ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಹೆಸರು ಜೀವದ ಪುಸ್ತಕದಲ್ಲಿ ಇದೆಯೋ?

ನಿಮ್ಮ ಹೆಸರು ಜೀವದ ಪುಸ್ತಕದಲ್ಲಿ ಇದೆಯೋ?

ಅಧ್ಯಾಯ 11

ನಿಮ್ಮ ಹೆಸರು ಜೀವದ ಪುಸ್ತಕದಲ್ಲಿ ಇದೆಯೋ?

ಸಾರ್ದಿಸ್‌

1. ಸಾರ್ದಿಸಿನಲ್ಲಿರುವ ಸಭೆಯ ಆತ್ಮಿಕ ಸ್ಥಿತಿಯು ಏನಾಗಿದೆ, ಮತ್ತು ಯೇಸುವು ತನ್ನ ಸಂದೇಶವನ್ನು ಹೇಗೆ ಆರಂಭಿಸುತ್ತಾನೆ?

ಆಧುನಿಕ ಆಕಿಸಾರದಿಂದ (ಥುವತೈರ) ಸುಮಾರು 30 ಮೈಲು ದಕ್ಷಿಣಕ್ಕೆ ಮಹಿಮಾಭರಿತ ಯೇಸುವಿನಿಂದ ಸಂದೇಶವೊಂದನ್ನು ಪಡೆಯುವ ಮುಂದಿನ ಸಭೆಯ ನಿವೇಶನವು ಇದೆ: ಸಾರ್ದಿಸ್‌. ನಮ್ಮ ಸಾಮಾನ್ಯ ಶಕದ ಆರನೆಯ ಶತಮಾನದ ಮೊದಲು ಈ ನಗರವು ಲಿಡಿಯ ಎಂಬ ಪ್ರಾಚೀನ ರಾಜ್ಯದ ಪ್ರತಿಷ್ಠೆಯ ರಾಜಧಾನಿಯಾಗಿತ್ತು ಮತ್ತು ಅಪರಿಮಿತ ಐಶ್ವರ್ಯವಂತ ಅರಸ ಕ್ರೀಸಸನ ಪೀಠವಾಗಿತ್ತು. ಯೋಹಾನನ ದಿನಗಳೊಳಗೆ, ಅದು ಕಷ್ಟದ ಸಮಯಗಳಿಗೆ ತುತ್ತಾಗಿತ್ತು, ಮತ್ತು ಕ್ರೀಸಸನ ಕೆಳಗಿದ್ದ ಅದರ ಗತಕಾಲದ ವೈಭವವು ಕೇವಲ ಇತಿಹಾಸವಾಯಿತು. ತದ್ರೀತಿಯಲ್ಲಿ, ಅಲ್ಲಿದ್ದ ಕ್ರೈಸ್ತ ಸಭೆಯು ಆತ್ಮಿಕವಾಗಿ ಶಕ್ತಿಹೀನವಾಗಿತ್ತು. ಮೊತ್ತಮೊದಲ ಬಾರಿಗೆ, ಯೇಸುವು ತನ್ನ ಸಂದೇಶವನ್ನು ಶ್ಲಾಘನೆಯ ಮಾತಿನೊಂದಿಗೆ ಆರಂಭಿಸುವುದಿಲ್ಲ. ಅದಕ್ಕೆ ಬದಲಾಗಿ, ಅವನನ್ನುವುದು: “ಮತ್ತು ಸಾರ್ದಿಸಿನ ಸಭೆಯ ದೂತನಿಗೆ ಬರೆ: ದೇವರ ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳು ಉಳ್ಳಾತನು ಈ ವಿಷಯಗಳನ್ನು ಹೇಳುತ್ತಾನೆ, ‘ನಿನ್ನ ಕೃತ್ಯಗಳನ್ನು ನಾನು ಬಲ್ಲೆನು, ಜೀವಂತನಾಗಿದ್ದೀ ಎಂದು ಹೆಸರು ನಿನಗೆ ಇದೆ, ಆದರೆ ನೀನು ಸತ್ತವನಾಗಿದ್ದೀ.’”—ಪ್ರಕಟನೆ 3:1, NW.

2. (ಎ) ಯೇಸುವಿಗೆ “ಏಳು ಆತ್ಮಗಳು” ಇರುವುದು ಸಾರ್ದಿಸಿನಲ್ಲಿರುವ ಕ್ರೈಸ್ತರಿಗೆ ಯಾವ ಸೂಚಿತಾರ್ಥದಲ್ಲಿತ್ತು? (ಬಿ) ಸಾರ್ದಿಸ್‌ ಸಭೆಗೆ ಯಾವ ಖ್ಯಾತಿ ಇತ್ತು, ಆದರೆ ವಾಸ್ತವಾಂಶಗಳೇನಾಗಿದ್ದವು?

2 ಯೇಸುವು ತನ್ನನ್ನು “ಏಳು ಆತ್ಮಗಳು ಉಳ್ಳಾತನು” ಎಂದು ಯಾಕೆ ಗುರುತಿಸಿಕೊಳ್ಳುತ್ತಾನೆ? ಯಾಕಂದರೆ ಈ ಆತ್ಮಗಳು ಪೂರ್ಣತೆಯೊಂದಿಗೆ ಹರಿಯುವ ಯೆಹೋವನ ಆತ್ಮವನ್ನು ಪ್ರತಿನಿಧಿಸುತ್ತವೆ. ಅನಂತರ, ಯೋಹಾನನು ಅವುಗಳನ್ನು “ಏಳು ಕಣ್ಣುಗಳು” ಎಂದು ಕೂಡ ವರ್ಣಿಸುತ್ತಾನೆ, ದೇವರ ಪವಿತ್ರಾತ್ಮವು ಯೇಸುವಿಗೆ ಕೊಡುವ ಭೇದಿಸುವ ದೃಷ್ಟಿಯನ್ನು ಇದು ಸೂಚಿಸುತ್ತದೆ. (ಪ್ರಕಟನೆ 5:6) ಈ ರೀತಿಯಲ್ಲಿ, ಅವನು ಅಸ್ತಿತ್ವದಲ್ಲಿರುವ ಯಾವುದೇ ಸನ್ನಿವೇಶವನ್ನು ಹೊರಗೆಡಹಲು ಮತ್ತು ನಿರ್ವಹಿಸಲು ಶಕ್ತನಾಗಿರುತ್ತಾನೆ. (ಮತ್ತಾಯ 10:26; 1 ಕೊರಿಂಥ 4:5) ಸಾರ್ದಿಸಿನಲ್ಲಿರುವ ಸಭೆಯು ಜೀವಂತವಾಗಿದೆ, ಸಕ್ರಿಯವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆದರೆ ಅದು ಆತ್ಮಿಕವಾಗಿ ಸತ್ತಿರುವುದನ್ನು ಯೇಸುವು ಕಾಣಶಕ್ತನಾಗುತ್ತಾನೆ. ಕ್ರೈಸ್ತರಾಗುವ ಮುಂಚೆ, ಅವರ ಸ್ಥಿತಿಯು ಹೇಗಿತ್ತೋ, ತದ್ರೀತಿಯ ಜಡತೆಯ ಭಾವಕ್ಕೆ ಅದರ ಹೆಚ್ಚಿನ ಸದಸ್ಯರು ಹಿಂದೆರಳಿದ್ದರೆಂದು ಸಾಬೀತಾಗುತ್ತದೆ.—ಹೋಲಿಸಿರಿ ಎಫೆಸ 2:1-3; ಇಬ್ರಿಯ 5:11-14.

3. (ಎ) “ಸಾರ್ದಿಸಿನ ಸಭೆಯ ದೂತನು” ಯೇಸುವಿಗೆ “ಏಳು ನಕ್ಷತ್ರಗಳು” ಇರುವುದರ ಕಡೆಗೆ ವಿಶೇಷ ಗಮನವನ್ನು ಯಾಕೆ ಕೊಡತಕ್ಕದ್ದು? (ಬಿ) ಸಾರ್ದಿಸಿನಲ್ಲಿರುವ ಸಭೆಗೆ ಯೇಸುವು ಯಾವ ಬಲವಾದ ಬುದ್ಧಿವಾದವನ್ನು ಕೊಟ್ಟನು?

3 ಯೇಸುವು “ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ” ಇದನ್ನೂ ನೆನಪಿಸುತ್ತಾನೆ, ಏನಂದರೆ ಅವನು “ಏಳು ನಕ್ಷತ್ರಗಳು” ಉಳ್ಳಾತನು ಆಗಿದ್ದಾನೆ. ಅವನು ತನ್ನ ಬಲಗೈಯಲ್ಲಿ ಸಭೆಯ ಹಿರಿಯರುಗಳನ್ನು ಎತ್ತಿ ಹಿಡಿದಿರುತ್ತಾನೆ, ಹೀಗೆ ಅವರ ಕುರಿಪಾಲನಾ ಕೆಲಸದಲ್ಲಿ ಅವರನ್ನು ಮಾರ್ಗದರ್ಶಿಸಲು ಅವನಿಗೆ ಅಧಿಕಾರವಿರುವುದು. ಅವರು ತಮ್ಮ ಹೃದಯಗಳನ್ನು ‘ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಳ್ಳುವುದರ’ ಮೇಲೆ ಇಡತಕ್ಕದ್ದು. (ಜ್ಞಾನೋಕ್ತಿ 27:23) ಆದಕಾರಣ, ಯೇಸುವಿನ ಮುಂದಿನ ಮಾತುಗಳನ್ನು ಅವರು ಜಾಗ್ರತೆಯಿಂದ ಕೇಳುವುದು ಉತ್ತಮ: “ಎಚ್ಚರವಾಗು, ಮತ್ತು ಸಾಯಲು ಸಿದ್ಧವಾಗಿದ್ದ ಉಳಿದಿರುವ ಸಂಗತಿಗಳನ್ನು ಬಲಪಡಿಸು, ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ಸಂಪೂರ್ಣವಾಗಿ ಮಾಡಲ್ಪಟ್ಟದ್ದನ್ನು ನಾನು ನೋಡಿಲ್ಲ. ಆದಕಾರಣ, ನೀನು ಹೇಗೆ ಪಡೆದಿದ್ದಿಯೋ ಮತ್ತು ಹೇಗೆ ನೀನು ಕೇಳಿದಿಯೋ ಎಂಬುದರ ವಿಷಯದಲ್ಲಿ ಲಕ್ಷ್ಯವಿಡುತ್ತಾ ಮುಂದುವರಿ, ಮತ್ತು ಅನುಸರಿಸುತ್ತಾ ಹೋಗು, ಮತ್ತು ಪಶ್ಚಾತ್ತಾಪ ಪಡು. ನಿಶ್ಚಯವಾಗಿಯೂ ನೀನು ಎಚ್ಚರಗೊಳ್ಳದ್ದಿದರೆ ನಾನು ಒಬ್ಬ ಕಳ್ಳನೋಪಾದಿ ಬರುವೆನು, ಮತ್ತು ನಾನು ನಿನ್ನ ಮೇಲೆ ಯಾವ ತಾಸಿನಲ್ಲಿ ಬರುವೆನೆಂದು ನಿನಗೆ ತಿಳಿಯುವದೇ ಇಲ್ಲ.”—ಪ್ರಕಟನೆ 3:2, 3, NW.

4. ಪೇತ್ರನ ಮಾತುಗಳು ಸಾರ್ದಿಸಿನಲ್ಲಿರುವ ಸಭೆಗೆ “ಉಳಿದಿರುವ ವಿಷಯಗಳನ್ನು ದೃಢಪಡಿಸಲು” ಹೇಗೆ ಸಹಾಯ ನೀಡಬಲ್ಲವು?

4 ಸಾರ್ದಿಸಿನಲ್ಲಿರುವ ಹಿರಿಯರು, ಸತ್ಯವನ್ನು ಕಲಿತಾಗ ಅವರಿಗೆ ಮೊದಲು ಇದ್ದ ಸಂತೋಷವನ್ನು ಮತ್ತು ಆಗ ಲಭಿಸಿದ ಆಶೀರ್ವಾದಗಳನ್ನು ನೆನಪಿಸಿಕೊಳ್ಳುವ ಅಗತ್ಯವಿತ್ತು. ಆದರೆ ಅವರ ಆತ್ಮಿಕ ಚಟುವಟಿಕೆಯ ಸಂಬಂಧದಲ್ಲಿ ಈಗ ಅವರು ಸತ್ತವರಾಗಿದ್ದಾರೆ. ನಂಬಿಕೆಯ ಕೆಲಸಗಳ ಕೊರತೆಯ ಕಾರಣ, ಅವರ ಸಭಾ ದೀಪವು ಮಿನುಗುತ್ತಾ ಇದೆ. ವರ್ಷಗಳಿಗೆ ಮೊದಲು ಅಪೊಸ್ತಲ ಪೇತ್ರನು ಕ್ರೈಸ್ತರು ಅಂಗೀಕರಿಸಿದ್ದ ಮತ್ತು “ಪರಲೋಕದಿಂದ ಪವಿತ್ರಾತ್ಮದೊಂದಿಗೆ ಕಳುಹಿಸಲ್ಪಟ್ಟು”—ಯೋಹಾನನ ದರ್ಶನದಲ್ಲಿ ಏಳು ಆತ್ಮಗಳಿಂದ ಅದು ಪ್ರತಿನಿಧಿಸಲ್ಪಟ್ಟಿದೆ—ಸಾರಲಾಗಿದ್ದ ಮಹಿಮಾಭರಿತ ಸುವಾರ್ತೆಗಾಗಿ ಗಣ್ಯತೆಯನ್ನು ಹೆಚ್ಚಿಸಲು ಏಷಿಯದ ಸಭೆಗಳಿಗೆ (ಪ್ರಾಯಶಃ ಸಾರ್ದಿಸನ್ನೂ ಸೇರಿಸಿ) ಬರೆದನು. ಏಷಿಯದಲ್ಲಿರುವ ಕ್ರೈಸ್ತರಿಗೆ, ಅವರು ‘ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಅವರನ್ನು ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಮೀಸಲಾದ ಜನವೂ, ದೇವರ ಸ್ವಕೀಯ ಪ್ರಜೆಯೂ’ ಆಗಿದ್ದಾರೆ ಎಂದು ಪೇತ್ರನು ಜ್ಞಾಪಿಸುತ್ತಾನೆ. (1 ಪೇತ್ರ 1:12, 25; 2:9) ಅಂತಹ ಆತ್ಮಿಕ ಸತ್ಯತೆಗಳ ಮೇಲೆ ಧ್ಯಾನಿಸುವುದರ ಮೂಲಕ ಸಾರ್ದಿಸಿನಲ್ಲಿರುವ ಸಭೆಗೆ ಪಶ್ಚಾತ್ತಾಪ ಪಡಲು ಮತ್ತು “ಉಳಿದಿರುವ ಸಂಗತಿಗಳನ್ನು ಬಲ” ಪಡಿಸಲು ಸಹಾಯವಾಗುತ್ತದೆ.—2 ಪೇತ್ರ 3:9 ಹೋಲಿಸಿರಿ.

5. (ಎ) ಸಾರ್ದಿಸಿನಲ್ಲಿರುವ ಕ್ರೈಸ್ತರ ಗಣ್ಯತೆಗೆ ಏನು ಸಂಭವಿಸಿತು? (ಬಿ) ಯೇಸುವಿನ ಬುದ್ಧಿವಾದಕ್ಕೆ ಸಾರ್ದಿಸಿನ ಕ್ರೈಸ್ತರು ಪ್ರತಿವರ್ತನೆ ತೋರಿಸದಿರುವಲ್ಲಿ ಏನು ಸಂಭವಿಸಲಿರುವುದು?

5 ಪ್ರಸ್ತುತದಲ್ಲಿ, ಸತ್ಯದ ಕಡೆಗಿನ ಅವರ ಗಣ್ಯತೆ ಮತ್ತು ಪ್ರೀತಿಯು ಅಧಿಕಾಂಶ ಆರಿಹೋಗಿರುವಂತಹ ಒಂದು ಬೆಂಕಿಗೆ ಸಮಾನವಾಗಿದೆ. ಕೇವಲ ಕೆಲವೇ ಸಣ್ಣ ಕೆಂಡಗಳು ಪ್ರಕಾಶ ಕೊಡುತ್ತವೆ. ಆ ಕಿಡಿಗೆ ಗಾಳಿಹಾಕಿ, ಬೆಂಕಿಯುರಿಯುವಂತೆ, ಅವರ ನಿರ್ಲಕ್ಷ್ಯವು ಅವರನ್ನು ಯಾವ ಪಾಪಗಳಿಗೆ ನಡಿಸಿತೋ ಅವುಗಳಿಗೆ ಪಶ್ಚಾತ್ತಾಪ ಪಡುವಂತೆ ಮತ್ತು ಪುನಃ ಒಮ್ಮೆ ಆತ್ಮಿಕವಾಗಿ ಜೀವಂತವಾಗಿರುವ ಒಂದು ಸಭೆಯಾಗುವಂತೆ ಯೇಸುವು ಪ್ರೋತ್ಸಾಹಿಸುತ್ತಾನೆ. (2 ತಿಮೊಥೆಯ 1:6, 7 ಹೋಲಿಸಿರಿ.) ಇಲ್ಲದ್ದಿದರೆ ಯೇಸು ಅನಿರೀಕ್ಷಿತವಾಗಿ—“ಒಬ್ಬ ಕಳ್ಳನೋಪಾದಿ”—ನ್ಯಾಯದಂಡನೆಯನ್ನು ವಿಧಿಸಲು ಬರುವಾಗ, ಸಾರ್ದಿಸಿನಲ್ಲಿರುವ ಸಭೆಯು ಅಸಜ್ಜಿತವಾಗಿರುವುದು.—ಮತ್ತಾಯ 24:43, 44.

“ಒಬ್ಬ ಕಳ್ಳನೋಪಾದಿ” ಬರುವುದು

6. ಯೇಸುವು 1918 ರಲ್ಲಿ “ಒಬ್ಬ ಕಳ್ಳನೋಪಾದಿ” ಬಂದದ್ದು ಹೇಗೆ, ಮತ್ತು ತನ್ನ ಹಿಂಬಾಲಕರೆಂದು ಹೇಳಿಕೊಳ್ಳುವವರ ನಡುವೆ ಅವನು ಯಾವ ಸನ್ನಿವೇಶವನ್ನು ಕಂಡನು?

6 “ಒಬ್ಬ ಕಳ್ಳನೋಪಾದಿ” ಯೇಸುವು ಬರುವ ಅವನ ಎಚ್ಚರಿಕೆಯು ಅಧುನಿಕ ದಿನಗಳ ತನಕ ಬಂದು ತಲಪುತ್ತದೆ. ಅದಕ್ಕೆ ಕರ್ತನ ದಿನದೊಳಗೆ ಪಾರಾಗಿ ಉಳಿದವರಿಗೆ ಒಂದು ವಿಶೇಷ ಅನ್ವಯವಿತ್ತು. 1914ರ ನಂತರ ಬೇಗನೆ, ಮಲಾಕಿಯನ ಪ್ರವಾದನೆಯ ಒಂದು ನೆರವೇರಿಕೆಯು ಇತ್ತು: “‘ನೀವು ಹಂಬಲಿಸುವ ನಿಜ ಕರ್ತನು ಮತ್ತು ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಫಕ್ಕನೆ ತನ್ನ ಆಲಯಕ್ಕೆ ಬರುವನು, ಇಗೋ! ಅವನು ಖಂಡಿತವಾಗಿಯೂ ಬರುತ್ತಾನೆ,’ ಸೇನೆಗಳ ಯೆಹೋವನು ಹೇಳಿರುತ್ತಾನೆ.” (ಮಲಾಕಿಯ 3:1; ಪ್ರಕಟನೆ 1:10, NW) “ಒಡಂಬಡಿಕೆಯ ದೂತ” ನೋಪಾದಿ ತನ್ನ ಹಿಂಬಾಲಕರೆಂದು ಹೇಳಿಕೊಳ್ಳುವವರನ್ನು ಪರೀಕ್ಷಿಸಲು ಮತ್ತು ನ್ಯಾಯತೀರ್ಪು ವಿಧಿಸಲು ಯೇಸುವು ಬಂದನು. (1 ಪೇತ್ರ 4:17) ಆ ಸಮಯದಲ್ಲಿ, 1918 ರಲ್ಲಿ, ಕ್ರೈಸ್ತಪ್ರಪಂಚವು ಮೊದಲನೆಯ ಲೋಕಯುದ್ಧದಲ್ಲಿ ರಕ್ತಪಾತ ಮಾಡುವುದರಲ್ಲಿ ತೊಡಗಿತ್ತು ಮತ್ತು ಆತ್ಮಿಕವಾಗಿ ಹೇಳುವುದಾದರೆ, ಸಂಪೂರ್ಣವಾಗಿ ಸತ್ತಿತ್ತು. ಯುದ್ಧದ ಮೊದಲು ಬಹಳ ಹುರುಪಿನಿಂದ ಸಾರಿದಂತಹ ನಿಜ ಕ್ರೈಸ್ತರು ಕೂಡ, ಆತ್ಮಿಕ ತೂಕಡಿಸುವಿಕೆಯ ಒಂದು ಸಮಯದೊಳಗೆ ಬಂದರು. ಅವರ ಪ್ರಮುಖ ಹಿರಿಯರುಗಳಲ್ಲಿ ಕೆಲವರನ್ನು ಸೆರೆಮನೆಗೆ ದೊಬ್ಬಲಾಯಿತು, ಮತ್ತು ಸಾರುವ ಕಾರ್ಯವು ಹೆಚ್ಚು ಕಡಿಮೆ ನಿಲ್ಲಿಸಲ್ಪಟ್ಟಿತು. ಈ ಕ್ರೈಸ್ತರನ್ನು ಮುಂದಿನ ವರ್ಷ, ಯೆಹೋವನ ಆತ್ಮವು ಎಚ್ಚರಗೊಳಿಸಿದಾಗ, ಅವರಲ್ಲಿ ಎಲ್ಲರೂ ಸಿದ್ಧರಾಗಿರಲಿಲ್ಲ. ಯೇಸುವಿನ ಸಾಮ್ಯದ ಬುದ್ಧಿಯಿಲ್ಲದ ಕನ್ಯೆಯರಂತೆ, ಕೆಲವರು ಯೆಹೋವನನ್ನು ಸೇವಿಸುವ ಸುಯೋಗಕ್ಕೆ ಆತ್ಮಿಕವಾಗಿ ಸನ್ನದ್ಧರಾಗಿರಲಿಲ್ಲ. ಆದರೂ ಸಂತಸಕರವಾಗಿ, ಬುದ್ಧಿವಂತ ಕನ್ಯೆಯರೋಪಾದಿ, “ಆದಕಾರಣ, ಆ ದಿನವಾದರೂ, ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿಟ್ಟುಕೊಳ್ಳಿರಿ” ಎಂಬ ಯೇಸುವಿನ ಎಚ್ಚರಿಕೆಯನ್ನು ಆಲಿಸಿದ ಅನೇಕರು ಅಲ್ಲಿದ್ದರು. —ಮತ್ತಾಯ 25:1-13, NW.

7. ಕ್ರೈಸ್ತರು ಇಂದು ಯಾಕೆ ಎಚ್ಚರವಾಗಿರುವ ಅಗತ್ಯವಿದೆ?

7 ಕರ್ತನ ದಿನದ ಆರಂಭದಲ್ಲಿ ಕ್ರೈಸ್ತನೊಬ್ಬನು ಎಚ್ಚರದಿಂದಿರುವ ಆವಶ್ಯಕತೆಯು ಕೊನೆಗೊಳ್ಳಲಿಲ್ಲ. “ಇವೆಲ್ಲಾ ವಿಷಯಗಳು ಅಂತ್ಯಗೊಳ್ಳಲಿರುವುದರ ಸೂಚನೆ”ಯ ಕುರಿತಾಗಿರುವ ತನ್ನ ಮಹಾ ಪ್ರವಾದನೆಯಲ್ಲಿ, ಯೇಸುವು ಒಂದು ಬಲವಾದ ಎಚ್ಚರಿಕೆಯನ್ನು ಕೊಟ್ಟನು: “ಆ ದಿನದ ಯಾ ತಾಸಿನ ಕುರಿತಾಗಿ ಯಾರಿಗೂ ತಿಳಿಯದು. . . . ನೋಡುತ್ತಾ ಇರ್ರಿ, ಎಚ್ಚರವಾಗಿರ್ರಿ, ಯಾಕಂದರೆ ಆ ನೇಮಿತ ಸಮಯವು ಯಾವಾಗ ಎಂದು ನಿಮಗೆ ಗೊತ್ತಿಲ್ಲ. ಆದರೆ ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಕಾಯುತ್ತಾ ಇರ್ರಿ.” (ಮಾರ್ಕ 13:4, 32, 33, 37, NW) ಹೌದು, ಈ ತಾಸಿನ ತನಕವೂ, ನಮ್ಮಲ್ಲಿ ಪ್ರತಿಯೊಬ್ಬನು, ಅಭಿಷಿಕ್ತನಾಗಿರಲಿ ಯಾ ಮಹಾ ಸಮೂಹದವನಾಗಿರಲಿ, ಎಚ್ಚರವಾಗಿರುವುದು ಮತ್ತು ಆತ್ಮಿಕ ನಿದ್ರೆಗೆ ತೇಲಿಹೋಗದಂತೆ ಹೋರಾಡುವುದು ಅಗತ್ಯ. ಯೆಹೋವನ ದಿನವು “ರಾತ್ರಿಯ ಕಳ್ಳನೋಪಾದಿ” ಬರುವಾಗ ಅನುಗ್ರಹಪಾತ್ರದ ನ್ಯಾಯತೀರ್ಪೊಂದನ್ನು ಪಡೆಯಲಾಗುವಂತೆ ನಾವು ಪೂರ್ಣವಾಗಿ ಎಚ್ಚರವಿರುವವರಾಗಿ ಕಂಡುಬರುವಂತಾಗಲಿ.—1 ಥೆಸಲೊನೀಕ 5:2, 3; ಲೂಕ 21:34-36; ಪ್ರಕಟನೆ 7:9.

8. ಆತ್ಮಿಕವಾಗಿ ಜೀವಂತವಾಗಿಟ್ಟುಕೊಳ್ಳಲು ಯೋಹಾನ ವರ್ಗದವರು ದೇವ ಜನರನ್ನು ಹೇಗೆ ಉತ್ತೇಜಿಸಿರುತ್ತಾರೆ?

8 ಆತ್ಮಿಕವಾಗಿ ಜೀವಂತವಾಗಿಟ್ಟುಕೊಳ್ಳಲು, ದೇವರ ಜನರನ್ನು ಉತ್ತೇಜಿಸುವ ಅಗತ್ಯತೆಯ ಕುರಿತಾಗಿ ಯೋಹಾನ ವರ್ಗದವರು ಇಂದು ಸ್ವತಃ ಎಚ್ಚರವುಳ್ಳವರಾಗಿದ್ದಾರೆ. ಇದಕ್ಕಾಗಿ, ಪ್ರತಿ ವರ್ಷ ಲೋಕವ್ಯಾಪಕವಾಗಿ ಹಲವಾರು ಬಾರಿ ವಿಶೇಷ ಕೂಟಗಳನ್ನು ಏರ್ಪಡಿಸಲಾಗುತ್ತದೆ. ಇತ್ತೀಚೆಗಿನ ವರ್ಷವೊಂದರಲ್ಲಿ, 1,513 ಜಿಲ್ಲಾ ಅಧಿವೇಶನಗಳಲ್ಲಿ ಮೊತ್ತವಾಗಿ, 74,88,266 ಮಂದಿ ಹಾಜರಾದರು ಮತ್ತು 1,31,870 ಹೊಸ ವಿಶ್ವಾಸಿಗಳು ದೀಕ್ಷಾಸ್ನಾನ ಪಡೆದರು. ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ, ಯೋಹಾನ ವರ್ಗದವರು ಯೆಹೋವನ ನಾಮ ಮತ್ತು ಉದ್ದೇಶವನ್ನು ಪ್ರಕಟಿಸುವುದರಲ್ಲಿ ವಾಚ್‌ಟವರ್‌ [ಕಾವಲಿನಬುರುಜು] ಪತ್ರಿಕೆಯನ್ನು ಬಳಸಿರುತ್ತಾರೆ. ಎರಡು ಲೋಕ ಯುದ್ಧಗಳಲ್ಲಿ, ಕಟು ಹಿಂಸೆಯ ಪ್ರತಿವರ್ತನೆಯಾಗಿ, “ಬೆಸ್ಲೆಡ್‌ ಅರ್‌ ದ ಫಿಯರ್‌ಲೆಸ್‌” [ನಿರ್ಭೀತರು ಆಶೀರ್ವದಿತರು] (1919), “ಎ ಕಾಲ್‌ ಫಾರ್‌ ಆ್ಯಕ್‌ಷನ್‌” [ಕಾರ್ಯಾಚರಣೆಗೆ ಒಂದು ಕರೆ] (1925), ಮತ್ತು “ಡಿಫೀಟ್‌ ಆಫ್‌ ಪರ್ಸಿಕ್ಯೂಶನ್‌” [ಹಿಂಸೆಯ ಸೋಲು] (1942) ಎಂಬಂಥ ಲೇಖನಗಳನ್ನು ಪ್ರಕಾಶಿಸುವುದರ ಮೂಲಕ, ದ ವಾಚ್‌ಟವರ್‌ ಯೆಹೋವನ ಸಾಕ್ಷಿಗಳಲ್ಲಿ ಪುನಃ ಚೇತರಿಸಲ್ಪಟ್ಟ ಹುರುಪನ್ನು ಎಬ್ಬಿಸಿತು.

9. (ಎ) ಎಲ್ಲಾ ಕ್ರೈಸ್ತರು ಸ್ವತಃ ಏನನ್ನು ಕೇಳಿಕೊಳ್ಳತಕ್ಕದ್ದು? (ಬಿ) ದ ವಾಚ್‌ಟವರ್‌ ಯಾವ ಪ್ರೋತ್ಸಾಹವನ್ನು ನೀಡಿದೆ?

9 ಸಾರ್ದಿಸಿನಲ್ಲಿದ್ದಂತೆ, ಇಂದಿನ ಸಭೆಗಳಲ್ಲಿ ಕೂಡಾ ಸ್ವ-ಪರೀಕ್ಷೆಯನ್ನು ಮುಂದರಿಸುತ್ತಾ ಇರುವುದು ಎಲ್ಲಾ ಕ್ರೈಸ್ತರಿಗೆ ಅತ್ಯಾವಶ್ಯಕವಾಗಿದೆ. ನಮ್ಮಲ್ಲಿ ಎಲ್ಲರೂ ತಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ನಮ್ಮ ದೇವರ ಮುಂದೆ ನಮ್ಮ “ಕೃತ್ಯಗಳು ಸಂಪೂರ್ಣವಾಗಿ” ಮಾಡಲ್ಪಟ್ಟಿವೆಯೋ? ಇತರರಿಗೆ ನ್ಯಾಯತೀರಿಸದೆ, ನಾವು ವೈಯಕ್ತಿಕವಾಗಿ ಸ್ವ-ತ್ಯಾಗದ ಆತ್ಮವನ್ನು ಬೆಳಸುತ್ತಾ ಇದ್ದೇವೋ ಮತ್ತು ದೇವರಿಗೆ ಪೂರ್ಣಾತ್ಮದ ಸೇವೆಯನ್ನು ಸಲ್ಲಿಸಲು ಹೆಣಗಾಡುತ್ತೇವೋ? ಈ ಸಂಬಂಧದಲ್ಲಿ, “ಆರ್‌ ಯು ಸೆಲ್ಫ್‌-ಇಂಡಲ್ಜಂಟ್‌—ಆರ್‌ ಸೆಲ್ಫ್‌-ಸ್ಯಾಕ್ರಿಫೈಸಿಂಗ್‌?” [ನೀವು ಸ್ವ-ಭೋಗಾಸಕ್ತರೋ, ಯಾ ಸ್ವ-ತ್ಯಾಗ ಮಾಡುವವರೋ?] ಮತ್ತು “ಎಗ್ಸರ್ಟ್‌ ಯುವರ್‌ಸೆಲ್ವ್‌ಸ್‌ ವಿಗರಸ್‌ಲಿ” * [ಹುರುಪಿನಿಂದ ಶ್ರಮಿಸಿಕೊಳ್ಳಿರಿ] ಎಂಬಂತಹ ವಿಷಯಗಳನ್ನು ಚರ್ಚಿಸುವುದರ ಮೂಲಕ ದ ವಾಚ್‌ಟವರ್‌ ಪತ್ರಿಕೆಯು ಪ್ರೋತ್ಸಾಹವನ್ನು ನೀಡಿದೆ. ಅಂತಹ ಶಾಸ್ತ್ರೀಯ ಸಹಾಯಗಳು ಇರುವುದರಿಂದ, ಯೆಹೋವನ ಮುಂದೆ ಸಮಗ್ರತೆಯಲ್ಲಿ ನಾವು ದೀನತೆಯಿಂದ ಮತ್ತು ಪ್ರಾರ್ಥನಾಪೂರ್ವಕವಾಗಿ ನಡೆಯಲು ಪ್ರಯತ್ನಿಸುತ್ತಿರುವಾಗ, ನಮ್ಮ ಅಂತರಾತ್ಮಗಳನ್ನು ನಾವು ಪರಿಶೋಧಿಸೋಣ.—ಕೀರ್ತನೆ 26:1-3; 139:23, 24.

“ಕೆಲವು ಹೆಸರುಗಳು”

10. ಸಾರ್ದಿಸಿನಲ್ಲಿರುವ ಸಭೆಯಲ್ಲಿ ಯಾವ ಪ್ರೋತ್ಸಾಹಕ ಲಕ್ಷಣವನ್ನು ಯೇಸುವು ಗಮನಿಸಿದನು, ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸತಕ್ಕದ್ದು?

10 ಸಾರ್ದಿಸಿನಲ್ಲಿರುವ ಸಭೆಗೆ ಯೇಸುವಿನ ಮುಂದಿನ ಮಾತುಗಳು ಬಹಳ ಉತ್ತೇಜಕವಾಗಿರುತ್ತವೆ. ಅವನು ಹೇಳುವುದು: “ಆದಾಗ್ಯೂ, ತಮ್ಮ ಹೊರ ಉಡುಪುಗಳನ್ನು ಮೈಲಿಗೆ ಮಾಡಿಕೊಳ್ಳದ್ದಿದ ಕೆಲವು ಹೆಸರುಗಳು ಸಾರ್ದಿಸಿನಲ್ಲಿ ನಿನ್ನಲ್ಲಿವೆ ನಿಶ್ಚಯ, ಮತ್ತು ಅವರು ಬಿಳೀ ವಸ್ತ್ರಗಳಲ್ಲಿ ನನ್ನೊಂದಿಗೆ ನಡೆಯುವರು, ಯಾಕಂದರೆ ಅವರು ಅರ್ಹರು. ಜಯಿಸುವವನು ಹೀಗೆ ಬಿಳೀ ಹೊರ ಉಡುಪುಗಳಿಂದ ಅಲಂಕರಿಸಲ್ಪಡುವನು; ಮತ್ತು ಜೀವದ ಪುಸ್ತಕದಿಂದ ಅವನ ಹೆಸರನ್ನು ಖಂಡಿತವಾಗಿಯೂ ನಾನು ಅಳಿಸುವುದಿಲ್ಲ, ಆದರೆ ನನ್ನ ತಂದೆಯ ಮುಂದೆ ಮತ್ತು ಆತನ ದೂತರ ಮುಂದೆ ನಾನು ಅವನ ಹೆಸರಿನ ಮನ್ನಣೆಯನ್ನು ಮಾಡುವೆನು.” (ಪ್ರಕಟನೆ 3:4, 5, NW)  ಈ ಮಾತುಗಳು ನಮ್ಮಲ್ಲಿ ಹುರುಪನ್ನು ಎಬ್ಬಿಸಿ, ನಂಬಿಗಸ್ತರಾಗಿ ಇರುವ ನಮ್ಮ ನಿರ್ಧಾರವನ್ನು ಬಲಗೊಳಿಸುವುದಿಲ್ಲವೇ? ಹಿರಿಯರ ಸಮೂಹದ ವತಿಯಿಂದ ನಿರ್ಲಕ್ಷ್ಯದ ಕಾರಣದಿಂದ, ಸಭೆಯೊಂದು ಸಮಗ್ರವಾಗಿ ಒಂದು ಗಾಢವಾದ ಆತ್ಮಿಕ ನಿದ್ರೆಗೆ ಹೋಗಬಹುದು. ಆದರೂ, ಅದರಲ್ಲಿನ ಕೆಲವು ವ್ಯಕ್ತಿಗಳು ಧೈರ್ಯದಿಂದ ಅವರ ಕ್ರೈಸ್ತ ಪರಿಚಯವನ್ನು ಶುದ್ಧವಾಗಿ ಮತ್ತು ಕಳಂಕರಹಿತವಾಗಿ ಕಾಪಾಡಿಕೊಳ್ಳಲು ಪ್ರಯತ್ನಿಸಬಹುದು ಮತ್ತು ಹೀಗೆ ಯೆಹೋವನೊಂದಿಗೆ ಒಂದು ಒಳ್ಳೆಯ ಹೆಸರನ್ನು ಇಟ್ಟುಕೊಳ್ಳುವುದನ್ನು ಮುಂದುವರಿಸಬಹುದು.—ಜ್ಞಾನೋಕ್ತಿ 22:1.

11, 12. (ಎ) ಮಹಾ ಧರ್ಮಭ್ರಷ್ಟತೆಯ ಸಮಯದಲ್ಲಿ ಕೂಡ, ಕೆಲವರು ಸಾರ್ದಿಸಿನಲ್ಲಿರುವ ನಂಬಿಗಸ್ತ “ಕೆಲವು ಹೆಸರು” ಗಳಂತೆ ಹೇಗಿದ್ದಿರಬೇಕು? (ಬಿ) ಕರ್ತನ ದಿನದಲ್ಲಿ ಗೋಧಿಯಂತಹ ಕ್ರೈಸ್ತರಿಗೆ ಯಾವ ಬಿಡುಗಡೆ ಒದಗಿಬಂತು?

11 ಹೌದು, ಆ “ಹೊರ ಉಡುಪುಗಳು” ಒಬ್ಬ ಕ್ರೈಸ್ತನೋಪಾದಿ ವ್ಯಕ್ತಿಯೊಬ್ಬನ ನೀತಿಯ ಗುರುತನ್ನು ಸೂಚಿಸುತ್ತವೆ. (ಹೋಲಿಸಿರಿ ಪ್ರಕಟನೆ 16:15; 19:8.) ಅಧಿಕ ಸಂಖ್ಯಾತರ ಅಸಡ್ಡೆಯ ಭಾವದ ಹೊರತಾಗಿಯೂ “ಕೆಲವು ಹೆಸರುಗಳು,” ಸಾರ್ದಿಸಿನಲ್ಲಿನ ಸ್ವಲ್ಪವೇ ಅಭಿಷಿಕ್ತ ಕ್ರೈಸ್ತರು, ಇನ್ನೂ ತಮ್ಮ ಈ ಗುರುತನ್ನು ಇಟ್ಟುಕೊಂಡಿರುವುದನ್ನು ನೋಡುವುದು ಯೇಸುವಿನ ಹೃದಯವನ್ನು ಹುರಿದುಂಬಿಸಿರಬೇಕು. ತದ್ರೀತಿಯಲ್ಲಿ, ಮಹಾ ಧರ್ಮಭ್ರಷ್ಟತೆಯ ದೀರ್ಘ ಶತಮಾನಗಳ ಸಮಯದಲ್ಲಿ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನೊಳಗೆ ಕ್ರೈಸ್ತರೆಂದು ಹೇಳಿಕೊಳ್ಳುವವರು ವಿಲೀನಗೊಂಡಿರುವಾಗ, ಮಹಾ ಪ್ರತಿಕೂಲಗಳ ವಿರುದ್ಧವಾಗಿ ಯೆಹೋವನ ಚಿತ್ತವನ್ನು ಮಾಡಲು ಪ್ರಯತ್ನಿಸಿದ್ದ ಕೆಲವು ವ್ಯಕ್ತಿಗಳು ಅಲ್ಲಿ ಇದ್ದಿರಲೇ ಬೇಕು. ಇವರು ವಿಪುಲವಾದ ಪಂಥಾಭಿಮಾನಿ ಹಣಜಿಗಳ ನಡುವೆ ಅಡಗಿಹೋಗಿದ್ದ ಗೋಧಿಯಂತಹ ನೀತಿವಂತರಾಗಿದ್ದರು.—ಪ್ರಕಟನೆ 17:3-6; ಮತ್ತಾಯ 13:24-29.

12 ಈ ಗೋಧಿಯಂತಹ ಕ್ರೈಸ್ತರೊಂದಿಗೆ ಅವನು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ತನಕ ಎಲ್ಲಾ ದಿವಸ” ಇರುವನು ಎಂದು ಯೇಸುವು ವಾಗ್ದಾನಿಸಿದನು. ಅವರು ಯಾರು ಮತ್ತು ಅವರು ತಮಗಾಗಿ ಯಾವ ಒಳ್ಳೆಯ ಹೆಸರುಗಳನ್ನು ಮಾಡಿಕೊಂಡಿದ್ದಾರೆಂದು ಅವನಿಗೆ ತಿಳಿದದೆ. (ಮತ್ತಾಯ 28:20; ಪ್ರಸಂಗಿ 7:1) ಕರ್ತನ ದಿನದ ಆರಂಭದಲ್ಲಿ ಇನ್ನೂ ಜೀವಂತರಾಗಿದ್ದ ಈ ನಂಬಿಗಸ್ತ “ಕೆಲವರ” ಆನಂದವನ್ನು ಊಹಿಸಿರಿ! ಆತ್ಮಿಕವಾಗಿ ಸತ್ತಿರುವ ಕ್ರೈಸ್ತಪ್ರಪಂಚದಿಂದ ಅವರು ಅಂತಿಮವಾಗಿ ಪ್ರತ್ಯೇಕಿಸಲ್ಪಟ್ಟರು ಮತ್ತು ಬಹುಮಟ್ಟಿಗೆ ಸ್ಮುರ್ನದಲ್ಲಿದ್ದ ಸಭೆಯಂತಹ ಒಂದು ನೀತಿಯ ಸಭೆಯೊಳಗೆ ಒಟ್ಟುಗೂಡಿಸಲ್ಪಟ್ಟರು.—ಮತ್ತಾಯ 13:40-43.

13. “ತಮ್ಮ ಹೊರ ಉಡುಪುಗಳನ್ನು ಮೈಲಿಗೆ” ಮಾಡದೆ ಇರುವ ಅಭಿಷಿಕ್ತ ಕ್ರೈಸ್ತರಿಗಾಗಿ ಯಾವ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ?

13 ಸಾರ್ದಿಸಿನಲ್ಲಿ ಕಡೇವರೆಗೂ ನಂಬಿಗಸ್ತರಾಗಿರುವ ಮತ್ತು ಅವರ ಕ್ರೈಸ್ತ ಗುರುತನ್ನು ಕಳಂಕಗೊಳಿಸದೆ ಇರುವವರು ಒಂದು ಅದ್ಭುತವಾದ ನಿರೀಕ್ಷೆಯ ನೆರವೇರಿಕೆಯನ್ನು ಹೊಂದುತ್ತಾರೆ. 1914 ರಲ್ಲಿ ಯೇಸುವಿನ ಮೆಸ್ಸೀಯ ಸಂಬಂಧಿತ ರಾಜ್ಯದ ಸ್ಥಾಪನೆಯ ನಂತರ, ಅವರು ಆತ್ಮ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುತ್ತಾರೆ ಮತ್ತು ಜಯಶಾಲಿಗಳೋಪಾದಿ, ಅವರ ಲೋಪವಿಲ್ಲದ, ನಿಷ್ಕಳಂಕದ ನೀತಿಯ ಸಂಕೇತವಾಗಿ ಬಿಳೀ ಹೊರ ಉಡುಪುಗಳಿಂದ ಅಲಂಕರಿಸಲ್ಪಡುತ್ತಾರೆ. ಜೀವಕ್ಕೆ ನಡಿಸುವ ಇಕ್ಕಟ್ಟಾದ ದಾರಿಯಲ್ಲಿ ಅವರು ನಡೆದ ಕಾರಣ, ಅವರು ಒಂದು ಶಾಶ್ವತ ಬಹುಮಾನವನ್ನು ಅನುಭವಿಸುವರು.—ಮತ್ತಾಯ 7:14; ಪ್ರಕಟನೆ 6:9-11 ಕೂಡ ನೋಡಿರಿ.

ಜೀವದ ಪುಸ್ತಕದಲ್ಲಿ ನಿರಂತರವೂ!

14. “ಜೀವದ ಪುಸ್ತಕ” ಅಂದರೇನು, ಮತ್ತು ಅದರಲ್ಲಿ ಯಾರ ಹೆಸರುಗಳು ದಾಖಲಿಸಲ್ಪಟ್ಟಿವೆ?

14 “ಜೀವದ ಪುಸ್ತಕ” ಅಂದರೆ ಏನು, ಮತ್ತು ಅದರಲ್ಲಿ ಯಾರ ಹೆಸರುಗಳು ಉಳಿಸಲ್ಪಡುತ್ತವೆ? ಜೀವದ ಪುಸ್ತಕ ಯಾ, ಸುರುಳಿಯು, ನಿತ್ಯ ಜೀವದ ಕೊಡುಗೆಯನ್ನು ಪಡೆಯುವವರ ಸಾಲಿನಲ್ಲಿ ಬರುವ ಯೆಹೋವನ ಸೇವಕರ ದಾಖಲೆಯನ್ನು ಸೂಚಿಸುತ್ತದೆ. (ಮಲಾಕಿಯ 3:16) ಇಲ್ಲಿ ಪ್ರಕಟನೆಯಲ್ಲಿ ಅಭಿಷಿಕ್ತ ಕ್ರೈಸ್ತರ ಹೆಸರುಗಳಿಗೆ ನಿರ್ದಿಷ್ಟ ಸೂಚನೆಯನ್ನು ಮಾಡಲಾಗಿದೆ. ಆದರೆ ಭೂಮಿಯ ಮೇಲೆ ನಿತ್ಯ ಜೀವದ ಸಾಲಿನಲ್ಲಿರುವವರ ಹೆಸರುಗಳನ್ನು ಕೂಡ ಅಲ್ಲಿ ದಾಖಲಿಸಲಾಗಿದೆ. ಇನ್ನೂ ಹೆಚ್ಚಾಗಿ, ಆ ಪುಸ್ತಕದಿಂದ ಹೆಸರುಗಳನ್ನು ‘ಅಳಿಸಲು’ ಸಾಧ್ಯವಿದೆ. (ವಿಮೋಚನಕಾಂಡ 32:32, 33) ಆದಾಗ್ಯೂ, ಯೋಹಾನ ವರ್ಗದವರಲ್ಲಿ ಯಾರ ಹೆಸರುಗಳು ಅವರ ಮರಣದ ತನಕ ಜೀವದ ಪುಸ್ತಕದಲ್ಲಿ ಉಳಿಯುತ್ತವೋ, ಅಂತಹವರು ಪರಲೋಕದಲ್ಲಿ ಅಮರ ಜೀವವನ್ನು ಪಡೆಯುವರು. (ಪ್ರಕಟನೆ 2:10) ಯೇಸುವು ಆತನ ತಂದೆಯ ಮುಂದೆ ಮತ್ತು ಆತನ ದೂತರ ಮುಂದೆ ವಿಶೇಷವಾಗಿ ಮನ್ನಣೆ ನೀಡುವ ಹೆಸರುಗಳು ಇವಾಗಿವೆ. ಎಂತಹ ಘನಗಾಂಭೀರ್ಯದ ಬಹುಮಾನ ಅದಾಗಿದೆ!

15. ಮಹಾ ಸಮೂಹದ ಸದಸ್ಯರು ಜೀವದ ಪುಸ್ತಕದಲ್ಲಿ ತಮ್ಮ ಹೆಸರುಗಳು ಅಳಿಸಲ್ಪಡದ ರೀತಿಯಲ್ಲಿ ಬರೆಯಲ್ಪಡುವಂತೆ ಮಾಡುವುದು ಹೇಗೆ?

15 ಯಾರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಲ್ಪಡುವವೂ, ಆ ಮಹಾ ಸಮೂಹದವರು ಮಹಾ ಸಂಕಟದಿಂದ ಜೀವಂತವಾಗಿ ಪಾರಾಗಿ ಬರುವರು. ಯೇಸುವಿನ ಸಹಸ್ರ ವರ್ಷದ ಆಳಿಕೆಯಲ್ಲಿಲ್ಲಾ ಮತ್ತು ಅದನ್ನು ಹಿಂಬಾಲಿಸಿ ಬರುವ ನಿರ್ಣಾಯಕ ಪರೀಕ್ಷೆಯ ಸಮಯದಲ್ಲಿ ನಂಬಿಕೆಯನ್ನು ಪ್ರದರ್ಶಿಸುವ ಮೂಲಕ, ಇವರಿಗೆ ಭೂಮಿಯ ಮೇಲೆ ಪ್ರಮೋದವನದಲ್ಲಿ ನಿತ್ಯ ಜೀವದ ಬಹುಮಾನ ಕೊಡಲ್ಪಡುವುದು. (ದಾನಿಯೇಲ 12:1; ಪ್ರಕಟನೆ 7:9, 14; 20:15; 21:4) ಇವರ ಹೆಸರುಗಳು ತದನಂತರ ಅಳಿಸಲ್ಪಡದ ರೀತಿಯಲ್ಲಿ ಜೀವದ ಪುಸ್ತಕದಲ್ಲಿ ಬರೆಯಲ್ಪಡುವವು. ಪವಿತ್ರಾತ್ಮದ ಮೂಲಕ ಇಲ್ಲಿ ಸಾದರಪಡಿಸಲ್ಪಟ್ಟಿರುವುದೇನು ಎಂದು ತಿಳಿದಾದ ಅನಂತರ, ಯೇಸುವಿನ ಪುನರಾವರ್ತಿಸಲ್ಪಟ್ಟಿರುವ ಎಚ್ಚರಿಕೆಗೆ ನೀವು ಉತ್ಸಾಹದಿಂದ ಪ್ರತಿವರ್ತಿಸುವುದಿಲ್ಲವೇ: “ದೇವರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ”?—ಪ್ರಕಟನೆ 3:6, NW.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 9 ಆಗಸ್ಟ್‌ 1, 1978 ಮತ್ತು ಜನವರಿ 15, 1986ರ ದ ವಾಚ್‌ಟವರ್‌ ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 68 ರಲ್ಲಿರುವ ಚಿತ್ರ]

ಜೀವದ ಪುಸ್ತಕದಲ್ಲಿ ನಿಮ್ಮ ಹೆಸರು ಉಳಿಯಲಿ