ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳು

ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳು

ಅಧ್ಯಾಯ 3

ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳು

1. ಈ ಲೋಕದ ಮೇಲೆ ದೇವರ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯಿಂದ ನೀವು ಹೇಗೆ ಪಾರಾಗಸಾಧ್ಯವಿದೆ?

ಇಂದಿನ ಲೋಕ ಘಟನೆಗಳ ಕುರಿತು ನೀವು ಆಳವಾಗಿ ಚಿಂತಿತರಾಗಿರಬೇಕು. ಹಾಗೆ ಯಾಕೆ? ಯಾಕಂದರೆ ದೇವರ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯನ್ನು ಈ ಲೋಕವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ತಪ್ಪಿಸಿಕೊಳ್ಳಸಾಧ್ಯವಿದೆ. ನೀವು ಸ್ವತಃ ನಾಶನಕ್ಕೆ ಗುರಿಪಡಿಸಲ್ಪಟ್ಟ ‘ಲೋಕದ ಭಾಗವಾಗಿರದೇ ಇರುವುದರಿಂದ’ ನೀವದನ್ನು ಮಾಡಸಾಧ್ಯವಿದೆ. ಒಂದು ಕಟ್ಟುನಿಟ್ಟಿನ, ವೈರಾಗ್ಯದ ಜೀವನ ಶೈಲಿಯನ್ನು ತಕ್ಕೊಳ್ಳುವುದೆಂದು ಇದರ ಅರ್ಥವಲ್ಲ. ಇದರ ಅರ್ಥ ಒಂದು ಸಮಗ್ರವಾದ, ಅರ್ಥಭರಿತ ಜೀವಿತವನ್ನು ಅನುಭವಿಸುವಾಗ, ನೀವು ನಿಮ್ಮನ್ನು ರಾಜಕೀಯ ಭ್ರಷ್ಟಾಚಾರದಿಂದ, ಲೋಭತ್ವದ ವಾಣಿಜ್ಯತೆಯಿಂದ, ಮತ್ತು ದೇವ-ನಿಂದಕ ಧರ್ಮದಿಂದ ಹಾಗೂ ಹಿಂಸಾಚಾರದ ಮತ್ತು ಅನೈತಿಕ ನಡತೆಯಿಂದ ಪ್ರತ್ಯೇಕಿಸಿಕೊಳ್ಳುವುದು ಎಂದಾಗಿದೆ. ಅದೇ ಸಮಯದಲ್ಲಿ, ನೀವು ನಡತೆಯ ಕುರಿತಾದ ದೇವರ ಉನ್ನತ ಮಟ್ಟಗಳನ್ನು ಅನುಸರಿಸಬೇಕು ಮತ್ತು ಅವನ ಚಿತ್ತವನ್ನು ಮಾಡಲು ಪ್ರಯತ್ನಪಡಬೇಕು. (ಯೋಹಾನ 17:14-16; ಚೆಫನ್ಯ 2:2, 3; ಪ್ರಕಟನೆ 21:8) ಈ ವಿಷಯಗಳಲ್ಲಿ ನೀವು ನಿಮ್ಮನ್ನು ಅನ್ವಯಿಸಿಕೊಳ್ಳುವುದು, ಜೀವಿತದ ನಿಮ್ಮ ಮಾರ್ಗದಲ್ಲಿ ಆವಶ್ಯಕವಾದ ಪರಿವರ್ತನೆಗಳನ್ನು ಮಾಡುವುದು ಎಷ್ಟೊಂದು ಪ್ರಾಮುಖ್ಯವೆಂದು ಬೈಬಲ್‌ ಪುಸ್ತಕವಾದ ಪ್ರಕಟನೆಯು ತೋರಿಸುತ್ತದೆ.

2. ಪ್ರಕಟನೆಯ ಮಹಾ ಪ್ರವಾದನೆಯನ್ನು ಅಪೊಸ್ತಲ ಯೋಹಾನನು ಹೇಗೆ ಪ್ರಸ್ತಾಪಿಸುತ್ತಾನೆ, ಮತ್ತು ಈ ಗುರುತರವಾದ ಸಂದೇಶವನ್ನು ದೇವರು ಯಾರಿಗೆ ಕೊಟ್ಟನು?

2 ಅಪೊಸ್ತಲ ಯೋಹಾನನು ಈ ಮಹಾ ಪ್ರವಾದನೆಯನ್ನು ಈ ಮಾತುಗಳಿಂದ ಪ್ರಸ್ತಾಪಿಸುತ್ತಾನೆ: “ಯೇಸು ಕ್ರಿಸ್ತನ ಮೂಲಕ ಬಂದ ಪ್ರಕಟನೆ, ಅವನು ತನ್ನ ದಾಸರಿಗೆ ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತೋರಿಸುವರೆ ದೇವರು ಇದನ್ನು ಅವನಿಗೆ ಕೊಟ್ಟನು.” (ಪ್ರಕಟನೆ 1:1ಎ, NW) ಹಾಗಾದರೆ ದೇವರಿಂದ ಈ ಗುರುತರವಾದ ಸಂದೇಶವನ್ನು ಪಡೆದವನು ಪುನರುತಿತ್ಥ ಯೇಸು ಕ್ರಿಸ್ತನಾಗಿದ್ದನು. ರಹಸ್ಯಾರ್ಥಭರಿತ ತ್ರಯೈಕ್ಯದ ಒಂದು ಭಾಗವಾಗಿರುವುದಕ್ಕೆ ಪ್ರತಿಯಾಗಿ, ಯೇಸುವು ಇಲ್ಲಿ ಅವನ ತಂದೆಗೆ ಅಧೀನನಾಗಿರುವುದನ್ನು ತೋರಿಸಲಾಗಿದೆ. ಅದೇ ರೀತಿಯಲ್ಲಿ ಕ್ರೈಸ್ತ ಸಭೆಯನ್ನುಂಟುಮಾಡುವ “ದಾಸರು” ಕೂಡ ಯೇಸು ಕ್ರಿಸ್ತನಿಗೆ ಅಧೀನರಾಗಿರುತ್ತಾರೆ, ಆ ಮೂಲಕ ಅವರು ‘ಅವನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು.’ (ಪ್ರಕಟನೆ 14:4; ಎಫೆಸ 5:24) ಆದರೆ ಇಂದು ನಿಜವಾಗಿಯೂ ದೇವರ “ದಾಸರು” ಯಾರಾಗಿರುತ್ತಾರೆ, ಮತ್ತು ಪ್ರಕಟನೆಯು ಅವರಿಗೆ ಹೇಗೆ ಪ್ರಯೋಜನದಾಯಕವಾಗುತ್ತದೆ?

3. (ಎ) ಯೇಸು ಕ್ರಿಸ್ತನಿಗೆ ಅಧೀನರಾಗಿರುವ “ದಾಸರು” ಯಾರು? (ಬಿ) ದೇವದೂತರ ಮಾರ್ಗದರ್ಶನೆಯ ಕೆಳಗೆ ನಂಬಿಗಸ್ತ “ದಾಸರು” ಯಾವ ಕೆಲಸವನ್ನು ಮಾಡುತ್ತಾ ಇದ್ದಾರೆ?

3 ಪ್ರಕಟನೆಯನ್ನು ಬರೆದಿಟ್ಟ ಅಪೊಸ್ತಲ ಯೋಹಾನನು, ತನ್ನನ್ನು ಅಂತಹ ಒಬ್ಬ ದಾಸನಾಗಿ ವರ್ಣಿಸುತ್ತಾನೆ. ಇವನು ಕೊನೆಯ ಬದುಕಿ ಉಳಿದಿದ್ದ ಅಪೊಸ್ತಲನಾಗಿದ್ದನು ಮತ್ತು ಪರಲೋಕದಲ್ಲಿ ಅಮರ ಜೀವಕ್ಕೆ ಬಾಧ್ಯಸ್ಥರಾಗುವ ಆಯ್ದು ತೆಗೆದ ಆತ್ಮಾಭಿಷಿಕ್ತ “ದಾಸರ” ಗುಂಪಿನಲ್ಲಿ ಒಬ್ಬನಾಗಿದ್ದನು. ಇಂದು ಇವರಲ್ಲಿ ಭೂಮಿಯ ಮೇಲೆ ಕೇವಲ ಕೆಲವೇ ಸಾವಿರ ಮಂದಿ ಉಳಿದಿರುತ್ತಾರೆ. ದೇವರಿಗೆ ಇತರ ಸೇವಕರು ಕೂಡ ಇರುತ್ತಾರೆ, ಈಗ ಲಕ್ಷಾಂತರ ಸಂಖ್ಯೆಯಲ್ಲಿರುವ ಸ್ತ್ರೀ, ಪುರುಷ ಮತ್ತು ಮಕ್ಕಳ ಸಹಿತ ಒಂದು ಮಹಾ ಸಮೂಹ. ದೇವದೂತರ ಮಾರ್ಗದರ್ಶನೆಯ ಕೆಳಗೆ, ಎಲ್ಲಾ ಮಾನವ ಕುಲಕ್ಕೆ ನಿತ್ಯವಾದ ಶುಭ ವಾರ್ತೆಯನ್ನು ಸಾರುವುದರಲ್ಲಿ ಇವರು ಅಭಿಷಿಕ್ತ “ದಾಸರೊಂದಿಗೆ” ಭಾಗವಹಿಸುತ್ತಾರೆ. ಓ, ರಕ್ಷಣೆಯನ್ನು ಪಡೆಯಲು ಭೂಮಿಯ ದೀನರಿಗೆ ಸಹಾಯ ಕೊಡಲು ಈ ಎಲ್ಲಾ “ದಾಸರು” ತಮ್ಮನ್ನೇ ಎಷ್ಟೊಂದು ನೀಡಿಕೊಳ್ಳುತ್ತಿದ್ದಾರೆ! (ಮತ್ತಾಯ 24:14; ಪ್ರಕಟನೆ 7:9, 14; 14:6) ಸಂತೋಷವನ್ನುಂಟುಮಾಡುವ ಶುಭ ವಾರ್ತೆಯಿಂದ ಪ್ರಯೋಜನ ಪಡೆಯಲು ನೀವೇನು ಮಾಡತಕ್ಕದ್ದು ಎಂಬುದನ್ನು ಪ್ರಕಟನೆಯು ಸೂಚಿಸುತ್ತದೆ.

4. (ಎ) ಪ್ರಕಟನೆಯನ್ನು ಯೋಹಾನನು ಬಹು ಮಟ್ಟಿಗೆ 1,900 ವರ್ಷಗಳ ಹಿಂದೆ ಬರೆದಿರುವಾಗ, “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳ” ಕುರಿತಾಗಿ ಅವನು ಮಾತಾಡಲು ಹೇಗೆ ಶಕ್ತನಾದನು? (ಬಿ) ಮುಂತಿಳಿಸಿದ ಸಂಗತಿಗಳ ಕುರಿತಾಗಿ ರುಜುವಾತು ಈಗ ಏನನ್ನು ಸೂಚಿಸುತ್ತದೆ?

4 ಈ “ದಾಸರಿಗೆ” “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ತೋರಿಸಲಾಗುವುದು ಎಂದು ಅಪೊಸ್ತಲ ಯೋಹಾನನು ಹೇಗೆ ಹೇಳಶಕ್ತನಾಗಿದ್ದನು? ಆ ಮಾತುಗಳು ಬಹುಮಟ್ಟಿಗೆ 1,900 ವರ್ಷಗಳ ಹಿಂದೆ ನುಡಿಯಲ್ಪಟ್ಟವುಗಳಲ್ಲವೇ? ಯಾರ ದೃಷ್ಟಿಯಲ್ಲಿ ಒಂದು ಸಾವಿರ ವರ್ಷಗಳು ಕೇವಲ “ನಿನ್ನಿನ ದಿನದಂತೆ” ಇರುತ್ತವೋ, ಆ ಯೆಹೋವನ ದೃಷ್ಟಿಕೋನದಿಂದ 1,900 ವರ್ಷಗಳು, ಭೂಮಿಯನ್ನು ಸೃಷ್ಟಿಸಲು ಮತ್ತು ಅಣಿಗೊಳಿಸಲು ಮತ್ತು ಮಾನವರ ನಿವಾಸಸ್ಥಾನವನ್ನಾಗಿ ಮಾಡಲು ಅವನು ವ್ಯಯಿಸಿದ ಗಣನಾತೀತ ಕಾಲಕ್ಕೆ ಹೋಲಿಸಿದಾಗ, ತುಲನಾತ್ಮಕವಾಗಿ ಕೇವಲ ಕೊಂಚ ಸಮಯವೇ ಆಗಿರುತ್ತದೆ. (ಕೀರ್ತನೆ 90:4) ಅಪೊಸ್ತಲ ಪೌಲನು ತನ್ನ ಸ್ವಂತ “ಬಹಳ ಅಭಿಲಾಷೆ ಮತ್ತು ಆಗುವದೆಂಬ ಭರವಸೆ (ನಿರೀಕ್ಷೆ, NW)”ಯ ಕುರಿತು ಬರೆದನು, ಯಾಕಂದರೆ ಅವನ ಬಹುಮಾನದ ವಾಸ್ತವತೆಯು ಅವನಿಗೆ ಬಹಳ ಸಮೀಪದಲ್ಲಿದೆ ಎಂದು ಭಾಸವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. (ಫಿಲಿಪ್ಪಿ 1:20) ಆದಾಗ್ಯೂ ಇಂದು, ಕಾರ್ಯತಖ್ತೆಯ ಪ್ರಕಾರ ಮುಂತಿಳಿಸಿದ ಎಲ್ಲಾ ಸಂಗತಿಗಳು ಸಂಭವಿಸುವವು ಎಂಬುದಕ್ಕೆ ಸಾಕ್ಷ್ಯಗಳು ವಿಪುಲವಾಗಿ ಇವೆ. ಮಾನವ ಕುಲದ ಪಾರಾಗುವಿಕೆಯ ಕುರಿತಾದ ಪ್ರಶ್ನೆಯು ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ನಷ್ಟ ಶಂಕೆಗೆ ಈಡಾಗಿರಲಿಲ್ಲ. ಕೇವಲ ದೇವರ ಹತ್ತಿರ ಪರಿಹಾರ ಇದೆ!—ಯೆಶಾಯ 45:21.

ಸಂಪರ್ಕದ ಸಾಧನ

5. ಅಪೊಸ್ತಲ ಯೋಹಾನನಿಗೆ, ಮತ್ತು ತದನಂತರ ಸಭೆಗಳಿಗೆ ಪ್ರಕಟನೆಯನ್ನು ಹೇಗೆ ದಾಟಿಸಲಾಯಿತು?

5ಪ್ರಕಟನೆ 1:1ಬಿ, 2 ಮುಂದರಿಸುವುದು: “ಮತ್ತು ಆತನು [ಯೇಸುವು] ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಅದನ್ನು [ಪ್ರಕಟನೆಯನ್ನು] ತನ್ನ ದಾಸನಾದ ಯೋಹಾನನಿಗೆ ಸಂಕೇತಗಳಲ್ಲಿ ನೀಡಿದನು, ಅವನು ದೇವರು ಕೊಟ್ಟ ವಾಕ್ಯಕ್ಕೆ ಮತ್ತು ಯೇಸು ಕ್ರಿಸ್ತನು ಕೊಟ್ಟ ಸಾಕ್ಷಿಗೆ, ಅವನು ನೋಡಿದ ಸಕಲ ವಿಷಯಗಳಿಗೆ ಕೂಡ ಸಾಕ್ಷ್ಯ ಕೊಟ್ಟನು.” [NW] ಈ ರೀತಿಯಲ್ಲಿ, ಸಂದೇಶವಾಹಕನಾಗಿದ್ದ ಒಬ್ಬ ದೇವದೂತನಿಂದ ಯೋಹಾನನು ಪ್ರೇರಿತ ದಾಖಲೆಯನ್ನು ಪಡೆದನು. ಅವನದನ್ನು ಸುರುಳಿಯೊಂದರಲ್ಲಿ ಬರೆದು, ಅವನ ಸಮಯದಲ್ಲಿದ್ದ ಸಭೆಗಳಿಗೆ ರವಾನಿಸಿದನು. ಸಂತೋಷಕರವಾಗಿಯೇ ನಮಗೆ, ಇಂದು ಭೂಮಿಯಲ್ಲಿರುವ ಐಕ್ಯಗೊಂಡಿರುವ ಅವನ ಸೇವಕರ 73,000 ಕ್ಕಿಂತಲೂ ಹೆಚ್ಚು ಸಭೆಗಳ ಪ್ರೋತ್ಸಾಹನೆಗಾಗಿ ದೇವರು ಅದನ್ನು ಸಂರಕ್ಷಿಸಿ ಇಟ್ಟಿರುತ್ತಾನೆ.

6. ಇಂದಿನ ತನ್ನ ‘ದಾಸರಿಗೆ’ ಆತ್ಮಿಕ ಆಹಾರವನ್ನು ಒದಗಿಸಲು ತಾನು ಉಪಯೋಗಿಸುವ ಸಂಪರ್ಕ ಸಾಧನವನ್ನು ಯೇಸುವು ಗುರುತಿಸಿದ್ದು ಹೇಗೆ?

6 ಯೋಹಾನನ ದಿನಗಳಲ್ಲಿ ಪ್ರಕಟನೆಯನ್ನು ಕೊಡಲು ದೇವರಿಗೆ ಒಂದು ಸಂಪರ್ಕ ಸಾಧನ ಇತ್ತು, ಮತ್ತು ಯೋಹಾನನು ಆ ಸಂಪರ್ಕ ಸಾಧನದ ಐಹಿಕ ಭಾಗವಾಗಿದ್ದನು. ತದ್ರೀತಿಯಲ್ಲಿ, ಇಂದು ಅವನ ‘ದಾಸರಿಗೆ’ ಆತ್ಮಿಕ ಪೌಷ್ಟಿಕಾಹಾರವನ್ನು ಕೊಡಲು ದೇವರಿಗೆ ಒಂದು ಸಂಪರ್ಕ ಸಾಧನ ಇದೆ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಅವನ ಮಹಾ ಪ್ರವಾದನೆಯಲ್ಲಿ, ಯೇಸುವು ಈ ಸಂಪರ್ಕ ಸಾಧನದ ಐಹಿಕ ಭಾಗವನ್ನು “ಯಜಮಾನನು ತನ್ನ ಮನೆಯವರಿಗೆ ಹೊತ್ತುಹೊತ್ತಿಗೆ ಆಹಾರಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಗುರುತಿಸಿದ್ದಾನೆ. (ಮತ್ತಾಯ 24:3, 45-47) ಪ್ರವಾದನೆಯ ಅರ್ಥ ಬಿಡಿಸಲು ಈ ಯೋಹಾನ ವರ್ಗವನ್ನು ಅವನು ಉಪಯೋಗಿಸುತ್ತಾನೆ.

7. (ಎ) ಪ್ರಕಟನೆಯಲ್ಲಿ ಕಂಡುಬರುವ ಸಂಕೇತಗಳು ನಮ್ಮನ್ನು ಹೇಗೆ ತಟ್ಟತಕ್ಕದ್ದು? (ಬಿ) ಪ್ರಕಟನೆಯ ದರ್ಶನಗಳ ನೆರವೇರಿಕೆಯಲ್ಲಿ ಎಷ್ಟು ಸಮಯದಿಂದ ಯೋಹಾನ ವರ್ಗದ ಕೆಲವರು ಭಾಗವಹಿಸಿರುತ್ತಾರೆ?

7 ಯೇಸುವು ಪ್ರಕಟನೆಯನ್ನು “ಸಂಕೇತಗಳಲ್ಲಿ” ಯಾ ಚಿಹ್ನೆಗಳಲ್ಲಿ ಸಾದರ ಪಡಿಸಿದನು ಎಂದು ಅಪೊಸ್ತಲ ಯೋಹಾನನು ಬರೆಯುತ್ತಾನೆ. ಇವು ಪರೀಕ್ಷಿಸಲು ಉಜ್ವಲವೂ ರೋಮಾಂಚಕಾರಿಯೂ ಆಗಿವೆ. ಅವು ಶಕ್ತಿಶಾಲಿ ಚಟುವಟಿಕೆಯನ್ನು ಚಿತ್ರಿಸುತ್ತವೆ ಮತ್ತು ಸರದಿಯಾಗಿ, ಈ ಪ್ರವಾದನೆಯನ್ನು ಮತ್ತು ಅದರ ಅರ್ಥವನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ಹುರುಪಿನ ಪ್ರಯತ್ನಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು. ಪ್ರಕಟನೆಯು ಅನೇಕ ವಿದ್ಯುದಾವೇಗವುಂಟುಮಾಡುವ ದರ್ಶನಗಳನ್ನು ನಮಗಾಗಿ ಸಾದರಪಡಿಸುತ್ತದೆ, ಇದರ ಪ್ರತಿಯೊಂದರಲ್ಲಿ ಸಚೇತಕನಾಗಿಯೋ ಒಬ್ಬ ಅವಲೋಕಿಸುವವನಾಗಿಯೋ ಯೋಹಾನನು ಭಾಗವಹಿಸಿದನು. ಯಾರಲ್ಲಿ ಕೆಲವರು ಈ ದರ್ಶನಗಳ ನೆರವೇರಿಕೆಯಲ್ಲಿ 70 ವರ್ಷಗಳಿಗಿಂತ ಹೆಚ್ಚು ಕಾಲ ಭಾಗವಹಿಸಿದರೋ ಆ ಯೋಹಾನ ವರ್ಗದವರು, ಸಂತೋಷಿಗಳಾಗಿದ್ದಾರೆ ಯಾಕಂದರೆ ಅವರು ಇತರರಿಗೆ ಅದನ್ನು ವಿವರಿಸಲು ಶಕ್ತರಾಗುವಂತೆ ದೇವರ ಆತ್ಮವು ಅರ್ಥವನ್ನು ಬಿಚ್ಚಿದೆ.

8. (ಎ) ಪ್ರಕಟನೆಯ ಪ್ರತಿಯೊಂದು ದರ್ಶನದ ವೈಶಿಷ್ಟ್ಯವೇನು? (ಬಿ) ಪ್ರಕಟನೆಯ ಮೃಗಗಳ ಗುರುತಿಸುವಿಕೆಯನ್ನು ತಿಳಿಯಲು ದಾನಿಯೇಲನ ಪ್ರವಾದನೆಯು ನಮಗೆ ಹೇಗೆ ಸಹಾಯ ಮಾಡುತ್ತದೆ?

8 ಪ್ರಕಟನೆಯ ಈ ದರ್ಶನಗಳನ್ನು ಕಾಲಗಣನ ಕ್ರಮಕ್ಕನುಸಾರವಾಗಿ ಸಾದರಪಡಿಸಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ನೆರವೇರಿಕೆಯ ಸಮಯಾವಧಿ ಇದೆ. ಅನೇಕ ದರ್ಶನಗಳು, ಅವುಗಳ ಅರ್ಥವಿವರಣೆಗೆ ಸುಳಿವುಗಳನ್ನು ಒದಗಿಸುವ ಮುಂಚಿನ ಪ್ರವಾದನೆಗಳ ಮಾತುಗಳನ್ನು ಪ್ರತಿಧ್ವನಿಸುತ್ತವೆ. ಉದಾಹರಣೆಗೆ, ದಾನಿಯೇಲನ ಪ್ರವಾದನೆಯಲ್ಲಿ ವಿಲಕ್ಷಣವಾದ ಮೃಗಗಳನ್ನು ವರ್ಣಿಸಲಾಗಿದೆ, ಇವುಗಳು ಭೂಮಿಯನ್ನಾಳುವ ಶಕ್ತಿಗಳನ್ನು ಚಿತ್ರಿಸುತ್ತವೆ ಎಂದು ವಿವರಿಸಲಾಗಿದೆ. ಆದಕಾರಣ, ಪ್ರಕಟನೆಯಲ್ಲಿರುವ ಮೃಗಗಳು ಈಗ ಇರುವವುಗಳ ಸಹಿತ, ರಾಜಕೀಯ ಅಸ್ತಿತ್ವವುಳ್ಳವುಗಳು ಎಂದು ನಾವು ತಿಳಿದುಕೊಳ್ಳುವಂತೆ ಸಹಾಯ ಮಾಡಲ್ಪಡುತ್ತೇವೆ.—ದಾನಿಯೇಲ 7:1-8, 17; ಪ್ರಕಟನೆ 13:2, 11-13; 17:3.

9. (ಎ) ಯೋಹಾನನಂತೆ, ಯಾವ ಮನೋಭಾವವನ್ನು ಯೋಹಾನ ವರ್ಗದವರು ತೋರಿಸಿರುತ್ತಾರೆ? (ಬಿ) ಸಂತೋಷಿಗಳಾಗಲು ನಮಗೆ ಮಾರ್ಗವನ್ನು ಯೋಹಾನನು ಹೇಗೆ ತೋರಿಸುತ್ತಾನೆ?

9 ಯೇಸು ಕ್ರಿಸ್ತನ ಮೂಲಕ ದೇವರು ಅವನಿಗೆ ಕೊಟ್ಟ ಸಂದೇಶಕ್ಕೆ ಸಾಕ್ಷಿಯನ್ನು ಕೊಡುವುದರಲ್ಲಿ ಯೋಹಾನನು ನಂಬಿಗಸ್ತನಾಗಿದ್ದನು. “ಅವನು ಕಂಡದ್ದನ್ನೆಲ್ಲಾ” ಸವಿವರವಾಗಿ ವರ್ಣಿಸಿದನು. ಯೋಹಾನ ವರ್ಗದವರು ಪ್ರವಾದನೆಯನ್ನು ಪೂರ್ಣವಾಗಿ ತಿಳಿದು ಕೊಳ್ಳಲು ಮತ್ತು ದೇವರ ಜನರಿಗೆ ಅದರ ಉತ್ತಮ ವಿಚಾರಗಳನ್ನು ತಿಳಿಸಲು, ದೇವರಿಂದ ಮತ್ತು ಯೇಸು ಕ್ರಿಸ್ತನಿಂದ ಮಾರ್ಗದರ್ಶನೆಯನ್ನು ಶೃದ್ಧಾಪೂರ್ವಕವಾಗಿ ಅನ್ವೇಷಿಸಿದ್ದಾರೆ. ಅಭಿಷಿಕ್ತ ಸಭೆಯ (ಮತ್ತು ಮಹಾ ಸಂಕಟದಲ್ಲಿ ದೇವರು ಜೀವಂತವಾಗಿ ಸಂರಕ್ಷಿಸುವ ಅಂತಾರಾಷ್ಟ್ರೀಯ ಮಹಾ ಸಮೂಹದವರ ಕೂಡ) ಪ್ರಯೋಜನಾರ್ಥವಾಗಿ, ಯೋಹಾನನು ಬರೆಯುವುದು: “ಈ ಪ್ರವಾದನಾ ಮಾತುಗಳನ್ನು ಗಟ್ಟಿಯಾಗಿ ಓದುವವನೂ ಮತ್ತು ಕೇಳುವವರೂ, ಮತ್ತು ಅದರಲ್ಲಿ ಬರೆದಿರುವ ಸಂಗತಿಗಳನ್ನು ಕೈಕೊಂಡು ನಡೆಯುವವರೂ ಸಂತೋಷಿಗಳು; ಯಾಕಂದರೆ ನೇಮಿತ ಸಮಯವು ಸಮೀಪವಿದೆ.”—ಪ್ರಕಟನೆ 1:3, NW. 

10. ಸಂತೋಷವನ್ನು ಪಡೆಯಲು ಪ್ರಕಟನೆಯ ಸಂಬಂಧದಲ್ಲಿ ನಾವೇನು ಮಾಡತಕ್ಕದ್ದು?

10 ಪ್ರಕಟನೆಯನ್ನು ಓದುವುದರ ಮೂಲಕ ನೀವು ಬಹಳವಾಗಿ ಪ್ರಯೋಜನ ಪಡೆಯುವಿರಿ ಮತ್ತು ಅದರಲ್ಲಿ ಬರೆದಿರುವ ಸಂಗತಿಗಳನ್ನು ಕೈಕೊಂಡು ನಡೆಯುವುದರಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಯೋಹಾನನು ಅವನ ಪತ್ರಗಳಲ್ಲೊಂದರಲ್ಲಿ ವಿವರಿಸುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ; ಮತ್ತು ಆತನ ಆಜ್ಞೆಗಳು ಭಾರವಾದವುಗಳಲ್ಲ, ಯಾಕಂದರೆ ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸುವಂಥದು ನಮ್ಮ ನಂಬಿಕೆಯೇ.” (1 ಯೋಹಾನ 5:3, 4) ಅಂತಹ ನಂಬಿಕೆಯನ್ನು ಕಟ್ಟಿಕೊಳ್ಳುವುದರ ಮೂಲಕ ನೀವು ಉತ್ಕೃಷ್ಟವಾಗಿ ಸಂತೋಷಿಗಳಾಗ ಸಾಧ್ಯವಿದೆ!

11. (ಎ) ಪ್ರವಾದನೆಯ ಮಾತುಗಳನ್ನು ನಾವು ಕೈಕೊಂಡು ನಡೆಯುವುದು ಯಾಕೆ ತುರ್ತಿನದ್ದಾಗಿದೆ? (ಬಿ) ಯಾವ ಸಮಯವು ಅಪಾಯಕಾರಿಯಾಗಿ ಸಮೀಪಿಸುತ್ತಿರಬೇಕು?

11 ಪ್ರವಾದನೆಯ ಮಾತುಗಳನ್ನು ನಾವು ಕೈಕೊಂಡು ನಡೆಯುವುದು ಬಹಳ ತುರ್ತಿನದ್ದಾಗಿದೆ, “ಯಾಕಂದರೆ ನೇಮಿತ ಸಮಯವು ಸಮೀಪವಾಗಿದೆ.” ನೇಮಿತ ಸಮಯ ಯಾವುದಕ್ಕೆ? ದೇವರ ನ್ಯಾಯತೀರ್ಪಿನ ಸಹಿತ ಪ್ರಕಟನೆಯ ಪ್ರವಾದನೆಗಳ ನೆರವೇರಿಕೆಗೆ. ಸೈತಾನನ ಲೋಕ ವ್ಯವಸ್ಥೆಯ ಮೇಲೆ ಕೊನೆಯ ನ್ಯಾಯ ತೀರ್ಪನ್ನು ಜಾರಿಗೊಳಿಸುವ ದೇವರ ಮತ್ತು ಯೇಸು ಕ್ರಿಸ್ತನ ಸಮಯವು ಹತ್ತರಿಸಿದೆ. ಯೇಸುವು ಭೂಮಿಯ ಮೇಲೆ ಇದ್ದಾಗ, ಕೇವಲ ಅವನ ತಂದೆಯು “ಆ ದಿನ ಮತ್ತು ತಾಸಿನ” ಕುರಿತು ತಿಳಿದವನಾಗಿದ್ದಾನೆಂದು ಹೇಳಿದನು. ಮೊದಲನೆಯ ಲೋಕ ಯುದ್ಧದಂದಿನಿಂದ ಭೂಮಿಯ ಮೇಲೆ ಸಂಕಷ್ಟಗಳು ವೃದ್ಧಿಗೊಳ್ಳುವುದನ್ನು ಮುನ್ನೋಡಿದ ಅನಂತರ, ಯೇಸುವು ಇದನ್ನೂ ಹೇಳಿದನು: “ಇದೆಲ್ಲಾ (ಇವೆಲ್ಲಾ ಸಂಗತಿಗಳು, NW) ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ.” ಆದುದರಿಂದ ದೇವರ ತೀರ್ಪನ್ನು ಜಾರಿಗೊಳಿಸುವ ನೇಮಿತ ಸಮಯವು ಅಪಾಯಕಾರಿಯಾಗುವಷ್ಟು ಸಮೀಪ ಬರುತ್ತಿರಬೇಕು. (ಮಾರ್ಕ 13:8, 30-32) ಹಬಕ್ಕೂಕ 2:3 ಹೇಳುವಂತೆ ಅದಿದೆ: “ಅದು (ದರ್ಶನವು, NW) ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆ ಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವುದು, ತಾಮಸವಾಗದು.” ಮಹಾ ಸಂಕಟದಿಂದ ನಮ್ಮ ರಕ್ಷಣೆಯು, ದೇವರ ಪ್ರವಾದನಾ ಮಾತನ್ನು ನಾವು ಕೈಕೊಂಡು ನಡೆಯುವುದರ ಮೇಲೆ ಆಧಾರಿತವಾಗಿದೆ.—ಮತ್ತಾಯ 24:20-22.

[ಅಧ್ಯಯನ ಪ್ರಶ್ನೆಗಳು]

[ಪುಟ 26 ರಲ್ಲಿರುವ ಚೌಕ]

ಪ್ರಕಟನೆಯ ಪುಸ್ತಕವನ್ನು ತಿಳಿದುಕೊಳ್ಳಲು ನಮಗೆ ಇವು ಆವಶ್ಯಕ:

• ಯೆಹೋವನ ಆತ್ಮದ ಸಹಾಯವನ್ನು ಪಡೆಯುವುದು

• ಕರ್ತನ ದಿನವು ಯಾವಾಗ ಆರಂಭಗೊಂಡಿತು ಎಂದು ವಿವೇಚಿಸುವುದು

• ಇಂದಿನ ನಂಬಿಗಸ್ತನೂ, ವಿವೇಕಿಯೂ ಆದ ಆಳನ್ನು ಅಂಗೀಕರಿಸುವುದು