ಬೈಬಲಿನ ಮಹಾ ಮುಖ್ಯವಿಷಯ
ಅಧ್ಯಾಯ 2
ಬೈಬಲಿನ ಮಹಾ ಮುಖ್ಯವಿಷಯ
ಶಾಸ್ತ್ರಗ್ರಂಥಗಳ ಅರ್ಥ ವಿವರಣೆ ಮಾಡುವುದು ಪ್ರಕಟನೆ ಪುಸ್ತಕದಲ್ಲಿ ಅಡಕವಾಗಿರುವ ರಹಸ್ಯಗಳು ಬೈಬಲಿನ ಯಥಾರ್ಥ ವಿದ್ಯಾರ್ಥಿಗಳನ್ನು ದೀರ್ಘಕಾಲದಿಂದ ಸಾರ್ಥಕ್ಯವಿಲ್ಲದೆ ಒದ್ದಾಡುವಂತೆ ಮಾಡಿದೆ. ದೇವರ ತಕ್ಕ ಸಮಯದಲ್ಲಿ, ಆ ರಹಸ್ಯಗಳು ತೆರೆಯಲ್ಪಡಬೇಕಾಗಿದ್ದವು, ಆದರೆ ಹೇಗೆ, ಯಾವಾಗ, ಮತ್ತು ಯಾರಿಗೆ? ನೇಮಿತ ಸಮಯವು ಹತ್ತರಿಸಿದಂತೆ, ಕೇವಲ ದೇವರ ಆತ್ಮವು ಅರ್ಥವನ್ನು ತಿಳಿಯುವಂತೆ ಮಾಡಶಕ್ತವಾಗಿದೆ. (ಪ್ರಕಟನೆ 1:3) ಭೂಮಿಯಲ್ಲಿರುವ ದೇವರ ಹುರುಪುಳ್ಳ ದಾಸರಿಗೆ ಈ ಪವಿತ್ರ ರಹಸ್ಯಗಳು ಪ್ರಕಟಿಸಲ್ಪಡುವವು, ಆ ಮೂಲಕ ಅವನ ನ್ಯಾಯತೀರ್ಪನ್ನು ಪ್ರಚುರ ಪಡಿಸಲು ಅವರು ಬಲಗೊಳಿಸಲ್ಪಡಲಿರುವರು. (ಹೋಲಿಸಿರಿ ಮತ್ತಾಯ 13:10, 11.) ಈ ಪ್ರಕಾಶನದಲ್ಲಿರುವ ವಿವರಣೆಗಳು ತಪ್ಪೇ ಆಗದವುಗಳು ಎಂದು ವಾದಿಸಲ್ಪಡುವುದಿಲ್ಲ. ಪುರಾತನದ ಯೋಸೇಫನಂತೆ, ನಾವನ್ನುವುದು: “ಅರ್ಥ ವಿವರಣೆಯು ದೇವರಿಗೆ ಸೇರಿದ್ದಲ್ಲವೇ?” (ಆದಿಕಾಂಡ 40:8, NW) ಆದಾಗ್ಯೂ ಅದೇ ಸಮಯದಲ್ಲಿ, ಇಲ್ಲಿ ಸಾದರಪಡಿಸಲಾದ ವಿವರಣೆಗಳು ಅದರ ಪೂರ್ತಿಯಲ್ಲಿ ಬೈಬಲಿನೊಂದಿಗೆ ಸಹಮತದಲ್ಲಿವೆ ಎಂದು ನಾವು ಸ್ಥಿರವಾಗಿ ನಂಬುತ್ತೇವೆ, ಆ ಮೂಲಕ ನಮ್ಮ ದುರಂತಮಯ ಸಮಯಗಳ ಲೋಕ ಘಟನೆಗಳ ದೈವಿಕ ಪ್ರವಾದನೆಗಳು ವಿಶಿಷ್ಟವಾಗಿ ನೆರವೇರಿರುವ ವಿಧವನ್ನು ತೋರಿಸುತ್ತವೆ.
1. ಯೆಹೋವನ ಮಹಾ ಉದ್ದೇಶವೇನು?
ಬೈಬಲಿನ ಒಂದು ಜ್ಞಾನೋಕ್ತಿಯು ಹೇಳುವುದು: “ಒಂದು ಸಂಗತಿಯ ಆರಂಭಕ್ಕಿಂತ ಅನಂತರದ ಅಂತ್ಯವು ಲೇಸು.” (ಪ್ರಸಂಗಿ 7:8, NW) ಪ್ರಕಟನೆಯ ಪುಸ್ತಕದಲ್ಲಿ, ಎಲ್ಲಾ ಸೃಷ್ಟಿಯ ಮುಂದೆ ತನ್ನ ನಾಮವನ್ನು ಪವಿತ್ರೀಕರಿಸುವ ಯೆಹೋವನ ಮಹತ್ತಾದ ಉದ್ದೇಶದ ನಾಟಕೀಯ ಪರಾಕಾಷ್ಠೆಯನ್ನು ನಾವು ಓದುತ್ತೇವೆ. ತನ್ನ ಮುಂಚಿನ ಪ್ರವಾದಿಗಳಲ್ಲೊಬ್ಬನಿಂದ ಮತ್ತೆ ಮತ್ತೆ, ದೇವರು ಘೋಷಿಸಿದಂತೆ: “ನಾನೇ ಯೆಹೋವನು ಎಂದು ಆಗ ಅವರು ತಿಳುಕೊಳ್ಳುವರು.”—ಯೆಹೆಜ್ಕೇಲ 25:17; 38:23.
2. ಬೈಬಲಿನ ಮುಂಚಿನ ಪುಸ್ತಕಗಳೊಂದಿಗೆ, ಪ್ರಕಟನೆಯು ಸಂತೃಪ್ತಿಯನ್ನೀಯುವ ಯಾವ ಜ್ಞಾನವನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ?
2 ಸಂಗತಿಗಳ ಒಂದು ವಿಜಯಕಾರೀ ಮುಕ್ತಾಯವನ್ನು ಪ್ರಕಟನೆಯು ಬಿಡಿಸಿ ಹೇಳುವಂತೆಯೇ, ಅವುಗಳ ಆರಂಭವು ಬೈಬಲಿನ ಮೊದಲಿನ ಪುಸ್ತಕಗಳಲ್ಲಿ ನಮಗಾಗಿ ವಿವರಿಸಲ್ಪಟ್ಟಿದೆ. ಈ ದಾಖಲೆಯನ್ನು ಪರೀಕ್ಷಿಸುವುದರ ಮೂಲಕ, ಒಳಗೂಡಿರುವ ವಾದಾಂಶಗಳನ್ನು ತಿಳಿದುಕೊಳ್ಳಲು ಮತ್ತು ದೇವರ ಉದ್ದೇಶಗಳ ಸಮಗ್ರ ದೃಷ್ಟಿಕೋನವನ್ನು ಪಡೆಯಲು ನಮಗೆ ಶಕ್ಯವಾಗುತ್ತದೆ. ಇದು ಎಷ್ಟೊಂದು ಸಂತೃಪ್ತಿಕರವಾಗಿರುತ್ತದೆ! ಇನ್ನೂ ಹೆಚ್ಚಾಗಿ, ಇದು ನಮ್ಮನ್ನು ಕ್ರಿಯೆಗೈಯುವಂತೆ ಕೀರ್ತನೆ 145:16, 20) ಈ ಬಿಂದುವಿನಲ್ಲಿ, ಸಂಪೂರ್ಣ ಬೈಬಲಿನ ಹಿನ್ನೆಲೆಯನ್ನು ಮತ್ತು ಮುಖ್ಯ ವಿಷಯವನ್ನು ಚರ್ಚಿಸುವುದು ಯುಕ್ತವೆಂದು ತೋರುತ್ತದೆ, ಇದರಿಂದ ಮಾನವ ಕುಲವನ್ನು ಎದುರಿಸುತ್ತಿರುವ ಒಂದು ಪರಮ ಶ್ರೇಷ್ಠ ವಾದಾಂಶವನ್ನು, ಮತ್ತು ಆ ವಾದಾಂಶವನ್ನು ಬಗೆಹರಿಸಲು ದೇವರ ಸ್ಪಷ್ಟವಾಗಿ ನಮೂದಿಸಲ್ಪಟ್ಟ ಉದ್ದೇಶವನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬಹುದು.
ಪ್ರಚೋದಿಸಬೇಕು, ಆ ಮೂಲಕ ಮಾನವ ಕುಲಕ್ಕೆ ಕಾದಿರುವ ಅದ್ಭುತಕರ ಭವಿಷ್ಯತ್ತಿನಲ್ಲಿ ನಾವು ಪಾಲಿಗರಾಗಬಹುದು. (3. ಪ್ರಕಟನೆಯ ಸಹಿತ, ಸಂಪೂರ್ಣ ಬೈಬಲಿಗೆ ಆದಿಕಾಂಡ ಪುಸ್ತಕದಲ್ಲಿರುವ ಯಾವ ಪ್ರವಾದನೆಯು ಒಂದು ಮುಖ್ಯ ವಿಷಯವನ್ನು ಒದಗಿಸುತ್ತದೆ?
3 ಬೈಬಲಿನ ಮೊದಲಿನ ಪುಸ್ತಕವಾದ ಆದಿಕಾಂಡವು, “ಆದಿಯ” ಕುರಿತು ಹೇಳುತ್ತದೆ ಮತ್ತು ಆತನ ಭೂಮಿಯ ಮುಕುಟಪ್ರಾಯ ಸೃಷ್ಟಿಯಾಗಿರುವ ಮನುಷ್ಯನ ಸಹಿತ, ದೇವರ ಸೃಷ್ಟಿ ಕಾರ್ಯಗಳನ್ನು ವರ್ಣಿಸುತ್ತದೆ. ಸುಮಾರು 6,000 ವರ್ಷಗಳ ಹಿಂದೆ ಏದೆನ್ ಉದ್ಯಾನದಲ್ಲಿ ದೇವರಿಂದ ಸ್ವತಃ ನುಡಿಯಲ್ಪಟ್ಟ ಮೊತ್ತ ಮೊದಲ ದೈವಿಕ ಪ್ರವಾದನೆಯನ್ನು ಆದಿಕಾಂಡವು ಸಾದರ ಪಡಿಸುತ್ತದೆ. ಮೊದಲನೆಯ ಸ್ತ್ರೀಯಾದ ಹವ್ವಳನ್ನು ವಂಚಿಸಲು ಒಂದು ಸರ್ಪವನ್ನು ಆಗ ತಾನೇ ಉಪಯೋಗಿಸಲಾಗಿತ್ತು; ಅವಳು ಪ್ರತಿಯಾಗಿ ತನ್ನ ಗಂಡನಾದ ಆದಾಮನು “ಒಳ್ಳೇದರ ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ” [NW] ತಿನ್ನುವುದರ ಮೂಲಕ ಯೆಹೋವನ ನಿಯಮವನ್ನು ಭಂಗಪಡಿಸುವುದರಲ್ಲಿ ಅವಳೊಂದಿಗೆ ಸೇರಿಕೊಳ್ಳುವಂತೆ ಒಡಂಬಡಿಸಿದಳು. ಪಾಪಪೂರಿತ ದಂಪತಿಗಳ ಮೇಲೆ ತನ್ನ ನ್ಯಾಯತೀರ್ಪನ್ನು ವಿಧಿಸುತ್ತಾ, ದೇವರು ಸರ್ಪನಿಗೆ ಅಂದದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಅವನ ಹಿಮ್ಮಡಿಯನ್ನು ಕಚ್ಚುವಿ.” [NW] (ಆದಿಕಾಂಡ 1:1; 2:17; 3:1-6, 14, 15) ಆ ಪ್ರವಾದನೆಯು ಪ್ರಕಟನೆಯನ್ನು ಒಳಗೊಂಡು, ಪೂರ್ಣ ಬೈಬಲಿಗೆ ಮುಖ್ಯ ವಿಷಯವನ್ನು ಇರಿಸುತ್ತದೆ.
4. (ಎ) ದೇವರು ಮೊದಲ ಪ್ರವಾದನೆಯನ್ನು ಉಚ್ಚರಿಸಿದ ನಂತರ, ನಮ್ಮ ಮೊದಲ ಹೆತ್ತವರಿಗೆ ಏನು ಸಂಭವಿಸಿತು? (ಬಿ) ಮೊದಲನೆಯ ಪ್ರವಾದನೆಯ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ, ಮತ್ತು ಉತ್ತರಗಳನ್ನು ನಾವು ತಿಳಿಯುವ ಆವಶ್ಯಕತೆಯಿದೆ ಯಾಕೆ?
4 ಈ ಪ್ರವಾದನೆಯನ್ನು ಉಚ್ಚರಿಸಿಯಾದ ತಕ್ಷಣವೇ, ದೇವರು ನಮ್ಮ ಮೊದಲ ಹೆತ್ತವರನ್ನು ಏದೆನ್‌ನಿಂದ ಹೊರದಬ್ಬಿದನು. ಪ್ರಮೋದವನದಲ್ಲಿ ನಿತ್ಯಜೀವವನ್ನು ಅವರು ಇನ್ನು ಮುಂದೆ ಮುನ್ನೋಡಲು ಸಾಧ್ಯವಿರಲಿಲ್ಲ; ಸಿದ್ಧಪಡಿಸದೆ ಇದ್ದ ಭೂಮಿಯಲ್ಲಿ ಹೊರಗಡೆ ಅವರು ತಮ್ಮ ಜೀವಿತಗಳನ್ನು ವ್ಯಯಿಸಬೇಕಿತ್ತು. ಮರಣ ಶಿಕ್ಷೆಯ ಕೆಳಗೆ, ಅವರು ಪಾಪ ಹೊತ್ತ ಮಕ್ಕಳನ್ನು ಹುಟ್ಟಿಸಲಿಕ್ಕಿದ್ದರು. (ಆದಿಕಾಂಡ 3:23–4:1; ರೋಮಾಪುರ 5:12) ಆದಾಗ್ಯೂ, ಏದೆನಿನ ಪ್ರವಾದನೆಯ ಅರ್ಥವೇನು? ಅದರಲ್ಲಿ ಯಾರು ಒಳಗೂಡಿರುತ್ತಾರೆ? ಅದು ಪ್ರಕಟನೆಯೊಂದಿಗೆ ಹೇಗೆ ಜೋಡಿಸಲ್ಪಟ್ಟಿದೆ? ಅದರಲ್ಲಿ ಇಂದು ನಮಗಾಗಿ ಯಾವ ಸಂದೇಶ ಇದೆ? ಆ ಪ್ರವಾದನೆಯನ್ನು ಯೆಹೋವನು ಉಚ್ಚರಿಸುವಂತೆ ನಡಿಸಿದ ದುರಂತಮಯ ಘಟನೆಯ ಪರಿಣಾಮಗಳಿಂದ ವೈಯಕ್ತಿಕ ಬಿಡುಗಡೆಯನ್ನು ಪಡೆಯಲು, ಈ ಪ್ರಶ್ನೆಗಳ ಉತ್ತರಗಳನ್ನು ನಾವು ತಿಳಿಯುವುದು ಅತ್ಯಾವಶ್ಯಕ ಆಸ್ಥೆಯದ್ದಾಗಿದೆ.
ನಾಟಕದಲ್ಲಿರುವ ಪ್ರಮುಖರು
5. ಸರ್ಪವು ಹವ್ವಳನ್ನು ವಂಚಿಸಿದಾಗ, ದೇವರ ಸಾರ್ವಭೌಮತ್ವ ಮತ್ತು ಆತನ ನಾಮದ ಕುರಿತು ಏನು ವಿಕಾಸಗೊಂಡಿತು, ಮತ್ತು ಈ ವಿವಾದವು ಬಗೆಹರಿಸಲ್ಪಡುವುದು ಹೇಗೆ?
5ಆದಿಕಾಂಡ 3:15ರ ಪ್ರವಾದನೆಯು ಹವ್ವಳೊಡನೆ ಸುಳ್ಳನ್ನಾಡಿದ ಸರ್ಪನೆಡೆಗೆ ಸಂಬೋಧಿಸಲ್ಪಟ್ಟಿದೆ, ಅವಳ ಅವಿಧೇಯತೆಗಾಗಿ ಅವಳು ಸಾಯುವುದಿಲ್ಲ, ಬದಲು ಅವಳು ಸ್ವತಂತ್ರಳಾದ ಒಬ್ಬ ದೇವಿಯಾಗುವಳು ಎಂದು ಅವಳಿಗೆ ಸೂಚಿಸಲ್ಪಟ್ಟಿತು. ಈ ರೀತಿಯಲ್ಲಿ ಸರ್ಪವು ಯೆಹೋವನನ್ನು ಒಬ್ಬ ಸುಳ್ಳುಗಾರನನ್ನಾಗಿ ಮಾಡಿತು ಮತ್ತು ಅವನ ಅತಿ ಶ್ರೇಷ್ಠ ಪ್ರಭುತ್ವವನ್ನು ತಿರಸ್ಕರಿಸುವುದರ ಮೂಲಕ ಮಾನವರು ಅವರ ಸ್ಥಿತಿಯನ್ನು ಸುಧಾರಿಸಬಹುದು ಎಂಬ ಅಭಿಪ್ರಾಯವನ್ನು ಅಪ್ರತ್ಯಕ್ಷವಾಗಿ ಸೂಚಿಸಿತು. (ಆದಿಕಾಂಡ 3:1-5) ಯೆಹೋವನ ಸಾರ್ವಭೌಮತೆಯು ಪಂಥಾಹ್ವಾನಕ್ಕೊಡ್ಡಲ್ಪಟ್ಟಿತು ಮತ್ತು ಅವನ ಒಳ್ಳೆಯ ನಾಮವನ್ನು ಮಲಿನಗೊಳಿಸಲಾಯಿತು. ತನ್ನ ಸಾರ್ವಭೌಮತೆಯನ್ನು ಸಮರ್ಥಿಸಲು ಮತ್ತು ತನ್ನ ನಾಮದಿಂದ ಎಲ್ಲಾ ನಿಂದೆಯನ್ನು ಸ್ವಚ್ಛಗೊಳಿಸಲು, ನೀತಿಯ ನ್ಯಾಯಾಧಿಪತಿಯಾದ ಯೆಹೋವನು, ತನ್ನ ಪುತ್ರನಾದ ಯೇಸು ಕ್ರಿಸ್ತನ ರಾಜ್ಯಾಡಳಿತೆಯನ್ನು ಹೇಗೆ ಬಳಸುವನು ಎಂದು ಪ್ರಕಟನೆ ಪುಸ್ತಕವು ವಿವರಿಸುತ್ತದೆ.—ಪ್ರಕಟನೆ 12:10; 14:7.
6. ಹಾವಿನ ಮೂಲಕ ಹವ್ವಳೊಡನೆ ಮಾತಾಡಿದವನನ್ನು ಪ್ರಕಟನೆಯು ಹೇಗೆ ಗುರುತಿಸುತ್ತದೆ?
6 “ಸರ್ಪ” ಎಂಬ ಆ ಪದ ಕೇವಲ ಒಂದು ಅಕ್ಷರಶಃ ಹಾವಿಗೆ ಅನ್ವಯಿಸುತ್ತದೋ? ಎಂದಿಗೂ ಇಲ್ಲ! ಆ ಹಾವಿನ ಮೂಲಕ ಮಾತಾಡಿದ ಕುಖ್ಯಾತ ಆತ್ಮ ಜೀವಿಯನ್ನು ಪ್ರಕಟನೆಯು ನಮಗೋಸ್ಕರ ಗುರುತಿಸುತ್ತದೆ. ಅದು ‘ಹವ್ವಳನ್ನು ಕುಯುಕ್ತಿಯಿಂದ ಮೋಸಗೊಳಿಸಿದ’ “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು.”—ಪ್ರಕಟನೆ 12:9; 2 ಕೊರಿಂಥ 11:3.
7. ಆದಿಕಾಂಡ 3:15ರ ಸ್ತ್ರೀಯು ಆತ್ಮ ಲೋಕಕ್ಕೆ ಸಂಬಂಧಿಸಿದವಳು ಎಂದು ಯಾವುದು ಸೂಚಿಸುತ್ತದೆ?
7ಆದಿಕಾಂಡ 3:15 ಅನಂತರ “ಸ್ತ್ರೀ”ಯ ಕುರಿತು ಮಾತಾಡುತ್ತದೆ. ಇವಳು ಹವ್ವಳಾಗಿದ್ದಳೋ? ಪ್ರಾಯಶಃ ಅವಳು ಹಾಗೆ ಎಣಿಸಿದಳು. (ಆದಿಕಾಂಡ 4:1ನ್ನು ಹೋಲಿಸಿರಿ.) ಹವ್ವಳು 5,000 ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ಸತ್ತಾಗ, ಹವ್ವಳ ಮತ್ತು ಸೈತಾನನ ನಡುವೆ ಒಂದು ದೀರ್ಘಕಾಲ ಬಾಳುವ ವೈರತ್ವವು ಅಸಾಧ್ಯವಾಯಿತು. ಅಲ್ಲದೆ, ಯೆಹೋವನಿಂದ ಸಂಬೋಧಿಸಲ್ಪಟ್ಟ ಸರ್ಪವು ಒಬ್ಬ ಅದೃಶ್ಯ ಆತ್ಮನಾಗಿರುವುದರಿಂದ, ಆ ಸ್ತ್ರೀಯು ಕೂಡ ಆತ್ಮ-ಲೋಕಕ್ಕೆ ಸಂಬಂಧಪಟ್ಟವಳಾಗಿರಬೇಕು ಎಂದು ನಾವು ನಿರೀಕ್ಷಿಸತಕ್ಕದ್ದು. ಪ್ರಕಟನೆ 12:1, 2 ಇದನ್ನು ದೃಢೀಕರಿಸಿ, ಈ ಸಾಂಕೇತಿಕ ಸ್ತ್ರೀಯು ಆತ್ಮ ಜೀವಿಗಳಿರುವ ಯೆಹೋವನ ಸ್ವರ್ಗೀಯ ಸಂಸ್ಥೆ ಎಂದು ಸೂಚಿಸುತ್ತದೆ.—ಯೆಶಾಯ 54:1, 5, 13ನ್ನು ಕೂಡ ನೋಡಿರಿ.
ಪರಸ್ಪರ ವಿರುದ್ಧವಾಗಿರುವ ಎರಡು ಸಂತಾನಗಳು
8. ಎರಡು ಸಂತಾನಗಳ ಕುರಿತು ಈಗ ಏನು ಹೇಳಲ್ಪಡುತ್ತದೋ ಅದರಲ್ಲಿ ನಾವು ಗಾಢವಾಗಿ ಆಸಕ್ತರಾಗಿರತಕ್ಕದ್ದು ಯಾಕೆ?
8 ಮುಂದಕ್ಕೆ ಆದಿಕಾಂಡ 3:15 ರಲ್ಲಿ ಎರಡು ಸಂತಾನಗಳು ತೋರಿಬರುತ್ತವೆ. ನಾವು ಇದರಲ್ಲಿ ಗಾಢವಾಗಿ ಆಸಕ್ತಿಯುಳ್ಳವರಾಗಿರತಕ್ಕದ್ದು, ಯಾಕಂದರೆ ಈ ಭೂಮಿಯ ನ್ಯಾಯಯುಕ್ತ ಸಾರ್ವಭೌಮತ್ವದ ಮಹಾ ವಾದಾಂಶಕ್ಕೆ ಅವುಗಳು ಸಂಬಂಧಿಸಿವೆ. ನಾವು ಎಳೆಯರಾಗಿರಲಿ ವೃದ್ಧರಾಗಿರಲಿ, ನಮ್ಮಲ್ಲಿ ಪ್ರತಿಯೊಬ್ಬನನ್ನು ಇದು ಒಳಗೂಡಿಸುತ್ತದೆ. ಈ ಸಂತಾನಗಳಲ್ಲಿ ಯಾವುದನ್ನು ನೀವು ಮೆಚ್ಚುತ್ತೀರಿ?
9. ಸರ್ಪನ ಸಂತಾನದಲ್ಲಿ ಯಾವುದು ಸೇರಿರುವುದು ಖಚಿತ?
9 ಮೊದಲನೆಯದಾಗಿ, ಅಲ್ಲಿ ಸರ್ಪನ ಸಂತಾನ ಇಲ್ಲವೆ ಪೀಳಿಗೆ ಇದೆ. ಇದೇನಾಗಿದೆ? ಇದರಲ್ಲಿ ಸೈತಾನನೊಂದಿಗೆ ಅವನ ದಂಗೆಯಲ್ಲಿ ಸೇರಿದ ಮತ್ತು ಕಟ್ಟಕಡೆಗೆ ಭೂಕ್ಷೇತ್ರಕ್ಕೆ “ಅವನೊಂದಿಗೆ ದೊಬ್ಬಲ್ಪಟ್ಟ” ಇತರ ಆತ್ಮ ಜೀವಿಗಳು ಒಳಗೂಡಿದ್ದಾರೆಂಬದು ನಿಶ್ಚಯ. (ಪ್ರಕಟನೆ 12:9) ಸೈತಾನನು, ಇಲ್ಲವೆ ಬೆಲ್ಚೆಬೂಲನು “ದೆವ್ವಗಳ ಒಡೆಯ” ನಾಗಿರುವುದರಿಂದ, ಆತನ ಅದೃಶ್ಯ ಸಂಸ್ಥೆಯು ಇವರಿಂದ ಮಾಡಲ್ಪಟ್ಟಿದೆ ಎಂದು ವ್ಯಕ್ತವಾಗುತ್ತದೆ.—ಮಾರ್ಕ 3:22; ಎಫೆಸ 6:12.
10. ಸೈತಾನನ ಸಂತಾನದ ಭಾಗವಾಗಿ ಇತರರನ್ನು ಬೈಬಲು ಹೇಗೆ ಗುರುತಿಸುತ್ತದೆ?
10 ಇನ್ನೂ ಹೆಚ್ಚಾಗಿ, ತನ್ನ ಸಮಯಗಳಲ್ಲಿದ್ದ ಯೆಹೂದಿ ಧಾರ್ಮಿಕ ಮುಖಂಡರಿಗೆ ಯೇಸುವು ಅಂದದ್ದು: “ನೀವು ನಿಮ್ಮ ತಂದೆಯಾದ ಪಿಶಾಚನಿಂದ ಬಂದವರು, ಮತ್ತು ನೀವು ನಿಮ್ಮ ತಂದೆಯ ಇಚ್ಛೆಗಳನ್ನು ನಡಿಸಲು ಬಯಸುತ್ತೀರಿ.” (ಯೋಹಾನ 8:44, NW) ದೇವರ ಪುತ್ರನಾದ ಯೇಸುವನ್ನು ಅವರು ವಿರೋಧಿಸಿದ್ದರಿಂದ, ಆ ಧಾರ್ಮಿಕ ಮುಖಂಡರುಗಳು ತಾವು ಕೂಡ ಸೈತಾನನ ಪೀಳಿಗೆಯವರೆಂದು ತೋರಿಸಿದರು. ತಮ್ಮ ಸಾಂಕೇತಿಕ ತಂದೆಯೋಪಾದಿ ಅವನನ್ನು ಸೇವಿಸುವ ಮೂಲಕ, ಅವರು ಸೈತಾನನ ಸಂತಾನದ ಭಾಗವಾದರು. ವಿಶೇಷವಾಗಿ ಯೇಸುವಿನ ಶಿಷ್ಯರನ್ನು ವಿರೋಧಿಸುವುದರ ಮತ್ತು ಹಿಂಸಿಸುವುದರ ಮೂಲಕ, ಸೈತಾನನ ಇಚ್ಛೆಯನ್ನು ಮಾಡುತ್ತಾ, ತದ್ರೀತಿಯಲ್ಲಿ ಇತಿಹಾಸದಲ್ಲಿಲ್ಲಾ ಇತರ ಅನೇಕ ಮಾನವರು ತಮ್ಮನ್ನು ಆ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮೂಹಿಕವಾಗಿ, ಈ ಮಾನವರು ಭೂಮಿಯ ಮೇಲಿರುವ ಸೈತಾನನ ದೃಶ್ಯ ಸಂಸ್ಥೆಯನ್ನು ಉಂಟುಮಾಡುವವರಾಗಿ ವರ್ಣಿಸಲ್ಪಡಬಹುದು.—ನೋಡಿರಿ ಯೋಹಾನ 15:20; 16:33; 17:15.
ಸ್ತ್ರೀಯ ಸಂತಾನವು ಗುರುತಿಸಲ್ಪಡುತ್ತದೆ
11. ಶತಮಾನಗಳ ಸಮಯಗಳಲ್ಲಿ, ಸ್ತ್ರೀಯ ಸಂತಾನದ ಕುರಿತು ದೇವರು ಏನನ್ನು ಪ್ರಕಟಿಸಿದನು?
11ಆದಿಕಾಂಡ 3:15ರ ಪ್ರವಾದನೆಯು ಕೊನೆಯಲ್ಲಿ ಸ್ತ್ರೀಯ ಸಂತಾನದ ಕುರಿತು ಮಾತಾಡುತ್ತದೆ. ಸೈತಾನನು ತನ್ನ ಸಂತಾನವನ್ನು ಬೆಳೆಸುತ್ತಿದ್ದಾಗ, ಯೆಹೋವನು ತನ್ನ “ಸ್ತ್ರೀ” ಯಾ ಪತ್ನಿಸದೃಶ ದಿವ್ಯ ಸಂಸ್ಥೆಯು ಸಂತಾನವೊಂದನ್ನು ಉತ್ಪಾದಿಸುವಂತೆ ಅಣಿಗೊಳಿಸುತ್ತಾ ಇದ್ದನು. ಸುಮಾರು 4,000 ವರ್ಷಗಳಷ್ಟು ಕಾಲ, ಯೆಹೋವನು ತನ್ನ ವಿಧೇಯ ದೇವ-ಭೀರು ಮಾನವರಿಗೆ ಸಂತಾನದ ಬರುವಿಕೆಗೆ ಸಂಬಂಧಿಸಿದ ವಿವರಗಳನ್ನು ಪ್ರಗತಿಪೂರ್ವಕವಾಗಿ ಪ್ರಕಟಿಸಿದನು. (ಯೆಶಾಯ 46:9, 10) ಅಬ್ರಹಾಮ, ಇಸಾಕ, ಯಾಕೋಬ, ಮತ್ತು ಇನ್ನಿತರರು ಈ ರೀತಿಯಲ್ಲಿ ತಮ್ಮ ವಂಶಾವಳಿಯ ಸಾಲಿನಲ್ಲಿ ಸಂತಾನವು ತೋರಿಬರುವ ವಾಗ್ದಾನದ ಮೇಲೆ ನಂಬಿಕೆಯನ್ನು ಕಟ್ಟಲು ಶಕ್ತರಾದರು. (ಆದಿಕಾಂಡ 22:15-18; 26:4; 28:14) ಸೈತಾನನು ಮತ್ತು ಅವನ ಅನುಚರರು ಯೆಹೋವನ ಅಂತಹ ಸೇವಕರನ್ನು, ಅವರ ಅಚಲವಾದ ನಂಬಿಕೆಯ ಕಾರಣ, ಆಗ್ಗಾಗೆ ಹಿಂಸಿಸಿದರು.—ಇಬ್ರಿಯ 11:1, 2, 32-38.
12. (ಎ) ಸ್ತ್ರೀಯ ಸಂತಾನದ ಪ್ರಮುಖ ಭಾಗವು ಯಾವಾಗ ಮತ್ತು ಯಾವ ಘಟನೆಯೊಂದಿಗೆ ಆಗಮಿಸಿತು? (ಬಿ) ಯಾವ ಉದ್ದೇಶಕ್ಕೋಸ್ಕರ ಯೇಸುವು ಅಭಿಷೇಕಿಸಲ್ಪಟ್ಟನು?
12 ಕಟ್ಟಕಡೆಗೆ, ನಮ್ಮ ಸಾಮಾನ್ಯ ಶಕದ 29 ನೆಯ ವರ್ಷದಲ್ಲಿ, ಯೊರ್ದನ್ ಹೊಳೆಯಲ್ಲಿ ಪರಿಪೂರ್ಣ ಮನುಷ್ಯನಾದ ಯೇಸುವು ಸ್ವತಃ ತನ್ನನ್ನು ಸಾದರಪಡಿಸಿಕೊಂಡನು ಮತ್ತು ದೀಕ್ಷಾಸ್ನಾನ ಪಡೆದನು. ಇಲ್ಲಿ ಯೆಹೋವನು ಪವಿತ್ರಾತ್ಮನ ಮೂಲಕ ಯೇಸುವನ್ನು ಹುಟ್ಟಿಸಿ, ಹೀಗಂದನು: “ಈತನು ನನ್ನ ಮಗನು, ನನ್ನ ಪ್ರಿಯನು, ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:17, NW) ಸ್ವರ್ಗದಲ್ಲಿರುವ ದೇವರ ಆತ್ಮಿಕ ಸಂಸ್ಥೆಯಿಂದ ಯೇಸುವನ್ನು ಕಳುಹಿಸಲಾಗಿತ್ತು ಎಂದು ಈ ರೀತಿ ಅವನು ಅಲ್ಲಿ ಗುರುತಿಸಲ್ಪಟ್ಟನು. ಯೆಹೋವನ ನಾಮದಲ್ಲಿ ಭೂಮಿಯ ಮೇಲೆ ಪ್ರಭುತ್ವವನ್ನು ಪುನಃ ಸ್ಥಾಪಿಸುವ ಸ್ವರ್ಗೀಯ ರಾಜ್ಯದ ನಿಯುಕ್ತ ರಾಜನೋಪಾದಿ ಸಹ ಅವನು ಅಭಿಷೇಕಿಸಲ್ಪಟ್ಟನು, ಈ ರೀತಿ ಸರಕಾರವೊಂದು ಯಾ ಸಾರ್ವಭೌಮತೆಯು ಒಳಗೂಡಿರುವ ವಾದಾಂಶವನ್ನು ಒಮ್ಮೆಗೆ ಮತ್ತು ಸದಾಕಾಲಕ್ಕೂ ಇತ್ಯರ್ಥಗೊಳಿಸುವುದು. (ಪ್ರಕಟನೆ 11:15) ಹಾಗಾದರೆ, ಸ್ತ್ರೀಯ ಸಂತಾನದಲ್ಲಿ ಪ್ರಮುಖನು, ಮುಂತಿಳಿಸಲ್ಪಟ್ಟ ಮೆಸ್ಸೀಯನು ಯೇಸು ಆಗಿದ್ದಾನೆ.—ಹೋಲಿಸಿರಿ ಗಲಾತ್ಯ 3:16; ದಾನಿಯೇಲ 9:25.
13, 14. (ಎ) ಸ್ತ್ರೀಯ ಸಂತಾನವು ಕೇವಲ ಒಬ್ಬ ಪ್ರಮುಖ ವ್ಯಕ್ತಿಯಾಗಿರಲಾರನು ಎಂಬದನ್ನು ತಿಳಿಯುವುದು ನಮ್ಮನ್ನು ಅಚ್ಚರಿಗೊಳಿಸಬಾರದು ಏಕೆ? (ಬಿ) ಸಂತಾನದ ದ್ವಿತೀಯ ಭಾಗವಾಗಲು ಮಾನವ ಕುಲದಿಂದ ದೇವರು ಎಷ್ಟು ಮಂದಿಯನ್ನು ಆರಿಸಿದ್ದಾನೆ, ಮತ್ತು ಅವರು ಯಾವ ರೀತಿಯ ಸಂಸ್ಥೆಯನ್ನು ಉಂಟುಮಾಡುತ್ತಾರೆ? (ಸಿ) ಸಂತಾನದೊಟ್ಟಿಗೆ ಬೇರೆ ಯಾರು ಕೂಡ ಐಕ್ಯದಿಂದ ಸೇವೆ ಸಲ್ಲಿಸುತ್ತಾರೆ?
13 ಸ್ತ್ರೀಯ ಸಂತಾನವು ಕೇವಲ ಒಬ್ಬ ಪ್ರಮುಖ ವ್ಯಕ್ತಿಯಾಗಿರುವನೋ? ಒಳ್ಳೇದು, ಸೈತಾನನ ಸಂತಾನದ ಕುರಿತಾಗಿ ಏನು? ಬೈಬಲು ಸೈತಾನನ ಸಂತಾನವನ್ನು ದುಷ್ಟ ದೇವದೂತರ ಗುಂಪು ಮತ್ತು ದೇವರನ್ನು ಅಗೌರವಿಸುವ ಮಾನವರು ಉಳ್ಳದ್ದಾಗಿ ಗುರುತಿಸುತ್ತದೆ. ಹಾಗಾದರೆ, ಮೆಸ್ಸೀಯ ಸಂಬಂಧಿತ ಸಂತಾನವಾದ ಯೇಸು ಕ್ರಿಸ್ತನೊಟ್ಟಿಗೆ ಯಾಜಕರೂ, ಸಹ ರಾಜರೂ ಆಗುವುದಕ್ಕಾಗಿ ಮಾನವ ಕುಲದಿಂದ 1,44,000 ಮಂದಿ ಸಮಗ್ರತೆ ಪಾಲಕರನ್ನು ಆರಿಸುವ ಯೆಹೋವನ ಉದ್ದೇಶವನ್ನು ಕಲಿಯುವುದು ನಮ್ಮನ್ನು ಅಚ್ಚರಿಗೊಳಿಸಬಾರದು. ಪ್ರಕಟನೆ 12:17; 14:1-4.
ದೇವರ ಪತ್ನಿ-ಸಮಾನವಾದ ಸಂಸ್ಥೆಯ ವಿರುದ್ಧವಾಗಿರುವ ಅವನ ವೈರತ್ವದಲ್ಲಿ, ಪಿಶಾಚನು “ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು” ಎಂದು ಹೇಳುವಾಗ ಪ್ರಕಟನೆಯು ಇವರನ್ನು ಸೂಚಿಸುತ್ತದೆ.—14 ಬೈಬಲಿನಲ್ಲಿ, ಅಭಿಷಿಕ್ತ ಕ್ರೈಸ್ತರನ್ನು ಯೇಸುವಿನ ಸಹೋದರರೆಂದು ಕರೆಯಲಾಗಿದೆ, ಮತ್ತು ಅವನ ಸಹೋದರರೋಪಾದಿ, ಅವರು ಅದೇ ತಂದೆಯಲ್ಲಿ ಮತ್ತು ಅದೇ ತಾಯಿಯಲ್ಲಿ ಸಹಭಾಗಿಗಳಾಗುತ್ತಾರೆ. (ಇಬ್ರಿಯ 2:11) ಯೆಹೋವ ದೇವರು ಅವರ ತಂದೆಯಾಗಿದ್ದಾನೆ. ಆದಕಾರಣ, ಅವರ ತಾಯಿಯು ದೇವರ ಪತ್ನಿ-ಸಮಾನವಾದ ದಿವ್ಯ ಸಂಸ್ಥೆಯಾಗಿರುವ “ಆ ಸ್ತ್ರೀ” ಯಾಗಿರಬೇಕು. ಅವರು ಆ ಸಂತಾನದ ದ್ವಿತೀಯ ಭಾಗವಾಗುವಾಗ, ಕ್ರಿಸ್ತ ಯೇಸುವು ಅದರ ಪ್ರಥಮ ಭಾಗವಾಗಿರುತ್ತಾನೆ. ಭೂಮಿಯಲ್ಲಿರುವ ಈ ಆತ್ಮ-ಜನಿತ ಕ್ರೈಸ್ತರ ಸಭೆಯು, ಸ್ವರ್ಗದಲ್ಲಿರುವ ಅವನ ಪತ್ನಿ-ಸಮಾನ ಸಂಸ್ಥೆಯ ಅಡಿಯಲ್ಲಿ, ದೇವರ ದೃಶ್ಯ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತದೆ, ಅವರ ಪುನರುತ್ಥಾನದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಅವರು ಐಕ್ಯಗೊಳ್ಳಲಿರುವರು. (ರೋಮಾಪುರ 8:14-17; ಗಲಾತ್ಯ 3:16, 29) ಸಂತಾನದ ಭಾಗವಾಗಿಲ್ಲದಿದ್ದರೂ, ಎಲ್ಲಾ ಜನಾಂಗಗಳಿಂದ ಹೊರಬರುವ ಲಕ್ಷಾಂತರ ಬೇರೆ ಕುರಿಗಳು, ಭೂಮಿಯ ಮೇಲಿರುವ ದೇವರ ಸಂಸ್ಥೆಯೊಂದಿಗೆ ಸೇವೆ ಸಲ್ಲಿಸಲು ಐಕ್ಯಗೊಳಿಸಲ್ಪಡುತ್ತಾ ಇದ್ದಾರೆ. ಈ ಬೇರೆ ಕುರಿಗಳಲ್ಲಿ ನೀವು ಒಬ್ಬರಾಗಿದ್ದೀರೋ? ಹಾಗಿರುವುದಾದರೆ, ಪ್ರಮೋದವನ ಭೂಮಿಯ ಮೇಲೆ ನಿತ್ಯ ಜೀವವು ನಿಮ್ಮ ಸಂತೋಷದ ನಿರೀಕ್ಷೆಯಾಗಿರುತ್ತದೆ.—ಯೋಹಾನ 10:16; 17:1-3.
ವೈರತ್ವವು ಬೆಳೆದ ವಿಧ
15. (ಎ) ಸೈತಾನನ ಮಾನವ ಮತ್ತು ದೇವದೂತ ಸಂತಾನದ ಬೆಳವಣಿಗೆಯನ್ನು ವರ್ಣಿಸಿರಿ. (ಬಿ) ನೋಹನ ದಿನಗಳ ಪ್ರಲಯದ ಸಮಯದಲ್ಲಿ ಸೈತಾನನ ಸಂತಾನಕ್ಕೆ ಏನು ಸಂಭವಿಸಿತು?
15 ಸೈತಾನನ ಮಾನವ ಸಂತಾನವು ಮಾನವ ಕುಲದ ಇತಿಹಾಸದ ಅತಿ ಆದಿಯಲ್ಲಿಯೇ ತೋರಿಬರಲು ಆರಂಭವಾಯಿತು. ಉದಾಹರಣೆಗೆ, ಹುಟ್ಟಿದ ಮೊದಲ ಮಾನವನು, “ಕೆಡುಕನಿಂದ ಉದ್ಭವಿಸಿದ ಮತ್ತು ತನ್ನ ತಮ್ಮ” ಹೇಬೇಲನನ್ನು “ಕೊಂದು ಹಾಕಿದ” ಕಾಯಿನನಿದ್ದನು. (1 ಯೋಹಾನ 3:12, NW) ತದನಂತರ, ಯೆಹೋವನು “ಲಕ್ಷಾಂತರ ಪರಿಶುದ್ಧ ದೂತರನ್ನು ಕೂಡಿ ಕೊಂಡು ಎಲ್ಲರಿಗೆ ನ್ಯಾಯತೀರಿಸುವುದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ” ಬರುವುದರ ಕುರಿತು ಹನೋಕನು ಮಾತಾಡಿದನು. (ಯೂದ 14, 15) ಇನ್ನೂ ಹೆಚ್ಚಾಗಿ, ದಂಗೆಕೋರ ದೇವದೂತರು ಸೈತಾನನನ್ನು ಕೂಡಿಕೊಂಡರು ಮತ್ತು ಅವನ ಸಂತಾನದ ಒಂದು ಭಾಗವಾದರು. ಇವರು ಮಾಂಸಿಕ ಶರೀರದವರಾಗಿ ರೂಪಾಂತರಿಸಿಕೊಂಡು, ಮನುಷ್ಯ ಪುತ್ರಿಯರನ್ನು ಮದುವೆಯಾಗುವಂತೆ, ಸ್ವರ್ಗದಲ್ಲಿರುವ “ತಮ್ಮ ತಕ್ಕ ವಾಸಸ್ಥಾನವನ್ನು ಬಿಟ್ಟರು.” ಅವರು ಹಿಂಸಕರ ಅಮಾನುಷ ಮಿಶ್ರತಳಿಯ ಒಂದು ಸಂತತಿಯನ್ನು ಉತ್ಪಾದಿಸಿದರು. ಆ ಲೋಕವು ಹಿಂಸಾಚಾರದಿಂದ ಮತ್ತು ದುಷ್ಕೃತ್ಯದಿಂದ ತುಂಬಿಕೊಂಡಿತು, ಆದುದರಿಂದ ಜಲಪ್ರಲಯದಿಂದ ಆದನ್ನು ದೇವರು ನಾಶಗೊಳಿಸಿದನು, ಆದರೆ ನಂಬಿಗಸ್ತ ನೋಹನು ಮತ್ತು ಅವನ ಕುಟುಂಬವು ಮಾತ್ರ ಪಾರಾಗಿ ಉಳಿದ ಮಾನವರಾಗಿದ್ದರು. ಆ ಅವಿಧೇಯ ದೇವದೂತರು—ಈಗ ಸೈತಾನನ ಹತೋಟಿಯಲ್ಲಿರುವ ದೆವ್ವಗಳು—ಅವರ ನಾಶವಾಗಲಿದ್ದ ಪತ್ನಿಯರನ್ನು ಮತ್ತು ಮಿಶ್ರತಳಿಯ ಮಕ್ಕಳನ್ನು ತೊರೆಯುವಂತೆ ಬಲಾತ್ಕರಿಸಲ್ಪಟ್ಟರು. ಅವರು ಪುನಃ ತಮ್ಮನ್ನು ರೂಪಾಂತರಿಸಿಕೊಂಡು, ಆತ್ಮ ಲೋಕಕ್ಕೆ ಹಿಂದೆರಳಿ, ಅಲ್ಲಿ ಸೈತಾನನ ಮತ್ತು ಅವನ ಸಂತಾನದವರ ಮೇಲೆ ಶೀಘ್ರವಾಗಿ ಧಾವಿಸಿ ಬರುತ್ತಿರುವ ದೇವರ ನ್ಯಾಯತೀರ್ಪಿನ ಜಾರಿಯನ್ನು ಕಾದುಕೊಂಡಿದ್ದಾರೆ.—ಯೂದ 6; ಆದಿಕಾಂಡ 6:4-12; 7:21-23; 2 ಪೇತ್ರ 2:4, 5.
16. (ಎ) ಜಲಪ್ರಲಯದ ನಂತರ ಯಾವ ನಿರಂಕುಶ ಪ್ರಭುವು ರಂಗದಲ್ಲಿ ಗೋಚರಿಸಿದನು, ಮತ್ತು ಅವನು ಸೈತಾನನ ಸಂತಾನದ ಭಾಗವಾಗಿದ್ದನು ಎಂದು ಹೇಗೆ ತೋರಿಸಿದನು? (ಬಿ) ಬ್ಯಾಬಿಲನಿನ ಗೋಪುರದ ಭಾವೀ ನಿರ್ಮಾಪಕರನ್ನು ದೇವರು ವಿಫಲಗೊಳಿಸಿದ್ದು ಹೇಗೆ?
16 ಮಹಾ ಪ್ರಲಯದ ಅನಂತರ ಬೇಗನೇ, ನಿಮ್ರೋದನೆಂಬ ಹೆಸರಿನ ಒಬ್ಬ ನಿರಂಕುಶ ಪ್ರಭುವು ಭೂಮಿಯ ಮೇಲೆ ಕಾಣಿಸಿಕೊಂಡನು. “ಯೆಹೋವನ ವಿರುದ್ಧವಾಗಿರುವ ಒಬ್ಬ ಮಹಾ ಬೇಟೆಗಾರನು”—ನಿಜವಾಗಿ ಸರ್ಪನ ಸಂತಾನದ ಭಾಗ—ಎಂದು ಬೈಬಲು ಅವನನ್ನು ವರ್ಣಿಸುತ್ತದೆ. ಸೈತಾನನಂತೆ, ಅವನು ದಂಗೆಯ ಆತ್ಮವನ್ನು ತೋರಿಸಿದನು ಮತ್ತು ಭೂಮಿಯ ಮೇಲೆ ತುಂಬಿಕೊಳ್ಳುವಂತೆ ಮಾನವ ಕುಲವು ಹರಡಿಕೊಳ್ಳಬೇಕೆಂಬ ಯೆಹೋವನ ಉದ್ದೇಶದ ಉಲ್ಲಂಘನೆಯಲ್ಲಿ ಬಾಬೆಲ್ ಯಾ ಬ್ಯಾಬಿಲನ್ ನಗರವನ್ನು ಕಟ್ಟಿದನು. ಬ್ಯಾಬಿಲನಿನ ಕೇಂದ್ರ ಅಲಂಕಾರ ವಸ್ತುವು “ಆಕಾಶವನ್ನು ಮುಟ್ಟುವ” ಅದರ ಗೋಪುರವಾಗಿರಲಿಕ್ಕಿತ್ತು. ದೇವರು ಆ ಗೋಪುರದ ಭಾವೀ ನಿರ್ಮಾಪಕರನ್ನು ವಿಫಲಗೊಳಿಸಿದನು. ಅವರ ಭಾಷೆಯನ್ನು ಅವನು ಗಲಿಬಿಲಿಗೊಳಿಸಿದನು ಮತ್ತು “ಅವರನ್ನು ಭೂಲೋಕದಲ್ಲಿಲ್ಲಾ ಚದರಿಸಿದನು,” ಆದರೆ ಬ್ಯಾಬಿಲನ್ ತಾನೇ ಉಳಿಯುವಂತೆ ಮಾಡಿದನು.—ಆದಿಕಾಂಡ 9:1; 10:8-12; 11:1-9.
ರಾಜಕೀಯ ಶಕ್ತಿಗಳು ತೋರಿಬರುತ್ತವೆ
17. ಮಾನವ ಕುಲವು ಸಂಖ್ಯೆಯಲ್ಲಿ ಹೆಚ್ಚಾದಂತೆ, ಮಾನವ ಸಮಾಜದ ಯಾವ ಭ್ರಷ್ಟಗೊಂಡ ಲಕ್ಷಣವು ಮುಂದಕ್ಕೆ ಬಂತು, ಮತ್ತು ಪರಿಣಾಮವಾಗಿ, ಯಾವ ಮಹಾ ಸಾಮ್ರಾಜ್ಯಗಳು ಎದ್ದವು?
17 ಬ್ಯಾಬಿಲನಿನಲ್ಲಿ ಯೆಹೋವನ ಸಾರ್ವಭೌಮತೆಯ ಉಲ್ಲಂಘನೆಯಲ್ಲಿ ಬೆಳೆದಿರುವ ಮಾನವ ಸಮಾಜದ ಲಕ್ಷಣಗಳು ತೋರಿಬಂದವು. ಇವುಗಳಲ್ಲಿ ಒಂದು ರಾಜಕೀಯ. ಮಾನವ ಕುಲವು ಬಹುಸಂಖ್ಯಾತವಾದಂತೆಯೇ, ಇತರ ಮಹತ್ವಾಕಾಂಕ್ಷೆಯುಳ್ಳ ಮಾನವರು ಅಧಿಕಾರವನ್ನು ಸ್ವಾಧೀನ ಪಡಿಸುವುದರಲ್ಲಿ ನಿಮ್ರೋದನ ಉದಾಹರಣೆಯನ್ನು ಹಿಂಬಾಲಿಸಿದರು. ಹಾನಿಗಾಗಿ, ಮನುಷ್ಯನು ಮನುಷ್ಯನ ಮೇಲೆ ಅಧಿಕಾರ ನಡೆಸಲು ಆರಂಭಿಸಿದನು. (ಪ್ರಸಂಗಿ 8:9) ಅಬ್ರಹಾಮನ ದಿನಗಳಲ್ಲಿ, ಉದಾಹರಣೆಗೆ, ಸೊದೋಮ್, ಗೊಮೋರ ಮತ್ತು ಅಕ್ಕಪಕ್ಕದ ನಗರಗಳು, ಶಿನಾರಿನ ಮತ್ತು ಇತರ ದೂರದೇಶಗಳ ಅರಸರುಗಳ ಹತೋಟಿಯೊಳಗೆ ಬಂದವು. (ಆದಿಕಾಂಡ 14:1-4) ಕ್ರಮೇಣ, ತಮ್ಮ ಸ್ವತಃ ಸಿರಿವಂತಿಕೆ ಮತ್ತು ಮಹಿಮೆಗಾಗಿ ಸೇನೆಯ ಮತ್ತು ಸಂಸ್ಥೆಯ ಚಾತುರ್ಯವುಳ್ಳವರು ಮಹಾ ಬಲಿಷ್ಠ ಸಾಮ್ರಾಜ್ಯಗಳನ್ನು ರಚಿಸಿಕೊಂಡರು. ಅವುಗಳಲ್ಲಿ ಐಗುಪ್ತ, ಅಶ್ಶೂರ್ಯ, ಬ್ಯಾಬಿಲನ್, ಮೇದ್ಯ-ಪಾರಸೀಯ, ಗ್ರೀಸ್ ಮತ್ತು ರೋಮ್ ಸೇರಿರುವ ಕೆಲವನ್ನು ಬೈಬಲು ಸೂಚಿಸುತ್ತದೆ.
18. (ಎ) ರಾಜಕೀಯ ಅಧಿಕಾರಿಗಳ ಕಡೆಗೆ ದೇವ ಜನರು ಯಾವ ಮನೋಭಾವವನ್ನು ತೆಗೆದು ಕೊಳ್ಳುತ್ತಾರೆ? (ಬಿ) ದೇವರ ಅಭಿರುಚಿಗಳನ್ನು ರಾಜಕೀಯ ಅಧಿಕಾರಿಗಳು ಕೆಲವೊಮ್ಮೆ ನಿರ್ವಹಿಸಿದ್ದು ಹೇಗೆ? (ಸಿ) ಸರ್ಪನ ಸಂತಾನದ ಭಾಗವಾಗಿದ್ದೇವೆಂದು ಅನೇಕ ಅಧಿಪತಿಗಳು ಸ್ವತಃ ಹೇಗೆ ತೋರಿಸಿಕೊಂಡಿದ್ದಾರೆ?
18 ಯೆಹೋವನು ಆ ರಾಜಕೀಯ ಶಕ್ತಿಗಳ ಅಸ್ತಿತ್ವವನ್ನು ಸಹಿಸಿಕೊಂಡನು, ಮತ್ತು ಆತನ ಜನರು ಅವರ ಹತೋಟಿಯ ಕೆಳಗಿರುವ ದೇಶಗಳಲ್ಲಿ ಜೀವಿಸಿರುವಾಗ, ಅವುಗಳಿಗೆ ಸಂಬಂಧಿತ ಅಧೀನತೆಯನ್ನು ತೋರಿಸಿದರು. (ರೋಮಾಪುರ 13:1, 2) ಕೆಲವೊಮ್ಮೆ, ರಾಜಕೀಯ ಅಧಿಕಾರಿಗಳು ದೇವರ ಉದ್ದೇಶಗಳನ್ನು ಮುಂದುವರಿಸುವುದಕ್ಕಾಗಿ ಇಲ್ಲವೇ ಅವನ ಜನರಿಗೆ ಒಂದು ಸುರಕ್ಷೆಯಾಗಿ ಸಹ ಸೇವೆ ಸಲ್ಲಿಸಿದರು. (ಎಜ್ರ 1:1-4; 7:12-26; ಅ. ಕೃತ್ಯಗಳು 25:11, 12; ಪ್ರಕಟನೆ 12:15, 16) ಆದಾಗ್ಯೂ, ಅನೇಕ ರಾಜಕೀಯ ಅಧಿಕಾರಿಗಳು ಸತ್ಯಾರಾಧನೆಯನ್ನು ಉಗ್ರವಾಗಿ ವಿರೋಧಿಸಿದರು, ಆ ಮೂಲಕ ತಾವು ಸರ್ಪನ ಸಂತಾನದ ಭಾಗವಾಗಿದ್ದೇವೆಂದು ತೋರಿಸಿದರು.—1 ಯೋಹಾನ 5:19.
19. ಪ್ರಕಟನೆಯ ಪುಸ್ತಕದಲ್ಲಿ ಲೋಕ ಶಕ್ತಿಗಳನ್ನು ಹೇಗೆ ಚಿತ್ರಿಸಲಾಗಿದೆ?
19 ಅಧಿಕಾಂಶ, ಮನುಷ್ಯಾಡಳಿತೆಯು ಮಾನವರಿಗೆ ಸಂತೋಷವನ್ನು ತರುವುದರಲ್ಲಿ ಇಲ್ಲವೇ ಅವರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಶೋಚನೀಯವಾಗಿ ಸೋತಿರುತ್ತದೆ. ಪ್ರತಿಯೊಂದು ವಿಧದ ಸರಕಾರದೊಂದಿಗೆ ಪ್ರಯೋಗವನ್ನು ನಡಿಸಲು ಯೆಹೋವನು ಮಾನವ ಕುಲವನ್ನು ಅನುಮತಿಸಿರುತ್ತಾನೆ, ಆದರೂ ಅವನು ಭ್ರಷ್ಟತನವನ್ನು ಇಲ್ಲವೆ ಸರಕಾರಗಳು ಮನುಷ್ಯರ ಮೇಲೆ ಕೆಟ್ಟದ್ದಾಗಿ ಪ್ರಭುತ್ವ ನಡಿಸಿರುವ ವಿಧವನ್ನು ಮೆಚ್ಚುವುದಿಲ್ಲ. (ಜ್ಞಾನೋಕ್ತಿ 22:22, 23) ದಬ್ಬಾಳಿಕೆಯ ಲೋಕ ಶಕ್ತಿಗಳು ಗರ್ವ ಮತ್ತು ವಿಲಕ್ಷಣವಾದ ಒಂದು ಕ್ರೂರ ಮೃಗವನ್ನು ರಚಿಸುವುದಾಗಿ ಪ್ರಕಟನೆಯು ಚಿತ್ರಿಸುತ್ತದೆ.—ಪ್ರಕಟನೆ 13:1, 2.
ಸ್ವಾರ್ಥಿ ವಾಣಿಜ್ಯ ವರ್ತಕರು
20, 21. ಸೈತಾನನ ದುಷ್ಟ ಸಂತಾನಕ್ಕೆ ಸೇರಿದವರಾಗಿ “ಸೇನಾ ಅಧಿಕಾರಿಗಳ” ಮತ್ತು “ಪರಾಕ್ರಮಶಾಲಿಗಳ” ಒಟ್ಟಿಗೆ ಯಾವ ಎರಡನೆಯ ಗುಂಪನ್ನು ಸೇರಿಸತಕ್ಕದ್ದು, ಮತ್ತು ಯಾಕೆ?
20 ರಾಜಕೀಯ ಮುಂದಾಳುಗಳೊಂದಿಗೆ ನಿಕಟವಾಗಿ ಒಪ್ಪಂದದಲ್ಲಿರುವ, ಪ್ರಾಪಂಚಿಕ ವಸ್ತುಗಳ ಅಪ್ರಾಮಾಣಿಕ ವರ್ತಕರು ನೋಟಕ್ಕೆ ಬಂದರು. ಪ್ರಾಚೀನ ಬ್ಯಾಬಿಲನಿನ ಅವಶೇಷಗಳಲ್ಲಿ ಸಂಶೋಧಿಸಿ ತೆಗೆಯಲ್ಪಟ್ಟ ದಾಖಲೆಗಳು ಸಹ, ಮಾನವರ ದೌರ್ಭಾಗ್ಯ ಪರಿಸ್ಥಿತಿಗಳ ಶೋಷಣೆಯನ್ನು ಮಾಡಿದ ವ್ಯಾಪಾರದ ಸರಕು-ವಿನಿಮಯಗಳು ಅಲ್ಲಿ ಬಹಳಷ್ಟು ವ್ಯಾಪಕವಾಗಿ ಪ್ರಚಲಿತದಲ್ಲಿತ್ತು ಎಂದು ತೋರಿಸುತ್ತವೆ. ಲೋಕದ ವ್ಯಾಪಾರಿಗಳು ನಮ್ಮೀ ದಿನಗಳ ತನಕ ಸ್ವಾರ್ಥ ಲಾಭಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಿರುತ್ತಾರೆ, ಆ ಮೂಲಕ ಅನೇಕ ದೇಶಗಳಲ್ಲಿ ಕೇವಲ ಕೆಲವರೇ ಬಹಳ ಧನಿಕರಾಗುವಾಗ, ಜನಸಂಖ್ಯೆಯ ಅಧಿಕ ಸಂಖ್ಯಾತರು ದಾರಿದ್ರ್ಯದಲ್ಲಿ ಸೊರಗುತ್ತಿದ್ದಾರೆ. ಈ 20-ನೆಯ ಶತಮಾನದ ಕೈಗಾರಿಕೆಯ ಯುಗದಲ್ಲಿ ವರ್ತಕರು ಮತ್ತು ಉತ್ಪಾದಕರು, ಮಾನವ ಕುಲವನ್ನು ಈಗ ಪೂರ್ಣಾಹುತಿ ಮಾಡುವ ಬೆದರಿಕೆಯನ್ನೊಡ್ಡುವ ಅಣ್ವಸ್ತ್ರಗಳ ಯುದ್ಧ ಸಾಮಗ್ರಿಗಳ ಸಹಿತ, ವಿನಾಶದ ಪೈಶಾಚಿಕ ಮಿಲಿಟರಿ ಆಯುಧಗಳ ಭಾರಿ ಸಂಗ್ರಹಗಳನ್ನು ರಾಜಕೀಯ ಶಕ್ತಿಗಳಿಗೆ ಒದಗಿಸುವುದರಲ್ಲಿ ಬಹಳ ಆದಾಯವನ್ನು ಮಾಡಿಕೊಂಡಿರುತ್ತಾರೆ. ಅಂತಹ ಲೋಭದ ದೊಡ್ಡ ವ್ಯಾಪಾರಸ್ಥರು ಮತ್ತು ಅವರ ವರ್ಗದ ಇತರರು, ಸೈತಾನನ ದುಷ್ಟ ಸಂತಾನದಲ್ಲಿ ಸೇರಿರುವ “ಸೇನೆಯ ಅಧಿಕಾರಿಗಳ” (NW) ಮತ್ತು “ಪರಾಕ್ರಮಶಾಲಿ” ಗಳಲ್ಲಿ ಒಳಗೂಡಿರತಕ್ಕದ್ದು. ನಾಶನಕ್ಕೆ ಅರ್ಹರೆಂದು ದೇವರು ಮತ್ತು ಕ್ರಿಸ್ತನು ನ್ಯಾಯತೀರ್ಪು ವಿಧಿಸುವ ಐಹಿಕ ಸಂಸ್ಥೆಯ ಭಾಗವಾಗಿ ಅವರೆಲ್ಲರೂ ಇರುತ್ತಾರೆ.—ಪ್ರಕಟನೆ 19:18.
21 ಭ್ರಷ್ಟ ರಾಜಕೀಯಕ್ಕೆ ಮತ್ತು ಲೋಭದ ವಾಣಿಜ್ಯಕ್ಕೆ, ದೇವರ ಪ್ರತಿಕೂಲ ನ್ಯಾಯತೀರ್ಪಿಗೆ ಗುರಿಯಾಗತಕ್ಕ ಮಾನವ ಸಮಾಜದ ಮೂರನೆಯ ಭಾಗವನ್ನು ಕೂಡ ಸೇರಿಸತಕ್ಕದ್ದು. ಅದೇನು? ಈ ಪ್ರಖ್ಯಾತ ಭೌಗೋಲಿಕ ವಿನ್ಯಾಸದ ಕುರಿತು ಪ್ರಕಟನೆ ಏನು ಹೇಳುತ್ತದೋ ಅದನ್ನು ಕೇಳಿ ನೀವು ಅಚ್ಚರಿಗೊಳ್ಳಬಹುದು.
ಮಹಾ ಬಾಬೆಲ್
22. ಪುರಾತನ ಬ್ಯಾಬಿಲನಿನಲ್ಲಿ ಯಾವ ರೀತಿಯ ಧರ್ಮವು ಬೆಳೆಯಿತು?
22 ಮೂಲ ಬ್ಯಾಬಿಲನಿನ ಕಟ್ಟಡವು ಒಂದು ರಾಜಕೀಯ ಉದ್ಯಮಕ್ಕಿಂತ ಹೆಚ್ಚಿನದ್ದಾಗಿತ್ತು. ಯೆಹೋವನ ಸಾರ್ವಭೌಮತೆಯ ಉಲ್ಲಂಘನೆಯಲ್ಲಿ ಆ ನಗರವು ಸ್ಥಾಪಿಸಲ್ಪಟ್ಟಿರುವುದರಿಂದ, ಧರ್ಮವು ಅದರಲ್ಲಿ ಒಳಗೂಡಿತ್ತು. ನಿಜವಾಗಿಯೂ, ಪುರಾತನ ಬ್ಯಾಬಿಲನ್ ಧಾರ್ಮಿಕ ವಿಗ್ರಹಾರಾಧನೆಯ ಒಂದು ಬುಗ್ಗೆಯಾಯಿತು. ಮರಣಾನಂತರ ಮಾನವಾತ್ಮವೊಂದು ಪಾರಾಗುತ್ತದೆ ಮತ್ತು ಮುಂದಕ್ಕೆ, ದೆವ್ವಗಳಿಂದ ಆಳಲ್ಪಡುವ ನಿತ್ಯ ಥರಥರಿಕೆಯ ಮತ್ತು ಯಾತನೆಯ ಒಂದು ಸ್ಥಳವಿದೆ ಎಂಬಂತಹ ದೇವ-ದೂಷಕ ಬೋಧನೆಗಳನ್ನು ಅದರ ಪುರೋಹಿತರು ಕಲಿಸಿದರು. ಅವರು ಸೃಷ್ಟಿ ಜೀವಿಗಳ ಮತ್ತು ಅನೇಕ ದೇವ-ದೇವತೆಗಳ ಆರಾಧನೆಯನ್ನು ಬೆಳಸಿದರು. ಭೂಮಿ ಮತ್ತು ಅದರ ಮೇಲಿರುವ ಮನುಷ್ಯನ ಮೂಲವನ್ನು ವಿವರಿಸುವ ಕಟ್ಟುಕಥೆಗಳನ್ನು ರಚಿಸಿದರು ಮತ್ತು ಕೀಳ್ಮಟ್ಟದ ಸಂಸ್ಕಾರಗಳನ್ನು ಮತ್ತು ಯಜ್ಞಾರ್ಪಣೆಗಳನ್ನು ನಡಿಸಿದರು, ಅವುಗಳು ಸಂತಾನೋತ್ಪನ್ನ ಮತ್ತು ಬೆಳೆಫಸಲುಗಳ ಮತ್ತು ಯುದ್ಧಗಳಲ್ಲಿ ವಿಜಯದ ಖಾತರಿಯನ್ನು ಕೊಡುತ್ತವೆ ಎಂದು ಭಾವಿಸಲಾಗುತ್ತಿತ್ತು.
23. (ಎ) ಬ್ಯಾಬಿಲನಿನಿಂದ ಹೊರಗೆ ಚದರುವಾಗ, ಜನರು ಅವರೊಂದಿಗೆ ಏನನ್ನು ಕೊಂಡೊಯ್ದರು, ಮತ್ತು ಯಾವ ಫಲಿತಾಂಶದೊಂದಿಗೆ? (ಬಿ) ಲೋಕವನ್ನಾವರಿಸುವ ಸುಳ್ಳು ಧರ್ಮದ ಒಂದು ಸಾಮ್ರಾಜ್ಯವನ್ನು ಪ್ರಕಟನೆಯು ಯಾವ ಹೆಸರಿನಿಂದ ಸೂಚಿಸುತ್ತದೆ? (ಸಿ) ಸುಳ್ಳು ಧರ್ಮವು ಯಾವಾಗಲೂ ಯಾವುದರ ವಿರುದ್ಧ ಹೋರಾಡಿದೆ?
23 ಬ್ಯಾಬಿಲನಿನಿಂದ ಬಂದ ವಿವಿಧ ಭಾಷಾಗುಂಪುಗಳು ಭೂಮಿಯ ಮೇಲೆ ಹಬ್ಬಿದಂತೆ, ಅವರು ತಮ್ಮೊಂದಿಗೆ ಬ್ಯಾಬಿಲನಿನ ಧರ್ಮವನ್ನು ಕೊಂಡೊಯ್ದರು. ಈ ರೀತಿಯಲ್ಲಿ, ಪುರಾತನ ಬ್ಯಾಬಿಲನಿನ ಸಂಸ್ಕಾರಗಳಿಗೆ ಮತ್ತು ನಂಬಿಕೆಗಳಿಗೆ ಸಮಾನವಾಗಿರುವವುಗಳು ಯೂರೋಪ್, ಆಫ್ರಿಕಾ, ಅಮೆರಿಕ, ಪೌರ್ವಾತ್ಯ ದೇಶಗಳು ಮತ್ತು ದಕ್ಷಿಣ ಸಮುದ್ರ ಪ್ರದೇಶಗಳ ಮೂಲ ನಿವಾಸಿಗಳಲ್ಲಿ ಹುಲುಸಾಗಿ ಬೆಳೆದವು; ಮತ್ತು ಈ ನಂಬಿಕೆಗಳಲ್ಲಿ ಅನೇಕವು ಈ ದಿನದ ವರೆಗೂ ಉಳಿದಿವೆ. ಸಮಂಜಸವಾಗಿಯೇ, ಹಾಗಾದರೆ, ಸುಳ್ಳು ಧರ್ಮದ ಲೋಕವನ್ನಾವರಿಸುವ ಸಾಮ್ರಾಜ್ಯವನ್ನು ಮಹಾ ಬಾಬೆಲ್ ಎಂದು ಕರೆಯಲ್ಪಡುವ ನಗರವಾಗಿ ಪ್ರಕಟನೆಯು ಸೂಚಿಸುತ್ತದೆ. (ಪ್ರಕಟನೆ ಅಧ್ಯಾಯಗಳು 17, 18) ಅದು ಎಲ್ಲಿಲ್ಲಾ ಬಿತ್ತಲ್ಪಟ್ಟಿದೆಯೋ, ಅಲ್ಲಿಲ್ಲಾ ಸುಳ್ಳು ಧರ್ಮವು ದಬ್ಬಾಳಿಕೆಯ ಪೌರೋಹಿತ್ಯಗಳನ್ನು, ಅಂಧ ಸಂಸ್ಕಾರಗಳನ್ನು, ಅಜ್ಞಾನವನ್ನು, ಮತ್ತು ಅನೈತಿಕತೆಯನ್ನು ಚಿಗುರಿಸಿದೆ. ಸೈತಾನನ ಕೈಕೆಳಗೆ ಇದೊಂದು ಬಲಶಾಲಿ ಸಾಧನವಾಗಿದೆ. ಮಹಾ ಬಾಬೆಲ್ ಯಾವಾಗಲೂ ಸಾರ್ವಭೌಮ ಪ್ರಭುವಾದ ಯೆಹೋವನ ಸತ್ಯಾರಾಧನೆಯ ವಿರುದ್ಧ ಕಠೋರ ರೀತಿಯಲ್ಲಿ ಹೋರಾಡಿದೆ.
24. (ಎ) ಸ್ತ್ರೀಯ ಸಂತಾನದ “ಹಿಮ್ಮಡಿಯನ್ನು” ಸರ್ಪವು ಕಚ್ಚಲು ಶಕ್ತವಾದದ್ದು ಹೇಗೆ? (ಬಿ) ಸ್ತ್ರೀಯ ಸಂತಾನದ ಕಚ್ಚುವಿಕೆಯು ಕೇವಲ ಒಂದು ಹಿಮ್ಮಡಿಯ ಗಾಯವಾಗಿ ವರ್ಣಿಸಲ್ಪಟ್ಟಿರುವುದು ಏಕೆ?
24 ಸರ್ಪನ ಸಂತಾನದ ಅತಿ ಹೆಚ್ಚು ದೋಷಾರ್ಹ ಭಾಗದೋಪಾದಿ, ಮೊದಲನೆಯ ಶತಕದ ಯೆಹೂದ್ಯ ಮತದ ಶಾಸ್ತ್ರಿಗಳು ಮತ್ತು ಫರಿಸಾಯರು, ಸ್ತ್ರೀಯ ಸಂತಾನದ ಪ್ರಮುಖ ಪ್ರತಿನಿಧಿಯನ್ನು ಹಿಂಸಿಸುವುದರಲ್ಲಿ ಮತ್ತು ಕೊನೆಗೆ ಕೊಲೆ ಮಾಡುವುದರಲ್ಲಿ ಮುಂದಾಳುತನವನ್ನು ತಕ್ಕೊಂಡರು. ಈ ರೀತಿ, ಸರ್ಪವು “ಅವನ [“ಸಂತಾನ” ದ] ಹಿಮ್ಮಡಿಯನ್ನು ಕಚ್ಚಲು” ಶಕ್ತವಾಯಿತು. (ಆದಿಕಾಂಡ 3:15; ಯೋಹಾನ 8:39-44; ಅ. ಕೃತ್ಯಗಳು 3:12, 15) ಇದನ್ನು ಕೇವಲ ಹಿಮ್ಮಡಿಯ ಗಾಯವೆಂದು ಯಾಕೆ ವಿವರಿಸಲಾಗಿದೆ? ಯಾಕಂದರೆ ಈ ಗಾಯಗೊಳಿಸುವಿಕೆಯು ಭೂಮಿಯ ಮೇಲೆ ಅವನನ್ನು ಕೇವಲ ಕೊಂಚ ಸಮಯ ಬಾಧಿಸಿತು. ಇದು ಶಾಶ್ವತವಾದದ್ದಲ್ಲ, ಯಾಕಂದರೆ ಮೂರನೆಯ ದಿವಸದಲ್ಲಿ ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿದನು ಮತ್ತು ಅವನನ್ನು ಆತ್ಮ ಜೀವಿತಕ್ಕೆ ಏರಿಸಿದನು.—ಅ. ಕೃತ್ಯಗಳು 2:32, 33; 1 ಪೇತ್ರ 3:18.
25. (ಎ) ಸೈತಾನನ ಮತ್ತು ಅವನ ದೂತರ ವಿರುದ್ಧ ಮಹಿಮಾಭರಿತ ಯೇಸುವು ಈಗಾಗಲೇ ಹೇಗೆ ಕಾರ್ಯಾಚರಣೆ ನಡಿಸಿದ್ದಾನೆ? (ಬಿ) ಸೈತಾನನ ಐಹಿಕ ಸಂತಾನದ ನಿರ್ಮೂಲನವು ಯಾವಾಗ ಇರುವುದು? (ಸಿ) ಸೈತಾನನನ್ನು, ಅಂದರೆ ಸರ್ಪನನ್ನು ದೇವರ ಸ್ತ್ರೀಯ ಸಂತಾನವು “ತಲೆಯಲ್ಲಿ” ಜಜ್ಜುವುದು ಯಾವ ಅರ್ಥದಲ್ಲಿರುವುದು?
25 ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ಈಗ ದೇವರ ಬಲಪಕ್ಕದಲ್ಲಿದ್ದು, ಯೆಹೋವನ ವಿರೋಧಿಗಳಿಗೆ ನ್ಯಾಯ ತೀರ್ಪು ವಿಧಿಸುತ್ತಾ, ಸೇವೆ ಸಲ್ಲಿಸುತ್ತಿದ್ದಾನೆ. ಸೈತಾನ ಮತ್ತು ಅವನ ದೂತರ ವಿರುದ್ಧ ಈಗಾಗಲೇ ಅವನು ಕಾರ್ಯಾಚರಣೆ ನಡಿಸಿ, ಅವರನ್ನು ಕೆಳಗಡೆ ದೊಬ್ಬಿರುತ್ತಾನೆ ಮತ್ತು ಅವರ ಚಟುವಟಿಕೆಗಳನ್ನು ಈ ಭೂಮಿಗೆ ನಿರ್ಬಂಧಗೊಳಿಸಿರುತ್ತಾನೆ—ಇದು ಈ 20-ನೆಯ ಶತಮಾನದಲ್ಲಿ ಏರುತ್ತಿರುವ ಸಂಕಷ್ಟಗಳ ಕಾರಣವನ್ನು ತೋರಿಸುತ್ತದೆ. (ಪ್ರಕಟನೆ 12:9, 12) ಆದರೆ ಮುಂತಿಳಿಸಲ್ಪಟ್ಟ ಸೈತಾನನ ಐಹಿಕ ಸಂತಾನದ ನಿರ್ಮೂಲನವು, ಮಹಾ ಬಾಬೆಲಿನ ಮತ್ತು ಭೂಮಿಯ ಮೇಲಿನ ಸೈತಾನನ ಸಂಸ್ಥೆಯ ಇತರ ವಿಭಾಗಗಳ ಮೇಲೆ ನ್ಯಾಯತೀರ್ಪನ್ನು ದೇವರು ಜಾರಿಗೊಳಿಸುವಾಗ ಆಗಲಿದೆ. ಕಟ್ಟಕಡೆಗೆ, ದೇವರ ಸ್ತ್ರೀಯ ಸಂತಾನವಾದ, ಯೇಸು ಕ್ರಿಸ್ತನು, ಸೈತಾನನನ್ನು ಜಜ್ಜುವನು ಅಂದರೆ ಆ ಕುತಂತ್ರಿ ಪುರಾತನ ಸರ್ಪನ “ತಲೆಯನ್ನು” ಜಜ್ಜುವನು ಮತ್ತು ಅದರ ಅರ್ಥ ಅವನ ಪೂರ್ಣ ವಿನಾಶ ಮತ್ತು ಮಾನವ ಕುಲದ ವ್ಯವಹಾರಗಳಿಂದ ಅವನ ಸಂಪೂರ್ಣ ಉಚ್ಚಾಟನೆಯಾಗಿರುತ್ತದೆ.—ರೋಮಾಪುರ 16:20.
26. ಪ್ರಕಟನೆಯ ಪ್ರವಾದನೆಯನ್ನು ನಾವು ಪರೀಕ್ಷಿಸುವುದು ಅತಿ ಪ್ರಾಮುಖ್ಯ ಯಾಕೆ?
26 ಇದೆಲ್ಲವು ಹೇಗೆ ಆಗಲಿರುವುದು? ಅದು ತಾನೇ ಬೈಬಲ್ ಪುಸ್ತಕವಾದ ಪ್ರಕಟನೆಯಲ್ಲಿ ನಮಗೋಸ್ಕರ ಮುಸುಕು ತೆರೆಯಲ್ಪಟ್ಟಿದೆ. ದರ್ಶನಗಳ ಸರಮಾಲೆಯಲ್ಲಿ, ಮನತಟ್ಟುವ ಸಂಕೇತಗಳ ಮತ್ತು ಚಿಹ್ನೆಗಳ ಮೂಲಕ ಎತ್ತಿ ತೋರಿಸುತ್ತಾ, ಅದನ್ನು ನಮಗೆ ಪ್ರಕಟಪಡಿಸಲಾಗಿದೆ. ಕುತೂಹಲದಿಂದ, ಈ ಶಕ್ತಿಯುತ ಪ್ರವಾದನೆಯನ್ನು ನಾವು ಪರೀಕ್ಷಿಸೋಣ. ನಾವು ಪ್ರಕಟನೆಯ ಮಾತುಗಳನ್ನು ಆಲಿಸಿ, ಕೈಕೊಂಡು ನಡೆಯುವುದಾದರೆ, ನಿಜವಾಗಿಯೂ ಸಂತೋಷಿತರು! ಹಾಗೆ ಮಾಡುವುದರಿಂದ, ನಾವು ಸಾರ್ವಭೌಮ ಪ್ರಭುವಾದ ಯೆಹೋವನ ನಾಮಕ್ಕೆ ಗೌರವವನ್ನು ತರುವುದರಲ್ಲಿ ಪಾಲಿಗರಾಗುತ್ತೇವೆ ಮತ್ತು ಅವನ ನಿತ್ಯ ಆಶೀರ್ವಾದಗಳಿಗೆ ಬಾಧ್ಯರಾಗುತ್ತೇವೆ. ದಯಮಾಡಿ ಓದುತ್ತಾ ಮುಂದರಿಯಿರಿ ಮತ್ತು ನೀವೇನು ಕಲಿಯುತ್ತೀರೋ ಅದನ್ನು ವಿವೇಕಯುಕ್ತವಾಗಿ ಅನ್ವಯಿಸಿರಿ. ಮಾನವ ಕುಲದ ಇತಿಹಾಸದ ಪರಮಾವಧಿಯ ಈ ಸಮಯದಲ್ಲಿ ಇದು ನಿಮ್ಮ ರಕ್ಷಣೆಯ ಅರ್ಥದಲ್ಲಿರಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ವ್ಯಾಪಾರ ವಹಿವಾಟುಗಳ ಪುರಾತನ ಬೆಣೆ ಲಿಪಿ ದಾಖಲೆಗಳು
ಪುಸ್ತಕ ಏನ್ಸಿಯೆಂಟ್ ನಿಯರ್ ಈಸರ್ನ್ಟ್ ಟೆಕ್ಟ್ಸ್, ಎಂಬುದು ಜೇಮ್ಸ್ ಬಿ. ಪ್ರಿಟ್‌ಶಾರ್ಡ್‌ರಿಂದ ಸಂಪಾದಕೀಯತ್ವ ಮಾಡಲ್ಪಟ್ಟು, ಬ್ಯಾಬಿಲನ್ಯರ ಸಮಯಗಳಲ್ಲಿ ಹಾಮರಾಬಿಯಿಂದ ಸಂಗ್ರಹಿಸಲ್ಪಟ್ಟ ಸುಮಾರು 300 ಶಾಸನಗಳನ್ನು ಪಟ್ಟಿಮಾಡುತ್ತದೆ. ಆ ಸಮಯಗಳಲ್ಲಿ ವಾಣಿಜ್ಯ ಲೋಕದಲ್ಲಿ ವ್ಯಾಪಕವಾಗಿ ಹರಡಿರುವ ಮುಚ್ಚುಮರೆಯಿಲ್ಲದ ಅಪ್ರಾಮಾಣಿಕತೆಯನ್ನು ನಿಷೇಧಿಸಲು ಅದು ಆವಶ್ಯಕವಾಗಿತ್ತು ಎಂದು ಇವುಗಳು ತೋರಿಸುತ್ತವೆ. ಒಂದು ಉದಾಹರಣೆಯನ್ನು ತೆಗೆದುಕೊಳ್ಳುವ: “ಒಬ್ಬ ಪ್ರಭುವು ಬೆಳ್ಳಿಯನ್ನಾಗಲಿ, ಬಂಗಾರವನ್ನಾಗಲಿ, ಯಾ ಒಬ್ಬ ಗಂಡಾಳು ಇಲ್ಲವೆ ಹೆಣ್ಣಾಳು ಯಾ ಒಂದು ಎತ್ತು ಇಲ್ಲವೆ ಒಂದು ಕುರಿ ಯಾ ಕತ್ತೆ ಯಾ ಬೇರೆ ಯಾವುದೇ ವಸ್ತುವನ್ನು ಪ್ರಭುವಿನ ಮಗ ಇಲ್ಲವೆ ಪ್ರಭುವಿನ ಆಳಿನಿಂದ ಸಾಕ್ಷ್ಯವಿಲ್ಲದೆ ಮತ್ತು ಕರಾರುಗಳಿಲ್ಲದೆ ಭದ್ರತೆಗಾಗಿ ತೆಗೆದುಕೊಂಡಲ್ಲಿ ಮತ್ತು ಅನಂತರ ಹಿಂದೆ ಸರಿಯುವಲ್ಲಿ, ಆ ಪ್ರಭುವು ಒಬ್ಬ ಕಳ್ಳನಾಗಿದ್ದಾನೆ, ಅವನನ್ನು ಕೊಲ್ಲಲಾಗುವುದು.”