ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಲ್ಕು ರಾಹುತರು ನಾಗಾಲೋಟದಲ್ಲಿ!

ನಾಲ್ಕು ರಾಹುತರು ನಾಗಾಲೋಟದಲ್ಲಿ!

ಅಧ್ಯಾಯ 16

ನಾಲ್ಕು ರಾಹುತರು ನಾಗಾಲೋಟದಲ್ಲಿ!

ದರ್ಶನ 3—ಪ್ರಕಟನೆ 6:1-17

ವಿಷಯ: ನಾಲ್ಕು ಕುದುರೆ ರಾಹುತರ ಸವಾರಿ, ಯಜ್ಞವೇದಿಯ ಕೆಳಗೆ ವಧಿಸಲ್ಪಟ್ಟ ಸಾಕ್ಷಿಗಳು, ಮತ್ತು ಕೋಪದ ಮಹಾದಿನ

ನೆರವೇರಿಕೆಯ ಸಮಯ: 1914 ರಿಂದ ಆರಂಭಿಸಿ ವಿಷಯಗಳ ಈ ವ್ಯವಸ್ಥೆಯ ನಾಶನದ ತನಕ

1. ಯೇಸುವು ಬಿಚ್ಚಲಿರುವ ಪ್ರಭಾವ ಬೀರುವ ಸುರುಳಿಯಲ್ಲಿರುವ ವಿಷಯಗಳನ್ನು ಯೆಹೋವನು ಯೋಹಾನನಿಗೆ ಹೇಗೆ ಪ್ರಕಟಿಸುತ್ತಾನೆ?

ಈ ಬಿಕ್ಕಟ್ಟಿನ ದಿನದಲ್ಲಿ, “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳಲ್ಲಿ” ನಮಗೆ ಆಳವಾದ ಆಸಕ್ತಿಯಿಲ್ಲವೇ? ನಾವು ಸ್ವತಃ ಇದರಲ್ಲಿ ಒಳಗೂಡಿರುವುದರಿಂದ, ನಿಜವಾಗಿ ನಮಗೆ ಆಸಕ್ತಿ ಇದೆ! ಆದುದರಿಂದ ಯೇಸುವು ಆ ಪ್ರಭಾವ ಬೀರುವ ಸುರುಳಿಯನ್ನು ಬಿಚ್ಚುತ್ತಿರುವಂತೆ, ನಾವೆಲ್ಲರೂ ಯೋಹಾನನೊಂದಿಗೆ ಈಗ ಜತೆಗೂಡೋಣ. ಗಮನಾರ್ಹವಾಗಿ, ಯೋಹಾನನು ಅದನ್ನು ಓದಬೇಕಾಗಿರುವುದಿಲ್ಲ. ಯಾಕೆ ಇಲ್ಲ? ಯಾಕಂದರೆ ಅದರ ವಿಷಯಗಳು ಚಾಲಕಶಕ್ತಿಯ, ಕಾರ್ಯಗಳಿಂದ ತುಂಬಿದ ದೃಶ್ಯಗಳ ಸರಣಿಗಳ “ಸೂಚನೆಗಳಲ್ಲಿ” ಅವನಿಗೆ ರವಾನಿಸಲ್ಪಡುತ್ತವೆ.—ಪ್ರಕಟನೆ 1:1, 10.

2. (ಎ) ಯೋಹಾನನು ಏನನ್ನು ನೋಡುತ್ತಾನೆ, ಮತ್ತು ಕೇಳುತ್ತಾನೆ, ಮತ್ತು ಕೆರೂಬಿಯ ಗೋಚರಿಸುವಿಕೆಯು ಏನನ್ನು ಸೂಚಿಸುತ್ತದೆ? (ಬಿ) ಮೊದಲನೆಯ ಕೆರೂಬಿಯ ಆಜ್ಞೆಯು ಯಾರಿಗೆ ಸಂಬೋಧಿಸಲ್ಪಟ್ಟಿದೆ, ಮತ್ತು ನೀವು ಹಾಗೆ ಯಾಕೆ ಉತ್ತರಿಸುತ್ತೀರಿ?

2 ಸುರುಳಿಯ ಮೊದಲ ಮುದ್ರೆಯನ್ನು ಯೇಸುವು ತೆರೆಯುತ್ತಿರುವಂತೆಯೇ, ಯೋಹಾನನಿಗೆ ಕಿವಿಗೊಡಿರಿ: “ಮತ್ತು ಕುರಿಮರಿಯು ಆ ಏಳು ಮುದ್ರೆಗಳಲ್ಲಿ ಒಂದನ್ನು ಬಿಚ್ಚುವಾಗ ನಾನು ನೋಡಿದೆನು, ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಗುಡುಗಿನಂತಹ ಧ್ವನಿಯಲ್ಲಿ ‘ಬಾ!’ ಎಂದು ಹೇಳುವುದನ್ನು ಕೇಳಿದೆನು.” (ಪ್ರಕಟನೆ 6:1, NW) ಇದು ಮೊದಲ ಕೆರೂಬಿಯ ಧ್ವನಿಯಾಗಿತ್ತು. ಅದರ ಸಿಂಹದಂತಿರುವ ತೋರಿಕೆಯು ತನ್ನ ನೀತಿಯುಳ್ಳ ನ್ಯಾಯತೀರ್ಪನ್ನು ವಿಧಿಸಲು ಯೆಹೋವನ ಸಂಸ್ಥೆಯು ಧೈರ್ಯದಿಂದ ಕ್ರಿಯೆಗೈಯಲಿರುವುದು ಎಂದು ಯೋಹಾನನಿಗೆ ಸೂಚಿಸಿದ್ದಿರಬೇಕು. ಮತ್ತು ಆ ಆಜ್ಞೆಯು ಯಾರಿಗೆ ಸಂಬೋಧಿಸಲ್ಪಟ್ಟಿದೆ? ಅದು ಯೋಹಾನನಿಗೆ ಆಗಿರಲಿಕ್ಕಿಲ್ಲ, ಯಾಕಂದರೆ ಯೋಹಾನನು ಈ ಪ್ರವಾದನಾ ದರ್ಶನಗಳಲ್ಲಿ ಪಾಲು ತೆಗೆದುಕೊಳ್ಳಲು ಈಗಾಗಲೇ ಆಮಂತ್ರಿಸಲ್ಪಟ್ಟಿದ್ದನು. (ಪ್ರಕಟನೆ 4:1) ಆ “ಗುಡುಗಿನಂತಹ ಧ್ವನಿಯು” ನಾಲ್ಕು ಉತ್ತೇಜಿಸುವ ಘಟನಾವಳಿಗಳ ಸರಣಿಗಳಲ್ಲಿ ಮೊದಲನೆಯದ್ದರಲ್ಲಿರುವ ಇತರ ಭಾಗಿಗಳಿಗೆ ಕರೆಯನ್ನು ನೀಡುತ್ತಿದೆ.

ಬಿಳಿ ಕುದುರೆ ಮತ್ತು ಅದರ ಪ್ರಖ್ಯಾತ ರಾಹುತನು

3. (ಎ) ಈಗ ಯೋಹಾನನು ಏನನ್ನು ವರ್ಣಿಸುತ್ತಾನೆ? (ಬಿ) ಬೈಬಲಿನ ಸಂಕೇತಗಳ ಸಹಮತದಲ್ಲಿ, ಬಿಳಿ ಕುದುರೆಯು ಏನನ್ನು ಚಿತ್ರಿಸಬೇಕು?

3 ಯೋಹಾನನು, ಮತ್ತು ಅವನೊಂದಿಗೆ ಇಂದಿನ ಹುರುಪುಭರಿತ ಯೋಹಾನ ವರ್ಗ ಮತ್ತು ಇಂದಿನ ಸಂಗಾತಿಗಳು ತೀವ್ರವಾಗಿ ಚಲಿಸುವ ನಾಟಕವನ್ನು ನೋಡುವ ಸುಯೋಗ ಹೊಂದಿರುತ್ತಾರೆ! ಯೋಹಾನನು ನುಡಿಯುವುದು: “ಮತ್ತು ನಾನು ನೋಡಿದಾಗ, ಇಗೋ! ಒಂದು ಬಿಳಿ ಕುದುರೆ; ಮತ್ತು ಅದರ ಮೇಲೆ ಕೂತಿದ್ದಾತನ ಕೈಯಲ್ಲಿ ಒಂದು ಬಿಲ್ಲು ಇತ್ತು. ಅವನಿಗೆ ಕಿರೀಟವು ಕೊಡಲ್ಪಟ್ಟಿತು. ಮತ್ತು ಅವನು ಜಯಿಸಲು ಮತ್ತು ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.” (ಪ್ರಕಟನೆ 6:2, NW) ಹೌದು, ಆ ಗುಡುಗಿನಂತಹ “ಬಾ!” ಎಂಬದಕ್ಕೆ ಉತ್ತರವಾಗಿ, ಒಂದು ಬಿಳಿ ಕುದುರೆ ಧಾವಿಸಿ ಬರುತ್ತದೆ. ಬೈಬಲಿನಲ್ಲಿ, ಕುದುರೆ ಹಲವು ಬಾರಿ ಯುದ್ಧವನ್ನು ಸಂಕೇತಿಸುತ್ತದೆ. (ಕೀರ್ತನೆ 20:7; ಜ್ಞಾನೋಕ್ತಿ 21:31; ಯೆಶಾಯ 31:1) ಈ ಕುದುರೆಯು, ಸಂಭವನೀಯವಾಗಿ ಒಂದು ಸುಂದರ ಬೀಜದ ಕುದುರೆಯಾಗಿದ್ದು, ನಿಷ್ಕಳಂಕ ಪರಿಶುದ್ಧತೆಯನ್ನು ಸೂಚಿಸುವ ಶ್ವೇತವರ್ಣದಿಂದ ಥಳಥಳಿಸುತ್ತದೆ. (ಹೋಲಿಸಿರಿ, ಪ್ರಕಟನೆ 1:14; 4:4; 7:9; 20:11.) ಯೆಹೋವನ ಪವಿತ್ರ ಕಣ್ಣುಗಳಲ್ಲಿ ನಿರ್ಮಲ ಮತ್ತು ನೀತಿಯುಳ್ಳದ್ದಾಗಿರುವ ಯುದ್ಧವನ್ನು ಇದು ಚಿತ್ರಿಸುವುದರಿಂದ, ಇದು ನಿಜವಾಗಿಯೂ ತಕ್ಕದ್ದಾಗಿದೆ!—ಪ್ರಕಟನೆ 19:11, 14 ಕೂಡ ನೋಡಿರಿ.

4. ಬಿಳಿ ಕುದುರೆಯ ರಾಹುತನು ಯಾರು? ವಿವರಿಸಿರಿ.

4 ಈ ಕುದುರೆಯ ರಾಹುತನು ಯಾರು? ಆತನ ಕೈಯಲ್ಲಿ ಆಕ್ರಮಣ ಮಾಡುವ ಯುದ್ಧದ ಶಸ್ತ್ರವಾದ ಬಿಲ್ಲು ಇದೆ, ಆದರೆ ಆತನಿಗೆ ಕಿರೀಟವು ಕೂಡ ಕೊಡಲ್ಪಟ್ಟಿದೆ. ಕರ್ತನ ದಿನದ ಸಮಯಾವಧಿಯಲ್ಲಿ ನಾವು ಕಿರೀಟ ಧರಿಸಿರುವ ನೀತಿವಂತರಲ್ಲಿ ಕೇವಲ ಯೇಸು ಮತ್ತು 24 ಹಿರಿಯರಿಂದ ಪ್ರತಿನಿಧಿಸಲ್ಪಟ್ಟ ವರ್ಗದವರನ್ನು ಕಾಣುತ್ತೇವೆ. (ದಾನಿಯೇಲ 7:13, 14, 27; ಲೂಕ 1:31-33; ಪ್ರಕಟನೆ 4:4, 10; 14:14) * 24 ಹಿರಿಯರ ಗುಂಪಿನಲ್ಲೋಬ್ಬ ಸದಸ್ಯನು ತನ್ನ ಸ್ವಂತ ಯೋಗ್ಯತೆಯ ಮೇಲೆ ಕಿರೀಟವನ್ನು ಪಡೆಯುವುದನ್ನು ಚಿತ್ರಿಸುವುದು ಖಂಡಿತವಾಗಿಯೂ ಅಸಂಭವನೀಯ. ಆದುದರಿಂದ, ಈ ಒಂಟಿ ಕುದುರೆ ರಾಹುತನು ಯೇಸು ಕ್ರಿಸ್ತನು ಆಗಿರಬೇಕೇ ಹೊರತು ಬೇರಾರೂ ಅಲ್ಲ. ಯೋಹಾನನು 1914ರ ಐತಿಹಾಸಿಕ ಸಮಯದಲ್ಲಿ ಪರಲೋಕದಲ್ಲಿ ಆತನನ್ನು ನೋಡುತ್ತಾನೆ, ಯೆಹೋವನು ಆಗ ಘೋಷಿಸಿದ್ದು: “ಎಲ್ಲಾ ಜನಾಂಗಗಳನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಡುವ” ಉದ್ದೇಶದಿಂದ “ನಾನು, ಹೌದು ನಾನೇ, ನೇಮಿಸಿದ ಅರಸನನ್ನು ಸ್ಥಾಪಿಸಿದ್ದೇನೆ,” ಎಂದು ಅವನಿಗೆ ಹೇಳುತ್ತಾನೆ. (ಕೀರ್ತನೆ 2:6-8) * ಹೀಗೆ, ಮೊದಲ ಮುದ್ರೆಯನ್ನು ಒಡೆಯುವುದರಲ್ಲಿ, ಸ್ವತಃ ಯೇಸುವು ತಾನು ಹೊಸ ಕಿರೀಟಧಾರಿ ರಾಜನಾಗಿ, ದೇವರ ನೇಮಿತ ಸಮಯದಲ್ಲಿ ಯುದ್ಧಗೈಯಲು ಕಾರ್ಯೋನ್ಮುಖನಾಗುವ ವಿಧವನ್ನು ಪ್ರಕಟಿಸುತ್ತಾನೆ.

5. ಪ್ರಕಟನೆ 6:2ಕ್ಕೆ ಸಮಾನವಾದ ರೀತಿಯಲ್ಲಿ ಕೀರ್ತನೆಗಾರನು ರಾಹುತನನ್ನು ಹೇಗೆ ವರ್ಣಿಸುತ್ತಾನೆ?

5 ಈ ದೃಶ್ಯವು ಯೆಹೋವನಿಂದ ಸಿಂಹಾಸನವೇರಿದ ರಾಜನಿಗೆ ಸಂಬೋಧಿಸಲ್ಪಟ್ಟ ಕೀರ್ತನೆ 45:4-7 ರೊಂದಿಗೆ ಸುಂದರವಾಗಿ ಹೊಂದಿಕೆಯಾಗುತ್ತದೆ: “ಸತ್ಯತೆ ದೈನ್ಯ ನೀತಿಗಳನ್ನು ಸ್ಥಾಪಿಸುವುದಕ್ಕಾಗಿ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡೋಣವಾಗಲಿ. ನಿನ್ನ ಭುಜವೀರ್ಯದಿಂದ ಭಯಂಕರ ಕೃತ್ಯಗಳು ನಡೆಯುವವು. ನಿನ್ನ ಬಾಣಗಳು ಮಹಾ ತೀಕ್ಷೈವಾಗಿರುವವು; ಅವು ರಾಜ ವಿರೋಧಿಗಳ ಎದೆಯನ್ನು ಭೇದಿಸುವವು; ಶತ್ರು ಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು. ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು; ನಿನ್ನ ರಾಜದಂಡವು ನ್ಯಾಯಸ್ಥಾಪಕವಾದದ್ದೇ. ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.” ಆ ಪ್ರವಾದನಾ ವಿವರಣೆಯೊಂದಿಗೆ ಪರಿಚಿತನಾಗಿದ್ದುದರಿಂದ, ರಾಜನೋಪಾದಿ ಯೇಸುವಿನ ಚಟುವಟಿಕೆಗೆ ಇದು ಅನ್ವಯಿಸುತ್ತದೆಂಬದನ್ನು ಯೋಹಾನನು ಗಣ್ಯಮಾಡುವನು.—ಇಬ್ರಿಯ 1:1, 2, 8, 9 ಹೋಲಿಸಿರಿ.

ಜಯಿಸುವುದಕ್ಕೋಸ್ಕರ ಹೋಗುವುದು

6. (ಎ) ರಾಹುತನು ವಿಜಯವನ್ನು ಗಳಿಸಲು ಯಾಕೆ ಹೊರಡಬೇಕು? (ಬಿ) ಯಾವ ವರ್ಷಗಳಲ್ಲಿಯೂ ವಿಜಯದ ಸವಾರಿಯು ಮುಂದರಿಯಿತು?

6 ಆದರೂ, ಹೊಸತಾಗಿ ಕಿರೀಟಧಾರಿಯಾದ ರಾಜನು ಯುದ್ಧಗೈಯಲು ಯಾಕೆ ಹೊರಡಲೇ ಬೇಕು? ಅದು ಯಾಕಂದರೆ ಆತನ ರಾಜತ್ವವು ಯೆಹೋವನ ಮುಖ್ಯ ವೈರಿಯಾದ ಪಿಶಾಚನಾದ ಸೈತಾನನ ಮತ್ತು ಭೂಮಿಯ ಮೇಲೆ ಸೈತಾನನ ಇಚ್ಛೆಗಳನ್ನು—ತಿಳಿದೋ ತಿಳಿಯದೆಯೋ—ಸೇವಿಸುವವರ ಎದುರಿನಲ್ಲಿ ಸ್ಥಾಪಿಸಲ್ಪಟ್ಟಿದೆ. ರಾಜ್ಯದ ಜನನವು ತಾನೇ ಪರಲೋಕದಲ್ಲಿ ಒಂದು ಮಹಾ ಯುದ್ಧಕ್ಕೆ ಕರೆನೀಡುತ್ತದೆ. ಮೀಕಾಯೇಲನೆಂಬ (ಅರ್ಥ “ದೇವರಂತೆ ಇರುವವನು ಯಾರು?”) ಹೆಸರಿನಿಂದ ಹೋರಾಡುತ್ತಾ, ಯೇಸುವು ಸೈತಾನ ಮತ್ತು ಆತನ ದೆವ್ವಗಳ ಮೇಲೆ ಜಯ ಪಡೆಯುತ್ತಾನೆ ಮತ್ತು ಅವರನ್ನು ಭೂಮಿಗೆ ದೊಬ್ಬಿಬಿಡುತ್ತಾನೆ. (ಪ್ರಕಟನೆ 12:7-12) ಜನಾಂಗಗಳಿಗೆ ಮತ್ತು ಭೂಮಿಯ ಜನರಿಗೆ ನ್ಯಾಯತೀರ್ಪು ಆಗುವಾಗ ಮತ್ತು ಕುರಿಗಳಂತಹ ಮಾನವರು ರಕ್ಷಣೆಗಾಗಿ ರಾಜನ ಪಕ್ಷದಲ್ಲಿ ಒಟ್ಟುಗೂಡಿಸಲ್ಪಡುತ್ತಿರುವಾಗ, ಈ ಕರ್ತನ ದಿನದ ಆರಂಭದ ದಶಕಗಳಿಂದ ಯೇಸುವಿನ ವಿಜಯದ ಸವಾರಿಯು ಮುಂದರಿಯುತ್ತದೆ. ಇಡೀ ಲೋಕವು “ಕೆಡುಕನ ವಶದಲ್ಲಿ” ಬಿದ್ದಿರುವುದಾದರೂ ಕೂಡ ಯೇಸುವು ಪ್ರೀತಿಯಿಂದ ಅಭಿಷಿಕ್ತ ಸಹೋದರರ ಮತ್ತು ಅವರ ಒಡನಾಡಿಗಳ ಕುರೀಪಾಲನೆ ಮಾಡುವುದನ್ನು ಮುಂದರಿಸುತ್ತಾ, ಪ್ರತಿಯೊಬ್ಬರು ನಂಬಿಕೆಯ ವಿಜಯವನ್ನು ಸಾಧಿಸುವಂತೆ ಸಹಾಯವನ್ನು ಒದಗಿಸುತ್ತಿದ್ದಾನೆ.—1 ಯೋಹಾನ 5:19; ಮತ್ತಾಯ 25:31-33.

7. ಕರ್ತನ ದಿನದ ಮೊದಲನೆಯ ದಶಕಗಳಲ್ಲಿ ಯಾವ ವಿಜಯಗಳನ್ನು ಯೇಸುವು ಭೂಮಿಯ ಮೇಲೆ ಮಾಡಿರುತ್ತಾನೆ, ಮತ್ತು ನಮ್ಮ ನಿರ್ಧಾರ ಏನಾಗಿರತಕ್ಕದ್ದು?

7 ಕರ್ತನ ದಿನದ 70 ಮತ್ತು ಹೆಚ್ಚಿನ ಗತ ವರ್ಷಗಳಲ್ಲಿ ಯೇಸುವು ಯಾವ ಇತರ ವಿಜಯಗಳನ್ನು ಪಡೆದಿದ್ದಾನೆ? ತನ್ನ ಶುಶ್ರೂಷೆಯ ರುಜುವಾತಾಗಿ ಅಪೊಸ್ತಲ ಪೌಲನಿಂದ ವರ್ಣಿಸಲ್ಪಟ್ಟಂಥವುಗಳಿಗೆ ಸಮಾನವಾಗಿ, ಭೂಮಿಯ ಸುತ್ತಲೂ, ವೈಯಕ್ತಿಕವಾಗಿ ಮತ್ತು ಸಭೆಯೋಪಾದಿ ಯೆಹೋವನ ಜನರು ಅನೇಕ ಕಷ್ಟಗಳನ್ನು, ಒತ್ತಡಗಳನ್ನು ಮತ್ತು ವಿರೋಧಗಳನ್ನು ಅನುಭವಿಸಿದ್ದಾರೆ. (2 ಕೊರಿಂಥ 11:23-28) ವಿಶೇಷವಾಗಿ ಯುದ್ಧ ಮತ್ತು ಹಿಂಸಾಚಾರದ ರಂಗಗಳಲ್ಲಿ ತಾಳಿಕೊಳ್ಳಲಿಕ್ಕೋಸ್ಕರ ಯೆಹೋವನ ಸಾಕ್ಷಿಗಳಿಗೆ “ಸಾಮಾನ್ಯವಾದುದಕ್ಕಿಂತ ಅಧಿಕ ಬಲವು” ಆವಶ್ಯಕವಾಗಿದೆ. (2 ಕೊರಿಂಥ 4:7, NW) ಆದರೆ ಅತ್ಯಂತ ಶೋಧನೆಯ ಸನ್ನಿವೇಶಗಳಲ್ಲಿಯೂ, ನಂಬಿಗಸ್ತ ಸಾಕ್ಷಿಗಳು ಪೌಲನು ಹೇಳಿದಂತೆ ಹೇಳಶಕ್ತರಾಗಿದ್ದಾರೆ: “ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ ಮಾಡಿದನು.” (2 ತಿಮೊಥೆಯ 4:17) ಹೌದು, ಯೇಸುವು ಅವರ ಪರವಾಗಿ ವಿಜಯಗಳಿಸಿದನು. ಮತ್ತು ನಮ್ಮ ನಂಬಿಕೆಯ ವಿಜಯವನ್ನು ಪೂರ್ಣಗೊಳಿಸಲು ನಾವು ಎಷ್ಟರ ತನಕ ದೃಢನಿರ್ಧಾರ ಮಾಡಿರುತ್ತೇವೋ, ಅಷ್ಟರ ತನಕ ಅವನು ನಮ್ಮ ಪರವಾಗಿ ಜಯಗಳಿಸುವುದನ್ನು ಮುಂದರಿಸುವನು.—1 ಯೋಹಾನ 5:4.

8, 9. (ಎ) ಯೆಹೋವನ ಸಾಕ್ಷಿಗಳ ಭೌಗೋಲಿಕ ಸಭೆಯು ಯಾವ ವಿಜಯಗಳಲ್ಲಿ ಪಾಲುಗೊಂಡಿದೆ? (ಬಿ) ಯೆಹೋವನ ಸಾಕ್ಷಿಗಳ ಬೆಳವಣಿಗೆಯು ಎಲ್ಲಿ ನಿಜವಾಗಿಯೂ ಎದ್ದು ಕಾಣುವಂತಹದ್ದಾಗಿರುತ್ತದೆ?

8 ಅದರ ವಿಜಯ ಗಳಿಸುವ ರಾಜನ ಮಾರ್ಗದರ್ಶನದ ಕೆಳಗೆ ಯೆಹೋವನ ಸಾಕ್ಷಿಗಳ ಭೌಗೋಲಿಕ ಸಭೆಯು ಅನೇಕ ವಿಜಯಗಳಲ್ಲಿ ಭಾಗಿಯಾಗಿದೆ. ಗಮನಾರ್ಹವಾಗಿ, ಬೈಬಲ್‌ ವಿದ್ಯಾರ್ಥಿಗಳ ಮೇಲೆ ಸೈತಾನನ ರಾಜಕೀಯ ಸಂಸ್ಥೆಯು ತಾತ್ಕಾಲಿಕವಾಗಿ ‘ಜಯಗಳಿಸಿದಾಗ’, 1918 ರಲ್ಲಿ ಅವರು ಪೂರ್ಣವಾಗಿ ನಿರ್ಮೂಲವಾಗುವುದರಿಂದ ಅವನು ಅವರನ್ನು ಸಂರಕ್ಷಿಸಿದನಾದರೂ, 1919 ರಲ್ಲಿ ಅವರನ್ನು ಬಿಡಿಸಲು ಸೆರೆಮನೆಯ ಸಂಕೋಲೆಗಳನ್ನು ಅವನು ಮುರಿದನು ಮತ್ತು ಅನಂತರ “ಭೂಮಿಯ ಕಟ್ಟಕಡೆಯ ವರೆಗೂ” ಸುವಾರ್ತೆಯನ್ನು ಘೋಷಿಸಲು ಅವನು ಅವರನ್ನು ಸಜೀವಗೊಳಿಸಿದನು.—ಪ್ರಕಟನೆ 13:7; ಅ. ಕೃತ್ಯಗಳು 1:8.

9 ಲೋಕ ಯುದ್ಧ IIರ ಮೊದಲು ಮತ್ತು ಅದು ನಡೆಯುತ್ತಿರುವಾಗ, ಆ್ಯಕ್ಸಿಸ್‌ ಶಕ್ತಿಗಳು ಯೆಹೋವನ ಸಾಕ್ಷಿಗಳನ್ನು, ಧಾರ್ಮಿಕ ಮುಖಂಡರುಗಳು ವಿಶೇಷವಾಗಿ ಎಲ್ಲಿ ರೋಮನ್‌ ಕ್ಯಾತೊಲಿಕ್‌ ಪುರೋಹಿತ ವರ್ಗದವರು ಈ ದಬ್ಬಾಳಿಕೆಯ ನಿರಂಕುಶ ಪ್ರಭುಗಳಿಗೆ ತೆರೆದ ಯಾ ಮೌನವಾದ ರೀತಿಗಳಲ್ಲಿ ಬೆಂಬಲವನ್ನು ನೀಡಿದರೋ ಆ ಅನೇಕ ದೇಶಗಳಿಂದ ಅಳಿಸಿಬಿಡಲು ಪ್ರಯತ್ನಿಸಿದವು. ಆದರೆ, 1939 ರಲ್ಲಿ ಯುದ್ಧ ಆರಂಭಗೊಂಡಾಗ ಸಾರುತ್ತಾ ಇದ್ದ 71,509 ಸಾಕ್ಷಿಗಳು, 1945 ರಲ್ಲಿ ಯುದ್ಧಾಂತ್ಯಗೊಂಡಾಗ 1,41,606 ರಷ್ಟು ಆದರು, ಮತ್ತು ಇದು ಅವರಲ್ಲಿ 10,000 ಕ್ಕಿಂತಲೂ ಹೆಚ್ಚು ಮಂದಿ ಅನೇಕ ವರ್ಷಗಳನ್ನು ಸೆರೆಮನೆಗಳಲ್ಲಿ ಮತ್ತು ಕೂಟಶಿಬಿರಗಳಲ್ಲಿ ವ್ಯಯಿಸಿ, ಇತರ ಸಾವಿರಾರು ಮಂದಿ ಕೊಲ್ಲಲ್ಪಟ್ಟಾಗ್ಯೂ ಸಹ. ಇಂದು ಭೂವ್ಯಾಪಕವಾಗಿ ಕ್ರಿಯಾತ್ಮಕ ಸಾಕ್ಷಿಗಳ ಸಂಖ್ಯೆಯು ಮೂವತ್ತು ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಕ್ಯಾತೊಲಿಕ್‌ ದೇಶಗಳಲ್ಲಿ ಮತ್ತು ಎಲ್ಲಿ ಹಿಂಸೆಯು ಅತಿ ಕಠಿನವಾಗಿತ್ತೋ ಅಲ್ಲಿ—ಜರ್ಮನಿ, ಇಟೆಲಿ, ಮತ್ತು ಜಪಾನ್‌ ರಾಷ್ಟ್ರಗಳಲ್ಲಿ ಬೆಳವಣಿಗೆಯು ಗಮನಾರ್ಹವಾಗಿದ್ದು, ಅಲ್ಲಿ ಪ್ರತಿಯೊಂದರಲ್ಲಿ ಇಂದು 1,00,000 ಕ್ಕಿಂತಲೂ ಹೆಚ್ಚಿನ ಸಕ್ರಿಯ ಕ್ಷೇತ್ರ ಶುಶ್ರೂಷಕರು ವರದಿ ಮಾಡುತ್ತಾ ಇದ್ದಾರೆ.—ಯೆಶಾಯ 54:17; ಯೆರೆಮೀಯ 1:17-19.

10. “ಸುವಾರ್ತೆಯ ಸಮರ್ಥನೆಯನ್ನು ಮತ್ತು ಶಾಸನಬದ್ಧವಾಗಿ ಅದನ್ನು ಸ್ಥಾಪನೆ” ಮಾಡುವುದರಲ್ಲಿ ವಿಜಯ ಗಳಿಸುವ ಅರಸನು ತನ್ನ ಜನರನ್ನು ಯಾವ ವಿಜಯಗಳಿಂದ ಆಶೀರ್ವದಿಸಿರುತ್ತಾನೆ?

10 ನಮ್ಮ ವಿಜಯಗಳಿಸುವ ರಾಜನು, ನ್ಯಾಯಾಲಯಗಳಲ್ಲಿ ಮತ್ತು ಅಧಿಪತಿಗಳ ಮುಂದೆ “ಸುವಾರ್ತೆಯ ಸಮರ್ಥನೆ ಮತ್ತು ಶಾಸನಬದ್ಧವಾದ ಸ್ಥಾಪನೆ” ಯಲ್ಲಿ ಅನೇಕ ವಿಜಯಗಳಿಗೆ ಅವರನ್ನು ನಡಿಸಿ, ತನ್ನ ಉತ್ಸಾಹೀ ಜನರನ್ನು ಅವನು ಆಶೀರ್ವದಿಸಿರುತ್ತಾನೆ. (ಫಿಲಿಪ್ಪಿ 1:7, NW; ಮತ್ತಾಯ 10:18; 24:9) ಇದು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ—ಆಸ್ಟ್ರೇಲಿಯಾ, ಆರ್ಜೆಂಟೀನ, ಕೆನಡ, ಗ್ರೀಸ್‌, ಇಂಡಿಯ, ಸ್ವಾಜಿಲೆಂಡ್‌, ಸ್ವಿಟ್ಸರ್ಲೆಂಡ್‌, ಟರ್ಕಿ, ಮತ್ತು ಇತರ ದೇಶಗಳಲ್ಲೂ ನಡೆದಿದೆ. ಅಮೆರಿಕದ ಉಚ್ಚ ನ್ಯಾಯಾಲಯ (ಸುಪ್ರೀಮ್‌ ಕೋರ್ಟ್‌) ದಲ್ಲಿ ಯೆಹೋವನ ಸಾಕ್ಷಿಗಳು ಪಡೆದ 23 ಕಾನೂನು ವಿಜಯಗಳಲ್ಲಿ, “ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ” ಸುವಾರ್ತೆಯನ್ನು ಸಾರುವ ಹಕ್ಕು ಮತ್ತು ವಿಗ್ರಹಾರಾಧಕ ದೇಶಭಕ್ತಿಯ ಸಂಸ್ಕಾರಗಳಿಂದ ದೂರವಿಟ್ಟುಕೊಳ್ಳುವುದರ ಹಕ್ಕು ಖಾತರಿಗೊಳಿಸಲ್ಪಟ್ಟಿವೆ. (ಅ. ಕೃತ್ಯಗಳು 5:42; 20:20; 1 ಕೊರಿಂಥ 10:14) ಈ ರೀತಿಯಲ್ಲಿ, ಭೌಗೋಳಿಕ ಸಾಕ್ಷಿಯನ್ನು ವಿಸ್ತರಿಸಲು ದಾರಿಯು ತೆರೆದಿಡಲ್ಪಟ್ಟಿದೆ.

11. (ಎ) ರಾಹುತನು “ತನ್ನ ವಿಜಯವನ್ನು ಪೂರ್ಣ” ಗೊಳಿಸುವುದು ಹೇಗೆ? (ಬಿ) ಎರಡನೆಯ, ಮೂರನೆಯ, ಮತ್ತು ನಾಲ್ಕನೆಯ ಮುದ್ರೆಗಳ ಬಿಚ್ಚುವಿಕೆಯು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರತಕ್ಕದ್ದು?

11 ಯೇಸುವು “ತನ್ನ ವಿಜಯವನ್ನು ಪೂರ್ಣ” ಗೊಳಿಸುವುದು ಹೇಗೆ? * ನಾವು ನೋಡಲಿರುವಂತೆ, ಯೆಹೋವನ ಸಾರ್ವಭೌಮತೆಯ ಸಮರ್ಥನೆಯಲ್ಲಿ, ಸುಳ್ಳು ಧರ್ಮವನ್ನು ಇಲ್ಲದಂತೆ ಮಾಡಿ, ಮತ್ತು ಸೈತಾನನ ದೃಶ್ಯ ಸಂಸ್ಥೆಯ ಪ್ರತಿಯೊಂದು ವಿಭಾಗವನ್ನು ನಾಶನದ ಸಾಂಕೇತಿಕ “ಬೆಂಕಿಯ ಕೆರೆ” ಯೊಳಗೆ ದೊಬ್ಬುವುದರ ಮೂಲಕ ಅವನಿದನ್ನು ಮಾಡುತ್ತಾನೆ. ನಮ್ಮ “ರಾಜರುಗಳ ರಾಜನು” ಸೈತಾನನ ದಬ್ಬಾಳಿಕೆಯ ರಾಜಕೀಯ ಸಂಸ್ಥೆಯ ಮೇಲೆ ಕೊನೆಯ ವಿಜಯವನ್ನು ಅರ್ಮಗೆದೋನ್‌ನಲ್ಲಿ ಪಡೆಯುವ ಆ ದಿನಕ್ಕಾಗಿ ನಾವು ಈಗ ನಿಶ್ಚಯತೆಯಿಂದ ಮುನ್ನೋಡುತ್ತೇವೆ. (ಪ್ರಕಟನೆ 16:16; 17:14; 19:2, 14-21; ಯೆಹೆಜ್ಕೇಲ 25:17) ತನ್ಮಧ್ಯೆ, ಭೂಮಿಯ ಮೇಲಿನ ಅವನ ನೀತಿಯ ಜನಾಂಗಕ್ಕೆ ಪ್ರಾಮಾಣಿಕ ಹೃದಯದ ಜನರನ್ನು ಯೆಹೋವನು ಕೂಡಿಸುತ್ತಾ ಹೋಗುವಾಗ, ಬಿಳಿ ಕುದುರೆಯ ಮೇಲಿರುವ ಅಜೇಯ ವಿಜೇತನು ತನ್ನ ಸವಾರಿಯನ್ನು ಮುಂದೊತ್ತುತ್ತಾ ಇರುವನು. (ಯೆಶಾಯ 26:2; 60:22) ಆ ಹರ್ಷಕರ ರಾಜ್ಯ ವಿಸ್ತರಣೆಯ ಕೆಲಸದಲ್ಲಿ ಅಭಿಷಿಕ್ತ ಯೋಹಾನ ವರ್ಗದವರೊಂದಿಗೆ ನೀವು ಪಾಲಿಗರಾಗುತ್ತಿದ್ದೀರೋ? ಹಾಗಿರುವುದಾದರೆ, ಮುಂದಿನ ಮೂರು ಮುದ್ರೆಗಳು ತೆರೆಯಲ್ಪಡುವಾಗ ಅಪೊಸ್ತಲ ಯೋಹಾನನು ಏನನ್ನು ನೋಡುತ್ತಾನೋ, ಅದರಿಂದ ಈ ದಿನಕ್ಕಾಗಿರುವ ಯೆಹೋವನ ಕಾರ್ಯದಲ್ಲಿ ಇನ್ನೂ ಹೆಚ್ಚು ಪಾಲು ನಿಮಗಿರುವಂತೆ, ನೀವು ಪ್ರಚೋದಿಸಲ್ಪಡಲಿರುವಿರಿ ಎಂಬುದಕ್ಕೆ ಸಂದೇಹವಿಲ್ಲ.

ನೋಡಿರಿ, ಅಗ್ನಿವರ್ಣದ ಕುದುರೆ!

12. ರಾಜನೋಪಾದಿ ತನ್ನ ಅದೃಶ್ಯ ಸಾನ್ನಿಧ್ಯವನ್ನು ಯಾವುದು ಗುರುತಿಸುತ್ತದೆ ಎಂದು ಯೇಸುವು ಹೇಳಿದನು?

12 ಭೂಮಿಯ ಮೇಲೆ ಯೇಸುವಿನ ಶುಶ್ರೂಷೆಯ ಕೊನೆಯಲ್ಲಿ, ಅವನ ಶಿಷ್ಯರು ಅವನನ್ನು ಖಾಸಗಿಯಾಗಿ ಕೇಳಿದರು: “ನಿನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯೇನು?” ಅದಕ್ಕುತ್ತರವಾಗಿ, ಅವನು “ಸಂಕಟದ ಪ್ರಸವವೇದನೆಗಳ ಪ್ರಾರಂಭ” ವಾಗಿರುವ ವಿಪತ್ತುಗಳನ್ನು ಮುಂತಿಳಿಸಿದನು. ಯೇಸುವಂದದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾ ಭೂಕಂಪಗಳಾಗುವವು. ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು. ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.” (ಮತ್ತಾಯ 24:3, 7, 8, NW; ಲೂಕ 21:10, 11) ಸುರುಳಿಯ ಇನ್ನುಳಿದ ಮುದ್ರೆಗಳನ್ನು ಒಡೆಯುವಾಗ ಯೋಹಾನನು ನೋಡುವ ಸಂಗತಿಗಳು, ಆ ಪ್ರವಾದನೆಗೆ ಗಮನಾರ್ಹವಾದ ಸಮಾನಾಂತರವೊಂದನ್ನು ಒದಗಿಸುತ್ತವೆ. ಮಹಿಮಾಭರಿತ ಯೇಸುವು ಎರಡನೆಯ ಮುದ್ರೆಯನ್ನು ತೆರೆಯುವಾಗ ಗಮನಿಸಿರಿ!

13. ಯೋಹಾನನಿಗೆ ಯಾವ ವೈಲಕ್ಷಣವು ತೋರಿಬರಲಿದೆ?

13“ಮತ್ತು ಅವನು ಎರಡನೆಯ ಮುದ್ರೆಯನ್ನು ತೆರೆದಾಗ, ನಾನು ಎರಡನೆಯ ಜೀವಿಯು ‘ಬಾ!’ ಎಂದು ಹೇಳುವುದನ್ನು ಕೇಳಿದೆನು.” (ಪ್ರಕಟನೆ 6:3, NW) ಹೋರಿಯಂತೆ ತೋರುವ ಎರಡನೆಯ ಕೆರೂಬಿಯೇ ಈ ಅಪ್ಪಣೆಯನ್ನು ನೀಡುತ್ತದೆ. ಇಲ್ಲಿ ಸಾಂಕೇತಿಸಲ್ಪಟ್ಟ ಗುಣವು ಶಕ್ತಿಯಾಗಿದೆ, ಆದರೆ ನೀತಿಯುಕ್ತವಾಗಿ ಉಪಯೋಗಿಸಲ್ಪಟ್ಟ ಶಕ್ತಿ. ಆದರೂ, ಇದಕ್ಕೆ ವಿಪರ್ಯಸ್ತವಾಗಿ, ಯೋಹಾನನು ಈಗ ಇಲ್ಲಿ ಒಂದು ಭೀಕರ, ಮರಣವನ್ನುಂಟುಮಾಡುವ ಶಕ್ತಿಯ ಒಂದು ಪ್ರದರ್ಶನವನ್ನು ನೋಡಲಿದ್ದಾನೆ.

14. ಯೋಹಾನನು ಅನಂತರ ಯಾವ ಕುದುರೆ ಮತ್ತು ರಾಹುತನನ್ನು ನೋಡುತ್ತಾನೆ, ಮತ್ತು ಈ ದರ್ಶನವು ಏನನ್ನು ಚಿತ್ರಿಸುತ್ತದೆ?

14 ಹಾಗಾದರೆ, “ಬಾ!” ಎಂಬ ಎರಡನೆಯ ಆಹ್ವಾನಕ್ಕೆ ಉತ್ತರವು ಹೇಗೆ ಕೊಡಲ್ಪಟ್ಟಿತು? ಈ ರೀತಿಯಲ್ಲಿ: “ಮತ್ತು ಇನ್ನೊಂದು ಹೊರಟುಬಂತು, ಅಗ್ನಿವರ್ಣದ ಕುದುರೆ, ಮತ್ತು ಅದರ ಮೇಲೆ ಕೂತಿದ್ದವನಿಗೆ, ಅವರು ಒಬ್ಬರು ಇನ್ನೊಬ್ಬರನ್ನು ಹತಿಸಬೇಕೆಂದು ಭೂಮಿಯಿಂದ ಶಾಂತಿಯನ್ನು ತೆಗೆದುಬಿಡುವಂತೆ ಅನುಗ್ರಹಿಸಲ್ಪಟ್ಟಿತು; ಮತ್ತು ಅವನಿಗೆ ಒಂದು ದೊಡ್ಡ ಕತ್ತಿಯನ್ನು ಕೊಡಲಾಯಿತು.” (ಪ್ರಕಟನೆ 6:4, NW) ಖಂಡಿತವಾಗಿಯೂ ಒಂದು ಕರಾಳ ದೃಶ್ಯ! ಮತ್ತು ಅದು ಏನನ್ನು ಚಿತ್ರಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ: ಯುದ್ಧ! ಯೆಹೋವನ ವಿಜಯ ಗಳಿಸುವ ರಾಜನ ಒಂದು ನೀತಿಯುಕ್ತ, ವಿಜಯೀ ಹೋರಾಟವಲ್ಲ, ಬದಲು ಅನಾವಶ್ಯಕವಾದ ರಕ್ತಪಾತ ಮತ್ತು ವೇದನೆಯಿಂದೊಡಗೂಡಿದ ಕ್ರೂರವಾದ, ಮಾನವ-ನಿರ್ಮಿತ, ಅಂತರ್ರಾಷ್ಟ್ರೀಯ ಯುದ್ಧವಾಗಿರುತ್ತದೆ. ಈ ರಾಹುತನು ಒಂದು ಅಗ್ನಿ ಕೆಂಪಗಿನ ಕುದುರೆಯ ಮೇಲೆ ಏರಿರುವುದು ಎಷ್ಟೊಂದು ತಕ್ಕದ್ದಾಗಿರುತ್ತದೆ!

15. ಎರಡನೆಯ ಕುದುರೆ ರಾಹುತನ ಸವಾರಿಯಲ್ಲಿ ಪಾಲಿಗರಾಗಲು ನಾವು ಏಕೆ ಬಯಸಕೂಡದು?

15 ಖಂಡಿತವಾಗಿಯೂ, ಈ ಕುದುರೆ ರಾಹುತನೊಂದಿಗೆ ಮತ್ತು ಅವನ ರಭಸದ ಸವಾರಿಯೊಂದಿಗೆ ಯಾವುದೇ ಭಾಗವಿರಲು ಯೋಹಾನನು ಬಯಸಿರಲಿಕ್ಕಿಲ್ಲ, ಯಾಕಂದರೆ ದೇವಜನರ ಕುರಿತಾಗಿ ಹೀಗೆ ಪ್ರವಾದಿಸಲಾಗಿತ್ತು: “ಅವರು ಇನ್ನೆಂದಿಗೂ ಯುದ್ಧವನ್ನು ಕಲಿಯುವುದಿಲ್ಲ.” (ಯೆಶಾಯ 2:4, NW) ಅವರು ಇನ್ನೂ “ಈ ಲೋಕದಲ್ಲಿ” ಇರುವುದಾದರೂ, ಯೋಹಾನನು, ಮತ್ತು ವಿಸ್ತಾರವಾದ ಅನ್ವಯದಲ್ಲಿ ಯೋಹಾನ ವರ್ಗದವರು ಮತ್ತು ಮಹಾ ಸಮೂಹದವರು ಈ ರಕ್ತಸ್ತಿಕ ವ್ಯವಸ್ಥೆಯ “ಭಾಗವಾಗಿರುವುದಿಲ್ಲ.” ನಮ್ಮ ಆಯುಧಗಳು ಆತ್ಮಿಕವಾದವುಗಳು ಮತ್ತು ಮಾಂಸಿಕ ಯುದ್ಧಶಸ್ತ್ರಗಳಿಗಿಂತ ಭಿನ್ನವಾಗಿದ್ದು, ಸತ್ಯವನ್ನು ಕ್ರಿಯಾತ್ಮಕವಾಗಿ ಘೋಷಿಸಲು “ದೇವರಿಂದ ಬಲಶಾಲಿಗಳಾಗಿ” ಮಾಡಲ್ಪಟ್ಟಿವೆ.—ಯೋಹಾನ 17:11, 14, NW; 2 ಕೊರಿಂಥ 10:3, 4.

16. ಕೆಂಪು ಕುದುರೆಯ ರಾಹುತನಿಗೆ “ಒಂದು ದೊಡ್ಡ ಕತ್ತಿ” ಯಾವಾಗ ಮತ್ತು ಹೇಗೆ ಕೊಡಲ್ಪಟ್ಟಿತು?

16 ಬಿಳಿ ಕುದುರೆಯ ರಾಹುತನು ತನ್ನ ಕಿರೀಟವನ್ನು ಪಡೆದುಕೊಂಡ 1914 ನೆಯ ವರ್ಷದ ಮೊದಲು, ಹಲವಾರು ಯುದ್ಧಗಳು ನಡೆದಿದ್ದವು. ಆದರೆ ಈಗ ಕೆಂಪು ಕುದುರೆಯ ರಾಹುತನಿಗೆ “ಒಂದು ದೊಡ್ಡ ಕತ್ತಿ” ಕೊಡಲ್ಪಟ್ಟಿದೆ. ಇದು ಏನನ್ನು ಸೂಚಿಸುತ್ತದೆ? ಒಂದನೆಯ ಲೋಕ ಯುದ್ಧವು ಸ್ಫೋಟಿಸುವುದರೊಂದಿಗೆ, ಮಾನವ ಯುದ್ಧಗಳು ಹಿಂದೆಂದಿಗಿಂತಲೂ ಅಧಿಕ ರಕ್ತಪಾತದವುಗಳೂ, ಅಧಿಕ ವಿನಾಶಕಾರಿಯಾದವುಗಳೂ ಆಗಿ ಪರಿಣಮಿಸುತ್ತವೆ. ಇಸವಿ 1914-18ರ ರಕ್ತದೋಕುಳಿಯಲ್ಲಿ, ಟ್ಯಾಂಕುಗಳು, ವಿಷಕಾರಿ ಅನಿಲಗಳು, ವಿಮಾನಗಳು, ಜಲಾಂತರ್ನೌಕೆಗಳು, ಭಾರೀ ಪ್ರಮಾಣದ ತೋಫುಗಳು, ಮತ್ತು ಸ್ವಯಂ-ಚಾಲಿತ ಶಸ್ತ್ರಗಳು ಒಂದೇ ಮೊದಲನೆಯ ಬಾರಿಗೆ ಯಾ ಅಭೂತಪೂರ್ವ ಪ್ರಮಾಣದಲ್ಲಿ ಬಳಸಲ್ಪಟ್ಟವು. ಸುಮಾರು 28 ರಾಷ್ಟ್ರಗಳಲ್ಲಿ, ಕೇವಲ ವೃತ್ತಿನಿರತ ಸೈನಿಕರು ಮಾತ್ರವಲ್ಲ, ಬದಲು ಇಡೀ ಜನಸಮುದಾಯಗಳೇ ಯುದ್ಧಪ್ರಯತ್ನಕ್ಕೆ ನಿರ್ಬಂಧಿಸಲ್ಪಟ್ಟವು. ಸತ್ತವರು ಯಾ ಗಾಯಗೊಂಡವರ ಸಂಖ್ಯೆಯು ಭೀಕರವಾಗಿತ್ತು. ತೊಂಬತ್ತು ಲಕ್ಷಗಳಿಗಿಂತಲೂ ಹೆಚ್ಚು ಸೈನಿಕರು ಹತಿಸಲ್ಪಟ್ಟರು, ಮತ್ತು ಅಪಘಾತಕ್ಕೀಡಾದ ನಾಗರಿಕರ ಸಂಖ್ಯೆಯು ಬೃಹತ್ತಾಗಿತ್ತು. ಯುದ್ಧವು ಕೊನೆಗೊಂಡರೂ, ಭೂಮಿಯ ನಿಜ ಶಾಂತಿಯು ಹಿಂದೆರಳಲಿಲ್ಲ. ಆ ವರ್ಷದಿಂದ ಸುಮಾರು 50 ವರ್ಷಗಳ ನಂತರ, ಜರ್ಮನ್‌ ರಾಜನೀತಿಜ್ಞ ಕೊನ್ರಾಡ್‌ ಆ್ಯಡೆನಾರ್‌ ಹೇಳಿದ್ದು: “1914 ರಿಂದ ಮನುಷ್ಯರ ಜೀವಿತದಿಂದ ಭದ್ರತೆ ಮತ್ತು ನೆಮ್ಮದಿಯು ಮಾಯವಾಗಿ ಹೋಗಿದೆ.” ಭೂಮಿಯಿಂದ ಸಮಾಧಾನವನ್ನು ತೆಗೆಯಲಿಕ್ಕೆ ಅಗ್ನಿವರ್ಣದ ಕುದುರೆಯ ರಾಹುತನಿಗೆ ಅನುಮತಿಯನ್ನೀಯಲಾದದ್ದು ಖಂಡಿತ!

17. “ದೊಡ್ಡ ಕತ್ತಿ”ಯ ಬಳಸುವಿಕೆಯು I ನೆಯ ಲೋಕ ಯುದ್ಧದ ನಂತರವೂ ಹೇಗೆ ಮುಂದರಿಯಿತು?

17 ಅನಂತರ, ರಕ್ತದ ದಾಹದ ರುಚಿಯು ಕೆರಳಿಸಲ್ಪಟ್ಟ ಕೆಂಪು ಕುದುರೆಯ ರಾಹುತನು II ನೆಯ ಲೋಕ ಯುದ್ಧಕ್ಕೆ ಧುಮುಕಿದನು. ಹತಿಸುವ ಶಸ್ತ್ರಗಳು ಇನ್ನಷ್ಟು ಪೈಶಾಚಿಕವಾದವು, ಮತ್ತು ಹತಿಸಲ್ಪಟ್ಟವರ ಯಾ ಅಪಘಾತಕ್ಕೀಡಾದವರ ಸಂಖ್ಯೆಯು I ನೆಯ ಲೋಕ ಯುದ್ಧಕ್ಕಿಂತ ನಾಲ್ಕು ಪಾಲಷ್ಟು ದಿಗಂತಕ್ಕೇರಿತು. ಇಸವಿ 1945 ರಲ್ಲಿ ಜಪಾನಿನ ಮೇಲೆ ಸ್ಫೋಟಿಸಲ್ಪಟ್ಟ ಎರಡು ಅಣು ಬಾಂಬುಗಳು—ಕ್ಷಣಿಕಪ್ರಕಾಶವೊಂದರಲ್ಲಿ—ಪ್ರತಿಯೊಂದು ಹತ್ತಾರು ಸಾವಿರ ಬಲಿಗಳನ್ನು ಧ್ವಂಸಮಾಡಿದವು. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಕೆಂಪು ಕುದುರೆಯ ರಾಹುತನು ಸುಮಾರು 5 ಕೋಟಿ 50 ಲಕ್ಷಕ್ಕಿಂತಲೂ ಹೆಚ್ಚು ಜೀವಬಲಿಗಳನ್ನು ತೆಗೆದುಕೊಂಡ, ಧಾರಾಳ ಬೆಳೆಯನ್ನು ಕೊಯ್ದನು, ಆದರೂ ಅವನಿನ್ನೂ ತೃಪ್ತಿಗೊಂಡಿರಲಿಲ್ಲ. II ನೆಯ ಲೋಕ ಯುದ್ಧದಂದಿನಿಂದ ಈ “ದೊಡ್ಡ ಕತ್ತಿ”ಯ ಕೆಳಗೆ ಕಡಿಮೆ ಪಕ್ಷ 1 ಕೋಟಿ 90 ಲಕ್ಷದಷ್ಟು ಆತ್ಮಗಳು ಬಲಿಯಾಗಿವೆ ಎಂದು ನಂಬಲರ್ಹ ಮೂಲಗಳಿಂದ ವರದಿಸಲಾಗಿದೆ.

18, 19. (ಎ) ಮಿಲಿಟರಿ ತಾಂತ್ರಿಕ ಜ್ಞಾನದ ಒಂದು ವಿಜಯವಾಗಿರುವುದರ ಬದಲು, II ನೆಯ ಲೋಕ ಯುದ್ಧದಿಂದ ನಡೆದ ಹತ್ಯೆಗಳ ವಾಸ್ತವಾಂಶವು ಯಾವುದಕ್ಕೆ ಒಂದು ರುಜುವಾತಾಗಿದೆ? (ಬಿ) ಮಾನವ ಕುಲದ ಮುಂದೆ ಯಾವ ವಿನಾಶವು ಇದೆ, ಆದರೆ ಬಿಳಿ ಕುದುರೆಯ ರಾಹುತನು ಅದನ್ನು ಹೇಗೆ ಸರಿದೂಗಿಸುವನು?

18 ನಾವಿದನ್ನು ಒಂದು ಮಿಲಿಟರಿ ತಂತ್ರಜ್ಞಾನದ ವಿಜಯವೆಂದು ಕರೆಯಬಹುದೇ? ಅದಕ್ಕೆ ಬದಲಾಗಿ, ನಿಷ್ಕರುಣಿ ಕೆಂಪು ಕುದುರೆಯು ದೌಡಾಯಿಸುತ್ತಾ ಇದೆ ಎಂಬುದಕ್ಕೆ ಇದೊಂದು ರುಜುವಾತಾಗಿದೆ. ಮತ್ತು ಅದರ ನಾಗಾಲೋಟದ ಸವಾರಿಯು ಎಲ್ಲಿ ಅಂತ್ಯಗೊಳ್ಳಲಿದೆ? ನಿಯೋಜಿತ ಪರಮಾಣು ಯುದ್ಧದ ದಳ್ಳುರಿಯಂತೂ ಇರಲಿ—ಮುಂದಿನ 25 ವರ್ಷಗಳೊಳಗೆ ಕಾರ್ಯತಃ ಒಂದು ಆಕಸ್ಮಿಕ ಪರಮಾಣು ಯುದ್ಧವು ಖಂಡಿತವಾಗಿಯೂ ಸಂಭವಿಸಲಿದೆ ಎಂದು ಕೆಲವು ವಿಜ್ಞಾನಿಗಳು ನಿಷ್ಕೃಷ್ಟವಾಗಿ ಭವಿಷ್ಯ ನುಡಿದಿರುತ್ತಾರೆ! ಆದರೆ ಸಂತಸಕರವಾಗಿಯೇ, ಬಿಳಿ ಕುದುರೆಯ ವಿಜಯ ಗಳಿಸುವ ರಾಹುತನಲ್ಲಾದರೋ ಇದರ ಕುರಿತು ಬೇರೆಯೇ ಆಲೋಚನೆಗಳಿರುತ್ತವೆ.

19 ಸಮಾಜವು ಎಷ್ಟರ ತನಕ ರಾಷ್ಟ್ರೀಯ ಅಹಂಭಾವ ಮತ್ತು ದ್ವೇಷದ ಮೇಲೆ ಆಧಾರಿತವಾಗಿರುತ್ತದೋ, ಅಷ್ಟರ ತನಕ ಮಾನವ ಕುಲವು ಪರಮಾಣು ವಿನಾಶದ ಅಪಾಯದ ಅಂಚಿನಲ್ಲಿ ಕೂತುಕೊಳ್ಳುವುದನ್ನು ಮುಂದರಿಸಬೇಕು. ಹತಾಶೆಯಿಂದಾದರೂ ಜನಾಂಗಗಳು ಎಲ್ಲಾ ಪರಮಾಣು ಅಗ್ನಿಶಕ್ತಿಯನ್ನು ರದ್ದು ಮಾಡಿದರೂ, ಅವುಗಳು ಪರಿಜ್ಞಾನವನ್ನು ಕಾಪಿಡುತ್ತವೆ. ಅಲ್ಪಾವಧಿಯಲ್ಲಿ, ತಮ್ಮ ಹಂತಕ ಪರಮಾಣು ಉಪಕರಣಗಳನ್ನು ಅವರು ಪುನಃ ಉತ್ಪಾದಿಸಬಲ್ಲರು; ಆದಕಾರಣ, ಸಾಂಪ್ರದಾಯಿಕ ಶಸ್ತ್ರಗಳ ಯಾವುದೇ ಯುದ್ಧ ಸರ್ವನಾಶನದ ದುರಂತಕ್ಕೆ ಬೆಳೆಯಬಲ್ಲವು. ಜನಾಂಗಗಳನ್ನು ಇಂದು ಆವರಿಸಿರುವ ಅಹಂಭಾವ ಮತ್ತು ದ್ವೇಷವು, ಒಂದು ವೇಳೆ—ಹಾ! ಹೌದು, ಅಗ್ನಿ ವರ್ಣದ ಕುದುರೆಯ ಹುಚ್ಚಾವೇಶದ ದೌಡಾಯಿಸುವಿಕೆಯನ್ನು ಬಿಳಿ ಕುದುರೆಯ ರಾಹುತನು ತಿರುಗಿಸದಿದ್ದರೆ, ಮಾನವ ಕುಲದ ಆತ್ಮಹತ್ಯೆಗೆ ನಡಿಸಲೇಬೇಕು. ಸೈತಾನನಿಂದ ನಿಯಂತ್ರಿಸಲ್ಪಟ್ಟ ಲೋಕದ ಮೇಲಿನ ತನ್ನ ವಿಜಯವನ್ನು ಪೂರ್ಣಗೊಳಿಸಲು ಮತ್ತು ಪ್ರೀತಿಯ—ದೇವರ ಮತ್ತು ನೆರೆಯವನ ಪ್ರೀತಿಯ—ಮೇಲಾಧಾರಿತ ಹೊಸ ಐಹಿಕ ಸಮಾಜವೊಂದನ್ನು ಸ್ಥಾಪಿಸಲು, ರಾಜನಾದ ಕ್ರಿಸ್ತನು ಸವಾರಿಗೈಯುವನೆಂದು ನಾವು ಭರವಸದಿಂದಿರೋಣ, ಮತ್ತು ಶಾಂತಿಗಾಗಿರುವ ಈ ಶಕ್ತಿಯು ನಮ್ಮ ಉನ್ಮತ್ತಾವೇಶದ ಸಮಯಗಳ ತತ್ತರಿಸುವ ಪರಮಾಣು ದಾಳಿನಿರೋಧಗಳಿಗಿಂತ ಎಷ್ಟೋ ಶ್ರೇಷ್ಠಮಟ್ಟದ್ದಾಗಿರುತ್ತದೆ.—ಕೀರ್ತನೆ 37:9-11; ಮಾರ್ಕ 12:29-31; ಪ್ರಕಟನೆ 21:1-5.

ಕಪ್ಪು ಕುದುರೆಯೊಂದು ಮುನ್ನುಗ್ಗುತ್ತದೆ

20. ಬಿಳಿ ಕುದುರೆಯ ರಾಹುತನು ಯಾವುದೇ ವಿನಾಶಕಾರಿ ಸನ್ನಿವೇಶವನ್ನು ನಿಭಾಯಿಸುವನೆಂಬದಕ್ಕೆ ನಮಗೆ ಯಾವ ಆಶ್ವಾಸನೆ ಇದೆ?

20 ಈಗ ಯೇಸುವು ಮೂರನೆಯ ಮುದ್ರೆಯನ್ನು ಒಡೆಯುತ್ತಾನೆ! ಯೋಹಾನನೇ, ನೀನು ಏನು ನೋಡುತ್ತಾ ಇದ್ದಿ? “ಮತ್ತು ಆತನು ಮೂರನೆಯ ಮುದ್ರೆಯನ್ನು ಬಿಚಿದ್ಚಾಗ, ಮೂರನೆಯ ಜೀವಿಯೊಂದು ‘ಬಾ!’ ಎಂದು ಹೇಳುವುದನ್ನು ನಾನು ಕೇಳಿದೆನು.” (ಪ್ರಕಟನೆ 6:5 ಎ, NW) ಸಂತಸಕರವಾಗಿಯೇ, ಈ ಮೂರನೆಯ ಕೆರೂಬಿಗೆ ಪ್ರೀತಿಯ ಗುಣವನ್ನು ಚಿತ್ರಿಸುವ “ಮನುಷ್ಯನಂತಿರುವ ಮುಖವು” ಇದೆ. ಇಂದು ಯೆಹೋವನ ಸಂಸ್ಥೆಯಲ್ಲಿ ತತ್ವಾಧಾರಿತ ಪ್ರೀತಿಯೆಂಬ ಶ್ರೇಷ್ಠ ಗುಣವು ವ್ಯಾಪಕವಾಗಿ ಹಬ್ಬಿರುವಂತೆಯೇ, ದೇವರ ನೂತನ ಲೋಕದಲ್ಲಿಯೂ ವಿಫುಲವಾಗಿರುವುದು. (ಪ್ರಕಟನೆ 4:7; 1 ಯೋಹಾನ 4:16) ‘ದೇವರು ಆತನ ಪಾದಗಳ ಕೆಳಗೆ ಎಲ್ಲಾ ವೈರಿಗಳನ್ನು ಹಾಕುವ ತನಕ ಆಳಲಿರುವ’ ಬಿಳಿ ಕುದುರೆಯ ರಾಹುತನು, ಮುಂದೆ ಯೋಹಾನನ ವೀಕ್ಷಣೆಯಲ್ಲಿ ತರಲ್ಪಟ್ಟ ವಿಪತ್ಕಾರಿ ಸನ್ನಿವೇಶವನ್ನು ಪ್ರೀತಿಪೂರ್ವಕವಾಗಿ ತೆಗೆದುಹಾಕುವನು ಎಂಬ ವಿಷಯದಲ್ಲಿ ನಾವು ನಿಶ್ಚಯದಿಂದಿರಬಲ್ಲೆವು.—1 ಕೊರಿಂಥ 15:25.

21. (ಎ) ಕಪ್ಪು ಕುದುರೆ ಮತ್ತು ಅದರ ರಾಹುತನಿಂದ ಯಾವುದು ಚಿತ್ರಿಸಲ್ಪಟ್ಟಿದೆ? (ಬಿ) ಕಪ್ಪು ಕುದುರೆಯು ಇನ್ನೂ ಕೋಪಾವೇಶದ ವರ್ತನೆಯಲ್ಲಿ ತೊಡಗಿಕೊಂಡೇ ಇದೆ ಎಂದು ಯಾವುದು ರುಜುಪಡಿಸುತ್ತದೆ?

21 ಅನಂತರ “ಬಾ!” ಎಂಬ ಮೂರನೆಯ ಆಹ್ವಾನಕ್ಕೆ ಉತ್ತರವು ಕೊಡಲ್ಪಟ್ಟಾಗ, ಯೋಹಾನನು ಏನನ್ನು ನೋಡುತ್ತಾನೆ? “ಮತ್ತು ನಾನು ನೋಡಿದೆನು, ಮತ್ತು ಇಗೋ! ಒಂದು ಕಪ್ಪು ಕುದುರೆ; ಮತ್ತು ಅದರ ಮೇಲೆ ಕೂತಿದ್ದಾತನ ಕೈಯಲ್ಲಿ ಒಂದು ಜೋಡುತ್ರಾಸುಗಳಿದ್ದವು.” (ಪ್ರಕಟನೆ 6:5ಬಿ, NW) ಪೂರ್ತಿ ಬರಗಾಲ! ಈ ಪ್ರವಾದನಾ ದೃಶ್ಯದ ಭಯಂಕರ ಸಂದೇಶವು ಅದು ತಾನೇ ಆಗಿದೆ. ಕರ್ತನ ದಿನದ ಆರಂಭದಲ್ಲಿ ತ್ರಾಸುಗಳ ಮೂಲಕ ಆಹಾರವನ್ನು ತೂಗಿಕೊಡುವ ಸನ್ನಿವೇಶಗಳನ್ನು ಅದು ಮುನ್ಸೂಚಿಸುತ್ತದೆ. ಇಸವಿ 1914 ರಿಂದ ಬರಗಾಲವು ಮುಂದುವರಿಯುತ್ತಿರುವ ಲೋಕವ್ಯಾಪಕ ಸಮಸ್ಯೆಯೊಂದಾಗಿರುತ್ತದೆ. ಆಧುನಿಕ ಯುದ್ಧ ಕಾರ್ಯಾಚರಣೆಗಳನ್ನು ಅನುಸರಿಸಿ ಅದು ಬರಗಾಲವನ್ನು ತರುತ್ತದೆ, ಯಾಕಂದರೆ ಹಸಿದವರನ್ನು ಉಣಿಸಲು ಸಾಮಾನ್ಯವಾಗಿ ಬಳಸಲ್ಪಡುವ ಸಂಪನ್ಮೂಲಗಳು, ಅಧಿಕಾಂಶವಾಗಿ ಯುದ್ಧಾಸ್ತ್ರಗಳನ್ನು ಒದಗಿಸುವುದಕ್ಕೆ ತಿರುಗಿಸಲ್ಪಡುತ್ತವೆ. ಗದ್ದೆ ಕೆಲಸಗಾರರು ಯುದ್ಧಕ್ಕೆ ಭರ್ತಿಮಾಡಲ್ಪಡುತ್ತಾರೆ, ಮತ್ತು ಯುದ್ಧದಿಂದ ಹಾಳುಬಿದ್ದ ಗದ್ದೆಗಳು ಮತ್ತು ಧ್ವಂಸಮಾಡಿ ತ್ಯಜಿಸಿದ ಭೂಮಿಯು ಆಹಾರದ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಮೊದಲನೆಯ ಲೋಕ ಯುದ್ಧದ ಸಮಯಾವಧಿಯಲ್ಲಿ, ಹಸಿವಿನಿಂದ ಬಾಧಿಸಲ್ಪಟ್ಟು, ಲಕ್ಷಾಂತರ ಮಂದಿ ಮೃತರಾದಾಗ, ಇದು ಎಷ್ಟೊಂದು ಸತ್ಯವಾಗಿತ್ತು! ಇನ್ನೂ ಹೆಚ್ಚಾಗಿ, ಯುದ್ಧಾಂತ್ಯದಲ್ಲಿ ಹಸಿವಿನ ಕಪ್ಪು ಕುದುರೆಯ ರಾಹುತನು, ಇನ್ನೂ ತನ್ನ ಪಟ್ಟನ್ನು ಸಡಿಲಿಸಿರಲಿಲ್ಲ. ಯುಕ್ರೇನಿನಲ್ಲಿ ಕೇವಲ ಒಂದು ಬರಗಾಲದಿಂದ 50 ಲಕ್ಷ ಜನರು 1930ರ ದಶಕದಲ್ಲಿ ಅಳಿದುಹೋದರು. ಎರಡನೆಯ ಲೋಕ ಯುದ್ಧದ ಕಾರ್ಯಾಚರಣೆಯು ಇನ್ನಷ್ಟು ಆಹಾರದ ಕೊರತೆ ಮತ್ತು ಬರಗಾಲಗಳನ್ನು ತಂದಿತು. ಕಪ್ಪು ಕುದುರೆಯು ತನ್ನ ನಾಗಾಲೋಟವನ್ನು ಮುಂದರಿಸಿದಂತೆ, 51 ಕೋಟಿ 20 ಲಕ್ಷದಷ್ಟು ಜನರು ಹಸಿವೆಯಿಂದಿದ್ದಾರೆ ಮತ್ತು 40,000 ಮಕ್ಕಳು ಪ್ರತಿ ದಿನ ಹಸಿವೆಗೆ ಸಂಬಂಧಿಸಿದ ಕಾರಣಗಳಿಂದ ಸಾಯುತ್ತಿದ್ದಾರೆ ಎಂದು 1987ರ ಮಧ್ಯಭಾಗದಲ್ಲಿ ವರ್ಲ್ಡ್‌ ಫುಡ್‌ ಕೌನ್ಸಿಲ್‌ ವರದಿಸಿತು.

22. (ಎ) ಒಂದು ಧ್ವನಿಯು ಏನಂದಿತು, ಯಾವ ಅಗತ್ಯತೆಯನ್ನು ವ್ಯಕ್ತಪಡಿಸಿತು? (ಬಿ) ಗೋಧಿಯ ಒಂದು ಕ್ವಾರ್ಟ್‌ ಮತ್ತು ಜವೆಗೋಧಿಯ ಮೂರು ಕ್ವಾರ್ಟ್‌ನ ಬೆಲೆಯ ಮೂಲಕ ಏನು ಸೂಚಿಸಲ್ಪಟ್ಟಿದೆ?

22 ನಮಗೆ ಹೇಳಲು ಯೋಹಾನನಿಗೆ ಇನ್ನೂ ಇದೆ: “ಮತ್ತು ನಾಲ್ಕು ಜೀವಿಗಳ ಮಧ್ಯದಿಂದಲೋ ಎಂಬಂತೆ ಒಂದು ಧ್ವನಿಯನ್ನು ನಾನು ಕೇಳಿದೆನು: ‘ಒಂದು ದೀನಾರಕ್ಕೆ ಒಂದು ಕ್ವಾರ್ಟ್‌ ಗೋಧಿ, ಮತ್ತು ಒಂದು ದೀನಾರಕ್ಕೆ ಮೂರು ಕ್ವಾರ್ಟ್‌ ಜವೆಗೋಧಿ; ಮತ್ತು ಆಲಿವ್‌ ಎಣ್ಣೆಯನ್ನು ಮತ್ತು ದ್ರಾಕ್ಷಾಮದ್ಯವನ್ನು ಕೆಡಿಸಬೇಡ.’” (ಪ್ರಕಟನೆ 6:6, NW) ಆಹಾರದ ಪೂರೈಸುವಿಕೆಯನ್ನು ಜಾಗ್ರತೆಯಿಂದ ನೋಡುವ ಅಗತ್ಯತೆಯನ್ನು ವ್ಯಕ್ತಪಡಿಸುವುದರಲ್ಲಿ ಎಲ್ಲಾ ನಾಲ್ಕು ಕೆರೂಬಿಗಳು ಐಕಮತ್ಯದಿಂದಿವೆ—ಸಾ. ಶ. ಪೂ. 607 ರಲ್ಲಿ ಯೆರೂಸಲೇಮಿನ ನಾಶನದ ಮೊದಲು ಜನರು ಯಾವ ರೀತಿಯಲ್ಲಿ “ತೂಕದ ಪ್ರಕಾರ ರೊಟ್ಟಿಯನ್ನು ಬಹಳ ವ್ಯಥೆಯಿಂದೊಡಗೂಡಿದ ಜಾಗ್ರತೆಯಿಂದ ತಿನ್ನಬೇಕಿತ್ತೋ” ಅಂತೆಯೇ. (ಯೆಹೆಜ್ಕೇಲ 4:16, NW) ಯೋಹಾನನ ಸಮಯದಲ್ಲಿ, ಒಂದು ಕ್ವಾರ್ಟ್‌ ಗೋಧಿಯು ಸೈನಿಕನೊಬ್ಬನ ದೈನಂದಿನ ಪಡಿತರದ ಆಹಾರ ಪ್ರಮಾಣಕ್ಕೆ ಸಮವಾಗಿತ್ತು. ಅಂತಹ ಪಡಿತರ ಆಹಾರ ಪ್ರಮಾಣದ ಕ್ರಯವೆಷ್ಟಿರಬಹುದು? ಒಂದು ದೀನಾರ—ಒಂದು ಇಡೀ ದಿನದ ಕೂಲಿ! (ಮತ್ತಾಯ 20:2) * ಒಬ್ಬ ಮನುಷ್ಯನಿಗೆ ಕುಟುಂಬವೊಂದು ಇರುವುದಾದರೆ ಆಗೇನು? ಒಳ್ಳೇದು, ಅವನು ಶುದ್ಧೀಕರಿಸದ ಮೂರು ಕ್ವಾರ್ಟ್‌ ಜವೆಗೋಧಿಯನ್ನು ಬದಲಿಯಾಗಿ ಖರೀದಿಸಬಹುದಿತ್ತು. ಅದು ಕೂಡ, ಕೇವಲ ಒಂದು ಚಿಕ್ಕ ಸಂಸಾರಕ್ಕೆ ಬಡಿಸಲು ಸಾಧ್ಯಮಾಡುತ್ತಿತ್ತು. ಮತ್ತು ಗೋಧಿಯಂತೆ ಜವೆಗೋಧಿಯು ಒಂದು ಉತ್ತಮ ಗುಣಮಟ್ಟದ ಆಹಾರವಸ್ತುವಾಗಿ ಪರಿಗಣಿಸಲ್ಪಡುತ್ತಿರಲಿಲ್ಲ.

23. “ಆಲಿವ್‌ ಎಣ್ಣೆಯನ್ನು ಮತ್ತು ದ್ರಾಕ್ಷಾಮದ್ಯವನ್ನು ಕೆಡಿಸಬೇಡ” ಎಂಬ ಹೇಳಿಕೆಯಿಂದ ಏನು ಸೂಚಿಸಲ್ಪಡುತ್ತದೆ?

23 “ಆಲಿವ್‌ ಎಣ್ಣೆಯನ್ನು ಮತ್ತು ದ್ರಾಕ್ಷಾಮದ್ಯವನ್ನು ಕೆಡಿಸಬೇಡ” ಎಂಬ ವಾಕ್ಯದಿಂದ ಏನು ಸೂಚಿಸಲ್ಪಡುತ್ತದೆ? ಅನೇಕರು ಆಹಾರದ ಕೊರತೆ ಮತ್ತು ಹಸಿವಿನಿಂದ ನರಳುತ್ತಿರುವಾಗಲೂ, ಶ್ರೀಮಂತರ ಸುಖಭೋಗಗಳಿಗೇನೂ ಕೇಡು ಸಂಭವಿಸುವುದಿಲ್ಲ ಎಂದದರರ್ಥವೆಂದು ಕೆಲವರು ವೀಕ್ಷಿಸುತ್ತಾರೆ. ಆದರೆ ಮಧ್ಯಪೂರ್ವದಲ್ಲಿ, ಎಣ್ಣೆ ಮತ್ತು ದ್ರಾಕ್ಷಾಮದ್ಯವೇನೂ ನಿಜವಾಗಿ ಸುಖಭೋಗಗಳಾಗಿರಲಿಲ್ಲ. ಬೈಬಲ್‌ ಸಮಯಗಳಲ್ಲಿ, ರೊಟ್ಟಿ, ಎಣ್ಣೆ, ಮತ್ತು ದ್ರಾಕ್ಷಾಮದ್ಯವು ಆಹಾರವಸ್ತುಗಳಾಗಿ ವೀಕ್ಷಿಸಲ್ಪಡುತ್ತಿದ್ದವು. (ಹೋಲಿಸಿರಿ ಆದಿಕಾಂಡ 14:18; ಕೀರ್ತನೆ 104:14, 15.) ನೀರು ಯಾವಾಗಲೂ ಒಳ್ಳೆಯದಾಗಿರಲಿಲ್ಲ, ಆದುದರಿಂದ ದ್ರಾಕ್ಷಾಮದ್ಯವು ವ್ಯಾಪಕವಾಗಿ ಪಾನಕವಾಗಿ ಮತ್ತು ಕೆಲವೊಮ್ಮೆ ಔಷಧದ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿತ್ತು. (1 ತಿಮೊಥೆಯ 5:23) ಎಣ್ಣೆಯ ವಿಷಯದಲ್ಲಿ, ಎಲೀಷನ ದಿನಗಳಲ್ಲಿ ಚಾರೆಫ್ತಾದ ವಿಧವೆಯು ಬಡವಳಾಗಿದ್ದರೂ, ಉಳಿದಿರುವ ಹಿಟ್ಟನ್ನು ಬೇಯಿಸಲಿಕ್ಕೆ ಅವಳ ಹತ್ತಿರ ಇನ್ನೂ ಸ್ವಲ್ಪ ಎಣ್ಣೆ ಇತ್ತು. (1 ಅರಸುಗಳು 17:12) ಆದಕಾರಣ, “ಆಲಿವ್‌ ಎಣ್ಣೆಯನ್ನು ಮತ್ತು ದ್ರಾಕ್ಷಾಮದ್ಯವನ್ನು ಕೆಡಿಸಬೇಡ” ಎಂಬ ಅಪ್ಪಣೆಯು, ಈ ಮೂಲಭೂತ ವಸ್ತುಗಳನ್ನು ಬಲುಬೇಗನೆ ಬಳಸಿ ಮುಗಿಸದಂತೆ, ಬದಲು ಅವುಗಳನ್ನು ಬಹಳ ಜಾಗರೂಕತೆಯಿಂದ ಬಳಸುವಂತೆ ಕೊಟ್ಟ ಸಲಹೆ ಎಂದು ತೋರುತ್ತದೆ. ಇಲ್ಲದಿದ್ದಲ್ಲಿ, ಅವು ‘ಕೆಡಿಸಲ್ಪಡುತ್ತವೆ’ ಅಂದರೆ ಬರಗಾಲವು ಕೊನೆಗೊಳ್ಳುವ ಮೊದಲೇ ಅವುಗಳು ಮುಗಿಯುವವು.

24. ಕಪ್ಪು ಕುದುರೆಯು ತನ್ನ ದೌಡಾಯಿಸುವಿಕೆಯಲ್ಲಿ ಇನ್ನಷ್ಟು ದೀರ್ಘ ಕಾಲ ಮುಂದುವರಿಯಲಿಕ್ಕಿಲ್ಲ ಯಾಕೆ?

24 ಆ ನಾಗಾಲೋಟದಿಂದ ಧಾವಿಸುವ ಕಪ್ಪು ಕುದುರೆಗೆ ಬಲುಬೇಗನೆ ಬಿಳಿ ಕುದುರೆಯ ರಾಹುತನು ಲಗಾಮೆಳೆಯುವನು ಎನ್ನುವುದರಲ್ಲಿ ನಾವೆಷ್ಟು ಸಂತೋಷಿಗಳಾಗಿರಬಲ್ಲೆವು! ಏಕೆಂದರೆ ಹೊಸ ಲೋಕಕ್ಕಾಗಿ ಅವನ ಪ್ರೀತಿಯ ಒದಗಿಸುವಿಕೆಯ ಕುರಿತಾಗಿ ಹೀಗೆ ಬರೆಯಲ್ಪಟ್ಟಿದೆ: “ಅವನ ದಿನಗಳಲ್ಲಿ ಧರ್ಮಿಯು ಏಳಿಗೆ ಹೊಂದುವನು, ಮತ್ತು ಚಂದ್ರನಿಲ್ಲದೆ ಹೋಗುವ ತನಕ ಶಾಂತಿಯ ಸಮೃದ್ಧಿ ಇರುವುದು. . . . ಭೂಮಿಯ ಮೇಲೆ ಧಾನ್ಯವು ಹೇರಳವಾಗಿರುವುದು; ಬೆಟ್ಟಗಳ ಮೇಲೆಲ್ಲಾ ಸಮೃದ್ಧವಾಗಿರುವುದು.”—ಕೀರ್ತನೆ 72:7, 16, NW; ಯೆಶಾಯ 25:6-8 ಕೂಡ ನೋಡಿರಿ.

ನಸುಬಿಳಿಚಾದ ಕುದುರೆ ಮತ್ತು ಅದರ ರಾಹುತನು

25. ಯೇಸುವು ನಾಲ್ಕನೆಯ ಮುದ್ರೆಯನ್ನು ಒಡೆಯುವಾಗ, ಯಾರ ಧ್ವನಿಯನ್ನು ಯೋಹಾನನು ಕೇಳುತ್ತಾನೆ, ಮತ್ತು ಇದು ಏನನ್ನು ಸೂಚಿಸುತ್ತದೆ?

25 ಕಥೆಯು ಇನ್ನೂ ಪೂರ್ಣವಾಗಿ ಹೇಳಲ್ಪಟ್ಟಿರುವುದಿಲ್ಲ. ಯೇಸುವು ನಾಲ್ಕನೆಯ ಮುದ್ರೆಯನ್ನು ಬಿಚ್ಚುತ್ತಾನೆ, ಮತ್ತು ಯೋಹಾನನು ನಮಗೆ ಅದರ ಫಲಿತಾಂಶವನ್ನು ಹೇಳುತ್ತಾನೆ: “ಮತ್ತು ಅವನು ನಾಲ್ಕನೆಯ ಮುದ್ರೆಯನ್ನು ಬಿಚಿದ್ಚಾಗ, ನಾಲ್ಕನೆಯ ಜೀವಿಯ ಧ್ವನಿಯು ‘ಬಾ!’ ಎಂದು ಹೇಳುವುದನ್ನು ಕೇಳಿದೆನು.” (ಪ್ರಕಟನೆ 6:7, NW) ಹಾರುವ ಹದ್ದಿಗೆ ಸರಿಹೋಲುವ ಕೆರೂಬಿಯ ಧ್ವನಿಯು ಇದಾಗಿತ್ತು. ದೂರದೃಷ್ಟಿಯ ವಿವೇಕವು ಸೂಚಿಸಲ್ಪಡುತ್ತದೆ, ಮತ್ತು ನಿಜವಾಗಿಯೂ ಯೋಹಾನನಿಗೆ, ಯೋಹಾನ ವರ್ಗಕ್ಕೆ, ಮತ್ತು ದೇವರ ಇತರ ಎಲ್ಲಾ ಐಹಿಕ ಸೇವಕರಿಗೆ, ಇಲ್ಲಿ ಏನು ವರ್ಣಿಸಲಾಗಿದೆಯೋ ಅದನ್ನು ಅನುಸರಿಸಲು ಮತ್ತು ಅದರ ವೀಕ್ಷಣದಲ್ಲಿ ಒಳನೋಟದಿಂದ ವರ್ತಿಸಲು ಇದು ಆವಶ್ಯಕವಾಗಿದೆ. ಹಾಗೆ ಮಾಡುವುದರಿಂದ, ಇಂದಿನ ಅಹಂಕಾರಿ, ಅನೈತಿಕ ಸಂತತಿಯ ಲೌಕಿಕ ವಿವೇಕಿಗಳನ್ನು ಬಾಧಿಸುವ ವ್ಯಾಧಿಯಿಂದ ಸ್ವಲ್ಪ ಮಟ್ಟಿಗೆ ಸುರಕ್ಷೆಯನ್ನು ನಾವು ಕಂಡುಕೊಳ್ಳಬಹುದು.—1 ಕೊರಿಂಥ 1:20, 21.

26. (ಎ) ನಾಲ್ಕನೆಯ ಕುದುರೆಯ ರಾಹುತನು ಯಾರು, ಮತ್ತು ಅವನ ಕುದುರೆಯ ಬಣ್ಣವು ತಕ್ಕದ್ದಾಗಿದೆ ಯಾಕೆ? (ಬಿ) ನಾಲ್ಕನೆಯ ಕುದುರೆ ರಾಹುತನನ್ನು ಯಾರು ಹಿಂಬಾಲಿಸುತ್ತಾನೆ, ಮತ್ತು ಅವನ ಬಲಿಗಳಿಗೆ ಏನು ಸಂಭವಿಸುತ್ತದೆ?

26 ಹಾಗಾದರೆ ಕರೆಗೆ ನಾಲ್ಕನೆಯ ಕುದುರೆಯ ರಾಹುತನು ಪ್ರತಿಕ್ರಿಯೆ ತೋರಿಸಿದಾಗ ಯಾವ ಹೊಸ ದುರಂತಗಳು ಬಿಡುಗಡೆಗೊಳಿಸಲ್ಪಟ್ಟವು? ಯೋಹಾನನು ನಮಗೆ ಹೀಗೆ ಹೇಳುತ್ತಾನೆ: “ಮತ್ತು ನಾನು ನೋಡಿದೆನು, ಮತ್ತು ಇಗೋ! ಒಂದು ನಸುಬಿಳಿಚಾದ ಕುದುರೆ; ಮತ್ತು ಅದರ ಮೇಲೆ ಕೂತಿದ್ದವನಿಗೆ ಮೃತ್ಯು ಎಂಬ ಹೆಸರು ಇತ್ತು. ಮತ್ತು ಹೇಡಿಸ್‌ ಅವನನ್ನು ಬಹಳ ಹತ್ತಿರದಿಂದ ಹಿಂಬಾಲಿಸುತ್ತಾ ಇತ್ತು.” (ಪ್ರಕಟನೆ 6:8 ಎ, NW) ಕೊನೆಯ ಕುದುರೆಯ ರಾಹುತನಿಗೆ ಒಂದು ಹೆಸರು ಇದೆ: ಮೃತ್ಯು. ಅಪಾಕಲಿಪ್ಸ್‌ನ ನಾಲ್ಕು ಕುದುರೆ ರಾಹುತರಲ್ಲಿ ಇವನೊಬ್ಬನು ಮಾತ್ರ ಅಷ್ಟೊಂದು ನೇರವಾಗಿ ತನ್ನ ಗುರುತನ್ನು ಪ್ರಕಟಿಸುತ್ತಾನೆ. ತಕ್ಕದ್ದಾಗಿಯೇ, ನಸುಬಿಳಿಚಾದ ಕುದುರೆಯನ್ನು ಮೃತ್ಯುವು ಸವಾರಿಮಾಡುತ್ತಾನೆ, ಯಾಕಂದರೆ ನಸುಬಿಳಿಚು (ಇಂಗ್ಲಿಷಿನಲ್ಲಿ ಪೇಲ್‌, ಗ್ರೀಕ್‌ ಖ್ಲೊ-ರೊ-ಸ್‌’) ಎಂಬ ಶಬ್ದವು ಗ್ರೀಕ್‌ ಸಾಹಿತ್ಯದಲ್ಲಿ ರೋಗದಿಂದ ಬಿಳಿಚಿಕೊಂಡಿರುವ ಮುಖಗಳನ್ನು ವರ್ಣಿಸಲು ಉಪಯೋಗಿಸಲ್ಪಡುತ್ತದೆ. ಇನ್ನೂ ತಕ್ಕದ್ದಾಗಿಯೇ, ವರ್ಣಿಸಿಲ್ಲದ ಯಾವುದೋ ರೀತಿಯಲ್ಲಿ ಮೃತ್ಯುವನ್ನು ಹಿಂಬಾಲಿಸಿ ಹೇಡಿಸ್‌ (ಸಮಾಧಿಕ್ಷೇತ್ರ) ಬರುತ್ತಿದೆ, ಯಾಕಂದರೆ ನಾಲ್ಕನೆಯ ಕುದುರೆ ರಾಹುತನ ಹಾವಳಿಗೆ ಆಹುತಿಯಾಗಿ ಬೀಳುವವರ ಸಂಖ್ಯೆಯನ್ನು ಹೇಡಿಸ್‌ ತನ್ನಲ್ಲಿ ಸ್ವೀಕರಿಸುತ್ತದೆ. ಸಂತಸಕರವಾಗಿಯೇ, ಇವರಿಗೆ ‘ಮೃತ್ಯುವು ಮತ್ತು ಹೇಡಿಸ್‌ ತನ್ನಲ್ಲಿದ್ದ ಸತ್ತವರನ್ನು ಒಪ್ಪಿಸುವಾಗ’ ಪುನರುತ್ಥಾನವಿರುವುದು. (ಪ್ರಕಟನೆ 20:13, NW) ಆದರೆ ಮೃತ್ಯುವು ಈ ಬಲಿಗಳನ್ನು ತೆಗೆದುಕೊಳ್ಳುವುದು ಹೇಗೆ?

27. (ಎ) ರಾಹುತ ಮೃತ್ಯು ತನ್ನ ಬಲಿಗಳನ್ನು ತೆಗೆದುಕೊಳ್ಳುವುದು ಹೇಗೆ? (ಬಿ) “ಭೂಮಿಯ ನಾಲ್ಕನೆಯ ಒಂದು ಭಾಗ”ದ ಮೇಲೆ ಮೃತ್ಯುವಿಗೆ ಅಧಿಕಾರವಿದೆ ಎನ್ನುವುದರ ಅರ್ಥವೇನು?

27 ದರ್ಶನವು ಕೆಲವೊಂದು ವಿಧಗಳನ್ನು ವಿವರಿಸುತ್ತದೆ: “ಮತ್ತು ಅವರಿಗೆ, ಒಂದು ದೊಡ್ಡ ಕತ್ತಿಯಿಂದ ಮತ್ತು ಆಹಾರದ ಕೊರತೆಯಿಂದ, ಮತ್ತು ಮಾರಕ ವ್ಯಾಧಿಯಿಂದ ಮತ್ತು ಭೂಮಿಯ ವನ್ಯ ಮೃಗಗಳಿಂದ ಕೊಲ್ಲಲು ಭೂಮಿಯ ನಾಲ್ಕನೆಯ ಒಂದು ಭಾಗದ ಮೇಲೆ ಅಧಿಕಾರವನ್ನು ಕೊಡಲಾಯಿತು.” (ಪ್ರಕಟನೆ 6:8 ಬಿ, NW) ಭೂಮಿಯ ಜನಸಂಖ್ಯೆಯ ಅಕ್ಷರಶಃ ನಾಲ್ಕನೆಯ ಒಂದು ಭಾಗವಾಗಬೇಕೆಂದಿಲ್ಲ, ಆದರೆ ಭೂಮಿಯ ಒಂದು ಬೃಹತ್‌ ಪ್ರಮಾಣವು,—ಅವು ಜನಸಾಂದ್ರತೆಯಿಂದ ಇಲ್ಲವೆ ಜನವಿರಳತೆಯಿಂದ ನಿವಾಸಿಸಲಿ,—ಈ ಸವಾರಿಯಿಂದ ಬಾಧಿಸಲ್ಪಡುವುವು. ಎರಡನೆಯ ಕುದುರೆ ರಾಹುತನ ದೊಡ್ಡ ಕತ್ತಿಯ ಮತ್ತು ಮೂರನೆಯವನ ಬರಗಾಲ ಮತ್ತು ಆಹಾರದ ಕೊರತೆಯ ಆಹುತಿಗಳನ್ನು ಈ ಕುದುರೆ ರಾಹುತನು ಕೊಯ್ಯುತ್ತಾನೆ. ಅವನು ಮಾರಕ ವ್ಯಾಧಿಯಿಂದ ತನ್ನ ಸ್ವಂತ ಸುಗ್ಗಿಯನ್ನು ಕೊಯ್ಯುತ್ತಾನೆ ಮತ್ತು ಲೂಕ 21:10, 11 ರಲ್ಲಿ ವರ್ಣಿಸಿರುವ ಭೂಕಂಪಗಳಿಂದಲೂ ಕೊಯ್ಯುತ್ತಾನೆ.

28. (ಎ) “ಮಾರಕ ವ್ಯಾಧಿ”ಯ ಕುರಿತಾದ ಪ್ರವಾದನೆಯ ಒಂದು ನೆರವೇರಿಕೆ ಹೇಗೆ ಆಯಿತು? (ಬಿ) ಇಂದಿನ ಅನೇಕ ರೋಗಗಳಿಂದ ಯೆಹೋವನ ಜನರು ಹೇಗೆ ಸಂರಕ್ಷಿಸಲ್ಪಟ್ಟಿದ್ದಾರೆ?

28 ಇಲ್ಲಿ ಪ್ರಚಲಿತದ ಪ್ರಾಮುಖ್ಯತೆಯು “ಮಾರಕ ವ್ಯಾಧಿ” ಯಾಗಿರುತ್ತದೆ. ಲೋಕ ಯುದ್ಧ Iರ ಧ್ವಂಸದ ಪರಿಣಾಮಗಳನ್ನು ಅನುಸರಿಸಿ, ಸ್ಪ್ಯಾನಿಷ್‌ ಫ್ಲೂ 1918-19ರ ಕೇವಲ ಕೆಲವೇ ತಿಂಗಳುಗಳಲ್ಲಿ 2 ಕೋಟಿಗಳಿಗಿಂತಲೂ ಹೆಚ್ಚು ಮಾನವ ಜೀವಗಳನ್ನು ಕೊಯ್ಯಿತು. ಇಡೀ ಲೋಕದಲ್ಲಿ ಈ ಪೀಡೆಯಿಂದ ಪಾರಾದ ಒಂದೇ ಒಂದು ಕ್ಷೇತ್ರವೆಂದರೆ ಒಂದು ಚಿಕ್ಕ ದ್ವೀಪವಾದ ಸೇಂಟ್‌ ಹಲೀನ. ಎಲ್ಲಿ ಜನಸಂಖ್ಯೆಯಲ್ಲಿ ಬಹುಮಂದಿ ಕೊಲ್ಲಲ್ಪಟ್ಟಿದ್ದರೋ, ಅಲ್ಲಿ ಮೃತ ದೇಹಗಳ ರಾಶಿಗಳನ್ನು ಸುಡಲು ಚಿತೆಗಳನ್ನು ಹೊತ್ತಿಸಲಾಯಿತು. ಮತ್ತು ಇಂದು, ಹೆಚ್ಚಾಗಿ ತಂಬಾಕಿನ ಮಾಲಿನ್ಯದಿಂದ ಉಂಟಾಗಿರುವ ಹೃದ್ರೋಗದ ಮತ್ತು ಕ್ಯಾನ್ಸರಿನ ಭಯಾನಕ ಸಂಭವ ಇದೆ. ಯಾವುದನ್ನು 1980 ರುಗಳ “ಕರಾಳ ದಶಕ” ವೆಂದು ವರ್ಣಿಸಲಾಗಿದೆಯೋ, ಅದರಲ್ಲಿ ಬೈಬಲಿನ ಮಟ್ಟಗಳ ಪ್ರಕಾರ ನಿಯಮರಹಿತವಾದ ಒಂದು ಜೀವನ ಶೈಲಿಯು, “ಮಾರಕ ಅಂಟುರೋಗಕ್ಕೆ” ಏಯ್ಡ್ಸ್‌ನ ವ್ಯಾಧಿಯನ್ನು ಕೂಡಿಸಿದೆ. ಇದನ್ನು ಬರೆಯುವ ಸಮಯದಲ್ಲಿ, ಈ ರೋಗ ಸೋಂಕಿದವರೆಲ್ಲರೂ ಸಾಯುತ್ತಾರೆ ಮತ್ತು 1990 ರೊಳಗೆ, ಕೇವಲ ಉತ್ತರ ಅಮೆರಿಕ ಒಂದರಲ್ಲಿಯೇ ಏಯ್ಡ್ಸ್‌ನಿಂದ ರೋಗಪೀಡಿತರಾದವರ ಸಂಖ್ಯೆ 10 ಲಕ್ಷ ಎಂದು ಅಂದಾಜಿಸಲಾಗಿದೆ; ಆಫ್ರಿಕದಲ್ಲಿ ಲಕ್ಷಾಂತರ ಮಂದಿ ಸಾವಿಗೀಡಾಗಲಿದ್ದಾರೆ ಎಂದು ತೋರುತ್ತದೆ. ಯಾವುದರ ಮೂಲಕ ಇಂದು ಇಂತಹ ಅನೇಕ ರೋಗಗಳು ದಾಟಿಸಲ್ಪಡುತ್ತವೆಯೋ, ಆ ಹಾದರ ಮತ್ತು ರಕ್ತದ ದುರುಪಯೋಗದಿಂದ ಯೆಹೋವನ ವಾಕ್ಯದ ವಿವೇಕಯುಕ್ತ ಸಲಹೆಯು ಅವರನ್ನು ದೂರವಿಡುವುದಕ್ಕಾಗಿ, ಆತನ ಜನರು ಎಷ್ಟೊಂದು ಕೃತಜ್ಞರಾಗಿರುತ್ತಾರೆ!—ಅ. ಕೃತ್ಯಗಳು 15:28, 29; 1 ಕೊರಿಂಥ 6:9-11 ಹೋಲಿಸಿರಿ.

29, 30. (ಎ) ಯೆಹೆಜ್ಕೇಲ 14:21ರ “ನಾಲ್ಕು ಕೇಡಿನ ಕೃತ್ಯಗಳಿಗೆ” ಇಂದು ಯಾವ ಅನ್ವಯ ಇದೆ? (ಬಿ) ಪ್ರಕಟನೆ 6:8ರ “ವನ್ಯ ಮೃಗಗಳು” ಎಂಬುದರಿಂದ ನಾವು ಏನನ್ನು ಅರ್ಥೈಸಬಹುದು? (ಸಿ) ಪ್ರವಾದನಾ ದೃಶ್ಯದ ಮುಖ್ಯ ವಿಷಯ ಯಾವುದೆಂದು ತೋರುತ್ತದೆ?

29 ಅಕಾಲಿಕ ಮರಣಕ್ಕೆ ನಾಲ್ಕನೆಯ ಕಾರಣವಾಗಿ ಯೋಹಾನನ ದರ್ಶನವು ವನ್ಯ ಮೃಗಗಳ ಕುರಿತು ಹೇಳುತ್ತದೆ. ನಾಲ್ಕನೆಯ ಮುದ್ರೆಯನ್ನು ಒಡೆದಾಗ ತೋರಿಸಿದ ನಾಲ್ಕು ವಿಷಯಗಳು—ಯುದ್ಧ, ಬರಗಾಲ, ರೋಗ, ಮತ್ತು ವನ್ಯ ಮೃಗಗಳು—ಖಂಡಿತವಾಗಿಯೂ ಪುರಾತನ ಕಾಲದಲ್ಲಿ ಅಕಾಲಿಕ ಮರಣದ ಪ್ರಮುಖ ಕಾರಣಗಳೆಂದು ಕಾಣಲ್ಪಡುತ್ತಿದ್ದವು. ಆದುದರಿಂದ ಇಂದಿನ ಅಕಾಲಿಕ ಮರಣದ ಎಲ್ಲಾ ಕಾರಣಗಳನ್ನು ಇವುಗಳು ಮುನ್ಸೂಚಿಸುವುವು. ಇದು ಇಸ್ರಾಯೇಲ್ಯರನ್ನು ಯೆಹೋವನು ಎಚ್ಚರಿಸಿದಂತೆಯೇ ಇದೆ: “ನಾನು ಕತ್ತಿ ಮತ್ತು ಕ್ಷಾಮ ಮತ್ತು ಕೇಡಿನ ದುಷ್ಟ ಮೃಗ ಮತ್ತು ವ್ಯಾಧಿ ಎಂಬೀ ನಾಲ್ಕು ನ್ಯಾಯದಂಡನೆಯ ಕೇಡಿನ ಕೃತ್ಯಗಳನ್ನು, ಯೆರೂಸಲೇಮಿನ ಮೇಲೆ ಕಳುಹಿಸುವೆನು, ಆ ಮೂಲಕ ಅವುಗಳಲ್ಲಿರುವ ಜನರು ಮತ್ತು ಸಾಕುಪ್ರಾಣಿಗಳೆಲ್ಲವೂ ನಿರ್ಮೂಲಗೊಳಿಸಲ್ಪಡುವವು.”—ಯೆಹೆಜ್ಕೇಲ 14:21, NW.

30 ಉಷ್ಣವಲಯಗಳಲ್ಲಿ 20 ನೆಯ ಶತಮಾನದಲ್ಲಿಲ್ಲಾ ವನ್ಯ ಪ್ರಾಣಿಗಳು ಏಕಪ್ರಕಾರವಾಗಿ ಆಹುತಿಗಳನ್ನು ಬಲಿತೆಗೆದುಕೊಂಡಿವೆಯಾದರೂ, ಆಧುನಿಕ ಸಮಯಗಳಲ್ಲಿ ವನ್ಯ ಪ್ರಾಣಿಗಳಿಂದ ಮರಣಗಳು ಮುಖಶೀರ್ಷಿಕೆಗಳಾಗಿ ಮಾಡಲ್ಪಟ್ಟಿರುವುದು ವಿರಳವೇ. ಒಂದು ವೇಳೆ ಯುದ್ಧದಿಂದ ದೇಶಗಳು ನಿರ್ಜನಗೊಳ್ಳುವುದಾದರೆ ಯಾ ಹಸಿದಿರುವ ಪ್ರಾಣಿಗಳ ವಿರುದ್ಧ ಕಾದಾಡಲು ಜನರು ಬರಗಾಲದಿಂದಾಗಿ ತೀರಾ ನಿರ್ಬಲರಾಗುವುದಾದರೆ, ಭವಿಷ್ಯದಲ್ಲಿ ಇವುಗಳು ಇನ್ನು ಹೆಚ್ಚು ಸಂಖ್ಯೆಯಲ್ಲಿ ಬಲಿ ತೆಗೆದುಕೊಳ್ಳಬಹುದು. ಇದಕ್ಕೆ ಕೂಡಿಸಿ, ಇಂದಿನ ಜನರಲ್ಲಿ ಅನೇಕರು, ವಿವೇಕಶೂನ್ಯ ಪಶುಗಳಂತೆ, ಯೆಶಾಯ 11:6-9 ರಲ್ಲಿ ವರ್ಣಿಸಲ್ಪಟ್ಟದ್ದಕ್ಕೆ ತೀರಾ ವಿರುದ್ಧವಾದ ಮೃಗೀಯ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಆಧುನಿಕ ಲೋಕದಲ್ಲಿ ಕಾಮ ಸಂಬಂಧಿತ ಪಾತಕಗಳ, ಕೊಲೆ, ಭಯಗ್ರಸ್ತವಾದ, ಮತ್ತು ಬಾಂಬುಗಳ ಸ್ಫೋಟಿಸುವಿಕೆಗಳ ಭೌಗೋಳಿಕ ವಿಸ್ತರಣೆಗೆ ಈ ಜನರು ಅಧಿಕಾಂಶ ಜವಾಬ್ದಾರರಾಗಿರುತ್ತಾರೆ. (ಹೋಲಿಸಿರಿ, ಯೆಹೆಜ್ಕೇಲ 21:31; ರೋಮಾಪುರ 1:28-31; 2 ಪೇತ್ರ 2:12.) ನಾಲ್ಕನೆಯ ಕುದುರೆ ರಾಹುತನು ಅವರ ಬಲಿಗಳನ್ನು ಕೂಡ ಕೊಯ್ಯುತ್ತಾನೆ. ಖಂಡಿತವಾಗಿಯೂ, ಮಾನವ ಕುಲದ ಅಕಾಲಿಕ ಮರಣವನ್ನು ಅನೇಕ ವಿಧಗಳಲ್ಲಿ ನಸುಬಿಳಿಚಾದ ಕುದುರೆ ರಾಹುತನು ಕೊಯ್ಯುತ್ತಾನೆ ಎಂಬುದೇ ಈ ಪ್ರವಾದನಾ ದರ್ಶನದ ಮುಖ್ಯ ವಿಷಯವೆಂದು ತೋರುತ್ತದೆ.

31. ಕೆಂಪು, ಕಪ್ಪು, ಮತ್ತು ನಸುಬಿಳಿಚಾದ ಕುದುರೆಗಳ ರಾಹುತರಿಂದ ಧ್ವಂಸಕಾರಿ ಪರಿಣಾಮಗಳಾಗಿರುವುದಾದರೂ, ನಾವು ಪ್ರೋತ್ಸಾಹವುಳ್ಳವರಾಗಿರಬಹುದು ಏಕೆ?

31 ಮೊದಲನೆಯ ನಾಲ್ಕು ಮುದ್ರೆಗಳ ಬಿಚ್ಚುವಿಕೆಯಿಂದ ಪ್ರಕಟಿಸಲ್ಪಟ್ಟ ಸಮಾಚಾರವು ನಮಗೆ ಆಶ್ವಾಸನೆಯನ್ನೀಯುತ್ತದೆ ಯಾಕಂದರೆ ಇಂದು ಬಹಳವಾಗಿ ವ್ಯಾಪಕವಾಗಿರುವ ಯುದ್ಧ, ಹಸಿವು, ರೋಗ, ಮತ್ತು ಅಕಾಲಿಕ ಮರಣದ ಇತರ ಕಾರಣಗಳಿಂದ ನಾವು ಹತಾಶರಾಗದಂತೆ ನಮಗೆ ಅದು ಕಲಿಸುತ್ತದೆ; ಸದ್ಯದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಮಾನವ ಮುಂದಾಳುಗಳು ಪರಾಜಯಗೊಂಡಿರುವುದರಿಂದಲೂ ನಾವು ನಮ್ಮ ನಿರೀಕ್ಷೆಯನ್ನು ಕಳೆದುಕೊಳ್ಳಬಾರದು. ಕೆಂಪು, ಕಪ್ಪು, ಮತ್ತು ನಸುಬಿಳಿಚಾದ ಕುದುರೆಗಳ ರಾಹುತರು ಎಲ್ಲಾ ಕಡೆಗಳಲ್ಲಿ ಹೋಗಿರುತ್ತಾರೆಂದು ಲೋಕದ ಸಂಗತಿಗಳು ರುಜುವಾತನ್ನು ನೀಡುವುದಾದರೂ, ತನ್ನ ಸವಾರಿಯನ್ನು ಆರಂಭಿಸುವುದರಲ್ಲಿ ಬಿಳಿ ಕುದುರೆಯ ರಾಹುತನು ಮೊದಲಿಗನು ಎಂಬುದನ್ನು ಮರೆಯದಿರ್ರಿ. ಯೇಸುವು ರಾಜನಾಗಿದ್ದಾನೆ, ಮತ್ತು ಅವನು ಸೈತಾನನನ್ನು ಪರಲೋಕದಿಂದ ಹೊರಗೆ ದೊಬ್ಬುವಷ್ಟು ಮಟ್ಟಿಗೆ ಈಗಾಗಲೇ ವಿಜಯಿಯಾಗಿದ್ದಾನೆ. ಆತ್ಮಿಕ ಇಸ್ರಾಯೇಲ್ಯರ ಪುತ್ರರಲ್ಲಿ ಉಳಿದವರನ್ನು ಮತ್ತು ಮಹಾ ಸಂಕಟದ ಮೂಲಕ ಪಾರಾಗುವಿಕೆಗಾಗಿ ಲಕ್ಷಾಂತರ ಸಂಖ್ಯೆಗೆ ಮುಟ್ಟಿರುವ ಒಂದು ಅಂತಾರಾಷ್ಟ್ರೀಯ ಮಹಾ ಸಮೂಹವನ್ನು ಅವನು ಒಟ್ಟುಗೂಡಿಸುವುದು ಅವನ ಮುಂದಿನ ವಿಜಯಗಳಲ್ಲಿ ಸೇರಿರುತ್ತದೆ. (ಪ್ರಕಟನೆ 7:4, 9, 14) ತನ್ನ ವಿಜಯವನ್ನು ಅವನು ಪೂರ್ಣಗೊಳಿಸುವ ತನಕ ಅವನ ಸವಾರಿಯು ಮುಂದರಿಯತಕ್ಕದ್ದು.

32. ಮೊದಲನೆಯ ನಾಲ್ಕು ಮುದ್ರೆಗಳ ಬಿಚ್ಚುವಿಕೆಯ ಪ್ರತಿಯೊಂದರಲ್ಲಿ ಯಾವ ವೈಶಿಷ್ಟ್ಯವು ಇದೆ?

32 ಮೊದಲ ನಾಲ್ಕು ಮುದ್ರೆಗಳ ಪ್ರತಿಯೊಂದು ಬಿಚ್ಚುವಿಕೆಯು, “ಬಾ!” ಎಂಬ ಕರೆಯಿಂದ ಹಿಂಬಾಲಿಸಲ್ಪಟ್ಟಿತು. ಪ್ರತಿ ಬಾರಿ, ಒಂದು ಕುದುರೆ ಮತ್ತು ಅದರ ರಾಹುತನು ಮುನ್ನುಗ್ಗಿ ಬಂದನು. ಐದನೆಯ ಮುದ್ರೆಯ ಆರಂಭದೊಂದಿಗೆ, ನಾವು ಇನ್ನು ಮುಂದೆ ಅಂತಹ ಕರೆಯನ್ನು ಕೇಳುವುದಿಲ್ಲ. ಆದರೆ ಆ ಕುದುರೆ ರಾಹುತರು ನಾಗಾಲೋಟದಿಂದ ಇನ್ನೂ ದೌಡಾಯಿಸುತ್ತಾ ಇದ್ದಾರೆ, ಮತ್ತು ಅವರು ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿಲ್ಲಾ, ತಮ್ಮ ದೌಡಾಯಿಸುವಿಕೆಯನ್ನು ಮುಂದರಿಸುವರು. (ಮತ್ತಾಯ 28:20ನ್ನು ಹೋಲಿಸಿರಿ.) ಉಳಿದಿರುವ ಮೂರು ಮುದ್ರೆಗಳನ್ನು ಬಿಚ್ಚುವಾಗ, ಯೇಸುವು ಯಾವ ಮುಖ್ಯ ಘಟನೆಗಳನ್ನು ಪ್ರಕಟಪಡಿಸಲಿದ್ದಾನೆ? ಕೆಲವು ಸಂಭವಗಳು ಮಾನವ ನೇತ್ರಗಳಿಗೆ ಅಗೋಚರವಾಗಿವೆ. ಬೇರೆಯವುಗಳು, ಕಣ್ಣಿಗೆ ಗೋಚರವಾಗುವುದಾದರೂ, ಭವಿಷ್ಯಕ್ಕೆ ಸಂಬಂಧಪಟ್ಟವುಗಳಾಗಿವೆ. ಆದಾಗ್ಯೂ, ಅವುಗಳ ನೆರವೇರಿಕೆಯು ಖಂಡಿತ. ಅವುಗಳು ಏನೆಂದು ನಾವು ನೋಡೋಣ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಆದಾಗ್ಯೂ, ಪ್ರಕಟನೆ 12:1ರ “ಸ್ತ್ರೀಯ” ತಲೆಯ ಮೇಲೆ ಸಾಂಕೇತಿಕ “ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟ” ಇದೆ ಎಂಬುದನ್ನು ಗಮನಿಸಿರಿ.

^ ಪ್ಯಾರ. 4 ಯೇಸುವು ತನ್ನ ರಾಜ್ಯದೊಳಗೆ 1914 ರಲ್ಲಿ ಬಂದನೆಂಬದಕ್ಕೆ ವಿವರಣಾತ್ಮಕ ಪುರಾವೆಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ, ಆಫ್‌ ಇಂಡಿಯ, ಇವರಿಂದ ಪ್ರಕಾಶಿತವಾದ “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕದ 14 ನೆಯ ಅಧ್ಯಾಯ ಮತ್ತು ಪುರವಣಿಯನ್ನು ನೋಡಿರಿ.

^ ಪ್ಯಾರ. 11 ಅನೇಕ ಭಾಷಾಂತರಗಳು ಈ ಪದಗುಚ್ಛವನ್ನು “ಜಯಿಸಲು” (ರಿವೈಸ್ಡ್‌ ಸ್ಟ್ಯಾಂಡರ್ಡ್‌, ದ ನ್ಯೂ ಇಂಗ್ಲಿಷ್‌ ಬೈಬಲ್‌, ಕಿಂಗ್‌ ಜೇಮ್ಸ್‌ ವರ್ಷನ್‌) ಅಥವಾ “ಜಯಿಸಲು ಪಟ್ಟು ಹಿಡಿ” (ಫಿಲಿಪ್ಸ್‌, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಎಂದು ಭಾಷಾಂತರಿಸಿದರೂ, ಇಲ್ಲಿ ಮೂಲ ಗ್ರೀಕಿನ ಅನಿಶ್ಚಿತ ಭೂತಕಾಲದ ಸಂಭಾವನಾ ರೂಪದ ಉಪಯೋಗವು ಪೂರ್ಣತೆ ಯಾ ಕೊನೆ ಎಂಬ ಅರ್ಥವನ್ನು ಕೊಡುತ್ತದೆ. ಆದಕಾರಣ, ರೋಬರ್ಟ್‌ಸನ್‌ರ ವರ್ಡ್‌ ಪಿಕ್ಜರ್ಸ್‌ ಇನ್‌ ದ ನ್ಯೂ ಟೆಸ್ಟಮೆಂಟ್‌ ಹೇಳಿಕೆ ನೀಡುವುದು: “ಇಲ್ಲಿ ಅನಿಶ್ಚಿತ ಭೂತಕಾಲದ ರೂಪವು ಕಟ್ಟಕಡೆಯ ವಿಜಯವನ್ನು ಸೂಚಿಸುತ್ತದೆ.”

^ ಪ್ಯಾರ. 22 ನ್ಯೂ ವಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌ನ ಪಾದಟಿಪ್ಪಣಿ ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 03 ರಲ್ಲಿರುವ ಚೌಕ]

ರಾಜನು ವಿಜಯಿಯಾಗಿ ಸವಾರಿಗೈಯುತ್ತಾನೆ

ಯೆಹೋವನ ಸಾಕ್ಷಿಗಳ ಶುಶ್ರೂಷೆಯು ಕಾನೂನುಬಾಹಿರವಾದದ್ದು, ಆಪಾದಿತವಾದದ್ದು, ಯಾ ಸರಕಾರಗಳನ್ನು ಉರುಳಿಸುವಂತಹದ್ದು ಎಂದು ತೋರುವಂತೆ ಮಾಡಲು ದೃಢಸಂಕಲ್ಪ ಮಾಡಿದ ವಿರೋಧಿಗಳು 1930ರ ಮತ್ತು 1940ರ ದಶಕಗಳಲ್ಲಿ ಪ್ರಯತ್ನಿಸಿದರು. (ಕೀರ್ತನೆ 94:20) ವರ್ಷ 1936 ರೊಂದರಲ್ಲಿಯೇ, ಕೇವಲ ಅಮೆರಿಕದಲ್ಲಿ ಮಾತ್ರ 1,149 ದಸ್ತಗಿರಿಗಳು ದಾಖಲೆಮಾಡಲ್ಪಟ್ಟವು. ಸಾಕ್ಷಿಗಳು ಅಮೆರಿಕದ ಸುಪ್ರೀಂ ಕೋರ್ಟ್‌ನ ತನಕ ಅನೇಕ ಕಾನೂನು ಮೊಕದ್ದಮೆಗಳನ್ನು ಕಾದಾಡಿದರು, ಮತ್ತು ಮುಂದೆ ಕೊಡಲ್ಪಟ್ಟವುಗಳು ಎದ್ದು ಕಾಣುವ ವಿಜಯಗಳಲ್ಲಿ ಕೆಲವು ಆಗಿರುತ್ತವೆ.

ಮೇ 3, 1943 ರಲ್ಲಿ, ಮರ್ಡಕ್‌ ವಿರುದ್ಧ ಪೆನ್ಸಿಲೇನ್ವಿಯ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌, ಹಣಕ್ಕಾಗಿ ಸಾಹಿತ್ಯಗಳನ್ನು ಸಾಕ್ಷಿಗಳು ನೀಡುವಾಗ ಒಂದು ಪರವಾನಗಿ ಇರುವ ಅಗತ್ಯವಿಲ್ಲ ಎಂದು ತೀರ್ಮಾನಿಸಿತು. ಅದೇ ದಿನ, ಮಾರ್ಟಿನ್‌ ವಿರುದ್ಧ ಸಿಟಿ ಆಫ್‌ ಸಥ್ಟ್ರರ್ಸ್‌ ಮೊಕದ್ದಮೆಯಲ್ಲಿ, ಕರಪತ್ರಗಳನ್ನು ಇಲ್ಲವೇ ಇತರ ಜಾಹಿರಾತು ವಿಷಯಗಳನ್ನು ಬಾಗಲಿನಿಂದ - ಬಾಗಲಿಗೆ ವಿತರಣೆ ಮಾಡುವುದರಲ್ಲಿ ಭಾಗವಹಿಸುವಾಗ ಬಾಗಲಿನ ಕರೆಗಂಟೆಯನ್ನು ಒತ್ತುವುದು ಕಾನೂನುಬಾಹಿರವಲ್ಲ ಎಂಬ ತೀರ್ಮಾನವನ್ನು ಎತ್ತಿಹಿಡಿಯಿತು.

ಜೂನ್‌ 14, 1943 ರಲ್ಲಿ, ಟೆಯ್ಲರ್‌ ವಿರುದ್ಧ ಮಿಸಿಸಿಪಿ ಮೊಕದ್ದಮೆಯಲ್ಲಿ, ತಮ್ಮ ಸಾರುವಿಕೆಯಿಂದ ಸಾಕ್ಷಿಗಳು ಸರಕಾರಕ್ಕೆ ಸ್ವಾಮಿನಿಷ್ಠರಾಗಿರಕೂಡದು ಎಂದು ಪ್ರೋತ್ಸಾಹಿಸಲಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಮಾನಿಸಿತು. ಅದೇ ದಿನದಲ್ಲಿ, ವೆಸ್ಟ್‌ ವರ್ಜಿನೀಯಾ ಸ್ಟೇಟ್‌ ಬೋರ್ಡ್‌ ಆಫ್‌ ಎಡ್ಯುಕೇಶನ್‌ ವಿರುದ್ಧ ಬಾರ್ನೆಟ್‌ ಮೊಕದ್ದಮೆಯಲ್ಲಿ ಧ್ವಜ ವಂದನೆ ಮಾಡಲು ನಿರಾಕರಿಸಿದ ಯೆಹೋವನ ಸಾಕ್ಷಿಗಳ ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕಲು ಶಾಲೆಯ ಬೋರ್ಡ್‌ಗೆ ಹಕ್ಕು ಇರುವುದಿಲ್ಲ ಎಂದು ಕೋರ್ಟ್‌ ಎತ್ತಿ ಹಿಡಿಯಿತು. ಅದರ ಮರುದಿನವೇ, ಆಸ್ಟ್ರೇಲಿಯದ ಹೈಕೋರ್ಟಿನ ಪೂರ್ಣ ಬೆಂಚು, ಯೆಹೋವನ ಸಾಕ್ಷಿಗಳ ಮೇಲಿನ ದೇಶದ ನಿಷೇಧವು “ಸ್ವೇಚ್ಛಾಚಾರದ್ದೂ, ವಿಚಿತ್ರ ವರ್ತನೆಯದ್ದೂ ಮತ್ತು ದಬ್ಬಾಳಿಕೆಯದ್ದೂ” ಎಂದು ಘೋಷಿಸಿ, ಅದನ್ನು ತೆಗೆದುಹಾಕಿತು.

[ಪುಟ 05 ರಲ್ಲಿರುವ ಚೌಕ]

“ಭೂಮಿಯಿಂದ ಶಾಂತಿಯನ್ನು ತೆಗೆದುಬಿಡುವಂತೆ ಅನುಗ್ರಹಿಸಲ್ಪಟ್ಟಿತು”

ತಾಂತ್ರಿಕ ಜ್ಞಾನವು ಎಲ್ಲಿಗೆ ನಡಿಸುತ್ತದೆ? ದ ಗ್ಲೋಬ್‌ ಆ್ಯಂಡ್‌ ಮೇಯ್ಲ್‌, ಟೊರಾಂಟೊ, ಕೆನಡ, ಜನವರಿ 22, 1987, ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ರಿಸರ್ಚ್‌ ಸೆಂಟರ್‌ನ ಅಧ್ಯಕ್ಷರಾದ ಐವನ್‌ ಎಲ್‌. ಹೆಡ್‌ರ ಒಂದು ಭಾಷಣದಿಂದ ಹೀಗೆ ವರದಿಸಿತು:

“ಇದನ್ನು ನಂಬಲರ್ಹವಾಗಿ ಅಂದಾಜು ಮಾಡಲಾಗಿದೆ ಏನಂದರೆ ಲೋಕದಲ್ಲಿ ಸಂಶೋಧನೆ ಮತ್ತು ಬೆಳವಣಿಗೆಯಲ್ಲಿ ತೊಡಗಿರುವ ಪ್ರತಿ ನಾಲ್ಕು ವಿಜ್ಞಾನಿಗಳಲ್ಲಿ ಮತ್ತು ಯಂತ್ರ-ವಿಜ್ಞಾನಿಗಳಲ್ಲಿ ಒಬ್ಬರು ಆಯುಧಗಳ ಮೇಲೆ ಕೆಲಸಮಾಡುತ್ತಾ ಇದ್ದಾರೆ. . . . ಇದರ ವೆಚ್ಚವು 1986 ರಲ್ಲಿ ಪ್ರತಿ ನಿಮಿಷಕ್ಕೆ 1.5 ಮಿಲಿಯ ಡಾಲರು [ಸುಮಾರು 3,75,00,000 ರೂ.] ಗಳಿಗಿಂತಲೂ ಹೆಚ್ಚು ಎಂದು ಲೆಕ್ಕ ಮಾಡಲಾಗಿದೆ. . . . ಇಂತಹ ಯಂತ್ರ ಜ್ಞಾನದ ಮೇಲೆ ಒತ್ತರ ಹಾಕುವುದರ ಫಲವಾಗಿ ನಾವೇನಾದರೂ ಹೆಚ್ಚು ಭದ್ರತೆಯಲ್ಲಿರುತ್ತೇವೋ? ಬಲಾಢ್ಯ ಶಕ್ತಿಗಳ ಹತ್ತಿರ ಇರುವ ಪರಮಾಣು ಶಸ್ತ್ರ ಸಂಗ್ರಹಗಳು ಎರಡನೆಯ ಲೋಕ ಯುದ್ಧದಲ್ಲಿ ಎಲ್ಲಾ ಯೋಧರಿಂದ ಸ್ಫೋಟಿಸಲ್ಪಟ್ಟ ಎಲ್ಲಾ ಯುದ್ಧಸಾಮಗ್ರಿಗಳ ಹೋರಾಟದ ಶಕ್ತಿಗಿಂತ—6,000 ಪಟ್ಟು ಹೆಚ್ಚಾಗಿರುತ್ತವೆ. ಆರು ಸಾವಿರ ಎರಡನೆಯ ಲೋಕ ಯುದ್ಧಗಳು. ಇಸವಿ 1945 ರಿಂದ ಮಿಲಿಟರಿ ಕಾರ್ಯಾಚರಣೆಯಿಂದ ಲೋಕವು ಮುಕ್ತವಾಗಿದ್ದ ಸಮಯವು ಏಳು ವಾರಗಳಿಗಿಂತಲೂ ಕಡಿಮೆ. ಅಂತಾರಾಷ್ಟ್ರೀಯ ಇಲ್ಲವೇ ಆಂತರಿಕ ಯುದ್ಧಗಳು 150 ಕ್ಕಿಂತಲೂ ಹೆಚ್ಚು ಜರುಗಿವೆ. ಇವುಗಳು 1 ಕೋಟಿ 93 ಲಕ್ಷ ಜನರ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ಸಂಯುಕ್ತ ರಾಷ್ಟ್ರ ಸಂಘದ ಈ ಯುಗದಲ್ಲಿ ಮಾಡಲ್ಪಟ್ಟ ಉದಯಿಸಿದ ಪರಿಣಾಮಕಾರಿ ಯಂತ್ರ-ಜ್ಞಾನದ ಫಲವಾಗಿರುತ್ತವೆ.”

[Box on page 98, 99]

ಪ್ರಕಟನೆ ಪುಸ್ತಕದ ಚೌಕಟ್ಟು

ಪ್ರಕಟನೆ ಪುಸ್ತಕದ ನಮ್ಮ ಚರ್ಚೆಯಲ್ಲಿ ಇಲ್ಲಿಯ ತನಕ ಪ್ರಗತಿಯನ್ನು ಮಾಡಿದ ನಂತರ, ಪುಸ್ತಕದ ಚೌಕಟ್ಟನ್ನು ಹೆಚ್ಚು ಸ್ಪಷ್ಟವಾಗಿ ಕಾಣಲು ನಾವು ಆರಂಭಿಸುತ್ತೇವೆ. ಅದರ ಹುರಿದುಂಬಿಸುವ ಪೀಠಿಕೆಯ (ಪ್ರಕಟನೆ 1:1-9) ನಂತರ ಈ ಕೆಳಗೆ ಕೊಡಲ್ಪಟ್ಟಂತೆ, 16 ದರ್ಶನಗಳಾಗಿ ವಿಭಾಗಿಸಲ್ಪಟ್ಟ ರೀತಿಯಲ್ಲಿ ಪ್ರಕಟನೆಯನ್ನು ವೀಕ್ಷಿಸಸಾಧ್ಯವಿದೆ:

1 ನೆಯ ದರ್ಶನ (1:10—3:22): ಯೋಹಾನನು ಪ್ರೇರಣೆಯ ಮೂಲಕ ಏಳು ಸಭೆಗಳಿಗೆ ಉತ್ಸಾಹದ ಬುದ್ಧಿವಾದದ ಸಂದೇಶಗಳನ್ನು ಕಳುಹಿಸುವ, ಮಹಿಮೆಗೇರಿಸಲ್ಪಟ್ಟ ಯೇಸುವನ್ನು ನೋಡುತ್ತಾನೆ.

2 ನೆಯ ದರ್ಶನ (4:1—5:14): ಯೆಹೋವ ದೇವರ ಸ್ವರ್ಗೀಯ ಸಿಂಹಾಸನದ ಭವ್ಯ ನೋಟ. ಇವನು ಕುರಿಮರಿಗೆ ಸುರುಳಿಯೊಂದನ್ನು ನೀಡುತ್ತಾನೆ.

3 ನೆಯ ದರ್ಶನ (6:1-17): ಸುರುಳಿಯ ಮೊದಲ ಆರು ಮುದ್ರೆಗಳನ್ನು ಬಿಚ್ಚಿ, ಕರ್ತನ ದಿನದಲ್ಲಿ ಸಂಭವಿಸಲಿರುವ ಘಟನೆಗಳ ಒಂದು ಸಂಘಟಿತ ದರ್ಶನವನ್ನು ಕುರಿಮರಿಯು ಪ್ರಗತಿಪರವಾಗಿ ಪ್ರಕಟಿಸುತ್ತದೆ. ಅಪಾಕಲಿಪ್ಸ್‌ನ ನಾಲ್ಕು ಸವಾರರು ಸವಾರಿಯನ್ನು ಮಾಡಲು ಹೊರಡುತ್ತಾರೆ, ದೇವರ ಹುತಾತ್ಮರಾದ ಸೇವಕರು ಬಿಳೀ ನಿಲುವಂಗಿಗಳನ್ನು ಪಡೆಯುತ್ತಾರೆ, ಮತ್ತು ಕೋಪದ ಮಹಾ ದಿನವು ವರ್ಣಿಸಲ್ಪಡುತ್ತದೆ.

4 ನೆಯ ದರ್ಶನ (7:1-17): ಆತ್ಮಿಕ ಇಸ್ರಾಯೇಲಿನ 1,44,000 ಮಂದಿ ಮುದ್ರೆ ಹೊಂದುವ ತನಕ ನಾಶನದ ಗಾಳಿಗಳನ್ನು ದೇವದೂತರು ತಡೆಹಿಡಿಯುತ್ತಾರೆ. ಎಲ್ಲಾ ಜನಾಂಗಗಳಿಂದ ಒಂದು ಮಹಾ ಸಮೂಹವು ದೇವರನ್ನು ಮತ್ತು ಕ್ರಿಸ್ತನನ್ನು ರಕ್ಷಣೆಗಾಗಿ ಸ್ತುತಿಸುತ್ತದೆ ಮತ್ತು ಮಹಾ ಸಂಕಟದಿಂದ ಪಾರಾಗುವಿಕೆಗಾಗಿ ಒಟ್ಟುಗೂಡಿಸಲ್ಪಡುತ್ತದೆ.

5 ನೆಯ ದರ್ಶನ (8:1—9:21): ಏಳನೆಯ ಮುದ್ರೆಯು ಬಿಚ್ಚಲ್ಪಟ್ಟಾಗ, ಏಳು ತುತೂರಿಗಳು ಧ್ವನಿಸುತ್ತವೆ, ಇದರಲ್ಲಿ ಮೊದಲನೆಯ ಆರು, ಐದನೆಯ ದರ್ಶನದಲ್ಲಿ ಒಳಗೂಡಿವೆ. ಈ ಆರು ತುತೂರಿ ಧ್ವನಿಗಳು ಮಾನವ ಕುಲದ ಮೇಲೆ ಯೆಹೋವನ ನ್ಯಾಯತೀರ್ಪನ್ನು ವ್ಯಕ್ತಪಡಿಸುತ್ತವೆ. ಐದನೆಯ ಮತ್ತು ಆರನೆಯ ತುತೂರಿಗಳು ಮೊದಲನೆಯ ಮತ್ತು ಎರಡನೆಯ ವಿಪತ್ತುಗಳನ್ನು ಕೂಡ ಪ್ರಸ್ತಾಪಿಸುತ್ತವೆ.

6 ನೆಯ ದರ್ಶನ (10:1—11:19): ಬಲಿಷ್ಠ ದೇವದೂತನೊಬ್ಬನು ಯೋಹಾನನಿಗೆ ಒಂದು ಚಿಕ್ಕ ಸುರುಳಿಯನ್ನು ಕೊಡುತ್ತಾನೆ, ದೇವಾಲಯವು ಅಳೆಯಲ್ಪಡುತ್ತದೆ, ಮತ್ತು ನಾವು ಇಬ್ಬರು ಸಾಕ್ಷಿಗಳ ಅನುಭವವನ್ನು ಕಲಿಯುತ್ತೇವೆ. ಇದು ಏಳನೆಯ ತುತೂರಿಯ ಊದುವಿಕೆಯೊಂದಿಗೆ ಪರಮಾವಧಿಗೇರುತ್ತದೆ, ಅದು ದೇವರ ಶತ್ರುಗಳಿಗೆ ಮೂರನೆಯ ವಿಪತ್ತನ್ನು ಘೋಷಿಸುತ್ತದೆ—ಬರಲಿರುವ ಯೆಹೋವನ ಮತ್ತು ಅವನ ಕ್ರಿಸ್ತನ ರಾಜ್ಯ.

7 ನೆಯ ದರ್ಶನ (12:1-17): ಇದು ರಾಜ್ಯದ ಜನನವನ್ನು ವರ್ಣಿಸುತ್ತದೆ, ಇದರ ಫಲವಾಗಿ ಮೀಕಾಯೇಲನಿಂದ ಭೂಮಿಗೆ ಘಟಸರ್ಪನಾದ ಸೈತಾನನ ದೊಬ್ಬುವಿಕೆಯಾಗುತ್ತದೆ.

8 ನೆಯ ದರ್ಶನ (13:1-18): ಬಲಾಢ್ಯವಾದ ವನ್ಯ ಮೃಗವು ಸಮುದ್ರದಿಂದ ಹೊರಬರುತ್ತದೆ, ಮತ್ತು ಕುರಿಮರಿಯಂತಹ ಎರಡು ಕೊಂಬಿನ ಮೃಗವು ಅದನ್ನು ಆರಾಧಿಸುವಂತೆ ಮಾನವ ಕುಲವನ್ನು ಒತ್ತಾಯಿಸುತ್ತದೆ.

9 ನೆಯ ದರ್ಶನ (14:1-20): ಚೀಯೋನ್‌ ಪರ್ವತದ ಮೇಲೆ 1,44,000 ಮಂದಿಯ ಒಂದು ಉಜ್ವಲ ಮುನ್ನೋಟ. ಭೂಮಿಯ ಮೇಲೆ ದೇವದೂತರ ಸಂದೇಶಗಳು ಕೇಳಲ್ಪಡುತ್ತವೆ, ಭೂಮಿಯ ದ್ರಾಕ್ಷೇಬಳ್ಳಿಯ ಹಣ್ಣುಗಳು ಕೊಯ್ಯಲ್ಪಡುತ್ತವೆ, ಮತ್ತು ದೇವರ ರೌದ್ರದ ತೊಟ್ಟಿಯು ತುಳಿಯಲ್ಪಡುತ್ತದೆ.

10 ನೆಯ ದರ್ಶನ (15:1—16:21): ಸ್ವರ್ಗೀಯ ಆಸ್ಥಾನದ ಇನ್ನೊಂದು ವೀಕ್ಷಣ, ಇದನ್ನು ಹಿಂಬಾಲಿಸಿ, ಭೂಮಿಯ ಮೇಲೆ ಏಳು ಪಾತ್ರೆಗಳಿಂದ ಯೆಹೋವನ ರೌದ್ರದ ಹೊಯ್ಯುವಿಕೆ. ಈ ವಿಭಾಗವು ಕೂಡ, ಸೈತಾನನ ವ್ಯವಸ್ಥೆಯ ಅಂತ್ಯದ ಒಂದು ಪ್ರವಾದನಾ ವಿವರಣೆಯೊಂದಿಗೆ ಕೊನೆಗೊಳ್ಳುತ್ತದೆ.

11 ನೆಯ ದರ್ಶನ (17:1-18): ಮಹಾ ಜಾರಸ್ತ್ರೀ, ಮಹಾ ಬಾಬೆಲ್‌, ರಕ್ತವರ್ಣದ ಮೃಗದ ಮೇಲೆ ಸವಾರಿಮಾಡುತ್ತಾಳೆ. ಆ ಮೃಗವು ಕೊಂಚ ಸಮಯ ಅಧೋಲೋಕಕ್ಕೆ ಹೋಗುತ್ತದೆ, ಆದರೆ ಪುನಃ ಹಿಂದಕ್ಕೆ ಬರುತ್ತದೆ ಮತ್ತು ಅವಳನ್ನು ಧ್ವಂಸಗೊಳಿಸುತ್ತದೆ.

12 ನೆಯ ದರ್ಶನ (18:1—19:10): ಮಹಾ ಬಾಬೆಲಿನ ಪತನ ಮತ್ತು ಕೊನೆಯ ನಾಶನವು ಘೋಷಿಸಲ್ಪಡುತ್ತದೆ. ಅವಳ ಹತಿಸುವಿಕೆಯ ನಂತರ, ಕೆಲವರು ಗೋಳಾಡುತ್ತಾರೆ, ಇತರರು ಯೆಹೋವನನ್ನು ಸ್ತುತಿಸುತ್ತಾರೆ; ಕುರಿಮರಿಯ ವಿವಾಹವು ಪ್ರಕಟಿಸಲ್ಪಡುತ್ತದೆ.

13 ನೆಯ ದರ್ಶನ (19:11-21): ಸೈತಾನನ ವ್ಯವಸ್ಥೆಯ, ಅದರ ಸೇನೆಗಳ, ಮತ್ತು ಅದರ ಬೆಂಬಲಿಗರ ವಿರುದ್ಧ ದೇವರ ರೌದ್ರಭರಿತ ನ್ಯಾಯತೀರ್ಪನ್ನು ಜಾರಿಗೊಳಿಸಲು ಯೇಸುವು ಪರಲೋಕದ ಸೈನ್ಯಗಳನ್ನು ಮುನ್ನಡಿಸುತ್ತಾನೆ; ಹೊಲಸು ತಿನ್ನುವ ಹಕ್ಕಿಗಳು ಅವರ ಹೆಣಗಳನ್ನು ಭುಜಿಸುತ್ತವೆ.

14 ನೆಯ ದರ್ಶನ (20:1-10): ಪಿಶಾಚನಾದ ಸೈತಾನನನ್ನು ಅಧೋಲೋಕದಲ್ಲಿ ಹಾಕುವುದು, ಕ್ರಿಸ್ತನ ಮತ್ತು ಅವನ ಸಹ ರಾಜರುಗಳ ಒಂದು ಸಾವಿರ ವರ್ಷಗಳ ಆಳಿಕ್ವೆ, ಮಾನವ ಕುಲದ ಕೊನೆಯ ಪರೀಕ್ಷೆ, ಮತ್ತು ಸೈತಾನನ ಮತ್ತು ಅವನ ದೆವ್ವಗಳ ನಾಶನ.

15 ನೆಯ ದರ್ಶನ (20:11—21:8): ಸಾಮಾನ್ಯ ಪುನರುತ್ಥಾನ ಮತ್ತು ಮಹಾ ನ್ಯಾಯ ತೀರ್ಪಿನ ದಿನ; ನೀತಿಯ ಮಾನವ ಕುಲಕ್ಕೆ ಶಾಶ್ವತ ಆಶೀರ್ವಾದಗಳೊಂದಿಗೆ ಒಂದು ನೂತನ ಆಕಾಶ ಮತ್ತು ನೂತನ ಭೂಮಂಡಲ ಗೋಚರಿಸುತ್ತದೆ.

16 ನೆಯ ದರ್ಶನ (21:9—22:5): ಕುರಿಮರಿಯ ಹೆಂಡತಿಯಾಗಿರುವ ನೂತನ ಯೆರೂಸಲೇಮಿನ ಪ್ರಭಾವಭರಿತ ದರ್ಶನದೊಂದಿಗೆ ಪ್ರಕಟನೆಯು ಪರಮಾವಧಿಗೆ ಮುಟ್ಟುತ್ತದೆ. ಆ ಪಟ್ಟಣದಿಂದ ಮಾನವ ಕುಲಕ್ಕೆ ವಾಸಿಮಾಡುವ ಮತ್ತು ಜೀವದ ದೇವರ ಒದಗಿಸುವಿಕೆಗಳು ಹರಿಯುತ್ತವೆ.

ಪ್ರಕಟನೆಯು ಯೆಹೋವನಿಂದ, ಯೇಸುವಿನಿಂದ, ದೇವದೂತನಿಂದ, ಮತ್ತು ಸ್ವತಃ ಯೋಹಾನನಿಂದ ಶುಭಕಾಂಕ್ಷೆಯ ಉತ್ಸಾಹದ ಮತ್ತು ಬುದ್ಧಿವಾದದ ಮಾತುಗಳೊಂದಿಗೆ ಸಮಾಪ್ತಿಗೊಳ್ಳುತ್ತದೆ. ಪ್ರತಿಯೊಬ್ಬನಿಗೆ ಆಮಂತ್ರಣವು ಇದಾಗಿದೆ: “ಬಾ!”—ಪ್ರಕಟನೆ 22:6-21.