ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ—ಅದರ ಸಂತೋಷದ ಪರಮಾವಧಿ!

ಪ್ರಕಟನೆ—ಅದರ ಸಂತೋಷದ ಪರಮಾವಧಿ!

ಅಧ್ಯಾಯ 1

ಪ್ರಕಟನೆ—ಅದರ ಸಂತೋಷದ ಪರಮಾವಧಿ!

1. ನಾವು ಸಂತೋಷಿತರಾಗಿರಬೇಕೆಂದು ದೇವರು ಬಯಸುತ್ತಾನೆಂದು ನಾವು ಹೇಗೆ ಬಲ್ಲೆವು?

ಯೋಹಾನನಿಗೆ ಒಂದು ಪ್ರಕಟನೆ—ಬೈಬಲಿನ ಈ ರೋಮಾಂಚಕಾರೀ ಪುಸ್ತಕವು ದೈವಿಕ ದಾಖಲೆಯನ್ನು ಒಂದು ಸಂತೋಷದ ಪರಮಾವಧಿಗೆ ತರುತ್ತದೆ. ನಾವು “ಸಂತೋಷ” ಎಂದು ಯಾಕೆ ಹೇಳುತ್ತೇವೆ? ಒಳ್ಳೇದು, ಬೈಬಲಿನ ಗ್ರಂಥಕರ್ತನನ್ನು, ಅವನನ್ನು ಪ್ರೀತಿಸುವವರಿಗೆ “ಮಹಿಮಾಭರಿತ ಸುವಾರ್ತೆ” ಯನ್ನು ಒಪ್ಪಿಸುವ ಒಬ್ಬ “ಸಂತೋಷದ ದೇವರು” ಎಂದು ವರ್ಣಿಸಲಾಗಿದೆ. ನಾವು ಕೂಡ ಸಂತೋಷಿತರಾಗಬೇಕೆಂದು ಅವನು ಬಯಸುತ್ತಾನೆ. ಆದಕಾರಣ, ಆರಂಭದಲ್ಲಿಯೇ ಪ್ರಕಟನೆಯು ನಮಗೆ ಆಶ್ವಾಸನೆಯನ್ನೀಯುವುದು: “ಈ ಪ್ರವಾದನಾ ಮಾತುಗಳನ್ನು ಗಟ್ಟಿಯಾಗಿ ಓದುವವನೂ . . . ಸಂತೋಷಿಗಳು.” ಅದರ ಕೊನೆಯ ಅಧ್ಯಾಯದಲ್ಲಿ ನಮಗೆ ಹೀಗೆ ಹೇಳಲ್ಪಡುತ್ತದೆ: “ಈ ಸುರುಳಿಯಲ್ಲಿ ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವವನು ಸಂತೋಷಿಯು.”1 ತಿಮೊಥೆಯ 1:11; ಪ್ರಕಟನೆ 1:3; 22:7, NW.

2. ಪ್ರಕಟನೆ ಪುಸ್ತಕದ ಮೂಲಕ ಸಂತೋಷವನ್ನು ಕಂಡುಕೊಳ್ಳಬೇಕಾದರೆ ನಾವೇನು ಮಾಡತಕ್ಕದ್ದು?

2 ಪ್ರಕಟನೆ ಪುಸ್ತಕದ ಮೂಲಕ ನಾವು ಸಂತೋಷವನ್ನು ಕಂಡುಕೊಳ್ಳುವುದಾದರೂ ಹೇಗೆ? ಅದರಲ್ಲಿರುವ ವೈವಿಧ್ಯಮಯ ಸೂಚನೆಗಳ, ಇಲ್ಲವೆ ಸಂಕೇತಗಳ ಅರ್ಥಗಳನ್ನು ಹುಡುಕುವುದರ ಮೂಲಕ ಮತ್ತು ಅದಕ್ಕನುಗುಣವಾಗಿ ವರ್ತಿಸುವುದರ ಮೂಲಕ ನಾವದನ್ನು ಮಾಡುತ್ತೇವೆ. ಮಾನವಕುಲದ ಗಲಭೆಯ ಇತಿಹಾಸವು ಬಲುಬೇಗನೇ ಒಂದು ವಿನಾಶದ ಪರಮಾವಧಿಗೆ ಮುಟ್ಟುವುದು, ಆಗ ಇಂದಿನ ದುಷ್ಟ ವ್ಯವಸ್ಥೆಯ ಮೇಲೆ ದೇವರು ಮತ್ತು ಯೇಸು ಕ್ರಿಸ್ತನು ನ್ಯಾಯತೀರ್ಪನ್ನು ಜಾರಿಗೊಳಿಸಿ, ಅದನ್ನು ಎಲ್ಲಿ ‘ಮರಣವು ಇನ್ನು ಮುಂದೆ ಇರುವುದಿಲ್ಲವೋ’ ಆ “ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲ” ದಿಂದ ಸ್ಥಾನಭರ್ತಿಮಾಡುವನು. (ಪ್ರಕಟನೆ 21:1, 4) ಅಂತಹ ನೂತನ ಲೋಕವೊಂದರಲ್ಲಿ, ನಿಜವಾದ ಶಾಂತಿ ಮತ್ತು ಭದ್ರತೆಯಲ್ಲಿ ಜೀವಿಸಲು ನಾವೆಲ್ಲರೂ ಬಯಸುವುದಿಲ್ಲವೇ? ಪ್ರಕಟನೆಯ ಉದ್ರೇಕಗೊಳಿಸುವ ಪ್ರವಾದನೆಯ ಸಹಿತ, ದೇವರ ವಾಕ್ಯದ ಅಭ್ಯಾಸದ ಮೂಲಕ ನಮ್ಮ ನಂಬಿಕೆಯನ್ನು ಕಟ್ಟುವುದಾದರೆ ನಾವದನ್ನು ಮಾಡಬಲ್ಲೆವು.

ಅಪಾಕಲಿಪ್ಸ್‌—ಅದೇನು?

3. ಅಪಾಕಲಿಪ್ಸ್‌ ಮತ್ತು ಅರ್ಮಗೆದೋನಿನ ಅರ್ಥದ ಕುರಿತು ಅನೇಕರು ಏನು ಎಣಿಸುತ್ತಾರೆ?

3 ಪ್ರಕಟನೆಯನ್ನು ಅಪಾಕಲಿಪ್ಸ್‌ ಎಂದು ಕೂಡ ಕರೆದಿಲ್ಲವೇ? ಹೌದು, ಗ್ರೀಕ್‌ ಮೂಲಪಾಠದಲ್ಲಿ ಅ-ಪಾ-ಕ’ಲಿ-ಪ್ಸಿಸ್‌ನ ಇಂಗ್ಲಿಷ್‌ ಅನುವಾದ “ಪ್ರಕಟನೆ” ಎಂದಾಗಿರುತ್ತದೆ. ಅನೇಕ ಜನರು ಅಣುಯುದ್ಧದ ಹೋರಾಟದ ಮೂಲಕ ಆಗುವ ಲೋಕ ನಾಶನದೊಂದಿಗೆ ಅಪಾಕಲಿಪ್ಸ್‌ನ್ನು ಸಮೀಕರಿಸುತ್ತಾರೆ. ಎಲ್ಲಿ ಮಹಾ ಸಂಖ್ಯೆಯಲ್ಲಿ ಅಣ್ವಸ್ತ್ರದ ಸಿಡಿತಲೆಗಳು ಮಾಡಲ್ಪಡುತ್ತವೋ ಆ ಅಮೆರಿಕದ ಟೆಕ್ಸಸಿನ ಒಂದು ನಗರದಲ್ಲಿ, ಧಾರ್ಮಿಕ ಒಲವು ಇದ್ದ ಜನರು ಹೇಳುತ್ತಿರುವುದು, “ಮೊತ್ತಮೊದಲು ಹೋಗಲಿರುವವರು ನಾವೇ.” ಆ ಪ್ರದೇಶದಲ್ಲಿರುವ ವೈದಿಕರು “ಅರ್ಮಗೆದೋನ್‌ ಕೇವಲ ಅನಿವಾರ್ಯ ಮಾತ್ರವಲ್ಲ, ನಿಕಟವೂ ಇದೆ, ಮತ್ತು ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ, ದೇವರ ಮತ್ತು ಸೈತಾನನ ನಡುವಣ ಕೊನೆಯ ಕದನವು ಒಂದು ಅಣ್ವಸ್ತ್ರದ ಸರ್ವನಾಶದೋಪಾದಿ ನಡೆಯಲ್ಪಡುವುದೆಂದು ಮನವರಿಕೆ ಮಾಡಿಕೊಂಡಿದ್ದಾರೆಂದು” * ವರದಿಯಾಗಿರುತ್ತದೆ.

4. “ಅಪಾಕಲಿಪ್ಸ್‌” ಶಬ್ದದ ನಿಜವಾದ ಅರ್ಥವೇನು, ಮತ್ತು ಬೈಬಲಿನ ಕೊನೆಯ ಪುಸ್ತಕವು ಸಮಂಜಸವಾಗಿಯೇ “ಪ್ರಕಟನೆ” ಎಂದು ಯಾಕೆ ನಾಮಾಂಕಿತವಾಗಿದೆ?

4 ಆದರೆ ನಿಜವಾಗಿ ಅಪಾಕಲಿಪ್ಸ್‌ ಅಂದರೇನು? “ಆವಶ್ಯಕವಾದ ಒಂದು ವಿಶ್ವ ಪ್ರಳಯ,” ದಂತಹ ಪದಪುಂಜಗಳನ್ನು ಉಪಯೋಗಿಸಿ ನಿಘಂಟುಗಳು ಅದರ ಅರ್ಥ ವಿವರಣೆಯನ್ನು ಕೊಡುವುದಾದರೂ, ಗ್ರೀಕ್‌ನಲ್ಲಿ ಅ-ಪಾ-ಕ’ಲಿ-ಪ್ಸಿಸ್‌ ಮೂಲತಃ “ಮುಸುಕು ತೆರೆಯುವುದು, ತೆರೆದು ತೋರಿಸುವುದು” ಎಂಬರ್ಥವಿದೆ. ಈ ರೀತಿಯಲ್ಲಿ, ಬೈಬಲಿನ ಕೊನೆಯ ಪುಸ್ತಕವು ಯೋಗ್ಯವಾಗಿಯೇ “ಪ್ರಕಟನೆ” ಎಂದು ನಾಮವನ್ನು ಹೊಂದುತ್ತದೆ. ಇಲ್ಲಿ ನಾವು ಕೇವಲ ಲೋಕ ನಾಶನದ ದುರದೃಷ್ಟಕರ ಸಂದೇಶವಿರುವುದನ್ನು ಕಾಣುವುದಿಲ್ಲ, ಬದಲಿಗೆ ನಮ್ಮ ಹೃದಯಗಳಲ್ಲಿ ಉಜ್ವಲವಾದ ಒಂದು ನಿರೀಕ್ಷೆ ಮತ್ತು ಅಚಲವಾದ ನಂಬಿಕೆಯನ್ನು ಕಟ್ಟುವಂತಹ ದೈವಿಕ ಸತ್ಯತೆಗಳ ಬಯಲುಮಾಡುವಿಕೆಯನ್ನು ಕಾಣುತ್ತೇವೆ.

5. (ಎ) ಅರ್ಮಗೆದೋನಿನಲ್ಲಿ ಯಾರು ನಾಶಗೊಳಿಸಲ್ಪಡುವರು, ಮತ್ತು ಯಾರು ಪಾರಾಗುವರು? (ಬಿ) ಅರ್ಮಗೆದೋನ್‌ ಪಾರಾಗುವವರಿಗೆ ಯಾವ ಭವ್ಯ ಭವಿಷ್ಯವು ಕಾದಿರುತ್ತದೆ?

5 ಅರ್ಮಗೆದೋನನ್ನು ಬೈಬಲಿನ ಕೊನೆಯ ಪುಸ್ತಕದಲ್ಲಿ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ವೆಂದು ವರ್ಣಿಸಲಾಗಿದೆ ಎಂಬದು ಸತ್ಯ. (ಪ್ರಕಟನೆ 16:14, 16) ಆದರೆ ಇದು ಅಣ್ವಸ್ತ್ರದ ಸರ್ವನಾಶದಿಂದ ಎಷ್ಟೋ ಭಿನ್ನವಾಗಿರುವುದು! ಅಂತಹ ಒಂದು ಸರ್ವನಾಶವು ಭೂಮಿಯ ಮೇಲಿನಿಂದ ಎಲ್ಲಾ ಜೀವಗಳನ್ನು ಅಳಿಸಿಬಿಡುವ ಅರ್ಥದಲ್ಲಿರುವುದು ಸಂಭವನೀಯ. ಇದಕ್ಕೆ ವ್ಯತಿರಿಕ್ತವಾಗಿ, ದೇವರ ಹತೋಟಿಯ ಕೆಳಗಿರುವ ಶಕ್ತಿಗಳಿಂದ ಕೇವಲ ದೇವರ ದುಷ್ಟ ವಿರೋಧಿಗಳು ನಾಶವಾಗುವರು ಎಂಬ ಸಂತೋಷದ ಆಶ್ವಾಸನೆಯನ್ನು ದೇವರ ವಾಕ್ಯವು ಕೊಡುತ್ತದೆ. (ಕೀರ್ತನೆ 37:9, 10; 145:20) ಅರ್ಮಗೆದೋನಿನ ದೈವಿಕ ನ್ಯಾಯತೀರ್ಪಿನ ಪರಮಾವಧಿಯಲ್ಲಿ, ಎಲ್ಲಾ ಜನಾಂಗಗಳಿಂದ ಮಾನವರ ಒಂದು ಮಹಾ ಸಮೂಹವು ಪಾರಾಗಲಿರುವುದು. ಅನಂತರ ಕ್ರಿಸ್ತ ಯೇಸುವು ಅವರ ಕುರಿಪಾಲನೆಮಾಡುವನು ಮತ್ತು ಒಂದು ಪ್ರಮೋದವನ ಭೂಮಿಯೊಳಗೆ ಅವರನ್ನು ಅನಂತ ಜೀವಕ್ಕೆ ನಡಿಸುವನು. ಅವರಲ್ಲಿ ಒಬ್ಬರಾಗಿರಲು ನೀವು ಬಯಸುವುದಿಲ್ಲವೇ? ಸಂತೋಷಕರವಾಗಿಯೇ, ನೀವೊಬ್ಬರಾಗಬಹುದು ಎಂದು ಪ್ರಕಟನೆಯು ತೋರಿಸುತ್ತದೆ!—ಪ್ರಕಟನೆ 7:9, 14, 17.

ದೈವಿಕ ರಹಸ್ಯಗಳನ್ನು ಹುಡುಕುವುದು

6. ಪ್ರಕಟನೆಯ ಮೇಲೆ ಬೆಳಕನ್ನು ಪ್ರಕಾಶಿಸಲು ವಾಚ್‌ ಟವರ್‌ ಸೊಸೈಟಿಯು ಗತಿಸಿದ ವರ್ಷಗಳಲ್ಲಿ ಯಾವ ಪುಸ್ತಕಗಳನ್ನು ಪ್ರಕಾಶಿಸಿದೆ?

6 ಸುಮಾರು 1917 ರಷ್ಟು ಆರಂಭದಲ್ಲಿ, ವಾಚ್‌ ಟವರ್‌ ಸೊಸೈಟಿಯು ಕೊನೆಗೊಂಡ ರಹಸ್ಯ [ದ ಫಿನಿಶ್ಡ್‌ ಮಿಸ್ಟರಿ] ಪುಸ್ತಕವನ್ನು ಪ್ರಕಾಶಿಸಿತು. ಇದು ಬೈಬಲ್‌ ಪುಸ್ತಕಗಳಾದ ಯೆಹೆಜ್ಕೇಲ ಮತ್ತು ಪ್ರಕಟನೆಯ ವಚನಾನುಕ್ರಮದ ಒಂದು ವ್ಯಾಖ್ಯಾನವಾಗಿತ್ತು. ಅನಂತರ, ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿ ಲೋಕದ ಘಟನೆಗಳು ತೆರೆಯಲ್ಪಡುವುದು ಮುಂದುವರಿದಂತೆ, ಬೆಳಕು [ಲೈಟ್‌] ಎಂದು ನಾಮಾಂಕಿತವಾದ ಎರಡು-ಸಂಪುಟಗಳ ಒಂದು ಸಮಯೋಚಿತವಾದ ಕೃತಿಯು ಸಿದ್ಧಪಡಿಸಲ್ಪಟ್ಟು, 1930 ರಲ್ಲಿ ಬಿಡುಗಡೆಗೊಂಡಿತು. ಇದು ಪ್ರಕಟನೆಯ ಆ ಸಮಯದ ತನಕದ ಅಧ್ಯಯನವನ್ನು ಒದಗಿಸಿತು. ಪ್ರಕಾಶವು ‘ನೀತಿವಂತರಿಗೆ ಮಿಂಚುವುದು’ ಮುಂದುವರಿದುದರಿಂದ, 1963 ರಲ್ಲಿ ಸೊಸೈಟಿಯು 704-ಪುಟಗಳ “ಮಹಾ ಬಾಬೆಲ್‌ ಪತನಗೊಂಡಿದೆ!” ದೇವರ ರಾಜ್ಯವು ಆಳುತ್ತದೆ! [“ಬ್ಯಾಬಿಲನ್‌ ದ ಗ್ರೇಟ್‌ ಹ್ಯಾಸ್‌ ಫಾಲನ್‌!” ಗಾಡ್ಸ್‌ ಕಿಂಗ್‌ಡಮ್‌ ರೂಲ್ಸ್‌!] ಪುಸ್ತಕವನ್ನು ಪ್ರಕಾಶಿಸಿತು. ಇದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಏಳುವಿಕೆ ಮತ್ತು ಬೀಳುವಿಕೆಯ ಇತಿಹಾಸವನ್ನು ಬಹಳ ವಿವರಣೆಗಳಿಂದ ನೀಡಿತು, ಮತ್ತು ಪ್ರಕಟನೆಯ ಕೊನೆಯ ಒಂಬತ್ತು ಅಧ್ಯಾಯಗಳ ಚರ್ಚೆಯೊಂದಿಗೆ ಅದು ಪರಮಾವಧಿಗೇರಿಸಲ್ಪಟ್ಟಿತು. ವಿಶೇಷವಾಗಿ ಸಭಾ ಚಟುವಟಿಕೆಗಳ ಸಂಬಂಧದಲ್ಲಿ, ‘ನೀತಿವಂತರ ಮಾರ್ಗವು ಹೆಚ್ಚು ಪ್ರಕಾಶಮಾನವಾಗಿ ಬೆಳೆದಂತೆ’, 384-ಪುಟಗಳ “ದೇವರ ರಹಸ್ಯವು ಆಗ ಕೊನೆಗೊಂಡಿತು” [“ದೆನ್‌ ಇಸ್‌ ಫಿನಿಶ್ಡ್‌ ದ ಮಿಸ್ಟರಿ ಆಫ್‌ ಗಾಡ್‌”] ಸಂಪುಟವೊಂದು 1969 ರಲ್ಲಿ ಹಿಂಬಾಲಿಸಿ ಬಂತು, ಇದರಲ್ಲಿ ಪ್ರಕಟನೆಯ ಮೊದಲ 13 ಅಧ್ಯಾಯಗಳು ಚರ್ಚಿಸಲ್ಪಟ್ಟವು.—ಕೀರ್ತನೆ 97:11; ಜ್ಞಾನೋಕ್ತಿ 4:18.

7. (ಎ) ಪ್ರಕಟನೆಯ ಮೇಲೆ ಈ ಪುಸ್ತಕವನ್ನು ಸೊಸೈಟಿಯು ಏಕೆ ಒದಗಿಸಿದೆ? (ಬಿ) ವಾಚಕರಿಗೆ ಪ್ರಯೋಜನವಾಗುವಂತಹ ಯಾವ ಕಲಿಸುವ ಸಹಾಯಕಗಳನ್ನು ಈ ಪುಸ್ತಕದಲ್ಲಿ ಒದಗಿಸಲಾಗಿದೆ?

7 ಈ ಸದ್ಯದ ಸಮಯದಲ್ಲಿ ಪ್ರಕಟನೆಯ ಮೇಲೆ ಇನ್ನೊಂದು ಪುಸ್ತಕವು ಏಕೆ ಪ್ರಕಾಶಿಸಲ್ಪಡಬೇಕು? ಈಗಾಗಲೇ ತೋರಿಬಂದ ಮಾಹಿತಿಯಲ್ಲಿ ಹೆಚ್ಚಿನದ್ದು ಅತಿ ವಿವರಣಾತ್ಮಕವಾಗಿದೆ ಮತ್ತು ಅದನ್ನು ತರ್ಜುಮೆ ಮಾಡಲು ಹಾಗೂ ಲೋಕವ್ಯಾಪಕವಾಗಿ ಅನೇಕ ಭಾಷೆಗಳಲ್ಲಿ ಪ್ರಕಾಶಿಸಲು ಸಾಧ್ಯವಿಲ್ಲ. ಆದಕಾರಣ, ಕೇವಲ ಒಂದೇ ಸಂಪುಟದಲ್ಲಿ ಪ್ರಕಟನೆಯ ಮೇಲಿನ ಪುಸ್ತಕವನ್ನು ಒದಗಿಸುವುದು ಮತ್ತು ಅನೇಕ ಭಾಷೆಗಳಲ್ಲಿ ಸುಲಭವಾಗಿ ಉತ್ಪಾದಿಸಲು ಶಕ್ಯವಾದ ಆಕಾರದಲ್ಲಿ ರೂಪಿಸುವುದು ಸುಸಂಗತವೆಂದು ತೋರಿಬಂತು. ಅದೂ ಅಲ್ಲದೆ, ಈ ಅದ್ಭುತಕರವಾದ ಪ್ರವಾದನೆಯ ರೋಮಾಂಚಕಾರಿಯಾದ ಪ ಮುಖತೆಯನ್ನು ಸ್ಪಷ್ಟವಾಗಿ ತಿಳಿದು ಕೊಳ್ಳಲು ವಾಚಕರಿಗೆ ನೆರವಾಗುವಂತಹ ಚಿತ್ರಣಗಳನ್ನು, ತಖ್ತೆಗಳನ್ನು ಮತ್ತು ಸಾರಾಂಶಗಳ ಸಹಿತ ಕಲಿಸುವ ಸಹಾಯಕಗಳನ್ನು ಒದಗಿಸಲು ಈ ಸಂಪುಟದಲ್ಲಿ ಸಂದರ್ಭವನ್ನು ಬಳಸಲಾಗಿದೆ.

8. ಈ ಪುಸ್ತಕವನ್ನು ಪ್ರಕಾಶಿಸಲು ಇನ್ನೂ ಹೆಚ್ಚು ಬಲವಾದ ಕಾರಣವು ಯಾವುದು?

8 ಪ್ರಸ್ತುತ ಸತ್ಯದೊಂದಿಗೆ ಸದ್ಯೋಚಿತವಾಗಿರುವ ಆವಶ್ಯಕತೆಯು ಈ ಪುಸ್ತಕವನ್ನು ಪ್ರಕಾಶಿಸುವ ಇನ್ನೂ ಬಲವಾದ ಒಂದು ಕಾರಣ ಆಗಿದೆ. ತನ್ನ ವಾಕ್ಯದ ಅರ್ಥದ ಮೇಲೆ ಯೆಹೋವನು ಹೆಚ್ಚಿನ ಬೆಳಕನ್ನು ಎಡೆಬಿಡದೆ ಬೀರುತ್ತಾ ಇದ್ದಾನೆ, ಮತ್ತು ಮಹಾ ಸಂಕಟಕ್ಕೆ ನಾವು ಹೆಚ್ಚು ಸಮೀಪಿಸಿದಷ್ಟಕ್ಕೆ, ಇತರ ಪ್ರವಾದನೆಗಳೊಂದಿಗೆ ಪ್ರಕಟನೆಯ ನಮ್ಮ ತಿಳಿವಳಿಕೆಯು ಇನ್ನೂ ಅಧಿಕವಾಗಿ ಚೂಪುಗೊಳಿಸಲ್ಪಡುವುದನ್ನು ನಾವು ನಿರೀಕ್ಷಿಸಸಾಧ್ಯವಿದೆ. (ಮತ್ತಾಯ 24:21; ಪ್ರಕಟನೆ 7:14) ನಮಗೆ ಹೆಚ್ಚು ವಿಷಯ ತಿಳಿದಿರುವುದು ಪ್ರಾಮುಖ್ಯವಾಗಿರುತ್ತದೆ. ದೈವಿಕ ಪ್ರವಾದನೆಯ ಕುರಿತು ಅಪೊಸ್ತಲ ಪೇತ್ರನು ಬರೆದಂತೆ: “ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.”—2 ಪೇತ್ರ 1:19.

9. (ಎ) ಇತರ ಪ್ರವಾದನೆಗಳೊಂದಿಗೆ, ಪ್ರಕಟನೆಯು ದೇವರು ಏನನ್ನು ಸೃಷ್ಟಿಸುವನೆಂದು ತೋರಿಸುತ್ತದೆ? (ಬಿ) ನೂತನ ಲೋಕವೆಂದರೆ ಏನು, ಮತ್ತು ಅದರೊಳಗೆ ನೀವು ಹೇಗೆ ಪಾರಾಗಿ ಸೇರಬಹುದು?

9 ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲವೊಂದನ್ನು ಸೃಷ್ಟಿಸಲು ಯೆಹೋವ ದೇವರು ಉದ್ದೇಶಿಸಿರುವುದನ್ನು ತೋರಿಸುವ ಬೈಬಲಿನ ಇತರ ಅನೇಕ ಪ್ರವಾದನೆಗಳಿಗೆ ಪ್ರಕಟನೆಯು ತನ್ನ ಸಾಕ್ಷ್ಯಗಳನ್ನು ಕೂಡಿಸುತ್ತದೆ. (ಯೆಶಾಯ 65:17; 66:22; 2 ಪೇತ್ರ 3:13; ಪ್ರಕಟನೆ 21:1-5) ಪ್ರಧಾನವಾಗಿ, ನೂತನಾಕಾಶಮಂಡಲದಲ್ಲಿ ತನ್ನೊಂದಿಗೆ ಸಹ-ರಾಜರಾಗಲು ತನ್ನ ರಕ್ತದಿಂದ ಯೇಸುವು ಖರೀದಿಸಿದ ಅಭಿಷಿಕ್ತ ಕ್ರೈಸ್ತರಿಗೆ ಅದರ ಸಂದೇಶವು ನಿರ್ದೇಶಿಸಲ್ಪಟ್ಟಿದೆ. (ಪ್ರಕಟನೆ 5:9, 10) ಆದಾಗ್ಯೂ, ಕ್ರಿಸ್ತನ ರಾಜ್ಯದ ಕೆಳಗೆ ಅನಂತ ಜೀವನವನ್ನು ಮುನ್ನೋಡುತ್ತಿರುವ ಲಕ್ಷಾಂತರ ಜನರ ನಂಬಿಕೆಯನ್ನು ಕೂಡ ಈ ಶುಭ ಸಮಾಚಾರವು ದೃಢಗೊಳಿಸುವುದು. ಅವರಲ್ಲಿ ನೀವೊಬ್ಬರಾಗಿದ್ದೀರೋ? ಹಾಗಿರುವುದಾದರೆ, ಶಾಂತಿಯ ವಿಪುಲತೆ, ತುಡಿಯುತ್ತಿರುವ ಆರೋಗ್ಯ, ಮತ್ತು ಎಂದೆಂದಿಗೂ ಮುಗಿಯದ ದೇವರ ಒದಗಿಸುವಿಕೆಗಳ ತುಂಬಿತುಳುಕುವಿಕೆಯ ಅನುಭವದೊಂದಿಗೆ, ನೂತನ ಭೂಮಂಡಲದ ಭಾಗವಾಗಿ ಪ್ರಮೋದವನದಲ್ಲಿ ಜೀವಿಸುವ ನಿಮ್ಮ ನಿರೀಕ್ಷೆಯನ್ನು ಪ್ರಕಟನೆಯು ಬಲಗೊಳಿಸುತ್ತದೆ. (ಕೀರ್ತನೆ 37:11, 29, 34; 72:1, 7, 8, 16) ನೀವು ಆ ನೂತನ ಭೂಮಿಯೊಳಗೆ ಪಾರಾಗಲು ಬಯಸುವುದಾದರೆ, ಸಮೀಪದಲ್ಲಿರುವ ಹೊಸ ಯುಗಾರಂಭದ ಪರಮಾವಧಿಯ ಪ್ರಕಟನೆಯು ಕೊಡುವ ಸುಸ್ಪಷ್ಟ ವಿವರಣೆಗಳಿಗೆ ನೀವು ಲಕ್ಷ್ಯವನ್ನೀಯುವುದು ಒಂದು ತುರ್ತಿನ, ಹೌದು, ಆಜ್ಞಾಪಕ ಸಂಗತಿಯಾಗಿದೆ.—ಚೆಫನ್ಯ 2:3; ಯೋಹಾನ 13:17.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 3 ಜೂಡ್ಯೂಶ್ಟ ಜೈಟುಂಗ್‌, ಮ್ಯೂನಿಕ್‌, ಜರ್ಮನಿ, ಜನವರಿ 24, 1987.

[ಅಧ್ಯಯನ ಪ್ರಶ್ನೆಗಳು]

[ಪುಟ 8 ರಲ್ಲಿ ಇಡೀ ಪುಟದ ಚಿತ್ರ]