ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪವಿತ್ರ ರಹಸ್ಯ—ಅದರ ಮಹಿಮಾಭರಿತ ಪರಮಾವಧಿ!

ದೇವರ ಪವಿತ್ರ ರಹಸ್ಯ—ಅದರ ಮಹಿಮಾಭರಿತ ಪರಮಾವಧಿ!

ಅಧ್ಯಾಯ 26

ದೇವರ ಪವಿತ್ರ ರಹಸ್ಯ—ಅದರ ಮಹಿಮಾಭರಿತ ಪರಮಾವಧಿ!

1. (ಎ) ಪವಿತ್ರ ರಹಸ್ಯವು ಮುಕ್ತಾಯಕ್ಕೆ ತರಲ್ಪಟ್ಟಿದೆ ಎಂದು ಯೋಹಾನನು ನಮಗೆ ಹೇಗೆ ತಿಳಿಸುತ್ತಾನೆ? (ಬಿ) ದೇವದೂತಗಣಗಳು ಗಟ್ಟಿಯಾಗಿ ಯಾಕೆ ಮಾತಾಡುತ್ತಿದ್ದವು?

ನೀವು ಪ್ರಕಟನೆ 10:1, 6, 7 ರಲ್ಲಿ ದಾಖಲಿಸಲ್ಪಟ್ಟ ಬಲಿಷ್ಠ ದೇವದೂತನ ಆಣೆಯಿಟ್ಟು ಮಾಡಿದ ಘೋಷಣೆಯನ್ನು ನೆನಪಿಸುತ್ತೀರೊ? ಅವನು ಅಂದದ್ದು: “ಇನ್ನು ಮುಂದೆ ಸಾವಕಾಶವೇ ಇರದು; ಆದರೆ ಏಳನೆಯ ದೇವದೂತನು ಉದ್ಘೋಷಿಸುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವುದಕ್ಕಿರುವಾಗ, ದೇವರು ಪ್ರವಾದಿಗಳಾದ ತನ್ನ ದಾಸರಿಗೆ ಘೋಷಿಸಿದ ಸುವಾರ್ತೆಗೆ ಅನುಸಾರವಾದ ಆತನ ಪವಿತ್ರ ರಹಸ್ಯವು ನಿಶ್ಚಯವಾಗಿಯೂ ಮುಕ್ತಾಯಕ್ಕೆ ತರಲ್ಪಡುತ್ತದೆ.” (NW) ಆ ಕೊನೆಯ ತುತೂರಿಯನ್ನು ಊದುವ ಯೆಹೋವನ ಕ್ಲುಪ್ತ ಸಮಯವು ಆಗಮಿಸಿದೆ! ಹಾಗಾದರೆ, ಪವಿತ್ರ ರಹಸ್ಯವು ಮುಕ್ತಾಯಕ್ಕೆ ತರಲ್ಪಡುವುದು ಹೇಗೆ? ಯೋಹಾನನು ನಮಗೆ ತಿಳಿಸಲು ನಿಜವಾಗಿಯೂ ಅತ್ಯಾನಂದ ಪಡುತ್ತಾನೆ! ಅವನು ಬರೆಯುವುದು: “ಮತ್ತು ಏಳನೆಯ ದೇವದೂತನು ತನ್ನ ತುತೂರಿಯನ್ನೂದಿದನು. ಮತ್ತು ಪರಲೋಕದಲ್ಲಿ ಮಹಾ ಶಬ್ದಗಳುಂಟಾಗಿ, ಹೇಳುವುದು: ‘ಲೋಕದ ರಾಜ್ಯವು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತು, ಮತ್ತು ಅವನು ಸದಾ ಸರ್ವದಾ ರಾಜನಾಗಿ ಆಳುವನು.’” (ಪ್ರಕಟನೆ 11:15, NW)  ಆ ದೇವದೂತಗಣಗಳಿಗೆ ಗಟ್ಟಿಯಾಗಿ, ಹೌದು, ಗುಡುಗುವ ಧ್ವನಿಯಲ್ಲಿ ಸಹ ಮಾತಾಡಲು ಕಾರಣವಿತ್ತು! ಏಕೆಂದರೆ ಈ ಐತಿಹಾಸಿಕ ಪ್ರಕಟನೆಯು ವಿಶ್ವ ಪ್ರಮುಖತೆಯದ್ದು. ಜೀವಿಸುವ ಸಮಸ್ತ ಸೃಷ್ಟಿಗೆ ಇದು ಅತ್ಯಾವಶ್ಯಕ ಆಸ್ಥೆಯದ್ದಾಗಿದೆ.

2. ಯಾವಾಗ ಮತ್ತು ಯಾವ ಘಟನೆಯೊಂದಿಗೆ ಪವಿತ್ರ ರಹಸ್ಯವು ಒಂದು ವಿಜಯದ ಮುಕ್ತಾಯಕ್ಕೆ ತರಲ್ಪಡುತ್ತದೆ?

2 ದೇವರ ಪವಿತ್ರ ರಹಸ್ಯವು ಅದರ ಆನಂದದ ಪರಮಾವಧಿಗೆ ಬರುತ್ತದೆ! ಕರ್ತನಾದ ಯೆಹೋವನು ಅವನ ಕ್ರಿಸ್ತನನ್ನು ಜೊತೆ ಅರಸನಾಗಿ 1914 ರಲ್ಲಿ ಸಿಂಹಾಸನಕ್ಕೇರಿಸುವಾಗ ಅದು ಮಹಿಮಾಭರಿತವಾಗಿಯೂ, ಉಜ್ವಲವಾಗಿಯೂ ತನ್ನ ವಿಜಯೋತ್ಸಾಹದ ಮುಕ್ತಾಯಕ್ಕೆ ತರಲ್ಪಡುತ್ತದೆ. ತನ್ನ ತಂದೆಯ ಪರವಾಗಿ ಕ್ರಿಯೆಗೈಯುತ್ತಾ, ಯೇಸು ಕ್ರಿಸ್ತನು ಶತ್ರು ಮಾನವ ಲೋಕದ ನಡುವೆ ಕ್ರಿಯಾತ್ಮಕ ರಾಜ್ಯತ್ವವನ್ನು ನಿರ್ವಹಿಸುತ್ತಾನೆ. ವಾಗ್ದಾನಿತ ಸಂತಾನದೋಪಾದಿ, ಅವನು ಸರ್ಪನನ್ನು ಮತ್ತು ಅವನ ಸಂತಾನವನ್ನು ಇಲ್ಲದಂತೆ ಮಾಡಲು ಮತ್ತು ಈ ಭೂಮಿಯ ಮೇಲೆ ಪ್ರಮೋದವನೀಯ ಶಾಂತಿಯನ್ನು ಪುನಃ ಸ್ಥಾಪಿಸಲು ರಾಜ್ಯಬಲವನ್ನು ಪಡೆಯುತ್ತಾನೆ. (ಆದಿಕಾಂಡ 3:15; ಕೀರ್ತನೆ 72:1, 7) ಮೆಸ್ಸೀಯ ಸಂಬಂಧಿತ ರಾಜನೋಪಾದಿ, ಯೇಸು ಹೀಗೆ ಯೆಹೋವನ ವಾಕ್ಯವನ್ನು ನೆರವೇರಿಸುವನು ಮತ್ತು “ಯುಗಯುಗಾಂತರಗಳಲ್ಲಿಯೂ” ಸಾರ್ವಭೌಮ ಒಡೆಯನಾಗಿ ಆಳಬೇಕಾದ “ಶಾಶ್ವತ ಅರಸನಾದ” ತನ್ನ ತಂದೆಯನ್ನು ನಿರ್ದೋಷೀಕರಿಸುವನು.—1 ತಿಮೊಥೆಯ 1:17.

3. ಯಾವಾಗಲೂ ಅರಸನಾಗಿರುವುದಾದರೂ, ಯೆಹೋವ ದೇವರು ಭೂಮಿಯ ಮೇಲೆ ಇತರ ಸಾರ್ವಭೌಮತ್ವಗಳನ್ನು ಅಸ್ತಿತ್ವದಲ್ಲಿರಲು ಯಾಕೆ ಅನುಮತಿಸಿದ್ದಾನೆ?

3 ಆದರೆ “ಲೋಕದ ರಾಜ್ಯವು . . . ನಮ್ಮ ಕರ್ತನ,” ಯೆಹೋವನ “ರಾಜ್ಯವಾಗಿ ಪರಿಣಮಿಸಿದ್ದು” ಹೇಗೆ? ಯೆಹೋವ ದೇವರು ಸದಾ ಅರಸನಾಗಿ ಇರುತ್ತಾನಲ್ಲವೆ? ಅದು ಸತ್ಯ, ಯಾಕಂದರೆ ಲೇವ್ಯನಾದ ಆಸಾಫನು ಹಾಡಿದ್ದು: “ದೇವರೇ ನೀನು ಮೊದಲಿನಿಂದಲೂ ನನ್ನ ಅರಸನು ಆಗಿದ್ದೀ.” ಮತ್ತು ಇನ್ನೊಬ್ಬ ಕೀರ್ತನೆಗಾರನು ಘೋಷಿಸಿದ್ದು: “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; . . . ಪೂರ್ವದಿಂದಲೂ ನಿನ್ನ ಸಿಂಹಾಸನವು ಸ್ಥಿರವಾಗಿದೆ; ಅನಾದಿಯಿಂದ ನೀನು ಇದ್ದೀ.” (ಕೀರ್ತನೆ 74:12; 93:1, 2) ಹೀಗಿದ್ದರೂ, ಯೆಹೋವನು ತನ್ನ ವಿವೇಕದಲ್ಲಿ, ಇತರ ಸಾರ್ವಭೌಮತ್ವಗಳು ಭೂಮಿಯ ಮೇಲೆ ಅಸ್ತಿತ್ವದಲ್ಲಿರುವಂತೆ ಬಿಟ್ಟಿದ್ದಾನೆ. ಹೀಗೆ ದೇವರ ವಿನಹ ಮನುಷ್ಯನು ಸ್ವತಃ ತನ್ನನ್ನು ಆಳಿಕೊಳ್ಳಶಕ್ತನೋ ಎಂದು ಏದೆನಿನಲ್ಲಿ ಎಬ್ಬಿಸಲ್ಪಟ್ಟ ವಾದವು ಪೂರ್ಣವಾಗಿ ಪರೀಕ್ಷಿಸಲ್ಪಟ್ಟಿದೆ. ಮಾನವನಾಳಿಕೆಯು ವಿಷಾದನೀಯವಾಗಿ ಸೋತಿದೆ. ಖಂಡಿತವಾಗಿಯೂ ದೇವರ ಪ್ರವಾದಿಯ ಮಾತುಗಳು ಸತ್ಯವಾಗಿವೆ: “ಮನುಷ್ಯನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ನಮ್ಮ ಮೊದಲ ಹೆತ್ತವರ ದ್ರೋಹದಂದಿನಿಂದ ಇಡೀ ನಿವಾಸಿತ ಭೂಮಿಯು “ಪುರಾತನ ಸರ್ಪವಾದ” ಸೈತಾನನ ದುರಾಡಳಿತದ ಕೆಳಗೆ ಇದೆ. (ಪ್ರಕಟನೆ 12:9; ಲೂಕ 4:6) ಈಗ ಒಂದು ನಾಟಕೀಯ ಬದಲಾವಣೆಗೆ ಸಮಯವು ಬಂದಿದೆ! ತನ್ನ ನ್ಯಾಯಯುಕ್ತ ಸ್ಥಾನವನ್ನು ನಿರ್ದೋಷೀಕರಿಸಲು, ಯೆಹೋವನು ತನ್ನ ಸಾರ್ವಭೌಮತೆಯನ್ನು ಭೂಮಿಯಲ್ಲಿಲ್ಲಾ ಒಂದು ಹೊಸ ರೀತಿಯಲ್ಲಿ, ತನ್ನ ನೇಮಿತ ಮೆಸ್ಸೀಯ ಸಂಬಂಧಿತ ರಾಜತ್ವದ ಮೂಲಕ ಜಾರಿಗೊಳಿಸಲು ಆರಂಭಿಸಲಿರುವನು.

4. ತುತೂರಿಗಳ ಊದುವಿಕೆಯು 1922 ರಲ್ಲಿ ಆರಂಭಿಸತೊಡಗಿದಾಗ, ಯಾವುದು ಮುಂದಕ್ಕೆ ತರಲ್ಪಟ್ಟಿತು? ವಿವರಿಸಿರಿ.

4 ಏಳನೆಯ ತುತೂರಿಯ ಊದುವಿಕೆಯು 1922 ರಲ್ಲಿ ಪ್ರಾರಂಭಿಸಲ್ಪಟ್ಟಾಗ, ಒಹೈಯೋವಿನ ಸೀಡರ್‌ ಪಾಯಿಂಟ್‌ನಲ್ಲಿ ಜರುಗಿದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನದಲ್ಲಿ ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್‌. ರಥರ್‌ಫರ್ಡ್‌ರಿಂದ ನೀಡಲ್ಪಟ್ಟ ಭಾಷಣವು “ಪರಲೋಕ ರಾಜ್ಯವು ಸಮೀಪಿಸಿತು” ಎಂಬ ಶಾಸ್ತ್ರವಚನದ ಮೇಲೆ ಆಧಾರಿತವಾಗಿತ್ತು. (ಮತ್ತಾಯ 4:17, ಕಿಂಗ್‌ ಜೇಮ್ಸ್‌ ವರ್ಷನ್‌) ಅವರು ಈ ಮಾತುಗಳೊಂದಿಗೆ ಮುಕ್ತಾಯಗೊಳಿಸಿದರು: “ಓ ಮಹೋನ್ನತ ದೇವರ ಮಕ್ಕಳೇ, ಹಿಂದೆರಳಿರಿ ಕ್ಷೇತ್ರಕ್ಕೆ! ನಿಮ್ಮ ಆಯುಧಗಳನ್ನು ಧರಿಸಿರಿ! ಸ್ತಿಮಿತವುಳ್ಳವರಾಗಿರ್ರಿ, ಜಾಗೃತರಾಗಿರ್ರಿ, ಕ್ರಿಯಾಶೀಲರಾಗಿರ್ರಿ, ಧೈರ್ಯವುಳ್ಳವರಾಗಿರ್ರಿ. ಕರ್ತನಿಗಾಗಿ ನಂಬಿಗಸ್ತರಾಗಿರ್ರಿ ಮತ್ತು ನಿಜ ಸಾಕ್ಷಿಗಳಾಗಿರ್ರಿ. ಬಾಬೆಲಿನ ಪ್ರತಿಯೊಂದು ಅವಶೇಷವು ನಾಶಗೊಳ್ಳುವ ತನಕ ಹೋರಾಟದಲ್ಲಿ ಮುಂದರಿಯಿರಿ. ಉದ್ದಗಲಕ್ಕೂ ಸಂದೇಶವನ್ನು ಘೋಷಿಸಿರಿ. ಯೆಹೋವನು ದೇವರೆಂದೂ, ಯೇಸು ಕ್ರಿಸ್ತನು ರಾಜಾಧಿರಾಜನೂ, ಕರ್ತರ ಕರ್ತನೂ ಆಗಿದ್ದಾನೆಂದು ಲೋಕವು ತಿಳಿಯತಕ್ಕದ್ದು. ಇದು ಎಲ್ಲಾ ದಿನಗಳ ದಿನವಾಗಿದೆ. ನೋಡಿರಿ, ರಾಜನು ಆಳುತ್ತಾನೆ! ನೀವು ಅವನ ಪ್ರಕಟನೋದ್ಯೋಗದ ನಿಯೋಗಿಗಳು. ಆದಕಾರಣ ರಾಜನನ್ನೂ, ಆತನ ರಾಜ್ಯವನ್ನೂ ಘೋಷಿಸಿರಿ, ಘೋಷಿಸಿರಿ, ಘೋಷಿಸಿರಿ.” ಕ್ರಿಸ್ತ ಯೇಸುವಿನಿಂದ ಆಳಲ್ಪಡುವ ದೇವರ ರಾಜ್ಯವು ಮುಂದಕ್ಕೆ ತರಲ್ಪಟ್ಟಿತು, ಮತ್ತು ಎಲ್ಲಾ ಏಳು ದೇವದೂತರ ತುತೂರಿಗಳ ಧ್ವನಿಸುವಿಕೆಯಿಂದ ಘೋಷಿಸಲ್ಪಟ್ಟ ನ್ಯಾಯತೀರ್ಪುಗಳನ್ನೊಳಗೊಂಡ ರಾಜ್ಯ ಸಾರುವಿಕೆಯ ಮಹಾ ಉಕ್ಕೇರುವಿಕೆಗೆ ಇದು ಆರಂಭವನ್ನು ಕೊಟ್ಟಿತು.

5. ಏಳನೆಯ ತುತೂರಿ ಊದುವಿಕೆಯನ್ನು 1928 ರಲ್ಲಿ ಎತ್ತಿತೋರಿಸಿದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನದಲ್ಲಿ ಏನು ಸಂಭವಿಸಿತು?

5 ಏಳನೆಯ ದೇವದೂತನ ತುತೂರಿಯ ಊದುವಿಕೆಯು ಮಿಶಿಗನ್‌ನ ಡಿಟ್ರೈಟ್‌ನಲ್ಲಿ ಜುಲೈ 30 - ಆಗಸ್ಟ್‌ 6, 1928 ರಲ್ಲಿ ಜರುಗಿದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನದ ಮುಖ್ಯಾಂಶಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿತು. ಆ ಸಮಯದಲ್ಲಿ ರೇಡಿಯೋ ಪ್ರಸಾರದ 107 ನಿಲಯಗಳು ಒಂದಕ್ಕೊಂದು ಜೋಡಿಸಲ್ಪಟ್ಟವು, ಅದನ್ನು ನ್ಯೂ ಯಾರ್ಕ್‌ ಟೈಮ್ಸ್‌ ‘ಇತಿಹಾಸದಲ್ಲೇ ಅತಿ ವ್ಯಾಪಕವಾದ ಮತ್ತು ದುಬಾರಿಯಾದ ರೇಡಿಯೋ ಜೋಡಣಾ ಪ್ರಸಾರ’ ಎಂದು ವರ್ಣಿಸಿತು. ಅರ್ಮಗೆದೋನಿನಲ್ಲಿ ಸೈತಾನನ ಮತ್ತು ಅವನ ದುಷ್ಟ ಸಂಸ್ಥೆಯ ತೆಗೆದುಹಾಕುವಿಕೆ ಮತ್ತು ನೀತಿಯನ್ನು ಪ್ರೀತಿಸುವವರೆಲ್ಲರ ವಿಮೋಚನೆಯ ಕಡೆಗೆ ಕೈತೋರಿಸುತ್ತಾ ಅಧಿವೇಶನವು ಉತ್ಸಾಹದಿಂದ ಒಂದು ಶಕ್ತಿಯುತ “ಸೈತಾನನ ವಿರೋಧವಾಗಿ ಮತ್ತು ಯೆಹೋವನ ಪರವಾಗಿ ಘೋಷಣೆ” ಯನ್ನು ಅಂಗೀಕರಿಸಿತು. ದೇವರ ರಾಜ್ಯದ ನಿಷ್ಠೆಯ ಪ್ರಜೆಗಳು ಅಧಿವೇಶನದ ಒಂದು ಹೊಸ ಪ್ರಕಾಶನವಾದ 368 ಪುಟಗಳ ಗವರ್ನ್‌ಮೆಂಟ್‌ ಪುಸ್ತಕವನ್ನು ಪಡೆಯಲು ಆನಂದಿಸಿದರು. ಇಸವಿ “1914 ರಲ್ಲಿ ದೇವರು ತನ್ನ ಸಿಂಹಾಸನದ ಮೇಲೆ ಅವನ ಅಭಿಷಿಕ್ತ ರಾಜನನ್ನು ನೇಮಿಸಿದ್ದಾನೆ” ಎಂಬುದಕ್ಕೆ ಅತ್ಯಂತ ಸ್ಫುಟ ಪುರಾವೆಗಳನ್ನು ಇದು ಒದಗಿಸಿತು.

ಯೆಹೋವನು ಅಧಿಕಾರ ವಹಿಸುತ್ತಾನೆ

6. ದೇವರ ರಾಜ್ಯದಲ್ಲಿ ಕ್ರಿಸ್ತನ ಸಿಂಹಾಸನಾಸೀನನಾಗುವಿಕೆಯ ಪ್ರಕಟನೆಯನ್ನು ಯೋಹಾನನು ಹೇಗೆ ವರದಿಸುತ್ತಾನೆ?

6 ದೇವರ ರಾಜ್ಯದಲ್ಲಿ ಕ್ರಿಸ್ತನು ಸಿಂಹಾಸನಾಸೀನನಾಗಿದ್ದಾನೆ—ಈ ಪ್ರಕಟನೆಯು ಎಂಥ ಆನಂದವನ್ನು ತರಿಸುತ್ತದೆ! ಯೋಹಾನನು ವರದಿಸುವುದು: “ಮತ್ತು ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕೂತಿದ್ದ ಇಪ್ಪತ್ತನಾಲ್ಕು ಮಂದಿ ಹಿರಿಯರು ಆತನಿಗೆ ಅಡಬ್ಡಿದ್ದರು ಮತ್ತು ಹೀಗನ್ನುತ್ತಾ ದೇವರನ್ನು ಆರಾಧಿಸಿದರು: ‘ಯೆಹೋವ ದೇವರೇ, ಸರ್ವಶಕ್ತನೇ, ಸದಾ ಇರುವಾತನೇ, ನೀನು ಮಹಾ ಅಧಿಕಾರವನ್ನು ವಹಿಸಿಕೊಂಡದ್ದರಿಂದ ಮತ್ತು ರಾಜನಾಗಿ ಆಳಲು ಆರಂಭಿಸಿದರ್ದಿಂದ ನಾವು ನಿನಗೆ ಕೃತಜ್ಞತೆಯನ್ನು ಸೂಚಿಸುತ್ತೇವೆ.’”—ಪ್ರಕಟನೆ 11:16, 17, NW.

7. (ಎ) ಸಾಂಕೇತಿಕವಾದ 24 ಹಿರಿಯರಲ್ಲಿ ಭೂಮಿಯ ಮೇಲೆ ಉಳಿದವರಿಂದ (ಬಿ) ಸಾಂಕೇತಿಕವಾದ 24 ಹಿರಿಯರಲ್ಲಿ ಪರಲೋಕದಲ್ಲಿ ಅವರ ಸ್ಥಾನವನ್ನು ತೆಗೆದುಕೊಳ್ಳಲು ಈಗಾಗಲೇ ಪುನರುತ್ಥಾನಗೊಳಿಸಲ್ಪಟ್ಟವರಿಂದ, ಯೆಹೋವ ದೇವರಿಗೆ ಕೃತಜ್ಞತಾಸ್ತುತಿಗಳು ಹೇಗೆ ನೀಡಲ್ಪಟ್ಟವು?

7 ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರು 24 ಹಿರಿಯರು ಆಗಿದ್ದು, ತಮ್ಮ ಸ್ವರ್ಗೀಯ ಪದವಿಗಳಲ್ಲಿರುವ ಕ್ರಿಸ್ತನ ಅಭಿಷಿಕ್ತ ಸಹೋದರರನ್ನು ಇದು ಸಂಕೇತಿಸುತ್ತದೆ. ಇಸವಿ 1922 ರಿಂದ ಹಿಡಿದು ಈ 1,44,000 ಅಭಿಷಿಕ್ತರಲ್ಲಿ ಭೂಮಿಯಲ್ಲಿ ಉಳಿದವರು ತುತೂರಿಯ ಊದುವಿಕೆಗಳಿಂದ ಕಾರ್ಯರೂಪಕ್ಕೆ ತರಲಾದ ಕೆಲಸದಲ್ಲಿ ಕಾರ್ಯಮಗ್ನರಾದರು. ಮತ್ತಾಯ 24:3–25:46ರ ಸೂಚನೆಯ ಪೂರ್ಣ ಪ್ರಾಮುಖ್ಯವನ್ನು ಅವರು ಗ್ರಹಿಸಿದರು. ಆದಾಗ್ಯೂ, ಕರ್ತನ ದಿನದ ಆರಂಭದಲ್ಲಿಯೂ, ‘ಮರಣದ ತನಕವೂ ನಂಬಿಗಸ್ತರಾಗಿ ಪರಿಣಮಿಸಿದ’ ಜೊತೆ ಸಾಕ್ಷಿಗಳು, ಅವರು ಯೆಹೋವನಿಗೆ ಗೌರವಾರ್ಪಣೆಯನ್ನು ಸಲ್ಲಿಸಲು ಅಡ್ಡಬೀಳುವ 1,44,000 ಮಂದಿಯ ಇಡೀ ಗುಂಪನ್ನು ಈಗ ಪ್ರತಿನಿಧಿಸಲು ಸಾಧ್ಯವಾಗುವಂತೆ ಸ್ವರ್ಗದಲ್ಲಿ ತಮ್ಮ ಸ್ಥಾನವನ್ನು ತೆಗೆದುಕೊಳ್ಳಲು ಪುನರುತ್ಥಾನ ಹೊಂದಿದ್ದರು. (ಪ್ರಕಟನೆ 1:10; 2:10) ಒಂದು ಪರಾಕಾಷ್ಠೆಯ ಮುಕ್ತಾಯಕ್ಕೆ ಅವನ ಪವಿತ್ರ ರಹಸ್ಯವನ್ನು ತರುವುದರಲ್ಲಿ ಅವರ ಸಾರ್ವಭೌಮ ಕರ್ತನು ತಡಮಾಡಲಿಲ್ಲವಾದುದರಿಂದ ಇವರೆಲ್ಲರೂ ಎಷ್ಟು ಕೃತಜ್ಞರಾಗಿದ್ದಾರೆ!

8. (ಎ) ಏಳನೆಯ ತುತೂರಿ ಊದುವಿಕೆಯು ಜನಾಂಗಗಳ ಮೇಲೆ ಯಾವ ಪರಿಣಾಮವನ್ನುಂಟುಮಾಡುತ್ತದೆ? (ಬಿ) ಜನಾಂಗಗಳು ಅವರ ಕೋಪವನ್ನು ಯಾರ ವಿರುದ್ಧ ವ್ಯಕ್ತಪಡಿಸಿವೆ?

8 ಇನ್ನೊಂದು ಪಕ್ಕದಲ್ಲಿ, ಏಳನೆಯ ತುತೂರಿಯ ಊದುವಿಕೆಯು ಜನಾಂಗಗಳಿಗೆ ಸಂತೋಷವನ್ನು ತರುವುದಿಲ್ಲ. ಯೆಹೋವನ ಕ್ರೋಧವನ್ನು ಅನುಭವಿಸುವ ಸಮಯವು ಅವರಿಗೆ ಬಂದಿದೆ. ಯೋಹಾನನು ವರ್ಣಿಸುವಂತೆ: “ಆದರೆ ಜನಾಂಗಗಳು ಕೋಪಿಸಿಕೊಂಡವು, ಮತ್ತು ನಿನ್ನ ಸ್ವಂತ ಕೋಪವು ಬಂದಿತು, ಮತ್ತು ಸತ್ತವರ ತೀರ್ಪಿಗಾಗಿ ಮತ್ತು ನಿನ್ನ ದಾಸರಾದ ಪ್ರವಾದಿಗಳಿಗೂ ಪವಿತ್ರ ಜನರಿಗೂ ಮತ್ತು ನಿನ್ನ ನಾಮಕ್ಕೆ ಭಯಪಡುತ್ತಿರುವ ಚಿಕ್ಕವರಿಗೂ ಪ್ರತಿಫಲವನ್ನು ಕೊಡಲು ಮತ್ತು ಭೂಮಿಯನ್ನು ವಿನಾಶಗೊಳಿಸಲಿಕ್ಕಾಗಿ ಆ ನಿರ್ಧಾರಿತ ಸಮಯವು ಬಂದಿತು.” (ಪ್ರಕಟನೆ 11:18, NW) ಇಸವಿ 1914 ರಿಂದ ಹಿಡಿದು ಲೋಕದ ಜನಾಂಗಗಳು ಒಬ್ಬರು ಇನ್ನೊಬ್ಬರ ವಿರುದ್ಧವಾಗಿ, ದೇವರ ರಾಜ್ಯದ ವಿರುದ್ಧವಾಗಿ, ಮತ್ತು ವಿಶೇಷವಾಗಿ ಯೆಹೋವನ ಇಬ್ಬರು ಸಾಕ್ಷಿಗಳ ವಿರುದ್ಧವಾಗಿ ತಮ್ಮ ಕೋಪವನ್ನು ಕ್ರೂರವಾಗಿ ವ್ಯಕ್ತಪಡಿಸಿದ್ದಾರೆ.—ಪ್ರಕಟನೆ 11:3.

9. ಜನಾಂಗಗಳು ಭೂಮಿಯನ್ನು ಹೇಗೆ ಹಾಳುಗೆಡವುತ್ತಿದ್ದಾರೆ, ಮತ್ತು ಅದರ ಕುರಿತು ಏನನ್ನು ಮಾಡಲು ದೇವರು ನಿರ್ಧರಿಸಿರುತ್ತಾನೆ?

9 ಇತಿಹಾಸದಲ್ಲಿಲ್ಲಾ ಜನಾಂಗಗಳು ತಮ್ಮ ಎಡೆಬಿಡದ ಯುದ್ಧಕಾರ್ಯಾಚರಣೆಗಳಿಂದ ಮತ್ತು ಕೆಟ್ಟ ವ್ಯವಸ್ಥಾಪನೆಯಿಂದ ಭೂಮಿಯನ್ನು ಧ್ವಂಸಗೊಳಿಸುತ್ತಾ ಇವೆ. ಆದಾಗ್ಯೂ, 1914 ರಿಂದ ಈ ಧ್ವಂಸಗೊಳಿಸುವಿಕೆಯು ಒಂದು ಭಯಸೂಚಕ ಹಂತಕ್ಕೆ ಏರಿದೆ. ದುರಾಶೆ ಮತ್ತು ಭ್ರಷ್ಟಾಚಾರವು, ವಿಸ್ತರಿಸುತ್ತಿರುವ ಮರುಭೂಮಿಗಳನ್ನು ಮತ್ತು ಪ್ರಚಂಡ ರೀತಿಯಲ್ಲಿ ಉತ್ಪಾದಕ ಪ್ರದೇಶಗಳ ನಷ್ಟವನ್ನು ಫಲಿಸಿದೆ. ಆಮ್ಲ (ಆ್ಯಸಿಡ್‌) ಮಳೆ ಮತ್ತು ವಿದ್ಯುತ್‌ ವಿಕಿರಣ ಕ್ರಿಯಾಶಕ್ತಿಯ (ರೇಡಿಯೊಆ್ಯಕ್ಟಿವ್‌) ಮೋಡಗಳು ವಿಸ್ತಾರ ಪ್ರದೇಶಗಳನ್ನು ಹಾಳುಗೆಡವಿವೆ. ಆಹಾರದ ಉಗಮಗಳು ಮಲಿನಗೊಳಿಸಲ್ಪಟ್ಟಿವೆ. ನಾವು ಸೇವಿಸುವ ಗಾಳಿ ಮತ್ತು ಕುಡಿಯುವ ನೀರು ಕಲುಷಿತಗೊಂಡಿದೆ. ಕೈಗಾರಿಕೆಯ ಹಿಪ್ಪೆಗಳು ನೆಲಪ್ರದೇಶದ ಮತ್ತು ಸಮುದ್ರದ ಜೀವಗಳಿಗೆ ಬೆದರಿಕೆಯನ್ನೊಡ್ಡುತ್ತಿವೆ. ಮತ್ತು ಅತಿ ಬಲಾಢ್ಯಶಕ್ತಿಗಳು ಅಣ್ವಸ್ತ್ರಗಳಿಂದ ನಾಶನದ ಮೂಲಕ ಸರ್ವ ಮಾನವಕುಲದ ಸಂಪೂರ್ಣ ವಿನಾಶದ ಬೆದರಿಕೆಯನ್ನೊಡ್ಡುತ್ತವೆ. ಸಂತೋಷಕರವಾಗಿ, ಯೆಹೋವನು “ಭೂಮಿಯನ್ನು ವಿನಾಶಗೊಳಿಸುವವರನ್ನು ವಿನಾಶ” ಮಾಡುವನು; ಭೂಮಿಯ ಇಂಥ ವ್ಯಥೆಬರಿಸುವ ಸ್ಥಿತಿಗೆ ಜವಾಬ್ದಾರರಾದ ಆ ದುರಹಂಕಾರದ, ದೇವಹೀನ ಮಾನವರ ಮೇಲೆ ದೇವರು ನ್ಯಾಯತೀರ್ಪನ್ನು ಜಾರಿಗೊಳಿಸುವನು. (ಧರ್ಮೋಪದೇಶಕಾಂಡ 32:5, 6; ಕೀರ್ತನೆ 14:1-3) ಆದಕಾರಣ, ಈ ತಪ್ಪಿತಸ್ಥರು ಲೆಕ್ಕ ಕೊಡುವಂತೆ ಮಾಡಲು ಯೆಹೋವನು ಮೂರನೆಯ ವಿಪತ್ತಿಗೆ ಏರ್ಪಾಡನ್ನು ಮಾಡುತ್ತಾನೆ.—ಪ್ರಕಟನೆ 11:14.

ವಿನಾಶಕರಿಗೆ ವಿಪತ್ತು!

10. (ಎ) ಮೂರನೆಯ ವಿಪತ್ತು ಏನಾಗಿದೆ? (ಬಿ) ಮೂರನೆಯ ವಿಪತ್ತು ಯಾವ ರೀತಿಯಲ್ಲಿ ಯಾತನೆಗಿಂತಲೂ ಹೆಚ್ಚಿನದ್ದನ್ನು ತರುವುದು?

10 ಹಾಗಾದರೆ ಮೂರನೆಯ ವಿಪತ್ತು ಇಲ್ಲಿ ಇದೆ. ಅದು ಬೇಗನೆ ಬರುತ್ತದೆ! ನಾವು ಜೀವಿಸುತ್ತಿರುವ, ಯೆಹೋವನ “ಪಾದಪೀಠ” ವಾದ ಈ ಸುಂದರವಾದ ಭೂಮಿಯನ್ನು ಪಾಳುಗೆಡಹುತ್ತಿರುವವರ ಮೇಲೆ ನಾಶನವನ್ನು ತರುವ ಯೆಹೋವನ ಮಾಧ್ಯಮವು ಅದಾಗಿದೆ. (ಯೆಶಾಯ 66:1) ಅದು ಮೆಸ್ಸೀಯ ಸಂಬಂಧಿತ ರಾಜ್ಯ—ದೇವರ ಪವಿತ್ರ ರಹಸ್ಯ—ದ ಮೂಲಕ ಕಾರ್ಯರೂಪಕ್ಕೆ ಹಾಕಲ್ಪಡುತ್ತದೆ. ದೇವರ ವಿರೋಧಿಗಳು, ಮತ್ತು ವಿಶೇಷವಾಗಿ ಕ್ರೈಸ್ತಪ್ರಪಂಚದ ಮುಂದಾಳುಗಳು, ಮೊದಲ ಎರಡು ವಿಪತ್ತುಗಳ ಮೂಲಕ—ಮುಖ್ಯವಾಗಿ ಮಿಡತೆಗಳ ಬಾಧೆ ಮತ್ತು ಕುದುರೆಯ ದಂಡಿನವರಿಂದಾಗಿ—ಪೀಡಿಸಲ್ಪಟ್ಟಿದ್ದಾರೆ; ಆದರೆ ಯೆಹೋವನ ರಾಜ್ಯವು ತಾನೇ ನೇರವಾಗಿ ಜಾರಿಗೊಳಿಸುವ ಮೂರನೆಯ ವಿಪತ್ತು, ಯಾತನೆಗಿಂತಲೂ ಹೆಚ್ಚಿನದ್ದನ್ನು ತರುತ್ತದೆ. (ಪ್ರಕಟನೆ 9:3-19) ಒಂದು ವಿನಾಶಕಾರಿ ಮಾನವ ಸಮಾಜ ಮತ್ತು ಅದರ ನಾಯಕರನ್ನು ಹೊರದಬ್ಬುವುದರ ಮೂಲಕ ಅದು ಮಾರಕ ಹೊಡೆತವನ್ನು ಒದಗಿಸುತ್ತದೆ. ಇದು ಅರ್ಮಗೆದೋನಿನಲ್ಲಿ ಯೆಹೋವನ ನ್ಯಾಯದಂಡನೆಯ ಪರಾಕಾಷ್ಠೆಯೋಪಾದಿ ಬರುವುದು. ದಾನಿಯೇಲನು ಪ್ರವಾದಿಸಿದಂತೆ ಅದಿದೆ: “ಆ ರಾಜರ [ಭೂಮಿಯನ್ನು ವಿನಾಶಗೊಳಿಸುವ ಅಧಿಕಾರಿಗಳ] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಒಂದು ಭವ್ಯವಾದ ಪರ್ವತದೋಪಾದಿ, ದೇವರ ರಾಜ್ಯವು ಮಹಿಮಾಭರಿತವಾಗಿ ಮಾಡಲಾಗಿರುವ ಭೂಮಿಯ ಮೇಲೆ ಆಳುವುದು, ಹೀಗೆ ಯೆಹೋವನ ಸಾರ್ವಭೌಮತೆಯನ್ನು ಸಮರ್ಥಿಸುತ್ತಾ, ಮಾನವಕುಲಕ್ಕೆ ನಿತ್ಯ ಸಂತೋಷವನ್ನು ತರುವುದು.—ದಾನಿಯೇಲ 2:35, 44; ಯೆಶಾಯ 11:9; 60:13.

11. (ಎ) ಸಂತೋಷದ ಘಟನೆಗಳ ಯಾವ ಮುಂದರಿಯುತ್ತಿರುವ ಸರಣಿಯನ್ನು ಪ್ರವಾದನೆಯು ವರ್ಣಿಸುತ್ತದೆ? (ಬಿ) ಯಾವ ಅಪಾತ್ರ ದಯೆಯು ದೊರಕಿತು, ಹೇಗೆ, ಮತ್ತು ಯಾರಿಂದ?

11 ಕರ್ತನ ದಿನದಲ್ಲಿ ಪ್ರಗತಿಪರವಾಗಿ ಸಂತೋಷದ ಘಟನೆಗಳ ಮುಂದುವರಿಯುವ ಸರಣಿಯೊಂದಿಗೆ ಮೂರನೆಯ ವಿಪತ್ತು ಜತೆಗೂಡಿದೆ. ಅದು ‘ಸತ್ತವರ ತೀರ್ಪಿಗಾಗಿ ಮತ್ತು ನಿನ್ನ ದಾಸರಾದ ಪ್ರವಾದಿಗಳಿಗೂ ಪವಿತ್ರ ಜನರಿಗೂ ಮತ್ತು ನಿನ್ನ ನಾಮಕ್ಕೆ ಭಯಪಡುತ್ತಿರುವ ಚಿಕ್ಕವರಿಗೂ ಪ್ರತಿಫಲವನ್ನು ಕೊಡಲು’ ಸಮಯವಾಗಿದೆ. ಅದರ ಅರ್ಥ ಸತ್ತವರ ಒಂದು ಪುನರುತ್ಥಾನವಾಗಿರುತ್ತದೆ! ಈಗಾಗಲೇ ಮರಣದಲ್ಲಿ ನಿದ್ರಿಸುತ್ತಿರುವ ಅಭಿಷಿಕ್ತ ಪವಿತ್ರ ಜನರಿಗೆ ಕರ್ತನ ದಿನದ ಆರಂಭದಲ್ಲಿ ಇದು ಸಂಭವಿಸುತ್ತದೆ. (1 ಥೆಸಲೊನೀಕ 4:15-17) ಸಮಯಾನಂತರ ಉಳಿದ ಪವಿತ್ರ ಜನರು ತತ್‌ಕ್ಷಣದ ಪುನರುತ್ಥಾನದ ಮೂಲಕ ಅವರೊಂದಿಗೆ ಜತೆಗೂಡುವರು. ಪುರಾತನ ಸಮಯದ ಪ್ರವಾದಿಗಳಾದ ದೇವರ ದಾಸರ ಸಹಿತ ಮತ್ತು ಯೆಹೋವನ ನಾಮಕ್ಕೆ ಭಯಪಡುವ ಮಾನವಕುಲದ ಇನ್ನಿತರರೆಲ್ಲರಿಗೂ—ಅವರು ಮಹಾ ಸಂಕಟದಿಂದ ಪಾರಾಗುವ ಮಹಾ ಸಮೂಹದವರಾಗಿರಲಿ ಯಾ ಕ್ರಿಸ್ತನ ಸಾವಿರ ವರ್ಷಗಳ ಆಳಿಕ್ವೆಯಲ್ಲಿ “ಸತ್ತವರಾಗಿದ್ದ ದೊಡ್ಡವರೂ, ಚಿಕ್ಕವರೂ” ಆಗಿದ್ದು ಪುನಃ ಜೀವಕ್ಕೆ ಎಬ್ಬಿಸಲ್ಪಟ್ಟವರೂ ಆಗಿರಲಿ—ಪ್ರತಿಫಲವನ್ನೀಯಲಾಗುವುದು. ದೇವರ ಮೆಸ್ಸೀಯ ಸಂಬಂಧಿತ ರಾಜನ ಕೈಯಲ್ಲಿ ಮರಣದ ಮತ್ತು ಅಧೋಲೋಕದ (ಹೇಡಿಸ್‌) ಬೀಗದ ಕೈಗಳು ಇರುವುದರಿಂದ ಅವನ ರಾಜ್ಯಾಳಿಕೆಯು ಆ ಅಮೂಲ್ಯ ಒದಗಿಸುವಿಕೆಯನ್ನು ಎಟಕಿಸಿಕೊಳ್ಳುವ ಎಲ್ಲರಿಗೂ ನಿತ್ಯಜೀವವನ್ನು ನೀಡಲು ಅವನಿಗೆ ದಾರಿಯನ್ನು ತೆರೆಯುತ್ತದೆ. (ಪ್ರಕಟನೆ 1:18; 7:9, 14; 20:12, 13; ರೋಮಾಪುರ 6:22; ಯೋಹಾನ 5:28, 29) ಅದು ಪರಲೋಕದ ಅಮರ ಜೀವವಾಗಿರಲಿ ಯಾ ಭೂಮಿಯ ಮೇಲಣ ನಿತ್ಯ ಜೀವವಾಗಿರಲಿ, ಈ ಜೀವದ ವರದಾನವು ಯೆಹೋವನ ಒಂದು ಅಪಾತ್ರ ದಯೆಯಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಗ್ರಾಹಕನು ಸದಾಕಾಲಕ್ಕೂ ಕೃತಜ್ಞನಾಗಿರಬಹುದು!—ಇಬ್ರಿಯ 2:9.

ಅವನ ಒಡಂಬಡಿಕೆಯ ಮಂಜೂಷವನ್ನು ನೋಡಿರಿ!

12. (ಎ) ಪ್ರಕಟನೆ 11:19 ಕ್ಕನುಸಾರ, ಯೋಹಾನನು ಪರಲೋಕದಲ್ಲಿ ಏನನ್ನು ಕಾಣುತ್ತಾನೆ? (ಬಿ) ಒಡಂಬಡಿಕೆಯ ಮಂಜೂಷವು ಯಾವುದರ ಸಂಕೇತವಾಗಿತ್ತು, ಮತ್ತು ಇಸ್ರಾಯೇಲ್ಯರು ಬಾಬೆಲಿನ ಬಂದಿವಾಸಕ್ಕೆ ತೆರಳಿದ ಅನಂತರ ಅದಕ್ಕೇನು ಸಂಭವಿಸಿತು?

12 ಯೆಹೋವನು ಆಳುತ್ತಾನೆ! ತನ್ನ ಮೆಸ್ಸೀಯ ಸಂಬಂಧಿತ ರಾಜ್ಯದ ಮೂಲಕ, ಅವನು ತನ್ನ ಸಾರ್ವಭೌಮತ್ವವನ್ನು ಮಾನವಕುಲದ ಮೇಲೆ ಅದ್ಭುತಕರ ರೀತಿಯಲ್ಲಿ ಚಲಾಯಿಸುತ್ತಿದ್ದಾನೆ. ತದನಂತರ ಯೋಹಾನನು ಏನನ್ನು ನೋಡುತ್ತಾನೋ ಅದರಿಂದ ಇದು ಸ್ಥಿರೀಕರಿಸಲ್ಪಡುತ್ತದೆ: “ಮತ್ತು ಪರಲೋಕದಲ್ಲಿರುವ ದೇವರ ಆಲಯದ ಪವಿತ್ರ ಸ್ಥಾನವು ತೆರೆಯಿತು, ಆತನ ದೇವಾಲಯದ ಪವಿತ್ರ ಸ್ಥಾನದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಮತ್ತು ಮಿಂಚುಗಳು ಮತ್ತು ವಾಣಿಗಳು ಮತ್ತು ಗುಡುಗುಗಳು ಮತ್ತು ಭೂಕಂಪ ಮತ್ತು ಆನೆಕಲ್ಲಿನ ದೊಡ್ಡ ಮಳೆ ಉಂಟಾದವು.” (ಪ್ರಕಟನೆ 11:19, NW) ಪ್ರಕಟನೆಯಲ್ಲಿ ದೇವರ ಒಡಂಬಡಿಕೆಯ ಮಂಜೂಷದ ಒಂದೇ ಒಂದು ಉಲ್ಲೇಖವು ಇದಾಗಿದೆ. ಮಂಜೂಷವು ಅವನ ಜನರಾದ ಇಸ್ರಾಯೇಲಿನೊಂದಿಗೆ ಯೆಹೋವನ ಸಾನ್ನಿಧ್ಯದ ದೃಶ್ಯ ಸಂಕೇತವಾಗಿ ಇತ್ತು. ದೇವದರ್ಶನದ ಗುಡಾರದಲ್ಲಿ, ಮತ್ತು ಅನಂತರ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಇದನ್ನು ಅತೀ ಪವಿತ್ರ ಸ್ಥಾನದಲ್ಲಿ ಇಡಲಾಗಿತ್ತು. ಆದರೆ ಇಸ್ರಾಯೇಲ್ಯರು ಸಾ. ಶ. ಪೂ. 607 ರಲ್ಲಿ ಬಾಬೆಲಿನ ಬಂದಿವಾಸಕ್ಕೊಯ್ಯಲ್ಪಟ್ಟಾಗ, ಯೆರೂಸಲೇಮ್‌ ನಿರ್ಜನಗೊಂಡಿತು ಮತ್ತು ಒಡಂಬಡಿಕೆಯ ಮಂಜೂಷವು ಕಾಣೆಯಾಯಿತು. ಆಗಲೇ ದಾವೀದನ ಮನೆತನದ ಪ್ರತಿನಿಧಿಗಳು “ಯೆಹೋವನ ಸಿಂಹಾಸನದ ಮೇಲೆ ರಾಜರಾಗಿ ಕುಳಿತುಕೊಳ್ಳುವುದು” ನಿಂತುಹೋಯಿತು.—1 ಪೂರ್ವಕಾಲವೃತ್ತಾಂತ 29:23. *

13. ದೇವರ ಸ್ವರ್ಗೀಯ ಆಲಯದ ಪವಿತ್ರಸ್ಥಾನದಲ್ಲಿ ದೇವರ ಒಡಂಬಡಿಕೆಯ ಮಂಜೂಷವು ಕಾಣಲ್ಪಡುವುದರ ವಾಸ್ತವಾಂಶದಿಂದ ಏನು ಸೂಚಿತವಾಗಿದೆ?

13 ಈಗ ಸುಮಾರು 2,500 ವರ್ಷಗಳ ಅನಂತರ ಪುನಃ ಒಮ್ಮೆ ಮಂಜೂಷವು ಕಾಣಿಸುತ್ತದೆ. ಆದರೆ ಯೋಹಾನನ ದರ್ಶನದಲ್ಲಿ ಈ ಮಂಜೂಷವು ಭೂಮಿಯ ಮೇಲಣ ದೇವಾಲಯವೊಂದರಲ್ಲಿ ಇಲ್ಲ. ದೇವರ ಪರಲೋಕದ ಆಲಯದ ಪವಿತ್ರ ಸ್ಥಾನದಲ್ಲಿ ಅದು ಕಂಡುಬರುತ್ತದೆ. ಪುನಃ ಒಮ್ಮೆ, ದಾವೀದನ ರಾಜವಂಶದ ರಾಜನೊಬ್ಬನ ಮೂಲಕ ಯೆಹೋವನು ಆಳುತ್ತಾನೆ. ಆದಾಗ್ಯೂ, ಈಗ ಅರಸ ಕ್ರಿಸ್ತ ಯೇಸುವು ಸ್ವರ್ಗೀಯ ಯೆರೂಸಲೇಮಿನಲ್ಲಿ ಸಿಂಹಾಸನಾಸೀನನಾಗಿದ್ದಾನೆ—ಆ ಉನ್ನತಿಗೇರಿಸಲ್ಪಟ್ಟ ಬಿಂದುವಿನಿಂದ ಅವನು ಯೆಹೋವನ ನ್ಯಾಯತೀರ್ಪುಗಳನ್ನು ಜಾರಿಗೊಳಿಸುತ್ತಾನೆ. (ಇಬ್ರಿಯ 12:22) ಪ್ರಕಟನೆಯ ಮುಂದಿನ ಅಧ್ಯಾಯಗಳು ಇದನ್ನು ನಮಗೆ ತೆರೆದು ತೋರಿಸುವುವು.

14, 15. (ಎ) ಪುರಾತನ ಯೆರೂಸಲೇಮಿನಲ್ಲಿ ಯಾರು ಮಾತ್ರವೇ ಒಡಂಬಡಿಕೆಯ ಮಂಜೂಷವನ್ನು ಕಾಣಶಕ್ತರಾಗಿದ್ದರು, ಮತ್ತು ಯಾಕೆ? (ಬಿ) ದೇವರ ಸ್ವರ್ಗೀಯ ಆಲಯದ ಪವಿತ್ರಸ್ಥಾನದಲ್ಲಿ, ಒಡಂಬಡಿಕೆಯ ಮಂಜೂಷವನ್ನು ಯಾರು ನೋಡಶಕ್ತರಾಗುತ್ತಾರೆ?

14 ಪುರಾತನ ಐಹಿಕ ಯೆರೂಸಲೇಮಿನಲ್ಲಿ, ಸಾಮಾನ್ಯವಾಗಿ ಇಸ್ರಾಯೇಲ್ಯರು, ಯಾ ದೇವಾಲಯದಲ್ಲಿ ಸೇವಿಸುತ್ತಿರುವ ಯಾಜಕರು ಮಂಜೂಷವನ್ನು ಕಾಣುತ್ತಿರಲ್ಲಿಲ, ಯಾಕಂದರೆ ಅದು ಅತಿ ಪವಿತ್ರ ಸ್ಥಾನದಲ್ಲಿದ್ದು, ಪವಿತ್ರ ಸ್ಥಾನದಿಂದ ಒಂದು ತೆರೆಯ ಮೂಲಕ ಪ್ರತ್ಯೇಕಿಸಲ್ಪಟ್ಟಿತ್ತು. (ಅರಣ್ಯಕಾಂಡ 4:20; ಇಬ್ರಿಯ 9:2, 3) ವಾರ್ಷಿಕ ದೋಷಪರಿಹಾರಕ ದಿನದಲ್ಲಿ ಕೇವಲ ಮಹಾ ಯಾಜಕನು ಅತಿ ಪವಿತ್ರ ಸ್ಥಾನದಲ್ಲಿ ಪ್ರವೇಶಿಸಿದಾಗ ಅದನ್ನು ಕಾಣಲು ಶಕ್ತನಾಗುತ್ತಿದ್ದನು. ಆದಾಗ್ಯೂ, ಪರಲೋಕದಲ್ಲಿ ಆಲಯದ ಪವಿತ್ರ ಸ್ಥಾನವು ತೆರೆಯಲ್ಪಟ್ಟಾಗ, ಸಾಂಕೇತಿಕ ಮಂಜೂಷವು ಯೆಹೋವನ ಮಹಾ ಯಾಜಕನಾದ ಯೇಸು ಕ್ರಿಸ್ತನಿಗೆ ಮಾತ್ರ ದೃಶ್ಯಗೋಚರವಾಗುವುದಿಲ್ಲ, ಬದಲಾಗಿ ಯೋಹಾನನ ಸಹಿತ ಅವನ ಉಪಯಾಜಕರಾದ 1,44,000 ಮಂದಿಗೂ ಗೋಚರವಾಗುತ್ತದೆ.

15 ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಮೊದಲಿಗರು ಈ ಸಾಂಕೇತಿಕ ಮಂಜೂಷವನ್ನು ಸಮೀಪದಿಂದ ನೋಡುತ್ತಾರೆ, ಯಾಕಂದರೆ ಅವರು ಯೆಹೋವನ ಸಿಂಹಾಸನದ ಸುತ್ತಲೂ ಇರುವ 24 ಹಿರಿಯರ ಒಂದು ಭಾಗದೋಪಾದಿ ತಮ್ಮ ಸ್ಥಾನವನ್ನು ತೆಗೆದುಕೊಂಡಿರುತ್ತಾರೆ. ಮತ್ತು ಭೂಮಿಯ ಮೇಲಿರುವ ಯೋಹಾನ ವರ್ಗದವರು, ಅವನ ಆತ್ಮಿಕ ಆಲಯದಲ್ಲಿ ಅವನ ಸಾನ್ನಿಧ್ಯವನ್ನು ವಿವೇಚಿಸಲು, ಯೆಹೋವನ ಆತ್ಮದ ಮೂಲಕ ಜ್ಞಾನೋದಯ ಪಡೆದವರಾಗಿದ್ದಾರೆ. ಈ ಅಚ್ಚರಿಗೊಳಿಸುವ ಬೆಳವಣಿಗೆಗೆ ಸಚೇತಕಗೊಳಿಸಲು ಸಾಮಾನ್ಯವಾಗಿ ಮಾನವಕುಲಕ್ಕೆ ಸೂಚನೆಗಳು ಸಹ ಇದ್ದವು. ಯೋಹಾನನ ದರ್ಶನವು ಮಿಂಚುಗಳ, ವಾಣಿಗಳ, ಗುಡುಗುಗಳ, ಒಂದು ಭೂಕಂಪದ ಮತ್ತು ಆನೆಕಲ್ಲಿನ ಮಳೆಯ ಕುರಿತು ಮಾತಾಡುತ್ತದೆ. (ಪ್ರಕಟನೆ 8:5 ಹೋಲಿಸಿರಿ.) ಇವು ಏನನ್ನು ಸಂಕೇತಿಸುತ್ತವೆ?

16. ಮಿಂಚುಗಳು, ವಾಣಿಗಳು, ಗುಡುಗುಗಳು, ಒಂದು ಭೂಕಂಪ, ಮತ್ತು ಮಹಾ ಆನೆಕಲ್ಲಿನ ಮಳೆ ಯಾವ ರೀತಿಯಲ್ಲಿ ಆಗಿದೆ?

16 ಧಾರ್ಮಿಕ ಕ್ಷೇತ್ರದಲ್ಲಿ ಪ್ರಚಂಡವಾದ ಏರಿಳಿತಗಳು 1914 ರಿಂದ ಹಿಡಿದು ನಡೆದಿವೆ. ಆದರೂ, ಸಂತಸಕರವಾಗಿಯೇ, ಈ “ಭೂಕಂಪವು” ದೇವರ ರಾಜ್ಯದ ಸ್ಥಾಪನೆಯ ಕುರಿತಾದ ಒಂದು ಸ್ಪಷ್ಟ ಸಂದೇಶವನ್ನು ಕೊಡುವ ಸಮರ್ಪಿತ ವಾಣಿಗಳಿಂದ ಜತೆಗೂಡಿದೆ. ಬೈಬಲಿನಿಂದ ಗುಡುಗುಗಳಂಥ ‘ಬಿರುಗಾಳಿಯ ಎಚ್ಚರಿಕೆಗಳು’ ಧ್ವನಿಸಲ್ಪಟ್ಟಿವೆ. ಮಿಂಚುಗಳೋಪಾದಿ, ದೇವರ ಪ್ರವಾದನಾ ವಾಕ್ಯದ ವಿವೇಚನೆಯ ಹೊಳಪುಗಳು ನೋಡಲ್ಪಟ್ಟಿವೆ ಮತ್ತು ಪ್ರಚುರಗೊಳಿಸಲ್ಪಟ್ಟಿವೆ. ದೈವಿಕ ನ್ಯಾಯತೀರ್ಪುಗಳ ಕಠಿನವಾಗಿ ಹೊಡೆಯುವ “ಆನೆಕಲ್ಲಿನ ಮಳೆಯು” ಕ್ರೈಸ್ತಪ್ರಪಂಚದ ಮತ್ತು ಸುಳ್ಳು ಧರ್ಮದ ವಿರುದ್ಧವಾಗಿ ಸಾಮಾನ್ಯವಾಗಿ ಬಿಡುಗಡೆಗೊಳಿಸಲ್ಪಟ್ಟಿದೆ. ಇವೆಲ್ಲವೂ ಜನರ ಗಮನವನ್ನು ಸೆಳೆಯಬೇಕಿತ್ತು. ಆದರೂ, ವಿಷಾದನೀಯವಾಗಿ ಅಧಿಕಾಂಶ ಜನರು—ಯೇಸುವಿನ ದಿನಗಳ ಯೆರೂಸಲೇಮಿನ ಜನರಂತೆ—ಪ್ರಕಟನೆಯ ಈ ಚಿಹ್ನೆಗಳ ನೆರವೇರಿಕೆಯನ್ನು ವಿವೇಚಿಸಲು ತಪ್ಪಿಹೋಗಿದ್ದಾರೆ.—ಲೂಕ 19:41-44.

17, 18. (ಎ) ಏಳು ದೇವದೂತರ ತುತೂರಿಗಳ ಧ್ವನಿಸುವಿಕೆಯು ಸಮರ್ಪಿತ ಕ್ರೈಸ್ತರ ಮೇಲೆ ಯಾವ ಜವಾಬ್ದಾರಿಯನ್ನು ತಂದಿದೆ? (ಬಿ) ತಮ್ಮ ನಿಯೋಗವನ್ನು ಕ್ರೈಸ್ತರು ಹೇಗೆ ಪೂರೈಸುತ್ತಿದ್ದಾರೆ?

17 ಇಲ್ಲಿ ಭೂಮಿಯ ಮೇಲೆ ಐತಿಹಾಸಿಕ ಘಟನೆಗಳ ಸಂಕೇತವಾಗಿ ಏಳು ದೇವದೂತರು ಅವರ ತುತೂರಿಗಳನ್ನು ಧ್ವನಿಸುವುದನ್ನು ಮುಂದರಿಸಿದ್ದಾರೆ. ಲೋಕಕ್ಕೆ ಈ ಪ್ರಕಟನೆಗಳನ್ನು ಘೋಷಿಸುವುದನ್ನು ಮುಂದರಿಸುವ ಮಹಾ ಜವಾಬ್ದಾರಿಯು ಸಮರ್ಪಿತ ಕ್ರೈಸ್ತರಿಗೆ ಇರುತ್ತದೆ. ಅವರು ತಮ್ಮ ನಿಯೋಗವನ್ನು ಎಷ್ಟೊಂದು ಸಂತೋಷದಿಂದ ಪೂರೈಸುತ್ತಾ ಇದ್ದಾರೆ! ಇದು ಹೇಗೆ ಸೂಚಿಸಲ್ಪಟ್ಟಿದೆಯೆಂದರೆ ಇತ್ತೀಚೆಗಿನ ಹತ್ತು ವರ್ಷಗಳಲ್ಲಿ ಅಂದರೆ 1984 ರಿಂದ 1993ರ ತನಕ ಸೂಚಿಸಲ್ಪಟ್ಟಿದೆ, ಅವರ ಭೌಗೋಲಿಕ ಶುಶ್ರೂಷೆಯಲ್ಲಿ ವಾರ್ಷಿಕವಾಗಿ ವ್ಯಯಿಸಿದ ಅವರ ತಾಸುಗಳು ಇಮ್ಮಡಿಗೊಂಡಿವೆ—50,55,88,037 ರಿಂದ 105,73,41,972—109 ಪ್ರತಿಶತ ಅಭಿವೃದ್ಧಿ. ನಿಜವಾಗಿಯೂ, “ಶುಭವರ್ತಮಾನಕ್ಕನುಸಾರ ದೇವರ ಪವಿತ್ರ ರಹಸ್ಯ” ವನ್ನು “ಲೋಕದ ಕಟ್ಟಕಡೆಯ ವರೆಗೂ” ಪ್ರಚುರಗೊಳಿಸಲಾಗುತ್ತದೆ.—ಪ್ರಕಟನೆ 10:7; ರೋಮಾಪುರ 10:18.

18 ದೇವರ ರಾಜ್ಯದ ಉದ್ದೇಶಗಳು ತೆರೆಯಲ್ಪಡುತ್ತಾ ಮುಂದರಿದಷ್ಟಕ್ಕೆ ಇತರ ದರ್ಶನಗಳು ಈಗ ನಮಗಾಗಿ ಕಾದುನಿಂತಿವೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 12 ಯೆರೂಸಲೇಮ್‌ ಸಾ. ಶ. ಪೂ. 63 ರಲ್ಲಿ ವಶಗೊಳಿಸಲ್ಪಟ್ಟಾಗ, ಮತ್ತು ಕ್ನೇಯಸ್‌ ಪಾಂಪೀಯಸ್‌ ದೇವಾಲಯದ ಪವಿತ್ರ ಸ್ಥಾನದಲ್ಲಿ ಪ್ರವೇಶಿಸಿದಾಗ, ಅದು ಬರೀದಾಗಿರುವುದನ್ನು ಕಂಡನೆಂದು ರೋಮನ್‌ ಇತಿಹಾಸಗಾರ ಟಾಸಿಟಸ್‌ ವರದಿಸುತ್ತಾನೆ. ಅಲ್ಲಿ ಒಡಂಬಡಿಕೆಯ ಮಂಜೂಷವು ಇರಲ್ಲಿಲ.—ಟಾಸಿಟಸ್‌ ಹಿಸ್ಟರಿ, 5.9.

[ಅಧ್ಯಯನ ಪ್ರಶ್ನೆಗಳು]

[ಪುಟ 284 ರಲ್ಲಿರುವ ಚೌಕ]

ಯೆಹೋವನ ತುತೂರಿಯಂಥ ನ್ಯಾಯತೀರ್ಪಿನ ಘೋಷಣೆಗಳ ಮುಖ್ಯಾಂಶಗಳು

1. 1922 ಸೀಡರ್‌ ಪಾಯಿಂಟ್‌, ಒಹೈಯೋ: ಧರ್ಮ, ರಾಜಕೀಯ, ಮತ್ತು ದೊಡ್ಡ ವಾಣಿಜ್ಯಗಳಲ್ಲಿರುವ ಕ್ರೈಸ್ತಪ್ರಪಂಚದ ನಾಯಕರಿಗೆ ಶಾಂತಿ, ಅಭ್ಯುದಯ, ಮತ್ತು ಸಂತೋಷವನ್ನು ತರಲು ಅವರು ತಪ್ಪಿಹೋಗಿರುವುದನ್ನು ಸಮರ್ಥಿಸಲು ಒಂದು ಪಂಥಾಹ್ವಾನ. ಮೆಸ್ಸೀಯನ ರಾಜ್ಯವು ಸರ್ವರೋಗಾಪಹಾರಿ.

2. 1923 ಲಾಸ್‌ ಏಂಜಲೀಸ್‌, ಕ್ಯಾಲಿಫಾರ್ನಿಯ: “ಎಲ್ಲಾ ಜನಾಂಗಗಳು ಅರ್ಮಗೆದೋನಿಗೆ ಮುನ್ನಡೆಯುತ್ತವೆ, ಆದರೆ ಇಂದು ಜೀವಿಸುವ ಲಕ್ಷಾಂತರ ಮಂದಿ ಎಂದಿಗೂ ಸಾಯುವುದಿಲ್ಲ,” ಎಂಬ ಸಾರ್ವಜನಿಕ ಭಾಷಣವು ಶಾಂತಿಪ್ರಿಯ “ಕುರಿಗಳಿಗೆ” ಮಾನವಕುಲದ ಮರಣಕಾರಕ ಸಮುದ್ರವನ್ನು ತೊರೆಯುವಂತೆ ಕರೆಯನ್ನಿತಿತ್ತು.

3. 1924 ಕೊಲಂಬಸ್‌, ಒಹೈಯೋ: ಸ್ವತಃ ಹೆಚ್ಚಿಸಿಕೊಳ್ಳುವಿಕೆ ಮತ್ತು ಮೆಸ್ಸೀಯನ ರಾಜ್ಯವನ್ನು ಸಾರಲು ನಿರಾಕರಣೆಗಾಗಿ ವೈದಿಕರು ಆಪಾದಿಸಲ್ಪಟ್ಟದ್ದು. ನಿಜ ಕ್ರೈಸ್ತರು ದೇವರ ಮುಯ್ಯಿತೀರಿಸುವಿಕೆಯನ್ನು ಸಾರಬೇಕು ಮತ್ತು ರೋದಿಸುವ ಮಾನವ ಕುಲವನ್ನು ಸಂತೈಸತಕ್ಕದ್ದು.

4. 1925 ಇಂಡಿಯನಾಪೊಲಿಸ್‌, ಇಂಡಿಯಾನ: ಕ್ರೈಸ್ತಪ್ರಪಂಚದ ಆತ್ಮಿಕ ಕತ್ತಲೆಯನ್ನು ಶಾಂತಿ, ಅಭ್ಯುದಯ, ಆರೋಗ್ಯ, ಜೀವ, ಸ್ವಾತಂತ್ರ್ಯ, ಮತ್ತು ನಿತ್ಯ ಸಂತೋಷದ ಒಂದು ಉಜ್ವಲ ರಾಜ್ಯ ವಾಗ್ದಾನದೊಂದಿಗೆ ನಿರೀಕ್ಷೆಯ ಒಂದು ಸಂದೇಶದೊಂದಿಗೆ ಹೋಲಿಸುವಿಕೆ.

5. 1926 ಲಂಡನ್‌, ಇಂಗ್ಲೆಂಡ್‌: ಕ್ರೈಸ್ತಪ್ರಪಂಚದ ಮತ್ತು ಅದರ ವೈದಿಕರನ್ನು ಮಿಡತೆಯಂತಹ ಪೀಡಿಸುವಿಕೆ, ದೇವರ ರಾಜ್ಯದ ಅವರ ತಿರಸ್ಕರಿಸುವಿಕೆಯ ಬಯಲುಮಾಡುವಿಕೆ ಮತ್ತು ಸ್ವರ್ಗೀಯ ಸರಕಾರದ ಜನನಕ್ಕಾಗಿ ಜಯಕಾರವೆತ್ತುವುದು.

6. 1927 ಟೊರಾಂಟೊ, ಕೆನಡ: ‘ಸಂಸ್ಥಾಪಿತ ಕ್ರೈಸ್ತತ್ವ’ ವನ್ನು ತ್ಯಜಿಸುವಂತೆ ಮತ್ತು ಯೆಹೋವ ದೇವರಿಗೆ ಮತ್ತು ಅವನ ರಾಜನಿಗೆ ಮತ್ತು ರಾಜ್ಯಕ್ಕೆ ಹೃದಯಪೂರ್ವಕ ನಿಷ್ಠೆಯನ್ನು ತೋರಿಸಲು ಜನರಿಗೆ ಕರೆಕೊಡುವ ಕುದುರೆಯ ದಂಡಿನವರಿಂದ ಒಯ್ಯಲ್ಪಡುತ್ತದೋ ಎಂಬಂತಿರುವ ಒಂದು ಆಮಂತ್ರಣ.

7. 1928 ಡೆಟ್ರೈಟ್‌, ಮಿಶಿಗನ್‌: ದೇವರ ಅಭಿಷಿಕ್ತ ಅರಸನು 1914 ರಲ್ಲಿ ಸಿಂಹಾಸನಾಸೀನನಾಗಿದ್ದು, ಸೈತಾನನ ದುಷ್ಟ ಸಂಸ್ಥೆಯನ್ನು ನಾಶಮಾಡಲಿರುವನು ಮತ್ತು ಮಾನವಕುಲವನ್ನು ಬಿಡಿಸಲಿರುವನು ಎಂಬದನ್ನು ಸ್ಪಷ್ಟಪಡಿಸುತ್ತಾ ಸೈತಾನನ ವಿರೋಧವಾಗಿ ಮತ್ತು ಯೆಹೋವನ ಪರವಾಗಿ ಒಂದು ಘೋಷಣೆ.

[ಪುಟ 286 ರಲ್ಲಿರುವ ಚೌಕ]

ಭೂಮಿಯನ್ನು ವಿನಾಶಗೊಳಿಸುವುದು

“ಪ್ರತಿ ಮೂರು ಸೆಕಂಡುಗಳಿಗೆ ಕಾಲ್ಚೆಂಡಾಟದ (ಫುಟ್‌ಬಾಲ್‌) ಮೈದಾನದಷ್ಟು ವಿಸ್ತಾರದ ಮೂಲ ಮಳೆಕಾಡು ಕಾಣೆಯಾಗುತ್ತಲಿದೆ. . . . ಮೂಲದ ಕಾಡುಗಳ ನಷ್ಟವು ಸಾವಿರಾರು ಸಸ್ಯಗಳನ್ನು ಮತ್ತು ಪ್ರಾಣಿಜಾತಿಗಳನ್ನು ನಾಶಗೊಳಿಸುತ್ತಿದೆ.”—ಇಲಸ್ಟ್ರೇಟೆಡ್‌ ಆ್ಯಟ್ಲಸ್‌ ಆಫ್‌ ದ ವರ್ಲ್ಡ್‌ (ರ್ಯಾಂಡ್‌ ಮಕ್ನ್ಯಾಲಿ)

“ನೆಲಸುನಾಡಿನ, ಎರಡು ಶತಕಗಳಲ್ಲಿ [ದ ಗ್ರೇಟ್‌ ಲೇಕ್ಸ್‌] ಕೂಡ ಲೋಕದ ಅತ್ಯಂತ ದೊಡ್ಡ ಗ್ರಾಮಸಾರದ ಮೋರಿ ಆಗಿರುತ್ತದೆ.”—ದ ಗ್ಲೋಬ್‌ ಆ್ಯಂಡ್‌ ಮೇಲ್‌ (ಕೆನಡ)

ಏಪ್ರಿಲ್‌ 1986 ರಲ್ಲಿ ರಶ್ಯದ ಚೆರ್ನಾಬಿಲ್‌ನಲ್ಲಿ ಆದ ಅಣುಶಕ್ತಿ ಸ್ಥಾವರದ ಸ್ಫೋಟನ ಮತ್ತು ಬೆಂಕಿಯು “ಹಿರೊಶೀಮ ಮತ್ತು ನಾಗಸಾಕಿಯ ಬಾಂಬುಗಳನ್ನು ಎಸೆದಂದಿನಿಂದ, ಅತಿ ಗಮನಾರ್ಹವಾದ ನ್ಯೂಕ್ಲಿಯರ್‌ ಘಟನೆಯಾಗಿದ್ದು, ಇದು ಲೋಕದ ಗಾಳಿ, ಮೇಲಿನ ಹಂತದ ಮಣ್ಣು ಮತ್ತು ನೀರುಗಳ ಮೇಲೆ ಇದುವರೆಗೆ ಮಾಡಿರುವ ಎಲ್ಲ ಅಣುಶಕ್ತಿಯ ಪರೀಕ್ಷೆಗಳ ಮತ್ತು ಸ್ಫೋಟಿಸಲ್ಪಟ್ಟ ಬಾಂಬುಗಳಿಗಿಂತಲೂ ಹೆಚ್ಚು ದೀರ್ಘಕಾಲದ ವಿದ್ಯುತ್‌ ವಿಕಿರಣವನ್ನು” ಹೊರಸೂಸಿತು.—ಜಾಮಾ; ದ ನ್ಯೂ ಯಾರ್ಕ್‌ ಟೈಮ್ಸ್‌.

ಜಪಾನಿನ ಮಿನಮಾಟಾದಲ್ಲಿ ಸಮುದ್ರಕೊಲ್ಲಿಯೊಂದಕ್ಕೆ ಒಂದು ರಾಸಾಯನಿಕ ಸ್ಥಾವರವು ಮೆತಿಲ್‌ಮರ್ಕ್ಯುರಿಯನ್ನು ವಿಸರ್ಜಿಸಿತು. ಈ ಮಾಲಿನ್ಯದಿಂದ ಕಲುಷಿತವಾದ ಮೀನುಗಳನ್ನು ಮತ್ತು ಚಿಪ್ಪುಮೀನುಗಳನ್ನು ತಿನ್ನುವುದು ಮಿನಮಾಟಾ ರೋಗ (MD)ಕ್ಕೆ ಕಾರಣವಾಯಿತು, ಇದು “ಅಸ್ತಿಗತ ನರವ್ಯೂಹದ ರೋಗ. . . . ಇಂದಿನ ತನಕ (1985) 2,578 ಜನರು ಜಪಾನಿನಲ್ಲಿಲ್ಲಾ ಅಧಿಕೃತವಾಗಿ ಮಿನಮಾಟಾ ರೋಗ (MD) ಪಡೆದಿದ್ದಾರೆಂಬುದಕ್ಕೆ ರುಜುವಾತಿದೆ.”—ಇಂಟರ್‌ನ್ಯಾಶನಲ್‌ ಜರ್ನಲ್‌ ಆಫ್‌ ಎಪಿಡೀಮಿಯಾಲೊಜಿ.

[ಪುಟ 287 ರಲ್ಲಿರುವ ಚೌಕ]

ಪ್ರಕಟನೆ 11:15-19 ರಲ್ಲಿನ ಗಂಭೀರವಾದ ಘೋಷಣೆಗಳು ಹಿಂಬಾಲಿಸಿ ಬರುವ ದರ್ಶನಗಳಿಗೆ ಒಂದು ಪ್ರಸ್ತಾವನೆಯಾಗಿದೆ. ಪ್ರಕಟನೆ 11:15, 17 ರಲ್ಲಿರುವ ಮಹತ್ತಾದ ಪ್ರಕಟನೆಗಳ ವಿವರಣೆಯನ್ನು ವರ್ಧಿಸುವ ಒಂದು ಹೊಳಪುಹಿನ್ನೋಟ ಪ್ರಕಟನೆ ಅಧ್ಯಾಯ 12 ಆಗಿರುತ್ತದೆ. ಭೂಮಿಗೆ ನಾಶನವನ್ನು ತಂದ ಸೈತಾನನ ರಾಜಕೀಯ ಸಂಸ್ಥೆಯ ಉಗಮ ಮತ್ತು ಬೆಳವಣಿಗೆಯನ್ನು ಅದು ವಿವರಿಸುತ್ತಿದ್ದಂತೆ, 11:18ರ ಹಿನ್ನೆಲೆಯನ್ನು ಅಧ್ಯಾಯ 13 ಒದಗಿಸುತ್ತದೆ. ಏಳನೆಯ ತುತೂರಿಯ ಧ್ವನಿಸುವಿಕೆಯೊಂದಿಗೆ ಮತ್ತು ಮೂರನೆಯ ವಿಪತ್ತಿನೊಂದಿಗೆ ಜೋಡಿಸಲ್ಪಟ್ಟ ರಾಜ್ಯ ನ್ಯಾಯತೀರ್ಪುಗಳನ್ನು ಅಧ್ಯಾಯ 14 ಮತ್ತು 15 ಇನ್ನಷ್ಟು ವಿವರಿಸುತ್ತದೆ.

[ಪುಟ 285 ರಲ್ಲಿರುವ ಚಿತ್ರಗಳು]

ಯೆಹೋವನು “ಭೂಮಿಯ ವಿನಾಶಗೊಳಿಸುವವರನ್ನು ವಿನಾಶಮಾಡುವನು”