ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಯಶಾಲಿಗಳಾಗಲು ಹೆಣಗಾಡುವುದು

ಜಯಶಾಲಿಗಳಾಗಲು ಹೆಣಗಾಡುವುದು

ಅಧ್ಯಾಯ 8

ಜಯಶಾಲಿಗಳಾಗಲು ಹೆಣಗಾಡುವುದು

ಸ್ಮುರ್ನ

1. (ಎ) ಮಹಿಮೆಗೇರಿಸಲ್ಪಟ್ಟ ಯೇಸುವಿನಿಂದ ನಂತರ ಯಾವ ಸಭೆಯು ಸಂದೇಶವೊಂದನ್ನು ಪಡೆಯುತ್ತದೆ? (ಬಿ) “ಮೊದಲನೆಯವನೂ ಕಡೆಯವನೂ” ಎಂದು ತನ್ನನ್ನು ಕರೆಯಿಸಿಕೊಳ್ಳುವುದರಿಂದ, ಆ ಸಭೆಯ ಕ್ರೈಸ್ತರಿಗೆ ಯಾವುದನ್ನು ಯೇಸುವು ನೆನಪಿಸುತ್ತಾನೆ?

ಇಂದು, ಪುರಾತನ ಎಫೆಸವು ಹಾಳುಗೆಡವಲ್ಪಟ್ಟಿರುತ್ತದೆ. ಆದರೆ ಯೇಸುವಿನ ಎರಡನೆಯ ಸಂದೇಶದ ಗಮ್ಯಸ್ಥಾನವು ಈಗಲೂ ಸಡಗರದ ನಗರವೊಂದರ ನಿವೇಶನವಾಗಿದೆ. ಎಫೆಸದ ಭಗ್ನಾವಶೇಷಗಳ ಸುಮಾರು 35 ಮೈಲು ಉತ್ತರಕ್ಕೆ ಟರ್ಕಿಶ್‌ ನಗರವಾದ ಇಸ್ಮೀರ್‌ ಇದೆ, ಇಲ್ಲಿ ಇಂದು ಕೂಡ ಯೆಹೋವನ ಸಾಕ್ಷಿಗಳ ಒಂದು ಹುರುಪುಳ್ಳ ಸಭೆಯು ಕಾಣಸಿಗುತ್ತದೆ. ಇಲ್ಲಿ, ಮೊದಲನೆಯ ಶತಕದಲ್ಲಿ ಸ್ಮುರ್ನವು ಇತ್ತು. ಈಗ, ಯೇಸುವಿನ ಮುಂದಿನ ಮಾತುಗಳನ್ನು ಗಮನಿಸಿರಿ: “ಮತ್ತು ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ: ‘ಮೊದಲನೆಯವನೂ ಕಡೆಯವನೂ,’ ಸತ್ತವನಾಗಿದ್ದು ಪುನಃ ಜೀವಿತನಾಗಿರುವವನು ಹೇಳುವ ಸಂಗತಿಗಳಿವು.” (ಪ್ರಕಟನೆ 2:8, NW)  ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಇದನ್ನು ಹೇಳುವುದರ ಮೂಲಕ, ಯೆಹೋವನಿಂದ ನೇರವಾಗಿ ಅಮರ ಆತ್ಮ ಜೀವಕ್ಕೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ತಾನು ಮೊದಲನೆಯ ಸಮಗ್ರತೆ ಪಾಲಕನು ಮತ್ತು ಹಾಗೆ ಎಬ್ಬಿಸಲ್ಪಡುವವರಲ್ಲಿ ತಾನು ಕಡೆಯವನು ಎಂಬುದನ್ನು ಯೇಸುವು ನೆನಪಿಸುತ್ತಾನೆ. ಇನ್ನಿತರ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಯೇಸುವು ತಾನೇ ಪುನರುತ್ಥಾನಗೊಳಿಸಲಿಕ್ಕಿರುವನು. ಈ ರೀತಿಯಲ್ಲಿ, ಅವನೊಂದಿಗೆ ಸ್ವರ್ಗೀಯ ಅಮರ ಜೀವಿತದಲ್ಲಿ ಭಾಗಿಗಳಾಗುವ ನಿರೀಕ್ಷೆಯಿರುವ ಅವನ ಸಹೋದರರಿಗೆ ಬುದ್ಧಿವಾದವನ್ನು ಕೊಡಲು ಅವನು ಚೆನ್ನಾಗಿ ಅರ್ಹತೆಯುಳ್ಳವನಾಗಿದ್ದಾನೆ.

2. “ಸತ್ತವನಾದನು ಮತ್ತು ಪುನಃ ಜೀವಿತನಾದನು” ಎಂಬವನ ಮಾತುಗಳಿಂದ ಎಲ್ಲಾ ಕ್ರೈಸ್ತರು ಏಕೆ ಸಂತೈಸಲ್ಪಡುತ್ತಾರೆ?

2 ನೀತಿಗೋಸ್ಕರವಾಗಿ ಹಿಂಸೆಯನ್ನು ತಾಳಿಕೊಳ್ಳುವುದರಲ್ಲಿ ಯೇಸುವು ಮುಂದಾಳಾದನು, ಮತ್ತು ಅವನು ತಕ್ಕ ಬಹುಮಾನವನ್ನು ಪಡೆದನು. ಮರಣದ ತನಕದ ಅವನ ನಂಬಿಗಸ್ತಿಕೆ ಮತ್ತು ತದನಂತರದ ಅವನ ಪುನರುತ್ಥಾನ ಎಲ್ಲಾ ಕ್ರೈಸ್ತರ ನಿರೀಕ್ಷೆಗೆ ಆಧಾರವಾಗಿರುತ್ತದೆ. (ಅ. ಕೃತ್ಯಗಳು 17:31) ಯೇಸುವು “ಸತ್ತವನಾದನು ಮತ್ತು ಪುನಃ ಜೀವಿತನಾದನು” ಎಂಬ ವಾಸ್ತವತೆಯು ರುಜುಪಡಿಸುವದೇನಂದರೆ ಸತ್ಯಕ್ಕೋಸ್ಕರವಾಗಿ ಏನು ತಾಳಿಕೊಂಡರೂ, ಅದು ವ್ಯರ್ಥವಲ್ಲ. ಯೇಸುವಿನ ಪುನರುತ್ಥಾನವು ಎಲ್ಲಾ ಕ್ರೈಸ್ತರಿಗೆ ಅಗಾಧ ಪ್ರೋತ್ಸಾಹದ ಮೂಲವಾಗಿರುತ್ತದೆ, ವಿಶೇಷವಾಗಿ ನಂಬಿಕೆಗೋಸ್ಕರ ಬಾಧೆ ಪಡುವಂತೆ ಅವರು ಕರೆಯಲ್ಪಡುವಾಗ. ಇದು ನಿಮ್ಮ ಪರಿಸ್ಥಿತಿಯಾಗಿದೆಯೇ? ಹಾಗಿರುವುದಾದರೆ, ಸ್ಮುರ್ನ ಸಭೆಗೆ ಕೊಟ್ಟ ಯೇಸುವಿನ ಮುಂದಿನ ಮಾತುಗಳಲ್ಲಿ ನೀವು ಧೈರ್ಯವನ್ನು ಪಡೆಯಸಾಧ್ಯವಿದೆ:

3. (ಎ) ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಯೇಸುವು ಯಾವ ಪ್ರೋತ್ಸಾಹವನ್ನು ಕೊಟ್ಟನು? (ಬಿ) ಸ್ಮುರ್ನದಲ್ಲಿರುವ ಕ್ರೈಸ್ತರು ಬಡವರಾದರೂ, ಅವರು “ಐಶ್ವರ್ಯವಂತರು” ಎಂದು ಯೇಸು ಹೇಳಿದ್ದು ಯಾಕೆ?

3“ನಾನು ನಿನ್ನ ಸಂಕಟವನ್ನು ಮತ್ತು ಬಡತನವನ್ನು—ಆದರೆ ನೀನು ಐಶ್ವರ್ಯವಂತನು—ಮತ್ತು ಯೆಹೂದ್ಯರು ತಾವೇ ಎಂದು ಹೇಳಿಕೊಳ್ಳುವವರ ದೇವದೂಷಣೆಯನ್ನು ಬಲ್ಲೆನು, ಆದರೂ ಅವರು ಹಾಗಲ್ಲ, ಅವರು ಸೈತಾನನ ಸಭಾಮಂದಿರವಾಗಿದ್ದಾರೆ.” (ಪ್ರಕಟನೆ 2:9, NW) ಸ್ಮುರ್ನದಲ್ಲಿರುವ ತನ್ನ ಸಹೋದರರಿಗಾಗಿ ಯೇಸುವಿನಲ್ಲಿ ಕೇವಲ ಉತ್ಸಾಹದ ಶ್ಲಾಘನೆಯಿತ್ತೇ ಹೊರತು ಟೀಕೆ ಇರಲಿಲ್ಲ. ಅವರ ನಂಬಿಕೆಯ ಕಾರಣ ಅವರು ಅಧಿಕವಾದ ಸಂಕಟದ ಬಾಧೆಗೊಳಗಾಗಿದ್ದರು. ಪ್ರಾಪಂಚಿಕವಾಗಿ ಅವರು ಬಡವರಾಗಿದ್ದಾರೆ, ಪ್ರಾಯಶಃ ಅವರ ನಂಬಿಗಸ್ತಿಕೆಯ ಕಾರಣದಿಂದ. (ಇಬ್ರಿಯ 10:34) ಆದಾಗ್ಯೂ, ಅವರ ಮುಖ್ಯ ಆಸಕ್ತಿಯು ಆತ್ಮಿಕ ಸಂಗತಿಗಳಾಗಿದ್ದವು, ಮತ್ತು ಯೇಸುವು ಸಲಹೆಯನ್ನಿತ್ತಂತೆ, ಅವರು ಪರಲೋಕದಲ್ಲಿ ತಮ್ಮ ಐಶ್ವರ್ಯವನ್ನು ಶೇಖರಿಸಿದ್ದರು. (ಮತ್ತಾಯ 6:19, 20) ಆದಕಾರಣ, ಮುಖ್ಯ ಕುರುಬನು ಅವರನ್ನು “ಐಶ್ವರ್ಯವಂತ” ರಾಗಿ ವೀಕ್ಷಿಸುತ್ತಾನೆ.—ಹೋಲಿಸಿರಿ ಯಾಕೋಬ 2:5.

4. ಸ್ಮುರ್ನದ ಕ್ರೈಸ್ತರು ಯಾರಿಂದ ಹೆಚ್ಚಾಗಿ ವಿರೋಧವನ್ನು ಪಡೆದರು, ಮತ್ತು ಆ ವಿರೋಧಕರನ್ನು ಯೇಸುವು ಹೇಗೆ ವೀಕ್ಷಿಸಿದನು?

4 ಮಾಂಸಿಕ ಯೆಹೂದ್ಯರ ಹಸ್ತಗಳಿಂದ ಸ್ಮುರ್ನದಲ್ಲಿರುವ ಕ್ರೈಸ್ತರು ಬಹಳಷ್ಟು ವಿರೋಧವನ್ನು ಸಹಿಸಿಕೊಳ್ಳಬೇಕಾಯಿತು ಎಂಬುದನ್ನು ಯೇಸುವು ವಿಶೇಷವಾಗಿ ಗಮನಿಸುತ್ತಾನೆ. ಮುಂಚಿನ ದಿನಗಳಲ್ಲಿ ಕ್ರೈಸ್ತತ್ವದ ಹಬ್ಬುವಿಕೆಯನ್ನು ಈ ಧರ್ಮದ ಅನೇಕರು ದೃಢತೆಯಿಂದ ವಿರೋಧಿಸಿದರು. (ಅ. ಕೃತ್ಯಗಳು 13:44, 45; 14:19) ಈಗ, ಯೆರೂಸಲೇಮಿನ ಪತನದ ಕೆಲವೇ ದಶಕಗಳಾನಂತರ, ಸ್ಮುರ್ನದಲ್ಲಿನ ಈ ಯೆಹೂದ್ಯರು ಅದೇ ರೀತಿಯ ಸೈತಾನನ ಆತ್ಮವನ್ನು ತೋರಿಸುತ್ತಿದ್ದಾರೆ. ಅವರನ್ನು “ಸೈತಾನನ ಸಭಾಮಂದಿರ” ಎಂದು ಯೇಸುವು ವೀಕ್ಷಿಸುವುದರಲ್ಲಿ ಅಚ್ಚರಿಯೇನೂ ಇಲ್ಲ! *

5. ಸ್ಮುರ್ನದ ಕ್ರೈಸ್ತರಿಗೆ ಮುಂದಕ್ಕೆ ಯಾವ ಪರೀಕ್ಷೆಗಳಿವೆ?

5 ಅಂತಹ ದ್ವೇಷದ ಎದುರಿನಲ್ಲಿ, ಸ್ಮುರ್ನದಲ್ಲಿರುವ ಕ್ರೈಸ್ತರು ಯೇಸುವಿನಿಂದ ಸಂತೈಸಲ್ಪಡುತ್ತಾರೆ: “ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಹೆದರಬೇಡ. ನೋಡು! ನೀವು ಪೂರ್ಣವಾಗಿ ಪರಿಶೋಧಿಸಲ್ಪಡುವಂತೆ, ಪಿಶಾಚನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ತಳ್ಳುತ್ತಾ ಹೋಗುವನು, ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರಬಹುದು. ಮರಣದ ತನಕ ನಂಬಿಗಸ್ತನೆಂದು ರುಜುಪಡಿಸಿಕೊಳ್ಳು, ಮತ್ತು ನಾನು ನಿಮಗೆ ಜೀವದ ಕಿರೀಟವನ್ನು ಕೊಡುವೆನು”. (ಪ್ರಕಟನೆ 2:10, NW) ಇಲ್ಲಿ ಯೇಸುವು “ನೀವು” (ಯು) ಎಂಬ ಗ್ರೀಕ್‌ ಭಾಷೆಯ ಬಹುವಚನ ರೂಪವನ್ನು ಮೂರು ಸಾರಿ ಬಳಸುತ್ತಾ, ಅವನ ಈ ಶಬ್ದವು ಇಡೀ ಸಭೆಯನ್ನು ಒಳಗೂಡಿಸುತ್ತದೆ ಎಂದು ತೋರಿಸುತ್ತಾನೆ. ಸ್ಮುರ್ನದ ಕ್ರೈಸ್ತರ ಶೋಧನೆಗಳು ಬಲುಬೇಗನೆ ಅಂತ್ಯಗೊಳ್ಳಲಿವೆ ಎಂದು ಯೇಸುವು ವಾಗ್ದಾನಿಸಲು ಸಾಧ್ಯವಿರಲಿಲ್ಲ. ಅವರಲ್ಲಿ ಕೆಲವರು ಇನ್ನೂ ಹಿಂಸಿಸಲ್ಪಡಲಿದ್ದರು ಮತ್ತು ಸೆರೆಮನೆಗೆ ದೊಬ್ಬಲ್ಪಡಲಿದ್ದರು. ಅವರಿಗೆ “ಹತ್ತು ದಿನಗಳ” ಸಂಕಟವು ಇರುವುದು. ಹತ್ತು ಸಂಖ್ಯೆಯು ಐಹಿಕ ವಿಷಯಗಳ ಪೂರ್ಣತೆಯನ್ನು ಯಾ ಸಮಗ್ರತೆಯನ್ನು ಸೂಚಿಸುತ್ತದೆ. ಆತ್ಮಿಕವಾಗಿ ಐಶ್ವರ್ಯವಂತರಾಗಿರುವ ಸಮಗ್ರತೆ ಪಾಲಕರು ಕೂಡ ದೇಹದಲ್ಲಿರುವಾಗ ಒಂದು ಅಮೂಲಾಗ್ರವಾದ ಪರಿಶೋಧನೆಯನ್ನು ಹೊಂದುವರು.

6. (ಎ) ಸ್ಮುರ್ನದ ಕ್ರೈಸ್ತರು ಯಾಕೆ ಹೆದರಬಾರದು? (ಬಿ) ಸ್ಮುರ್ನದ ಸಭೆಗೆ ತನ್ನ ಸಂದೇಶವನ್ನು ಯೇಸುವು ಹೇಗೆ ಕೊನೆಗೊಳಿಸಿದನು?

6 ಹಾಗಿದ್ದರೂ, ಸ್ಮುರ್ನದಲ್ಲಿರುವ ಕ್ರೈಸ್ತರು ಹೆದರಬಾರದು ಯಾ ಒಪ್ಪಂದಮಾಡಿಕೊಳ್ಳಬಾರದು. ಅಂತ್ಯದ ತನಕ ಅವರು ನಂಬಿಗಸ್ತರಾಗಿ ಉಳಿದರೆ, ಅವರಿಗೋಸ್ಕರ “ಜೀವದ ಕಿರೀಟ” ಬಹುಮಾನವಾಗಿ ಇಡಲ್ಪಡುತ್ತದೆ, ಅಂದರೆ ಅವರ ಸಂಬಂಧದಲ್ಲಿ ಅದು ಪರಲೋಕದಲ್ಲಿ ಅಮರ ಜೀವವಾಗಿದೆ. (1 ಕೊರಿಂಥ 9:25; 2 ತಿಮೊಥೆಯ 4:6-8) ಈ ಅಮೂಲ್ಯವಾದ ಬಹುಮಾನವು ಬೇರೆ ಎಲ್ಲಾದರ ತ್ಯಾಗಕ್ಕೆ—ತನ್ನ ಐಹಿಕ ಜೀವ ಸಹಿತ—ಅರ್ಹವಾಗಿದೆ ಎಂಬದಾಗಿ ಅಪೊಸ್ತಲ ಪೌಲನು ಪರಿಗಣಿಸಿದನು. (ಫಿಲಿಪ್ಪಿ 3:8) ಸ್ಮುರ್ನದಲ್ಲಿರುವ ನಂಬಿಗಸ್ತರು ಕೂಡ ಅದೇ ರೀತಿ ಎಣಿಸಿರಬೇಕೆಂದು ವಿದಿತವಾಗುತ್ತದೆ. ಹೀಗೆ ಹೇಳುವುದರಿಂದ ಯೇಸುವು ಅವನ ಸಂದೇಶವನ್ನು ಕೊನೆಗೊಳಿಸುತ್ತಾನೆ: “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.” (ಪ್ರಕಟನೆ 2:11, NW) ಜಯಹೊಂದುವವರಿಗೆ ಮರಣದಿಂದ ಸ್ಪರ್ಶಿಸಲ್ಪಡಲಾರದಂತಹ ಸ್ವರ್ಗೀಯ ಅಮರ ಜೀವದ ಆಶ್ವಾಸನೆಯನ್ನೀಯಲಾಗಿದೆ.—1 ಕೊರಿಂಥ 15:53, 54.

“ಹತ್ತು ದಿವಸಗಳ ಸಂಕಟ”

7, 8. ಸ್ಮುರ್ನದ ಸಭೆಯಂತೆ, 1918 ರಲ್ಲಿ ಕ್ರೈಸ್ತ ಸಭೆಯು ‘ಪೂರ್ಣವಾಗಿ ಪರಿಶೋಧನೆಗೆ’ ಒಳಪಟ್ಟದ್ದು ಹೇಗೆ?

7 ಬಹುಮಟ್ಟಿಗೆ ಸ್ಮುರ್ನದ ಕ್ರೈಸ್ತರಂತೆಯೇ, ಯೋಹಾನ ವರ್ಗವು ಮತ್ತು ಅವರ ಸಂಗಾತಿಗಳು ಇಂದು “ಪೂರ್ಣವಾಗಿ ಪರಿಶೋಧಿಸಲ್ಪಡುತ್ತಾ” ಇದ್ದಾರೆ ಮತ್ತು ಪರಿಶೋಧಿಸಲ್ಪಡುತ್ತಾ ಇರುವರು. ಶೋಧನೆಯ ಕೆಳಗೆ ಅವರ ನಂಬಿಗಸ್ತಿಕೆಯು ಅವರನ್ನು ದೇವರ ಸ್ವಕೀಯ ಜನರೆಂದು ಗುರುತಿಸುತ್ತದೆ. (ಮಾರ್ಕ 13:9, 10) ಕರ್ತನ ದಿನವು ಆರಂಭಗೊಂಡ ಸ್ವಲ್ಪ ಸಮಯದ ನಂತರ, ಯೆಹೋವನ ಜನರ ಒಂದು ಚಿಕ್ಕ ಅಂತಾರಾಷ್ಟ್ರೀಯ ಗುಂಪಿಗೆ, ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಕೊಟ್ಟ ಯೇಸುವಿನ ಮಾತುಗಳು ನಿಜ ಸಂತೈಸುವಿಕೆಯನ್ನು ತಂದವು. (ಪ್ರಕಟನೆ 1:10) ಇವರು 1879 ರಿಂದ ಆತ್ಮಿಕ ಐಶ್ವರ್ಯವನ್ನು ದೇವರ ವಾಕ್ಯದಿಂದ ಅಗೆಯುತ್ತಾ ಇದ್ದರು, ಅದನ್ನು ಅವರು ಇತರರೊಂದಿಗೆ ಉದಾರವಾಗಿ ಹಂಚಿದರು. ಆದರೆ ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ, ಅವರು ತೀವ್ರವಾದ ದ್ವೇಷ ಮತ್ತು ವಿರೋಧವನ್ನು ಎದುರಿಸಬೇಕಾಯಿತು, ಆಂಶಿಕವಾಗಿ ಅವರು ಯುದ್ಧದ ತಾಪದಲ್ಲಿ ತಮ್ಮನ್ನು ಒಳಗೂಡಿಸಿಕೊಳ್ಳದಿದ್ದರೂ ಆಂಶಿಕವಾಗಿ ಅವರು ನಿರ್ಭೀತಿಯಿಂದ ಕ್ರೈಸ್ತಪ್ರಪಂಚದ ದೋಷಗಳನ್ನು ಬಹಿರಂಗಗೊಳಿಸುತ್ತಿದ್ದದ್ದೂ ಇದಕ್ಕೆ ಕಾರಣ. ಕ್ರೈಸ್ತಧರ್ಮದ ಮುಂದಾಳುಗಳಲ್ಲಿ ಕೆಲವರಿಂದ ಕೆರಳಿಸಲ್ಪಟ್ಟ ಹಿಂಸೆಯು 1918 ರಲ್ಲಿ ಮೇಲಕ್ಕೆ ಬಂತು ಮತ್ತು ಅದು ಯೆಹೂದ್ಯರ ಸಮಾಜದಿಂದ ಸ್ಮುರ್ನದ ಕ್ರೈಸ್ತರು ಏನನ್ನು ಹೊಂದಿದರೋ ಅದಕ್ಕೆ ತುಲನಾತ್ಮಕವಾಗಿತ್ತು.

8 ಅಮೆರಿಕದಲ್ಲಿ ಹಿಂಸೆಯ ಒಂದು ಅಲೆಯು, ವಾಚ್‌ ಟವರ್‌ ಸೊಸೈಟಿಯ ಹೊಸ ಅಧ್ಯಕ್ಷರಾದ ಜೋಸೆಫ್‌ ಎಫ್‌. ರಥರ್‌ಫರ್ಡ್‌ ಮತ್ತು ಏಳು ಜನ ಸಂಗಾತಿಗಳು ಜೂನ್‌ 22, 1918 ರಲ್ಲಿ ಸೆರೆಮನೆಗೆ, ಅವರಲ್ಲಿ ಹೆಚ್ಚಿನವರನ್ನು 20-ವರ್ಷಗಳಷ್ಟು ಶಿಕ್ಷೆಗೆ ಹಾಕಲ್ಪಟ್ಟಾಗ ಪರಮಾವಧಿಗೇರಿತು. ಒಂಬತ್ತು ತಿಂಗಳುಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಮೇ 14, 1919 ರಂದು, ಅಪ್ಪೀಲ್‌ ಕೋರ್ಟು ಅವರಿಗೆ ತಪ್ಪಾಗಿ ವಿಧಿಸಲ್ಪಟ್ಟ ದಂಡನೆಗಳನ್ನು ವಿಪರ್ಯಸ್ತಗೊಳಿಸಿತು; ವಿಚಾರಣೆಯಲ್ಲಿ 125 ತಪ್ಪುಗಳಿದ್ದವು ಎಂದು ತೋರಿಸಲಾಯಿತು. ಯಾರು 1918 ರಲ್ಲಿ ಈ ಕ್ರೈಸ್ತರನ್ನು ಜಾಮೀನಿನ ಮೇಲೆ ಬಿಡಲು ನಿರಾಕರಿಸಿದನೋ ಆ ಮಹಾ ಸಂತ ಗ್ರೆಗರಿಯ ವೀರಪದಕದ ಬಿರುದು ಕೊಡಲ್ಪಟ್ಟಿದ್ದ ರೋಮನ್‌ ಕ್ಯಾತೊಲಿಕ್‌ ನ್ಯಾಯಾಧೀಶ ಮೆಂಟನ್‌ನನ್ನು 1939 ರಲ್ಲಿ ಲಂಚ ಕೋರಿ ಸ್ವೀಕರಿಸಿದ ಆರು ಮೊಕದ್ದಮೆಗಳಿಗಾಗಿ, ಎರಡು ವರ್ಷದ ಸೆರೆವಾಸ ಮತ್ತು 10,000 ಡಾಲರುಗಳ ಶಿಕ್ಷೆಯನ್ನು ವಿಧಿಸಲಾಯಿತು.

9. ಹಿಟ್ಲರ್‌ನಿಂದ ನಾಜಿ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಉಪಚರಿಸಲ್ಪಟ್ಟರು, ಮತ್ತು ವೈದಿಕರಿಂದ ಯಾವ ಪ್ರತಿಕ್ರಿಯೆಯೊಂದಿಗೆ?

9 ಜರ್ಮನಿಯ ನಾಜಿ ಆಳಿಕ್ವೆಯ ಸಮಯದಲ್ಲಿ, ಯೆಹೋವನ ಸಾಕ್ಷಿಗಳ ಸಾರುವ ಕಾರ್ಯವನ್ನು ಹಿಟ್ಲರನು ಸಂಪೂರ್ಣವಾಗಿ ನಿಷೇಧಿಸಿದನು. ಕೆಲವು ವರ್ಷಗಳ ತನಕ ಸಾವಿರಾರು ಸಾಕ್ಷಿಗಳು ಕ್ರೂರವಾಗಿ ಶಿಬಿರಕೂಟಗಳಲ್ಲಿ ನಿರ್ಬಂಧಿಸಲ್ಪಟ್ಟರು, ಅಲ್ಲಿ ಅನೇಕರು ಸತ್ತರು, ಇತರ ನೂರಾರು ಯುವಕರು, ಹಿಟ್ಲರನ ಸೇನೆಯಲ್ಲಿ ಯುದ್ಧಮಾಡಲು ನಿರಾಕರಿಸಿದ್ದರಿಂದ ಹತಿಸಲ್ಪಟ್ಟರು. ಇವೆಲ್ಲವುಗಳಿಗೆ ವೈದಿಕರ ಬೆಂಬಲವಿತ್ತು ಎನ್ನುವುದಕ್ಕೆ ಮೇ 29, 1938 ರಲ್ಲಿ ದ ಜರ್ಮನ್‌ ವೇ ಎಂಬ ವಾರ್ತಾಪತ್ರಿಕೆಯಲ್ಲಿ ಕ್ಯಾತೊಲಿಕ್‌ ಪಾದ್ರಿಯೊಬ್ಬನ ಮಾತುಗಳಿಂದ ರುಜುಮಾಡಲ್ಪಟ್ಟಿದೆ: ಭಾಗಶಃ, ಅವನಂದದ್ದು: “ಭೂಮಿಯ ಮೇಲೆ ಈಗ . . . ಬೈಬಲ್‌ ವಿದ್ಯಾರ್ಥಿಗಳು [ಯೆಹೋವನ ಸಾಕ್ಷಿಗಳು] ಎಂದು ಕರೆಯಲ್ಪಡುವವರನ್ನು ನಿಷೇಧಿಸಿದ ದೇಶ ಒಂದು ಇದೆ. ಅದು ಜರ್ಮನಿ ಆಗಿರುತ್ತದೆ! . . . ಆಡಾಲ್ಫ್‌ ಹಿಟ್ಲರನು ಅಧಿಕಾರಕ್ಕೆ ಬಂದಾಗ, ಮತ್ತು ಜರ್ಮನ್‌ ಕ್ಯಾತೊಲಿಕ್‌ ಮತಪ್ರಾಂತಾಧಿಕಾರವು ಅವರ ವಿನಂತಿಯನ್ನು ಪುನಃ ಮಾಡಿದಾಗ, ಹಿಟ್ಲರನು ಅಂದದ್ದು: ‘ಅರ್ನೆಸ್ಟ್‌ ಬೈಬಲ್‌ ಸ್ಟೂಡೆಂಟ್ಸ್‌ ಎಂದು [ಯೆಹೋವನ ಸಾಕ್ಷಿಗಳು] ಕರೆಯಲ್ಪಡುವ ಇವರು ಉಪದ್ರವಕೊಡುವವರು; . . . ನಾನು ಅವರನ್ನು ಡೋಂಗಿಗಳು ಎಂದು ಎಣಿಸುತ್ತೇನೆ; ಈ ಅಮೆರಿಕನ್‌ ಜಡ್ಜ್‌ ರಥರ್‌ಫರ್ಡ್‌ರಿಂದ ಇಂತಹ ರೀತಿಯಲ್ಲಿ ಜರ್ಮನಿಯ ಕ್ಯಾತೊಲಿಕರು ಕೆಡಿಸಲ್ಪಡುವುದನ್ನು ನಾನು ಸಹಿಸಲಾರೆನು; ನಾನು ಜರ್ಮನಿಯಲ್ಲಿ [ಯೆಹೋವನ ಸಾಕ್ಷಿಗಳನ್ನು] ರದ್ದು ಮಾಡುತ್ತೇನೆ.’” ಇದಕ್ಕೆ ಪಾದ್ರಿಯು ಕೂಡಿಸಿದ್ದು: “ಶಹಭಾಸ್‌!”

10. (ಎ) ಕರ್ತನ ದಿನವು ಮುಂದರಿದಂತೆ, ಯೆಹೋವನ ಸಾಕ್ಷಿಗಳು ಯಾವ ಹಿಂಸೆಯನ್ನು ಎದುರಿಸಿದ್ದರು? (ಬಿ) ನ್ಯಾಯಾಲಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಕ್ರೈಸ್ತರು ಹೋರಾಡಿದಾಗ ಅನೇಕ ವೇಳೆ ಯಾವ ಫಲಿತಾಂಶವುಂಟಾಯಿತು?

10 ಕರ್ತನ ದಿನವು ಮುಂದರಿದಂತೆ, ಅಭಿಷಿಕ್ತ ಕ್ರೈಸ್ತರ ಮತ್ತು ಅವರ ಸಂಗಾತಿಗಳ ವಿರುದ್ಧವಾಗಿ ಹೋರಾಡುವುದನ್ನು ಸರ್ಪನು ಮತ್ತು ಅವನ ಸಂತಾನವು ಎಂದಿಗೂ ನಿಲ್ಲಿಸಲಿಲ್ಲ. ಇವರಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲಾಯಿತು ಮತ್ತು ಕ್ರೂರವಾಗಿ ಹಿಂಸಿಸಲಾಯಿತು. (ಪ್ರಕಟನೆ 12:17) ಈ ಶತ್ರುಗಳು ‘ನಿಯಮದ ಮೂಲಕ ಕೇಡನ್ನು ಕಲ್ಪಿಸುವುದನ್ನು’ ಮುಂದರಿಸಿದ್ದಾರೆ, ಆದರೆ ಯೆಹೋವನ ಜನರು ಸ್ಥಿರತೆಯಿಂದ, “ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ನಾವು ವಿಧೇಯರಾಗಬೇಕು” ಎಂದು ಪಟ್ಟುಹಿಡಿಯುತ್ತಾರೆ. (ಕೀರ್ತನೆ 94:20; ಕಿಂಗ್‌ ಜೇಮ್ಸ್‌ ವರ್ಷನ್‌; ಅ. ಕೃತ್ಯಗಳು 5:29) 1954 ರಲ್ಲಿ ವಾಚ್‌ಟವರ್‌ ಪತ್ರಿಕೆಯು ವರದಿಸಿದ್ದು: “ಗತಿಸಿದ 40 ವರ್ಷಗಳಲ್ಲಿ ಒಂದಲ್ಲದಿದ್ದರೆ ಇನ್ನೊಂದು ಸಮಯದಲ್ಲಿ 70 ಕ್ಕಿಂತಲೂ ಹೆಚ್ಚು ದೇಶಗಳು ನಿಷೇಧಿತ ಕಾನೂನು ಕ್ರಮಗಳನ್ನು ಕೈಗೊಂಡಿರುತ್ತವೆ ಮತ್ತು ಯೆಹೋವನ ಸಾಕ್ಷಿಗಳನ್ನು ಹಿಂಸಿಸಿವೆ.” ಎಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯಗಳಲ್ಲಿ ಹೋರಾಡಲು ಸಾಧ್ಯವೂ, ಅಲ್ಲಿಲ್ಲಾ ಈ ಕ್ರೈಸ್ತರು ಅದನ್ನು ಮಾಡಿರುತ್ತಾರೆ ಮತ್ತು ಅನೇಕ ದೇಶಗಳಲ್ಲಿ ಅವರು ಜನಜನಿತವಾಗಿರುವ ವಿಜಯಗಳನ್ನು ಪಡೆದಿದ್ದಾರೆ. ಅಮೆರಿಕದ ಸುಪ್ರೀಮ್‌ ಕೋರ್ಟ್‌ ಒಂದರಲ್ಲಿಯೇ ಯೆಹೋವನ ಸಾಕ್ಷಿಗಳು 23 ಅನುಕೂಲ ತೀರ್ಮಾನಗಳನ್ನು ಗೆದ್ದಿದ್ದಾರೆ.

11. ಕರ್ತನ ದಿನದಲ್ಲಿ ಅವನ ಸಾನ್ನಿಧ್ಯದ ಸೂಚನೆಯ ಯೇಸುವಿನ ಯಾವ ಪ್ರವಾದನೆಯು ಯೆಹೋವನ ಸಾಕ್ಷಿಗಳ ಮೇಲೆ ನೆರವೇರಿದೆ?

11 ಕೈಸರನ ವಿಷಯಗಳನ್ನು ಕೈಸರನಿಗೆ ಕೊಡುವ ಯೇಸುವಿನ ಆಜ್ಞೆಗೆ ವಿಧೇಯರಾಗುವುದರಲ್ಲಿ ಬೇರೆ ಯಾವ ಗುಂಪೂ ಅಷ್ಟೊಂದು ಶುದ್ಧಾಂತಃಕರಣದಿಂದ ಇದ್ದದ್ದಿಲ್ಲ. (ಲೂಕ 20:25; ರೋಮಾಪುರ 13:1, 7) ಆದರೂ, ಬೇರೆ ಬೇರೆ ವಿಧದ ಸರಕಾರಗಳ ಕೆಳಗೆ ಅಷ್ಟೊಂದು ದೇಶಗಳಲ್ಲಿ ಬೇರೆ ಯಾವ ಗುಂಪಿನ ಸದಸ್ಯರುಗಳೂ ಹೀಗೆ ಸೆರೆಮನೆಗೆ ಹಾಕಲ್ಪಟ್ಟದ್ದಿಲ್ಲ, ಮತ್ತು ಇದು ಪ್ರಚಲಿತ ಸಮಯಗಳಲ್ಲಿ ಪಶ್ಚಿಮ ಗೋಳಾರ್ಧ ದೇಶಗಳಲ್ಲಿ, ಯೂರೋಪಿನಲ್ಲಿ, ಆಫ್ರಿಕದಲ್ಲಿ, ಮತ್ತು ಏಷಿಯದಲ್ಲಿ ಮುಂದರಿಯುತ್ತಾ ಇದೆ. ಅವನ ಸಾನ್ನಿಧ್ಯದ ಸೂಚನೆಯ ಕುರಿತಾದ ಯೇಸುವಿನ ಮಹಾ ಪ್ರವಾದನೆಯಲ್ಲಿ ಈ ಮಾತುಗಳು ಕೂಡಿರುತ್ತವೆ: “ಆಗ ಜನರು ನಿಮ್ಮನ್ನು ಸಂಕಟಗಳಿಗೆ ಒಪ್ಪಿಸುವರು ಮತ್ತು ನಿಮ್ಮನ್ನು ಕೊಲ್ಲುವರು, ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲಾ ಜನಾಂಗಗಳ ದ್ವೇಷದ ಗುರಿಯಾಗುವಿರಿ.” (ಮತ್ತಾಯ 24:3, 9, NW) ಇದು ಕರ್ತನ ದಿನದಲ್ಲಿ ಯೆಹೋವನ ಕ್ರೈಸ್ತ ಸಾಕ್ಷಿಗಳಲ್ಲಿ ಖಂಡಿತವಾಗಿಯೂ ನೆರವೇರಿದೆ.

12. ಯೋಹಾನ ವರ್ಗವು ಹಿಂಸೆಯ ವಿರುದ್ಧ ದೇವಜನರನ್ನು ಬಲಗೊಳಿಸಿದ್ದು ಹೇಗೆ?

12 ಸಂಕಟದ ವಿರುದ್ಧವಾಗಿ ದೇವಜನರನ್ನು ಬಲಗೊಳಿಸಲು, ಯೋಹಾನ ವರ್ಗವು ಸ್ಮುರ್ನದಲ್ಲಿರುವ ಕ್ರೈಸ್ತರಿಗೆ ಕೊಟ್ಟ ಯೇಸುವಿನ ಮಾತುಗಳ ಸಾರಾಂಶವನ್ನು ಸತತ ನೆನಪಿಸಿದೆ. ಉದಾಹರಣೆಗಾಗಿ, ನಾಜಿ ಹಿಂಸೆಯು ಆರಂಭಿಸಿದಂತೆ, ಮತ್ತಾಯ 10:26-33ನ್ನು ಚರ್ಚಿಸಿರುವ “ಅವರಿಗೆ ಹೆದರಬೇಡಿರಿ”; ದಾನಿಯೇಲ 3:17, 18 ಮೇಲೆ ಆಧಾರಿತವಾದ “ಅಗ್ನಿ ಪರೀಕ್ಷೆ” ಮತ್ತು ದಾನಿಯೇಲ 6:22 ಮುಖ್ಯ ಆಧಾರವಚನವಾಗಿರುವ “ಸಿಂಹಗಳ ಬಾಯಿಗಳು” ಎಂಬ ಲೇಖನಗಳು 1933 ಮತ್ತು 1934ರ ದ ವಾಚ್‌ಟವರ್‌ (ಕಾವಲಿನಬುರುಜು) ನಲ್ಲಿ ಬಂದವು. 1980ರ ದಶಕದಲ್ಲಿ, 40 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕ್ರೂರವಾದ ಹಿಂಸೆಯಿಂದ ಯೆಹೋವನ ಸಾಕ್ಷಿಗಳು ಬಾಧೆಗೊಳಗಾದಾಗ, “ಹಿಂಸಿಸಲ್ಪಟ್ಟರೂ ಸಂತೋಷಿಗಳು!” ಮತ್ತು “ತಾಳ್ಮೆಯಿಂದ ಕ್ರೈಸ್ತರು ಹಿಂಸೆಯನ್ನು ಎದುರಿಸುತ್ತಾರೆ” ಎಂಬ ದ ವಾಚ್‌ಟವರ್‌ನ ಲೇಖನಗಳು ದೇವಜನರನ್ನು ಬಲಗೊಳಿಸಿದವು. *

13. ಸ್ಮುರ್ನದ ಕ್ರೈಸ್ತರಂತೆ, ಹಿಂಸೆಯ ಕುರಿತಾಗಿ ಯೆಹೋವನ ಕ್ರೈಸ್ತ ಸಾಕ್ಷಿಗಳು ಯಾಕೆ ಹೆದರಿರುವುದಿಲ್ಲ?

13 ನಿಜವಾಗಿಯೂ, ಸಾಂಕೇತಿಕ ಹತ್ತು ದಿವಸಗಳಿಗೋಸ್ಕರ ಯೆಹೋವನ ಕ್ರೈಸ್ತ ಸಾಕ್ಷಿಗಳು ದೈಹಿಕ ಹಿಂಸೆಯಿಂದ ಮತ್ತು ಇನ್ನಿತರ ಶೋಧನೆಗಳಿಂದ ಬಾಧಿತರಾಗುತ್ತಾರೆ. ಸ್ಮುರ್ನದಲ್ಲಿದ್ದಂತಹ ಕ್ರೈಸ್ತರಂತೆಯೇ, ಅವರೇನೂ ಹೆದರಿರುವುದಿಲ್ಲ; ಇಲ್ಲವೆ ಭೂಮಿಯ ಮೇಲೆ ಸಂಕಷ್ಟಗಳು ಏರಿದಂತೆ ನಮ್ಮಲ್ಲಿ ಯಾರೂ ಹೆದರುವ ಆವಶ್ಯಕತೆಯೂ ಇಲ್ಲ. ನಾವು ಬಾಧೆಗಳ ಕೆಳಗೆ ಸಹಿಸಿಕೊಳ್ಳಲು ಸಿದ್ಧರಾಗಿದ್ದೇವೆ ಮತ್ತು ‘ಸೊತ್ತುಗಳನ್ನು ಸುಲುಕೊಳ್ಳುವಾಗಲೂ ಕೂಡ’ ಸಂತೋಷವಾಗಿರುತ್ತೇವೆ. (ಇಬ್ರಿಯ 10:32-34) ನಾವು ದೇವರ ವಾಕ್ಯವನ್ನು ಅಭ್ಯಾಸಿಸುವ ಮೂಲಕ ಮತ್ತು ಅದನ್ನು ನಮ್ಮ ಸ್ವಂತದ್ದಾಗಿ ಮಾಡಿಕೊಳ್ಳುವುದರ ಮೂಲಕ, ನಂಬಿಕೆಯಲ್ಲಿ ದೃಢವಾಗಿ ನಿಲ್ಲಲು ನಮ್ಮನ್ನು ಸನ್ನದ್ಧರನ್ನಾಗಿ ಮಾಡಿಕೊಳ್ಳುತ್ತೇವೆ. ನಿಮ್ಮ ಸಮಗ್ರತೆಯನ್ನು ಯೆಹೋವನು ಕಾಪಾಡಲು ಶಕ್ತನು ಮತ್ತು ಕಾಪಾಡುವನು ಎಂಬ ವಿಷಯದಲ್ಲಿ ಭರವಸೆಯಿಂದಿರ್ರಿ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6-11.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಯೋಹಾನನು ಮೃತನಾಗಿ ಸುಮಾರು 60 ವರ್ಷಗಳಾನಂತರ, 86 ವರ್ಷ ಪ್ರಾಯದ ಪಾಲಿಕಾರ್ಪನು ಸ್ಮುರ್ನದಲ್ಲಿ ಬೆಂಕಿಯಲ್ಲಿ ಸುಡಲ್ಪಟ್ಟು ಕೊಲ್ಲಲ್ಪಟ್ಟನು ಯಾಕಂದರೆ ಅವನು ಯೇಸುವಿನ ಮೇಲಿನ ಅವನ ನಂಬಿಕೆಯನ್ನು ನಿರಾಕರಿಸಲು ಒಪ್ಪಲಿಲ್ಲ. ಈ ಘಟನೆಯೊಂದಿಗೆ ಸಮಕಾಲೀನವಾಗಿದ್ದ ಕೃತಿಯೆಂದು ಎಣಿಸಲ್ಪಡುವ ದ ಮಾರ್ಟರ್‌ಡಮ್‌ ಆಫ್‌ ಪಾಲಿಕಾರ್ಪ್‌ (ಪಾಲಿಕಾರ್ಪನ ಧರ್ಮಬಲಿ) ಎಂಬುದರಲ್ಲಿ ಹೇಳುವದೇನಂದರೆ ಸುಡಲು ಕಟ್ಟಿಗೆಯನ್ನು ಒಟ್ಟುಗೂಡಿಸುತ್ತಾ ಇರುವಾಗ, ಈ ಹತಿಸುವಿಕೆಯು “ಒಂದು ಮಹಾ ಸಬ್ಬತ್‌ ದಿನದಲ್ಲಿ” ನಡೆಯಿತಾದರೂ ಕೂಡ, “ಇದರಲ್ಲಿ ಸಹಾಯ ಕೊಡುವುದರಲ್ಲಿ ಯೆಹೂದ್ಯರು, ಅವರ ಅಭ್ಯಾಸದ ಪ್ರಕಾರ, ಬಹಳ ಉತ್ಸುಕರಾಗಿದ್ದರು.”

^ ಪ್ಯಾರ. 12 ನೋಡಿರಿ ನವಂಬರ 1, 1933; ಅಕ್ಟೋಬರ 1 ಮತ್ತು 15, ದಶಂಬರ 1 ಮತ್ತು 15, 1934; ಮೇ 1, 1983ರ ದ ವಾಚ್‌ಟವರ್‌.

[ಅಧ್ಯಯನ ಪ್ರಶ್ನೆಗಳು]

[ಪುಟ 40 ರಲ್ಲಿರುವ ಚೌಕ/ಚಿತ್ರಗಳು]

 

ಸುಮಾರು 50 ವರ್ಷಗಳಲ್ಲಿ ಇತಿಹಾಸಕಾರರು ನಾಜಿ ಪ್ರಭುತ್ವದ ಕೆಳಗೆ ಯೆಹೋವನ ಜರ್ಮನ್‌ ಸಾಕ್ಷಿಗಳ ಸಮಗ್ರತೆಯ ಕುರಿತಾಗಿ ಸಾಕ್ಷ್ಯಗಳನ್ನು ಒದಗಿಸುತ್ತಾ ಇದ್ದಾರೆ. ಇತಿಹಾಸಕಾರ್ತಿ ಕ್ಲಾಡಿಯ ಕೂನ್ಸ್‌ 1986 ರಲ್ಲಿ ಪ್ರಕಾಶಿಸಲ್ಪಟ್ಟ ಮದರ್ಸ್‌ ಇನ್‌ ದ ಫಾದರ್‌ಲ್ಯಾಂಡ್‌ (ತಂದೆಯ ದೇಶದಲ್ಲಿ ತಾಯಿಗಳು) ಎಂಬ ಪುಸ್ತಕದಲ್ಲಿ ಇದನ್ನು ಹೇಳುತ್ತಾರೆ: “ನಾಜಿಯರಲ್ಲದ ಹಿನ್ನೆಲೆಯುಳ್ಳ ಜರ್ಮನ್‌ರಲ್ಲಿ ಅಧಿಕ ಸಂಖ್ಯಾತರೆಲ್ಲರೂ, ತಾವು ದ್ವೇಷಿಸುತ್ತಿದ್ದ ಪ್ರಭುತ್ವದ ಕೆಳಗೆ ಅಸ್ತಿತ್ವದಲ್ಲಿ ಉಳಿಯುವ ದಾರಿಗಳನ್ನು ಕಂಡುಕೊಂಡರು. . . . ಸಂಖ್ಯಾಶಾಸ್ತ್ರದ ಮತ್ತು ಭಾವನಾಶಾಸ್ತ್ರದ ವಿನ್ಯಾಸದ ಇನ್ನೊಂದು ತುದಿಯಲ್ಲಿ 20,000 ಯೆಹೋವನ ಸಾಕ್ಷಿಗಳು, ವಾಸ್ತವದಲ್ಲಿ ಪ್ರತಿಯೊಬ್ಬನೂ ನಾಜಿ ರಾಷ್ಟ್ರದಲ್ಲಿ ಯಾವುದೇ ವಿಧದ ವಿಧೇಯತೆಯನ್ನು ಸಲ್ಲಿಸಲು ನಿಸ್ಸಂದಿಗ್ಧವಾಗಿ ನಿರಾಕರಿಸಿದರು. . . . ಪ್ರತಿಭಟಕರ ಈ ತೀರ ಅಂಟಿಗೊಂಡಿರುವ ಗುಂಪನ್ನು ಪೋಷಿಸಲು ಧರ್ಮಕ್ಕೆ ಸಾಧ್ಯವಾಯಿತು. ಮೊದಲಿನಿಂದಲೇ ನಾಜಿ ರಾಷ್ಟ್ರಕ್ಕೆ ಯಾವುದೇ ವಿಧದಲ್ಲಿ ಸಹಕಾರವನ್ನು ಯೆಹೋವನ ಸಾಕ್ಷಿಗಳು ನೀಡಲಿಲ್ಲ. 1933 ರಲ್ಲಿ ಗೆಸ್ಟಾಪೊ ರಾಷ್ಟ್ರದ ಮುಖ್ಯ ಕಾರ್ಯಾಲಯವನ್ನು ನಾಶ ಮಾಡಿದರೂ ಮತ್ತು 1935 ರಲ್ಲಿ ಅವರನ್ನು ನಿಷೇಧಿಸಿದರೂ, ‘ಹೈಲ್‌ ಹಿಟ್ಲರ್‌’ (ಹಿಟ್ಲರನಿಗೆ ಜಯಕಾರ) ಎಂದು ಹೇಳಲು ಕೂಡ ಅವರು ನಿರಾಕರಿಸಿದರು. ಎಲ್ಲಾ ಯೆಹೋವನ ಸಾಕ್ಷಿಗಳಲ್ಲಿ ಅರ್ಧದಷ್ಟು ಜನರನ್ನು (ಅಧಿಕಾಂಶ ಪುರುಷರು) ಕೂಟಶಿಬಿರಗಳಿಗೆ ಕಳುಹಿಸಲಾಯಿತು, ಅವರಲ್ಲಿ ಸುಮಾರು ಒಂದು ಸಾವಿರ ಹತಿಸಲ್ಪಟ್ಟರು, ಮತ್ತು ಇನ್ನೊಂದು ಸಾವಿರ 1933 ಮತ್ತು 1945ರ ನಡುವೆ ಸತ್ತರು. . . . ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು ಹಿಟ್ಲರನೊಂದಿಗೆ ಸಹಕರಿಸಲು ಅವರ ವೈದಿಕರಿಂದ ಒತ್ತಾಯಿಸಲ್ಪಟ್ಟರು. ಅವರು ಪ್ರತಿರೋಧಿಸಿದರೆ, ಅವರದನ್ನು ಚರ್ಚಿನ ಮತ್ತು ರಾಷ್ಟ್ರದ ಅಪ್ಪಣೆಗಳ ವಿರುದ್ಧವಾಗಿಯೇ ಪ್ರತಿಭಟಿಸಿದರು.”