ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ಪಟ್ಟಣವು ಧ್ವಂಸಗೊಳಿಸಲ್ಪಟ್ಟದ್ದು

ಮಹಾ ಪಟ್ಟಣವು ಧ್ವಂಸಗೊಳಿಸಲ್ಪಟ್ಟದ್ದು

ಅಧ್ಯಾಯ 36

ಮಹಾ ಪಟ್ಟಣವು ಧ್ವಂಸಗೊಳಿಸಲ್ಪಟ್ಟದ್ದು

ದರ್ಶನ 12ಪ್ರಕಟನೆ 18:1—19:10

ವಿಷಯ: ಮಹಾ ಬಾಬೆಲಿನ ಪತನ ಮತ್ತು ನಾಶನ; ಯಜ್ಞದ ಕುರಿಮರಿಯಾದಾತನ ವಿವಾಹವು ಪ್ರಕಟಿಸಲ್ಪಡುತ್ತದೆ

ನೆರವೇರಿಕೆಯ ಸಮಯ: ಇಸವಿ 1919 ರಿಂದ ಮಹಾ ಸಂಕಟದ ಅನಂತರ

1. ಮಹಾ ಸಂಕಟದ ಪ್ರಾರಂಭವನ್ನು ಯಾವುದು ಗುರುತಿಸುವುದು?

ಅನಿರೀಕ್ಷಿತ, ಸಂಘಟ್ಟಕ, ಧ್ವಂಸಾತ್ಮಕ—ಮಹಾ ಬಾಬೆಲಿನ ಅಂತ್ಯವು ಹೀಗೆಯೇ ಆಗಲಿರುವುದು! ಅದು ಇಡೀ ಇತಿಹಾಸದಲ್ಲಿ ಅತಿ ವಿಪತ್ಕಾರಕ ಘಟನೆಗಳಲ್ಲಿ ಒಂದಾಗಿದ್ದು, “ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ” ಎಂದು ಹೇಳಲ್ಪಟ್ಟ “ಮಹಾ ಸಂಕಟ”ದ ಆರಂಭವನ್ನು ಗುರುತಿಸುವುದು.—ಮತ್ತಾಯ 24:21.

2. ರಾಜಕೀಯ ಸಾಮ್ರಾಜ್ಯಗಳು ಎದ್ದು ಬಿದ್ದರೂ ಯಾವ ರೀತಿಯ ಸಾಮ್ರಾಜ್ಯವು ಬಾಳಿದೆ?

2 ಸುಳ್ಳು ಧರ್ಮವು ನಮ್ಮ ಸುತ್ತಲೂ ದೀರ್ಘಕಾಲದಿಂದ ಇದೆ. ಯೆಹೋವನನ್ನು ವಿರೋಧಿಸಿದ ಮತ್ತು ಬಾಬೆಲಿನ ಗೋಪುರವನ್ನು ಕಟ್ಟಲು ನರಪುತ್ರರನ್ನು ನಿರ್ದೇಶಿಸಿದ ರಕ್ತಪಿಪಾಸು ನಿಮ್ರೋದನ ದಿನಗಳಿಂದ ಹಿಡಿದು ಅದು ತಡೆಯಿಲ್ಲದೆ ಅಸ್ತಿತ್ವದಲ್ಲಿದೆ. ಈ ದಂಗೆಕೋರರ ಭಾಷೆಯನ್ನು ಯೆಹೋವನು ತಾರುಮಾರು ಮಾಡಿ, ಭೂಲೋಕದಲ್ಲಿಲ್ಲಾ ಚದುರಿಸಿದಾಗ, ಬಾಬೆಲಿನ ಸುಳ್ಳು ಧರ್ಮವು ಅವರೊಂದಿಗೆ ಪ್ರಯಾಣಿಸಿತು. (ಆದಿಕಾಂಡ 10:8-10; 11:4-9) ಅಂದಿನಿಂದ ಹಿಡಿದು, ರಾಜಕೀಯ ಸಾಮ್ರಾಜ್ಯಗಳು ಎದ್ದಿವೆ ಮತ್ತು ಬಿದ್ದಿವೆ, ಆದರೆ ಬಾಬೆಲಿನ ಧರ್ಮವು ಬಾಳಿದೆ. ಅದು ಅನೇಕ ಆಕಾರ ಮತ್ತು ಸ್ವರೂಪಗಳನ್ನು ತೆಗೆದುಕೊಂಡು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿ, ಪ್ರವಾದಿಸಲ್ಪಟ್ಟ ಮಹಾ ಬಾಬೆಲ್‌ ಆಗಿದೆ. ಧರ್ಮಭ್ರಷ್ಟ “ಕ್ರೈಸ್ತ” ಬೋಧನೆಯೊಂದಿಗೆ ಪ್ರಾಚೀನ ಬಾಬೆಲಿನ ಕಲಿಸುವಿಕೆಗಳ ಮಿಶ್ರಣದೊಳಗಿಂದ ಬೆಳೆದಿರುವ ಕ್ರೈಸ್ತಪ್ರಪಂಚವು, ಅದರ ಅತಿ ಪ್ರಮುಖ ಭಾಗವಾಗಿದೆ. ಮಹಾ ಬಾಬೆಲಿನ ಅತಿ ದೀರ್ಘವಾದ ಇತಿಹಾಸದಿಂದಾಗಿ, ಅದು ಎಂದಾದರೂ ನಾಶವಾಗಿ ಹೋಗಲಿದೆ ಎಂದು ನಂಬಲಿಕ್ಕೂ ಅನೇಕ ಜನರಿಗೆ ಕಷ್ಟವಾಗುತ್ತದೆ.

3. ಪ್ರಕಟನೆಯು ಸುಳ್ಳು ಧರ್ಮದ ವಿನಾಶವನ್ನು ಹೇಗೆ ದೃಢಪಡಿಸುತ್ತದೆ?

3 ಆದುದರಿಂದ, ಪ್ರಕಟನೆಯು ಅವಳ ಪತನ ಮತ್ತು ತತ್ಪರಿಣಾಮವಾಗಿ ಅವಳ ಪೂರ್ಣ ವಿಧ್ವಂಸಕ್ಕೆ ನಡಿಸುವ ಘಟನೆಗಳ ಎರಡು ವರ್ಣನಾತ್ಮಕ ವಿವರಗಳನ್ನು ನಮಗೆಲ್ಲರಿಗೆ ಕೊಡುವುದರ ಮೂಲಕ ಸುಳ್ಳು ಧರ್ಮದ ವಿನಾಶವನ್ನು ದೃಢಪಡಿಸುವುದು ಯುಕ್ತವಾಗಿದೆ. ರಾಜಕೀಯ ಕ್ಷೇತ್ರದ ಅವಳ ಹಿಂದಿನ ಪ್ರೇಮಿಗಳಿಂದ ಕೊನೆಗೂ ಧ್ವಂಸವಾಗಿ ಹೋಗುವ “ಮಹಾ ಜಾರ ಸ್ತ್ರೀ” ಯಾಗಿ ನಾವು ಈಗಾಗಲೇ ಅವಳನ್ನು ನೋಡಿದ್ದೇವೆ. (ಪ್ರಕಟನೆ 17:1, 15, 16) ಈಗ, ಇನ್ನೊಂದು ದರ್ಶನದಲ್ಲಿ ಸಹ, ನಾವು ಅವಳನ್ನು ಒಂದು ನಗರಿಯಾಗಿ, ಪ್ರಾಚೀನ ಬಾಬೆಲಿನ ಧಾರ್ಮಿಕ ಮೂಲಬಿಂಬವಾಗಿ ದೃಷ್ಟಿಸಲಿದ್ದೇವೆ.

ಮಹಾ ಬಾಬೆಲ್‌ ಎಡವಿಬೀಳುತ್ತಾಳೆ

4. (ಎ) ಯೋಹಾನನು ಮುಂದೆ ಯಾವ ದರ್ಶನವನ್ನು ನೋಡುತ್ತಾನೆ? (ಬಿ) ದೇವದೂತನನ್ನು ನಾವು ಹೇಗೆ ಗುರುತಿಸಬಹುದು, ಮತ್ತು ಮಹಾ ಬಾಬೆಲಿನ ಪತನವನ್ನು ಈತನು ಪ್ರಕಟಿಸುವುದು ಯಾಕೆ ಯುಕ್ತವಾಗಿರುತ್ತದೆ?

4 ಯೋಹಾನನು ದಾಖಲೆಯನ್ನು ಮುಂದುವರಿಸಿ, ನಮಗೆ ಹೇಳುವುದು: “ಈ ಸಂಗತಿಗಳಾದ ಮೇಲೆ ಮಹಾ ಅಧಿಕಾರದೊಂದಿಗೆ ಮತ್ತೊಬ್ಬ ದೇವದೂತನು ಆಕಾಶದಿಂದ ಇಳಿಯುವುದನ್ನು ನಾನು ಕಂಡೆನು; ಅವನ ಪ್ರಭಾವದಿಂದ ಭೂಮಿಗೆ ಪ್ರಕಾಶವುಂಟಾಯಿತು. ಮತ್ತು ಅವನು ಬಲವಾದ ಶಬ್ದದಿಂದ ಕೂಗುತ್ತಾ, ಹೇಳಿದ್ದು: ‘ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್‌ ಬಿದ್ದಿದ್ದಾಳೆ.’” (ಪ್ರಕಟನೆ 18:1, 2ಎ, NW) ದೇವದೂತನ ಆ ಪ್ರಕಟನೆಯನ್ನು ಯೋಹಾನನು ಕೇಳುವುದು ಇದು ಎರಡನೆಯ ಸಲ. (ಪ್ರಕಟನೆ 14:8 ನೋಡಿರಿ.) ಆದಾಗ್ಯೂ, ಈ ಸಮಯ ಅದರ ಮಹತ್ವವು ಸ್ವರ್ಗೀಯ ದೇವದೂತನ ಭವ್ಯತೆಯಿಂದ ಒತ್ತಿಹೇಳಲ್ಪಡುತ್ತದೆ, ಕಾರಣ ಆತನ ಪ್ರಭಾವವು ಇಡೀ ಭೂಮಿಯನ್ನು ಪ್ರಕಾಶಿಸುತ್ತದೆ! ಅವನು ಯಾರಾಗಿರಬಲ್ಲನು? ಶತಮಾನಗಳಷ್ಟು ಪೂರ್ವಕ್ಕೆ ಪ್ರವಾದಿ ಯೆಹೆಜ್ಕೇಲನು ಸ್ವರ್ಗೀಯ ದರ್ಶನದ ಕುರಿತು ವರದಿಸುತ್ತಾ “ಆತನ [ಯೆಹೋವನ] ತೇಜಸ್ಸಿನಿಂದ ಭೂಮಿಯು ಬೆಳಗಿತ್ತು” ಎಂದು ಹೇಳಿದನು. (ಯೆಹೆಜ್ಕೇಲ 43:2) “ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ” ಆಗಿರುವ ಕರ್ತನಾದ ಯೇಸುವು ಯೆಹೋವನದ್ದಕ್ಕೆ ಹೋಲಿಸಬಹುದಾದ ಪ್ರಭಾವದೊಂದಿಗೆ ಬೆಳಗುವ ಒಬ್ಬನೇ ದೇವದೂತನು ಆಗಿರಬಲ್ಲನು. (ಇಬ್ರಿಯ 1:3) ಇಸವಿ 1914 ರಲ್ಲಿ ‘ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಬಂದನು’ ಮತ್ತು ಆ ಸಮಯದಿಂದ ಹಿಡಿದು ಯೇಸುವು ಪರಲೋಕದಲ್ಲಿ “ಅವನ ಮಹಿಮೆಯ ಸಿಂಹಾಸನದಲ್ಲಿ” ಕುಳ್ಳಿರಿಸಲ್ಪಟ್ಟು, ಭೂಮಿಯಲ್ಲೆಲ್ಲೂ ಯೆಹೋವನ ಜೊತೆ ರಾಜನು ಮತ್ತು ನ್ಯಾಯಾಧೀಶನಾಗಿ ಅಧಿಕಾರವನ್ನು ಚಲಾಯಿಸುತ್ತಿದ್ದಾನೆ. ಹಾಗಾದರೆ, ಈತನೇ ಮಹಾ ಬಾಬೆಲಿನ ಪತನವನ್ನು ಪ್ರಕಟಿಸುವುದು ತಕ್ಕದಾಗಿದೆ.—ಮತ್ತಾಯ 25:31, 32.

5. (ಎ) ಮಹಾ ಬಾಬೆಲಿನ ಪತನವನ್ನು ಘೋಷಿಸುವುದರಲ್ಲಿ ದೇವದೂತನು ಯಾರನ್ನು ಉಪಯೋಗಿಸುತ್ತಾನೆ? (ಬಿ) “ದೇವರ ಮನೆ” ಯವರೆಂದು ಹೇಳಿಕೊಳ್ಳುವವರ ಮೇಲೆ ತೀರ್ಪು ಪ್ರಾರಂಭವಾದಾಗ, ಕ್ರೈಸ್ತಪ್ರಪಂಚಕ್ಕೆ ಏನು ಫಲಿಸಿತು?

5 ಮಹಾ ಅಧಿಕಾರವುಳ್ಳ ಈ ದೇವದೂತನು ಇಂಥ ಬೆರಗುಗೊಳಿಸುವ ವಾರ್ತೆಯನ್ನು ಮಾನವ ಕುಲದ ಮುಂದೆ ಘೋಷಿಸಲು ಯಾರನ್ನು ಉಪಯೋಗಿಸುತ್ತಾನೆ? ಯಾಕೆ, ಆ ಪತನದ ಪರಿಣಾಮವಾಗಿ ಮುಕ್ತರಾದ ಅದೇ ಜನರನ್ನು,—ಭೂಮಿಯ ಮೇಲಿನ ಅಭಿಷಿಕ್ತ ಉಳಿಕೆಯವರನ್ನು—ಯೋಹಾನ ವರ್ಗದವರನ್ನೇ. ಇವರು 1914 ರಿಂದ 1918ರ ವರೆಗೆ ಮಹಾ ಬಾಬೆಲಿನ ಕೈಗಳಲ್ಲಿ ಬಹಳ ಕಷ್ಟವನ್ನು ಅನುಭವಿಸಿದರು, ಆದರೆ 1918 ರಲ್ಲಿ ಕರ್ತನಾದ ಯೆಹೋವನು ಮತ್ತು ಆತನ “[ಅಬ್ರಹಾಮ ಸಂಬಂಧಿತ] ಒಡಂಬಡಿಕೆಯ ದೂತ” ನಾದ ಯೇಸು ಕ್ರಿಸ್ತನು, ಕ್ರೈಸ್ತರೆಂದು ಹೇಳಿಕೊಳ್ಳುವವರ, “ದೇವರ ಮನೆ” ಯಲ್ಲಿ ತೀರ್ಪನ್ನು ಆರಂಭಿಸಿದರು. ಹೀಗೆ, ಧರ್ಮಭ್ರಷ್ಟ ಕ್ರೈಸ್ತಪ್ರಪಂಚವು ವಿಚಾರಣೆಗೆ ತರಲ್ಪಟ್ಟಿತು. (ಮಲಾಕಿಯ 3:1; 1 ಪೇತ್ರ 4:17) ಮೊದಲನೇ ಲೋಕ ಯುದ್ಧದ ಸಮಯದಲ್ಲಿ ತನ್ನ ಮೇಲೆ ಹೊತ್ತುಕೊಂಡಿದ್ದ ಅವಳ ಪ್ರಚಂಡ ರಕ್ತಾಪರಾಧ, ಯೆಹೋವನ ನಂಬಿಗಸ್ತ ಸಾಕ್ಷಿಗಳನ್ನು ಹಿಂಸಿಸುವುದರಲ್ಲಿ ಅವಳ ಜತೆಗೂಡುವಿಕೆ, ಮತ್ತು ಬಾಬೆಲಿನ ಅವಳ ನಂಬುಗೆಗಳು ತೀರ್ಪಿನ ಸಮಯದಲ್ಲಿ ಅವಳಿಗೆ ಸಹಾಯ ಮಾಡಲಿಲ್ಲ; ಮಹಾ ಬಾಬೆಲಿನ ಯಾವುದೇ ಬೇರೆ ಭಾಗವೂ ದೇವರ ಮೆಚ್ಚಿಗೆಯನ್ನು ಗಳಿಸಲಿಲ್ಲ.—ಯೆಶಾಯ 13:1-9 ಹೋಲಿಸಿರಿ.

6. ಮಹಾ ಬಾಬೆಲ್‌ 1919 ರೊಳಗೆ ಪತನಗೊಂಡಿತ್ತೆಂದು ನಾವು ಹೇಗೆ ಹೇಳಸಾಧ್ಯವಿದೆ?

6 ಹೀಗೆ 1919 ರೊಳಗೆ, ಮಹಾ ಬಾಬೆಲ್‌ ಪತನಗೊಂಡದರ್ದಿಂದ, ದೇವರ ಜನರು ಆತ್ಮಿಕ ಸಮೃದ್ಧಿಯ ತಮ್ಮ ಸ್ವದೇಶಕ್ಕೆ ಒಂದು ದಿನದಲ್ಲೋ ಎಂಬಂತೆ ಬಿಡಿಸಲ್ಪಟ್ಟು, ಪುನಃ ಸ್ಥಾಪಿಸಲ್ಪಡಲು ದಾರಿಯು ತೆರೆಯಲ್ಪಟ್ಟಿತು. (ಯೆಶಾಯ 66:8) ಆ ವರ್ಷದೊಳಗೆ, ಸುಳ್ಳು ಧರ್ಮವು ಯೆಹೋವನ ಜನರ ಮೇಲೆ ಇನ್ನೆಂದಿಗೂ ಹಿಡಿತವನ್ನು ಸಾಧಿಸಲು ಆಗದಂತೆ ಮಹಾ ದಾರ್ಯಾವೆಷ ಮತ್ತು ಮಹಾ ಕೋರೆಷ ಆಗಿರುವ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು, ವಿಷಯಗಳನ್ನು ನಿರ್ವಹಿಸಿದ್ದರು. ಯೆಹೋವನನ್ನು ಸೇವಿಸುವುದರಿಂದ, ಮತ್ತು ವೇಶ್ಯೆಯಂತಿರುವ ಮಹಾ ಬಾಬೆಲ್‌ ದಂಡಿಸಲ್ಪಟ್ಟಿದೆ ಮತ್ತು ಯೆಹೋವನ ಸಾರ್ವಭೌಮತೆಯ ಸಮರ್ಥನೆ ಹತ್ತಿರವಿದೆಯೆಂದು ಕಿವಿಗೊಟ್ಟು ಕೇಳುವವರೆಲ್ಲರಿಗೆ ತಿಳಿಯಪಡಿಸುವುದರಿಂದ, ಅವರನ್ನು ಇನ್ನು ಮುಂದೆ ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ!—ಯೆಶಾಯ 45:1-4; ದಾನಿಯೇಲ 5:30, 31.

7. (ಎ) ಮಹಾ ಬಾಬೆಲ್‌ 1919 ರಲ್ಲಿ ನಾಶವಾಗಲಿಲ್ಲವಾದರೂ, ಯೆಹೋವನು ಅವಳನ್ನು ಹೇಗೆ ದೃಷ್ಟಿಸಿದನು? (ಬಿ) ಮಹಾ ಬಾಬೆಲ್‌ 1919 ರಲ್ಲಿ ಪತನಗೊಂಡಾಗ, ಯೆಹೋವನ ಜನರಿಗೆ ಏನು ಫಲಿಸಿತು?

7 ಮಹಾ ಬಾಬೆಲ್‌ 1919 ರಲ್ಲಿ ನಾಶವಾಗಲಿಲ್ಲ, ನಿಜ—ಪುರಾತನ ನಗರಿ, ಬಾಬೆಲ್‌ ಸಾ. ಶ. ಪೂ. 539 ರಲ್ಲಿ ಪಾರಸಿಯ ಕೋರೆಷನ ಸೈನ್ಯಗಳಿಗೆ ಬಿದ್ದಾಗ ನಾಶವಾಗದೆ ಇದ್ದಂತೆಯೇ. ಆದರೆ ಯೆಹೋವನ ದೃಷ್ಟಿಕೋನದಿಂದ ಆ ಸಂಸ್ಥೆಯು ಪತನಗೊಂಡಿತ್ತು. ಅವಳು ನ್ಯಾಯವಿಧಾಯಕವಾಗಿ ಖಂಡಿಸಲ್ಪಟ್ಟು, ಮರಣದಂಡನೆಗೆ ಕಾದುನಿಂತಿದ್ದಾಳೆ; ಆದುದರಿಂದ, ಸುಳ್ಳು ಧರ್ಮಕ್ಕೆ ಯೆಹೋವನ ಜನರನ್ನು ಇನ್ನೂ ದೀರ್ಘಕಾಲ ನಿರ್ಬಂಧದಲ್ಲಿ ಇಡಲು ಸಾಧ್ಯವಾಗಲಿಲ್ಲ. (ಹೋಲಿಸಿರಿ ಲೂಕ 9:59, 60.) ಯಜಮಾನನ ನಂಬಿಗಸ್ತನೂ, ವಿವೇಕಿಯೂ ಆದ ಆಳಾಗಿ ಸರಿಯಾದ ಹೊತ್ತಿಗೆ ಆತ್ಮಿಕ ಆಹಾರವನ್ನು ಒದಗಿಸುವ ಸೇವೆ ನಡಿಸಲು ಇವರು ಬಿಡಿಸಲ್ಪಟ್ಟಿದ್ದರು. ಅವರು “ಭಲಾ” ಎಂಬ ನ್ಯಾಯನಿರ್ಣಯವನ್ನು ಪಡೆದಿದ್ದರು, ಮತ್ತು ಯೆಹೋವನ ಕೆಲಸದಲ್ಲಿ ಪುನಃ ಕಾರ್ಯಮಗ್ನರಾಗಿರಲು ಆದೇಶಿಸಲ್ಪಟ್ಟಿದ್ದರು.—ಮತ್ತಾಯ 24:45-47; 25:21, 23; ಅ. ಕೃತ್ಯಗಳು 1:8.

8. ಯೆಶಾಯ 21:8, 9ರ ಕಾವಲುಗಾರನು ಯಾವ ಘಟನೆಯನ್ನು ಪ್ರಚುರಪಡಿಸುತ್ತಾನೆ, ಮತ್ತು ಆ ಕಾವಲುಗಾರನಿಂದ ಇಂದು ಯಾರು ಮುನ್‌ಸೂಚಿಸಲ್ಪಟ್ಟಿದ್ದಾರೆ?

8 ಸಾವಿರಾರು ವರ್ಷಗಳ ಹಿಂದೆ, ಈ ಹೊಸ ಯುಗಾರಂಭದ ಘಟನೆಯನ್ನು ಮುಂತಿಳಿಸಲು ಬೇರೆ ಪ್ರವಾದಿಗಳನ್ನು ಯೆಹೋವನು ಉಪಯೋಗಿಸಿದನು. “ಸಿಂಹಧ್ವನಿಯಿಂದ ಕರೆಯುವ” ಕಾವಲುಗಾರನ ಕುರಿತು ಯೆಶಾಯನು ಮಾತಾಡಿದ್ದನು: “ಯೆಹೋವನೇ ಹಗಲೆಲ್ಲ ಕೋವರದಲ್ಲಿ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದಿದ್ದೆ.” ಮತ್ತು ಆ ಕಾವಲುಗಾರನು ಯಾವ ಘಟನೆಯನ್ನು ವಿವೇಚಿಸುತ್ತಾನೆ ಮತ್ತು ಸಿಂಹದಂತಿರುವ ದೈರ್ಯದಿಂದ ಯಾವುದನ್ನು ಪ್ರಚುರಪಡಿಸುತ್ತಾನೆ? ಇದು: “ಅವಳು ಬಿದ್ದಿದ್ದಾಳೆ! ಬಾಬೆಲ್‌ ಬಿದ್ದಿದ್ದಾಳೆ, ಮತ್ತು ಅವಳ ಎಲ್ಲಾ ದೇವತಾ ವಿಗ್ರಹಗಳನ್ನು ಆತನು [ಯೆಹೋವ] ಒಡೆದು ನೆಲಸಮ ಮಾಡಿಬಿಟ್ಟನು.” (ಯೆಶಾಯ 21:8, 9, NW) ಅದು ವಾಚ್‌ಟವರ್‌ ಪತ್ರಿಕೆ ಮತ್ತು ಇತರ ದೇವಪ್ರಭುತ್ವ ಪ್ರಕಾಶನಗಳನ್ನು, ಬಾಬೆಲ್‌ ಬಿದಿದ್ದೆಯೆಂಬ ವಾರ್ತೆಯನ್ನು ಲೋಕಾದ್ಯಂತ ಧ್ವನಿಸಲು ಉಪಯೋಗಿಸುತ್ತಿದ್ದಷ್ಟಕ್ಕೆ, ಈ ಕಾವಲುಗಾರನು ಚೆನ್ನಾಗಿ ಎಚ್ಚತ್ತಿರುವ ಇಂದಿನ ಯೋಹಾನ ವರ್ಗವನ್ನು ತಕ್ಕದಾಗಿಯೇ ಮುನ್‌ಚಿತ್ರಿಸುತ್ತಾನೆ.

ಮಹಾ ಬಾಬೆಲಿನ ಅವನತಿ

9, 10. (ಎ) ಒಂದನೇ ಲೋಕ ಯುದ್ಧದಿಂದ ಹಿಡಿದು, ಬಾಬೆಲಿನ ಧರ್ಮದ ಪ್ರಭಾವವು ಯಾವ ಅವನತಿಯನ್ನು ಅನುಭವಿಸಿದೆ? (ಬಿ) ಬಲಿಷ್ಠನಾದ ದೇವದೂತನು ಮಹಾ ಬಾಬೆಲಿನ ಪತನಗೊಂಡ ಸ್ಥಿತಿಯನ್ನು ಹೇಗೆ ವರ್ಣಿಸುತ್ತಾನೆ?

9 ಸಾ. ಶ. ಪೂ. 539 ರಲ್ಲಿ ಪ್ರಾಚೀನ ಬಾಬೆಲಿನ ಪತನವು, ಅವಳ ನಿರ್ಜನತೆಯಲ್ಲಿ ಕೊನೆಗೊಂಡ ದೀರ್ಘ ಅವನತಿಯ ಆರಂಭವಾಗಿತ್ತು. ತದ್ರೀತಿಯಲ್ಲಿ ಮೊದಲನೆಯ ಲೋಕ ಯುದ್ಧದಿಂದ ಹಿಡಿದು, ಬಾಬೆಲಿನ ಧರ್ಮದ ಪ್ರಭಾವವು ಭೌಗೋಲಿಕ ಪ್ರಮಾಣದಲ್ಲಿ ಗಮನಾರ್ಹವಾಗಿ ಕ್ಷಯಿಸಿದೆ. ಜಪಾನಿನಲ್ಲಿ, ಎರಡನೆಯ ಲೋಕ ಯುದ್ಧವನ್ನು ಹಿಂಬಾಲಿಸುತ್ತಾ ಶಿಂಟೋ ಚಕ್ರವರ್ತಿ ಆರಾಧನೆಯು ನಿಷೇಧಿಸಲ್ಪಟ್ಟಿದೆ. ಚೀನಾದಲ್ಲಿ ಕಾಮ್ಯುನಿಸ್ಟ್‌ ಸರಕಾರವು ಎಲ್ಲಾ ಧಾರ್ಮಿಕ ನೇಮಕಗಳನ್ನು ಮತ್ತು ಚಟುವಟಿಕೆಯನ್ನೂ ನಿಯಂತ್ರಿಸುತ್ತದೆ. ಪ್ರಾಟೆಸ್ಟಂಟ್‌ ಉತ್ತರ ಯೂರೋಪಿನಲ್ಲಿ ಅನೇಕ ಜನರು ಧರ್ಮದೆಡೆಗೆ ಉದಾಸೀನ ಭಾವವನ್ನು ತಾಳಿದ್ದಾರೆ. ಮತ್ತು ರೋಮನ್‌ ಕ್ಯಾತೊಲಿಕ್‌ ಚರ್ಚು ಇತ್ತಿತ್ತಲಾಗಿ ಅದರ ಲೋಕವ್ಯಾಪಕ ಆಧಿಪತ್ಯದಲ್ಲಿನ ಒಡಕುಗಳು ಮತ್ತು ಆಂತರಿಕ ಅಸಮ್ಮತಿಯಿಂದ ನಿರ್ಬಲವಾಗಿದೆ.—ಹೋಲಿಸಿರಿ ಮಾರ್ಕ 3:24-26.

10 ಈ ಎಲ್ಲಾ ಪ್ರವೃತ್ತಿಗಳು ನಿಸ್ಸಂದೇಹವಾಗಿ ಮಹಾ ಬಾಬೆಲಿನ ಮೇಲೆ ಬರಲಿರುವ ಮಿಲಿಟರಿ ದಾಳಿಗೆ ಸಿದ್ಧತೆಯಲ್ಲಿ, ‘ಯೂಫ್ರೇಟೀಸ್‌ ನದಿಯ ಇಂಗಿಸುವ’ ಭಾಗವಾಗಿವೆ. ಅತಿ ದೊಡ್ಡ ಮೊತ್ತದ ಹಣದ ಕೊರತೆಯಿಂದಾಗಿ, “ಚರ್ಚು ಪುನಃ ಒಮ್ಮೆ ಬಿಕ್ಷುಕರಾಗಲೇಬೇಕೆಂಬ” ಅಕ್ಟೋಬರ 1986ರ ಪೋಪರ ಘೋಷಣೆಯಿಂದ ಸಹ ಈ ‘ಇಂಗಿಹೋಗುವಿಕೆ’ಯು ಪ್ರತಿಬಿಂಬಿಸಲ್ಪಡುತ್ತದೆ. (ಪ್ರಕಟನೆ 16:12) ಬಲಿಷ್ಠನಾದ ದೇವದೂತನು ಇಲ್ಲಿ ಪ್ರಕಟಿಸಿದಂತೆ, ನಿರ್ದಿಷ್ಟವಾಗಿ 1919 ರಿಂದ ಹಿಡಿದು ಮಹಾ ಬಾಬೆಲ್‌ ಸಾರ್ವಜನಿಕ ದೃಷ್ಟಿಗೆ ಆತ್ಮಿಕ ಪಾಳು ಭೂಮಿಯಾಗಿ ಬಯಲುಗೊಳಿಸಲ್ಪಟ್ಟಿದೆ: “ಮತ್ತು ಅವಳು ದೆವ್ವಗಳ ವಾಸಸ್ಥಾನವೂ ಪ್ರತಿಯೊಂದು ಅಶುದ್ಧ ಹಬೆಯ ಅವಿತುಕೊಳ್ಳುವ ಸ್ಥಳವೂ ಮತ್ತು ಪ್ರತಿಯೊಂದು ಅಶುದ್ಧ ಮತ್ತು ದ್ವೇಷಿತ ಪಕ್ಷಿಯ ಅವಿತುಕೊಳ್ಳುವ ಸ್ಥಳವೂ ಆಗಿದ್ದಾಳೆ!” (ಪ್ರಕಟನೆ 18:2ಬಿ, NW) ಈ 20 ನೆಯ ಶತಮಾನದ ಇರಾಕಿನಲ್ಲಿರುವ ಬಾಬೆಲಿನ ಅವಶೇಷಗಳು ನಿರ್ಜನವಾಗಿರುವಂತೆ, ಬೇಗನೆ ಅವಳು ಅಕ್ಷರಾರ್ಥಕವಾಗಿ ಒಂದು ಹಾಳು ದಿಬ್ಬವಾಗಲಿದ್ದಾಳೆ.—ಯೆರೆಮೀಯ 50:25-28ನ್ನೂ ನೋಡಿರಿ.

11. ಮಹಾ ಬಾಬೆಲ್‌ ಯಾವ ಅರ್ಥದಲ್ಲಿ “ದೆವ್ವಗಳ ವಾಸಸ್ಥಾನವೂ” ಮತ್ತು ‘ಅಶುದ್ಧ ಹಬೆಯ ಹಾಗೂ ಪ್ರತಿಯೊಂದು ಅಶುದ್ಧ ಮತ್ತು ದ್ವೇಷಿತ ಪಕ್ಷಿಯ ಅವಿತುಕೊಳ್ಳುವ ಸ್ಥಳ’ವೂ ಆಗಿದ್ದಾಳೆ?

11 “ದೆವ್ವಗಳು” ಎನ್ನುವ ಪದವು ಇಲ್ಲಿ ಪ್ರಾಯಶಃ ಯೆಶಾಯನ ಪತನಗೊಂಡ ಬಾಬೆಲಿನ ವಿವರಣೆಯಲ್ಲಿ ಕಂಡುಬರುವ “ಆಡು ರೂಪದ ದೆವ್ವಗಳು” (ಸೆ’ಇ-ರೀಮ್‌’) ಎನ್ನುವ ಪದದ ಪ್ರತಿಬಿಂಬವಾಗಿದೆ: “ಕುರುಬರು ಮಂದೆಗಳನ್ನು ತಂಗಿಸರು. ಅದು ಕಾಡುಮೃಗಗಳಿಗೆ ಹಕ್ಕೆಯಾಗುವದು, ಅಲ್ಲಿನ ಮನೆಗಳಲ್ಲಿ ಗೂಬೆಗಳು ತುಂಬಿಕೊಳ್ಳುವವು. ಅಲ್ಲಿ ಉಷ್ಟ್ರ ಪಕ್ಷಿಗಳು ವಾಸಿಸುವವು, [ಆಡುರೂಪದ, NW] ದೆವ್ವಗಳು ಕುಣಿದಾಡುವವು.” (ಯೆಶಾಯ 13:21) ಅದು ಅಕ್ಷರಾರ್ಥಕ ದೆವ್ವಗಳನ್ನು ಸೂಚಿಸಲಿಕ್ಕಿಲ್ಲ, ಆದರೆ ಯಾವುದರ ತೋರಿಕೆಯು ನೋಡುವವರಿಗೆ ದೆವ್ವಗಳ ಕುರಿತು ಚಿಂತಿಸುವಂತೆ ಮಾಡುತ್ತದೋ ಅಂತಹ ಬಿರುಸುಕೂದಲಿನ, ಮರುಭೂಮಿಯಲ್ಲಿ ವಾಸಿಸುವ ಪ್ರಾಣಿಗಳಿಗೆ ಸೂಚಿಸಬಹುದಾಗಿತ್ತು. ಮಹಾ ಬಾಬೆಲಿನ ಅವಶೇಷಗಳಲ್ಲಿ ಜಡ, ವಿಷಪೂರಿತ ವಾಯು (“ಅಶುದ್ಧ ಹಬೆ”) ಮತ್ತು ಅಶುದ್ಧ ಪಕ್ಷಿಗಳೊಂದಿಗೆ ಇಂಥ ಪ್ರಾಣಿಗಳ ಸಾಂಕೇತಿಕ ಅಸ್ತಿತ್ವವು ಅವಳ ಆತ್ಮಿಕವಾದ ಮೃತಸ್ಥಿತಿಯನ್ನು ಸೂಚಿಸುತ್ತದೆ. ಅವಳು ಮಾನವ ಕುಲಕ್ಕೆ ಯಾವುದೇ ಜೀವ ಪ್ರತೀಕ್ಷೆಯನ್ನು ನೀಡುವುದಿಲ್ಲ.—ಹೋಲಿಸಿರಿ ಎಫೆಸ 2:1, 2.

12. ಮಹಾ ಬಾಬೆಲಿನ ಅವಸ್ಥೆಯು ಯೆರೆಮೀಯನ ಪ್ರವಾದನೆಯ 50 ನೆಯ ಅಧ್ಯಾಯಕ್ಕೆ ಹೇಗೆ ಹೋಲುತ್ತದೆ?

12 ಅವಳ ಅವಸ್ಥೆಯು ಯೆರೆಮೀಯನ ಪ್ರವಾದನೆಯನ್ನು ಕೂಡ ಹೋಲುತ್ತದೆ: “ಯೆಹೋವನು ಇಂತೆನ್ನುತ್ತಾನೆ—ಖಡ್ಗವು ಕಸೀಯ್ದರ ಮೇಲೆ ಬೀಳಲಿ! ಬಾಬೆಲಿನ ಸಾಮಾನ್ಯ ಜನರು, ಪ್ರಧಾನರು, ಪಂಡಿತರು, ಇವರನ್ನೆಲ್ಲಾ ಹತಿಸಲಿ! . . . ಬೇಗೆಯು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವದು. ಅದು ಬೊಂಬೆಗಳಿಂದ ತುಂಬಿದ ದೇಶ, ಅದರ ಜನರು ಅಕಟವಿಕಟ ವಿಗ್ರಹಗಳ ಪೂಜೆಯಿಂದ ಮದ್ಯವೇರಿಸಿಕೊಳ್ಳುತ್ತಾರಷ್ಟೆ; ಆದಕಾರಣ ತೋಳ ಮುಂತಾದ ಕಾಡು ಮೃಗಗಳು ಅಲ್ಲಿ ಹಕ್ಕೆಮಾಡಿಕೊಳ್ಳುವವು, ಉಷ್ಟ್ರ ಪಕ್ಷಿಗಳು ತಂಗುವವು; ಅದು ಎಂದಿಗೂ ನಿವಾಸ ಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲಿರರು.” ವಿಗ್ರಹಾರಾಧನೆ ಮತ್ತು ಪುನರುಚ್ಚರಿತ ಪ್ರಾರ್ಥನೆಗಳ ಪಠಿಸುವಿಕೆಯು, ಸೊದೋಮ್‌ ಗೊಮೋರದ ಮೇಲೆ ದೇವರು ತಂದ ಉರುಳಿಸುವಿಕೆಯನ್ನು ಹೋಲುವ ಪ್ರತೀಕಾರದಿಂದ ಮಹಾ ಬಾಬೆಲನ್ನು ಕಾಪಾಡಶಕ್ತವಾಗುವುದಿಲ್ಲ.—ಯೆರೆಮೀಯ 50:35-40.

ಕಾಮೋದ್ರೇಕಗೊಳಿಸುವ ದ್ರಾಕ್ಷಾರಸ

13. (ಎ) ಮಹಾ ಬಾಬೆಲಿನ ಅತಿ ವ್ಯಾಪಕ ವೇಶ್ಯಾವೃತ್ತಿಯ ಕಡೆಗೆ ಬಲಿಷ್ಠನಾದ ದೇವದೂತನು ಹೇಗೆ ಗಮನವನ್ನು ಸೆಳೆಯುತ್ತಾನೆ? (ಬಿ) ಪ್ರಾಚೀನ ಬಾಬೆಲಿನಲ್ಲಿ ಪ್ರಚಲಿತವಾದ ಯಾವ ಅನೈತಿಕತೆಯನ್ನು ಮಹಾ ಬಾಬೆಲಿನಲ್ಲಿ ಸಹ ಕಂಡುಕೊಳ್ಳುತ್ತೇವೆ?

13 ಬಲಿಷ್ಠನಾದ ದೇವದೂತನು ಅನಂತರ ಮಹಾ ಬಾಬೆಲಿನ ವೇಶ್ಯಾವೃತ್ತಿಯ ಬಹುವ್ಯಾಪಕ ವಿಸ್ತಾರತೆಯ ಕಡೆಗೆ ನಮ್ಮೆಲ್ಲರ ಗಮನವನ್ನು ಸೆಳೆಯುತ್ತಾ, ಹೀಗೆ ಘೋಷಿಸುತ್ತಾನೆ: “ಅವಳ ಕಾಮೋದ್ರೇಕಗೊಳಿಸುವ ಜಾರತ್ವದ ದ್ರಾಕ್ಷಾರಸದ ಕಾರಣ ಎಲ್ಲಾ ಜನಾಂಗಗಳು ಬಲಿಯಾಗಿದ್ದಾರೆ, * ಮತ್ತು ಅವಳೊಂದಿಗೆ ಭೂರಾಜರು ಜಾರತ್ವಮಾಡಿದರು, ಮತ್ತು ಅವಳ ನಿರ್ಲಜ್ಜೆಯ ಸುಖಭೋಗದ ಶಕ್ತಿಯ ಕಾರಣ ಭೂಲೋಕದ ಸಂಚಾರಿ ವರ್ತಕರು ಐಶ್ವರ್ಯವಂತರಾದರು.” (ಪ್ರಕಟನೆ 18:3, NW) ಅವಳು ಮಾನವ ಕುಲದ ಎಲ್ಲಾ ಜನಾಂಗಗಳನ್ನು ತನ್ನ ಅಶುದ್ಧ ಧಾರ್ಮಿಕ ಹಾದಿಗಳಲ್ಲಿ ದಾರಿತಪ್ಪಿಸಿದ್ದಾಳೆ. ಪ್ರಾಚೀನ ಬಾಬೆಲಿನಲ್ಲಿ, ಗ್ರೀಕ್‌ ಇತಿಹಾಸಗಾರ ಹಿರಾಡಟಸನ ಪ್ರಕಾರ, ಪ್ರತಿ ಕನ್ಯೆಯು ದೇವಾಲಯದ ಆರಾಧನೆಯಲ್ಲಿ ತನ್ನ ಕನ್ಯಾವಸ್ಥೆಯನ್ನು ವೇಶ್ಯಾವಾಟಿಕೆ ಮಾಡುವಂತೆ ಅಪೇಕ್ಷಿಸಲಾಗುತ್ತಿತ್ತು. ಈ ದಿನದ ವರೆಗೂ, ಕಂಪೂಶಿಯದ ಆ್ಯಂಕಾರ್‌ವಾಟ್‌ನಲ್ಲಿರುವ ಯುದ್ಧಹಾನಿಗೊಳಗಾಗಿರುವ ಬೌದ್ಧ ಶಿಲ್ಪಕಲೆಗಳಲ್ಲಿ ಮತ್ತು ಯಾವುದರಲ್ಲಿ ಹಿಂದೂ ದೇವರಾದ ವಿಷ್ಣು ಅಸಹ್ಯಕರ ಪ್ರಣಯ ಸಂಬಂಧದ ದೃಶ್ಯಗಳಿಂದ ಸುತ್ತುವರಿಸಲ್ಪಟ್ಟದ್ದನ್ನು ತೋರಿಸಲಾಗಿದೆಯೋ ಆ ಭಾರತದ ಖಜುರಾಹೋದಲ್ಲಿರುವ ದೇವಸ್ಥಾನಗಳಲ್ಲಿ ಹೇವರಿಕೆ ಬರುವ ಲೈಂಗಿಕ ಭ್ರಷ್ಟತೆಯನ್ನು ಚಿತ್ರಿಸಲಾಗಿದೆ. ಅಮೆರಿಕದಲ್ಲಿ 1987 ರಲ್ಲಿ ಮತ್ತು ಪುನಃ ಒಮ್ಮೆ 1988 ರಲ್ಲಿ ಟೀವೀ ಸೌವಾರ್ತಿಕರ ಲೋಕವನ್ನು ಅಲುಗಾಡಿಸಿದ ಅನೈತಿಕತೆಯ ಬಹಿರಂಗಪಡಿಸುವಿಕೆಗಳು, ಹಾಗೂ ಧರ್ಮದ ಪಾದ್ರಿಗಳಿಂದ ಸಲಿಂಗಕಾಮದ ಬಹುವ್ಯಾಪಕ ಆಚರಣೆಯ ಪ್ರಕಟನೆಯು, ಕ್ರೈಸ್ತಪ್ರಪಂಚವು ಅಕ್ಷರಾರ್ಥಕ ವ್ಯಭಿಚಾರದ ಧಕ್ಕೆಬರಿಸುವ ಅತಿರೇಕತೆಯನ್ನು ಕೂಡ ಸಹಿಸುತ್ತಿದೆಯೆಂದು ಚಿತ್ರಿಸುತ್ತದೆ. ಆದರೂ, ಎಲ್ಲಾ ಜನಾಂಗದವರು ಈ 20 ನೆಯ ಶತಮಾನದಲ್ಲಿ ಸಹ ಅದಕ್ಕಿಂತ ಹೆಚ್ಚು ಗಂಭೀರ ತರದ ವ್ಯಭಿಚಾರಕ್ಕೆ ಬಲಿಯಾಗಿದ್ದಾರೆ.

14-16. (ಎ) ಫ್ಯಾಸಿಸ್ಟ್‌ ಇಟೆಲಿಯಲ್ಲಿ ಆತ್ಮಿಕವಾಗಿ ಕಾನೂನು ಬಾಹಿರವಾದ ಯಾವ ಧರ್ಮ-ರಾಜಕೀಯ ಸಂಬಂಧ ಬೆಳೆಯಿತು? (ಬಿ) ಇಟೆಲಿಯು ಆ್ಯಬಿಸಿನೀಯವನ್ನು ಮುತ್ತಿದಾಗ ರೋಮನ್‌ ಕ್ಯಾತೊಲಿಕ್‌ ಚರ್ಚಿನ ಬಿಷಪರು ಯಾವ ಹೇಳಿಕೆಗಳನ್ನು ಮಾಡಿದರು?

14 ನಾವು ಈಗಾಗಲೇ ನಾಜಿ ಜರ್ಮನಿಯಲ್ಲಿ ಹಿಟ್ಲರನನ್ನು ಅಧಿಕಾರಕ್ಕೆ ತಂದ ನಿಷಿದ್ಧ ಧರ್ಮ-ರಾಜಕೀಯ ಸಂಬಂಧವನ್ನು ಪುನರ್ವಿಮರ್ಶಿಸಿದ್ದೇವೆ. ಇನ್ನಿತರ ಜನಾಂಗಗಳು ಕೂಡ ಐಹಿಕ ಕಾರ್ಯಾದಿಗಳಲ್ಲಿ ಧರ್ಮದ ಹಸ್ತಕ್ಷೇಪದ ಕಾರಣದಿಂದ ಕಷ್ಟವನ್ನನುಭವಿಸಿದವು. ಉದಾಹರಣೆಗೆ: ಫ್ಯಾಸಿಸ್ಟ್‌ ಇಟೆಲಿಯಲ್ಲಿ ಫೆಬ್ರವರಿ 11, 1929 ರಂದು ಲ್ಯಾಟರನ್‌ ಮೈತ್ರಿಸಂಧಾನವು ಮೂಸಲಿನೀ ಮತ್ತು ಕಾರ್ಡಿನಲ್‌ ಗಾಸ್ಪರೀ ಇವರಿಂದ ಸಹಿಮಾಡಲ್ಪಟ್ಟಿತು. ಹೀಗೆ ವ್ಯಾಟಿಕನ್‌ ನಗರವು ಒಂದು ಸರ್ವಸ್ವತಂತ್ರ ರಾಜ್ಯವಾಯಿತು. ಪೋಪ್‌ ಪಾಯಿಅಸ್‌ XI ಹೇಳಿದ್ದೇನಂದರೆ ತಾನು “ಇಟೆಲಿಯನ್ನು ಹಿಂದೆ ದೇವರಿಗೆ ಕೊಟ್ಟುಬಿಟ್ಟೆ, ಮತ್ತು ದೇವರನ್ನು ಇಟೆಲಿಗೆ ಕೊಟ್ಟುಬಿಟ್ಟೆ.” ಅದು ಸತ್ಯವಾಗಿತ್ತೋ? ಆರು ವರ್ಷಗಳ ಅನಂತರ ಏನಾಯಿತೆಂಬುದನ್ನು ಗಮನಿಸಿರಿ. ಅಕ್ಟೋಬರ 3, 1935 ರಂದು ಇಟೆಲಿಯು ಆ್ಯಬಿಸಿನೀಯವನ್ನು, “ಅದು ದಾಸ್ಯವನ್ನು ಇನ್ನೂ ಆಚರಿಸುತ್ತಿರುವ ಅನಾಗರಿಕ ಭೂಮಿಯಾಗಿದೆಯೆಂದು” ಹೇಳಿಕೊಂಡು, ಮುತ್ತಿ ಆಕ್ರಮಿಸಿತು. ಯಾರು ನಿಜವಾಗಿಯೂ ಅನಾಗರಿಕರಾಗಿದ್ದರು? ಕ್ಯಾತೊಲಿಕ್‌ ಚರ್ಚು ಮೂಸಲಿನೀಯ ಅನಾಗರಿಕತೆಯನ್ನು ಖಂಡಿಸಿತ್ತೋ? ಪೋಪನು ಅಸ್ಪಷ್ಟ ಹೇಳಿಕೆಗಳನ್ನು ಹೊರಡಿಸುತ್ತಿದ್ದ ವೇಳೆ, ಅವನ ಬಿಷಪರು ಅವರ ಇಟ್ಯಾಲಿಯನ್‌ “ಜನ್ಮಭೂಮಿ”ಯ ಸೇನಾ ಪಡೆಯನ್ನು ಕಂಠೋಕ್ತವಾಗಿ ಆಶೀರ್ವದಿಸುತ್ತಾ ಇದ್ದರು. ದ ವ್ಯಾಟಿಕನ್‌ ಇನ್‌ ದ ಏಜ್‌ ಆಫ್‌ ದ ಡಿಕೇಟ್ಟರ್ಸ್‌ ಪುಸ್ತಕದಲ್ಲಿ ಆ್ಯಂಟನಿ ರೋಡ್ಸ್‌ ವರದಿಸುವುದು:

15 “ಅಕ್ಟೋಬರ [1935] 19ರ ತನ್ನ ಪಾಲನೆಯ ಪತ್ರದಲ್ಲಿ ಊಡಿನೆ [ಇಟೆಲಿ]ಯ ಬಿಷಪರು ಬರೆದದ್ದು, ‘ಮೊಕದ್ದಮೆಯ ಸರಿ ಮತ್ತು ತಪ್ಪುಗಳ ಮೇಲೆ ಅಭಿಪ್ರಾಯ ನೀಡುವುದಕ್ಕೆ ನಮಗೆಲ್ಲರಿಗೆ ಇದು ಸಮಯೋಚಿತವೂ ಅಲ್ಲ, ತಕ್ಕದ್ದೂ ಅಲ್ಲ. ಇಟ್ಯಾಲಿಯನರಾಗಿ ಮತ್ತು ಇನ್ನೂ ಹೆಚ್ಚಾಗಿ ಕ್ರೈಸ್ತರಾಗಿ ನಮ್ಮ ಕರ್ತವ್ಯವು ನಮ್ಮ ಶಸ್ತ್ರಾಸ್ತ್ರದ ಯಶಸ್ಸಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡುವುದೇ ಆಗಿದೆ.” ಪ್ಯಾಜವದ ಬಿಷಪರು 21 ನೆಯ ಅಕ್ಟೋಬರದಂದು ಬರೆದದ್ದು, ‘ನಾವು ದಾಟುತ್ತಿರುವ ಕ್ಲಿಷ್ಟ ಸಮಯಗಳಲ್ಲಿ ನಮ್ಮ ರಾಜನೀತಿಜ್ಞರ ಮತ್ತು ಸೇನಾಪಡೆಗಳ ಮೇಲೆ ನಂಬಿಕೆಯುಳ್ಳವರಾಗಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ.’ ಅಕ್ಟೋಬರ 24 ರಂದು ಕ್ರಿಮೋನದ ಬಿಷಪರು ಅನೇಕ ದಳ ಧ್ವಜಗಳನ್ನು ಪವಿತ್ರೀಕರಿಸಿ ಪ್ರತ್ಯೇಕಿಸಿದರು ಮತ್ತು ಅಂದದ್ದು: ‘ದೇವರ ಆಶೀರ್ವಾದವು ಆಫ್ರಿಕದ ಮಣ್ಣಿನ ಮೇಲೆ ಹೋರಾಡುವ, ಇಟ್ಯಾಲಿಯನ್‌ ಪ್ರತಿಭಾಶಾಲಿಗೆ ಹೊಸ ಮತ್ತು ಫಲವತ್ತಾದ ಭೂಮಿಗಳನ್ನು ಜಯಿಸಿ ಈ ಮೂಲಕ ಅವುಗಳನ್ನು ರೋಮನ್‌ ಮತ್ತು ಕ್ರೈಸ್ತ ಸಂಸ್ಕೃತಿಯೊಳಗೆ ತರುವುದರಲ್ಲಿ ಹೋರಾಡುವ ನಮ್ಮ ಈ ಸೈನಿಕರ ಮೇಲೆ ಇರಲಿ. ಇಟೆಲಿಯು ಪುನಃ ಒಮ್ಮೆ ಇಡೀ ಲೋಕಕ್ಕೆ ಕ್ರೈಸ್ತ ಸಲಹೆಗಾರನಾಗಿ ಯಾವಾಗಲೂ ಉಳಿಯುವಂತಾಗಲಿ.’”

16 ಆ್ಯಬಿಸಿನೀಯವು ರೋಮನ್‌ ಕ್ಯಾತೊಲಿಕ್‌ ವೈದಿಕರ ಆಶೀರ್ವಾದದೊಂದಿಗೆ ಬಲಾತ್ಕಾರಕ್ಕೊಳಗಾಯಿತು. ಇವರಲ್ಲಿ ಯಾರೊಬ್ಬನೂ, ಯಾವುದೇ ರೀತಿಯಲ್ಲಿ, ತಾನು ಅಪೊಸ್ತಲ ಪೌಲನಂತೆ “ಎಲ್ಲಾ ಮನುಷ್ಯರ ರಕ್ತದಿಂದ ಶುದ್ಧನಾಗಿದ್ದೇನೆ” ಎಂದು ಹೇಳಶಕ್ತನಾಗಿದ್ದನೋ?—ಅ. ಕೃತ್ಯಗಳು 20:26, NW.

17. ಅದರ ವೈದಿಕರು “ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡುವುದರಲ್ಲಿ” ವಿಫಲಗೊಂಡ ಕಾರಣದಿಂದಾಗಿ ಸ್ಪೆಯಿನ್‌ ಹೇಗೆ ಕಷ್ಟವನ್ನನುಭವಿಸಿತು?

17 ಮಹಾ ಬಾಬೆಲಿನ ಜಾರತ್ವಕ್ಕೆ ಬಲಿಬಿದ್ದ ಇನ್ನೊಂದು ರಾಷ್ಟ್ರವನ್ನು—ಸ್ಪೆಯಿನನ್ನು—ಜರ್ಮನಿ, ಇಟೆಲಿ ಮತ್ತು ಆ್ಯಬಿಸಿನೀಯದಕ್ಕೆ ಕೂಡಿಸಿರಿ. ಆ ದೇಶದಲ್ಲಾದ 1936-39ರ ಆಂತರಿಕ ಯುದ್ಧವು, ಭಾಗಶಃ ರೋಮನ್‌ ಕ್ಯಾತೊಲಿಕ್‌ ಚರ್ಚಿನ ಅತಿ ವ್ಯಾಪಕ ಅಧಿಕಾರವನ್ನು ಕುಂಠಿತಗೊಳಿಸಲು, ಪ್ರಜಾಸತ್ತೆಯ ಸರಕಾರವು ಹೆಜ್ಜೆಗಳನ್ನು ತೆಗೆದುಕೊಳ್ಳುವುದರಿಂದ ಕಿಡಿಹೊತ್ತಿಸಲ್ಪಟ್ಟಿತು. ಯುದ್ಧವು ಆರಂಭವಾದಾಗ ಕ್ರಾಂತಿಕಾರಕ ಶಕ್ತಿಗಳ ಕ್ಯಾತೊಲಿಕ್‌ ಫ್ಯಾಸಿಸ್ಟ್‌ ಮುಖಂಡನಾದ ಫ್ರಾಂಕೊ, ತನ್ನನ್ನು “ಪವಿತ್ರ ಕ್ರುಸೇಡಿನ ಕ್ರೈಸ್ತ ಸೈನ್ಯಗಳ ಮುಖ್ಯ ಸೇನಾಧಿಪತಿಯಾಗಿ” ವರ್ಣಿಸಿಕೊಂಡನು. ಈ ಬಿರುದನ್ನು ಈತನು ಅನಂತರ ತ್ಯಜಿಸಿದನು. ಯುದ್ಧದಲ್ಲಿ ನೂರಾರು ಸಹಸ್ರ ಸಂಖ್ಯೆಯಲ್ಲಿ ಸ್ಪೆಯಿನ್‌ ದೇಶಸ್ಥರು ಮಡಿದರು. ಇದರಿಂದ ಹೊರತಾಗಿ, ಒಂದು ಮಿತವಾದ ಅಂದಾಜಿನ ಪ್ರಕಾರ ಫ್ರಾಂಕೊವಿನ ನ್ಯಾಷನಲಿಸ್ಟ್ಸ್‌ ಪಕ್ಷದವರು 40,000 ಪಾಪ್ಯುಲರ್‌ ಫ್ರಂಟ್‌ ಸದಸ್ಯರ ಕೊಲೆ ಮಾಡಿದರು ಮತ್ತು ಈ ಪಕ್ಷದವರು 8,000 ಪುರೋಹಿತ ವರ್ಗದವರನ್ನು—ಸಂನ್ಯಾಸಿಗಳು, ವೈದಿಕರು, ಸಂನ್ಯಾಸಿನಿಯರು ಮತ್ತು ನವಶಿಷ್ಯರನ್ನು ಕೊಲೆ ಮಾಡಿದರು. ಆಂತರಿಕ ಯುದ್ಧದ ಭೀಕರತೆ ಮತ್ತು ದುರಂತವು ಇಂತಹದ್ದಾಗಿದ್ದು, “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು. ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂಬ ಯೇಸುವಿನ ಮಾತುಗಳನ್ನು ಪಾಲಿಸುವುದರ ವಿವೇಕವನ್ನು ಚಿತ್ರಿಸುತ್ತದೆ. (ಮತ್ತಾಯ 26:52) ಕ್ರೈಸ್ತಪ್ರಪಂಚವು ಇಂಥ ಭೀಕರವಾದ ರಕ್ತ ಸುರಿಸುವಿಕೆಯಲ್ಲಿ ಒಳಗೂಡಿರುವುದು ಎಷ್ಟು ಅಸಹ್ಯಕರ! ಅವಳ ವೈದಿಕರು ‘ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಮಾಡುವುದರಲ್ಲಿ’ ನಿಜವಾಗಿಯೂ ಸಂಪೂರ್ಣವಾಗಿ ಸೋತಿದ್ದಾರೆ!—ಯೆಶಾಯ 2:4.

ಸಂಚಾರಿ ವರ್ತಕರು

18. “ಭೂಲೋಕದ ಸಂಚಾರಿ ವರ್ತಕರು” ಯಾರಾಗಿದ್ದಾರೆ?

18 “ಭೂಲೋಕದ ಸಂಚಾರಿ ವರ್ತಕರು” ಯಾರು? ನಾವು ಇಂದು ಅವರನ್ನು ವ್ಯಾಪಾರಿಗಳು, ವಾಣಿಜ್ಯ ದೈತ್ಯರು, ದೊಡ್ಡ ವ್ಯಾಪಾರದ ಮೋಸ ವಿದ್ಯೆಯವರು ಎಂದು ಕರೆಯುತ್ತೇವೆಂಬುದಕ್ಕೆ ಯಾವುದೇ ಸಂದೇಹವಿಲ್ಲ. ನ್ಯಾಯಸಮ್ಮತ ವ್ಯಾಪಾರದಲ್ಲಿ ಒಳಗೂಡುವುದು ತಪ್ಪಾಗಿದೆಯೆಂದು ಇದರ ಅರ್ಥವಲ್ಲ. ವ್ಯಾಪಾರೀ ಜನರಿಗೆ ಬೈಬಲು ವಿವೇಕದ ಹಿತವಾದವನ್ನು ಒದಗಿಸುತ್ತಾ, ಅಪ್ರಾಮಾಣಿಕತೆ, ಲೋಭ, ಮತ್ತು ಅಂಥವುಗಳ ವಿರುದ್ಧ ಎಚ್ಚರಿಸುತ್ತದೆ. (ಜ್ಞಾನೋಕ್ತಿ 11:1; ಜೆಕರ್ಯ 7:9, 10; ಯಾಕೋಬ 5:1-5) “ಸಂತುಷ್ಟಿ ಸಹಿತವಾದ ಭಕ್ತಿಯು” ತಾನೇ ಹೆಚ್ಚು ದೊಡ್ಡ ಲಾಭವಾಗಿದೆ. (1 ತಿಮೊಥೆಯ 6:6, 17-19) ಆದಾಗ್ಯೂ, ಸೈತಾನನ ಲೋಕವು ನೀತಿಯ ಸೂತ್ರಗಳನ್ನು ಅನುಸರಿಸುವುದಿಲ್ಲ. ಭ್ರಷ್ಟತನವು ಬಹಳಷ್ಟು ವರ್ಧಿಸಿದೆ. ಅದನ್ನು ಧರ್ಮದಲ್ಲಿ, ರಾಜಕೀಯದಲ್ಲಿ—ಮತ್ತು ದೊಡ್ಡ ವ್ಯಾಪಾರದಲ್ಲಿ ಕಂಡುಕೊಳ್ಳುತ್ತೇವೆ. ಆಗಿಂದಾಗ್ಗೆ ವಾರ್ತಾ ಮಾಧ್ಯಮವು ಉಚ್ಚ ಸರಕಾರಿ ಹುದ್ದೆದಾರರಿಂದ ದುರುಪಯೋಗ ಮತ್ತು ಶಸ್ತ್ರಗಳ ಕಾನೂನುಬಾಹಿರ ಸಾಗಾಟ, ಇವೇ ಮುಂತಾದ ಅವಮಾನಕಾರಿ ಆಪಾದನೆಗಳನ್ನು ಪ್ರಕಟಿಸುತ್ತದೆ.

19. ಪ್ರಕಟನೆಯಲ್ಲಿ ಭೂಲೋಕದ ವರ್ತಕರ ಅಶುಭಕರ ಪ್ರಸ್ತಾಪನೆಗೆ ಕಾರಣವನ್ನು ಲೋಕದ ಅರ್ಥಶಾಸ್ತ್ರದ ಯಾವ ನಿಜತ್ವವು ವಿವರಿಸಲು ಸಹಾಯ ಮಾಡುತ್ತದೆ?

19 ಶಸ್ತ್ರಾಸ್ತ್ರದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಸಾಗಾಟವು ಪ್ರತಿ ವರ್ಷಕ್ಕೆ 1,00,000,00,00,000 ಅಮೆರಿಕನ್‌ ಡಾಲರುಗಳಿಗೂ ಮೀರಿ ಗಗನಕ್ಕೇರುತ್ತಿರುವಾಗ, ಅದೇ ಸಮಯದಲ್ಲಿ ನೂರಾರು ಲಕ್ಷಾಂತರ ಮಾನವರು ಜೀವಿತದ ಆವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ಇದು ತುಂಬಾ ಕೆಟ್ಟದ್ದು. ಆದರೆ ಯುದ್ಧ ಶಸ್ತ್ರಾಸ್ತ್ರಗಳು ಲೋಕದ ಅರ್ಥವ್ಯವಸ್ಥೆಯ ಮೂಲಭೂತ ಬೆಂಬಲವಾಗಿ ಕಾಣುತ್ತವೆ. ಏಪ್ರಿಲ್‌ 17, 1987 ರಂದು ಲಂಡನಿನ ಸ್ಪೆಕೇಟ್ಟರ್‌ ನಲ್ಲಿ ಒಂದು ಲೇಖನವು ವರದಿ ಮಾಡಿದ್ದು: “ಕೇವಲ ನೇರವಾಗಿ ಸಂಬಂಧಿಸಿದ ಕೈಗಾರಿಕೆಗಳನ್ನು ಎಣಿಸುವಲ್ಲಿ, ಅಮೆರಿಕದಲ್ಲಿ ಸುಮಾರು 4,00,000 ಕೆಲಸಗಳು ಮತ್ತು ಯೂರೋಪಿನಲ್ಲಿ 7,50,000 ಒಳಗೊಂಡಿವೆ. ಆದರೆ ಸಾಕಷ್ಟು ಕುತೂಹಲಕಾರಿಯಾಗಿ, ಆಯುಧಗಳನ್ನು ರಚಿಸುವುದರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಾತ್ರಗಳು ಬೆಳೆದಂತೆಯೇ ಉತ್ಪಾದಕರು ಚೆನ್ನಾಗಿ ರಕ್ಷಿಸಲ್ಪಟ್ಟಿದ್ದಾರೋ ಎಂಬ ನೈಜ ಪ್ರಶ್ನೆಯು ಹಿನ್ನೆಲೆಯೊಳಗೆ ಜಾರಿದೆ.” ಬಾಂಬುಗಳು ಮತ್ತು ಇತರ ಆಯುಧಗಳು ಲೋಕದ ಎಲ್ಲಾ ಕಡೆಗೆ, ಸಂಭಾವ್ಯ ಶತ್ರುಗಳಿಗೆ ಕೂಡ, ಮಾರಲ್ಪಟ್ಟಂತೆ, ಭಾರಿ ಲಾಭಗಳು ಮಾಡಲ್ಪಟ್ಟಿವೆ. ಒಂದು ದಿನ ಆ ಬಾಂಬುಗಳು ಅದನ್ನು ಮಾರುವವರಿಗೆ, ಉರಿಯುತ್ತಿರುವ ಸರ್ವನಾಶದಲ್ಲಿ ಪುನಃ ಹಿಂದಿರುಗಿ ಬರಬಹುದು. ಎಂಥ ಒಂದು ವಿರೋಧಾಭಾಸ! ಶಸ್ತ್ರಾಸ್ತ್ರಗಳ ಕೈಗಾರಿಕೆಯ ಸುತ್ತಲೂ ಇರುವ ಮೇಲುಸಂಪಾದನೆಯನ್ನು ಇದಕ್ಕೆ ಸೇರಿಸಿರಿ. ಅಮೆರಿಕ ಒಂದರಲ್ಲಿಯೇ ಸ್ಪೆಕೇಟ್ಟರ್‌ ಗನುಸಾರ “ಪ್ರತಿ ವರ್ಷ ಪೆಂಟಗಾನ್‌ ವಿವರಿಸಲಾಗದಂತಹ ರೀತಿಯಲ್ಲಿ 90 ಕೋಟಿ ಅಮೆರಿಕನ್‌ ಡಾಲರುಗಳ ಬೆಲೆಯ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಅದು ಕಳೆದುಕೊಳ್ಳುತ್ತದೆ.” ಭೂಲೋಕದ ವರ್ತಕರು ಪ್ರಕಟನೆಯ ಅಶುಭಕರ ಉಲ್ಲೇಖಕ್ಕೆ ಬಂದಿರುತ್ತಾರೆ ಎನ್ನುವದರಲ್ಲಿ ಯಾವುದೇ ಅಚ್ಚರಿಯಿಲ್ಲ!

20. ಭ್ರಷ್ಟ ವ್ಯಾಪಾರ ಆಚಾರಗಳಲ್ಲಿ ಧರ್ಮದ ಒಳಗೂಡುವಿಕೆಯನ್ನು ಯಾವ ಉದಾಹರಣೆಯು ತೋರಿಸುತ್ತದೆ?

20 ಮಹಿಮಾಭರಿತ ದೇವದೂತನಿಂದ ಮುಂತಿಳಿಸಲ್ಪಟ್ಟಂತೆ, ಧರ್ಮವು ಅಂಥ ಭ್ರಷ್ಟ ವ್ಯಾಪಾರ ವ್ಯವಹಾರದ ಚಾಳಿಗಳಲ್ಲಿ ಆಳವಾಗಿ ಒಳಗೂಡಿದೆ. ಉದಾಹರಣೆಗೆ, 1982 ರಲ್ಲಿ ಇಟೆಲಿಯ ಬ್ಯಾಂಕೊ ಆಂಬ್ರೊಸಿಯಾನೊ ಕುಸಿತದಲ್ಲಿ ವ್ಯಾಟಿಕನಿನ ಒಳಗೂಡುವಿಕೆಯು ಇದೆ. ಈ ಮೊಕದ್ದಮೆ 1980 ಗಳಲ್ಲಿ ಮುಂದಕ್ಕೆ ಎಳೆಯಲ್ಪಟ್ಟು, ಉತ್ತರಿಸಲ್ಪಡದ ಪ್ರಶ್ನೆಯು: ಹಣವು ಎಲ್ಲಿ ಹೋಯಿತು? ಎಂದಾಗಿತ್ತು. ಒಬ್ಬ ಅಮೆರಿಕನ್‌ ಆರ್ಚ್‌ ಬಿಷಪ್‌ ಸಹಿತ, ಮೂವರು ವ್ಯಾಟಿಕನ್‌ ಪುರೋಹಿತರಿಗೆ, ವಂಚನೆಯ ದಿವಾಳಿತನಕ್ಕೆ ಇವರು ಸಹಾಯಕರಾಗಿದ್ದರೆನ್ನುವ ದೋಷ ಆರೋಪಣೆಯ ಮೇಲೆ ಕೈದು ಮಾಡಲು ಫೆಬ್ರವರಿ 1987 ರಲ್ಲಿ ಮಿಲನ್‌ ನ್ಯಾಯಾಧೀಶರು ವಾರಂಟುಗಳನ್ನು ಹೊರಡಿಸಿದರು, ಆದರೆ ವ್ಯಾಟಿಕನ್‌ ಕೈವಶಮಾಡುವ ಬಿನ್ನಹವನ್ನು ನಿರಾಕರಿಸಿತು. ಜುಲೈ 1987 ರಲ್ಲಿ ಗಲಭೆಯ ವಿರೋಧದ ಮಧ್ಯೆಯೂ, ವ್ಯಾಟಿಕನ್‌ ಮತ್ತು ಇಟೆಲಿಯ ಸರಕಾರದ ಮಧ್ಯೆ ಹಿಂದೆ ಆದ ಒಂದು ಹಳೆಯ ಮೈತ್ರಿ ಸಂಧಾನದ ಆಧಾರದ ಮೇಲೆ, ವಾರಂಟುಗಳು ಇಟೆಲಿಯ ಅತಿ ದೊಡ್ಡ ಅಪ್ಪೀಲು ಕೋರ್ಟಿನಿಂದ ರದ್ದು ಮಾಡಲ್ಪಟ್ಟವು.

21. ಯೇಸುವಿಗೆ ತನ್ನ ದಿನದ ಸಂಶಯಾಸ್ಪದ ವ್ಯಾಪಾರ ವ್ಯವಹಾರಗಳೊಂದಿಗೆ ಸಂಬಂಧವಿರಲಿಲ್ಲವೆಂದು ನಮಗೆ ಹೇಗೆ ತಿಳಿದಿದೆ, ಆದರೆ ಇಂದು ಬಾಬೆಲಿನ ಧರ್ಮದೊಂದಿಗೆ ನಾವು ಏನನ್ನು ನೋಡುತ್ತಿದ್ದೇವೆ?

21 ಯೇಸುವಿಗೆ ತನ್ನ ದಿನದ ಸಂಶಯಾಸ್ಪದ ವ್ಯಾಪಾರ ವ್ಯವಹಾರಗಳೊಂದಿಗೆ ಯಾವುದಾದರೂ ಸಂಬಂಧವಿತ್ತೋ? ಇಲ್ಲ. ಆತನು ಒಂದು ಆಸ್ತಿಯ ಮಾಲಿಕನೂ ಆಗಿರಲಿಲ್ಲ, ಕಾರಣ ಆತನಿಗೆ “ತಲೆಯಿಡುವಷ್ಟು ಸ್ಥಳವೂ ಇರಲಿಲ್ಲ.” ಒಬ್ಬ ಐಶ್ವರ್ಯವಂತನಾದ ಯುವ ಅಧಿಕಾರಿಗೆ ಯೇಸುವಿನಿಂದ ಹೀಗೆ ಸಲಹೆ ನೀಡಲ್ಪಟ್ಟಿತು: “ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.” ಅದು ಅತ್ಯುತ್ತಮ ಬುದ್ಧಿವಾದವಾಗಿತ್ತು ಏಕೆಂದರೆ ಅದು ವ್ಯಾಪಾರ ವಿಷಯಗಳ ಮೇಲಿರುವ ಆತನ ಎಲ್ಲಾ ಚಿಂತೆಗಳಿಂದ ಆತನನ್ನು ಮುಕ್ತಗೊಳಿಸುವುದರಲ್ಲಿ ಫಲಿಸಬಹುದಿತ್ತು. (ಲೂಕ 9:58; 18:22) ವ್ಯತಿರಿಕ್ತವಾಗಿ ಬಾಬೆಲಿನ ಧರ್ಮವು ಆಗಾಗ್ಗೆ ದೊಡ್ಡ ವ್ಯಾಪಾರದೊಂದಿಗೆ ಅಸಹ್ಯವಾದ ಸಂಬಂಧವನ್ನು ಇಟ್ಟಿದೆ. ಉದಾಹರಣೆಗೆ, 1987 ರಲ್ಲಿ ಆಲ್ಬೆನಿ ಟೈಮ್ಸ್‌ ಯೂನಿಯನ್‌, ಅಮೆರಿಕದ ಫ್ಲೊರಿಡ, ಮಾಯಮಿಯ ಕ್ಯಾತೊಲಿಕ್‌ ಆರ್ಚ್‌ಡೈಒಸಿಸ್‌ನ ಹಣಕಾಸಿನ ನಿರ್ವಹಣಕಾರನು, ನ್ಯೂಕ್ಲಿಯರ್‌ ಆಯುಧಗಳನ್ನು, ನಿರ್ಬಂಧಿತ ಪ್ರವೇಶವಿರುವ [R-rated] ಚಲನಚಿತ್ರಗಳನ್ನು, ಮತ್ತು ಸಿಗರೇಟುಗಳನ್ನು ಉತ್ಪಾದಿಸುವ ಕಂಪನಿಗಳ ಶೇರುಭಂಡವಾಳಗಳನ್ನು ಚರ್ಚು ಪಡೆದಿದೆಯೆಂಬುದನ್ನು ಒಪ್ಪಿದನೆಂದು ವರದಿಸಿತು.

“ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ”

22. (ಎ) ಪರಲೋಕದೊಳಗಿಂದ ಬಂದ ಶಬ್ದವು ಏನನ್ನು ಹೇಳುತ್ತದೆ? (ಬಿ) ಸಾ. ಶ. ಪೂ. 537 ರಲ್ಲಿ ಮತ್ತು ಸಾ. ಶ. 1919 ರಲ್ಲಿ ದೇವ ಜನರ ಮಟ್ಟಿಗೆ ಯಾವುದು ಹರ್ಷಕ್ಕೆ ನಡಿಸಿತು?

22 ಯೋಹಾನನ ಮುಂದಿನ ಮಾತುಗಳು ಪ್ರವಾದನಾ ನಮೂನೆಯ ಹೆಚ್ಚಿನ ನೆರವೇರಿಕೆಗೆ ಬೆರಳು ತೋರಿಸುತ್ತವೆ: “ಪರಲೋಕದಿಂದ ಬಂದ ಮತ್ತೊಂದು ಶಬ್ದವು ಹೇಳುವುದನ್ನು ನಾನು ಕೇಳಿದೆನು: ‘ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ಪಡೆಯಲು ನೀವು ಬಯಸದಿದ್ದರೆ, ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ.’” (ಪ್ರಕಟನೆ 18:4, NW) ಹೀಬ್ರು ಶಾಸ್ತ್ರವಚನಗಳಲ್ಲಿ ಪ್ರಾಚೀನ ಬಾಬೆಲಿನ ಪತನದ ಪ್ರವಾದನೆಗಳು, ತನ್ನ ಜನರಿಗೆ ಯೆಹೋವನ ಆಜ್ಞೆಯನ್ನು ಕೂಡ ಒಳಗೊಂಡಿವೆ: “ಬಾಬೆಲ್‌ ದೇಶದೊಳಗಿಂದ ಓಡಿಹೋಗಿರಿ.” (ಯೆರೆಮೀಯ 50:8, 13) ತದ್ರೀತಿಯಲ್ಲಿ, ಮಹಾ ಬಾಬೆಲಿನ ಬರಲಿರುವ ಹಾಳುಬೀಳುವಿಕೆಯ ನೋಟದಲ್ಲಿ, ದೇವರ ಜನರು ಈಗ ತಪ್ಪಿಸಿಕೊಳ್ಳುವಂತೆ ಹುರಿದುಂಬಿಸಲ್ಪಡುತ್ತಾರೆ. ಸಾ. ಶ. ಪೂ. 537 ರಲ್ಲಿ ಬಾಬೆಲಿನಿಂದ ತಪ್ಪಿಸುವ ಸಂದರ್ಭವು ನಂಬಿಗಸ್ತ ಇಸ್ರಾಯೇಲ್ಯರ ಮಟ್ಟಿಗೆ ಹೆಚ್ಚಿನ ಹರ್ಷವನ್ನು ಉಂಟುಮಾಡಿತು. ಅದೇ ರೀತಿಯಲ್ಲಿ 1919 ರಲ್ಲಿ ಬಾಬೆಲಿನ ದಾಸತ್ವದಿಂದ, ದೇವ ಜನರ ಬಿಡುಗಡೆಯು ಅವರನ್ನು ಹರ್ಷಕ್ಕೆ ನಡಿಸಿತು. (ಪ್ರಕಟನೆ 11:11, 12) ಮತ್ತು ಆ ಸಮಯದಿಂದ ಹಿಡಿದು ಇತರ ಲಕ್ಷಾಂತರ ಮಂದಿ ಪಲಾಯನ ಮಾಡುವ ಅಪ್ಪಣೆಗೆ ವಿಧೇಯರಾಗಿದ್ದಾರೆ.—ಹೋಲಿಸಿರಿ ಮತ್ತಾಯ 24:15, 16.

23. ಮಹಾ ಬಾಬೆಲಿನಿಂದ ಓಡಿಬರುವುದರ ತತ್ಪರತೆಯನ್ನು ಪರಲೋಕದಿಂದ ಬಂದ ಶಬ್ದವು ಹೇಗೆ ಒತ್ತಿಹೇಳುತ್ತದೆ?

23 ಮಹಾ ಬಾಬೆಲಿನಿಂದ ಪಲಾಯನಗೈಯುವುದು, ಲೋಕ ಧರ್ಮಗಳ ಸದಸ್ಯತನವನ್ನು ತ್ಯಜಿಸುವುದು ಮತ್ತು ಪೂರ್ಣ ಪ್ರತ್ಯೇಕವಾಗಿರುವುದು, ನಿಜವಾಗಿಯೂ ಅಷ್ಟು ಜರೂರಿಯದ್ದೋ? ಹೌದು, ಯಾಕಂದರೆ ಪ್ರಾಚೀನ ಕಾಲದಿಂದ ಬಂದ ಈ ಧಾರ್ಮಿಕ ಅತಿ ಘೋರ ವಸ್ತುವಾದ ಮಹಾ ಬಾಬೆಲಿನ ಕುರಿತು ದೇವರ ದೃಷ್ಟಿಕೋನವನ್ನು ನಾವು ತೆಗೆದುಕೊಳ್ಳುವ ಆವಶ್ಯಕತೆಯಿದೆ. ಅವಳನ್ನು ಮಹಾ ಜಾರಸ್ತ್ರೀಯಾಗಿ ಕರೆಯುವುದರಲ್ಲಿ ಆತನು ಶಬ್ದಗಳನ್ನು ನಯಗೊಳಿಸಲಿಲ್ಲ. ಆದುದರಿಂದ ಈಗ ಈ ಹಾದರಗಿತ್ತಿಯ ಕುರಿತು ಪರಲೋಕದಿಂದ ಬಂದ ಶಬ್ದವು ಯೋಹಾನನಿಗೆ ಹೆಚ್ಚನ್ನು ತಿಳಿಯಪಡಿಸುತ್ತದೆ: “ಏಕೆಂದರೆ ಅವಳ ಪಾಪಗಳು ರಾಶಿಯಾಗಿ ಒಟ್ಟು ಸೇರಿ ಆಕಾಶದ ತನಕವೂ ಬೆಳೆದಿವೆ, ಮತ್ತು ದೇವರು ಅವಳ ಅನ್ಯಾಯ ಕೃತ್ಯಗಳನ್ನು ಮನಸ್ಸಿಗೆ ತಂದುಕೊಂಡಿದ್ದಾನೆ. ಆಕೆ ತಾನು ಸಲ್ಲಿಸಿದಂತೆ ಆಕೆಗೂ ಸಲ್ಲಿಸಿರಿ, ಮತ್ತು ಆಕೆ ಮಾಡಿದ್ದಕ್ಕೆ ಪ್ರತಿಯಾಗಿ ಇಮ್ಮಡಿಯಾಗಿ ಮಾಡಿರಿ, ಹೌದು, ಆಕೆ ಮಾಡಿದ ಸಂಖ್ಯೆಯ ಎರಡರಷ್ಟು ಮಾಡಿರಿ; ಆಕೆ ಯಾವುದರಲ್ಲಿ ಮಿಶ್ರಣವನ್ನು ಹಾಕಿದಳೋ ಆದರಲ್ಲಿ ಅವಳಿಗಾಗಿ ಎರಡರಷ್ಟು ಮಿಶ್ರಣವನ್ನು ಹಾಕಿರಿ. ಅವಳು ಎಷ್ಟರ ಮಟ್ಟಿಗೆ ತನ್ನನ್ನು ಮಹಿಮೆಪಡಿಸಿಕೊಂಡು ಲಜ್ಜಾಹೀನ ಸುಖಭೋಗದಲ್ಲಿ ವಾಸಿಸಿದಳೋ, ಅಷ್ಟರ ಮಟ್ಟಿಗೆ ಅವಳಿಗೆ ಯಾತನೆಯನ್ನೂ ಶೋಕವನ್ನೂ ಕೊಡಿರಿ. ಏಕೆಂದರೆ ಅವಳು ತನ್ನ ಹೃದಯದಲ್ಲಿ ಹೇಳುತ್ತಿರುವುದು, ‘ನಾನು ರಾಣಿಯಾಗಿ ಕುಳಿತುಕೊಳ್ಳುತ್ತೇನೆ, ಮತ್ತು ನಾನು ವಿಧವೆಯಲ್ಲ, ಮತ್ತು ನಾನು ಶೋಕವನ್ನು ಎಂದಿಗೂ ಕಾಣೆನು.’ ಆ ಕಾರಣದಿಂದಲೇ ಅವಳ ವ್ಯಾಧಿಗಳು—ಮರಣ, ಶೋಕ ಮತ್ತು ಕ್ಷಾಮ—ಒಂದೇ ದಿನದಲ್ಲಿ ಬರುವುವು, ಮತ್ತು ಆಕೆ ಬೆಂಕಿಯಿಂದ ಸಂಪೂರ್ತಿಯಾಗಿ ಸುಡಲ್ಪಡುವಳು, ಏಕೆಂದರೆ ಆಕೆಗೆ ನ್ಯಾಯತೀರಿಸಿದ ಯೆಹೋವ ದೇವರು ಬಲಿಷ್ಠನಾಗಿದ್ದಾನೆ.”ಪ್ರಕಟನೆ 18:5-8, NW.

24. (ಎ) ದೇವರ ಜನರು ಯಾವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಮಹಾ ಬಾಬೆಲಿನೊಳಗಿಂದ ಓಡಿಬರಬೇಕು? (ಬಿ) ಮಹಾ ಬಾಬೆಲಿನಿಂದ ಓಡಿಬರಲು ವಿಫಲರಾಗುವವರೆಲ್ಲರೂ ಅವಳೊಂದಿಗೆ ಯಾವ ಪಾಪಗಳಲ್ಲಿ ಭಾಗಿಗಳಾಗುತ್ತಾರೆ?

24 ಶಕ್ತಿಯುತ ಮಾತುಗಳು ಅವು! ಆದುದರಿಂದ ಕ್ರಿಯೆಯ ಆವಶ್ಯಕತೆಯಿದೆ. ಯೆರೆಮೀಯನು ತನ್ನ ದಿನದಲ್ಲಿನ ಇಸ್ರಾಯೇಲ್ಯರಿಗೆ ಹೀಗನ್ನುತ್ತಾ ಕ್ರಿಯೆಗೈಯಲು ಹುರಿದುಂಬಿಸಿದನು: “ನೀವು ಬಾಬೆಲಿನೊಳಗಿಂದ ಓಡಿಹೋಗಿ . . . ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬೆಲಿಗೆ ಪ್ರತೀಕಾರಮಾಡುವನು. ನನ್ನ ಜನರೇ, ನೀವೆಲ್ಲರೂ ಬಾಬೆಲಿನೊಳಗಿಂದ ಹೊರಟು ಯೆಹೋವನ ರೋಷಾಗ್ನಿಯಿಂದ ತಪ್ಪಿಸಿಕೊಳ್ಳಿರಿ.” (ಯೆರೆಮೀಯ 51:6, 45) ತದ್ರೀತಿಯಲ್ಲಿ, ಪರಲೋಕದಿಂದ ಬಂದ ಶಬ್ದವು ದೇವ ಜನರು ಇಂದು ಅವಳಿಗಾಗುವ ಉಪದ್ರವಗಳಲ್ಲಿ ಒಂದಿಷ್ಟೂ ಭಾಗವನ್ನು ಪಡೆಯದೆ ಇರಲಿಕ್ಕೋಸ್ಕರ ಮಹಾ ಬಾಬೆಲಿನಿಂದ ಪಲಾಯನ ಮಾಡಬೇಕೆಂದು ಎಚ್ಚರಿಕೆ ನೀಡುತ್ತದೆ. ಮಹಾ ಬಾಬೆಲನ್ನು ಒಳಗೊಂಡು ಈ ಲೋಕದ ಮೇಲೆ, ಯೆಹೋವನ ಬಾಧೆಯಂತಿರುವ ನ್ಯಾಯತೀರ್ಪುಗಳು ಈಗ ಪ್ರಚುರಪಡಿಸಲ್ಪಡುತ್ತಿವೆ. (ಪ್ರಕಟನೆ 8:1–9:21; 16:1-21) ದೇವಜನರು ಈ ಉಪದ್ರವಗಳನ್ನು ಅನುಭವಿಸಲು ಮತ್ತು ಕೊನೆಗೆ ಅವಳೊಂದಿಗೆ ಸಾಯಲು ಬಯಸದಿದ್ದರೆ, ಅವರು ಸುಳ್ಳು ಧರ್ಮದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವ ಆವಶ್ಯಕತೆಯಿದೆ. ಇದಲ್ಲದೆ, ಆ ಸಂಸ್ಥೆಯೊಳಗೆ ಉಳಿಯುವುದು ಅವರನ್ನು ಅವಳ ಪಾಪಗಳಲ್ಲಿ ಪಾಲು ತೆಗೆದುಕೊಳ್ಳುವಂತೆ ಮಾಡುವುದು. ಅವಳು ಆತ್ಮಿಕ ವ್ಯಭಿಚಾರದ ಮತ್ತು “ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ” ರಕ್ತವನ್ನು ಸುರಿಸುವ ವಿಷಯದಲ್ಲಿ ಎಷ್ಟು ದೋಷಿಯಾಗಿದ್ದಾಳೋ, ಅಷ್ಟೇ ದೋಷಿಯಾಗಿ ಅವರು ಇರುವರು.—ಪ್ರಕಟನೆ 18:24; ಹೋಲಿಸಿರಿ ಎಫೆಸ 5:11; 1 ತಿಮೊಥೆಯ 5:22.

25. ಪ್ರಾಚೀನ ಬಾಬೆಲಿನಿಂದ ದೇವರ ಜನರು ಯಾವ ರೀತಿಗಳಲ್ಲಿ ಹೊರಬಂದರು?

25 ಹಾಗಾದರೆ, ದೇವಜನರು ಮಹಾ ಬಾಬೆಲಿನಿಂದ ಹೊರಬರುವುದಾದರೂ ಹೇಗೆ? ಪ್ರಾಚೀನ ಬಾಬೆಲಿನ ವಿಷಯದಲ್ಲಿಯಾದರೋ, ಯೆಹೂದ್ಯರು ಬಾಬೆಲ್‌ ನಗರದಿಂದ ಹಿಂದೆ ವಾಗ್ದತ್ತ ದೇಶಕ್ಕೆ ಒಂದು ಭೌತಿಕ ಪ್ರಯಾಣವನ್ನು ಮಾಡಬೇಕಿತ್ತು. ಆದರೆ ಇದಕ್ಕಿಂತ ಹೆಚ್ಚಿನದ್ದು ಒಳಗೊಂಡಿತ್ತು. ಯೆಶಾಯನು ಪ್ರವಾದನಾತ್ಮಕವಾಗಿ ಇಸ್ರಾಯೇಲ್ಯರಿಗೆ ಹೇಳಿದ್ದು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ.” (ಯೆಶಾಯ 52:11) ಹೌದು, ಯೆಹೋವನ ಕುರಿತ ತಮ್ಮ ಆರಾಧನೆಗೆ ಕಳಂಕ ಹಚ್ಚಬಹುದಾದ ಬಾಬೆಲಿನ ಧರ್ಮದ ಎಲ್ಲಾ ಅಶುದ್ಧ ಆಚಾರಗಳನ್ನು ಅವರು ತೊರೆಯಬೇಕಿತ್ತು.

26. “ಅವರ ಮಧ್ಯದಿಂದ ಹೊರಟು ಬಂದು ಪ್ರತ್ಯೇಕವಾಗಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ” ಎನ್ನುವ ಮಾತುಗಳಿಗೆ ಕೊರಿಂಥದ ಕ್ರೈಸ್ತರು ಹೇಗೆ ವಿಧೇಯರಾದರು?

26 ಕೊರಿಂಥದವರಿಗೆ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಯೆಶಾಯನ ಮಾತುಗಳನ್ನು ಉಲ್ಲೇಖಿಸುತ್ತಾ ಅಂದದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? . . . ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.” ಆ ಆಜ್ಞೆಗೆ ವಿಧೇಯರಾಗಲು ಕೊರಿಂಥದ ಕ್ರೈಸ್ತರು ಕೊರಿಂಥವನ್ನೇ ಬಿಟ್ಟು ಹೋಗಬೇಕಾಗಿರಲಿಲ್ಲ. ಹೇಗಿದ್ದರೂ, ಅವರು ಭೌತಿಕವಾಗಿ ಸುಳ್ಳುಧರ್ಮದ ಅಶುದ್ಧ ದೇವಾಲಯಗಳನ್ನು ತೊರೆಯಬೇಕಿತ್ತು ಹಾಗೂ ತಮ್ಮನ್ನು ತಾವೇ ಆ ವಿಗ್ರಹಾರಾಧಕರ ಅಶುದ್ಧ ಕೃತ್ಯಗಳಿಂದ ಆತ್ಮಿಕವಾಗಿ ಪ್ರತ್ಯೇಕಿಸಿಕೊಳ್ಳಬೇಕಿತ್ತು. ದೇವ ಜನರು ಈ ರೀತಿಯಲ್ಲಿ 1919 ರಲ್ಲಿ ಮಹಾ ಬಾಬೆಲಿನಿಂದ ಪಲಾಯನ ಮಾಡಲು ಆರಂಭಿಸಿದರು, ಯಾವುದೇ ಮಿಕ್ಕಿರುವ ಅಶುದ್ಧ ಬೋಧನೆ ಮತ್ತು ಆಚಾರಗಳಿಂದ ತಮ್ಮನ್ನು ಶುದ್ಧಗೊಳಿಸಿಕೊಂಡರು. ಹೀಗೆ, ಆತನ ಪರಿಶುದ್ಧಗೊಳಿಸಲ್ಪಟ್ಟ ಜನರಾಗಿ ಆತನನ್ನು ಸೇವಿಸಲು ಅವರು ಶಕ್ತರಾದರು.—2 ಕೊರಿಂಥ 6:14-17; 1 ಯೋಹಾನ 3:3.

27. ಪ್ರಾಚೀನ ಬಾಬೆಲಿನ ತೀರ್ಪುಗಳ ಮತ್ತು ಮಹಾ ಬಾಬೆಲಿನ ಮೇಲೆ ಬರಲಿರುವ ತೀರ್ಪುಗಳ ನಡುವೆ ಯಾವೆಲ್ಲಾ ಸಮಾನತೆಗಳು ಇವೆ?

27 ಪ್ರಾಚೀನ ಬಾಬೆಲಿನ ಪತನ ಮತ್ತು ಪ್ರಾಪ್ತವಾಗುವ ಕೊನೆಯ ಧ್ವಂಸವು ಅವಳ ಪಾಪಗಳಿಗಾಗಿ ಒಂದು ಶಿಕ್ಷೆಯಾಗಿತ್ತು. “ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ.” (ಯೆರೆಮೀಯ 51:9) ತದ್ರೀತಿಯಲ್ಲಿ, ಯೆಹೋವನ ಗಮನಕ್ಕೆ ಸ್ವತಃ ತರಲ್ಪಡುವಂತಹ ರೀತಿಯಲ್ಲಿ ಮಹಾ ಬಾಬೆಲಿನ ಪಾಪಗಳು “ರಾಶಿಯಾಗಿ ಒಟ್ಟುಸೇರಿ ಆಕಾಶದ ತನಕವೂ ಬೆಳೆದಿವೆ.” ಅವಳು ಅನ್ಯಾಯ, ವಿಗ್ರಹಾರಾಧನೆ, ಅನೈತಿಕತೆ, ದಬ್ಬಾಳಿಕೆ, ಕಳ್ಳತನ ಮತ್ತು ಕೊಲೆಗಳ ದೋಷಿಯಾಗಿದ್ದಾಳೆ. ಪ್ರಾಚೀನ ಬಾಬೆಲಿನ ಪತನವು, ಯೆಹೋವನ ಆಲಯಕ್ಕೆ ಮತ್ತು ಆತನ ಸತ್ಯಾರಾಧಕರಿಗೆ ಅವಳೇನನ್ನು ಮಾಡಿದ್ದಳೋ ಅದಕ್ಕಾಗಿ ಭಾಗಶಃ ಮುಯ್ಯಿತೀರಿಸುವಿಕೆಯಾಗಿತ್ತು. (ಯೆರೆಮೀಯ 50:8, 14; 51:11, 35, 36) ಅಂತೆಯೇ ಮಹಾ ಬಾಬೆಲಿನ ಪತನವು ಮತ್ತು ಅವಳ ಕಟ್ಟಕಡೆಯ ನಾಶನವು ಶತಮಾನಗಳಿಂದಲೂ ಸತ್ಯಾರಾಧಕರಿಗೆಲ್ಲ ಅವಳೇನನ್ನು ಮಾಡಿದ್ದಾಳೋ ಅದಕ್ಕೆ ಮುಯ್ಯಿತೀರಿಸುವಿಕೆಯ ಅಭಿವ್ಯಕ್ತಿಗಳಾಗಿವೆ. ನಿಜವಾಗಿಯೂ, ಅವಳ ಕೊನೆಯ ನಾಶನವು “ನಮ್ಮ ದೇವರು ಮುಯ್ಯಿತೀರಿಸುವ ದಿನದ” ಪ್ರಾರಂಭವಾಗಿದೆ.—ಯೆಶಾಯ 34:8-10; 61:2; ಯೆರೆಮೀಯ 50:28.

28. ಮಹಾ ಬಾಬೆಲಿಗೆ ಯೆಹೋವನು ಯಾವ ನ್ಯಾಯದ ಮಟ್ಟವನ್ನು ಅನ್ವಯಿಸುತ್ತಾನೆ, ಮತ್ತು ಯಾಕೆ?

28 ಮೋಶೆಯ ನಿಯಮಶಾಸ್ತ್ರದ ಕೆಳಗೆ ಒಬ್ಬ ಇಸ್ರಾಯೇಲ್ಯನು ತನ್ನ ಸ್ವದೇಶಸ್ಥನಿಂದ ಕಳವು ಮಾಡಿದರೆ ಅವನು ಕನಿಷ್ಠ ಪಕ್ಷದಲ್ಲಿ ಎರಡರಷ್ಟು ಪರಿಹಾರವನ್ನು ಹಿಂದೆ ಕೊಡಬೇಕಿತ್ತು. (ವಿಮೋಚನಕಾಂಡ 22:1, 4, 7, 9) ಮಹಾ ಬಾಬೆಲಿನ ಬರಲಿರುವ ನಾಶನದಲ್ಲಿ, ಯೆಹೋವನು ಒಂದು ಸದೃಶ್ಯ ನ್ಯಾಯದ ಮಟ್ಟವನ್ನು ಅನ್ವಯಿಸಲಿರುವನು. ಅವಳು ಕೊಟ್ಟದ್ದಕ್ಕಿಂತಲೂ ಜಾಸ್ತಿಯಾಗಿ ಅವಳಿಗೆ ಎರಡು ಪಟ್ಟು ಪಡೆಯಲಿಕ್ಕಿದೆ. ಈ ನ್ಯಾಯದ ತೀಕ್ಷೈತೆಯನ್ನು ಕಡಮೆಮಾಡಲು ಯಾವುದೇ ಕರುಣೆಯಿರಲಾರದು ಯಾಕಂದರೆ ಮಹಾ ಬಾಬೆಲ್‌ ಅವಳ ಬಲಿಗಳಿಗೆ ಯಾವುದೇ ಕರುಣೆಯನ್ನು ತೋರಿಸಿಲ್ಲ. ಅವಳು ಭೂಜನರ ಮೇಲೆ ತನ್ನನ್ನು “ಲಜ್ಜಾಹೀನ ಸುಖ ಭೋಗದಲ್ಲಿ” ಇಟ್ಟುಕೊಳ್ಳಲು, ಪರಾವಲಂಬಿಯಾಗಿ ತಿಂದಿದ್ದಾಳೆ. ಈಗ ಅವಳು ಯಾತನೆಯನ್ನೂ, ಶೋಕವನ್ನೂ ಅನುಭವಿಸುವಳು. ಪ್ರಾಚೀನ ಬಾಬೆಲ್‌ ತಾನು ಒಂದು ಪೂರ್ಣ ಭದ್ರಸ್ಥಾನದಲ್ಲಿ ಇದ್ದೇನೆಂದು ಭಾವಿಸುತ್ತಾ, ಹೀಗೆ ಜಂಭಕೊಚ್ಚಿಕೊಂಡಿದ್ದಳು: “ನಾನು ವಿಧವೆಯಾಗಿ ಕೂತುಕೊಳ್ಳುವದಿಲ್ಲ. ಪುತ್ರಶೋಕವನ್ನು ಅನುಭವಿಸುವದಿಲ್ಲ.” (ಯೆಶಾಯ 47:8, 9, 11) ಮಹಾ ಬಾಬೆಲ್‌ ಕೂಡ ಭದ್ರವಾಗಿದ್ದಾಳೆಂದು ಭಾವಿಸುತ್ತಾಳೆ. ಆದರೆ ಅವಳ ನಾಶನವು ಫಕ್ಕನೇ, ಯಾರು “ಬಲಿಷ್ಠನಾಗಿ” ದ್ದಾನೋ ಆ ಯೆಹೋವನ ತೀರ್ಪಿಗನುಸಾರ “ಒಂದೇ ದಿನದಲ್ಲೋ” ಎಂಬಂತೆ ಸಂಭವಿಸಲಿರುವುದು!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 13 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

[ಅಧ್ಯಯನ ಪ್ರಶ್ನೆಗಳು]

[ಪುಟ 374 ರಲ್ಲಿರುವ ಚೌಕ]

“ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು”

ಸಾವಿರದ ಎಂಟುನೂರರ ಆರಂಭದಲ್ಲಿ ಯೂರೋಪಿನ ವರ್ತಕರು ಚೀನಾದಲ್ಲಿ ಬಹುದೊಡ್ಡ ಪ್ರಮಾಣಗಳಲ್ಲಿ ಆಫೀಮನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಮಾರ್ಚ್‌ 1839 ರಲ್ಲಿ ಚೀನಾದ ಅಧಿಕಾರಿಗಳು ಬ್ರಿಟನಿನ ವರ್ತಕರಿಂದ ಅಮಲೌಷಧದ 20,000 ಪೆಟ್ಟಿಗೆಗಳನ್ನು ಜಫ್ತಿಮಾಡುವುದರ ಮೂಲಕ ಕಾನೂನುಬಾಹಿರ ವ್ಯಾಪಾರವನ್ನು ನಿಲ್ಲಿಸಲು ಪ್ರಯತ್ನಿಸಿದರು. ಇದು ಬ್ರಿಟನಿನ ಮತ್ತು ಚೀನಾದ ನಡುವೆ ಬಿಕ್ಕಟ್ಟಿಗೆ ನಡಿಸಿತು. ಎರಡು ದೇಶಗಳ ನಡುವಿನ ಸಂಬಂಧಗಳು ಕೆಟ್ಟಾಗ, ಕೆಲವು ಪ್ರಾಟೆಸ್ಟಂಟ್‌ ಮಿಷನೆರಿಗಳು ಈ ಕೆಳಗಿನಂತಹ ಹೇಳಿಕೆಗಳೊಂದಿಗೆ ಬ್ರಿಟನನ್ನು ಯುದ್ಧಕ್ಕೆ ಹೋಗಲು ಹುರಿದುಂಬಿಸಿದರು:

“ಈ ಕಷ್ಟಗಳು ನನ್ನ ಹೃದಯವನ್ನು ಎಷ್ಟು ಹರ್ಷಗೊಳಿಸುತ್ತಿವೆ. ಯಾಕಂದರೆ ಇಂಗ್ಲೆಂಡ್‌ ಸರಕಾರವು ಕೆರಳಿಸಲ್ಪಡಬಹುದೆಂದು ನಾನು ಯೋಚಿಸುತ್ತೇನೆ ಮತ್ತು ದೇವರು ಆತನ ಶಕ್ತಿಯಲ್ಲಿ, ಕ್ರಿಸ್ತನ ಸುವಾರ್ತೆಯು ಚೀನಾವನ್ನು ಪ್ರವೇಶಿಸುವುದರಿಂದ ತಡೆಯುವ ಅಡಿತ್ಡಡೆಗಳನ್ನು ಮುರಿದು ಹಾಕಬಹುದು.”—ಹೆನ್ರಿಯೆಟಾ ಶಕ್‌, ಸದರ್ನ್‌ ಬ್ಯಾಪ್ಟಿಸ್ಟ್‌ ಮಿಷನೆರಿ.

ಕೊನೆಗೂ, ಯುದ್ಧವು ಆರಂಭಗೊಂಡಿತು—ಇಂದು ಆಫೀಮು ಯುದ್ಧವಾಗಿ ಕರೆಯಲ್ಪಡುವ ಯುದ್ಧವು. ಮಿಷನೆರಿಗಳು ಪೂರ್ಣ ಹೃದಯದಿಂದ ಈ ಮುಂತಾದ ವ್ಯಾಖ್ಯಾನಗಳೊಂದಿಗೆ ಬ್ರಿಟನನ್ನು ಹುರಿದುಂಬಿಸಿದರು:

“ಸದ್ಯದ ವಿಷಯ ಸ್ಥಿತಿಯನ್ನು ಕೇವಲ ಆಫೀಮಿನಂತೆ ಅಥವಾ ಇಂಗ್ಲೆಂಡಿನ ಕಾರ್ಯಾದಿಯಂತೆ ಅಲ್ಲ, ಆದರೆ ಮನುಷ್ಯನ ದುಷ್ಟತ್ವವು ಚೀನಾದ ಕಡೆಗೆ ಅವನ ಕರುಣೆಯ ಉದ್ದೇಶಗಳನ್ನು ಉಪಯುಕ್ತವಾಗಿ ಮಾಡಲು, ಅವಳ ಗೋಡೆಗಳನ್ನು ಮುರಿಯುವುದರಿಂದ, ದೇವರ ಅನುಗ್ರಹದ ಮಹಾ ಚಿತ್ರಣದ ಸಂಕಲ್ಪವಾಗಿ ಪುನಃ ನೋಡಲು ನಾನು ಒತ್ತಾಯಿಸಲ್ಪಡುತ್ತೇನೆ.”—ಪೀಟರ್‌ ಪಾರ್ಕರ್‌, ಕಾಂಗ್ರಿಗೇಶನಲಿಸ್ಟ್‌ ಮಿಷನೆರಿ.

ಇನ್ನೊಬ್ಬ ಕಾಂಗ್ರಿಗೇಶನಲಿಸ್ಟ್‌ ಮಿಷನೆರಿ, ಸಾಮ್ಯುವೆಲ್‌ ಡಬ್ಲ್ಯೂ. ವಿಲಿಯಮ್ಸ್‌, ಕೂಡಿಸಿದ್ದು: “ದೇವರ ಹಸ್ತವು ಗಮನಾರ್ಹ ವಿಧಾನದಲ್ಲಿ ಇಷ್ಟರವರೆಗೆ ಪ್ರಕಟವಾದ ಎಲ್ಲದರಲ್ಲಿ ಸುವ್ಯಕ್ತವಾಗಿದೆ. ಮತ್ತು ತಾನು ಭೂಮಿಯ ಮೇಲೆ ಖಡ್ಗವನ್ನು ಹಾಕುವುದಕ್ಕೆ ಬಂದಿದ್ದೇನೆ ಎಂದು ಹೇಳಿದವನು, ಆತನ ವೈರಿಗಳ ತ್ವರಿತವಾದ ನಾಶನ ಹಾಗೂ ಅವನ ಸ್ವಂತ ರಾಜ್ಯದ ಸ್ಥಾಪನೆಗೋಸ್ಕರ ಬಂದಿದ್ದಾನೆ ಎಂಬುದರಲ್ಲಿ ನಾವು ಸಂಶಯಿಸುವುದಿಲ್ಲ. ಆತನು ಉರುಳಿಸುವನು ಮತ್ತು ಶಾಂತಿಯ ಪ್ರಭುವನ್ನು ಸ್ಥಾಪಿಸುವ ವರೆಗೆ ಆತನು ಉರುಳಿಸುವನು.”

ಚೀನಾದ ರಾಷ್ಟ್ರೀಯರ ಭೀಕರ ಹತ್ಯೆಯ ಸಂಬಂಧದಲ್ಲಿ ಮಿಷನೆರಿ ಜೆ. ಲುವಿಸ್‌ ಶಕ್‌ ಬರೆದದ್ದು: “ನಾನು ಇಂತಹ ದೃಶ್ಯಗಳನ್ನು . . . ದೈವಿಕ ಸತ್ಯದ ಅಭಿವೃದ್ಧಿಯನ್ನು ತಡೆಯುವ ಎಲ್ಲಾ ಕೊಳಕನ್ನು ಶುದ್ಧಮಾಡುವ ಕರ್ತನ ನೇರ ಉಪಕರಣಗಳಾಗಿ ಪರಿಗಣಿಸುತ್ತೇನೆ.”

ಕಾಂಗ್ರಿಗೇಶನಲಿಸ್ಟ್‌ ಮಿಷನೆರಿ ಎಲೈಜ ಸಿ. ಬ್ರಿಡ್ಜ್‌ಮನ್‌ ಕೂಡಿಸಿದ್ದು: “ದೇವರು ತನ್ನ ರಾಜ್ಯದ ದಾರಿಯನ್ನು ಸಿದ್ಧಮಾಡಲು ನಾಗರಿಕ ಶಕ್ತಿಯ ಬಲವುಳ್ಳ ಹಸ್ತವನ್ನು ಹೆಚ್ಚಾಗಿ ಉಪಯೋಗಿಸಿದ್ದಾನೆ. . . . ಈ ಮಹಾ ಕ್ಷಣಗಳಲ್ಲಿ ನಿಯೋಗಿಯು ಮಾನವನಾಗಿದ್ದಾನೆ, ಮಾರ್ಗದರ್ಶಿಸುವ ಶಕ್ತಿ ದೈವಿಕವಾಗಿದೆ. ಎಲ್ಲಾ ಜನಾಂಗಗಳ ಉಚ್ಚ ಅಧಿಕಾರಿಯು ಚೀನಾವನ್ನು ಬಡಿದೆಬ್ಬಿಸಲು ಮತ್ತು ತಗ್ಗಿಸಲು ಇಂಗ್ಲೆಂಡನ್ನು ಪ್ರಯೋಗಿಸಿದ್ದಾನೆ.”—ಸ್ಟುಅರ್ಟ್‌ ಕ್ರೆಟನ್‌ರಿಂದ ದ ಮಿಷನೆರಿ ಎಂಟರ್‌ಪ್ರೈಸ್‌ ಇನ್‌ ಚೈನಾ ಆ್ಯಂಡ್‌ ಅಮೆರಿಕ ದಲ್ಲಿ ಪ್ರಕಾಶಿಸಲ್ಪಟ್ಟ “ಎಂಡ್ಸ್‌ ಆ್ಯಂಡ್‌ ಮೀನ್ಸ್‌,” ಎಂಬ 1974ರ ಪ್ರಬಂಧದಿಂದ ತೆಗೆಯಲ್ಪಟ್ಟ ಉದ್ಧರಣೆಗಳು (ಜಾನ್‌ ಕೆ. ಫೇರ್‌ಬ್ಯಾಂಕ್‌ರ ಸಂಪಾದಕತ್ವದ ಒಂದು ಹಾರ್ವರ್ಡ್‌ ಅಧ್ಯಯನ).

[ಪುಟ 375 ರಲ್ಲಿರುವ ಚೌಕ]

“ಸಂಚಾರಿ ವರ್ತಕರು . . . ಐಶ್ವರ್ಯವಂತರಾದರು”

“ಸಾವಿರದ ಒಂಬೈನೂರ ಇಪ್ಪತೊಂಬತ್ತು ಮತ್ತು ಎರಡನೆಯ ಲೋಕ ಯುದ್ಧದ ಸ್ಫೋಟನದ ನಡುವೆ, [ಬೆರ್ನಡಿನೊ] ನೊಗರ [ವ್ಯಾಟಿಕನಿನ ಹಣಕಾಸಿನ ಆಡಳಿತಗಾರ] ವ್ಯಾಟಿಕನಿನ ರಾಜಧಾನಿ ಮತ್ತು ವ್ಯಾಟಿಕನಿನ ಏಜೆಂಟರನ್ನು ಇಟೆಲಿಯ ಅರ್ಥವ್ಯವಸ್ಥೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಡಿಸಲು ನೇಮಿಸಿದನು—ನಿರ್ದಿಷ್ಟವಾಗಿ ವಿದ್ಯುತ್‌ ಶಕ್ತಿ, ಟೆಲಿಫೋನ್‌ ಸಂಪರ್ಕಗಳು, ಧನಸಹಾಯ ಮತ್ತು ಬ್ಯಾಂಕಿಂಗ್‌, ಚಿಕ್ಕ ರೈಲ್‌ರಸ್ತೆಗಳು, ಮತ್ತು ವ್ಯವಸಾಯದ ಸಲಕರಣೆಗಳ ಉತ್ಪಾದನೆ, ಸಿಮೆಂಟ್‌, ಮತ್ತು ಕೃತಕ ಬಟ್ಟೆಯ ನಾರುಪದಾರ್ಥಗಳು. ಇವುಗಳಲ್ಲಿ ಅನೇಕ ಸಾಹಸ ಉದ್ಯಮಗಳು ಪ್ರತಿಫಲ ತಂದವು.

“ನೊಗರ ಲಾ ಸೊಸೈಟ ಇಟೆಲಿಯಾನ ಡೆಲಾ ವಿಸ್‌ಕೊಸಾ, ಲಾ ಸುಪರ್‌ಟಿಸೈಲ್‌, ಲಾ ಸೊಸೈಟ ಮೆರಿಡಿಯೊನೆಲ್‌ ಇಂಡಸ್ಟ್ರಿ ಟೆಸಿಲಿ ಮತ್ತು ಲಾ ಸಿಸಾರೆಯನ್‌ ಕೂಡಿದ ಅನೇಕ ಕಂಪನಿಗಳನ್ನು ಕಬಳಿಸಿದನು. ಇವುಗಳನ್ನು ಒಂದು ಕಂಪನಿಯಾಗಿ ಒಂದುಗೂಡಿಸುತ್ತಾ ಇದನ್ನು ಈತನು ಸಿಐಎಸ್‌ಎ ವಿಸ್‌ಕೊಸಾವೆಂದು ಹೆಸರಿಸಿ, ವ್ಯಾಟಿಕನ್‌ ಜನಸಾಮಾನ್ಯರಲ್ಲಿ ಅತಿ ಹೆಚ್ಚಾಗಿ ಭರವಸ ಇಡಲ್ಪಟ್ಟವರಲ್ಲಿ ಒಬ್ಬನಾಗಿದ್ದ ಬ್ಯಾರನ್‌ ಫ್ರಾಂಸೆಸ್‌ಕೋ ಮರಿಯ ಒಡಾಸೊ ಎಂಬವನ ಅಧಿಕಾರದೊಳಗೆ ಇಟ್ಟನು. ನೊಗರನು ಅನಂತರ ಇಟೆಲಿಯ ದೊಡ್ಡ ನೆಯಿಗೆ ಬಟ್ಟೆ ತಯಾರಿಸುವ ಎಸ್‌ಎನ್‌ಐಎ-ವಿಸ್‌ಕೊಸದ ಹೊಸ ಕಂಪನಿಯ ವಿಲೀನಕರಣಕ್ಕೆ ಕಾರ್ಯಸಂಚು ಹೂಡಿದನು. ಕ್ರಮೇಣ ಎಸ್‌ಎನ್‌ಐಎ-ವಿಸ್‌ಕೊಸದಲ್ಲಿ ವ್ಯಾಟಿಕನಿನ ಆಸಕ್ತಿಯು ಹೆಚ್ಚೆಚ್ಚು ಬೆಳೆಯುತ್ತಾ ಹೋಯಿತು, ಮತ್ತು ಸಮಯಾನಂತರ ವ್ಯಾಟಿಕನ್‌ ನಿಯಂತ್ರಣವನ್ನು ಹೊಂದಿತು—ಬ್ಯಾರನ್‌ ಒಡಾಸೊ ಅನಂತರ ಉಪ ಅಧ್ಯಕ್ಷನಾದದ್ದು ಆ ನಿಜತ್ವದ ಸಾಕ್ಷಿಯಾಗಿದೆ.

“ಹೀಗೆ ನೊಗರ ನೆಯಿಗೆ ಕೈಗಾರಿಕೆಯಲ್ಲಿ ನುಗ್ಗಿದನು. ಆತನು ಇತರ ಕೈಗಾರಿಕೆಗಳಲ್ಲಿ ಬೇರೆ ರೀತಿಗಳಲ್ಲಿ ಒಳತೂರಿಕೊಂಡು ಹೋದನು. ಏಕೆಂದರೆ ನೊಗರನಲ್ಲಿ ಅನೇಕ ಕಾರ್ಯಚಳಕಗಳಿದ್ದವು. ಈ ನಿಸ್ವಾರ್ಥಿ ಮನುಷ್ಯನು . . . ಇಟೆಲಿಯ ಇತಿಹಾಸದಲ್ಲಿ ಇನ್ನಿತರ ಯಾವುದೇ ಒಂಟಿ ವ್ಯಾಪಾರಿಗಿಂತ ಇಟಾಲಿಯನ್‌ ಅರ್ಥವ್ಯವಸ್ಥೆಯಲ್ಲಿ ಜೀವವನ್ನು ತುಂಬಲು ಹೆಚ್ಚನ್ನು ಮಾಡಿದನು. . . . ಬೆನಿಟೊ ಮೂಸಲಿನೀಗೆ ತಾನು ಕನಸು ನೋಡಿದ ಸಾಮ್ರಾಜ್ಯವನ್ನು ಕಟ್ಟಲು ಯಾ ಸಂಪಾದಿಸಲು ಎಂದೂ ಸಾಧ್ಯವಾಗಲಿಲ್ಲ, ಆದರೆ ವ್ಯಾಟಿಕನ್‌ ಮತ್ತು ಬೆರ್ನಡಿನೊ ನೊಗರ ಇನ್ನೊಂದು ತೆರದ ಚಕ್ರಾಧಿಪತ್ಯವನ್ನು ಸೃಷ್ಟಿಸಲು ಸಾಧ್ಯವಾಗುವಂತೆ ಈತನು ಮಾಡಿದನು.”—ದ ವ್ಯಾಟಿಕನ್‌ ಎಂಪಯ್‌ರ್‌, ನೀನೊ ಲೊ ಬೆಲೊರಿಂದ, ಪುಟಗಳು 71-3.

ಭೂಲೋಕದ ವರ್ತಕರ ಮತ್ತು ಮಹಾ ಬಾಬೆಲಿನ ಮಧ್ಯೆ ನಿಕಟ ಸಹಕಾರದ ಕೇವಲ ಒಂದು ಉದಾಹರಣೆ ಮಾತ್ರ ಇದಾಗಿದೆ. ಅವರ ವ್ಯಾಪಾರಿ ಜೊತೆಗಾರ್ತಿಯು ಇಲ್ಲದೆ ಹೋದಾಗ ಈ ವರ್ತಕರು ಅತ್ತು ಗೋಳಾಡುವರೆಂಬುದಕ್ಕೆ ಯಾವುದೇ ಅಚ್ಚರಿಯಿಲ್ಲ!

[Picture on page 259]

ಮಾನವರು ಭೂಮಿಯಲ್ಲಿಲ್ಲಾ ಪ್ರಸರಿಸಿದಂತೆ, ಅವರು ತಮ್ಮೊಂದಿಗೆ ಬಾಬೆಲಿನ ಧರ್ಮವನ್ನು ಕೊಂಡೊಯ್ದರು

[Picture on page 261]

ಒಬ್ಬ ಕಾವಲುಗಾರನೋಪಾದಿ, ಯೋಹಾನ ವರ್ಗವು ಬಾಬೆಲ್‌ ಪತನಗೊಂಡಿದೆ ಎಂದು ಘೋಷಿಸುತ್ತದೆ

[Picture on page 266]

ಪುರಾತನ ಬಾಬೆಲಿನ ಅವಶೇಷಗಳು ಮಹಾ ಬಾಬೆಲಿನ ಬರಲಿರುವ ವಿನಾಶದ ಕೇಡುಸೂಚಕಗಳಾಗಿವೆ