ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೀಕರ ರಹಸ್ಯವೊಂದು ಬಗೆಹರಿಸಲ್ಪಡುವುದು

ಭೀಕರ ರಹಸ್ಯವೊಂದು ಬಗೆಹರಿಸಲ್ಪಡುವುದು

ಅಧ್ಯಾಯ 34

ಭೀಕರ ರಹಸ್ಯವೊಂದು ಬಗೆಹರಿಸಲ್ಪಡುವುದು

1. (ಎ) ಮಹಾ ವೇಶ್ಯೆ ಮತ್ತು ಅವಳ ಭಯಂಕರ ಸವಾರಿಯನ್ನು ನೋಡಿದಾಗ ಯೋಹಾನನು ಹೇಗೆ ಪ್ರತಿಕ್ರಿಯಿಸುತ್ತಾನೆ, ಮತ್ತು ಯಾಕೆ? (ಬಿ) ಪ್ರವಾದನಾ ದರ್ಶನದ ನೆರವೇರಿಕೆಯಲ್ಲಿ ಘಟನೆಗಳು ಬಿಚ್ಚಲ್ಪಡುತ್ತಿರುವಾಗ, ಇಂದಿನ ಯೋಹಾನ ವರ್ಗವು ಹೇಗೆ ಪ್ರತಿಕ್ರಿಯಿಸುತ್ತದೆ?

ಮಹಾ ವೇಶ್ಯೆ ಮತ್ತು ಅವಳ ಭಯಂಕರ ಸವಾರಿ ಮೃಗವನ್ನು ನೋಡುವುದರಲ್ಲಿ ಯೋಹಾನನ ಪ್ರತಿಕ್ರಿಯೆಯು ಏನಾಗಿದೆ? ಅವನು ತಾನೇ ಉತ್ತರಿಸುವುದು: “ಸರಿ, ಆಕೆ ಕಣ್ಣಿಗೆ ಬಿದ್ದಾಗ ನಾನು ಮಹಾ ವಿಸ್ಮಯತೆಯಿಂದ ತಿಳಿಯಲು ಆತುರಪಟ್ಟೆನು.” (ಪ್ರಕಟನೆ 17:6ಬಿ, NW) ಕೇವಲ ಮಾನವ ಭಾವನಾಶಕ್ತಿಯು ಇಂಥ ಒಂದು ನೋಟವನ್ನು ಎಂದಿಗೂ ಉಂಟುಮಾಡಸಾಧ್ಯವಿಲ್ಲ. ಆದರೂ ಅದು ಅಲ್ಲಿದೆ—ಹೊರಗೆ ಅರಣ್ಯದಲ್ಲಿ—ಅಸಹ್ಯಕರವಾದ, ಕಡುಗೆಂಪು ಬಣ್ಣದ ಕಾಡು ಮೃಗದ ಮೇಲೆ ಹಾರಿಕೂತಿದ್ದ ವಿಷಯಲಂಪಟತೆಯ ಸೂಳೆ! (ಪ್ರಕಟನೆ 17:3) ಪ್ರವಾದನಾ ದರ್ಶನದ ನೆರವೇರಿಕೆಯಲ್ಲಿ ಘಟನೆಗಳು ತೆರೆಯಲ್ಪಡುತ್ತಿರುವಷ್ಟಕ್ಕೆ ಇಂದಿನ ಯೋಹಾನ ವರ್ಗವು ಕೂಡ ಅತಿ ವಿಸ್ಮಯತೆಯಿಂದ ತಿಳಿಯಲು ಆತುರಪಡುತ್ತದೆ. ಲೋಕದ ಜನರು ಅದನ್ನು ನೋಡಶಕ್ತರಾಗುತ್ತಿದ್ದರೆ, ಅವರು ‘ನಂಬಲಸಾಧ್ಯ!’ ಎಂದು ಉದ್ಗಾರ ಮಾಡುತ್ತಿದ್ದರು, ಮತ್ತು ಲೋಕಧುರೀಣರು ‘ಆಲೋಚಿಸಲು ಅಸಾಧ್ಯ’ ಎಂದು ಪ್ರತಿಧ್ವನಿಸುತ್ತಿದ್ದರು, ಆದರೆ ದರ್ಶನವು 20 ನೆಯ ಶತಮಾನದ ಗಾಬರಿಪಡಿಸುವ ವಾಸ್ತವಿಕತೆ ಆಗುತ್ತದೆ. ದೇವರ ಜನರು ಈಗಾಗಲೇ ದರ್ಶನದ ನೆರವೇರಿಕೆಯಲ್ಲಿ ಗಮನಾರ್ಹವಾದ ಪಾಲು ತೆಗೆದುಕೊಂಡಿದ್ದಾರೆ ಮತ್ತು ಪ್ರವಾದನೆಯು ಅದರ ಬೆರಗುಗೊಳಿಸುವ ಪರಾಕಾಷ್ಠೆಗೆ ನೇರವಾಗಿ ಮುನ್ನಡೆಯುತ್ತದೆಂದು ಇದು ಅವರಿಗೆ ಆಶ್ವಾಸನೆಯನ್ನೀಯುತ್ತದೆ.

2. (ಎ) ಯೋಹಾನನ ವಿಸ್ಮಯತೆಗೆ ಪ್ರತಿಕ್ರಿಯೆಯಲ್ಲಿ, ದೇವದೂತನು ಅವನಿಗೆ ಏನನ್ನು ಹೇಳುತ್ತಾನೆ? (ಬಿ) ಯೋಹಾನ ವರ್ಗಕ್ಕೆ ಏನು ಪ್ರಕಟಿಸಲ್ಪಟ್ಟಿದೆ, ಮತ್ತು ಇದನ್ನು ಹೇಗೆ ಮಾಡಲಾಗಿದೆ?

2 ದೇವದೂತನು ಯೋಹಾನನ ಆಶ್ಚರ್ಯವನ್ನು ಗಮನಿಸುತ್ತಾನೆ. ಯೋಹಾನನು ಮುಂದುವರಿಸುವುದು, “ಮತ್ತು ಹೀಗೆ, ಆ ದೇವದೂತನು ನನಗೆ ಹೇಳಿದ್ದು: ‘ನೀನೇಕೆ ವಿಸ್ಮಯಗೊಂಡೆ? ಆ ಸ್ತ್ರೀಯ ಮತ್ತು ಅವಳನ್ನು ಒಯ್ಯುತ್ತಿರುವ ಆ ಏಳು ತಲೆಗಳೂ ಹತ್ತು ಕೊಂಬುಗಳೂ ಉಳ್ಳ ಕಾಡು ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ.’” (ಪ್ರಕಟನೆ 17:7, NW) ಆಹಾ, ದೇವದೂತನು ಈಗ ರಹಸ್ಯವನ್ನು ಬಿಚ್ಚಲಿರುವನು! ಆತನು ವಿಸ್ಮಯಗೊಂಡಿರುವ ಯೋಹಾನನಿಗೆ ದರ್ಶನದ ವಿಭಿನ್ನ ಮುಖಗಳನ್ನು ಮತ್ತು ತೆರೆಯಲ್ಪಡಲಿರುವ ನಾಟಕೀಯ ಘಟನೆಗಳನ್ನು ವಿವರಿಸುತ್ತಾನೆ. ಹಾಗೆಯೇ, ಇಂದು ದೇವದೂತ ಮಾರ್ಗದರ್ಶನದ ಕಳಗೆ ಅದು ಸೇವಿಸುತ್ತಿರುವಂತೆಯೇ ಎಚ್ಚರವುಳ್ಳ ಯೋಹಾನ ವರ್ಗಕ್ಕೆ ಪ್ರವಾದನೆಯ ತಿಳಿವಳಿಕೆಯನ್ನು ಪ್ರಕಟಿಸಲಾಗಿದೆ. “ಸ್ವಪ್ನಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ?” ನಂಬಿಗಸ್ತ ಯೋಸೇಫನಂತೆ, ಅವು ಹಾಗೆಯೇ ಇರುತ್ತವೆಂದು ನಾವು ನಂಬುತ್ತೇವೆ. (ಆದಿಕಾಂಡ 40:8; ಹೋಲಿಸಿರಿ ದಾನಿಯೇಲ 2:29, 30.) ಯೆಹೋವನು ದರ್ಶನದ ಅರ್ಥವನ್ನು ಮತ್ತು ಅವರ ಜೀವಿತದ ಮೇಲೆ ಅದರ ಪರಿಣಾಮವನ್ನು ಅವರಿಗೆ ಪ್ರಕಟಿಸುವಾಗ ದೇವರ ಜನರು, ಮಧ್ಯವೇದಿಕೆಯಲ್ಲಿ ನಿಲ್ಲಿಸಲ್ಪಟ್ಟಿದ್ದಾರೋ ಎಂಬಂತಿದ್ದಾರೆ. (ಕೀರ್ತನೆ 25:14) ಸಕಾಲದಲ್ಲಿ, ಆ ಸ್ತ್ರೀಯ ಮತ್ತು ಮೃಗದ ಗೂಢಾರ್ಥವನ್ನು ಅವರ ತಿಳಿವಳಿಕೆಗೆ ಆತನು ತೆರೆದಿದ್ದಾನೆ.—ಕೀರ್ತನೆ 32:8.

3, 4. (ಎ) ಯಾವ ಬಹಿರಂಗ ಭಾಷಣವು 1942 ರಲ್ಲಿ ಸೊಸೈಟಿಯ ಅಧ್ಯಕ್ಷರಿಂದ ಕೊಡಲ್ಪಟ್ಟಿತು, ಮತ್ತು ಅದು ಕಡುಗೆಂಪು ಬಣ್ಣದ ಕಾಡು ಮೃಗವನ್ನು ಹೇಗೆ ಗುರುತಿಸಿತು? (ಬಿ) ಯೋಹಾನನಿಗೆ ದೇವದೂತನಿಂದ ಹೇಳಲ್ಪಟ್ಟ ಯಾವ ಮಾತುಗಳು ಅಧ್ಯಕ್ಷ ನಾರರಿಂದ ಚರ್ಚಿಸಲ್ಪಟ್ಟವು?

3 ಸಪ್ಟಂಬರ 18-20, 1942ರ ಎರಡನೆಯ ಲೋಕ ಯುದ್ಧದ ಉಚ್ಛಾಯ್ರ ಸಮಯದಲ್ಲಿ, ಅಮೆರಿಕದ ಯೆಹೋವನ ಸಾಕ್ಷಿಗಳು ತಮ್ಮ ನ್ಯೂ ವರ್ಲ್ಡ್‌ ತೀಯೊಕ್ರ್ಯಾಟಿಕ್‌ ಎಸೆಂಬ್ಲಿಯನ್ನು ಜರುಗಿಸಿದರು. ಅಮೆರಿಕದ ಒಹೈಯೋವಿನ ಪ್ರಮುಖ ನಗರ, ಕೀವ್ಲ್‌ಲ್ಯಾಂಡ್‌ಗೆ, 50 ಕ್ಕಿಂತ ಹೆಚ್ಚಿನ ಇತರ ಅಧಿವೇಶನ ನಗರಗಳು—1,29,699ರ ಉನ್ನತ ಹಾಜರಿಯೊಂದಿಗೆ ಟೆಲಿಫೋನಿನಿಂದ ಜೋಡಿಸಲ್ಪಟ್ಟವು. ಎಲ್ಲಿ ಯುದ್ಧ ಸಮಯದ ಪರಿಸ್ಥಿತಿಗಳು ಅನುಮತಿಸಿದವೂ, ಅಲ್ಲಿ ಇತರ ಅಧಿವೇಶನಗಳು ಲೋಕದ ಸುತ್ತಲೂ ಕಾರ್ಯಕ್ರಮವನ್ನು ಪುನರಾವರ್ತಿಸಿದವು. ಆ ಸಮಯದಲ್ಲಿ ಯೆಹೋವನ ಜನರಲ್ಲಿ ಅನೇಕರು ಈ ಯುದ್ಧವು ಅರ್ಮಗೆದೋನಿನ ದೇವರ ಯುದ್ಧದೊಳಗೆ ನಡಿಸುವುದೆಂದು ನಿರೀಕ್ಷಿಸಿದ್ದರು; ಆದಕಾರಣ “ಸಮಾಧಾನ—ಅದು ಬಾಳಬಲ್ಲದೋ?” ಎಂಬ ಶಿರೋನಾಮದ ಸಾರ್ವಜನಿಕ ಭಾಷಣವು ಹೆಚ್ಚಿನ ಕುತೂಹಲವನ್ನು ಎಬ್ಬಿಸಿತು. ಜನಾಂಗಗಳಿಗೆ ತೀರಾ ವಿರುದ್ಧವಾದ ವಿಷಯವು ಕಾದಿಟ್ಟಿರುವುದಾಗಿ ತೋರುವಾಗ, ವಾಚ್‌ ಟವರ್‌ ಸೊಸೈಟಿಯ ಹೊಸ ಅಧ್ಯಕ್ಷರಾದ ಎನ್‌. ಏಚ್‌. ನಾರ್‌ ಸಮಾಧಾನದ ಕುರಿತಾಗಿ ಹೇಗೆ ಮಾತಾಡಸಾಧ್ಯವಿತ್ತು? * ಕಾರಣವೇನಂದರೆ, ಯೋಹಾನ ವರ್ಗವು ದೇವರ ಪ್ರವಾದನಾ ವಾಕ್ಯಕ್ಕೆ “ಹೆಚ್ಚಾಗಿ ಲಕ್ಷ್ಯ” ಕೊಡುತ್ತಾ ಇತ್ತು.—ಇಬ್ರಿಯ 2:1; 2 ಪೇತ್ರ 1:19.

4 “ಸಮಾಧಾನ—ಅದು ಬಾಳಬಲ್ಲದೋ?” ಎಂಬ ಭಾಷಣವು ಪ್ರವಾದನೆಯ ಮೇಲೆ ಯಾವ ಬೆಳಕನ್ನು ಚೆಲ್ಲಿತು? ಪ್ರಕಟನೆ 17:3ರ ಕಡುಗೆಂಪು ಬಣ್ಣದ ಕಾಡು ಮೃಗವನ್ನು ಜನಾಂಗ ಸಂಘವಾಗಿ ಸ್ಪಷ್ಟವಾಗಿ ಗುರುತಿಸುತ್ತಾ, ಅಧ್ಯಕ್ಷ ನಾರ್‌ ಯೋಹಾನನಿಗೆ ದೇವದೂತನ ಮುಂದಿನ ಮಾತುಗಳ ಆಧಾರದ ಮೇಲೆ ಅದರ ಬಿರುಸಾದ ಜೀವನೋದ್ಯೋಗವನ್ನು ಚರ್ಚಿಸುತ್ತಾ ಹೋದರು: “ನೀನು ಕಂಡ ಈ ಕಾಡು ಮೃಗವು ಮೊದಲು ಇತ್ತು, ಆದರೆ ಈಗ ಇಲ್ಲ, ಮತ್ತು ಇನ್ನೂ ಅಧೋಲೋಕದಿಂದ ಏರಿಬರುವುದು ಮತ್ತು ಅದು ನಾಶಕ್ಕೆ ಹೋಗಿ ಬಿಡುವುದು.”—ಪ್ರಕಟನೆ 17:8ಎ, NW. 

5. (ಎ) “ಕಾಡು ಮೃಗವು ಮೊದಲು ಇತ್ತು. . . .” ಮತ್ತು ಅನಂತರ “ಈಗ ಇಲ್ಲ” ಅದು ಹೇಗೆ? (ಬಿ) “ಜನಾಂಗ ಸಂಘವು ಗುಂಡಿಯಲ್ಲಿಯೇ ಉಳಿಯುವುದೋ?” ಎಂಬ ಪ್ರಶ್ನೆಗೆ ಅಧ್ಯಕ್ಷ ನಾರ್‌ ಹೇಗೆ ಉತ್ತರಿಸಿದರು?

5 “ಕಾಡು ಮೃಗವು ಮೊದಲು . . . ತ್ತು.” ಹೌದು, ಜನವರಿ 10, 1920 ರಿಂದ ಹಿಡಿದು ಒಂದು ಯಾ ಇನ್ನೊಂದು ಸಮಯದಲ್ಲಿ 63 ಜನಾಂಗಗಳು ಭಾಗವಹಿಸುವುದರೊಂದಿಗೆ, ಅದು ಜನಾಂಗ ಸಂಘವಾಗಿ ಅಸ್ತಿತ್ವದಲ್ಲಿತ್ತು. ಆದರೆ, ಜಪಾನ್‌, ಜರ್ಮನಿ ಮತ್ತು ಇಟೆಲಿ ಸರದಿಯಾಗಿ ಹಿಂದೆ ಸರಿದವು, ಮತ್ತು ಜನಾಂಗ ಸಂಘದಿಂದ ಸೋವಿಯೆಟ್‌ ಯೂನಿಯನನ್ನು ಹೊರಹಾಕಲಾಯಿತು. ಸಪ್ಟಂಬರ 1939 ರಲ್ಲಿ ಜರ್ಮನಿಯ ನಾಜಿ ನಿರಂಕುಶ ಪ್ರಭುವು ಎರಡನೆಯ ಲೋಕ ಯುದ್ಧವನ್ನು ಆರಂಭಿಸಿದನು. * ಲೋಕದಲ್ಲಿ ಸಮಾಧಾನವನ್ನು ಕಾಪಾಡಲು ವಿಫಲ ಹೊಂದಿದ ಜನಾಂಗ ಸಂಘವು ನಿಷ್ಕ್ರಿಯತೆಯ ಅಧೋಲೋಕದೊಳಗೆ ಕಾರ್ಯತಃ ಧುಮುಕಿತು. ಅದು 1942 ರೊಳಗೆ ಹಿಂದೆ ಇದ್ದದ್ದಾಗಿ ಪರಿಣಮಿಸಿತು. ಇದರ ಮುಂಚೆ ಯಾ ಸ್ವಲ್ಪ ನಂತರದ ಸಮಯದಲ್ಲಿ ಆಗಿರದೆ—ನೇರವಾಗಿ ಆ ಸಂದಿಗ್ಧ ಸಮಯದಲ್ಲಿಯೇ—ಯೆಹೋವನು ತನ್ನ ಜನರಿಗೆ ದರ್ಶನದ ಪೂರ್ಣ ಗಾಢ ಅರ್ಥವನ್ನು ಬಿಚ್ಚಿದನು! ನ್ಯೂ ವರ್ಲ್ಡ್‌ ತೀಯೊಕ್ರ್ಯಾಟಿಕ್‌ ಎಸೆಂಬ್ಲಿಯಲ್ಲಿ, ಅಧ್ಯಕ್ಷ ನಾರ್‌ ಪ್ರವಾದನೆಯೊಂದಿಗೆ ಹೊಂದಿಕೆಯಲ್ಲಿ “ಮೃಗವು . . . ಈಗ ಇಲ್ಲ” ಎಂಬುದಾಗಿ ಘೋಷಿಸಲು ಸಾಧ್ಯವಾಯಿತು. ಅವರು ಅನಂತರ ಈ ಪ್ರಶ್ನೆಯನ್ನು ಕೇಳಿದರು, “ಜನಾಂಗ ಸಂಘವು ಗುಂಡಿಯಲ್ಲಿಯೇ ಉಳಿಯುವುದೋ?” ಪ್ರಕಟನೆ 17:8ನ್ನು ಉಲ್ಲೇಖಿಸುತ್ತಾ, ಅವರು ಉತ್ತರಿಸಿದ್ದು: “ಐಹಿಕ ಜನಾಂಗಗಳ ಸಂಘವು ಪುನಃ ಮೇಲೇರುವುದು.” ಅದು ಹಾಗೆಯೇ—ಯೆಹೋವನ ಪ್ರವಾದನಾ ವಾಕ್ಯದ ಸಮರ್ಥನೆಯಲ್ಲಿ—ಆಗಿ ಪರಿಣಮಿಸಿತು!

ಅಧೋಲೋಕದಿಂದ ಏರಿಬರುವುದು

6. (ಎ) ಕಡುಗೆಂಪು ಬಣ್ಣದ ಕಾಡು ಮೃಗವು ಅಧೋಲೋಕದಿಂದ ಯಾವಾಗ ಏರಿಬಂತು, ಮತ್ತು ಯಾವ ಹೊಸ ಹೆಸರಿನೊಂದಿಗೆ? (ಬಿ) ಸಂಯುಕ್ತ ರಾಷ್ಟ್ರ ಸಂಘವು ನಿಜವಾಗಿಯೂ ಕಡುಗೆಂಪು ಬಣ್ಣದ ಕಾಡು ಮೃಗದ ಪುನರುಜ್ಜೀವನವಾಗಿದೆಯೇಕೆ?

6 ಕಡುಗೆಂಪು ಬಣ್ಣದ ಕಾಡು ಮೃಗವು ನಿಜವಾಗಿಯೂ ಅಧೋಲೋಕದೊಳಗಿಂದ ಏರಿಬಂತು. ಜೂನ್‌ 26, 1945 ರಂದು ಅಮೆರಿಕದ ಸಾನ್‌ ಫ್ರಾನ್ಸಿಸ್ಕೋದಲ್ಲಿ ಕೋಲಾಹಲದ ಘೋಷದೊಂದಿಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಶಾಸನವನ್ನು ಸ್ವೀಕರಿಸುತ್ತಾ 50 ರಾಷ್ಟ್ರಗಳು ಮತಹಾಕಿದವು. ಈ ಸಂಸ್ಥೆಯ ಉದ್ದೇಶವು “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದೇ” ಆಗಿತ್ತು. ಜನಾಂಗ ಸಂಘ ಮತ್ತು ಸಂಯುಕ್ತ ರಾಷ್ಟ್ರ ಸಂಘ (ಯು.ಎನ್‌.) ಗಳ ನಡುವೆ ಅನೇಕ ಸಾದೃಶ್ಯಗಳು ಇದ್ದವು. ದ ವಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಗಮನಿಸುವುದು: “ಕೆಲವು ರೀತಿಗಳಲ್ಲಿ, ಸಂಯುಕ್ತ ರಾಷ್ಟ್ರವು, ಯಾವುದು ಒಂದನೇ ಲೋಕ ಯುದ್ಧದ ಅನಂತರ ಸಂಘಟಿಸಲ್ಪಟ್ಟಿತ್ತೋ ಆ ಜನಾಂಗ ಸಂಘವನ್ನು ಹೋಲುತ್ತದೆ. . . . ಸಂಯುಕ್ತ ರಾಷ್ಟ್ರವನ್ನು ಸ್ಥಾಪಿಸಿದ ಅನೇಕ ರಾಷ್ಟ್ರಗಳು ಜನಾಂಗ ಸಂಘವನ್ನು ಕೂಡ ಸ್ಥಾಪಿಸಿದವುಗಳಾಗಿದ್ದವು. ಜನಾಂಗ ಸಂಘದಂತೆ, ಜನಾಂಗಗಳ ಮಧ್ಯೆ ಶಾಂತಿ ಕಾಪಾಡಲಿಕ್ಕಾಗಿ ಸಹಾಯ ನೀಡಲು ಸಂಯುಕ್ತ ರಾಷ್ಟ್ರವು ಸ್ಥಾಪಿಸಲ್ಪಟ್ಟಿತ್ತು. ಸಂಯುಕ್ತ ರಾಷ್ಟ್ರದ ಹೆಚ್ಚಿನ ಅಂಗಗಳು ಜನಾಂಗ ಸಂಘದವುಗಳಂತೆ ಇವೆ.” ಹಾಗಾದರೆ ಸಂಯುಕ್ತ ರಾಷ್ಟ್ರವು ನಿಜವಾಗಿಯೂ ಕಡುಗೆಂಪು ಬಣ್ಣದ ಮೃಗದ ಪುನರುಜ್ಜೀವನವಾಗಿದೆ. ಅದರ 175 ರಾಷ್ಟ್ರಗಳ ಸದಸ್ಯತನ ಜನಾಂಗ ಸಂಘದ 63ನ್ನು ತುಂಬಾ ಮೀರಿಸುತ್ತದೆ; ಅದರ ಪೂರ್ವಾಧಿಕಾರಿಗಿಂತ ಇದು ವಿಶಾಲ ಜವಾಬ್ದಾರಿಕೆಗಳನ್ನು ಕೂಡ ತೆಗೆದುಕೊಂಡಿದೆ.

7. (ಎ) ಪುನರುಜ್ಜೀವನಗೊಂಡ ಕಡುಗೆಂಪು ಬಣ್ಣದ ಕಾಡು ಮೃಗವನ್ನು ಕಂಡು ಭೂನಿವಾಸಿಗಳು ಯಾವ ರೀತಿಯಲ್ಲಿ ಮೆಚ್ಚುಗೆಯಿಂದ ಆಶ್ಚರ್ಯಪಟ್ಟಿದ್ದಾರೆ? (ಬಿ) ಸಂಯುಕ್ತ ರಾಷ್ಟ್ರಕ್ಕೆ ಯಾವ ಗುರಿಯು ದೊರೆಯದೆ ನುಣುಚಿಹೋಗಿದೆ, ಮತ್ತು ಈ ಸಂಬಂಧದಲ್ಲಿ ಅದರ ಸೆಕ್ರಿಟರಿ ಜೆನೆರಲ್‌ ಏನು ಹೇಳಿದರು?

7 ಮೊತ್ತಮೊದಲಾಗಿ, ಸಂಯುಕ್ತ ರಾಷ್ಟ್ರ ಸಂಘದ ಕುರಿತಾಗಿ ಮಹಾ ನಿರೀಕ್ಷೆಗಳನ್ನು ವ್ಯಕ್ತಪಡಿಸಲಾಗಿತ್ತು. ಇದು ದೇವದೂತನ ಮಾತುಗಳ ನೆರವೇರಿಕೆಯಲ್ಲಿ ಇದೆ: “ಮತ್ತು ಆ ಕಾಡು ಮೃಗವು ಹೇಗೆ ಇತ್ತು ಮತ್ತು ಈಗ ಇಲ್ಲ, ಮತ್ತು ಆದರೂ ಭವಿಷ್ಯದಲ್ಲಿ ಇರುವುದು ಎಂದು ಅವರು ಕಾಣುವಾಗ, ಭೂಮಿಯ ಮೇಲೆ ನಿವಾಸಿಸುವವರು ಮೆಚ್ಚುಗೆಯಿಂದ ಆಶ್ಚರ್ಯಪಡುವರು, ಆದರೆ ಅವರ ಹೆಸರುಗಳು ಲೋಕದ ಸ್ಥಾಪನೆಯಿಂದ ಜೀವದ ಸುರುಳಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ.” (ಪ್ರಕಟನೆ 17:8ಬಿ, NW) ನ್ಯೂ ಯಾರ್ಕಿನ ಈಸ್ಟ್‌ ನದಿಯ ಮೇಲೆ ಅದರ ಭವ್ಯವಾದ ಮುಖ್ಯ ಕಾರ್ಯಾಲಯಗಳಿಂದ ಕಾರ್ಯನಡಿಸುವ, ಈ ಹೊಸ ಅತಿಮಾನುಷ ಶಕ್ತಿಯನ್ನು ಭೂನಿವಾಸಿಗಳು ಶ್ಲಾಘಿಸಿದ್ದಾರೆ. ಆದರೆ ನಿಜಶಾಂತಿ ಮತ್ತು ಭದ್ರತೆಯು ಸಂಯುಕ್ತ ರಾಷ್ಟ್ರವನ್ನು ನುಣುಚಿಕೊಂಡಿದೆ. ಈ ಅತಿಘೋರ ನ್ಯೂಕ್ಲಿಯರ್‌ ಯುಗದಲ್ಲಿ, ಲೋಕ ಶಾಂತಿಯು ಮ್ಯೂಚುವಲ್‌ ಅಷ್ಯೂರ್ಡ್‌ ಡಿಸ್ಟ್ರಕ್ಷನ್‌ (ಪರಸ್ಪರ ಖಂಡಿತ ನಾಶನ)—ಸಂಕ್ಷೇಪವಾಗಿ ಎಮ್‌ಎಡಿ (MAD)—ಬೆದರಿಕೆಯಿಂದಲೇ ಕಾಪಾಡಲ್ಪಟ್ಟಿದೆ ಮತ್ತು ಶಸ್ತ್ರ ಪೈಪೋಟಿಯು ಬೃಹತ್ಸಂಖ್ಯೆಯಲ್ಲಿ ಏರುತ್ತಾ ಮುಂದುವರಿದಿದೆ. ಸಂಯುಕ್ತ ರಾಷ್ಟ್ರ ಸಂಘದಿಂದ ಮಾಡಲ್ಪಟ್ಟ ಸುಮಾರು 40 ವರ್ಷಗಳ ಪರಿಶ್ರಮದ ಅನಂತರ, ಅದರ ಸೆಕ್ರಿಟರಿ-ಜೆನೆರಲ್‌, ಹಾವಿಯೆರ್‌ ಪೆರೆಸ್‌ ಡಿ ಕೂಲಯರ್‌ 1985 ರಲ್ಲಿ ಹೀಗೆ ಪ್ರಲಾಪಿಸಿದ್ದು: “ನಾವು ಧರ್ಮಾಂಧತೆಯ ಇನ್ನೊಂದು ಯುಗದಲ್ಲಿ ಜೀವಿಸುತ್ತಿದ್ದೇವೆ. ಮತ್ತು ಇದರ ಕುರಿತು ಏನನ್ನು ಮಾಡಬೇಕೆಂದು ನಮಗೆ ತಿಳಿದಿಲ್ಲ.”

8, 9. (ಎ) ಸಂಯುಕ್ತ ರಾಷ್ಟ್ರದಲ್ಲಿ ಲೋಕ ಸಮಸ್ಯೆಗಳಿಗೆ ಉತ್ತರಗಳು ಇಲ್ಲದಿರುವುದೇಕೆ, ಮತ್ತು ದೇವರ ತೀರ್ಪಿಗನುಸಾರ ಅದಕ್ಕೆ ಬೇಗನೇ ಏನು ಸಂಭವಿಸಲಿರುವುದು? (ಬಿ) ಸಂಯುಕ್ತ ರಾಷ್ಟ್ರದ ಸ್ಥಾಪಕರು ಮತ್ತು ಮೆಚ್ಚುಗರು ತಮ್ಮ ಹೆಸರುಗಳನ್ನು ದೇವರ “ಜೀವದ ಸುರುಳಿ” ಯಲ್ಲಿ ಯಾಕೆ ದಾಖಲಿಸಿಕೊಂಡಿರುವುದಿಲ್ಲ? (ಸಿ) ಯೆಹೋವನ ರಾಜ್ಯವು ಯಶಸ್ವಿಯಾಗಿ ಏನನ್ನು ಪೂರೈಸುವುದು?

8 ಯುಎನ್‌ ಕೈಯಲ್ಲಿ ಉತ್ತರಗಳಿಲ್ಲ. ಮತ್ತು ಯಾಕೆ? ಯಾಕಂದರೆ ಎಲ್ಲಾ ಮಾನವ ಕುಲದ ಜೀವದಾತನು ಸಂಯುಕ್ತ ರಾಷ್ಟ್ರದ ಜೀವದಾತನಾಗಿರುವುದಿಲ್ಲ. ಅದರ ಜೀವಿತಕಾಲವು ಕೊಂಚವಾಗಿರುವುದರ ಕಾರಣವೇನಂದರೆ ದೇವರ ತೀರ್ಪಿನ ಕಟ್ಟಳೆಗನುಸಾರವಾಗಿ “ಅದು ನಾಶಕ್ಕೆ ಹೋಗುವುದು.” ಸಂಯುಕ್ತ ರಾಷ್ಟ್ರದ ಸ್ಥಾಪಕರ ಮತ್ತು ಮೆಚ್ಚುಗರ ಹೆಸರುಗಳನ್ನು ದೇವರ ಜೀವದ ಸುರುಳಿಯಲ್ಲಿ ದಾಖಲಿಸಲಾಗುವುದಿಲ್ಲ. ಯೆಹೋವ ದೇವರು ಮಾನವ ಸಾಧನಗಳಿಂದ ಅಲ್ಲ, ಬದಲು ಆತನ ಕ್ರಿಸ್ತನ ರಾಜ್ಯದ ಮೂಲಕ ನೆರವೇರಿಸುವನೆಂದು ಘೋಷಿಸಿರುವುದನ್ನು ಪಾಪಪೂರಿತ ನಶ್ವರ ಮಾನವರು—ಇವರಲ್ಲಿ ಅನೇಕರು ದೇವರ ಹೆಸರನ್ನು ಕೆಣಕುವವರು—ಸಂಯುಕ್ತ ರಾಷ್ಟ್ರದ ಮೂಲಕ ಪೂರೈಸುವುದಾದರೂ ಹೇಗೆ?—ದಾನಿಯೇಲ 7:27; ಪ್ರಕಟನೆ 11:15.

9 ಯಾರ ಪ್ರಭುತ್ವದ ಆಳಿಕ್ವೆಗೆ ಕೊನೆಯಿರಲಾರದೊ ಆ ಸಮಾಧಾನದ ಪ್ರಭುವಾದ ಯೇಸು ಕ್ರಿಸ್ತನಿಂದ ಬರುವ ದೇವರ ಮೆಸ್ಸೀಯನ ರಾಜ್ಯಕ್ಕೆ ಸಂಯುಕ್ತ ರಾಷ್ಟ್ರವು ವಾಸ್ತವದಲ್ಲಿ ದೇವದೂಷಣೆಯ ಕೃತಕ ರಾಜ್ಯವಾಗಿದೆ. (ಯೆಶಾಯ 9:6, 7) ಸ್ವಲ್ಪ ತಾತ್ಕಾಲಿಕ ಶಾಂತಿಯ ತೇಪೆಯನ್ನು ಸಂಯುಕ್ತ ರಾಷ್ಟ್ರವು ಹಚ್ಚುವುದಾದರೂ ಕೂಡ, ಯುದ್ಧಗಳು ಪುನಃ ಒಮ್ಮೆ ಸ್ಫೋಟಿಸಬಹುದು. ಇದು ಪಾಪಪೂರಿತ ಮಾನವರ ಸ್ವಭಾವವೇ ಆಗಿದೆ. “ಅವರ ಹೆಸರುಗಳು ಲೋಕದ ಸ್ಥಾಪನೆಯಿಂದ ಜೀವದ ಸುರುಳಿಯಲ್ಲಿ ಬರೆಯಲ್ಪಟ್ಟಿರುವುದಿಲ್ಲ.” ಕ್ರಿಸ್ತನಿಂದ ಬರುವ ಯೆಹೋವನ ರಾಜ್ಯವು ಭೂಮಿಯ ಮೇಲೆ ಶಾಶ್ವತ ಶಾಂತಿಯನ್ನು ಸ್ಥಾಪಿಸುವುದು ಮಾತ್ರವಲ್ಲ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ, ದೇವರ ಜ್ಞಾಪಕದಲ್ಲಿರುವ ಮರಣ ಹೊಂದಿದ್ದ ನೀತಿವಂತರು ಮತ್ತು ಅನೀತಿವಂತರನ್ನು ಎಬ್ಬಿಸುವುದು. (ಯೋಹಾನ 5:28, 29; ಅ. ಕೃತ್ಯಗಳು 24:15) ಸೈತಾನ ಮತ್ತು ಅವನ ಸಂತಾನದ ಆಕ್ರಮಣಗಳ ಮಧ್ಯೆಯೂ ದೃಢರಾಗಿ ಉಳಿಯುವ ಎಲ್ಲರನ್ನು ಮತ್ತು ಇನ್ನೂ ತಮ್ಮನ್ನು ವಿಧೇಯರಾಗಿ ತೋರಿಸಿಕೊಡಲಿರುವ ಇನ್ನಿತರರನ್ನು ಕೂಡ ಇದು ಒಳಗೂಡುತ್ತದೆ. ದೇವರ ಜೀವದ ಸುರುಳಿಯು ಎಂದಿಗೂ ಮಹಾ ಬಾಬೆಲಿನ ಜಗ್ಗದ ಅವಲಂಬಿಗಳ ಯಾ ಮೃಗಕ್ಕೆ ಆರಾಧನೆ ಮಾಡುವುದನ್ನು ಮುಂದುವರಿಸುವ ಯಾರೊಬ್ಬನ ಹೆಸರನ್ನು ಒಳಗೂಡಿರದು ಎಂಬುದು ವ್ಯಕ್ತ.—ವಿಮೋಚನಕಾಂಡ 32:33; ಕೀರ್ತನೆ 86:8-10; ಯೋಹಾನ 17:3; ಪ್ರಕಟನೆ 16:2; 17:5.

ಶಾಂತಿ ಮತ್ತು ಭದ್ರತೆ—ಒಂದು ವ್ಯರ್ಥ ನಿರೀಕ್ಷೆ

10, 11. (ಎ) ಸಂಯುಕ್ತ ರಾಷ್ಟ್ರವು 1986 ರಲ್ಲಿ ಏನನ್ನು ಘೋಷಿಸಿತು, ಮತ್ತು ಪ್ರತಿಕ್ರಿಯೆ ಏನಾಗಿತ್ತು? (ಬಿ) ಇಟೆಲಿಯ ಅಸಿಸೀಯಲ್ಲಿ, ಶಾಂತಿಗಾಗಿ ಪ್ರಾರ್ಥಿಸಲು ಎಷ್ಟು “ಧಾರ್ಮಿಕ ಕುಟುಂಬಗಳು” ಕೂಡಿಬಂದವು, ಮತ್ತು ದೇವರು ಅಂಥ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೊ? ವಿವರಿಸಿರಿ.

10 ಮಾನವ ಕುಲದ ನಿರೀಕ್ಷೆಗಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ ಸಂಯುಕ್ತ ರಾಷ್ಟ್ರ ಸಂಘವು 1986ನ್ನು “ಶಾಂತಿಯನ್ನು ಮತ್ತು ಮಾನವ ಕುಲದ ಭವಿಷ್ಯವನ್ನು ರಕ್ಷಿಸುವುದು” ಎಂಬ ಮುಖ್ಯ ವಿಷಯದೊಂದಿಗೆ ಅದನ್ನು “ಅಂತಾರಾಷ್ಟ್ರೀಯ ಶಾಂತಿ ವರ್ಷ” ವಾಗಿ ಘೋಷಿಸಿತು. ಯುದ್ಧ ಮಾಡುತ್ತಿರುವ ರಾಷ್ಟ್ರಗಳು ಕಡಿಮೆ ಪಕ್ಷ ಒಂದು ವರ್ಷಕ್ಕಾದರೂ ತಮ್ಮ ಶಸ್ತ್ರಗಳನ್ನು ಕೆಳಗಿಡಬೇಕೆನ್ನುವ ಕರೆಯು ನೀಡಲ್ಪಟ್ಟಿತು. ಅವುಗಳ ಪ್ರತಿಕ್ರಿಯೆ ಏನಾಗಿತ್ತು? ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯಿಂದ ಬಂದ ಒಂದು ವರದಿಗನುಸಾರ, ಐವತ್ತು ಲಕ್ಷದಷ್ಟು ಜನರು 1986ರ ಯುದ್ಧಗಳ ಫಲಿತಾಂಶವಾಗಿ ಕೊಲ್ಲಲ್ಪಟ್ಟರು! ಕೆಲವು ವಿಶಿಷ್ಟ ನಾಣ್ಯಗಳು ಮತ್ತು ಸ್ಮರಣಾತ್ಮಕವಾದ ಸ್ಟಾಂಪುಗಳು ಹೊರಡಿಸಲ್ಪಟ್ಟರೂ, ಅನೇಕ ರಾಷ್ಟ್ರಗಳು ಆ ವರ್ಷದಲ್ಲಿ ಶಾಂತಿಯ ಆದರ್ಶವನ್ನು ಬೆನ್ನಟ್ಟುವುದರಲ್ಲಿ ಹೆಚ್ಚೀನನ್ನೂ ಮಾಡಲಿಲ್ಲ. ಆದಾಗ್ಯೂ, ಲೋಕದ ಧರ್ಮಗಳು—ಸಂಯುಕ್ತ ರಾಷ್ಟ್ರದೊಂದಿಗೆ ಸಾಮರಸ್ಯ ಸಂಬಂಧಕ್ಕೆ ಸದಾ ತವಕ ಪಡುತ್ತಾ—ಆ ವರ್ಷವನ್ನು ವಿಭಿನ್ನ ರೀತಿಗಳಲ್ಲಿ—ಪ್ರಚುರ ಪಡಿಸುವುದಕ್ಕೆ ತೊಡಗಿದವು. ಜನವರಿ 1, 1986 ರಂದು, ಪೋಪ್‌ ಜಾನ್‌ ಪೌಲ್‌ II ಸಂಯುಕ್ತ ರಾಷ್ಟ್ರದ ಕಾರ್ಯವನ್ನು ಹೊಗಳಿದರು ಮತ್ತು ಹೊಸ ವರ್ಷವನ್ನು ಶಾಂತಿಗಾಗಿ ಸಮರ್ಪಿಸಿದರು. ಮತ್ತು ಅಕ್ಟೋಬರ 27 ರಂದು ಅವರು ಲೋಕದ ಅನೇಕ ಧರ್ಮಗಳ ಮುಖಂಡರನ್ನು ಶಾಂತಿಗಾಗಿ ಪ್ರಾರ್ಥಿಸಲಿಕ್ಕೆ ಇಟೆಲಿಯ ಅಸಿಸೀಯಲ್ಲಿ ಒಟ್ಟುಗೂಡಿಸಿದರು.

11 ಶಾಂತಿಗಾಗಿ ಇಂಥ ಪ್ರಾರ್ಥನೆಗಳನ್ನು ದೇವರು ಉತ್ತರಿಸುತ್ತಾನೋ? ಒಳ್ಳೇದು, ಈ ಧಾರ್ಮಿಕ ಮುಖಂಡರು ಯಾವ ದೇವರಿಗೆ ಪ್ರಾರ್ಥಿಸಿದರು? ನೀವು ಅವರನ್ನು ಕೇಳಿದರೆ, ಪ್ರತಿಗುಂಪು ಭಿನ್ನವಾದ ಉತ್ತರವನ್ನು ಕೊಡುವುದು. ಅನೇಕ ವಿಭಿನ್ನ ರೀತಿಗಳಲ್ಲಿ ಮಾಡಿದ ಪ್ರಾರ್ಥನೆಗಳನ್ನು ಕೇಳಲು ಮತ್ತು ಬೇಡಿಕೆಗಳನ್ನು ಸಮರ್ಪಿಸಲು ಲಕ್ಷಾಂತರ ದೇವರುಗಳ ದೇವಾಲಯವೊಂದು ಇದೆಯೋ? ಭಾಗವಹಿಸಿದವರಲ್ಲಿ ಅನೇಕರು ಕ್ರೈಸ್ತಪ್ರಪಂಚದ ತ್ರಯೈಕ್ಯವನ್ನು ಆರಾಧಿಸಿದರು. * ಬೌದ್ಧರು, ಹಿಂದುಗಳು ಮತ್ತು ಇನ್ನಿತರರು ಎಣಿಕೆಯಿಲ್ಲದಷ್ಟು ದೇವರುಗಳಿಗೆ ಪ್ರಾರ್ಥನೆಗಳನ್ನು ಪಠಿಸಿದರು. ಒಟ್ಟಿನಲ್ಲಿ, ಕ್ಯಾಂಟರ್‌ಬೆರಿಯ ಆಂಗ್ಲಿಕನ್‌ ಕ್ರೈಸ್ತ ಧರ್ಮಾಧ್ಯಕ್ಷರಿಂದ, ಬುದ್ಧ ಧರ್ಮದ ದಲೈ ಲಾಮಾರಿಂದ, ರಶ್ಯನ್‌ ಅರ್ತೊಡಕ್ಸ್‌ ಧರ್ಮಾಧಿಕಾರಿಗಳಿಂದ, ಟೊಕಿಯೊದ ಶಿಂಟೋ ಗುಡಿಯ ಮಂಡಲಿಯ ಅಧ್ಯಕ್ಷರಿಂದ, ಆಫ್ರಿಕದ ಸರ್ವಚೇತನವಾದಿಗಳಿಂದ, ಮತ್ತು ಗರಿಗಳ ತಲೆಯುಡಿಗೆಯಿಂದ ಅಲಂಕೃತರಾದ ಇಬ್ಬರು ಅಮೆರಿಕನ್‌ ಇಂಡಿಯನರೇ ಮುಂತಾದ ಪ್ರಮುಖರಿಂದ ಪ್ರತಿನಿಧಿಸಲ್ಪಟ್ಟಿದ್ದ 12 “ಧಾರ್ಮಿಕ ಕುಟುಂಬಗಳು” ಕೂಡಿಬಂದವು. ಅದೊಂದು ವರ್ಣಭರಿತ ಗುಂಪಾಗಿದ್ದು, ಕಡಿಮೆ ಪಕ್ಷ ನಯನ ಮನೋಹರವಾದ ಟೀವೀ ಪ್ರಸಾರವ್ಯಾಪ್ತಿಯನ್ನಾದರೂ ಉಂಟುಮಾಡಿತು. ಒಂದು ಗುಂಪು ಒಮ್ಮೆಗೆ 12 ಘಂಟೆಗಳ ತನಕ ಸತತವಾಗಿ ಪ್ರಾರ್ಥಿಸಿತು. (ಲೂಕ 20:45-47 ಹೋಲಿಸಿರಿ.) ಆದರೆ ಅವುಗಳಲ್ಲಿ ಯಾವುದೇ ಪ್ರಾರ್ಥನೆಗಳು, ಕೂಡಿದ ಸಭೆಯ ಮೇಲೆ ಸುತ್ತುತ್ತಿದ್ದ ಮಳೆಮೋಡಗಳನ್ನು ದಾಟಿ ಆಚೆ ಮುಟ್ಟಿದವೂ? ಇಲ್ಲ. ಈ ಕೆಳಗಿನ ಕಾರಣಗಳಿಗೋಸ್ಕರ:

12. ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಮಾಡಿದ ಪ್ರಾರ್ಥನೆಗಳನ್ನು ದೇವರು ಯಾವ ಕಾರಣಗಳಿಗಾಗಿ ಉತ್ತರಿಸಲಿಲ್ಲ?

12 “ಯೆಹೋವನ ಹೆಸರಿನಲ್ಲಿ ನಡೆಯುವವ” ರಿಗೆ ವಿಪರ್ಯಸ್ತವಾಗಿ, ಆ ಧಾರ್ಮಿಕರಲ್ಲಿ ಯಾರೊಬ್ಬನೂ, ಯಾರ ಹೆಸರು ಬೈಬಲಿನ ಮೂಲಗ್ರಂಥದಲ್ಲಿ ಸುಮಾರು 7,000 ಬಾರಿ ಕಂಡುಬರುತ್ತದೋ ಆ ಜೀವಂತ ದೇವರಾದ ಯೆಹೋವನಿಗೆ ಪ್ರಾರ್ಥಿಸಲಿಲ್ಲ. (ಮೀಕ 4:5; ಯೆಶಾಯ 42:8, 12) * ಒಂದು ಗುಂಪಿನೋಪಾದಿ, ಅವರು ದೇವರನ್ನು ಯೇಸುವಿನ ಹೆಸರಿನಲ್ಲಿ ಸಮೀಪಿಸಲಿಲ್ಲ, ಇವರಲ್ಲಿ ಅಧಿಕಾಂಶ ಮಂದಿ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರೂ ಆಗಿರಲಿಲ್ಲ. (ಯೋಹಾನ 14:13; 15:16) ಮಾನವ ಕುಲದ ನಿಜ ನಿರೀಕ್ಷೆಯಾಗಿ ಬರಲಿರುವ ದೇವರ ರಾಜ್ಯವನ್ನು—ಸಂಯುಕ್ತ ರಾಷ್ಟ್ರ ಸಂಘವನ್ನಲ್ಲ—ಲೋಕವ್ಯಾಪಕವಾಗಿ ಪ್ರಚುರಪಡಿಸುವುದೇ ನಮ್ಮೀ ದಿನಗಳಲ್ಲಿ ದೇವರ ಚಿತ್ತವಾಗಿರುವಾಗ, ಅದನ್ನು ಇವರಲ್ಲಿ ಯಾರೊಬ್ಬನೂ ಮಾಡುತ್ತಿರಲಿಲ್ಲ. (ಮತ್ತಾಯ 7:21-23; 24:14; ಮಾರ್ಕ 13:10) ಬಹು ಮಟ್ಟಿಗೆ, ಈ ಶತಮಾನದ ಎರಡು ಲೋಕ ಯುದ್ಧಗಳ ಸಹಿತ, ಅವರ ಧಾರ್ಮಿಕ ಸಂಸ್ಥೆಗಳು ಇತಿಹಾಸದ ಕ್ರೂರ ಯುದ್ಧಗಳಲ್ಲಿ, ಆಳವಾಗಿ ಮುಳುಗಿದ್ದವು. ಇಂಥವರಿಗೆ ದೇವರು ಹೇಳುವುದು: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.”—ಯೆಶಾಯ 1:15; 59:1-3.

13. (ಎ) ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಕರೆನೀಡುವುದರಲ್ಲಿ ಸಂಯುಕ್ತ ರಾಷ್ಟ್ರದೊಂದಿಗೆ ಜತೆಗೂಡುವುದು ತಾನೇ ಯಾಕೆ ಬಹು ಮಹತ್ವದ್ದಾಗಿದೆ? (ಬಿ) ಶಾಂತಿಗಾಗಿ ಕೂಗುವಿಕೆಗಳು ದೈವಿಕವಾಗಿ ಮುಂತಿಳಿಸಲ್ಪಟ್ಟ ಯಾವ ಪರಾಕಾಷ್ಠೆಯಲ್ಲಿ ತುತ್ತತುದಿಗೇರುವುದು?

13 ಇನ್ನೂ ಹೆಚ್ಚಾಗಿ, ಈ ಸಮಯದಲ್ಲಿ ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಕರೆಯುವುದರಲ್ಲಿ ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಜೊತೆ ಸೇರುವುದಕ್ಕೆ ಆಳವಾದ ಮಹತ್ವವಿದೆ. ತಮ್ಮ ಸ್ವಂತ ಅನುಕೂಲತೆಗೆ, ವಿಶೇಷವಾಗಿ ತಮ್ಮ ಇಷ್ಟೊಂದು ಜನರು ಧರ್ಮವನ್ನು ತೊರೆಯುವ ಈ ಆಧುನಿಕ ಯುಗದಲ್ಲಿ, ಸಂಯುಕ್ತ ರಾಷ್ಟ್ರವನ್ನು ಪ್ರಭಾವಿಸಲು ಅವರು ಬಯಸುತ್ತಾರೆ. ಪ್ರಾಚೀನ ಇಸ್ರಾಯೇಲಿನ ಅಪನಂಬಿಗಸ್ತ ಮುಖಂಡರಂತೆ, “ಶಾಂತಿಯಿಲ್ಲದಿರುವಾಗ ಶಾಂತಿ ಇದೆ! ಶಾಂತಿ ಇದೆ!” ಎಂದು ಅವರು ಕೂಗುತ್ತಾರೆ. (ಯೆರೆಮೀಯ 6:14, NW) ಶಾಂತಿಗಾಗಿ ಅವರ ಕೂಗುಗಳು ಅಪೊಸ್ತಲ ಪೌಲನು ಯಾವುದರ ಕುರಿತು ಪ್ರವಾದಿಸಿದನೋ, ಅದರ ಪರಾಕಾಷ್ಠೆಯ ಬೆಂಬಲದಲ್ಲಿ ಮುಂದುವರಿಯುವವು ಎಂಬುದಕ್ಕೆ ಸಂದೇಹವಿಲ್ಲ: “ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.”—1 ಥೆಸಲೊನೀಕ 5:2, 3.

14. “ಶಾಂತಿ ಮತ್ತು ಭದ್ರತೆ!”ಯ ಕೂಗು ಯಾವ ರೂಪವನ್ನು ತೆಗೆದುಕೊಳ್ಳುವುದು, ಮತ್ತು ಅದರಿಂದ ತಪ್ಪುದಾರಿಗೆಳೆಯಲ್ಪಡುವುದನ್ನು ಒಬ್ಬನು ಹೇಗೆ ತಡೆಯಸಾಧ್ಯವಿದೆ?

14 “ಶಾಂತಿ ಮತ್ತು ಭದ್ರತೆ!”ಯ ಈ ಮಹತ್ವದ ಕೂಗು ಯಾವ ರೂಪವನ್ನು ತೆಗೆದುಕೊಳ್ಳಲಿರುವುದು? ಆ ಕೂಗನ್ನು ಮಾಡುವವರ ಮೇಲೆ ಬರುವ ಕ್ಷಿಪ್ರ ನಾಶನದ ಸ್ವಲ್ಪ ಮುಂಚೆ, ಅದು ಗಮನಾರ್ಹವಾಗಿರುವುದು ಎಂದು ಇಲ್ಲಿ ಹೇಳಲಾಗಿದೆ. ಆದಕಾರಣ, ಲೋಕ ಧುರೀಣರಿಂದ ಈ ಮುಂಚೆ ಘೋಷಿಸಿರುವುದಕ್ಕಿಂತಲೂ ಇದೇನೋ ಹೆಚ್ಚು ಪ್ರಮಾಣದ್ದಾಗಿರಬೇಕು. ಇದು ಒಂದು ಭೂವ್ಯಾಪಕ ಪ್ರಮಾಣದ್ದಾಗಿರುವುದು ಎಂಬುದರಲ್ಲಿ ಸಂದೇಹವೇನೂ ಇಲ್ಲ. ಆದರೂ, ಅದು ಒಂದು ಮುಖವಾಡಕ್ಕಿಂತ ಹೆಚ್ಚೇನೂ ಆಗಿರದು. ಕೆಳಗಡೆ, ನಿಜವಾಗಿ ಯಾವ ಬದಲಾವಣೆಯೂ ಆಗಿರದು. ಸ್ವಾರ್ಥ, ದ್ವೇಷ, ದುಷ್ಕೃತ್ಯ, ಕುಟುಂಬ ಕುಸಿತ, ಅನೈತಿಕತೆ, ರೋಗ, ವ್ಯಥೆ, ಮತ್ತು ಮರಣವು ಇನ್ನೂ ಇಲ್ಲಿ ಇರುವುದು. ಬೈಬಲಿನ ಪ್ರವಾದನೆಗೆ ಎಚ್ಚರವಾಗಿರದೇ ಇರುವವರನ್ನು ಬರಲಿರುವ ಕೂಗು ತಪ್ಪುದಾರಿಗೆ ನಡಿಸುವುದು. ಆದರೆ, ನೀವು ಲೋಕ ಘಟನೆಗಳ ಅರ್ಥಕ್ಕೆ ಜಾಗ್ರತರಾಗಿರುವುದಾದರೆ, ಮತ್ತು ದೇವರ ವಾಕ್ಯದಲ್ಲಿನ ಪ್ರವಾದನಾ ಎಚ್ಚರಿಕೆಗಳಿಗೆ ಕಿವಿಗೊಟ್ಟಿರುವುದಾದರೆ, ಅದು ನಿಮ್ಮನ್ನು ತಪ್ಪುದಾರಿಗೆ ನಡಿಸುವ ಜರೂರಿಯೇನೂ ಇಲ್ಲ.—ಮಾರ್ಕ 13:32-37; ಲೂಕ 21:34-36.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 3 ಜೆ. ಎಫ್‌. ರಥರ್‌ಫರ್ಡ್‌ ಜನವರಿ 8, 1942 ರಂದು ತೀರಿಹೋದರು, ಮತ್ತು ಅವರ ಸ್ಥಾನಕ್ಕೆ ಅಧ್ಯಕ್ಷರಾಗಿ ಎನ್‌. ಏಚ್‌. ನಾರ್‌ ಬಂದರು.

^ ಪ್ಯಾರ. 5 ನವಂಬರ 20, 1940 ರಂದು ಜರ್ಮನಿ, ಇಟೆಲಿ, ಜಪಾನ್‌, ಮತ್ತು ಹಂಗೆರಿ “ಒಂದು ಹೊಸ ಜನಾಂಗ ಸಂಘ” ಕ್ಕಾಗಿ ಸಹಿ ಹಾಕಿದವು, ಇದನ್ನು ಹಿಂಬಾಲಿಸಿ ನಾಲ್ಕು ದಿನಗಳ ಅನಂತರ ಧಾರ್ಮಿಕ ಶಾಂತಿ ಮತ್ತು ವಿಷಯಗಳ ಒಂದು ಹೊಸ ವ್ಯವಸ್ಥೆಗಾಗಿ ಬಲಿಪೂಜೆ (ಮಾಸ್‌) ಮತ್ತು ಪ್ರಾರ್ಥನೆ ವ್ಯಾಟಿಕನ್‌ನಿಂದ ಬಿತ್ತರಿಸಲ್ಪಟ್ಟಿತು. ಆ “ಹೊಸ ಸಂಘವು” ಎಂದಿಗೂ ವಾಸ್ತವವಾಗಲಿಲ್ಲ.

^ ಪ್ಯಾರ. 11 ತ್ರಯೈಕ್ಯದ ಕಲ್ಪನೆಯು, ಎಲ್ಲಿ ಸೂರ್ಯ ದೇವತೆ ಶಮಾಷ್‌, ಚಂದ್ರ ದೇವತೆ ಸಿನ್‌ ಮತ್ತು ನಕ್ಷತ್ರ ದೇವತೆ ಇಷ್ಟಾರ್‌ —ಇವರು ತ್ರಯೈಕ್ಯವಾಗಿ ಆರಾಧಿಸಲ್ಪಡುತ್ತಿದ್ದರೋ ಆ ಪ್ರಾಚೀನ ಬಾಬೆಲಿನಿಂದ ಹೊರಚಿಗುರಿ ಬಂತು. ಐಗುಪ್ತವು ಅದೇ ನಮೂನೆಯನ್ನು ಹಿಂಬಾಲಿಸಿ, ಒಸೈರಿಸ್‌, ಐಸಿಸ್‌, ಮತ್ತು ಹೋರಸ್‌ ಇವರನ್ನು ಆರಾಧಿಸಿತು. ಅಶ್ಶೂರ್ಯದ ಪ್ರಧಾನ ದೇವರಾದ ಅಶ್ಶೂರನು ಮೂರು ತಲೆಗಳುಳ್ಳವನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಅದೇ ನಮೂನೆಯನ್ನು ಹಿಂಬಾಲಿಸುತ್ತಾ, ದೇವರನ್ನು ಮೂರು ತಲೆಗಳುಳ್ಳದ್ದಾಗಿ ಚಿತ್ರಿಸುವ ವಿಗ್ರಹಗಳನ್ನು ಕ್ಯಾತೊಲಿಕ್‌ ಚರ್ಚುಗಳಲ್ಲಿ ಕಂಡುಕೊಳ್ಳಬಹುದು.

^ ಪ್ಯಾರ. 12 ಇಸವಿ 1981ರ ವೆಬ್‌ಸ್ಟರ್ಸ್‌ ತರ್ಡ್‌ ನ್ಯೂ ಇಂಟರ್‌ನ್ಯಾಷನಲ್‌ ಡಿಕ್‌ಷನರಿಯು, ಯೆಹೋವ ದೇವರು, “ಯೆಹೋವನ ಸಾಕ್ಷಿಗಳು ಒಪ್ಪುವ ಅತಿ ಶ್ರೇಷ್ಠ ದೇವರೂ, ಅವರಿಂದ ಆರಾಧಿಸಲ್ಪಡುವ ಏಕಮಾತ್ರ ದೇವರೂ” ಆಗಿದ್ದಾನೆ ಎಂದು ವಿವರಿಸುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 361 ರಲ್ಲಿರುವ ಚೌಕ]

“ಶಾಂತಿ”ಯ ವಿರೋಧಾಭಾಸ

ಸಂಯುಕ್ತ ರಾಷ್ಟ್ರವು 1986ನ್ನು ಅಂತಾರಾಷ್ಟ್ರೀಯ ಶಾಂತಿ ವರ್ಷವನ್ನಾಗಿ ಘೋಷಿಸಿತಾದರೂ, ಘಾತುಕ ಶಸ್ತ್ರಾಸ್ತ್ರ ಏರುತ್ತಾ ಹೋಯಿತು. ಲ್ಡ್‌ ಮಿಲಿಟರಿ ಆ್ಯಂಡ್‌ ಸೋಷಲ್‌ ಎಕ್ಸ್‌ಪೆಂಡಿಚರ್ಸ್‌ 1986, ನಮಗೆ ಈ ವಾಸ್ತವಿಕ ವಿವರಗಳನ್ನು ಒದಗಿಸುತ್ತದೆ:

ಇಸವಿ 1986 ರಲ್ಲಿ ಭೂಗೋಳದ ಮಿಲಿಟರಿ ಖರ್ಚುಗಳು 900 ಸಾವಿರ ಮಿಲಿಯ ಡಾಲರುಗಳಿಗೆ ಮುಟ್ಟಿತ್ತು.

ಒಂದು ಘಂಟೆಯ ಭೌಗೋಳಿಕ ಮಿಲಿಟರಿ ಖರ್ಚು ವಾರ್ಷಿಕವಾಗಿ ತಡೆಹಾಕಸಾಧ್ಯವಿರುವ ಸಾಂಕ್ರಾಮಿಕ ರೋಗಗಳಿಂದ ಸಾಯುವ 35 ಲಕ್ಷ ಜನರಿಗೆ ರಕ್ಷಣೆ ನೀಡಲು ಸಾಕಾಗುತ್ತದೆ.

ಲೋಕವ್ಯಾಪಕವಾಗಿ, ಐವರಲ್ಲಿ ಒಬ್ಬ ವ್ಯಕ್ತಿಯು ಕಡುಬಡತನದಲ್ಲಿ ಜೀವಿಸುತ್ತಾನೆ. ಎರಡು ದಿನಗಳಲ್ಲಿ ಲೋಕವು ಯುದ್ಧಾಸ್ತ್ರಗಳಿಗೆ ಖರ್ಚುಮಾಡುವ ವೆಚ್ಚದಲ್ಲಿ ಒಂದು ವರ್ಷ ಈ ಎಲ್ಲಾ ಹಸಿದಿರುವವರನ್ನು ಉಣಿಸಸಾಧ್ಯವಿದೆ.

ನ್ಯೂಕ್ಲಿಯರ್‌ ಶಸ್ತ್ರಾಸ್ತ್ರ ಲೋಕ ಸಂಗ್ರಹಣೆಯ ಸ್ಫೋಟಕ ಬಲವು ಚೆರ್ನಾಬಿಲ್‌ ಸ್ಫೋಟನಕ್ಕಿಂತ 16,00,00,000 ಬಾರಿ ದೊಡ್ಡದಾಗಿದೆ.

ಇಂದು ಒಂದು ನ್ಯೂಕ್ಲಿಯರ್‌ ಬಾಂಬನ್ನು 1945 ರಲ್ಲಿ ಹಿರೊಶೀಮಾದ ಮೇಲೆ ಬೀಳಿಸಿದ ಬಾಂಬಿಗಿಂತ 500 ಪಟ್ಟು ಜಾಸ್ತಿ ಸ್ಫೋಟಕ ಶಕ್ತಿಯಿಂದ ಕಳುಹಿಸಸಾಧ್ಯವಿದೆ.

ಇಂದಿನ ನ್ಯೂಕ್ಲಿಯರ್‌ ಶಸ್ತ್ರಸಂಗ್ರಹಾಲಯಗಳು ಹತ್ತು ಲಕ್ಷ ಹಿರೊಶೀಮಾಗಳಿಗಿಂತ ಹೆಚ್ಚಿನದಕ್ಕೆ ಸಮಾನವಾದವುಗಳನ್ನು ಒಳಗೊಂಡಿವೆ. ಇದು, ಯಾವಾಗ 3 ಕೋಟಿ 80 ಲಕ್ಷ ಜನರು ಸತ್ತರೋ ಆ ಎರಡನೇ ಲೋಕ ಯುದ್ಧದಲ್ಲಿ ಬಿಡುಗಡೆಯಾದ ಸ್ಫೋಟಕ ಶಕ್ತಿಗಿಂತ 2,700 ಪಾಲನ್ನು ಪ್ರತಿನಿಧಿಸುತ್ತದೆ.

ಯುದ್ಧಗಳು ಹೆಚ್ಚು ಪ್ರಮಾಣದಲ್ಲಿ ಆಗುತ್ತಿವೆ, ಮತ್ತು ಹೆಚ್ಚು ಮಾರಕವಾಗುತ್ತಾ ಬಂದಿವೆ. ಯುದ್ಧ ಸಾವುಗಳು 18 ನೆಯ ಶತಮಾನದಲ್ಲಿ ಒಟ್ಟು 44 ಲಕ್ಷಕ್ಕೆ ಮುಟ್ಟಿತ್ತು, 19 ನೆಯ ಶತಮಾನದಲ್ಲಿ 83 ಲಕ್ಷ ಮತ್ತು 20 ನೆಯ ಶತಮಾನದ 86 ವರ್ಷಗಳಲ್ಲಿ 9 ಕೋಟಿ 88 ಲಕ್ಷಕ್ಕೆ ಮುಟ್ಟಿತು. ಹದಿನೆಂಟನೆಯ ಶತಮಾನದಿಂದ, ಯುದ್ಧ ಸಾವುಗಳು ಲೋಕ ಜನಸಂಖ್ಯೆಗಿಂತ 6 ಪಟ್ಟು ವೇಗವಾಗಿ ಏರಿವೆ. 19ಕ್ಕೆ ಹೋಲಿಸುವಾಗ 20 ನೆಯ ಶತಮಾನದಲ್ಲಿ ಪ್ರತಿ ಯುದ್ಧಗಳ ಸಾವಿನ ಸಂಖ್ಯೆಯು ಹತ್ತು ಪಟ್ಟು ಜಾಸ್ತಿ ಆಗಿದೆ.

[ಪುಟ 358 ರಲ್ಲಿರುವ ಚಿತ್ರಗಳು]

ಕಡುಗೆಂಪು ಬಣ್ಣದ ಕಾಡು ಮೃಗದ ಕುರಿತು ಪ್ರವಾದಿಸಲ್ಪಟ್ಟಂತೆಯೇ, ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ಜನಾಂಗ ಸಂಘವು ಅಧೋಲೋಕಕ್ಕೆ ತಳ್ಳಲ್ಪಟ್ಟಿತು, ಆದರೆ ಅದನ್ನು ಸಂಯುಕ್ತ ರಾಷ್ಟ್ರದೋಪಾದಿ ಪುನಶ್ಚೈತನ್ಯಗೊಳಿಸಲಾಯಿತು

[ಪುಟ 350 ರಲ್ಲಿರುವ ಚಿತ್ರಗಳು]

ಸಂಯುಕ್ತ ರಾಷ್ಟ್ರದ “ಶಾಂತಿ ವರ್ಷ”ದ ಬೆಂಬಲದಲ್ಲಿ ಲೋಕದ ಧರ್ಮಗಳ ಪ್ರತಿನಿಧಿಗಳು ಇಟೆಲಿಯ ಅಸಿಸೀಯಲ್ಲಿ ಪ್ರಾರ್ಥನೆಗಳ ಬಾಬೆಲೊಂದನ್ನು ಅರ್ಪಿಸಿದರು, ಆದರೆ ಅವರಲ್ಲಿ ಒಬ್ಬನಾದರೂ ಜೀವಂತ ದೇವರಾದ ಯೆಹೋವನಿಗೆ ಪ್ರಾರ್ಥಿಸಲಿಲ್ಲ