪಂಚದ ವೈದಿಕರ ಬದಲು ಅಭಿಷಿಕ್ತ ಕ್ರೈಸ್ತರ ಉಳಿಕೆಯವರ ಚಿಕ್ಕ ಗುಂಪು ರಾಜ್ಯದ ಅಭಿರುಚಿಗಳ ಮೇಲೆ ನೇಮಿಸಲ್ಪಟ್ಟಾಗ, ಆತ್ಮಿಕ ಆಕಾಶದಿಂದ ಈ ಬೀಳುವಿಕೆಯು 1919ರ ವರ್ಷದಲ್ಲಿ ವ್ಯಕ್ತವಾಯಿತು. (ಮತ್ತಾಯ 24:45-47) ಮತ್ತು ಕ್ರೈಸ್ತರ ಈ ಗುಂಪು ಕ್ರೈಸ್ತಪ್ರಪಂಚದ ವೈದಿಕರ ವಿಫಲತೆಗಳನ್ನು ನೇರವಾಗಿ ಬಯಲುಗೊಳಿಸುವ ತಮ್ಮ ಚಳುವಳಿಯನ್ನು ಪುನಃ ನವೀಕರಿಸಿದಾಗ ಈ ಬೀಳುವಿಕೆಯು 1922 ರಲ್ಲಿ ನಾಟಕೀಕರಿಸಲ್ಪಟ್ಟಿತು.

33. ಅಮೆರಿಕದ ಒಹೈಯೋದ ಕೊಲಂಬಸ್‌ನಲ್ಲಿ ನಡೆದ 1924ರ ಅಧಿವೇಶನದಲ್ಲಿ ಕ್ರೈಸ್ತಪ್ರಪಂಚದ ವೈದಿಕ ವರ್ಗದವರ ಯಾವ ವಿಷಯವು ಬಯಲುಗೊಳಿಸಲ್ಪಟ್ಟಿತು?

33ದ ಗೋಲ್ಡನ್‌ ಏಜ್‌ ಎಂಬ ಪತ್ರಿಕೆಯಲ್ಲಿ ವರ್ಣಿಸಿದಂತೆ, ಈ ಸಂಬಂಧದಲ್ಲಿ ಗಮನಾರ್ಹವಾದದ್ದು “ಈ ಕಾಲದಲ್ಲಿ ನಡಿಸಿದಂತಹ ಬೈಬಲ್‌ ವಿದ್ಯಾರ್ಥಿಗಳ ಅತಿ ದೊಡ್ಡ ಅಧಿವೇಶನ” ದಲ್ಲಿ ಮಾಡಿದ ಒಂದು ಘೋಷಣೆಯು ಆಗಿತ್ತು. ಈ ಅಧಿವೇಶನವು 1924ರ ಜುಲೈ 20-27 ರಲ್ಲಿ ಒಹೈಯೋದ ಕೊಲಂಬಸ್‌ನಲ್ಲಿ ಒಟ್ಟಾಗಿ ನೆರೆದಿತ್ತು. ಮೂರನೆಯ ತುತೂರಿಯು ದೇವದೂತರ ಮಾರ್ಗದರ್ಶನದ ಕೆಳಗೆ ಧ್ವನಿಸಲ್ಪಟ್ಟಿತು ಎಂಬುದಕ್ಕೆ ಯಾವ ಸಂದೇಹವೂ ಇರಲಿಲ್ಲ. ಒಂದು ಬಲವಾದ ಠರಾವನ್ನು ಅಲ್ಲಿ ಅಂಗೀಕರಿಸಲಾಯಿತು, ಅನಂತರ 5 ಕೋಟಿ ಪ್ರತಿಗಳು ಕರಪತ್ರದೋಪಾದಿ ಹಂಚಲ್ಪಟ್ಟವು. ಕ್ರೈಸ್ತ ಪಾದ್ರಿಗಳು ಆಪಾದಿಸಲ್ಪಟ್ಟಿದ್ದಾರೆ [ಎಕೀಜ್ಲಿಆ್ಯಸಿಕ್ಟ್ಸ್‌ ಇಂಡೈಕೆಡ್ಟ್‌] ಎಂಬ ಶೀರ್ಷಿಕೆಯ ಕೆಳಗೆ ಅದನ್ನು ಪ್ರಕಾಶಿಸಲಾಯಿತು. ಒಂದು ಉಪಶೀರ್ಷಿಕೆಯು ಈ ವಿವಾದಾಂಶವನ್ನು ಪ್ರಸ್ತುತಪಡಿಸಿತು: “ವಾಗ್ದತ್ತ ಸಂತತಿಯ ವಿರುದ್ಧ ಸರ್ಪನ ಸಂತತಿ.” ಉಚ್ಚ ಶಬ್ದಾಡಂಬರದ ಧಾರ್ಮಿಕ ಬಿರುದುಗಳನ್ನು ಅವರು ತೆಗೆದುಕೊಳ್ಳುವುದು, ವಾಣಿಜ್ಯ ದೈತ್ಯರನ್ನು ಮತ್ತು ವೃತ್ತಿಪರ ರಾಜನೀತಿಜ್ಞರನ್ನು ಅವರ ಹಿಂಡಿನ ಪ್ರಮುಖರನ್ನಾಗಿ ಮಾಡುವುದು, ಜನರ ಮುಂದೆ ಪ್ರಕಾಶಿಸುವ ತಮ್ಮ ಆಶೆ ಮತ್ತು ಮೆಸ್ಸೀಯನ ರಾಜ್ಯದ ಸಂದೇಶವನ್ನು ಜನರಿಗೆ ಸಾರಲು ಅವರ ನಿರಾಕರಣೆ ಮುಂತಾದ ವಿಷಯಗಳ ಮೇಲೆ ಕ್ರೈಸ್ತಪ್ರಪಂಚದ ವೈದಿಕರನ್ನು ಈ ಆಪಾದನೆಯು ಪೂರ್ತಿಯಾಗಿ ಬಯಲುಗೊಳಿಸಿತು. ಇದು ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನು “ನಮ್ಮ ದೇವರು ಮುಯ್ಯಿ ತೀರಿಸುವ ದಿನವನ್ನು ಪ್ರಚುರಗೊಳಿಸಲು; ದುಃಖಿತರೆಲ್ಲರನ್ನು ಸಂತೈಸಲು” ದೇವರಿಂದ ನೇಮಕ ಹೊಂದಿದ್ದಾನೆಂಬುದನ್ನು ಒತ್ತಿಹೇಳಿತು.—ಯೆಶಾಯ 61:2, KJ.

34, 35. (ಎ) ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಲು ಪ್ರಾರಂಭಿಸಿದಂದಿನಿಂದ ವೈದಿಕರ ಅಧಿಕಾರ ಮತ್ತು ಪ್ರಭಾವಕ್ಕೆ ಏನು ಸಂಭವಿಸಿದೆ? (ಬಿ) ಭವಿಷ್ಯವು ಕ್ರೈಸ್ತಪ್ರಪಂಚದ ವೈದಿಕರಿಗೆ ಏನನ್ನು ಕಾದಿರಿಸಿದೆ?

34 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಲು ಆರಂಭಿಸಿದಂದಿನಿಂದ ಮಾನವ ಕುಲದ ನಡುವೆ ವೈದಿಕರ ಪ್ರಭುತ್ವದ ಸ್ಥಾನವು ಜಾರಿಹೋಗುತ್ತಾ ಇದೆ. ಗತ ಶತಮಾನಗಳಲ್ಲಿ ಅವರು ಆನಂದಿಸಿದ ದೇವರಂಥ ಅಧಿಕಾರಗಳು ಈ ದಿನ ಮತ್ತು ಸಮಯಗಳಲ್ಲಿ ಅವರಲ್ಲಿ ಕೇವಲ ಕೆಲವರು ಮಾತ್ರವೆ ಇಟ್ಟುಕೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಸಾರುವಿಕೆಯ ಕಾರಣದಿಂದ, ವೈದಿಕರಿಂದ ಕಲಿಸಲ್ಪಟ್ಟಿರುವ ಅನೇಕ ಬೋಧನೆಗಳು ಆತ್ಮಿಕ ವಿಷ—“ಮಾಚಿಪತ್ರೆ” ಆಗಿದೆ ಎಂದು ಬಹುಸಂಖ್ಯಾತ ಜನರು ತಿಳಿದುಕೊಳ್ಳುವಂತೆ ಆಗಿದೆ. ಅದಲ್ಲದೆ, ಉತ್ತರ ಯೂರೋಪಿನಲ್ಲಿ ವೈದಿಕರ ಶಕ್ತಿಯು ಬಹುತೇಕ ಇಲ್ಲವಾಗಿರುವಾಗ, ಇತರ ಕೆಲವು ದೇಶಗಳಲ್ಲಿ, ಸರಕಾರಗಳು ಅವರ ಪ್ರಭಾವವನ್ನು ಕಟ್ಟುನಿಟ್ಟಾಗಿ ಕಡಿತಗೊಳಿಸಿವೆ. ಯೂರೋಪಿನ ಮತ್ತು ಅಮೆರಿಕಗಳ ಕ್ಯಾತೊಲಿಕ್‌ ವಿಭಾಗಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ನೈತಿಕ ವ್ಯವಹಾರಗಳಲ್ಲಿ ವೈದಿಕರ ಅವಮಾನಕಾರೀ ವರ್ತನೆಯು ಅವರ ಸತ್ಕೀರ್ತಿಯನ್ನು ಕಲುಷಿತಗೊಳಿಸಿದೆ. ಈಗಿನಿಂದ ಅವರ ಸ್ಥಾನವು ಇನ್ನಷ್ಟು ಕೆಟ್ಟದ್ದೇ ಆಗಬಲ್ಲದು, ಯಾಕಂದರೆ ಇತರ ಸುಳ್ಳುಧರ್ಮದವರಂತೆ ಅದೇ ಅಂತ್ಯಾವಸ್ಥೆಯನ್ನು ಅವರು ಬೇಗನೆ ಅನುಭವಿಸುವರು.—ಪ್ರಕಟನೆ 18:21; 19:2.

35 ಕ್ರೈಸ್ತಪ್ರಪಂಚದ ಯೆಹೋವನ ಬಾಧೆಗಳು ಇನ್ನೂ ಮುಗಿದಿಲ್ಲ. ನಾಲ್ಕನೆಯ ತುತೂರಿಯ ಊದುವಿಕೆಯ ಅನಂತರ ಏನಾಗುತ್ತದೆ ಎಂಬುದನ್ನು ಗಮನಿಸಿರಿ.

ಕತ್ತಲೆ!

36. ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನೂದಿದ ಅನಂತರ ಏನಾಗುತ್ತದೆ?

36“ಮತ್ತು ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಮತ್ತು ಸೂರ್ಯನ ಮೂರನೆಯ ಒಂದು ಭಾಗ, ಚಂದ್ರನ ಮೂರನೆಯ ಒಂದು ಭಾಗ, ನಕ್ಷತ್ರಗಳೊಳಗೆ ಮೂರನೆಯ ಒಂದು ಭಾಗ ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಗುವಂತೆ ಮತ್ತು ಹಗಲಲ್ಲಿ ಮೂರನೆಯ ಒಂದು ಭಾಗದಲ್ಲಿ ಪ್ರಕಾಶವಿಲ್ಲದಿರುವಂತೆ ಮತ್ತು ರಾತ್ರಿಯೂ ಹಾಗೆಯೇ ಇರುವಂತೆ ಬಡಿಯಲ್ಪಟ್ಟಿತು.” (ಪ್ರಕಟನೆ 8:12, NW)  ಐಗುಪ್ತದ ಮೇಲಿನ ಒಂಬತ್ತನೆಯ ಬಾಧೆ ಅಕ್ಷರಶಃ ಕತ್ತಲಿನ ಬಾಧೆಯಾಗಿತ್ತು. (ವಿಮೋಚನಕಾಂಡ 10:21-29) ಆದರೆ ನಮ್ಮ ಇಪ್ಪತ್ತನೆಯ ಶತಮಾನದಲ್ಲಿ ಜನರನ್ನು ಕಾಡಿಸಲು ಬರುವ ಈ ಸಾಂಕೇತಿಕ ಕತ್ತಲು ಯಾವುದು?

37. ಕ್ರೈಸ್ತ ಸಭೆಯ ಹೊರಗಿರುವವರ ಆತ್ಮಿಕ ಸ್ಥಿತಿಗತಿಯನ್ನು ಅಪೊಸ್ತಲ ಪೇತ್ರ ಮತ್ತು ಪೌಲರು ಹೇಗೆ ವರ್ಣಿಸಿದ್ದಾರೆ?

37 ಅಪೊಸ್ತಲ ಪೇತ್ರನು ಜತೆ ವಿಶ್ವಾಸಿಗಳಿಗೆ ತಿಳಿಸಿದ್ದೇನಂದರೆ ಅವರು ಕ್ರೈಸ್ತರಾಗುವ ಮುಂಚೆ, ಆತ್ಮಿಕವಾಗಿ ಹೇಳುವುದಾದರೆ, ಕತ್ತಲಿನಲ್ಲಿ ಇದ್ದರು. (1 ಪೇತ್ರ 2:9) ಕ್ರೈಸ್ತ ಸಭೆಯ ಹೊರಗಿರುವವರ ಆತ್ಮಿಕ ಸ್ಥಿತಿಯನ್ನು ವರ್ಣಿಸಲು “ಕತ್ತಲು” ಎಂಬ ಶಬ್ದವನ್ನು ಪೌಲನು ಉಪಯೋಗಿಸಿದನು. (ಎಫೆಸ 5:8; 6:12; ಕೊಲೊಸ್ಸೆ 1:13; 1 ಥೆಸಲೊನೀಕ 5:4, 5) ಆದರೆ ದೇವರಲ್ಲಿ ನಂಬಿಕೆಯಿದೆ ಮತ್ತು ಯೇಸುವನ್ನು ತಮ್ಮ ರಕ್ಷಕನಾಗಿ ಸ್ವೀಕರಿಸುತ್ತೇವೆಂದು ಹೇಳುವ ಕ್ರೈಸ್ತಪ್ರಪಂಚದಲ್ಲಿರುವವರ ಕುರಿತೇನು?

38. ನಾಲ್ಕನೆಯ ದೇವದೂತನು ಕ್ರೈಸ್ತಪ್ರಪಂಚದ “ಬೆಳಕಿನ” ಕುರಿತು ಯಾವ ನಿಜತ್ವವನ್ನು ಧ್ವನಿಸುತ್ತಾನೆ?

38 ನಿಜ ಕ್ರೈಸ್ತರು ತಮ್ಮ ಫಲಗಳಿಂದ ಗುರುತಿಸಲ್ಪಡುವರೆಂದು ಮತ್ತು ತನ್ನ ಶಿಷ್ಯರೆಂದು ಹೇಳಿಕೊಳ್ಳುವ ಅನೇಕರು “ಧರ್ಮವನ್ನು ಮೀರಿ ನಡೆಯುವವರಾಗಿರು” ವರೆಂದು ಯೇಸು ಹೇಳಿದನು. (ಮತ್ತಾಯ 7:15-23) ಕ್ರೈಸ್ತಪ್ರಪಂಚವು ನೆಲಸಿರುವ ಲೋಕದ ಮೂರನೆಯ ಒಂದು ಭಾಗದ ಫಲಗಳನ್ನು ನೋಡುವ ಯಾವನೇ ಒಬ್ಬನು, ಅವಳು ಗಾಢವಾದ ಆತ್ಮಿಕ ಕತ್ತಲಿನಲ್ಲಿ ತಡಕಾಡುತ್ತಿದ್ದಾಳೆಂಬದನ್ನು ನಿರಾಕರಿಸಶಕ್ತನಲ್ಲ. (2 ಕೊರಿಂಥ 4:4) ಅವಳು ತನ್ನನ್ನು ಕ್ರೈಸ್ತಳೆಂದು ಹೇಳಿಕೊಳ್ಳುವುದರಿಂದ ಅತ್ಯಂತ ಹೆಚ್ಚು ದೋಷಾರ್ಹಳಾಗಿದ್ದಾಳೆ. ಆದುದರಿಂದ ಕ್ರೈಸ್ತಪ್ರಪಂಚದ “ಬೆಳಕು” ವಾಸ್ತವದಲ್ಲಿ ಕತ್ತಲಾಗಿದೆ ಮತ್ತು ಅವಳ “ಬೆಳಕಿ”ನ ಮೂಲಗಳು ಬಾಬೆಲಿನವುಗಳಾಗಿವೆ—ಅಕ್ರೈಸ್ತವಾಗಿವೆ ಎಂಬ ನಿಜತ್ವದ ಕಾರಣದಿಂದ ನಾಲ್ಕನೆಯ ದೇವದೂತನು ತುತೂರಿಯನ್ನೂದುವುದು ತಕ್ಕದ್ದಾಗಿದೆ.—ಮಾರ್ಕ 13:22, 23; 2 ತಿಮೊಥೆಯ 4:3, 4.

39. (ಎ) 1925ರ ಅಧಿವೇಶನವೊಂದರಲ್ಲಿ ತೆಗೆದುಕೊಂಡ ಠರಾವು ಕ್ರೈಸ್ತಪ್ರಪಂಚದ ಮಿಥ್ಯೆಯ ಬೆಳಕನ್ನು ಹೇಗೆ ವರ್ಣಿಸಿತು? (ಬಿ) ಯಾವ ಹೆಚ್ಚಿನ ಬಯಲುಗೊಳಿಸುವಿಕೆಯು 1955 ರಲ್ಲಿ ಮಾಡಲ್ಪಟ್ಟಿದೆ?

39 ಆ ಸ್ವರ್ಗೀಯ ಘೋಷಣೆಯ ಸಹಮತದೊಂದಿಗೆ ಕಿಕ್ಕಿರಿದ ದೇವ ಜನರ ಸಮೂಹವು ಆಗಸ್ಟ್‌ 29, 1925 ರಲ್ಲಿ ಅಮೆರಿಕದ ಇಂಡಿಯಾನ ಇಂಡಿಯನಾಪೊಲಿಸ್‌ನಲ್ಲಿ ಅಧಿವೇಶನವಾಗಿ ನೆರೆದು ಬಂತು ಮತ್ತು “ನಿರೀಕ್ಷೆಯ ಸಂದೇಶ” ಎಂಬ ಮುಖ್ಯ ಶೀರ್ಷಿಕೆಯ ಒಂದು ದಿಟ್ಟಮಾತುಗಳ ಠರಾವನ್ನು ಪ್ರಕಾಶನಕ್ಕಾಗಿ ಅಂಗೀಕರಿಸಿತು. ಪುನಃ ಅನೇಕ ಭಾಷೆಗಳಲ್ಲಿ 5 ಕೋಟಿಗಳಿಗಿಂತಲೂ ಹೆಚ್ಚಿನ ಪ್ರತಿಗಳನ್ನು ಹಂಚಲಾಯಿತು. ವಾಣಿಜ್ಯ ಲಾಭಕೋರರ, ರಾಜಕೀಯ ಧುರೀಣರ ಮತ್ತು ಧಾರ್ಮಿಕ ವೈದಿಕರ ಸಂಯೋಗದಿಂದ ಮಿಥ್ಯೆಯ ಬೆಳಕನ್ನು ಎತ್ತಿಹಿಡಿದಿದ್ದುದರ ಫಲಿತಾಂಶವಾಗಿ “ಜನರು ಕತ್ತಲೆಯೊಳಗೆ ಬಿದ್ದಿದ್ದಾರೆ” ಮತ್ತು “ಶಾಂತಿ, ಸಮೃದ್ಧಿ, ಆರೋಗ್ಯ, ಜೀವ, ವಿಮೋಚನೆ ಮತ್ತು ಶಾಶ್ವತ ಸಂತೋಷದ ಆಶೀರ್ವಾದಗಳನ್ನು” ಪಡೆಯಲು ದೇವರ ರಾಜ್ಯವು ಮಾತ್ರವೇ ನಿಜವಾದ ನಿರೀಕ್ಷೆಯೆಂದು ಅದು ನಿರ್ದೇಶಿಸಿತು. ಕ್ರೈಸ್ತಪ್ರಪಂಚದ ದೈತ್ಯ ಸಂಸ್ಥೆಯ ವಿರುದ್ಧ ಇಂಥ ಸಂದೇಶಗಳನ್ನು ಸಾರಲು ಅಭಿಷಿಕ್ತ ಕ್ರೈಸ್ತರ ಚಿಕ್ಕಗುಂಪಿಗೆ ಧೈರ್ಯ ತೆಗೆದುಕೊಳ್ಳಬೇಕಾಯಿತು. ಆದರೆ ಸುಸಂಗತವಾಗಿ, 1920 ಗಳ ಮೊದಲ ಭಾಗದಿಂದ ಇಂದಿನ ವರೆಗೂ ಅವರು ಹಾಗೆಯೇ ಮಾಡಿದ್ದಾರೆ. ಇತ್ತೇಚೆಗಿನ ಸಮಯಗಳಲ್ಲಿ 1955 ರಲ್ಲಿ ವೈದಿಕ ವರ್ಗದ ಹೆಚ್ಚಿನ ಬಯಲುಗೊಳಿಸುವಿಕೆಯು ಕ್ರೈಸ್ತಪ್ರಪಂಚ ಅಥವಾ ಕ್ರೈಸ್ತತ—ಇದರಲ್ಲಿ ಯಾವುದು “ಲೋಕದ ಬೆಳಕಾಗಿದೆ”? ಎಂಬ ಶೀರ್ಷಿಕೆಯ ಪುಸ್ತಿಕೆಯು ಅನೇಕ ಭಾಷೆಗಳಲ್ಲಿ ಲೋಕವ್ಯಾಪಕವಾಗಿ ಹಂಚಲ್ಪಟ್ಟದರ್ದಿಂದ ಮಾಡಲ್ಪಟ್ಟಿತು. ಇಂದು ಕ್ರೈಸ್ತಪ್ರಪಂಚದ ಕಪಟತನವು ಎಷ್ಟು ಸುವ್ಯಕ್ತವಾಗಿದೆ ಅಂದರೆ ಲೋಕದಲ್ಲಿ ಅನೇಕರು ಅದನ್ನು ತಾವೇ ನೋಡಶಕ್ತರಾಗಿದ್ದಾರೆ. ಆದರೆ ಯೆಹೋವನ ಜನರು ಅವಳು ಏನಾಗಿದ್ದಾಳೋ—ಕತ್ತಲಿನ ಒಂದು ರಾಜ್ಯ—ಅದನ್ನು ಬಯಲುಗೊಳಿಸುವುದನ್ನು ಇನ್ನೂ ಬಿಡದೆ ಮುಂದರಿಸಿದ್ದಾರೆ.

ಹಾರಾಡುವ ಗರುಡ ಪಕ್ಷಿ

40. ಕ್ರೈಸ್ತಪ್ರಪಂಚವು ಏನಾಗಿರುತ್ತದೆಂದು ನಾಲ್ಕು ತುತೂರಿಯ ಧ್ವನಿಗಳು ತೋರಿಸಿಕೊಟ್ಟಿವೆ?

40 ಈ ಮೊದಲ ನಾಲ್ಕು ತುತೂರಿ ಧ್ವನಿಗಳು ಕ್ರೈಸ್ತಪ್ರಪಂಚದ ಅಸಹ್ಯ ಮತ್ತು ಮರಣಕ್ಕೆ ನಡಿಸುವ ಪರಿಸ್ಥಿತಿಯನ್ನು ಅನಾವರಣ ಮಾಡುವುದರಲ್ಲಿ ನಿಜವಾಗಿ ಪರಿಣಮಿಸಿದವು. “ಭೂಮಿಯ” ಅವಳ ಭಾಗವು ಯೆಹೋವನ ನ್ಯಾಯತೀರ್ಪಿಗೆ ಯೋಗ್ಯವೆಂದು ಬಹಿರಂಗಗೊಳಿಸಲ್ಪಟ್ಟಿತು. ಅವಳ ದೇಶಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಎದ್ದುಬಂದಿರುವ ಕ್ರಾಂತಿಕಾರಿ ಸರಕಾರಗಳು ಆತ್ಮಿಕ ಜೀವಕ್ಕೆ ಹಾನಿಕಾರಕವೆಂದು ತೋರಿಸಲ್ಪಟ್ಟವು. ಅವಳ ವೈದಿಕರ ಪತನದ ಸ್ಥಿತಿಯು ಬರಿದಾಗಿರಿಸಲ್ಪಟ್ಟಿತು ಮತ್ತು ಅವಳ ಆತ್ಮಿಕ ಸ್ಥಿತಿಯ ಸಾಮಾನ್ಯ ಕತ್ತಲು ಎಲ್ಲರಿಗೆ ನೋಡಲಿಕ್ಕೋಸ್ಕರ ಬಹಿರಂಗಗೊಳಿಸಲ್ಪಟ್ಟಿತು. ಕ್ರೈಸ್ತಪ್ರಪಂಚವು ನಿಜವಾಗಿಯೂ ಸೈತಾನನ ವಿಷಯಗಳ ವ್ಯವಸ್ಥೆಯ ಅತಿ ದೂಷಣೀಯ ಭಾಗವಾಗಿದೆ.

41. ತುತೂರಿಯ ಊದುವಿಕೆಯ ಸರಣಿಯಲ್ಲಿ ಒಂದು ನಿಲುಗಡೆಯ ವೇಳೆಯಲ್ಲಿ, ಯೋಹಾನನು ಏನನ್ನು ನೋಡುತ್ತಾನೆ ಮತ್ತು ಕೇಳುತ್ತಾನೆ?

41 ಪ್ರಕಟಿಸಲು ಇನ್ನೇನು ಉಳಿದದೆ? ನಾವೀ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಮೊದಲು, ತುತೂರಿಯೂದುವಿಕೆಯ ಸರಣಿಯಲ್ಲಿ ಒಂದು ಸಣ್ಣ ನಿಲುಗಡೆ ಇದೆ. ಯೋಹಾನನು ಮುಂದೇನು ನೋಡುತ್ತಾನೋ ಅದನ್ನು ಹೀಗೆ ವಿವರಿಸುತ್ತಾನೆ: “ಮತ್ತು ನಾನು ನೋಡಿದೆನು, ಮತ್ತು ಆಕಾಶ ಮಧ್ಯದಲ್ಲಿ ಒಂದು ಗರುಡ ಪಕ್ಷಿಯು ಹಾರಾಡುತ್ತಾ, ಗಟ್ಟಿಯಾದ ಸ್ವರದಿಂದ ಹೇಳುವುದನ್ನು ನಾನು ಕೇಳಿದೆನು: ‘ಭೂನಿವಾಸಿಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಯಾಕಂದರೆ ತಮ್ಮ ತುತೂರಿಗಳನ್ನು ಇನ್ನೇನು ಊದುವುದರಲ್ಲಿರುವ ಮೂವರು ದೇವದೂತರ ಮಿಕ್ಕ ತುತೂರಿಯ ಘೋಷಗಳ ಕಾರಣದಿಂದಲೇ!”—ಪ್ರಕಟನೆ 8:13, NW.

42. ಹಾರಾಡುತ್ತಿರುವ ಗರುಡಪಕ್ಷಿಯಿಂದ ಏನು ಸೂಚಿತವಾಗಬಹುದು, ಮತ್ತು ಅದರ ಸಂದೇಶವೇನು?

42 ಗರುಡ ಪಕ್ಷಿಯೊಂದು ಆಕಾಶದಲ್ಲಿ ಮೇಲೆ ಹಾರಾಡುತ್ತದೆ, ಹೀಗೆ ವಿಸ್ತಾರವಾದ ಕ್ಷೇತ್ರದಲ್ಲಿನ ಜನರು ಅದನ್ನು ನೋಡಸಾಧ್ಯವಿದೆ. ಅದಕ್ಕೆ ಅಸಾಧಾರಣವಾದ ತೀವ್ರ ದೃಷ್ಟಿಯಿದೆ. ಮತ್ತು ಅದು ಮುಂದಕ್ಕೆ ಅತಿದೂರದ ವರೆಗೂ ನೋಡಬಲ್ಲದು. (ಯೋಬ 39:29) ದೇವರ ಸಿಂಹಾಸನದ ಸುತ್ತಲೂ ಇರುವ ನಾಲ್ಕು ಕೆರೂಬಿಯರಲ್ಲಿ ಒಂದನ್ನು ಹಾರುತ್ತಿರುವ ಗರುಡ ಪಕ್ಷಿಯಂತೆ ಚಿತ್ರಿಸಲಾಗಿದೆ. (ಪ್ರಕಟನೆ 4:6, 7) ಅದು ಈ ಕೆರೂಬಿಯೋ ಯಾ ದೇವರ ಇನ್ನೊಬ್ಬ ದೂರದೃಷ್ಟಿಯ ಸೇವಕನೋ, ಅದು ಒಂದು ಬಲಶಾಲೀ ಸಂದೇಶವನ್ನು ಗಟ್ಟಿಯಾಗಿ ಘೋಷಿಸುತ್ತದೆ: “ಅಯ್ಯೋ, ಅಯ್ಯೋ, ಅಯ್ಯೋ”! ಮೂರು ಉಳಿದಿರುವ ತುತೂರಿಗಳು ಕೇಳಲ್ಪಡುವಾಗ ಈ ವಿಪತ್ತುಗಳಲ್ಲಿ ಪ್ರತಿಯೊಂದು ಒಂದಕ್ಕೊಂದು ಜೋಡಿಸಲ್ಪಟ್ಟಿದೆಯೆಂದೂ ಭೂನಿವಾಸಿಗಳು ಲಕ್ಷ್ಯಕೊಡಲಿ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 17 ಇದಕ್ಕೆ ವಿಪರ್ಯಸ್ತವಾಗಿ, ಮಹಾ ಸಮೂಹವು ಯೆಹೋವನ ಅಪ್ರಸನ್ನತೆಯ ಬಿಸಿಲಿನ ಉರಿಯುವ ಶಾಖವನ್ನು ಅನುಭವಿಸುವುದಿಲ್ಲವೆಂದು ಪ್ರಕಟನೆ 7:16 ತೋರಿಸುತ್ತದೆ.

^ ಪ್ಯಾರ. 29 ಯೇಸುವಿನ ಬಲಗೈಯಲ್ಲಿರುವ ಸಭೆಗಳಲ್ಲಿನ ಏಳು ನಕ್ಷತ್ರಗಳು ಕ್ರೈಸ್ತ ಸಭೆಯಲ್ಲಿನ ಅಭಿಷಿಕ್ತ ಮೇಲ್ವಿಚಾರಕರನ್ನು ಚಿತ್ರಿಸುತ್ತಿರುವಾಗ ಇಂದು ಲೋಕದಲ್ಲಿ 73,000 ಕ್ಕಿಂತಲೂ ಹೆಚ್ಚಿನ ಸಭೆಗಳ ಅಧಿಕಾಂಶ ಹಿರಿಯರು ಮಹಾ ಸಮೂಹದವರಾಗಿರುತ್ತಾರೆ. (ಪ್ರಕಟನೆ 1:16; 7:9) ಅವರ ಸ್ಥಾನವೇನು? ಅವರು ತಮ್ಮ ನೇಮಕವನ್ನು ಅಭಿಷಿಕ್ತ ನಂಬಿಗಸ್ತನೂ, ವಿವೇಕಿಯೂ ಆದ ಆಳು ವರ್ಗದ ಮೂಲಕ ಪವಿತ್ರಾತ್ಮದಿಂದ ಪಡೆದಿರುವುದರಿಂದ, ಇವರು ಕ್ರಿಸ್ತನ ಬಲಗೈ ಹತೋಟಿಯ ಕೆಳಗಿದ್ದಾರೆಂದು ಹೇಳಸಾಧ್ಯವಿದೆ. ಯಾಕಂದರೆ ಅವರು ಕೂಡ ಆತನ ಉಪಕುರುಬರಾಗಿರುತ್ತಾರೆ. (ಯೆಶಾಯ 61:5, 6; ಅ. ಕೃತ್ಯಗಳು 20:28) ಎಲ್ಲಿ ಅರ್ಹರಾದ ಅಭಿಷಿಕ್ತ ಸಹೋದರರು ದೊರಕುವುದಿಲ್ಲವೋ ಅಲ್ಲಿ ಸೇವೆ ಸಲ್ಲಿಸುವುದರ ಮೂಲಕ “ಏಳು ನಕ್ಷತ್ರಗಳನ್ನು” ಇವರು ಬೆಂಬಲಿಸುತ್ತಾರೆ.

[ಅಧ್ಯಯನ ಪ್ರಶ್ನೆಗಳು]

[ಪುಟ 240 ರಲ್ಲಿರುವ ಚಿತ್ರ]

ಕ್ರೈಸ್ತ ಪ್ರಪಂಚದ ನೀರುಗಳು ಮಾಚಿಪತ್ರೆಯದ್ದಾಗಿ ತೋರಿಸಲ್ಪಟ್ಟದ್ದು

ಕ್ರೈಸ್ತ ಪ್ರಪಂಚದ ನಂಬಿಕೆಗಳು ಬೈಬಲು ನಿಜವಾಗಿ ಏನನ್ನು

ಮತ್ತು ಮನೋಭಾವಗಳು ಹೇಳುತ್ತದೆ

ದೇವರ ವೈಯಕ್ತಿಕ ದೇವರ ಹೆಸರು ಪವಿತ್ರಮಾಡಲ್ಪಡಲಿಕ್ಕಾಗಿ

ಹೆಸರು ಅಪ್ರಾಮುಖ್ಯವಾಗಿದೆ: ಯೇಸುವು ಪ್ರಾರ್ಥಿಸಿದನು.

“ಒಬ್ಬನೇ ಮತ್ತುಏಕಮಾತ್ರ ಪೇತ್ರನು ಅಂದದ್ದು:

ದೇವರಿಗೆ ಒಂದುಅನರ್ಥ್ವಕ “ಯೆಹೋವನ ನಾಮವನ್ನು

ನಾಮವನ್ನು ಬಳಸುವುದು. . . ಹೇಳಿಕೊಳ್ಳುವವರೆಲ್ಲರಿಗೆ

ಕ್ರೈಸ್ತ ಚರ್ಚಿನ ವಿಶ್ವವ್ಯಾಪಕತೆಯ ರಕ್ಷಣೆಯಾಗುವುದು.”

ನಂಬಿಕೆಗೆ ಪೂರ್ಣವಾಗಿ (ಅ. ಕೃತ್ಯಗಳು 2:21, NW;

ಅಸಮಂಜಸವಾಗಿದೆ.” ಯೋವೇಲ 2:32; ಮತ್ತಾಯ 6:9;

(ರಿವೈಸ್ಡ್‌ ಸ್ಟ್ಯಾಂಡರ್ಡ್‌ ವಿಮೋಚನಕಾಂಡ 6:3; ಪ್ರಕಟನೆ 4:11;

ವರ್ಷನ್‌ನ ಮುನ್ನುಡಿ) 15:3; 19:6)

ದೇವರು ಒಬ್ಬ ಬೈಬಲು ಹೇಳುವುದೇನಂದರೆ ಯೆಹೋವನು

ತ್ರಯೈಕ್ಯನು:“ತಂದೆಯು ಯೇಸುವಿಗಿಂತ ದೊಡ್ಡವನು

ದೇವರು, ಮಗನು ಮತ್ತು ಕ್ರಿಸ್ತನ ದೇವರು

ದೇವರು ಮತ್ತು ಹಾಗೂ ಶಿರಸ್ಸು ಆಗಿದ್ದಾನೆ.

ಪವಿತ್ರಾತ್ಮನು ದೇವರು, (ಯೋಹಾನ 14:28; 20:17;

ಮತ್ತು ಆದರೂ, ಮೂವರು 1 ಕೊರಿಂಥ 11:3)

ದೇವರುಗಳು ಇಲ್ಲ, ಪವಿತ್ರಾತ್ಮವು ದೇವರ

ಬದಲಿಗೆ ಒಬ್ಬನೇ ದೇವರು.” ಕ್ರಿಯಾಶಾಲಿ ಶಕ್ತಿಯಾಗಿದೆ.

(ದ ಕ್ಯಾತೊಲಿಕ್‌ (ಮತ್ತಾಯ 3:11;

ಎನ್‌ಸೈಕ್ಲೊಪೀಡಿಯ, ಲೂಕ 1:41;

1912ರ ಮುದ್ರಣ) ಅ. ಕೃತ್ಯಗಳು 2:4)

ಮಾನವ ಆತ್ಮವು ಮನುಷ್ಯನು ಒಂದು

ಅಮರವಾಗಿದೆ: “ಮನುಷ್ಯನು ಆತ್ಮ ಆಗಿದ್ದಾನೆ.

ಸಾಯುವಾಗ ಆತನ ಮರಣದಲ್ಲಿ ಆತ್ಮವು

ಆತ್ಮ ಮತ್ತು ಶರೀರ ಆಲೋಚಿಸುವುದನ್ನು

ಪ್ರತ್ಯೇಕಗೊಳ್ಳುತ್ತದೆ. ಯಾ ಭಾವಿಸುವುದನ್ನು ನಿಲ್ಲಿಸುತ್ತದೆ

ಅವನ ಶರೀರವು . . . ಮತ್ತು ಯಾವುದರಿಂದ ಅದು

ಕೊಳೆಯುತ್ತದೆ . . . ಆದಾಗ್ಯೂ, ಮಾಡಲ್ಪಟ್ಟಿದೆಯೋ ಆ

ಮಾನವ ಆತ್ಮವು ಸಾಯುವುದಿಲ್ಲ.” ಮಣ್ಣಿಗೆ ಅದು ಹಿಂತೆರಳುತ್ತದೆ.

(ಮರಣಾನಂತರ (ಆದಿಕಾಂಡ 2:7; 3:19; ಕೀರ್ತನೆ 146:3, 4;

ಏನಾಗುತ್ತದೆ,[ಇಂಗ್ಲಿಷಿನಲ್ಲಿ] ಪ್ರಸಂಗಿ 3:19, 20;

ಒಂದು ರೋಮನ್‌ 9:5, 10;

ಕ್ಯಾತೊಲಿಕ್‌ ಪ್ರಕಾಶನ) ಯೆಹೆಜ್ಕೇಲ 18:4, 20)

ದುಷ್ಟರು ಮರಣಾನಂತರ ಪಾಪದ ಸಂಬಳ ಮರಣ,

ನರಕದಲ್ಲಿ ದಂಡಿಸಲ್ಪಡುತ್ತಾರೆ: ಯಾತನೆಯ ಜೀವಿತವಲ್ಲ.

“ಸಾಂಪ್ರದಾಯಿಕ ಕ್ರೈಸ್ತ (ರೋಮಾಪುರ 6:23)

ನಂಬಿಕೆಗನುಸಾರ ನರಕವು ಸತ್ತವರು ನರಕ

ಕೊನೆಗೊಳ್ಳದ ವೇದನೆ ಮತ್ತು (ಹೇಡೀಸ್‌, ಶಿಯೋಲ್‌)

ಯಾತನೆಯ ಸ್ಥಳವಾಗಿದೆ.” ದಲ್ಲಿ ಪ್ರಜ್ಞಾಹೀನರಾಗಿದ್ದು,

(ದ ವರ್ಲ್ಡ್‌ ಬುಕ್‌ ಪುನರುತ್ಥಾನವೊಂದನ್ನು ಮುನ್ನೋಡುತ್ತಾರೆ.

ಎನ್‌ಸೈಕ್ಲೊಪೀಡಿಯ, (ಕೀರ್ತನೆ 89:48; ಯೋಹಾನ 5:28, 29;

1987ರ ಮುದ್ರಣ) 11:24, 25; ಪ್ರಕಟನೆ 20:13, 14)

“ಮೀಡಿಯೇಟ್ರಿಕ್ಸ್‌ ಬಿರುದು ಏಕಮಾತ್ರ ಮಧ್ಯಸ್ಥನು

[ಸ್ತ್ರೀ ಮಧ್ಯಸ್ಥಳು] ದೇವರ ಮತ್ತು ಮನುಷ್ಯರ

ನಮ್ಮ ಮಾತೆಗೆ ಅನ್ವಯಿಸುತ್ತದೆ.” ನಡುವೆ ಯೇಸು ಆಗಿರುತ್ತಾನೆ.

(ನ್ಯೂ ಕ್ಯಾತೊಲಿಕ್‌ (ಯೋಹಾನ 14:6;

ಎನ್‌ಸೈಕ್ಲೊಪೀಡಿಯ, 1 ತಿಮೊಥೆಯ 2:5;

1967ರ ಮುದ್ರಣ) ಇಬ್ರಿಯ 9:15; 12:24)

ಶಿಶುಗಳು ದೀಕ್ಷಾಸ್ನಾನ ದೀಕ್ಷಾಸ್ನಾನವು ಶಿಷ್ಯರಾಗಿ

ಹೊಂದಬೇಕು: “ಆದಿಯಿಂದಲೂ ಮಾಡಲ್ಪಟ್ಟವರಿಗಾಗಿ ಮತ್ತು

ಚರ್ಚು ಶಿಶುಸ್ನಾನದ ಯೇಸುವಿನ ಅಪ್ಪಣೆಗಳಿಗೆ

ಮತಸಂಸ್ಕಾರವನ್ನು ವಿಧೇಯರಾಗಲು ಕಲಿಸಲ್ಪಟ್ಟವರಿಗಾಗಿ

ನೀಡುತ್ತಾ ಇದೆ. ಇರುತ್ತದೆ. ದೀಕ್ಷಾಸ್ನಾನಕ್ಕೆ ಅರ್ಹನಾಗಲು,

ಈ ಆಚಾರವು ಬರೇ ವ್ಯಕ್ತಿಯೊಬ್ಬನು ದೇವರ ವಾಕ್ಯವನ್ನು

ನಿಯಮಬದ್ಧವೆಂದು ತಿಳಿದುಕೊಳ್ಳಬೇಕು ಮತ್ತು

ಪರಿಗಣಿಸಲ್ಪಟ್ಟದ್ದು ಮಾತ್ರವಲ್ಲ, ನಂಬಿಕೆಯನ್ನು ತೋರಿಸತಕ್ಕದ್ದು.

ಅದು ರಕ್ಷಣೆಗೆ ಖಂಡಿತವಾಗಿ (ಮತ್ತಾಯ 28:19, 20;

ಆವಶ್ಯಕವೆಂದು ಕಲಿಸಲ್ಪಡಲಾಗುತ್ತಿದೆ.” ಲೂಕ 3:21-23;

(ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ, ಅ. ಕೃತ್ಯಗಳು

1967ರ ಮುದ್ರಣ) 8:35, 36)

ಅನೇಕ ಚರ್ಚುಗಳು ಮೊದಲನೆಯ ಶತಕದ ಎಲ್ಲ

ಸಾಮಾನ್ಯ ಜನವರ್ಗ ಮತ್ತು ಕ್ರೈಸ್ತರು ಶುಶ್ರೂಷಕರಾಗಿದ್ದರು

ಸಾಮಾನ್ಯ ಜನರ ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ

ಶುಶ್ರೂಷೆ ನಡಿಸುವ ಪಾಲಿಗರಾಗಿದ್ದರು.

ವೈದಿಕವರ್ಗವಾಗಿ ವಿಭಜಿತಗೊಂಡಿವೆ. (ಅ. ಕೃತ್ಯಗಳು 2:17, 18;

ವೈದಿಕರ ಶುಶ್ರೂಷೆಗಾಗಿ ಅವರಿಗೆ ರೋಮಾಪುರ 10:10-13; 16:1)

ಸಂಬಳವನ್ನು ಸಾಮಾನ್ಯವಾಗಿ ಕ್ರೈಸ್ತನೊಬ್ಬನು “ಉಚಿತವಾಗಿ”

ಬದಲಿಯಾಗಿ ಕೊಡಲಾಗುತ್ತದೆ ಕೊಡಬೇಕು, ಸಂಬಳಕ್ಕಾಗಿ ಅಲ್ಲ.

ಮತ್ತು “ರೆವರೆಂಡ್‌” (ಮತ್ತಾಯ 10:7, 8)

“ಫಾದರ್‌” ಯಾ “ಹಿಸ್‌ ಧಾರ್ಮಿಕ ಬಿರುದುಗಳ ಬಳಸುವಿಕೆಯನ್ನು

ಎಮಿನೆನ್ಸ್‌” ಮುಂತಾದ ಯೇಸುವು ಖಡಾಖಂಡಿತವಾಗಿ

ಬಿರುದುಗಳಿಂದ ಅವರು ನಿಷೇಧಿಸಿದನು. (ಮತ್ತಾಯ 6:2;

ಸಾಮಾನ್ಯರಿಗಿಂತ 23:2-12;

ಮೇಲಕ್ಕೇರಿಸಲ್ಪಟ್ಟಿರುತ್ತಾರೆ. 1 ಪೇತ್ರ 5:1-3)

ಪ್ರತಿಮೆಗಳು, ಮೂರ್ತಿಗಳು ಕ್ರೈಸ್ತರು ಪಲಾಯನ ಮಾಡತಕ್ಕದ್ದು

ಮತ್ತು ಕ್ರೂಜೆಗಳು ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ,

ಆರಾಧನೆಯಲ್ಲಿ ಬಳಸಲ್ಪಡುತ್ತವೆ: ಸಂಬಂಧಿತ ಆರಾಧನೆಯೆಂದು

“ಕ್ರಿಸ್ತನ . . . ದೇವರ ಕರೆಯಲ್ಪಡುವುದರಿಂದ ಸಹ.

ಕನ್ನಿಕೆ ತಾಯಿಯ ಮತ್ತು (ವಿಮೋಚನಕಾಂಡ 20:4, 5;

ಇತರ ಸಂತರುಗಳ 1 ಕೊರಿಂಥ 10:14; 1 ಯೋಹಾನ 5:21)

ಪ್ರತಿಮೆಗಳನ್ನು. . . ಅವರು ದೇವರನ್ನು

ಚರ್ಚುಗಳಲ್ಲಿ ಇಡಬೇಕು ನೋಡುವದರಿಂದಲ್ಲ, ಬದಲಾಗಿ

ಮತ್ತು ಅವುಗಳಿಗೆ ತಕ್ಕದ್ದಾದ ಆತ್ಮ ಮತ್ತು ಸತ್ಯದಿಂದ

ಗೌರವ ಮತ್ತು ಮಾನವನ್ನು ಆರಾಧಿಸುತ್ತಾರೆ.

ಕೊಡತಕ್ಕದ್ದು.” (ಕೌನ್ಸಿಲ್‌ ಆಫ್‌ (ಯೋಹಾನ 4:23, 24;

ಟ್ರೆಂಟ್‌ನ ಘೋಷಣೆ, [1545-63]) 2 ಕೊರಿಂಥ 5:7)

ಚರ್ಚು ಸದಸ್ಯರುಗಳಿಗೆ ಯೇಸುವು ದೇವರ ರಾಜ್ಯವನ್ನು

ದೇವರ ಉದ್ದೇಶಗಳು ಪ್ರಚುರಪಡಿಸಿದನು, ಮಾನವ

ರಾಜಕೀಯದ ಮೂಲಕ ಕುಲದ ನಿರೀಕ್ಷೆಯೋಪಾದಿ,

ಪೂರೈಸಲ್ಪಡಲಾಗುವದೆಂದು ಯಾವುದೇ ಒಂದು ರಾಜಕೀಯ

ಕಲಿಸಲಾಗುತ್ತದೆ. ಮಾಜಿ ವ್ಯವಸ್ಥೆಯನ್ನಲ್ಲ.

ಕಾರ್ಡಿನಲ್‌ ಸ್ಪೆಲ್‌ಮೆನ್‌ ಹೇಳಿದ್ದು: (ಮತ್ತಾಯ 4:23; 6:9, 10)

“ಶಾಂತಿಗಾಗಿ ಕೇವಲ ಒಂದೇ ಅವನು ರಾಜಕೀಯದಲ್ಲಿ

ಒಂದು ದಾರಿಯಿದೆ . . . ಸೇರ್ಪಡೆಗೊಳ್ಳಲು ನಿರಾಕರಿಸಿದನು.

ಪ್ರಜಾಪ್ರಭುತ್ವದ ಹೆದ್ದಾರಿ.” (ಯೋಹಾನ 6:14, 15)

ಲೋಕದ ರಾಜಕೀಯದಲ್ಲಿ ಅವನ ರಾಜ್ಯವು ಈ ಲೋಕದ

ಧರ್ಮಗಳ ಒಳಗೂಡುವಿಕೆಯನ್ನು ಭಾಗವಾಗಿರಲಿಲ್ಲ;

(ಬಂಡಾಯಗಳಲ್ಲಿ ಸಹ) ಆದಕಾರಣ ಅವನ ಹಿಂಬಾಲಕರು

ಮತ್ತು “ಶಾಂತಿ ಮತ್ತು ಈ ಲೋಕದ ಭಾಗವಾಗಿರಬಾರದು.

ಒಕ್ಕಟ್ಟಿನ ಕೊನೆಯ ನಿರೀಕ್ಷೆ” ಯಾಗಿ (ಯೋಹಾನ 18:36; 17:16)

ಸಂಯುಕ್ತ ರಾಷ್ಟ್ರ ಸಂಘಕ್ಕೆ ಲೋಕದ ಸ್ನೇಹತನದ ವಿರುದ್ಧ

ಅವಳ ಬೆಂಬಲವನ್ನು ವಾರ್ತಾ ಯಾಕೋಬನು ಎಚ್ಚರಿಸಿದ್ದಾನೆ.

ಪತ್ರಗಳು ವರದಿಸುತ್ತವೆ. (ಯಾಕೋಬ 4:4)

[Picture on page 132]

ಏಳು ಮುದ್ರೆಗಳ ಒಡೆಯುವಿಕೆಯು ಏಳು ತುತೂರಿಗಳ ಊದುವಿಕೆಗೆ ನಡೆಸುತ್ತದೆ

[ಪುಟ 251 ರಲ್ಲಿರುವ ಚಿತ್ರಗಳು]

“ಲೋಕದ ಧುರೀಣರಿಗೆ ಒಂದು ಪಂಥಾಹ್ವಾನ.” (1922) “ಭೂಮಿ”ಯ ಕಡೆಗಿನ ಯೆಹೋವನ ಬಾಧೆಯನ್ನು ಪ್ರಚುರಪಡಿಸಲು ಈ ಠರಾವು ಸಹಾಯಮಾಡಿತು

“ಎಲ್ಲಾ ಕ್ರೈಸ್ತರಿಗೆ ಒಂದು ಎಚ್ಚರಿಕೆ.” (1923) ಈ ನಿರ್ಧಾರದ ಮೂಲಕ “ಸಮುದ್ರದ ಮೂರನೆಯ ಒಂದು ಭಾಗಕ್ಕೆ” ಯೆಹೋವನ ಪ್ರತಿಕೂಲ ತೀರ್ಪನ್ನು ಸವಿಸ್ತಾರವಾಗಿ ಘೋಷಿಸಲಾಯಿತು

[ಪುಟ 252 ರಲ್ಲಿರುವ ಚಿತ್ರಗಳು]

“ಕ್ರೈಸ್ತ ಪಾದ್ರಿಗಳು ಆಪಾದಿಸಲ್ಪಟ್ಟಿದ್ದಾರೆ.” (1924) ಕ್ರೈಸ್ತಪ್ರಪಂಚದ ವೈದಿಕರ “ನಕ್ಷತ್ರ” ಪತನಗೊಂಡಿದೆ ಎಂಬದನ್ನು ಜನರ ಗಮನಕ್ಕೆ ತರಲು ಈ ಕರಪತ್ರದ ವ್ಯಾಪಕವಾದ ಪ್ರಸಾರವು ಸಹಾಯಮಾಡಿತು

“ನಿರೀಕ್ಷೆಯ ಸಂದೇಶ” (1925) ಕ್ರೈಸ್ತಪ್ರಪಂಚದ ಬೆಳಕಿನ ಉಗಮಗಳೆಂದು ಹೇಳಿದವುಗಳು ವಾಸ್ತವದಲ್ಲಿ ಕತ್ತಲೆಯ ಉಗಮಗಳೆಂದು ಬಯಲುಗೊಳಿಸಲು ಈ ನೇರವಾದ ಠರಾವು ಬಳಸಲ್ಪಟ್ಟಿತು