ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ತೀರ್ಪಿನ ದಿನ—ಅದರ ಹರ್ಷಭರಿತ ಫಲಿತಾಂಶ!

ದೇವರ ತೀರ್ಪಿನ ದಿನ—ಅದರ ಹರ್ಷಭರಿತ ಫಲಿತಾಂಶ!

ಅಧ್ಯಾಯ 41

ದೇವರ ತೀರ್ಪಿನ ದಿನ—ಅದರ ಹರ್ಷಭರಿತ ಫಲಿತಾಂಶ!

ದರ್ಶನ 15—ಪ್ರಕಟನೆ 20:11—21:8

ವಿಷಯ: ಸಾಮಾನ್ಯ ಪುನರುತ್ಥಾನ, ನ್ಯಾಯವಿಚಾರಣೆಯ ದಿವಸ, ಮತ್ತು ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲದ ಆಶೀರ್ವಾದಗಳು

ನೆರವೇರಿಕೆಯ ಸಮಯ: ಸಹಸ್ರ ವರುಷಗಳ ಆಳಿಕೆ

1. (ಎ) ಆದಾಮ, ಹವ್ವರು ಪಾಪಗೈದಾಗ ಮಾನವ ಕುಲವು ಏನನ್ನು ಕಳೆದುಕೊಂಡಿತು? (ಬಿ) ದೇವರ ಯಾವ ಉದ್ದೇಶವು ಮಾರ್ಪಟ್ಟಿಲ್ಲ, ಮತ್ತು ನಾವಿದನ್ನು ತಿಳಿದಿರುವುದು ಹೇಗೆ?

ಮಾನವರೋಪಾದಿ, ಸದಾಕಾಲ ಜೀವಿಸಲಿಕ್ಕೆ ನಾವು ಸೃಷ್ಟಿಸಲ್ಪಟ್ಟಿದ್ದೆವು. ಆದಾಮ, ಹವ್ವರು ದೇವರ ಆಜ್ಞೆಗಳಿಗೆ ವಿಧೇಯರಾಗಿರುತ್ತಿದ್ದರೆ, ಅವರೆಂದೂ ಸಾಯುತ್ತಿರಲಿಲ್ಲ. (ಆದಿಕಾಂಡ 1:28; 2:8, 16, 17; ಪ್ರಸಂಗಿ 3:10, 11) ಆದರೆ ಅವರು ಪಾಪಮಾಡಿದಾಗ, ಅವರಿಗೂ, ಅವರ ಸಂತತಿಯವರಿಗೂ ಪರಿಪೂರ್ಣತೆಯನ್ನು ಮತ್ತು ಜೀವವನ್ನು ಅವರು ಕಳೆದುಕೊಂಡರು. ಮತ್ತು ಮರಣವು ನಿಷ್ಠುರ ವೈರಿಯೋಪಾದಿ ಮಾನವ ಕುಲದ ಮೇಲೆ ಅಧಿಕಾರ ಚಲಾಯಿಸಲಾರಂಭಿಸಿತು. (ರೋಮಾಪುರ 5:12, 14; 1 ಕೊರಿಂಥ 15:26) ಆದಾಗ್ಯೂ, ಪ್ರಮೋದವನ ಭೂಮಿಯ ಮೇಲೆ ಪರಿಪೂರ್ಣ ಮಾನವರು ಸದಾಕಾಲ ಜೀವಿಸುವ ದೇವರ ಉದ್ದೇಶವು ಮಾರ್ಪಡಲಿಲ್ಲ. ಮಾನವ ಕುಲದ ಕಡೆಗೆ ಅವನಿಗಿರುವ ಮಹಾ ಪ್ರೀತಿಯಿಂದಾಗಿ, ಯಾರು ತನ್ನ ಪರಿಪೂರ್ಣ ಮಾನವ ಜೀವವನ್ನು ಆದಾಮನ ಸಂತತಿಯ “ಅನೇಕ” ರಿಗಾಗಿ ಪ್ರಾಯಶ್ಚಿತ್ತದೋಪಾದಿ ನೀಡಿದನೋ ಆ ತನ್ನ ಏಕಜಾತ ಪುತ್ರನಾದ ಯೇಸುವನ್ನು ಅವನು ಕಳುಹಿಸಿದನು. (ಮತ್ತಾಯ 20:28; ಯೋಹಾನ 3:16) ಪ್ರಮೋದವನ ಭೂಮಿಯ ಮೇಲೆ ಪರಿಪೂರ್ಣತೆಯ ಜೀವಿತಕ್ಕೆ ನಂಬುವ ಮಾನವರನ್ನು ಪುನಃ ಸ್ಥಾಪಿಸಲು ಯೇಸುವು ತನ್ನ ಯಜ್ಞದ ಈ ಕಾನೂನುಬದ್ಧ ಪ್ರತಿಫಲವನ್ನು ಈಗ ಬಳಸಶಕ್ತನಾಗಿದ್ದಾನೆ. (1 ಪೇತ್ರ 3:18; 1 ಯೋಹಾನ 2:2) “ಆನಂದಿಸಿ ಉಲ್ಲಾಸಪಡಲು” ಮಾನವ ಕುಲಕ್ಕೆ ಎಂತಹ ಮಹತ್ತಾದ ಕಾರಣ!—ಯೆಶಾಯ 25:8, 9.

2. ಪ್ರಕಟನೆ 20:11 ರಲ್ಲಿ ಯೋಹಾನನು ಏನನ್ನು ವರದಿಸುತ್ತಾನೆ, ಮತ್ತು “ಮಹಾ ಬೆಳ್ಳಗಿರುವ ಸಿಂಹಾಸನ” ಏನಾಗಿದೆ?

2 ಸೈತಾನನು ಅಧೋಲೋಕದಲ್ಲಿ ಬಂಧಿತನಾಗುವುದರೊಂದಿಗೆ, ಯೇಸುವಿನ ಮಹಿಮಾಭರಿತ ಸಾವಿರ ವರುಷ ಆಳಿಕೆ ಆರಂಭಗೊಳ್ಳುತ್ತದೆ. ಇದೀಗ ದೇವರು “ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆಮಾಡುವದಕ್ಕೆ . . . ಗೊತ್ತುಮಾಡಿದ” ಆ “ದಿವಸ” ವಾಗಿರುತ್ತದೆ. (ಅ. ಕೃತ್ಯಗಳು 17:31; 2 ಪೇತ್ರ 3:8) ಯೋಹಾನನು ಘೋಷಿಸುವುದು: “ಮತ್ತು ಬೆಳ್ಳಗಿರುವ ಒಂದು ಮಹಾ ಸಿಂಹಾಸನವನ್ನು ಮತ್ತು ಅದರ ಮೇಲೆ ಕೂತಿದ್ದಾತನನ್ನು ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು ಮತ್ತು ಅವುಗಳಿಗೆ ಯಾವ ಸ್ಥಳವೂ ಇಲ್ಲದ್ದಾಗಿ ಕಂಡುಬಂತು.” (ಪ್ರಕಟನೆ 20:11, NW)  ಈ “ಬೆಳ್ಳಗಿರುವ ಮಹಾ ಸಿಂಹಾಸನ” ಏನಾಗಿದೆ? ಇದು “ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ” ನ್ಯಾಯಾಸನವಾಗಿದೆಯೇ ಹೊರತು ಬೇರೇನೂ ಅಲ್ಲ. (ಇಬ್ರಿಯ 12:23) ಯೇಸುವಿನ ಪ್ರಾಯಶ್ಚಿತ್ತ ಯಜ್ಞದಿಂದ ಪ್ರಯೋಜನ ಪಡೆಯುವವರು ಯಾರು ಎಂಬುದಾಗಿ ಅವನು ಮಾನವ ಕುಲವನ್ನು ಈಗ ತೀರ್ಮಾನಿಸಲಿದ್ದಾನೆ.—ಮಾರ್ಕ 10:45.

3. (ಎ) ದೇವರ ಸಿಂಹಾಸನವು “ಮಹಾ” ಮತ್ತು “ಬೆಳ್ಳಗೆ” ಇತ್ತು ಎಂಬ ವಾಸ್ತವಾಂಶದಿಂದ ಏನು ಸೂಚಿತವಾಗಿದೆ? (ಬಿ) ನ್ಯಾಯವಿಚಾರಣೆಯ ದಿವಸದಲ್ಲಿ ತೀರ್ಪು ಮಾಡುವುದು ಯಾರು, ಮತ್ತು ಯಾವ ಆಧಾರದ ಮೇಲೆ?

3 ದೇವರ ಸಿಂಹಾಸನವು “ಮಹಾ” ಎಂದು ಹೇಳುವುದರಿಂದ, ಸಾರ್ವಭೌಮ ಕರ್ತನೋಪಾದಿ ಯೆಹೋವನ ಭವ್ಯತೆಯನ್ನು, ಮತ್ತು “ಬೆಳ್ಳಗಿರು” ವುದು ಅವನ ದೋಷರಹಿತ ನೀತಿಯನ್ನು ಒತ್ತಿಹೇಳುತ್ತದೆ. ಅವನು ಮಾನವ ಕುಲದ ಅಂತಿಮ ನ್ಯಾಯಾಧೀಶನಾಗಿದ್ದಾನೆ. (ಕೀರ್ತನೆ 19:7-11; ಯೆಶಾಯ 33:22; 51:5, 8) ಆದಾಗ್ಯೂ, ತೀರ್ಪು ಮಾಡುವ ಕೆಲಸವನ್ನು ಅವನು ಯೇಸು ಕ್ರಿಸ್ತನಿಗೆ ಒಪ್ಪಿಸಿದ್ದಾನೆ: “ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವದೂ ಇಲ್ಲ; ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ.” (ಯೋಹಾನ 5:22) ಯೇಸುವಿನೊಂದಿಗೆ ಅವನ 1,44,000 ಸಂಗಾತಿಗಳಿಗೂ “ಸಾವಿರ ವರುಷ . . . ನ್ಯಾಯತೀರಿಸುವ ಅಧಿಕಾರವು . . . ಕೊಡಲ್ಪಟ್ಟಿತು.” (ಪ್ರಕಟನೆ 20:4) ಹಾಗಿದ್ದರೂ, ತೀರ್ಪಿನ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಏನು ಸಂಭವಿಸುವುದೋ ಅದನ್ನು ಯೆಹೋವನ ಮಟ್ಟಗಳು ತಾವೇ ನಿರ್ಧರಿಸುವುವು.

4. “ಭೂಮ್ಯಾಕಾಶಗಳು ಓಡಿಹೋದವು” ಅಂದರೆ ಅರ್ಥವೇನು?

4 “ಭೂಮ್ಯಾಕಾಶಗಳು ಓಡಿಹೋಗು” ವುದಾದರೂ ಹೇಗೆ? ಇದು ಆರನೆಯ ಮುದ್ರೆ ಬಿಚ್ಚಲ್ಪಟ್ಟಾಗ ಹೋಗಿಬಿಟ್ಟ ಅದೇ ಆಕಾಶವಾಗಿದೆ—ಆಳುತ್ತಿರುವ ಮಾನವ ಅಧಿಕಾರಗಳು “ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.” (ಪ್ರಕಟನೆ 6:14; 2 ಪೇತ್ರ 3:7) ಭೂಮಿಯು ಈ ಆಡಳಿತದ ಕೆಳಗೆ ಅಸ್ತಿತ್ವದಲ್ಲಿರುವ ವಿಷಯಗಳ ಸಂಘಟಿತ ವ್ಯವಸ್ಥೆಯಾಗಿದೆ. (ಪ್ರಕಟನೆ 8:7) ಕಾಡು ಮೃಗದ ಮತ್ತು ಭೂರಾಜರುಗಳ ಮತ್ತು ಅವರ ಸೈನ್ಯಗಳ ಒಟ್ಟಿಗೆ ಕಾಡುಮೃಗದ ಗುರುತು ಪಡೆದವರ ಮತ್ತು ಅದರ ವಿಗ್ರಹವನ್ನು ಆರಾಧಿಸುವವರೆಲ್ಲರ ನಾಶನವು, ಈ ಭೂಮ್ಯಾಕಾಶಗಳು ಓಡಿಹೋಗುವುದನ್ನು ಗುರುತಿಸುತ್ತದೆ. (ಪ್ರಕಟನೆ 19:19-21) ಸೈತಾನನ ಭೂಮಿ ಮತ್ತು ಆಕಾಶಕ್ಕೆ ತೀರ್ಪನ್ನು ಜಾರಿಗೊಳಿಸಿದ ಅನಂತರ, ಮಹಾ ನ್ಯಾಯಾಧೀಶನು ಇನ್ನೊಂದು ನ್ಯಾಯವಿಚಾರಣೆಯ ದಿವಸವನ್ನು ವಿಧಿಸುತ್ತಾನೆ.

ಸಾವಿರ ವರುಷದ ನ್ಯಾಯವಿಚಾರಣೆಯ ದಿವಸ

5. ಹಳೇ ಭೂಮಿ ಮತ್ತು ಹಳೇ ಆಕಾಶವು ಓಡಿಹೋಗಿ ಕಾಣಿಸದೆ ಹೋದಾಗ, ತೀರ್ಪು ಪಡೆಯಲು ಇನ್ನು ಯಾರು ಉಳಿದಿರುತ್ತಾರೆ?

5 ಹಳೇ ಭೂಮಿ ಮತ್ತು ಹಳೇ ಆಕಾಶವು ಓಡಿಹೋದನಂತರ, ನ್ಯಾಯವಿಚಾರಿಸಲು ಯಾರು ಉಳಿದಿರುವರು? ಒಂದು ಲಕ್ಷ ನಲ್ವತ್ತನಾಲ್ಕು ಸಾವಿರದ ಅಭಿಷಿಕ್ತ ಉಳಿಕೆಯವರಲ್ಲ, ಯಾಕಂದರೆ ಅವರಿಗೆ ಈಗಾಗಲೇ ತೀರ್ಪುಮಾಡಿ, ಮುದ್ರೆಯನ್ನು ಒತ್ತಲಾಗಿದೆ. ಅರ್ಮಗೆದೋನಿನ ಅನಂತರ ಭೂಮಿಯ ಮೇಲೆ ಇನ್ನೂ ಜೀವಂತ ಉಳಿಯುವವರು ಶೀಘ್ರದಲ್ಲಿಯೇ ಅನಂತರ ಸಾಯತಕ್ಕದ್ದು ಮತ್ತು ಪುನರುತ್ಥಾನದ ಮೂಲಕ ಅವರ ಸ್ವರ್ಗೀಯ ಬಹುಮಾನವನ್ನು ಹೊಂದತಕ್ಕದ್ದು. (1 ಪೇತ್ರ 4:17; ಪ್ರಕಟನೆ 7:2-4) ಆದಾಗ್ಯೂ, ಮಹಾ ಸಂಕಟದಿಂದ ಪಾರಾಗಿ ಬಂದ ಮಹಾ ಸಮೂಹದ ಲಕ್ಷಾಂತರ ಮಂದಿ ಗೋಚರಿಸುವಂತಹ ರೀತಿಯಲ್ಲಿ “ಸಿಂಹಾಸನದ ಮುಂದೆ” ನಿಲ್ಲುವರು. ಯೇಸುವಿನ ಸುರಿಸಲ್ಪಟ್ಟ ರಕ್ತದ ಮೇಲೆ ಅವರ ನಂಬಿಕೆಯ ಕಾರಣ, ಪಾರಾಗಲು ಅವರನ್ನು ಈಗಾಗಲೇ ನೀತಿವಂತರೆಂದು ಎಣಿಸಲಾಗಿದೆ, ಆದರೆ ಯೇಸುವು ಅವರನ್ನು “ಜೀವಜಲದ ಬುಗ್ಗೆಗಳ ಬಳಿಗೆ” ನಡಿಸುತ್ತಾ ಇರುವಾಗ, ಸಾವಿರ ವರುಷಗಳಲ್ಲಿಲ್ಲಾ ಅವರ ನ್ಯಾಯವಿಚಾರಣೆಯು ಮುಂದುವರಿಯಬೇಕು. ಅನಂತರ, ಮಾನವ ಪರಿಪೂರ್ಣತೆಗೆ ಪುನಃ ಸ್ಥಾಪಿಸಲ್ಪಟ್ಟು, ಆ ಮೇಲೆ ಪರೀಕ್ಷಿಸಲ್ಪಟ್ಟು, ಪೂರ್ಣಾರ್ಥದಲ್ಲಿ ಅವರನ್ನು ನೀತಿವಂತರೆಂದು ಘೋಷಿಸಲಾಗುವುದು. (ಪ್ರಕಟನೆ 7:9, 10, 14, 17) ಮಹಾ ಸಂಕಟದಿಂದ ಪಾರಾಗುವ ಮಕ್ಕಳು ಮತ್ತು ಸಹಸ್ರವರ್ಷಗಳಾಳಿಕೆಯಲ್ಲಿ ಮಹಾ ಸಮೂಹದವರಿಗೆ ಜನಿಸಬಹುದಾದ ಯಾವುದೇ ಮಕ್ಕಳನ್ನು ತದ್ರೀತಿಯಲ್ಲಿ ಸಾವಿರ ವರುಷಗಳಲ್ಲಿ ನ್ಯಾಯತೀರಿಸುವ ಜರೂರಿಯಿದೆ.—ಹೋಲಿಸಿ ಆದಿಕಾಂಡ 1:28; 9:7; 1 ಕೊರಿಂಥ 7:14.

6. (ಎ) ಯೋಹಾನನು ಯಾವ ಜನಸಮೂಹವನ್ನು ನೋಡುತ್ತಾನೆ, ಮತ್ತು “ದೊಡ್ಡವರೂ ಚಿಕ್ಕವರೂ” ಎಂಬ ಮಾತುಗಳಿಂದ ಏನು ಸೂಚಿಸಲ್ಪಟ್ಟಿದೆ? (ಬಿ) ದೇವರ ಜ್ಞಾಪಕದಲ್ಲಿರುವ ಅಗಣಿತ ಲಕ್ಷಾಂತರ ಮಂದಿ ನಿಸ್ಸಂದೇಹವಾಗಿ ಹೇಗೆ ಎಬ್ಬಿಸಲ್ಪಡುವರು?

6 ಆದಾಗ್ಯೂ, ಪಾರಾದ ಮಹಾ ಸಮೂಹಕ್ಕಿಂತಲೂ ಬಹಳ ದೊಡ್ಡದಾದ ಮಹಾ ಸಂಖ್ಯೆಯ ಒಂದು ಜನಸಮೂಹವನ್ನು ಯೋಹಾನನು ಅವಲೋಕಿಸುತ್ತಾನೆ. ಅದು ಕೋಟಿಗಟ್ಟಲೆ ಸಂಖ್ಯೆಯದ್ದಾಗಿರುವುದು! “ಮತ್ತು ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವುದನ್ನು ನಾನು ಕಂಡೆನು, ಮತ್ತು ಸುರುಳಿಗಳು ತೆರೆಯಲ್ಪಟ್ಟವು.” (ಪ್ರಕಟನೆ 20:12ಎ, NW)  “ದೊಡ್ಡವರೂ ಚಿಕ್ಕವರೂ” ಎಂಬುದು ಗತಿಸಿದ ಆರು ಸಾವಿರ ವರುಷಗಳಲ್ಲಿ ಭೂಮಿಯ ಮೇಲೆ ಜೀವಿಸಿದ ಮತ್ತು ಸತ್ತ ಮಾನವ ಕುಲದ ಗಣ್ಯರನ್ನು ಹಾಗೂ ನಗಣ್ಯರನ್ನು ಸೇರಿಸುತ್ತದೆ. ಪ್ರಕಟನೆಯ ಸ್ವಲ್ಪ ಅನಂತರ ಅಪೊಸ್ತಲ ಯೋಹಾನನು ಬರೆದ ಸುವಾರ್ತೆಯಲ್ಲಿ, ಯೇಸು ತಂದೆಯ ಕುರಿತು ಅಂದದ್ದು: “ಮತ್ತು ಮಗನು ಮನುಷ್ಯಕುಮಾರನಾಗಿರುವದರಿಂದ ತೀರ್ಪುಮಾಡುವ ಅಧಿಕಾರವನ್ನೂ ಅವನಿಗೆ [ಯೇಸುವಿಗೆ] ಕೊಟ್ಟನು. ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:27-29) ಎಲ್ಲ ಇತಿಹಾಸದ ಮರಣಗಳನ್ನು ಮತ್ತು ಹೂಳುವಿಕೆಗಳನ್ನು ತೊಡೆದುಹಾಕುವ ಎಂತಹ ಘನಗಾತ್ರದ ಯೋಜನೆ! ನಿಸ್ಸಂದೇಹವಾಗಿ, ದೇವರ ಜ್ಞಾಪಕದಲ್ಲಿರುವ ಅಗಣಿತ ಲಕ್ಷಗಟ್ಟಲೆ ಮಂದಿಯನ್ನು ಕ್ರಮಪ್ರಕಾರವಾಗಿ ಎಬ್ಬಿಸುವುದರ ಮೂಲಕ ಮಹಾ ಸಮೂಹದವರು—ಹೋಲಿಕೆಯಲ್ಲಿ ಅತಿ ಕೊಂಚವೇ—ಏಳಬಹುದಾದ ಸಮಸ್ಯೆಗಳನ್ನು ನಿರ್ವಹಿಸಲು ಶಕ್ತರಾಗುವರು, ಯಾಕಂದರೆ ಪುನರುತ್ಥಾನಗೊಂಡವರು ಮೊದಮೊದಲು ಅವರ ಎಲ್ಲಾ ಮಾಂಸಿಕ ಬಲಹೀನತೆಗಳು ಮತ್ತು ಮನೋಭಾವಗಳೊಂದಿಗೆ, ಅವರ ಹಳೆಯ ಜೀವನ ಶೈಲಿಯನ್ನು ಅನುಸರಿಸುವ ಒಲವುಳ್ಳವರಾಗಿರಬಹುದು.

ಯಾರು ಎಬ್ಬಿಸಲ್ಪಡುವರು ಮತ್ತು ತೀರ್ಪು ಮಾಡಲ್ಪಡುವರು?

7, 8. (ಎ) ಯಾವ ಸುರುಳಿಯು ತೆರೆಯಲ್ಪಡುತ್ತದೆ, ಮತ್ತು ಅದರ ಅನಂತರ ಏನು ನಡೆಯುತ್ತದೆ? (ಬಿ) ಯಾರಿಗೆ ಪುನರುತ್ಥಾನವಿರುವುದಿಲ್ಲ?

7 ಯೋಹಾನನು ಕೂಡಿಸುವುದು: “ಆದರೆ ಇನ್ನೊಂದು ಸುರುಳಿಯು ತೆರೆಯಲ್ಪಟ್ಟಿತು; ಅದು ಜೀವದ ಸುರುಳಿ. ಮತ್ತು ಆ ಸುರುಳಿಗಳಲ್ಲಿ ಬರೆದಿದ್ದ ಸಂಗತಿಗಳಿಂದ ಅವರವರ ಕೃತ್ಯಗಳಿಗನುಸಾರ ಸತ್ತವರು ತೀರ್ಪುಮಾಡಲ್ಪಟ್ಟರು. ಮತ್ತು ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು ಮತ್ತು ಮೃತ್ಯು ಮತ್ತು ಹೇಡಿಸ್‌ ಅವುಗಳೊಳಗಿಂದ ಸತ್ತವರನ್ನು ಒಪ್ಪಿಸಿದವು, ಮತ್ತು ಅವರು ವ್ಯಕ್ತಿಶಃ ಅವರ ಕೃತ್ಯಗಳಿಗನುಸಾರ ತೀರ್ಪುಮಾಡಲ್ಪಟ್ಟರು.” (ಪ್ರಕಟನೆ 20:12ಬಿ, 13, NW)  ಖಂಡಿತವಾಗಿಯೂ ಆಶ್ಚರ್ಯಚಕಿತವಾಗಿಸುವ ಒಂದು ದೃಶ್ಯ! ‘ಸಮುದ್ರ, ಮೃತ್ಯು, ಮತ್ತು ಹೇಡಿಸ್‌’ ಪ್ರತಿಯೊಂದು ತನ್ನ ಪಾತ್ರವನ್ನು ಆಡುತ್ತದೆ, ಆದರೆ ಪ್ರತಿಯೊಂದು ಪದ ಪರಸ್ಪರ ಪ್ರತ್ಯೇಕತೆಯದ್ದಲ್ಲವೆಂಬುದನ್ನು ಗಮನಿಸಿರಿ. * ಯೋನನು ಮೀನಿನ ಹೊಟ್ಟೆಯೊಳಗೆ ಇದ್ದಾಗ, ಮತ್ತು ಹೀಗೆ ಸಮುದ್ರದ ನಡುವೆ ಇದ್ದಾಗ, ತಾನು ಶಿಯೋಲ್‌ ಯಾ ಹೇಡಿಸ್‌ನಲ್ಲಿ ಇರುವುದಾಗಿ ಮಾತಾಡಿದನು. (ಯೋನ 2:2) ವ್ಯಕ್ತಿಯೊಬ್ಬನು ಆದಾಮನಿಂದಾದ ಮರಣದ ವಶದಲ್ಲಿರುವುದಾದರೆ, ಆಗ ಅವನು ಸಹ ಹೇಡಿಸ್‌ನಲ್ಲಿರುವುದು ಸಂಭಾವ್ಯ. ಯಾರೊಬ್ಬನನ್ನೂ ಉಪೇಕ್ಷಿಸಲಾಗುವುದಿಲ್ಲವೆಂಬ ಖಾತರಿಯನ್ನು ಈ ಪ್ರವಾದನಾ ನುಡಿಗಳು ನೀಡುತ್ತವೆ.

8 ಪುನರುತ್ಥಾನ ಪಡೆಯದ ಒಂದು ಅಜ್ಞಾತ ಸಂಖ್ಯೆ ಅಲ್ಲಿರುವುದು ನಿಶ್ಚಯ. ಅವರಲ್ಲಿ ಯೇಸುವನ್ನು ಮತ್ತು ಅಪೊಸ್ತಲರನ್ನು ನಿರಾಕರಿಸಿದ, ಪಶ್ಚಾತ್ತಾಪ ಪಡದ ಶಾಸ್ತ್ರಿಗಳು ಮತ್ತು ಫರಿಸಾಯರು, ಧಾರ್ಮಿಕ “ಅಧರ್ಮಸ್ವರೂಪನು,” ಮತ್ತು “ಭ್ರಷ್ಟರಾದ” ಅಭಿಷಿಕ್ತ ಕ್ರೈಸ್ತರು ಇರುವರು. (2 ಥೆಸಲೊನೀಕ 2:3; ಇಬ್ರಿಯ 6:4-6; ಮತ್ತಾಯ 23:29-33) ಲೋಕಾಂತ್ಯದಲ್ಲಿ “ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿ” ಯೊಳಗೆ ಅಂದರೆ “ನಿತ್ಯ ಶಿಕ್ಷೆ”ಗೆ ಹೋಗುವ ಆಡುಗಳಂತಹ ಜನರ ಕುರಿತು ಕೂಡ ಯೇಸು ಮಾತಾಡಿದನು. (ಮತ್ತಾಯ 25:41, 46) ಇವರಿಗೆ ಪುನರುತ್ಥಾನವಿಲ್ಲ!

9. ಪುನರುತ್ಥಾನದಲ್ಲಿ ಕೆಲವರು ವಿಶೇಷ ಮೆಚ್ಚಿಗೆಯನ್ನು ಪಡೆಯುವರು ಎಂದು ಅಪೊಸ್ತಲ ಪೌಲನು ಹೇಗೆ ಸೂಚಿಸಿದ್ದಾನೆ, ಮತ್ತು ಇವರಲ್ಲಿ ಯಾರು ಸೇರಿರುತ್ತಾರೆ?

9 ಇನ್ನೊಂದು ಪಕ್ಕದಲ್ಲಿ, ಕೆಲವರು ಪುನರುತ್ಥಾನದಲ್ಲಿ ವಿಶೇಷ ಮೆಚ್ಚಿಗೆಯನ್ನು ಪಡೆಯುವರು. ಅಪೊಸ್ತಲ ಪೌಲನು, ಹೀಗೆ ಹೇಳಿದಾಗ ಇದನ್ನು ಸೂಚಿಸಿದನು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ಐಹಿಕ ಪುನರುತ್ಥಾನದ ಕುರಿತು, “ನೀತಿವಂತ” ರಲ್ಲಿ ಪ್ರಾಚೀನ ಕಾಲದ ನಂಬಿಗಸ್ತ ಪುರುಷರು ಮತ್ತು ಸ್ತ್ರೀಯರು—ಅಬ್ರಹಾಮ, ರಹಾಬ, ಮತ್ತು ಇತರ ಅನೇಕರು—ದೇವರೊಂದಿಗಿನ ಮಿತ್ರತ್ವದ ಕಾರಣ ನೀತಿವಂತರೆಂದು ಘೋಷಿಸಲ್ಪಟ್ಟವರು ಸೇರಿದ್ದಾರೆ. (ಯಾಕೋಬ 2:21, 23, 25) ಇದೇ ಗುಂಪಿನಲ್ಲಿ ಆಧುನಿಕ ಸಮಯಗಳಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಸತ್ತಂತಹ ನೀತಿವಂತ ಬೇರೆ ಕುರಿಗಳು ಇರುವರು. ಇಂತಹ ಸಮಗ್ರತೆ ಪಾಲಕರೆಲ್ಲರೂ ಯೇಸುವಿನ ಸಹಸ್ರ ವರ್ಷಗಳ ಆಳಿಕೆಯ ಆರಂಭದಲ್ಲಿ ಪ್ರಾಯಶಃ ಪುನರುತ್ಥಾನಗೊಳ್ಳಬಹುದು. (ಯೋಬ 14:13-15; 27:5; ದಾನಿಯೇಲ 12:13; ಇಬ್ರಿಯ 11:35, 39, 40) ಪುನರುತ್ಥಾನಗೊಂಡ ಈ ನೀತಿವಂತರಲ್ಲಿ ಅನೇಕರು ಪ್ರಮೋದವನದಲ್ಲಿ ಪ್ರಚಂಡವಾದ ಪುನಃ ಸ್ಥಾಪನೆಯ ಕೆಲಸದ ಮೇಲ್ವಿಚಾರಣೆ ಮಾಡುವ ವಿಶೇಷ ಸುಯೋಗಗಳಿಗೆ ನಿಸ್ಸಂದೇಹವಾಗಿ ನೇಮಿಸಲ್ಪಡಬಹುದು.—ಕೀರ್ತನೆ 45:16; ಹೋಲಿಸಿ ಯೆಶಾಯ 32:1, 16-18; 61:5; 65:21-23.

10. ಪುನರುತ್ಥಾನಗೊಳ್ಳುವವರಲ್ಲಿ, “ಅನೀತಿವಂತರು” ಯಾರು?

10 ಆದರೂ, ಅ. ಕೃತ್ಯಗಳು 24:15 ರಲ್ಲಿ ಉಲ್ಲೇಖಿಸಲ್ಪಟ್ಟ “ಅನೀತಿವಂತರು” ಯಾರು? ಇತಿಹಾಸದಲ್ಲಿಲ್ಲಾ ಸತ್ತಿರುವ ಮಾನವಕುಲದ ಮಹಾ ಸಂಖ್ಯೆಯ ಜನಸಮೂಹಗಳು, ವಿಶೇಷವಾಗಿ ‘ಅಜ್ಞಾನದ ಸಮಯಗಳಲ್ಲಿ’ ಜೀವಿಸಿದವರು ಇವರಲ್ಲಿ ಸೇರಿರುವರು. (ಅ. ಕೃತ್ಯಗಳು 17:30) ಇವರು ಹುಟ್ಟಿದ ಸ್ಥಳ ಯಾ ಜೀವಿಸಿದ ಸಮಯದ ಕಾರಣ, ಯೆಹೋವನ ಚಿತ್ತಕ್ಕೆ ವಿಧೇಯತೆಯನ್ನು ಕಲಿಯಲು ಅವರಿಗೆ ಯಾವುದೇ ಅವಕಾಶವಿರಲಿಲ್ಲ. ಇದಕ್ಕೆ ಕೂಡಿಸಿ, ರಕ್ಷಣೆಯ ಸಂದೇಶವನ್ನು ಕೆಲವರು ಆಲಿಸಿದವರು ಆಗಿರಲೂ ಬಹುದು, ಆದರೆ ಆ ಸಮಯದಲ್ಲಿ ಪೂರ್ಣವಾಗಿ ಪ್ರತಿವರ್ತನೆ ತೋರಿಸದವರೂ ಯಾ ಸಮರ್ಪಣೆ ಮತ್ತು ದೀಕ್ಷಾಸ್ನಾನದ ವರೆಗೆ ಅವರು ಪ್ರಗತಿ ಮಾಡುವ ಮೊದಲೆ ಮರಣಹೊಂದಿದವರೂ ಆಗಿರಬಹುದು. ನಿತ್ಯ ಜೀವವನ್ನು ಪಡೆಯಲಿಕ್ಕಾಗಿರುವ ಈ ಸಂದರ್ಭದಿಂದ ಪ್ರಯೋಜನ ಪಡೆಯಬೇಕಾದರೆ, ಪುನರುತ್ಥಾನದಲ್ಲಿ ಅಂತಹವರು ತಮ್ಮ ಯೋಚನೆಗಳಲ್ಲಿ ಮತ್ತು ಜೀವನ ಪಥದಲ್ಲಿ ಇನ್ನಷ್ಟು ಹೆಚ್ಚಿನ ಅಳವಡಿಸುವಿಕೆಗಳನ್ನು ಮಾಡಬೇಕಾಗಿರುವುದು.

ಜೀವದ ಸುರುಳಿ

11. (ಎ) “ಜೀವದ ಸುರುಳಿ” ಅಂದರೇನು, ಮತ್ತು ಈ ಸುರುಳಿಯಲ್ಲಿ ಯಾರ ಹೆಸರುಗಳು ದಾಖಲಿಸಲ್ಪಟ್ಟಿವೆ? (ಬಿ) ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ ಜೀವದ ಸುರುಳಿಯು ತೆರೆಯಲ್ಪಡುವುದು ಯಾಕೆ?

11 ಯೋಹಾನನು “ಜೀವದ ಸುರುಳಿ”ಯ ಕುರಿತು ಮಾತಾಡುತ್ತಾನೆ. ಯೆಹೋವನಿಂದ ನಿತ್ಯ ಜೀವವನ್ನು ಪಡೆಯುವ ಸರದಿಯಲ್ಲಿರುವವರ ಒಂದು ದಾಖಲೆ ಇದಾಗಿದೆ. ಯೇಸುವಿನ ಅಭಿಷಿಕ್ತ ಸಹೋದರರ, ಮಹಾ ಸಮೂಹದವರ, ಮತ್ತು ಪುರಾತನ ಕಾಲದ ಮೋಶೆಯಂತಹ ನಂಬಿಗಸ್ತ ಪುರುಷರ ಹೆಸರುಗಳು ಈ ಸುರುಳಿಯಲ್ಲಿ ದಾಖಲಿಸಲ್ಪಟ್ಟಿವೆ. (ವಿಮೋಚನಕಾಂಡ 32:32, 33; ದಾನಿಯೇಲ 12:1; ಪ್ರಕಟನೆ 3:5) ಆದರೂ, “ಅನೀತಿವಂತ” ಪುನರುತಿತ್ಥರಲ್ಲಿ ಯಾರೊಬ್ಬನ ಹೆಸರೂ ಜೀವದ ಸುರುಳಿಯಲ್ಲಿ ಇರುವುದಿಲ್ಲ. ಆದುದರಿಂದ, ಯೋಗ್ಯತೆ ಪಡೆಯುವ ಇತರ ಹೆಸರುಗಳನ್ನು ಅದರಲ್ಲಿ ಬರೆಯಲು ಅನುಮತಿಸಲಾಗುವಂತೆ, ಸಾವಿರ ವರ್ಷದ ಆಳಿಕೆಯಲ್ಲಿ ಜೀವದ ಸುರುಳಿಯು ತೆರೆಯಲ್ಪಡುವುದು. ಈ ಜೀವದ ಸುರುಳಿ ಯಾ ಪುಸ್ತಕದಲ್ಲಿ ಯಾರ ಹೆಸರುಗಳು ಬರೆಯಲ್ಪಡುವುದಿಲ್ಲವೋ, ಅವರು “ಬೆಂಕಿಯ ಕೆರೆಗೆ ದೊಬ್ಬಲ್ಪಡು” ವರು.—ಪ್ರಕಟನೆ 20:15; ಹೋಲಿಸಿ ಇಬ್ರಿಯ 3:19.

12. ತೆರೆಯಲ್ಪಟ್ಟ ಜೀವದ ಸುರುಳಿಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಬರೆಯಲ್ಪಡುತ್ತದೋ ಇಲ್ಲವೋ ಎಂದು ಯಾವುದು ನಿರ್ಧರಿಸುವುದು, ಮತ್ತು ಯೆಹೋವನ ನೇಮಿತ ನ್ಯಾಯಾಧೀಶನು ಆದರ್ಶವನ್ನು ಹೇಗೆ ಇಟ್ಟನು?

12 ಆ ಸಮಯದಲ್ಲಿ ತೆರೆಯಲ್ಪಟ್ಟ ಜೀವದ ಸುರುಳಿಯಲ್ಲಿ ಒಬ್ಬನ ಹೆಸರು ಬರೆಯಲ್ಪಡುತ್ತದೋ ಇಲ್ಲವೊ ಎಂದು ಯಾವುದು ನಿರ್ಧರಿಸುತ್ತದೆ? ಮುಖ್ಯ ನಿಜಾಂಶವು ಆದಾಮ ಮತ್ತು ಹವ್ವರ ದಿನಗಳಲ್ಲಿ ಏನಿತ್ತೋ, ಅದೇ ಆಗಿರುವುದು: ಯೆಹೋವನಿಗೆ ವಿಧೇಯತೆ. ಪ್ರಿಯ ಜೊತೆ ಕ್ರೈಸ್ತರಿಗೆ ಅಪೊಸ್ತಲ ಯೋಹಾನನು ಬರೆದಂತೆ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:4-7, 17) ವಿಧೇಯತೆಯ ವಿಷಯದಲ್ಲಿ, ಯೆಹೋವನ ನೇಮಿತ ನ್ಯಾಯಾಧೀಶನು ಒಂದು ಆದರ್ಶವನ್ನು ಇಟ್ಟನು: “ಹೀಗೆ ಆತನು [ಯೇಸು] ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು ಸಿದ್ಧಿಗೆ ಬಂದು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾ ಯಾಜಕನೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.”—ಇಬ್ರಿಯ 5:8, 9.

ಇತರ ಸುರುಳಿಗಳ ತೆರೆಯುವಿಕೆ

13. ಪುನರುತಿತ್ಥರು ತಮ್ಮ ವಿಧೇಯತೆಯನ್ನು ಹೇಗೆ ತೋರಿಸತಕ್ಕದ್ದು, ಮತ್ತು ಅವರು ಯಾವ ಸೂತ್ರಗಳನ್ನು ಅನುಸರಿಸತಕ್ಕದ್ದು?

13 ಪುನರುತ್ಥಾನಗೊಂಡ ಇವರು ತಮ್ಮ ವಿಧೇಯತೆಯನ್ನು ಹೇಗೆ ತೋರಿಸತಕ್ಕದ್ದು? ಯೇಸು ತಾನೇ ಎರಡು ಮಹಾ ಆಜ್ಞೆಗಳಿಗೆ ನಿರ್ದೇಶಿಸುತ್ತಾ, ಹೇಳಿದ್ದು: “ಇಸ್ರಾಯೇಲ್‌ ಜನವೇ ಕೇಳು, ನಮ್ಮ ದೇವರಾದ ಕರ್ತನು [ಯೆಹೋವನು, NW] ಒಬ್ಬನೇ ದೇವರು; ನಿನ್ನ ದೇವರಾದ ಕರ್ತ [ಯೆಹೋವನ, NW] ನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ.” (ಮಾರ್ಕ 12:29-31) ಕಳ್ಳತನ ಮಾಡುವಿಕೆ, ಸುಳ್ಳುಹೇಳುವಿಕೆ, ನರಹತ್ಯ, ಮತ್ತು ಅನೈತಿಕತೆಯೇ ಮುಂತಾದವುಗಳನ್ನು ತೊರೆದು ಅನುಸರಿಸಲು ಯೆಹೋವನ ಸುಸ್ಥಾಪಿತ ಸೂತ್ರಗಳೂ ಅಲ್ಲಿವೆ.—1 ತಿಮೊಥೆಯ 1:8-11; ಪ್ರಕಟನೆ 21:8.

14. ಇತರ ಯಾವ ಸುರುಳಿಗಳು ತೆರೆಯಲ್ಪಡುತ್ತವೆ, ಮತ್ತು ಅವುಗಳಲ್ಲಿ ಏನು ಇರುತ್ತದೆ?

14 ಹೀಗಿದ್ದರೂ, ಸಹಸ್ರ ವರುಷ ಕಾಲದಲ್ಲಿ ಇತರ ಪುಸ್ತಕಗಳು ತೆರೆಯಲ್ಪಟ್ಟವು ಎಂದು ಈಗ ತಾನೇ ಯೋಹಾನನು ಹೇಳಿರುತ್ತಾನೆ. (ಪ್ರಕಟನೆ 20:12) ಇವು ಏನಾಗಿರುವುವು? ಕೆಲವೊಮ್ಮೆ ನಿರ್ದಿಷ್ಟ ಸನ್ನಿವೇಶಗಳಿಗೆ ಯೆಹೋವನು ನಿರ್ದಿಷ್ಟವಾದ ವಿಧಿಗಳನ್ನು ಕೊಟ್ಟಿದ್ದಾನೆ. ಉದಾಹರಣೆಗೆ, ಮೋಶೆಯ ದಿವಸಗಳಲ್ಲಿ ಇಸ್ರಾಯೇಲ್ಯರಿಗೆ ಜೀವದ ಅರ್ಥದಲ್ಲಿರುವ ಸವಿವರವಾದ ನಿಯಮಾವಳಿಗಳನ್ನು ಅವನು ಕೊಟ್ಟನು. (ಧರ್ಮೋಪದೇಶಕಾಂಡ 4:40; 32:45-47) ಮೊದಲನೆಯ ಶತಕದಲ್ಲಿ, ವಿಷಯಗಳ ಕ್ರೈಸ್ತ ವ್ಯವಸ್ಥೆಯ ಕೆಳಗೆ ಯೆಹೋವನ ತತ್ವಗಳನ್ನು ಅನುಸರಿಸಲು ನಂಬಿಗಸ್ತರಿಗೆ ಸಹಾಯಿಸಲು ಹೊಸ ಅಪ್ಪಣೆಗಳು ಕೊಡಲ್ಪಟ್ಟವು. (ಮತ್ತಾಯ 28:19, 20; ಯೋಹಾನ 13:34; 15:9, 10) “ಸುರುಳಿಗಳಲ್ಲಿ ಬರೆದಿದ್ದ ಸಂಗತಿಗಳಿಂದ ಅವರವರ ಕೃತ್ಯಗಳಿಗನುಸಾರ” ಸತ್ತವರು “ತೀರ್ಪು ಮಾಡಲ್ಪಟ್ಟರು” ಎಂದು ಯೋಹಾನನು ಈಗ ವರದಿಸುತ್ತಾನೆ. ಹಾಗಾದರೆ, ಸಾವಿರ ವರುಷಗಳ ಸಮಯದಲ್ಲಿ ಮಾನವ ಕುಲಕ್ಕಾಗಿ ಯೆಹೋವನ ಸವಿವರವಾದ ಆವಶ್ಯಕತೆಗಳನ್ನು ಈ ಪುಸ್ತಕಗಳ ತೆರೆಯುವಿಕೆಯು ಪ್ರಕಾಶಿಸುವುದು ಎಂದು ವ್ಯಕ್ತವಾಗುತ್ತದೆ. ಈ ಪುಸ್ತಕಗಳಲ್ಲಿರುವ ನಿಯಮಗಳನ್ನು ಮತ್ತು ಆಜ್ಞೆಗಳನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವುದರ ಮೂಲಕ, ವಿಧೇಯ ಮಾನವರು ಅವರ ಆಯುಸ್ಸನ್ನು ಹೆಚ್ಚಿಸಲು ಶಕ್ತರಾಗಿ, ಕಟ್ಟಕಡೆಗೆ ನಿತ್ಯ ಜೀವವನ್ನು ಪಡೆದುಕೊಳ್ಳುವರು.

15. ಪುನರುತ್ಥಾನದ ಸಮಯದಲ್ಲಿ ಯಾವ ವಿಧದ ಶೈಕ್ಷಣಿಕ ಸುಸಂಘಟಿತ ಕಾರ್ಯಾಚರಣೆಯು ಆವಶ್ಯಕವಾಗಿರುತ್ತದೆ, ಮತ್ತು ಈ ಪುನರುತ್ಥಾನವು ಪ್ರಾಯಶಃ ಹೇಗೆ ಮುಂದರಿಯುವುದು?

15 ದೇವಪ್ರಭುತ್ವ ಶಿಕ್ಷಣದ ಎಂತಹ ವ್ಯಾಪಕ ಸುಸಂಘಟಿತ ಕಾರ್ಯಾಚರಣೆಯ ಆವಶ್ಯಕತೆಯು ಇರುವುದು! ಯೆಹೋವನ ಸಾಕ್ಷಿಗಳು 1993 ರಲ್ಲಿ ಲೋಕವ್ಯಾಪಕವಾಗಿ ಸರಾಸರಿ 45,00,000 ಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ವಿವಿಧ ಕಡೆಗಳಲ್ಲಿ ನಡೆಸುತ್ತಿದ್ದರು. ಆದರೆ ಪುನರುತ್ಥಾನದ ಸಮಯದಲ್ಲಿ, ಬೈಬಲಿನ ಮತ್ತು ಹೊಸ ಪುಸ್ತಕಗಳ ಮೇಲಾಧಾರಿತ ಅಗಣಿತ ಲಕ್ಷಗಟ್ಟಲೆ ಅಧ್ಯಯನಗಳು ನಿಸ್ಸಂದೇಹವಾಗಿ ನಡೆಸಲ್ಪಡುವುವು! ದೇವರ ಜನರೆಲ್ಲರೂ ಬೋಧಕರಾಗುವ ಆವಶ್ಯಕತೆಯಿರುವುದು ಮತ್ತು ಶ್ರಮವಹಿಸಬೇಕಾಗುವುದು. ಪುನರುತಿತ್ಥರು ಪ್ರಗತಿಗೊಂಡಂತೆ, ನಿಸ್ಸಂದೇಹವಾಗಿ ಈ ವ್ಯಾಪಕವಾದ ಕಲಿಸುವ ಕಾರ್ಯಕ್ರಮದಲ್ಲಿ ಪಾಲಿಗರಾಗುವರು. ಪ್ರಾಯಶಃ, ಜೀವಂತರಾಗಿರುವವರಿಗೆ ಅವರ ಹಿಂದಿನ ಕುಟುಂಬ ಸದಸ್ಯರನ್ನು ಮತ್ತು ಪರಿಚಯಸ್ಥರನ್ನು—ಇವರು ತಮ್ಮ ಸರದಿಯಲ್ಲಿ, ಇತರರನ್ನು ಸ್ವಾಗತಿಸಬಹುದು ಮತ್ತು ಬೋಧಿಸಬಹುದು—ಸ್ವಾಗತಿಸುವ ಮತ್ತು ಬೋಧಿಸುವ ಆನಂದವು ಇರುವಂತಹ ರೀತಿಯಲ್ಲಿ ಪುನರುತ್ಥಾನವು ಮುಂದರಿಯಬಹುದು. (ಹೋಲಿಸಿ 1 ಕೊರಿಂಥ 15:19-28, 58.) ಇಂದು ಸತ್ಯವನ್ನು ಹರಡಿಸುವುದರಲ್ಲಿ ಕ್ರಿಯಾಶೀಲರಾಗಿರುವ ನಲವತ್ತು ಲಕ್ಷಕ್ಕಿಂತಲೂ ಅಧಿಕ ಯೆಹೋವನ ಸಾಕ್ಷಿಗಳು ಪುನರುತ್ಥಾನದ ಸಮಯದಲ್ಲಿ ಅವರು ನಿರೀಕ್ಷಿಸುವ ಸುಯೋಗಗಳಿಗಾಗಿ ಒಳ್ಳೆಯ ಅಸ್ತಿವಾರವನ್ನು ಹಾಕುತ್ತಾ ಇದ್ದಾರೆ.—ಯೆಶಾಯ 50:4; 54:13.

16. (ಎ) ಯಾರ ಹೆಸರುಗಳು ಜೀವದ ಸುರುಳಿಯಲ್ಲಿ ಯಾ ಪುಸ್ತಕದಲ್ಲಿ ಬರೆಯಲ್ಪಡುವುದಿಲ್ಲ? (ಬಿ) ಯಾರ ಪುನರುತ್ಥಾನವು “ಜೀವಕ್ಕಾಗಿ” ಪರಿಣಮಿಸುವುದು?

16 ಐಹಿಕ ಪುನರುತ್ಥಾನದ ಕುರಿತಾಗಿ, ‘ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವುದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು’ ಎಂದು ಯೇಸುವು ಹೇಳಿದನು. ಇಲ್ಲಿ “ಜೀವ” ಮತ್ತು “ತೀರ್ಪು” ಒಂದು ಇನ್ನೊಂದಕ್ಕೆ ವಿಪರ್ಯಸ್ತವಾಗಿದ್ದು, ಪ್ರೇರಿತ ಶಾಸ್ತ್ರವಚನಗಳಲ್ಲಿ ಮತ್ತು ಸುರುಳಿಗಳಲ್ಲಿ ಬರೆದಂತೆ ಕಲಿಸಲ್ಪಟ್ಟಾದ ಅನಂತರ “ಕೆಟ್ಟದ್ದನ್ನು ನಡಿ” ಸುವ ಪುನರುತಿತ್ಥರು ಜೀವಕ್ಕೆ ಅಯೋಗ್ಯರೆಂದು ತೀರ್ಪು ಮಾಡಲ್ಪಡುವರು ಎಂದು ತೋರಿಸುತ್ತದೆ. (ಯೋಹಾನ 5:29) ಈ ಮುಂಚೆ ನಂಬಿಗಸ್ತ ಪಥದಲ್ಲಿ ನಡೆದು, ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ ಯಾವುದಾದರೊಂದು ಕಾರಣಕ್ಕಾಗಿ ಪಕ್ಕಕ್ಕೆ ತಿರುಗಿಕೊಂಡವರ ವಿಷಯದಲ್ಲೂ ಇದು ಸತ್ಯವಾಗಿರುವುದು. ಹೆಸರುಗಳು ಅಳಿಸಲ್ಪಡಸಾಧ್ಯವಿದೆ. (ವಿಮೋಚನಕಾಂಡ 32:32, 33) ಇನ್ನೊಂದು ಪಕ್ಕದಲ್ಲಿ, ಸುರುಳಿಗಳಲ್ಲಿ ಬರೆದಿರುವ ವಿಷಯಗಳನ್ನು ವಿಧೇಯತೆಯಿಂದ ಪರಿಪಾಲಿಸುವವರಾದರೋ ತಮ್ಮ ಹೆಸರುಗಳನ್ನು ಲಿಖಿತ ದಾಖಲೆಯಲ್ಲಿ, ಜೀವದ ಸುರುಳಿಯಲ್ಲಿ ಇಟ್ಟುಕೊಳ್ಳುವರು, ಮತ್ತು ಜೀವಿಸುವುದನ್ನು ಮುಂದರಿಸುವರು. ಅವರಿಗೆ, ಪುನರುತ್ಥಾನವು “ಜೀವಕ್ಕಾಗಿ” ಪರಿಣಮಿಸುವುದು.

ಮೃತ್ಯು ಮತ್ತು ಹೇಡಿಸ್‌ನ ಅಂತ್ಯ

17. (ಎ) ಯೋಹಾನನು ಯಾವ ಬೆರಗುಗೊಳಿಸುವ ಕೃತ್ಯವನ್ನು ವರ್ಣಿಸುತ್ತಾನೆ? (ಬಿ) ಹೇಡಿಸನ್ನು ಯಾವಾಗ ಬರಿದುಮಾಡಲಾಗುತ್ತದೆ? (ಸಿ) ಆದಾಮ ಸಂಬಂಧಿತ ಮರಣವು ಯಾವಾಗ “ಬೆಂಕಿಯ ಕೆರೆಗೆ” ದೊಬ್ಬಲ್ಪಡುವುದು?

17 ಅನಂತರ ಯೋಹಾನನು ನಿಜವಾಗಿ ಬೆರಗುಗೊಳಿಸುವಂತಹ ಒಂದು ವಿಷಯವನ್ನು ವರ್ಣಿಸುತ್ತಾನೆ! “ಮತ್ತು ಮೃತ್ಯು ಮತ್ತು ಹೇಡಿಸ್‌ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. ಇದು, ಬೆಂಕಿಯ ಕೆರೆ, ಎರಡನೆಯ ಮರಣವೆಂದರ್ಥ. ಇದಲ್ಲದೆ, ಯಾವನ ಹೆಸರು ಜೀವದ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.” (ಪ್ರಕಟನೆ 20:14, 15, NW)  ಸಹಸ್ರ ವರುಷ ಕಾಲದ ನ್ಯಾಯವಿಚಾರಣೆಯ ದಿವಸದ ಅಂತ್ಯದೊಳಗೆ, “ಮೃತ್ಯು ಮತ್ತು ಹೇಡಿಸ್‌” ಪೂರ್ಣವಾಗಿ ತೆಗೆಯಲ್ಪಡುತ್ತವೆ. ಇದು ಒಂದು ಸಾವಿರ ವರುಷಗಳನ್ನು ಯಾಕೆ ಒಳಗೂಡಿಸುತ್ತದೆ? ದೇವರ ಜ್ಞಾಪಕದಲ್ಲಿರುವ ಕೊನೆಯವನು ಪುನರುತ್ಥಾನಗೊಂಡಾಗ, ಹೇಡಿಸ್‌—ಎಲ್ಲಾ ಮಾನವಕುಲದ ಸಾಮಾನ್ಯ ಸಮಾಧಿ—ಬರಿದುಮಾಡಲ್ಪಡುತ್ತದೆ. ಆದರೆ ಬಾಧ್ಯತೆಯಾಗಿ ಹೊಂದಿದ ಪಾಪವು ಮಾನವರನ್ನು ಕಲುಷಿತರನ್ನಾಗಿ ಮಾಡುವ ತನಕ, ಆದಾಮ ಸಂಬಂಧಿತ ಮರಣವು ಇನ್ನೂ ಅವರೊಂದಿಗೆ ಇರುವುದು. ಭೂಮಿಯ ಮೇಲೆ ಪುನರುತ್ಥಾನಗೊಂಡವರೆಲ್ಲರೂ ಹಾಗೂ ಅರ್ಮಗೆದೋನ್‌ನಿಂದ ಪಾರಾಗುವ ಮಹಾ ಸಮೂಹದವರು, ರೋಗ, ವಾರ್ಧಕ್ಯ, ಮತ್ತು ಬಾಧ್ಯತೆಯಾಗಿ ಪಡೆದ ಇತರ ಅಸಾಮರ್ಥ್ಯಗಳನ್ನು ಪೂರ್ಣವಾಗಿ ತೊಲಗಿಸುವುದರಲ್ಲಿ, ಯೇಸುವಿನ ಪ್ರಾಯಶ್ಚಿತ್ತದ ಪ್ರತಿಫಲವು ಅನ್ವಯಿಸಲ್ಪಡುವ ತನಕ, ಸುರುಳಿಗಳಲ್ಲಿ ಏನು ಬರೆಯಲ್ಪಟ್ಟಿದೆಯೋ ಅದಕ್ಕೆ ವಿಧೇಯರಾಗುವ ಜರೂರಿಯಿದೆ. ಅನಂತರ ಆದಾಮ ಸಂಬಂಧಿತ ಮರಣ, ಅದರೊಂದಿಗೆ ಹೇಡಿಸ್‌, “ಬೆಂಕಿಯ ಕೆರೆಗೆ ದೊಬ್ಬಲ್ಪಡು” ವುವು. ಅವುಗಳು ಎಂದೆಂದಿಗೂ ಹೋಗಿಬಿಡುವವು!

18. (ಎ) ಅರಸನೋಪಾದಿ ಯೇಸುವಿನ ಆಳಿಕೆಯ ಯಶಸ್ಸನ್ನು ಅಪೊಸ್ತಲ ಪೌಲನು ಹೇಗೆ ವರ್ಣಿಸುತ್ತಾನೆ? (ಬಿ) ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಟುಂಬವನ್ನು ಯೇಸು ಏನು ಮಾಡುತ್ತಾನೆ? (ಸಿ) ಸಾವಿರ ವರುಷಗಳ ಅಂತ್ಯದಲ್ಲಿ ಬೇರೆ ಯಾವ ವಿಷಯಗಳು ಜರುಗುತ್ತವೆ?

18 ಹೀಗೆ, ಕೊರಿಂಥದವರಿಗೆ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ವರ್ಣಿಸಿದ ಕಾರ್ಯಕ್ರಮವು ಮುಕ್ತಾಯಘಟ್ಟಕ್ಕೆ ತಲುಪುವುದು: “ಯಾಕಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ [ಯೇಸುವಿನ] ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. [ಆದಾಮನ ಸಂಬಂಧಿತ] ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” ಅನಂತರ ಏನು ಸಂಭವಿಸುವುದು? “ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು.” ಇನ್ನೊಂದು ಮಾತಿನಲ್ಲಿ, ಯೇಸುವು “ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡು” ವನು. (1 ಕೊರಿಂಥ 15:24-28) ಹೌದು, ಯೇಸುವು ತನ್ನ ಪ್ರಾಯಶ್ಚಿತ್ತ ಯಜ್ಞದ ಪ್ರತಿಫಲದ ಮೂಲಕ ಆದಾಮ ಸಂಬಂಧಿತ ಮರಣವನ್ನು ಜಯಿಸಿದ ಅನಂತರ, ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಟುಂಬವನ್ನು ಅವನ ತಂದೆಯಾದ ಯೆಹೋವನಿಗೆ ಒಪ್ಪಿಸಿಕೊಡುವನು. ಈ ಬಿಂದುವಿನಲ್ಲಿ, ಸಾವಿರ ವರುಷಗಳ ಅಂತ್ಯದಲ್ಲಿ, ಸೈತಾನನು ಬಿಡುಗಡೆಗೊಳಿಸಲ್ಪಡುವನು ಮತ್ತು ಜೀವದ ಸುರುಳಿಯಲ್ಲಿ ಯಾರ ಹೆಸರುಗಳು ಶಾಶ್ವತವಾಗಿ ದಾಖಲಿಸಲ್ಪಟ್ಟು ಉಳಿಯುವವೆಂದು ನಿರ್ಧರಿಸಲ್ಪಡುವ ಅಂತಿಮ ಪರೀಕ್ಷೆಯು ಜರುಗುವುದು ಎಂಬುದು ಸುಸ್ಪಷ್ಟವಾಗುತ್ತದೆ. ನಿಮ್ಮ ಹೆಸರು ಅವರ ಮಧ್ಯೆ ಇರುವಂತೆ, “ನೀವಾಗಿಯೇ ಕಠಿಣ ರೀತಿಯಲ್ಲಿ ಹೆಣಗಾಡಿರಿ”!—ಲೂಕ 13:24, NW; ಪ್ರಕಟನೆ 20:5.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ನೋಹನ ದಿನಗಳ ಜಲಪ್ರಲಯದಲ್ಲಿ ನಾಶಗೊಂಡ ಭ್ರಷ್ಟರಾದ ಭೂನಿವಾಸಿಗಳು, ಸಮುದ್ರದಿಂದ ಪುನರುತ್ಥಾನಗೊಳ್ಳುವವರಲ್ಲಿ ಸೇರುವುದಿಲ್ಲ; ಮಹಾ ಸಂಕಟದಲ್ಲಿ ಯೆಹೋವನ ತೀರ್ಪಿನ ಜಾರಿಗೊಳಿಸುವಿಕೆಯಂತೆ, ಆ ನಾಶನವು ಅಂತಿಮವಾಗಿದೆ.—ಮತ್ತಾಯ 25:41, 46; 2 ಪೇತ್ರ 3:5-7.

[ಅಧ್ಯಯನ ಪ್ರಶ್ನೆಗಳು]

[Picture on page 298]

ಸಹಸ್ರ ವರುಷಗಳ ಆಳಿಕೆಯಲ್ಲಿ ತೆರೆಯಲ್ಪಟ್ಟ ಸುರುಳಿಗಳಿಗೆ ವಿಧೇಯರಾಗುವ “ಅನೀತಿವಂತ” ಪುನರುತಿತ್ಥರು ತಮ್ಮ ಹೆಸರುಗಳನ್ನು ಜೀವದ ಸುರುಳಿಯಲ್ಲಿ ಬರೆಯಿಸಬಹುದು