ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಹುವನ್ನು ಆತನ ನ್ಯಾಯತೀರ್ಪುಗಳಿಗಾಗಿ ಸ್ತುತಿಸಿರಿ!

ಯಾಹುವನ್ನು ಆತನ ನ್ಯಾಯತೀರ್ಪುಗಳಿಗಾಗಿ ಸ್ತುತಿಸಿರಿ!

ಅಧ್ಯಾಯ 38

ಯಾಹುವನ್ನು ಆತನ ನ್ಯಾಯತೀರ್ಪುಗಳಿಗಾಗಿ ಸ್ತುತಿಸಿರಿ!

1. “ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ” ಯೋಹಾನನು ಯಾವ ಮಾತುಗಳನ್ನು ಕೇಳುತ್ತಾನೆ?

ಮಹಾ ಬಾಬೆಲ್‌ ಇನ್ನು ಇಲ್ಲ! ಇದು ನಿಜವಾಗಿಯೂ ಹರ್ಷಭರಿತ ವಾರ್ತೆ. ಪರಲೋಕದಲ್ಲಿ ಸ್ತುತಿಯ ಸಂತೋಷದ ಉದ್ಗಾರಗಳನ್ನು ಯೋಹಾನನು ಕೇಳುವುದೇನೂ ಆಶ್ಚರ್ಯವಲ್ಲ! “ಈ ಸಂಗತಿಗಳಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಶಬ್ದವನ್ನು ನಾನು ಕೇಳಿದೆನು. ಅವರು ಹೇಳಿದ್ದು: ‘ಹಲ್ಲೆಲೂಯಾ!* ರಕ್ಷಣೆಯೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಿಗೆ ಸಲ್ಲುತ್ತವೆ, ಕಾರಣ ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ. ಯಾಕೆಂದರೆ ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸಿದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯ ತೀರಿಸಿದ್ದಾನೆ, ಮತ್ತು ಅವಳ ಕೈಯಲ್ಲಿ ಆತನ ಸೇವಕರ ರಕ್ತಕ್ಕಾಗಿ ಅವನು ಪ್ರತಿದಂಡನೆಯನ್ನು ಮಾಡಿದ್ದಾನೆ.’ ಮತ್ತು ಕೂಡಲೇ ಎರಡನೆಯ ಸಾರಿ ಅವರು ಅಂದದ್ದು: ‘ಹಲ್ಲೆಲೂಯಾ!’ * ಮತ್ತು ಅವಳಿಂದ ಹೊಗೆಯು ಸರ್ವದಾ ಏರಿಹೋಗುತ್ತಾ ಇರುತ್ತದೆ.”—ಪ್ರಕಟನೆ 19:1-3, NW. 

2. (ಎ) “ಹಲ್ಲೆಲೂಯಾ” ಶಬ್ದದ ಅರ್ಥವೇನು, ಮತ್ತು ಈ ಬಿಂದುವಿನಲ್ಲಿ ಅದನ್ನು ಯೋಹಾನನು ಎರಡು ಬಾರಿ ಕೇಳುವುದು ತಾನೇ ಯಾವುದನ್ನು ಪ್ರದರ್ಶಿಸುತ್ತದೆ? (ಬಿ) ಮಹಾ ಬಾಬೆಲನ್ನು ನಾಶಮಾಡುವುದರ ಘನತೆಯನ್ನು ಯಾರು ಪಡೆಯುತ್ತಾನೆ? ವಿವರಿಸಿರಿ.

2 ನಿಶ್ಚಯವಾಗಿಯೂ, ಹಲ್ಲೆಲೂಯಾ! ಈ ಶಬ್ದಕ್ಕೆ “ಜನರೇ, ಯಾಹುವನ್ನು ಸ್ತುತಿಸಿರಿ” ಎಂಬರ್ಥವಿದೆ, “ಯಾಹು” ದೈವಿಕ ಹೆಸರಾದ ಯೆಹೋವ ಎಂಬುದರ ಸಂಕ್ಷಿಪ್ತ ರೂಪ. ನಾವು ಇಲ್ಲಿ ಕೀರ್ತನೆಗಾರನ ಪ್ರಬೋಧನೆಯ ಕುರಿತು ನೆನಪಿಸಲ್ಪಡುತ್ತೇವೆ: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ.” (ಕೀರ್ತನೆ 150:6) ಪ್ರಕಟನೆಯ ಈ ಬಿಂದುವಿನಲ್ಲಿ ಸಂಭ್ರಮದ ಸ್ವರ್ಗೀಯ ಮೇಳಗೀತವು “ಹಲ್ಲೆಲೂಯಾ!” ಎಂದು ಎರಡು ಬಾರಿ ಹಾಡುವುದನ್ನು ಯೋಹಾನನು ಆಲಿಸುವುದು ಸತ್ಯದ ದೈವಿಕ ಪ್ರಕಟನೆಯ ಅವಿಚ್ಛಿನ್ನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳ ದೇವರು ಹಿಂದಿನ ಹೀಬ್ರು ಶಾಸ್ತ್ರವಚನಗಳ ದೇವರಾಗಿದ್ದಾನೆ, ಮತ್ತು ಆತನ ಹೆಸರು ಯೆಹೋವ ಎಂದಾಗಿದೆ. ಪ್ರಾಚೀನ ಬಾಬೆಲಿನ ಪತನಕ್ಕೆ ಕಾರಣನಾದ ದೇವರು ಈಗ ಮಹಾ ಬಾಬೆಲಿಗೆ ನ್ಯಾಯತೀರಿಸಿದ್ದಾನೆ ಮತ್ತು ನಾಶಮಾಡಿದ್ದಾನೆ. ಆತನ ಈ ಅದ್ಭುತಕಾರ್ಯಕ್ಕಾಗಿ ಆತನಿಗೆ ಎಲ್ಲಾ ಘನತೆಯನ್ನು ಸಲ್ಲಿಸಿರಿ! ಅವಳ ಅವನತಿಗೆ ಜಾಣತನದಿಂದ ನಡಿಸಿದ ಬಲವು ಆತನಿಗೆ ಸೇರಿದ್ದಾಗಿದೆ ಹೊರತು ಅವಳನ್ನು ಧ್ವಂಸಮಾಡುವುದರಲ್ಲಿ ಆತನು ಉಪಕರಣವಾಗಿ ಉಪಯೋಗಿಸಿದ ರಾಷ್ಟ್ರಗಳಿಗೆ ಅಲ್ಲ. ರಕ್ಷಣೆಯು ಯೆಹೋವನೊಬ್ಬನಿಗೇ ಸೇರಿದ್ದೆಂದು ನಾವು ಹೇಳಬೇಕು.—ಯೆಶಾಯ 12:2; ಪ್ರಕಟನೆ 4:11; 7:10, 12.

3. ಮಹಾ ಜಾರಸ್ತ್ರೀಯು ಅವಳ ತೀರ್ಪಿಗೆ ಇಷ್ಟು ಅರ್ಹವಾಗಿರುವುದಾದರೂ ಏಕೆ?

3 ಮಹಾ ಜಾರಸ್ತ್ರೀಯು ಈ ತೀರ್ಪಿಗೆ ಇಷ್ಟು ಅರ್ಹವಾದದ್ದಾದರೂ ಯಾಕೆ? ಯೆಹೋವನು ನೋಹನಿಗೆ—ಮತ್ತು ಅವನ ಮೂಲಕ ಎಲ್ಲಾ ಮಾನವ ಕುಲಕ್ಕೆ—ಕೊಟ್ಟ ನಿಯಮಕ್ಕನುಸಾರವಾಗಿ ರಕ್ತವನ್ನು ಸುರಿಸುವ ಸ್ವೇಚ್ಛಾಚಾರವು ಮರಣದಂಡನೆಯ ಶಿಕ್ಷೆಗೆ ಕರೆನೀಡುತ್ತದೆ. ಇದು ದೇವರ ನಿಯಮಶಾಸ್ತ್ರದಲ್ಲಿ ಇಸ್ರಾಯೇಲ್ಯರಿಗೆ ಪುನಃ ತಿಳಿಸಲ್ಪಟ್ಟಿತು. (ಆದಿಕಾಂಡ 9:6; ಅರಣ್ಯಕಾಂಡ 35:20, 21) ಮತ್ತೂ ಮೇಲಾಗಿ, ಮೋಶೆಯ ನಿಯಮಶಾಸ್ತ್ರದ ಕೆಳಗೆ ಶಾರೀರಿಕ ಮತ್ತು ಆತ್ಮಿಕ ವ್ಯಭಿಚಾರಗಳೆರಡೂ ಮರಣಕ್ಕೆ ಪಾತ್ರವಾಗಿದ್ದವು. (ಯಾಜಕಕಾಂಡ 20:10; ಧರ್ಮೋಪದೇಶಕಾಂಡ 13:1-5) ಸಾವಿರಾರು ವರ್ಷಗಳಿಂದಲೂ, ಮಹಾ ಬಾಬೆಲ್‌ ರಕ್ತದೋಷಿಯಾಗಿದ್ದಾಳೆ, ಮತ್ತು ಅವಳು ಅಸಹ್ಯಕರ ವ್ಯಭಿಚಾರಿಣಿಯಾಗಿದ್ದಾಳೆ. ಉದಾಹರಣೆಗೆ, ರೋಮನ್‌ ಕ್ಯಾತೊಲಿಕ್‌ ಚರ್ಚಿನ ತನ್ನ ವೈದಿಕರು ಮದುವೆ ಮಾಡಿಕೊಳ್ಳಬಾರದೆಂಬ ನಿಷೇಧವು ಅವರಲ್ಲಿನ ಅನೇಕರಿಂದ ಅಸಹ್ಯಕರ ಅನೈತಿಕತೆಯನ್ನು ಫಲಿಸಿದೆ, ಇಂದು ಇವರಲ್ಲಿ ಏಯ್ಡ್ಸ್‌ ರೋಗ ತಗಲಿರುವುದು ಕೇವಲ ಕೊಂಚ ಮಂದಿಗಲ್ಲ. (1 ಕೊರಿಂಥ 6:9, 10; 1 ತಿಮೊಥೆಯ 4:1-3) ಆದರೆ ‘ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದಿರುವ’ ಅವಳ ದೊಡ್ಡ ಪಾಪಗಳು, ಆತ್ಮಿಕ ವ್ಯಭಿಚಾರದ ಅವಳ ಧಕ್ಕೆಬರಿಸುವ ಕಾರ್ಯಗಳಾಗಿವೆ—ಈ ಎರಡನೆಯದ್ದು ಸುಳ್ಳಾದವುಗಳನ್ನು ಕಲಿಸುವುದರಲ್ಲಿ ಮತ್ತು ತನ್ನನ್ನು ಭ್ರಷ್ಟ ರಾಜಕಾರಣಿಗಳೊಂದಿಗೆ ಜೊತೆಗೂಡಿಸಿಕೊಂಡದ್ದರಲ್ಲಿ ಅದೆ. (ಪ್ರಕಟನೆ 18:5) ಅವಳ ಶಿಕ್ಷೆಯು ಕೊನೆಗೂ ಅವಳ ಮೇಲೆ ಹಠಾತ್ತಾಗಿ ಬಂದಿರುವುದರಿಂದ, ಸ್ವರ್ಗೀಯ ಬಹು ಸ್ತೋಮವು ಈಗ ಎರಡನೆಯ ಹಲ್ಲೆಲೂಯಾವನ್ನು ಪ್ರತಿಧ್ವನಿಸುತ್ತದೆ.

4. ಮಹಾ ಬಾಬೆಲಿನಿಂದ ಹೊರಟ ಹೊಗೆಯು “ಸರ್ವದಾ” ಏರಿಹೋಗುತ್ತದೆ ಎನ್ನುವ ನಿಜತ್ವದಿಂದ ಏನು ಸಾಂಕೇತಿಸಲ್ಪಡುತ್ತದೆ?

4 ಮಹಾ ಬಾಬೆಲ್‌ ವಶಪಡಿಸಲ್ಪಟ್ಟ ನಗರಿಯೋಪಾದಿ ಬೆಂಕಿಗಾಹುತಿಯಾಗಿದ್ದಾಳೆ, ಮತ್ತು ಅವಳಿಂದ ಬಂದ ಹೊಗೆಯು “ಸರ್ವದಾ ಏರುತ್ತಾ ಹೋಗುತ್ತಿದೆ.” ವಿಜೇತ ಸೈನಿಕರಿಂದ ಒಂದು ಅಕ್ಷರಾರ್ಥಕ ನಗರವು ಸುಡಲ್ಪಟ್ಟಾಗ, ಬೂದಿ ಬಿಸಿಯಾಗಿರುವ ವರೆಗೆ ಹೊಗೆಯು ಏರಿಹೋಗುತ್ತಿರುತ್ತದೆ. ಅದು ಇನ್ನು ಹೊಗೆ ಕಾರುತ್ತಿರುವಾಗಲೇ, ಅದನ್ನು ಪುನಃ ಕಟ್ಟಲು ಪ್ರಯತ್ನಿಸುವ ಯಾವನಾದರೂ ದಹಿಸುವ ಅವಶೇಷಗಳಿಂದ ಕೇವಲ ಸುಡಲ್ಪಡುವನು. ಮಹಾ ಬಾಬೆಲಿನ ಹೊಗೆಯು, ಅವಳ ನ್ಯಾಯತೀರ್ಪಿನ ಅಂತಿಮ ಸ್ಥಿತಿಯ ಗುರುತಾಗಿ “ಸರ್ವದಾ” ಏರುತ್ತಾ ಹೋಗಲಿರುವುದರಿಂದ, ಯಾರೊಬ್ಬನಿಗೂ ಆ ದುಷ್ಟತನದ ನಗರಿಯನ್ನು ಪುನಃಸ್ಥಾಪಿಸಲು ಸಾಧ್ಯವಾಗದು. ಸುಳ್ಳು ಧರ್ಮವು ಸದಾಕಾಲಕ್ಕೂ ಅಳಿದು ಹೋಗಿದೆ. ಖಂಡಿತವಾಗಿಯೂ ಹಲ್ಲೆಲೂಯಾ!—ಯೆಶಾಯ 34:5, 9, 10 ಹೋಲಿಸಿರಿ.

5. (ಎ) ಇಪ್ಪತ್ತನಾಲ್ಕು ಹಿರಿಯರು ಮತ್ತು ನಾಲ್ಕು ಜೀವಿಗಳು ಏನು ಮಾಡುತ್ತಾರೆ ಮತ್ತು ಹೇಳುತ್ತಾರೆ? (ಬಿ) ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಹಾಡಲ್ಪಡುವ ಯಾವುದೇ ಹಲ್ಲೆಲೂಯಾ ಮೇಳಗೀತಕ್ಕಿಂತ ಈ ಹಲ್ಲೆಲೂಯಾದ ಪಲ್ಲವಿ ಯಾಕೆ ಮಧುರಮಯವಾಗಿದೆ?

5 ಈ ಮುಂಚಿನ ದರ್ಶನದಲ್ಲಿ, ಯೋಹಾನನು ಸಿಂಹಾಸನದ ಸುತ್ತಲೂ ತಮ್ಮ ಮಹಿಮಾಭರಿತ ಸ್ವರ್ಗೀಯ ಸ್ಥಾನದಲ್ಲಿರುವ ರಾಜ್ಯ ಸಹಬಾಧ್ಯಸ್ಥರನ್ನು ಚಿತ್ರಿಸುವ 24 ಹಿರಿಯರೊಂದಿಗೆ ನಾಲ್ಕು ಜೀವಿಗಳನ್ನು ನೋಡಿದನು. (ಪ್ರಕಟನೆ 4:8-11) ಈಗ ಅವರು ಮಹಾ ಬಾಬೆಲಿನ ನಾಶನದ ಮೇಲೆ ಮೂರನೆಯ ಹಲ್ಲೆಲೂಯಾವು ಮೊಳಗುತ್ತಿದ್ದಷ್ಟಕ್ಕೆ ಅವರನ್ನು ಪುನಃ ಒಮ್ಮೆ ಅವನು ನೋಡುತ್ತಾನೆ: “ಮತ್ತು ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡಬ್ಡಿದ್ದು ಸಿಂಹಾಸನದ ಮೇಲೆ ಕೂತಿರುವ ದೇವರಿಗೆ ನಮಸ್ಕಾರ ಮಾಡಿ ಹೇಳಿದ್ದು: ‘ಆಮೆನ್‌! ಹಲ್ಲೆಲೂಯಾ!’” * (ಪ್ರಕಟನೆ 19:4, NW)  ಹಾಗಾದರೆ, ಈ ಮಹತ್ತಮ ಹಲ್ಲೆಲೂಯಾ ಮೇಳಗೀತವು, ಕುರಿಮರಿಗೆ ಸ್ತುತಿಯ “ಹೊಸ ಹಾಡಿಗೆ” ಕೂಡಿಸುವಿಕೆಯಾಗಿದೆ. (ಪ್ರಕಟನೆ 5:8, 9) ಅವರು ಈಗ ಭವ್ಯವಾದ ವಿಜಯಪಲ್ಲವಿಯನ್ನು ಹಾಡುತ್ತಾರೆ, ಮಹಾ ಜಾರಸ್ತ್ರೀಯಾದ ಮಹಾ ಬಾಬೆಲಿನ ಮೇಲೆ ಆತನ ನಿರ್ಣಾಯಕ ವಿಜಯದ ಕಾರಣದಿಂದಾಗಿ ಸಾರ್ವಭೌಮ ಕರ್ತನಾದ ಯೆಹೋವನಿಗೆ ಎಲ್ಲಾ ಘನತೆಯನ್ನು ಸಲ್ಲಿಸುತ್ತಾರೆ. ಈ ಹಲ್ಲೆಲೂಯಾಗಳು, ಎಲ್ಲಿ ಯೆಹೋವ ಯಾ ಯಾಹು ಅಗೌರವಿಸಲ್ಪಟ್ಟಿದ್ದಾರೋ ಮತ್ತು ನಿಂದಿಸಲ್ಪಟ್ಟಿದ್ದಾರೋ, ಆ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಹಾಡಲ್ಪಟ್ಟ ಯಾವುದೇ ಹಲ್ಲೆಲೂಯಾ ಮೇಳಗೀತಗಳಿಗಿಂತ ಬಹು ಮಧುರವಾಗಿ ಘಣಘಣಿಸುತ್ತವೆ. ಯೆಹೋವನ ಹೆಸರನ್ನು ನಿಂದಿಸುವಂಥ ಕಪಟ ಹಾಡುವಿಕೆಯನ್ನು ಈಗ ಸದಾಕಾಲಕ್ಕೂ ನಿಶ್ಶಬ್ದಗೊಳಿಸಲಾಗಿದೆ!

6. ಯಾರ “ಶಬ್ದವು” ಕೇಳಿಬರುತ್ತದೆ, ಅದು ಯಾವದನ್ನು ಹುರಿದುಂಬಿಸುತ್ತದೆ, ಮತ್ತು ಪ್ರತಿಕ್ರಿಯೆಯಲ್ಲಿ ಯಾರು ಪಾಲು ತೆಗೆದುಕೊಳ್ಳುತ್ತಾರೆ?

6 ಯೆಹೋವನು ‘ತನ್ನ ನಾಮಕ್ಕೆ ಭಯಪಡುವ ದೊಡ್ಡವರಿಗೂ ಚಿಕ್ಕವರಿಗೂ’ 1918 ರಲ್ಲಿ ಪ್ರತಿಫಲವನ್ನು ಕೊಡಲು ಆರಂಭಿಸಿದನು—ಇವರಲ್ಲಿ ಮೊದಲಿಗರು ನಂಬಿಗಸ್ತರಾಗಿ ಮೃತರಾದ ಅಭಿಷಿಕ್ತ ಕ್ರೈಸ್ತರಾಗಿದ್ದರು, ಅವರನ್ನು ಆತನು ಪುನರುತ್ಥಾನಗೊಳಿಸಿದನು ಮತ್ತು 24 ಹಿರಿಯರ ಸ್ವರ್ಗೀಯ ಸ್ಥಾನಗಳಲ್ಲಿ ಇಟ್ಟನು. (ಪ್ರಕಟನೆ 11:18) ಹಲ್ಲೆಲೂಯಾಗಳನ್ನು ಹಾಡುವುದರಲ್ಲಿ ಇನ್ನಿತರರು ಇವರೊಂದಿಗೆ ಜೊತೆಗೂಡುತ್ತಾರೆ, ಕಾರಣ ಯೋಹಾನನು ವರದಿಸುವುದು: “ಅಲ್ಲದೆ ಸಿಂಹಾಸನದ ಕಡೆಯಿಂದ ಒಂದು ಶಬ್ದವು ಹೊರಟಿತು ಮತ್ತು ಹೇಳಿತು: ‘ಆತನಿಗೆ ಭಯಪಡುವ ಚಿಕ್ಕವರೂ, ದೊಡ್ಡವರೂ ಆದ ಆತನ ಎಲ್ಲಾ ದಾಸರೇ, ನಮ್ಮ ದೇವರನ್ನು ಸ್ತುತಿಸುತ್ತಿರ್ರಿ.’” (ಪ್ರಕಟನೆ 19:5, NW)  “ಸಿಂಹಾಸನದ ಮಧ್ಯದಲ್ಲಿಯೇ” ನಿಲ್ಲುವ ಯೆಹೋವನ ವದನಕನೂ, ಅವನ ಮಗನೂ ಆದ ಯೇಸು ಕ್ರಿಸ್ತನ “ಶಬ್ದ” ಇದಾಗಿದೆ. (ಪ್ರಕಟನೆ 5:6) ಪರಲೋಕದಲ್ಲಿ ಮಾತ್ರವೇ ಅಲ್ಲ, ಆದರೆ ಇಲ್ಲಿ ಭೂಮಿಯ ಮೇಲೆಯೂ, “ಆತನ ಎಲ್ಲಾ ದಾಸರು” ಭೂಮಿಯ ಮೇಲೆ ಮಾರ್ಗದರ್ಶನ ಮಾಡುವ ಅಭಿಷಿಕ್ತ ಯೋಹಾನ ವರ್ಗದೊಂದಿಗೆ ಹಾಡುವಿಕೆಯಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದಾರೆ. “ನಮ್ಮ ದೇವರನ್ನು ಕೊಂಡಾಡಿರಿ” ಎನ್ನುವ ಆಜ್ಞೆಗೆ ವಿಧೇಯತೆಯಲ್ಲಿ ಇವರು ಎಷ್ಟು ಅತ್ಯಾನಂದದಿಂದ ಭಾಗವಹಿಸುತ್ತಿದ್ದಾರೆ!

7. ಮಹಾ ಬಾಬೆಲ್‌ ನಾಶವಾದ ಅನಂತರ, ಯಾರು ಯೆಹೋವನನ್ನು ಸ್ತುತಿಸಲಿದ್ದಾರೆ?

7 ಹೌದು, ಮಹಾ ಸಮೂಹದವರು ಕೂಡ ಈ ದಾಸರುಗಳಲ್ಲಿ ಎಣಿಸಲ್ಪಟ್ಟಿದ್ದಾರೆ. ಇವರು 1935 ರಿಂದಲೂ ಮಹಾ ಬಾಬೆಲಿನೊಳಗಿಂದ ಹೊರಬರುತ್ತಿದ್ದಾರೆ ಮತ್ತು ದೇವರ ವಾಗ್ದಾನದ ನೆರವೇರಿಕೆಯನ್ನು ಅನುಭವಿಸಿದ್ದಾರೆ: “ಯೆಹೋವನು ನಮ್ಮನ್ನು ನೆನಪು ಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರನ್ನೂ ಆಶೀರ್ವದಿಸುವನು.” (ಕೀರ್ತನೆ 115:12 [13, NW]) ಜಾರಸ್ತ್ರೀಯಂತಿರುವ ಬಾಬೆಲ್‌ ನಾಶವಾಗುವಾಗ, ಅವರಲ್ಲಿ ಲಕ್ಷಾಂತರ ಮಂದಿಗಳು—ಯೋಹಾನ ವರ್ಗ ಮತ್ತು ಎಲ್ಲಾ ಸ್ವರ್ಗೀಯ ಪಡೆಯೊಂದಿಗೆ “ನಮ್ಮ ದೇವರನ್ನು ಕೊಂಡಾಡುವುದರಲ್ಲಿ” ಜತೆಗೂಡಲಿರುವರು. ಅನಂತರ, ಭೂಮಿಯ ಮೇಲೆ ಪುನರುತ್ಥಾನಗೊಂಡವರು, ಈ ಹಿಂದೆ ಪ್ರಮುಖರು ಆಗಿರಲಿ ಇಲ್ಲದಿರಲಿ—ಮಹಾ ಬಾಬೆಲ್‌ ಸದಾಕಾಲಕ್ಕೂ ಇಲ್ಲವಾಗಿ ಹೋಗಿದೆ ಎಂಬುದನ್ನು ಕಲಿತಾಗ ಹೆಚ್ಚಿನ ಹಲ್ಲೆಲೂಯಾಗಳನ್ನು ಹಾಡುವರೆಂಬದು ನಿಸ್ಸಂಶಯ. (ಪ್ರಕಟನೆ 20:12, 15) ಪ್ರಾಚೀನ ಕಾಲದಿಂದ ಇದ್ದ ಜಾರಸ್ತ್ರೀಯ ಮೇಲೆ ಆತನ ಪ್ರತಿಧ್ವನಿತ ವಿಜಯಕ್ಕಾಗಿ ಯೆಹೋವನಿಗೆ ಸರ್ವಸ್ತುತಿ!

8. ಯೋಹಾನನಿಂದ ನೋಡಲ್ಪಟ್ಟ ಸ್ತುತಿಯ ಸ್ವರ್ಗೀಯ ಮೇಳಗೀತಗಳು, ಈಗ ನಮಗೆಲ್ಲರಿಗೆ ಮಹಾ ಬಾಬೆಲಿನ ನಾಶನದ ಮುಂಚೆ ಯಾವ ಪ್ರೇರೇಪಣೆಯನ್ನು ಕೊಡಬೇಕು?

8 ದೇವರ ಇಂದಿರುವ ಕೆಲಸದಲ್ಲಿ ಪೂರ್ಣವಾಗಿ ಪಾಲು ತೆಗೆದುಕೊಳ್ಳಲು ಇವೆಲ್ಲವು ನಮಗೆಲ್ಲರಿಗೆ ಎಂಥ ಒಂದು ಉತ್ತೇಜನವನ್ನು ಕೊಡುತ್ತದೆ! ಮಹಾ ಬಾಬೆಲ್‌ ಸ್ಥಾನಚ್ಯುತಿಯಾಗುವ ಮತ್ತು ನಾಶವಾಗುವ ಮುಂಚೆ, ಈಗ, ಭವ್ಯ ರಾಜ್ಯ ನಿರೀಕ್ಷೆಯೊಂದಿಗೆ ದೇವರ ತೀರ್ಪುಗಳನ್ನು ಪ್ರಚುರಪಡಿಸಲು ಯಾಹುವಿನ ಸೇವಕರೆಲ್ಲರೂ ತಮ್ಮ ಹೃದಮನಗಳನ್ನು ನೀಡಲಿ.—ಯೆಶಾಯ 61:1-3; 1 ಕೊರಿಂಥ 15:58.

‘ಹಲ್ಲೆಲೂಯಾ—ಯೆಹೋವನು ರಾಜನು!’

9. ಕೊನೆಯ ಹಲ್ಲೆಲೂಯಾವು ಇಷ್ಟೊಂದು ಪೂರ್ಣವಾದದ್ದೂ, ಗಾಢವಾದದ್ದೂ ಆಗಿರುವುದೇಕೆ?

9 ಯೋಹಾನನು ನಮಗೆ ಹೇಳುತ್ತಾ ಮುಂದರಿಸುವಾಗ, ಹರ್ಷಿಸಲು ಇನ್ನೂ ಹೆಚ್ಚಿನ ಕಾರಣಗಳು ಇವೆ: “ಮತ್ತು ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಆನೇಕ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು. ಅವರು ಹೇಳಿದ್ದು: ‘ಹಲ್ಲೆಲೂಯಾ, * ಕಾರಣ ನಮ್ಮ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು ರಾಜನಾಗಿ ಆಳಲು ಆರಂಭಿಸಿದ್ದಾನೆ.’” (ಪ್ರಕಟನೆ 19:6, NW)  ಈ ಕೊನೆಯ ಹಲ್ಲೆಲೂಯಾವು ಘೋಷಣೆಯನ್ನು ಚಚ್ಚೌಕದ್ದಾಗಿ ಯಾ ಸಮಪ್ರಮಾಣದ್ದಾಗಿ ಮಾಡುತ್ತದೆ. ಅದು ಬಲವುಳ್ಳ ಒಂದು ಸ್ವರ್ಗೀಯ ಧ್ವನಿಯಾಗಿದೆ, ಯಾವುದೇ ಮಾನವ ಮೇಳವೃಂದಕ್ಕಿಂತಲೂ ಹೆಚ್ಚು ಉಜ್ವಲಮಯವಾಗಿದೆ, ಯಾವುದೇ ಭೂಜಲಪಾತಕ್ಕಿಂತಲೂ ಹೆಚ್ಚು ಗಾಂಭೀರ್ಯವುಳ್ಳದ್ದಾಗಿದೆ, ಭೂಮಿಯ ಯಾವುದೇ ಗುಡುಗು ಮಳೆಯ ಶಬ್ದಕ್ಕಿಂತಲೂ ಹೆಚ್ಚು ದಿಗಿಲುಪಡಿಸುವದಾಗಿದೆ. ಅಸಂಖ್ಯಾತ ಕೋಟ್ಯಾನುಕೋಟಿ ಸ್ವರ್ಗೀಯ ಧ್ವನಿಗಳು “ನಮ್ಮ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು ರಾಜನಾಗಿ ಆಳಲು ಆರಂಭಿಸಿದ್ದಾನೆ” ಎನ್ನುವ ನಿಜತ್ವವನ್ನು ಕೊಂಡಾಡುತ್ತವೆ.

10. ಮಹಾ ಬಾಬೆಲಿನ ಧ್ವಂಸದ ಅನಂತರ, ಯೆಹೋವನು ಆಳಲು ಆರಂಭಿಸುತ್ತಾನೆ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ?

10 ಆದರೂ, ಯೆಹೋವನು ಆಳಲು ಆರಂಭಿಸುವುದು ಹೇಗೆ? ಕೀರ್ತನೆಗಾರನು ಈ ಮಾತುಗಳನ್ನು ಹೇಳಿ ಸಹಸ್ರಾರು ವರ್ಷಗಳು ದಾಟಿವೆ: “ದೇವರೇ, ನೀನು ಮೊದಲಿನಿಂದಲೂ ನನ್ನ ಅರಸನೂ . . . ಆಗಿದ್ದೀಯಲ್ಲವೇ?” (ಕೀರ್ತನೆ 74:12) ಯೆಹೋವನ ರಾಜತ್ವವು ಆಗಲೂ ಪ್ರಾಚೀನದ್ದಾಗಿತ್ತು, ಹೀಗಿರುವಲ್ಲಿ, ಸಾರ್ವತ್ರಿಕ ಮೇಳಗೀತವು “ಯೆಹೋವನು . . . ರಾಜನಾಗಿ ಆಳಲು ಆರಂಭಿಸಿದನು” ಎಂದು ಹಾಡುವುದು ಹೇಗೆ ಸಾಧ್ಯ? ಇದರ ಅರ್ಥ ಏನಂದರೆ ಮಹಾ ಬಾಬೆಲ್‌ ನಾಶವಾದಾಗ, ವಿಶ್ವದ ಸಾರ್ವಭೌಮನೋಪಾದಿ ಆತನಿಗೆ ಕೊಡುವ ವಿಧೇಯತೆಯನ್ನು ಅಪಕರ್ಷಿಸಲು ಆ ದುರಹಂಕಾರದ ಪ್ರತಿಸ್ಪರ್ಧಿಯು ಯೆಹೋವನಿಗೆ ಇನ್ನೆಂದಿಗೂ ಇರಲಾರದು. ಇನ್ನೆಂದಿಗೂ ಸುಳ್ಳು ಧರ್ಮವು ಆತನನ್ನು ವಿರೋಧಿಸಲು ಭೂರಾಜರನ್ನು ಪ್ರೇರಿಸದು. ಲೋಕ ಪ್ರಭುತ್ವದಿಂದ ಪ್ರಾಚೀನ ಬಾಬೆಲ್‌ ಬಿದ್ದಾಗ, ಚೀಯೋನ್‌ ಈ ವಿಜಯೀ ಘೋಷಣೆಯನ್ನು ಕೇಳಿತು: “ನಿನ್ನ ದೇವರು ರಾಜನಾಗಿದ್ದಾನೆ!” (ಯೆಶಾಯ 52:7, NW) ರಾಜ್ಯದ ಜನನವು 1914 ರಲ್ಲಿ ಆದನಂತರ, 24 ಹಿರಿಯರು ಘೋಷಿಸಿದ್ದು: “ಯೆಹೋವ ದೇವರೇ, . . . ನೀನು ಮಹಾ ಅಧಿಕಾರವನ್ನು ವಹಿಸಿಕೊಂಡು ರಾಜನಾಗಿ ಆಳಲು ಆರಂಭಿಸಿದರ್ದಿಂದ ನಾವು ನಿಮಗೆ ಕೃತಜ್ಞತೆ ಸೂಚಿಸುತ್ತೇವೆ.” (ಪ್ರಕಟನೆ 11:17, NW) ಈಗ, ಮಹಾ ಬಾಬೆಲಿನ ಧ್ವಂಸದ ಅನಂತರ, ಕೂಗು ಪುನಃ ಒಮ್ಮೆ ಉಚ್ಚರಿಸಲ್ಪಡುತ್ತದೆ: “ಯೆಹೋವನು . . . ರಾಜನಾಗಿ ಆಳಲು ಆರಂಭಿಸಿದ್ದಾನೆ.” ಸತ್ಯ ದೇವರಾದ ಯೆಹೋವನ ಸಾರ್ವಭೌಮತೆಯನ್ನು ಸ್ಪರ್ಧಿಸಲು ಯಾವನೇ ಮಾನವ ನಿರ್ಮಿತ ದೇವರು ಉಳಿದಿಲ್ಲ!

ಕುರಿಮರಿಯ ವಿವಾಹ ಕಾಲವು ಸಮೀಪಿಸಿದೆ!

11, 12. (ಎ) ಹೊಸ ಯೆರೂಸಲೇಮ್‌ ಮತ್ತು ಮಹಾ ಬಾಬೆಲ್‌ ಸಂಬಂಧದಲ್ಲಿ ಯಾವ ನಮೂನೆಯನ್ನಿಡುತ್ತಾ, ಪ್ರಾಚೀನ ಯೆರೂಸಲೇಮ್‌ ಪುರಾತನ ಬಾಬೆಲನ್ನು ಹೇಗೆ ಸಂಬೋಧಿಸಿತು? (ಬಿ) ಮಹಾ ಬಾಬೆಲಿನ ಮೇಲಿನ ವಿಜಯದೊಂದಿಗೆ ಸ್ವರ್ಗೀಯ ಗುಂಪು ಏನನ್ನು ಹಾಡುತ್ತದೆ ಮತ್ತು ಪ್ರಕಟಿಸುತ್ತದೆ?

11 “ನನ್ನ ಸ್ತ್ರೀ ಶತ್ರುವೇ”! ಹಾಗೆಂದು ಯೆಹೋವನ ಆರಾಧನೆಯ ಆಲಯದ ಸ್ಥಳವಾದ ಯೆರೂಸಲೇಮ್‌, ವಿಗ್ರಹಾರಾಧಕ ಬಾಬೆಲನ್ನು ಸಂಬೋಧಿಸಿತು. (ಮೀಕ 7:8, NW) ಅಂತೆಯೇ, 1,44,000 ಸದಸ್ಯರ ವಧುವಿನಿಂದ ಮಾಡಲ್ಪಟ್ಟ “ಪರಿಶುದ್ಧ ನಗರವಾದ ಹೊಸ ಯೆರೂಸಲೇಮ್‌”ಗೆ ಮಹಾ ಬಾಬೆಲನ್ನು ತನ್ನ ಶತ್ರುವಾಗಿ ಸಂಬೋಧಿಸುವುದಕ್ಕೆ ಪ್ರತಿಯೊಂದು ಕಾರಣವಿದೆಯೆಂಬುದು ಸ್ಪಷ್ಟ. (ಪ್ರಕಟನೆ 21:2) ಆದರೆ ಕೊನೆಗಾದರೂ ಮಹಾ ಜಾರಸ್ತ್ರೀಯು ವಿಪತ್ತು, ಕೇಡು, ಮತ್ತು ವಿನಾಶವನ್ನು ಅನುಭವಿಸಿದೆ. ಅವಳ ಭೂತಾರಾಧಕ ಆಚಾರಗಳು ಮತ್ತು ಜ್ಯೋತಿಷ್ಯರುಗಳು ಅವಳನ್ನು ಕಾಪಾಡಲು ಅಶಕ್ತರಾಗಿದ್ದಾರೆ. (ಯೆಶಾಯ 47:1, 11-13ನ್ನು ಹೋಲಿಸಿರಿ.) ನಿಜವಾಗಿಯೂ, ಸತ್ಯಾರಾಧನೆಗೆ ಒಂದು ಪ್ರಧಾನ ವಿಜಯವು!

12 ಅಸಹ್ಯಕರ ಜಾರಸ್ತ್ರೀಯಾದ ಮಹಾ ಬಾಬೆಲಿನ ಸದಾಕಾಲ ಹೋಗುವುದರೊಂದಿಗೆ ಈಗ ಕುರಿಮರಿಯ ಶುದ್ಧ ಕನ್ಯೆಯ ವಧುವಿನ ಕಡೆಗೆ ಗಮನವನ್ನು ಕೇಂದ್ರೀಕರಿಸಸಾಧ್ಯವಿದೆ! ಆದಕಾರಣ, ಸ್ವರ್ಗೀಯ ಗುಂಪುಗಳು ವಿಜೃಂಭಣೆಯಿಂದ ಯೆಹೋವನಿಗೆ ಸ್ತುತಿಯಲ್ಲಿ ಹಾಡುತ್ತಿವೆ: “ಕುರಿಮರಿಯ ವಿವಾಹ ಬಂದಿದೆ ಆತನ ಹೆಂಡತಿಯು ತನ್ನನ್ನು ಸಿದ್ಧಮಾಡಿರುವ ಕಾರಣ ನಾವು ಸಂತೋಷಪಡೋಣ ಮತ್ತು ಹರ್ಷಗೊಳ್ಳೋಣ, ಮತ್ತು ಆತನನ್ನು ಘನಪಡಿಸೋಣ. ಹೌದು, ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು, ಯಾಕಂದರೆ ಆ ನಾರುಮಡಿಯು ಪವಿತ್ರಜನರ ಸತ್ಕಾರ್ಯಗಳನ್ನು ಸೂಚಿಸುತ್ತದೆ.”—ಪ್ರಕಟನೆ 19:7, 8, NW. 

13. ಶತಮಾನಗಳಿಂದಲೂ ಕುರಿಮರಿಯ ವಿವಾಹಕ್ಕೆ ಯಾವ ಸಿದ್ಧತೆಗಳು ನಡೆದಿವೆ?

13 ಶತಮಾನಗಳಿಂದಲೂ, ಯೇಸುವು ಈ ಸ್ವರ್ಗೀಯ ವಿವಾಹಕ್ಕೆ ಪ್ರೀತಿಯುಳ್ಳ ಸಿದ್ಧತೆಯನ್ನು ಮಾಡಿದ್ದಾನೆ. (ಮತ್ತಾಯ 28:20; 2 ಕೊರಿಂಥ 11:2) “ಅದನ್ನು ಕಳಂಕ ಸುಕ್ಕು ಮುಂತಾದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಲು” ಶಕ್ತವಾಗುವಂತೆ, ಆತ್ಮಿಕ ಇಸ್ರಾಯೇಲ್ಯರ 1,44,000 ಸದಸ್ಯರನ್ನು ಅವನು ಶುದ್ಧಿಮಾಡುತ್ತಾ ಇದ್ದನು. (ಎಫೆಸ 5:25-27) “ದೇವರು . . . ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು” ಪಡೆಯುವ ವೀಕ್ಷಣದೊಂದಿಗೆ, ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು ಹಳೇ ವ್ಯಕ್ತಿತ್ವವನ್ನು ಅದರ ಆಚಾರಗಳೊಂದಿಗೆ ಕಳಚಿ, ಹೊಸ ಕ್ರೈಸ್ತ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕಾಗಿದೆ, ಮತ್ತು “ಕರ್ತ [ಯೆಹೋವ, NW] ನಿಗೋಸ್ಕರವೇ ಎಂದು ಮನಃಪೂರ್ವಕವಾಗಿ” ನೀತಿಯ ಕೃತ್ಯಗಳನ್ನು ನಡಿಸಬೇಕಾಗಿದೆ.—ಫಿಲಿಪ್ಪಿ 3:8, 13, 14; ಕೊಲೊಸ್ಸೆ 3:9, 10, 23.

14. ಕುರಿಮರಿಯ ಹೆಂಡತಿಯ ಭಾವೀ ಸದಸ್ಯರನ್ನು ಮಲಿನಗೊಳಿಸಲು ಸೈತಾನನು ಹೇಗೆ ಪ್ರಯತ್ನಿಸಿದ್ದಾನೆ?

14 ಪಂಚಾಶತ್ತಮ ಸಾ. ಶ. 33 ರಿಂದ, ಸೈತಾನನು ಕುರಿಮರಿಯ ಹೆಂಡತಿಯ ಭಾವೀ ಸದಸ್ಯರನ್ನು ಮಲಿನಗೊಳಿಸುವ ಪ್ರಯತ್ನದಲ್ಲಿ ಮಹಾ ಬಾಬೆಲನ್ನು ತನ್ನ ಉಪಕರಣವಾಗಿ ಉಪಯೋಗಿಸಿದನು. ಮೊದಲನೆಯ ಶತಮಾನದ ಅಂತ್ಯದೊಳಗೆ, ಆತನು ಸಭೆಯಲ್ಲಿ ಬಾಬೆಲಿನ ಧರ್ಮದ ಬೀಜಗಳನ್ನು ಬಿತ್ತಿದನು. (1 ಕೊರಿಂಥ 15:12; 2 ತಿಮೊಥೆಯ 2:18; ಪ್ರಕಟನೆ 2:6, 14, 20) ನಂಬಿಕೆಯನ್ನು ಉರುಳಿಸುವವರನ್ನು ಅಪೊಸ್ತಲ ಪೌಲನು ಈ ಮಾತುಗಳಲ್ಲಿ ವರ್ಣಿಸುತ್ತಾನೆ: “ಆದರೆ ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳು” ತ್ತಾನೆ. (2 ಕೊರಿಂಥ 11:13, 14) ಹಿಂಬಾಲಿಸಿದ ಶತಮಾನಗಳಲ್ಲಿ, ಧರ್ಮಭ್ರಷ್ಟ ಕ್ರೈಸ್ತಪ್ರಪಂಚವು, ಮಹಾ ಬಾಬೆಲಿನ ಇತರರಂತೆ, ಸಂಪತ್ತು ಮತ್ತು ವಿಶೇಷಾಧಿಕಾರದ ಉಡುಪಿನಿಂದ ತನ್ನನ್ನು ಅಲಂಕರಿಸಿಕೊಂಡಿತು, “ಕೆನ್ನೀಲಿ ಮತ್ತು ಕಡುಗೆಂಪಿನ ವಸ್ತ್ರಾಲಂಕೃತಳಾಗಿ ಚಿನ್ನ, ರತ್ನ ಮತ್ತು ಮುತ್ತುಗಳಿಂದ ಭೂಷಿತಳಾಗಿದಳ್ದು.” (ಪ್ರಕಟನೆ 17:4, NW) ಅವಳ ವೈದಿಕರು ಮತ್ತು ಪೋಪರು ಕಾನ್ಸ್‌ಟೆಂಟೀನ್‌ ಮತ್ತು ಷಾರ್ಲ್‌ಮೇನ್‌ರಂತಹ ಹಿಂಸಕ ಸಾಮ್ರಾಟರೊಂದಿಗೆ ಜೊತೆಸೇರಿ ಇದ್ದರು. ಅವಳು “ಪವಿತ್ರಜನರ ಸತ್ಕಾರ್ಯಗಳಲ್ಲಿ” ಎಂದೂ ಭೂಷಿತಳಾಗಿರಲಿಲ್ಲ. ಒಬ್ಬ ಕೃತಕ ವಧುವಿನೋಪಾದಿ, ಅವಳು ನಿಜವಾಗಿಯೂ ಸೈತಾನ ಸಂಬಂಧಿತ ಕಪಟದ ನಾಯಕಕೃತಿಯಾಗಿದ್ದಾಳೆ. ಕೊನೆಗೆ, ಅವಳು ಸದಾಕಾಲಕ್ಕೂ ಹೋಗಿ ಬಿಟ್ಟಿದ್ದಾಳೆ.

ಕುರಿಮರಿಯ ಹೆಂಡತಿಯು ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ

15. ಮುದ್ರೆ ಒತ್ತಿಸುವಿಕೆಯು ಹೇಗೆ ನಡೆಯುತ್ತದೆ, ಮತ್ತು ಒಬ್ಬ ಅಭಿಷಿಕ್ತ ಕ್ರೈಸ್ತನಿಂದ ಯಾವುದನ್ನು ಅಪೇಕ್ಷಿಸಲಾಗುತ್ತದೆ?

15 ಈ ಕಾರಣದಿಂದ ಈಗ ಸುಮಾರು 2,000 ವರ್ಷಗಳ ಅನಂತರ, ವಧು ವರ್ಗದ ಎಲ್ಲಾ 1,44,000 ಮಂದಿ ತಮ್ಮನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ ಸಮಯದ ಯಾವ ಬಿಂದುವಿನಲ್ಲಿ ‘ಕುರಿಮರಿಯ ಹೆಂಡತಿಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆಂದು’ ಹೇಳಸಾಧ್ಯವಿದೆ? ಪ್ರಗತಿಪರವಾಗಿ, ಪಂಚಾಶತ್ತಮ ಸಾ. ಶ. 33 ರಿಂದ ಹಿಡಿದು, ನಂಬುವ ಅಭಿಷಿಕ್ತರು ಬರಲಿರುವ “ಪ್ರಾಯಶ್ಚಿತ್ತದಿಂದಾಗುವ ವಿಮೋಚನೆಯ ದಿನ”ದ ದೃಷ್ಟಿಯಲ್ಲಿ “ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿ” ದರು. ಅಪೊಸ್ತಲ ಪೌಲನು ಅದನ್ನು ವ್ಯಕ್ತಪಡಿಸಿದಂತೆಯೇ, ದೇವರು “ನಮ್ಮ ಮೇಲೆ ಮುದ್ರೆ ಹಾಕಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ.” (ಎಫೆಸ 1:13, NW; 4:30; 2 ಕೊರಿಂಥ 1:22) ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನು “ಕರೆಯಲ್ಪಟ್ಟವನೂ ಆದುಕೊಳ್ಳಲ್ಪಟ್ಟವನೂ ಆಗಿ” ದ್ದಾನೆ ಮತ್ತು ಅವನು ತನ್ನನ್ನು “ನಂಬಿಗಸ್ತ” ನಾಗಿ ರುಜುಪಡಿಸಿಕೊಂಡಿದ್ದಾನೆ.—ಪ್ರಕಟನೆ 17:14.

16. (ಎ) ಅಪೊಸ್ತಲ ಪೌಲನ ಮುದ್ರೆ ಒತ್ತಿಸುವಿಕೆಯು ಯಾವಾಗ ಪೂರ್ಣಗೊಂಡಿತು, ಮತ್ತು ನಮಗೆ ಅದು ಹೇಗೆ ತಿಳಿದಿದೆ? (ಬಿ) ಕುರಿಮರಿಯ ಹೆಂಡತಿಯು ಪೂರ್ಣವಾಗಿ ಯಾವಾಗ “ತನ್ನನ್ನು ತಯಾರಿಸಿಕೊಂಡಿರುವಳು”?

16 ದಶಕಗಳ ಶೋಧನೆಯ ಅನಂತರ, ಪೌಲನು ತಾನೇ ಹೀಗೆ ಘೋಷಿಸಸಾಧ್ಯವಾಯಿತು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ; ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ; ಅದನ್ನು ನೀತಿಯುಳ್ಳ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು; ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.” (2 ತಿಮೊಥೆಯ 4:7, 8) ಅವನು ಇನ್ನೂ ಶರೀರದಲ್ಲಿ ಇದ್ದು ಹುತಾತ್ಮತೆಯನ್ನು ಇನ್ನೂ ಎದುರಿಸಲಿಕ್ಕಿದ್ದರೂ, ಅಪೊಸ್ತಲನ ಮುದ್ರೆ ಒತ್ತುವಿಕೆಯು ಪೂರ್ಣವಾಗಿದ್ದ ಹಾಗೆ ತೋರುತ್ತದೆ. ತದ್ರೀತಿಯಲ್ಲಿ, ಭೂಮಿಯ ಮೇಲಿರುವ 1,44,000 ಸದಸ್ಯರ ಉಳಿದವರೆಲ್ಲರೂ ಯೆಹೋವನಿಗೆ ಸಂಬಂಧಪಟ್ಟವರಾಗಿ ವೈಯಕ್ತಿಕವಾಗಿ ಮುದ್ರೆಒತ್ತಲ್ಪಡುವ ಸಮಯವು ಬರಬೇಕು. (2 ತಿಮೊಥೆಯ 2:19) ಇದು ಕುರಿಮರಿಯ ಹೆಂಡತಿ ತನ್ನನ್ನು ಪೂರ್ತಿಯಾಗಿ ತಯಾರಿಸಿಕೊಂಡಾಗ—1,44,000 ಮಂದಿಯಲ್ಲಿ ಅತ್ಯಧಿಕಾಂಶ ಆಗಲೇ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದಿದ್ದು, ಭೂಮಿಯಲ್ಲಿ ಇನ್ನೂ ಇರುವವರು ಅಂತಿಮವಾಗಿ ಒಪ್ಪಲ್ಪಟ್ಟು ನಂಬಿಗಸ್ತರೆಂದು ಮುದ್ರೆ ಒತ್ತಿಸಲ್ಪಡುವಾಗ—ಆಗುವುದು.

17. ಕುರಿಮರಿಯ ವಿವಾಹವು ಯಾವಾಗ ನಡೆಯಸಾಧ್ಯವಿದೆ?

17 ಯೆಹೋವನ ಕಾಲತಖ್ತೆಯ ಈ ಬಿಂದುವಿನಲ್ಲಿ, 1,44,000 ಮಂದಿಯ ಮುದ್ರೆಒತ್ತಿಸುವಿಕೆಯು ಪೂರ್ಣತೆಗೆ ಮುಟ್ಟಿದಾಗ, ದೇವದೂತರು ಮಹಾ ಸಂಕಟದ ನಾಲ್ಕು ಗಾಳಿಗಳನ್ನು ಬಿಡುಗಡೆಗೊಳಿಸುತ್ತಾರೆ. (ಪ್ರಕಟನೆ 7:1-3) ಮೊಟ್ಟಮೊದಲು, ತೀರ್ಪು ವೇಶ್ಯೆಯಂತಿರುವ ಮಹಾ ಬಾಬೆಲಿನ ಮೇಲೆ ಜಾರಿಗೊಳ್ಳುತ್ತದೆ. ವಿಜಯೀ ಕ್ರಿಸ್ತನು ಭೂಮಿಯ ಮೇಲಿನ ಸೈತಾನನ ಸಂಸ್ಥೆಯ ಉಳಿದವುಗಳನ್ನು ನಾಶಮಾಡಲು ಬಲುಬೇಗನೇ ಅರ್ಮಗೆದೋನಿಗೆ ಮತ್ತು ಕೊನೆಯದಾಗಿ, ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಅಧೋಲೋಕಕ್ಕೆ ದೊಬ್ಬಲು ಮುಂದುವರಿಯುತ್ತಾನೆ. (ಪ್ರಕಟನೆ 19:11–20:3) ನಿಸ್ಸಂದೇಹವಾಗಿ, ಭೂಮಿಯ ಮೇಲೆ ಪಾರಾಗುವ ಅಭಿಷಿಕ್ತರು ಬೇಗನೇ ವಧು ವರ್ಗದ ತಮ್ಮ ಜೊತೆ ಸದಸ್ಯರೊಂದಿಗೆ ಸೇರಲು ಸ್ವರ್ಗೀಯ ಬಹುಮಾನದೆಡೆಗೆ ಪ್ರವೇಶಿಸಲಿರುವರು. ಆಗ ಸಾರ್ವತ್ರಿಕ ಶಾಂತಿಯ ವಾತಾವರಣದ ನಡುವೆ ಕುರಿಮರಿಯ ವಿವಾಹವು ಜರುಗಬಲ್ಲದು!

18. ಕುರಿಮರಿಯ ವಿವಾಹದ ಸಂಬಂಧದಲ್ಲಿಯಾದರೋ ಕೀರ್ತನೆ 45, ಘಟನೆಗಳ ಕ್ರಮಾನುಗತಿಯನ್ನು ಹೇಗೆ ದೃಢಪಡಿಸುತ್ತದೆ?

18ಕೀರ್ತನೆ 45 ರಲ್ಲಿನ ಘಟನೆಗಳ ಪ್ರವಾದನಾ ವರ್ಣನೆಯು ಆ ಕ್ರಮವನ್ನು ದೃಢಪಡಿಸುತ್ತದೆ. ಮೊದಲಾಗಿ ಸಿಂಹಾಸನಾಸೀನನಾದ ರಾಜನು ತನ್ನ ವಿರೋಧಿಗಳ ಮೇಲೆ ವಿಜಯ ಪಡೆಯಲಿಕ್ಕೋಸ್ಕರ ಸವಾರಿಮಾಡುತ್ತಾನೆ. (ವಚನಗಳು 1-7) ಅನಂತರ ಸ್ವರ್ಗೀಯ ವಧುವನ್ನು ಅವಳ ಸಖಿಯರಾದ ಮಹಾ ಸಮೂಹವು ಭೂಮಿಯ ಮೇಲೆ ಉಪಚರಿಸುವುದರೊಂದಿಗೆ ವಿವಾಹವು ಜರುಗುವುದು. (ವಚನಗಳು 8-15) ಮುಂದೆ “ದೇಶದಲ್ಲಿಲ್ಲಾ ಅಧಿಕಾರಿಗಳ” ಮೇಲ್ವಿಚಾರಣೆಯ ಕೆಳಗೆ, ಪುನರುತಿತ್ಥ ಮಾನವ ಕುಲವು ಪರಿಪೂರ್ಣತೆಗೇರಿಸಲ್ಪಡುವಾಗ, ವಿವಾಹವು ಫಲವತ್ತಾಗುವುದು. (ವಚನಗಳು 16, 17) ಕುರಿಮರಿಯ ವಿವಾಹದೊಂದಿಗೆ ಎಂಥ ಮಹಿಮಾಭರಿತ ಆಶೀರ್ವಾದಗಳು ಸೇರಿರುತ್ತವೆ!

ಆಮಂತ್ರಿಸಲ್ಪಡುವವರು ಸಂತೋಷಿಗಳು

19. ಪ್ರಕಟನೆಯಲ್ಲಿನ ಏಳು ಆನಂದಗಳಲ್ಲಿ ನಾಲ್ಕನೆಯದ್ದು ಯಾವುದು, ಮತ್ತು ಈ ನಿರ್ದಿಷ್ಟ ಸಂತೋಷದಲ್ಲಿ ಯಾರು ಪಾಲು ತೆಗೆದುಕೊಳ್ಳುತ್ತಾರೆ?

19 ಯೋಹಾನನು ಈಗ ಪ್ರಕಟನೆಯಲ್ಲಿರುವ ಏಳು ಸಂತೋಷಗಳಲ್ಲಿ ನಾಲ್ಕನೆಯದನ್ನು ದಾಖಲಿಸುತ್ತಾನೆ: “ಇದಲ್ಲದೆ ಅವನು [ಯೋಹಾನನಿಗೆ ಈ ಸಂಗತಿಗಳನ್ನು ಪ್ರಕಟಿಸುತ್ತಿದ್ದ ದೇವದೂತನು] ನನಗೆ ಹೇಳುವುದು: ‘ಬರೆ: ಕುರಿಮರಿಯ ವಿವಾಹದ ಸಾಯಂಕಾಲದ ಔತಣಕ್ಕೆ ಆಮಂತ್ರಿಸಲ್ಪಟ್ಟವರು ಸಂತೋಷಿಗಳು.’ ಅಲ್ಲದೆ, ಅವನು ನನಗಂದದ್ದು: ‘ಇವು ದೇವರ ಸತ್ಯ ವಚನಗಳಾಗಿವೆ.’” (ಪ್ರಕಟನೆ 19:9) * “ಕುರಿಮರಿಯ ವಿವಾಹದ ಸಾಯಂಕಾಲದ ಔತಣಕ್ಕೆ” ಆಮಂತ್ರಿಸಲ್ಪಟ್ಟವರು ವಧು ವರ್ಗದ ಸದಸ್ಯರಾಗಿದ್ದಾರೆ. (ಹೋಲಿಸಿರಿ ಮತ್ತಾಯ 22:1-14.) ಎಲ್ಲಾ ಅಭಿಷಿಕ್ತ ವಧುವಿನ ಸಮೂಹವು ಈ ಆಮಂತ್ರಣವನ್ನು ಪಡೆದಿರುವ ಸಂತೋಷದಲ್ಲಿ ಪಾಲುತೆಗೆದುಕೊಳ್ಳುತ್ತದೆ. ಆಮಂತ್ರಿತರಲ್ಲಿ ಅನೇಕರು ಈಗಾಗಲೇ ವಿವಾಹದೌತಣದ ಸ್ಥಳವಾದ ಪರಲೋಕಕ್ಕೆ ಹೋಗಿದ್ದಾರೆ. ಭೂಮಿಯ ಮೇಲೆ ಇನ್ನೂ ಇರುವವರೆಲ್ಲರಿಗೆ ಕೂಡ, ಆಮಂತ್ರಣವಿರುವುದರಿಂದ ಅವರೂ ಸಂತೋಷಿತರು. ವಿವಾಹದೌತಣದಲ್ಲಿ ಅವರ ಸ್ಥಾನವು ಭದ್ರವಾಗಿದೆ. (ಯೋಹಾನ 14:1-3; 1 ಪೇತ್ರ 1:3-9) ಅವರು ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ಅನಂತರ, ಇಡೀ, ಐಕ್ಯ ವಧುವು ಆ ಶ್ರೇಷ್ಠತಮ ಸಂತೋಷಭರಿತ ವಿವಾಹದಲ್ಲಿ ಕುರಿಮರಿಯೊಂದಿಗೆ ಪಾಲು ತೆಗೆದುಕೊಳ್ಳಲು ಮುಂದೆ ಸಾಗುವಳು.

20. (ಎ) “ಇವುಗಳು ದೇವರ ಸತ್ಯ ವಚನಗಳಾಗಿವೆ” ಎನ್ನುವ ಮಾತುಗಳ ಒಳಾರ್ಥವೇನಾಗಿದೆ? (ಬಿ) ದೇವದೂತನ ಮಾತುಗಳಿಂದ ಯೋಹಾನನು ಹೇಗೆ ಪ್ರಭಾವಿಸಲ್ಪಟ್ಟನು, ಮತ್ತು ದೇವದೂತನ ಪ್ರತಿಕ್ರಿಯೆ ಏನಾಗಿತ್ತು?

20 ದೇವದೂತನು ಕೂಡಿಸುತ್ತಾನೇನಂದರೆ “ಇವುಗಳು ದೇವರ ಸತ್ಯ ವಚನಗಳಾಗಿವೆ.” ಈ “ಸತ್ಯ” ಎಂಬ ಶಬ್ದವು, ಗ್ರೀಕ್‌ನ ಅ·ಲೆ·ಥಿ·ನೊಸ್‌΄ ನಿಂದ ಭಾಷಾಂತರಿಸಲಾಗಿದೆ ಮತ್ತು ಇದರ ಅರ್ಥ “ನೈಜ” ಅಥವಾ “ನಂಬಲರ್ಹ” ಎಂದಾಗಿದೆ. ಈ ವಚನಗಳು ನಿಜವಾಗಿಯೂ ಯೆಹೋವನಿಂದ ಬಂದದರ್ದಿಂದ ಅವು ನಂಬಿಗಸ್ತಿಕೆಯವುಗಳು ಮತ್ತು ವಿಶ್ವಾಸಾರ್ಹವಾದುವುಗಳು ಆಗಿವೆ. (ಹೋಲಿಸಿರಿ 1 ಯೋಹಾನ 4:1-3; ಪ್ರಕಟನೆ 21:5; 22:6.) ಆ ವಿವಾಹದೌತಣಕ್ಕೆ ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನೋಪಾದಿ, ಯೋಹಾನನು ಇದನ್ನು ಕೇಳುವಾಗ ಮತ್ತು ವಧು ವರ್ಗದ ಮುಂದಿರುವ ಆಶೀರ್ವಾದಗಳ ಕುರಿತು ಧ್ಯಾನಿಸುವಾಗ, ಉಲ್ಲಾಸದಿಂದ ತುಂಬಿರಲೇ ಬೇಕು. ಅವನು ನಿಜತ್ವದಲ್ಲಿ ಎಷ್ಟು ಆಳವಾಗಿ ಪ್ರೇರಿಸಲ್ಪಟ್ಟನೆಂದರೆ ದೇವದೂತನು ಅವನಿಗೆ ಸಲಹೆಯನ್ನು ಕೊಡಬೇಕಾಯಿತು, ಯೋಹಾನನು ಅದನ್ನು ಹೀಗೆ ವರ್ಣಿಸುತ್ತಾನೆ: “ಆಗ ನಾನು ಅವನನ್ನು ಆರಾಧಿಸಲು ಅವನ ಪಾದಗಳ ಮುಂದೆ ಬಿದ್ದೆನು. ಆದರೆ ಅವನು ನನಗೆ ಹೇಳುವುದು: ‘ಜಾಗ್ರತೆ! ಅದನ್ನು ಮಾಡಬೇಡ! ನಾನು ನಿನಗೂ ಯೇಸುವಿಗೆ ಸಾಕ್ಷಿ ಹೇಳುವ ಕಾರ್ಯವಿರುವ ನಿನ್ನ ಸಹೋದರರಿಗೂ ಜೊತೆಯ ದಾಸನು, ಅಷ್ಟೇ, ದೇವರನ್ನು ಆರಾಧಿಸು.’”—ಪ್ರಕಟನೆ 19:10ಎ, NW. 

21. (ಎ) ದೇವದೂತರ ಸಂಬಂಧದಲ್ಲಿಯಾದರೋ, ಪ್ರಕಟನೆಯು ಏನನ್ನು ಪ್ರಕಟಿಸುತ್ತದೆ? (ಬಿ) ದೇವದೂತರ ಕಡೆಗೆ ಕ್ರೈಸ್ತರು ಯಾವ ಮನೋಭಾವವನ್ನು ತಾಳಬೇಕು?

21 ಪ್ರಕಟನೆಯುದ್ದಕ್ಕೂ ದೇವದೂತರ ನಂಬಿಗಸ್ತಿಕೆ ಮತ್ತು ಶ್ರದ್ಧೆಯ ಕಾರ್ಯತತ್ಪರತೆಗೆ ಒಂದು ಗಮನಾರ್ಹ ಸಾಕ್ಷಿಯು ಕೊಡಲ್ಪಟ್ಟಿದೆ. ಅವರು ಪ್ರಕಟಿತ ಸತ್ಯದ ವಹನದಲ್ಲಿ ಒಳಗೂಡಿದ್ದಾರೆ. (ಪ್ರಕಟನೆ 1:1) ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಸಾಂಕೇತಿಕ ಬಾಧೆಗಳನ್ನು ಹೊಯ್ಯುವುದರಲ್ಲಿ ಮಾನವರೊಂದಿಗೆ ಅವರು ಜತೆಗೂಡಿ ಕೆಲಸ ನಡಿಸುತ್ತಾರೆ. (ಪ್ರಕಟನೆ 14:6, 7; 16:1) ಅವರು ಸೈತಾನನನ್ನು ಮತ್ತು ಅವನ ದೂತರನ್ನು ಪರಲೋಕದಿಂದ ದೊಬ್ಬಲು ಯೇಸುವಿನೊಟ್ಟಿಗೆ ಹೋರಾಡಿದರು, ಮತ್ತು ಅರ್ಮಗೆದೋನಿನಲ್ಲಿ ಪುನಃ ಒಮ್ಮೆ ಆತನೊಂದಿಗೆ ಅವರು ಹೋರಾಡಲಿದ್ದಾರೆ. (ಪ್ರಕಟನೆ 12:7; 19:11-14) ಅವರಿಗೆ ಯೆಹೋವನ ಸನ್ನಿಧಾನಕ್ಕೆ ಪ್ರವೇಶಾಧಿಕಾರವಿದೆ ಎಂಬುದು ನಿಜ. (ಮತ್ತಾಯ 18:10; ಪ್ರಕಟನೆ 15:6) ಹಾಗಿದ್ದಾಗ್ಯೂ, ಅವರು ದೇವರ ನಮ್ರ ದಾಸರಿಗಿಂತ ಹೆಚ್ಚಿನವರೇನಲ್ಲ. ಶುದ್ಧಾರಾಧನೆಯಲ್ಲಿ ದೇವದೂತರ ಆರಾಧನೆಗೆ ಅಥವಾ ಕೆಲವು “ಸಂತ” ಅಥವಾ ದೇವದೂತನ ಮೂಲಕ ದೇವರಿಗೆ ನಡಿಸುವ ಆರಾಧನೆಗೆ, ಯಾ ಸಂಬಂಧಿತ ಭಕ್ತಿಗೆ ಕೂಡ ಅವಕಾಶ ಅಲ್ಲಿಲ್ಲ. (ಕೊಲೊಸ್ಸೆ 2:18, NW) ಯೇಸುವಿನ ಹೆಸರಿನಲ್ಲಿ ತಮ್ಮ ಬಿನ್ನಹಗಳನ್ನು ಯೆಹೋವನಿಗೆ ಮಾಡುತ್ತಾ, ಕ್ರೈಸ್ತರು ಕೇವಲ ಆತನನ್ನು ಮಾತ್ರ ಆರಾಧಿಸುತ್ತಾರೆ.—ಯೋಹಾನ 14:12, 13.

ಪ್ರವಾದನೆಯಲ್ಲಿ ಯೇಸುವಿನ ಪಾತ್ರ

22. ದೇವದೂತನು ಯೋಹಾನನಿಗೆ ಏನು ಹೇಳುತ್ತಾನೆ, ಮತ್ತು ಆ ಮಾತುಗಳ ಅರ್ಥವೇನಾಗಿದೆ?

22 ದೇವದೂತನು ಅನಂತರ ಹೇಳುವುದು: “ಏಕೆಂದರೆ ಪ್ರವಾದಿಸುವುದನ್ನು ಪ್ರೇರಿಸುವುದು ಯೇಸುವಿಗೆ ಸಾಕ್ಷಿ ನೀಡುವಿಕೆಯೇ.” (ಪ್ರಕಟನೆ 19:10ಬಿ, NW)  ಇದು ಹೇಗೆ? ಇದರ ಅರ್ಥ, ಎಲ್ಲಾ ಪ್ರೇರಿತ ಪ್ರವಾದನೆಯು ಯೇಸುವಿನ ಕಾರಣದಿಂದ ಮತ್ತು ಯೆಹೋವನ ಉದ್ದೇಶಗಳಲ್ಲಿ ಆತನು ನಿರ್ವಹಿಸುತ್ತಿರುವ ಪಾತ್ರದಿಂದಾಗಿ ಎದ್ದುಬಂದಿದೆ. ಬೈಬಲಿನಲ್ಲಿ ಮೊದಲನೆಯ ಪ್ರವಾದನೆಯು ಸಂತಾನದ ಬರುವಿಕೆಯನ್ನು ವಾಗ್ದಾನಿಸಿತು. (ಆದಿಕಾಂಡ 3:15) ಯೇಸುವು ಆ ಸಂತಾನವಾದನು. ಈ ಮೂಲ ವಾಗ್ದಾನದ ಮೇಲೆ, ಅನಂತರದ ಪ್ರಕಟನೆಗಳು ಪ್ರವಾದನಾ ಸತ್ಯದ ಬಲುದೊಡ್ಡ ಭವನವನ್ನು ಕಟ್ಟಿದವು. ಅಪೊಸ್ತಲ ಪೇತ್ರನು ಅನ್ಯಜನಾಂಗದ ವಿಶ್ವಾಸಿ ಕೊರ್ನೇಲ್ಯನಿಗೆ ಹೇಳಿದ್ದು: “ಆತನ [ಯೇಸುವಿನ] ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿಹೇಳಿದ್ದಾರೆ.” (ಅ. ಕೃತ್ಯಗಳು 10:43) ಕೆಲವು 20 ವರ್ಷಗಳ ಅನಂತರ, ಅಪೊಸ್ತಲ ಪೌಲನು ಹೇಳಿದ್ದು: “ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ.” (2 ಕೊರಿಂಥ 1:20) ಯೋಹಾನನು ತಾನೇ 43 ವರ್ಷಗಳ ಅನಂತರವೂ ನಮಗೆ ನೆನಪಿಸುವುದು: “ಸತ್ಯವು ಯೇಸು ಕ್ರಿಸ್ತನ ಮುಖಾಂತರ ಬಂದಿತು.”—ಯೋಹಾನ 1:17, NW.

23. ಯೇಸುವಿನ ಅತ್ಯುನ್ನತ ಸ್ಥಾನ ಮತ್ತು ಅಧಿಕಾರವು ಯೆಹೋವ ದೇವರಿಗೆ ನಾವು ಕೊಡುವ ಆರಾಧನೆಯಿಂದ ಅಪಕರ್ಷಿಸುವುದಿಲ್ಲವೇಕೆ?

23 ಯೆಹೋವನಿಗೆ ನಾವು ಕೊಡುವ ಆರಾಧನೆಯಿಂದ ಇದು ಯಾವ ರೀತಿಯಲ್ಲಿಯಾದರೂ ಅಪಕರ್ಷಿಸುತ್ತದೋ? ಇಲ್ಲ. ದೇವದೂತನ ಎಚ್ಚರಿಕೆಯುಳ್ಳ ಸಲಹೆಯನ್ನು ನೆನಪಿಸಿರಿ: “ದೇವರನ್ನು ಆರಾಧಿಸು.” ಯೆಹೋವನೊಂದಿಗೆ ಪ್ರತಿಸ್ಪರ್ಧಿಸಲು ಯೇಸುವು ಎಂದಿಗೂ ಪ್ರಯತ್ನಿಸುವುದಿಲ್ಲ. (ಫಿಲಿಪ್ಪಿ 2:6) ದೇವದೂತರೆಲ್ಲರೂ “[ಯೇಸುವಿಗೆ] ಅಡ್ಡಬೀಳ” ಬೇಕೆಂದು ಹೇಳಿದ್ದು ನಿಜ, ಮತ್ತು ಎಲ್ಲಾ ಸೃಷ್ಟಿಯು ಆತನ ಉಚ್ಚ ಸ್ಥಾನವನ್ನು ಒಪ್ಪಿಕೊಂಡು “ಎಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡ” ಬೀಳತಕ್ಕದ್ದು. ಆದರೆ ಗಮನಿಸಿರಿ, ಇದು “ತಂದೆಯಾದ ದೇವರಿಗೆ ಘನವನ್ನು ಸಲ್ಲಿಸಲಿ” ಕ್ಕಾಗಿಯೂ ಮತ್ತು ಅವನ ಆಜ್ಞೆಯಿಂದಾಗಿಯೂ ಇದೆ. (ಇಬ್ರಿಯ 1:6; ಫಿಲಿಪ್ಪಿ 2:9-11) ಯೆಹೋವನು ಯೇಸುವಿಗೆ ಅವನ ಅತ್ಯುನ್ನತ ಅಧಿಕಾರವನ್ನು ಕೊಟ್ಟನು, ಮತ್ತು ಆ ಅಧಿಕಾರವನ್ನು ಒಪ್ಪಿಕೊಳ್ಳುವುದರಿಂದ, ನಾವು ದೇವರಿಗೆ ಘನವನ್ನು ಕೊಡುತ್ತೇವೆ. ನಾವು ಯೇಸುವಿನ ಆಳಿಕ್ವೆಗೆ ಅಧೀನರಾಗಲು ನಿರಾಕರಿಸಿದರೆ, ಇದು ಯೆಹೋವ ದೇವರನ್ನು ತಾನೇ ನಿರಾಕರಿಸುವುದಕ್ಕೆ ಸಮಾನವಾಗಿದೆ.—ಕೀರ್ತನೆ 2:11, 12.

24. ಯಾವ ಎರಡು ಬೆರಗುಗೊಳಿಸುವ ಘಟನೆಗಳನ್ನು ನಾವು ನಿರೀಕ್ಷಿಸುತ್ತೇವೆ, ಆದುದರಿಂದಲೇ ನಾವು ಯಾವ ಮಾತುಗಳನ್ನು ಧ್ವನಿಸಬೇಕು?

24 ಆದುದರಿಂದ, ಕೀರ್ತನೆಗಳು 146 ರಿಂದ 150ರ ಮೊದಲ ಮಾತುಗಳನ್ನು ನಾವೆಲ್ಲರು ಐಕ್ಯದಿಂದ ಧ್ವನಿಸೋಣ: “ನೀವು ಜನರೇ ಯಾಹುವನ್ನು ಸ್ತುತಿಸಿರಿ!” ಬಾಬೆಲಿನ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಮೇಲೆ ಯೆಹೋವನ ವಿಜಯದ ನಿರೀಕ್ಷಣೆಯಲ್ಲಿ ಹಲ್ಲೆಲೂಯಾ ಮೇಳಗೀತವು ಉದ್ದಕ್ಕೂ ಘಣಘಣಿಸುವಂತಾಗಲಿ! ಮತ್ತು ಕುರಿಮರಿಯ ವಿವಾಹವು ಹತ್ತರಿಸುವಷ್ಟಕ್ಕೆ, ಹರ್ಷವು ತುಂಬುವಂತಾಗಲಿ!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 1 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

^ ಪ್ಯಾರ. 5 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

^ ಪ್ಯಾರ. 9 ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

^ ಪ್ಯಾರ. 19 [This footnote is not in vernacular]

ಪ್ರಕಟನೆ 1:3; 14:13; 16:15ನ್ನು ಕೂಡ ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 384 ರಲ್ಲಿರುವ ಚೌಕ]

“ಸೊದೋಮ್‌ ಮತ್ತು ಗೊಮೋರಗಳಿಗೆ ಪತ್ರ”

ಈ ವೈಶಿಷ್ಟ್ಯದ ಶೀರ್ಷಿಕೆಯ ಕೆಳಗೆ, ಲಂಡನಿನ ನವಂಬರ 12, 1987ರ ಡೆಯ್ಲಿ ಟೆಲಿಗ್ರಾಫ್‌, ಇಂಗ್ಲೆಂಡಿನ ಚರ್ಚಿನ ಅನಿರ್ದಿಷ್ಟ ಧರ್ಮ ವ್ಯವಸ್ಥಾಪಕರ ಸಭೆಯ ಮುಂದಿನ ಒಂದು ಮನವಿಯ ಮೇಲೆ ವರದಿಸಿತು. ಚರ್ಚಿನಿಂದ ಸಲಿಂಗಕಾಮಿ “ಕ್ರೈಸ್ತರನ್ನು” ಹೊರಗೆಸೆಯಲು ಇದು ಕರೆನೀಡಿತು. ಪತ್ರಿಕೋದ್ಯಮಿ ಗಾಡ್‌ಫ್ರೇ ಬಾರ್ಕರ್‌ ತಿಳಿಸಿದ್ದು: “ಕ್ಯಾಂಟರ್‌ಬೆರಿಯ ಆರ್ಚ್‌ ಬಿಷಪರು ನಿನ್ನೆ ನಿರಾಶೆಯಿಂದ ಹೀಗೆ ಅಭಿಪ್ರಾಯಪಟ್ಟರು: ‘ಸಂತ ಪೌಲನು ಇಂಗ್ಲೆಂಡಿನ ಚರ್ಚಿಗೊಂದು ಪತ್ರವನ್ನು ಬರೆದಿದ್ದರೆ, ನಾವು ಯೋಗ್ಯವಾಗಿಯೇ ಅದು ಯಾವ ತರಹದ ಕಾಗದವಾಗಿರಬಲ್ಲದೆಂದು ಕೇಳಬಹುದು.’ ಮಿಸ್ಟರ್‌ ಬಾರ್ಕರ್‌ ತಾನೇ ವರದಿಸಿದ್ದು: “ಸೊದೋಮ್‌ ಮತ್ತು ಗೊಮೋರಕ್ಕೆ ಪತ್ರವೆಂಬುದೇ ಉತ್ತರವಾಗಿದೆ.” ಮತ್ತು ಕೂಡಿಸಿದ್ದು: “ಅದು ರೋಮಾಪುರ ಅಧ್ಯಾಯ 1 ರಂತೆ ಓದಲ್ಪಡಬಹುದೆಂದು ಡಾಕ್ಟರ್‌ ರನ್‌ಸೀ [ಆರ್ಚ್‌ ಬಿಷಪ್‌] ಊಹಿಸಿದರು.”

ಲೇಖಕನು ಪೌಲನ ಮಾತುಗಳನ್ನು ಉಲ್ಲೇಖಿಸುತ್ತಾನೆ, ಅದು ರೋಮಾಪುರ 1:26-32 ರಲ್ಲಿದೆ: “ದೇವರು ಅವರನ್ನು ಕೇವಲ ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು. . . . ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣವಾದದ್ದನ್ನು ನಡಿಸಿ, . . . ಇಂಥವುಗಳನ್ನು ನಡಿಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೇವವಿಧಿಯು ಅವರಿಗೆ ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವದಲ್ಲದೆ ಮಾಡುವವರನ್ನೂ ಅನುಮೋದಿಸುತ್ತಾರೆ.” ಅವನು ಸಮಾಪ್ತಿಗೊಳಿಸಿದ್ದು: “ಸಂತ ಪೌಲನು ಚರ್ಚಿನ ಕೇವಲ ಒರಗುಬೆನ್ನಿನ ನೆಟ್ಟ ಬೆಂಚುಗಳಲ್ಲಿರುವ ಮನುಷ್ಯರ ಕುರಿತು ಚಿಂತಿತನಾಗಿದ್ದನು. ಡಾಕ್ಟರ್‌ ರನ್‌ಸೀಯ ಸಮಸ್ಯೆಯು ಉಪದೇಶವೇದಿಕೆಯಲ್ಲಿರುವ ಮನುಷ್ಯರದ್ದಾಗಿದೆ.”

ಆರ್ಚ್‌ ಬಿಷಪನಿಗೆ ಅಂಥ ಸಮಸ್ಯೆಯೊಂದು ಇರುವುದು ಯಾಕೆ? ಅಕ್ಟೋಬರ 22, 1987ರ ಲಂಡನಿನ ಡೆಯ್ಲಿ ಮೇಲ್‌ ನಲ್ಲಿ ದೊಡ್ಡ ಶೀರ್ಷಿಕೆಗಳು ಘೋಷಿಸಿದ್ದು: “‘ಮೂವರಲ್ಲಿ ಒಬ್ಬ ಪಾದ್ರಿ ಸಲಿಂಗಿ’ . . . ಸಲಿಂಗಕಾಮಿಗಳನ್ನು ಓಡಿಸುವ ಕಾರ್ಯಾಚರಣೆಯು ‘ಇಂಗ್ಲೆಂಡಿನ ಚರ್ಚ್‌ನ್ನು ಮುಚ್ಚಿಸುವುದು.’” ವರದಿಗಳು ಸ್ತ್ರೀ ಸಲಿಂಗಕಾಮ ಮತ್ತು ಸಲಿಂಗಿ ಕ್ರೈಸ್ತ ಚಳುವಳಿಯ “ರೆವರೆಂಡ್‌” ಕಾರ್ಯಾಧ್ಯಕ್ಷ ಸೆಕ್ರಿಟರಿಯನ್ನು ಉಲ್ಲೇಖಿಸಿದವು: “ಈ ಮನವಿಯನ್ನು ಸ್ವೀಕರಿಸಿದ್ದರೆ, ಅದು ಚರ್ಚನ್ನು ನಾಶಮಾಡಸಾಧ್ಯವಿತ್ತು, ಮತ್ತು ಕ್ಯಾಂಟರ್‌ಬೆರಿಯ ಆರ್ಚ್‌ ಬಿಷಪ್‌ರಿಗೆ ಅದು ತಿಳಿದೇ ಇದೆ. ಸಾಮಾನ್ಯ ಸಂಕೇತವೊ ಎಂಬಂತೆ, ಇಂಗ್ಲೆಂಡಿನ ಚರ್ಚಿನ 30 ಮತ್ತು 40 ಶೇಕಡದಷ್ಟು ವೈದಿಕರು ಸಲಿಂಗಿಗಳಾಗಿದ್ದಾರೆಂದು ನಾವು ನಂಬುತ್ತೇವೆ. ಮತ್ತು ಚರ್ಚಿನ ಮಂಡಲಿಗೆ ಕೊಡುಗೆ ನೀಡುವ ಅತಿ ಸಕ್ರಿಯ ಜನರು ಇವರಾಗಿದ್ದಾರೆ.” ಚರ್ಚ್‌ಗಳಿಗೆ ಹೋಗುವವರ ಕುಗ್ಗುವ ಸಂಖ್ಯೆಯು ಆ ಬೆಳೆಯುತ್ತಿರುವ ಸಲಿಂಗಕಾಮಿ ಮಂಡಲಿಗೆ ಭಾಗಶಃ ಅಸಹ್ಯತೆಯ ಪ್ರತಿಬಿಂಬವಾಗಿದೆ ಎಂಬದು ನಿಸ್ಸಂಶಯ.

ಚರ್ಚ್‌ ಸಿನೋಡ್‌ ಯಾವ ತೀರ್ಮಾನ ಮಾಡಿತು? ಮುನ್ನೂರ ಎಂಭತ್ತೆಂಟು ಸದಸ್ಯರಲ್ಲಿ (ವೈದಿಕರ 95 ಪ್ರತಿಶತ) ಅತ್ಯಧಿಕಾಂಶ ಸಂಖ್ಯೆಯವರು ಈ ತೀಕ್ಷೈತೆ ಕಡಮೆ ಮಾಡಿದ ಮನವಿಗೆ ಮತಕೊಟ್ಟರು. ಈ ಸಂಬಂಧವಾಗಿ, ನವಂಬರ 14, 1987ರ ದಿ ಈಕಾನೊಮಿಸ್ಟ್‌ ವರದಿಸಿದ್ದು: “ಇಂಗ್ಲೆಂಡಿನ ಚರ್ಚ್‌ ಸಲಿಂಗಕಾಮಿ ಆಚಾರಗಳ ವಿರುದ್ಧವಾಗಿದೆ, ಆದರೆ ಬಹಳವಾಗಿಯಲ್ಲ—ಜನರಲ್‌ ಸಿನೋಡ್‌, ಚರ್ಚಿನ ಸಂವಿಧಾನವು, ಸಲಿಂಗಕಾಮಿ ವೈದಿಕರನ್ನು ಮನಸ್ಸಿನಲ್ಲಿಟ್ಟು, ಈ ವಾರದಲ್ಲಿ ತೀರ್ಮಾನಿಸಿತೇನಂದರೆ ಸಲಿಂಗಕಾಮಿ ಕೃತ್ಯಗಳು ಜಾರತ್ವ ಮತ್ತು ವ್ಯಭಿಚಾರದಂತೆ, ಪಾಪ ಅಲ್ಲ; ‘ಲೈಂಗಿಕ ಸಂಭೋಗವು ಶಾಶ್ವತ ಮದುವೆಯ ಸಂಬಂಧದೊಳಗೆ ಸರಿಯಾಗಿ ಸೇರಿರುವ ಪೂರ್ಣ ವಚನಬದ್ಧ ಕೃತ್ಯವಾಗಿದೆ’ ಎನ್ನುವ ‘ಆದರ್ಶಕ್ಕೆ ಅವರು ಕೇವಲ ತಪ್ಪಿಬೀಳುತ್ತಾರೆ.’” ಕ್ಯಾಂಟರ್‌ಬೆರಿಯ ಆರ್ಚ್‌ಬಿಷಪರ ಭಂಗಿಯನ್ನು ರೋಮಾಪುರ 1:26, 27 ರಲ್ಲಿರುವ ಅಪೊಸ್ತಲ ಪೌಲನ ನೇರ ಹೇಳಿಕೆಗಳೊಂದಿಗೆ ತಾಳೆ ಮಾಡುವಾಗ ದಿ ಈಕಾನೊಮಿಸ್ಟ್‌ “ತಾನು ಏನನ್ನು ಯೋಚಿಸಿದ್ದನೋ ಅದು ಸಂತ ಪೌಲನಿಗೆ ಗೊತ್ತಿತ್ತು,” ಎನ್ನುವ ಶಿರೋನಾಮದ ಮೇಲೆ ಪೌಲನ ಮಾತುಗಳ ಉದ್ಗಾರವನ್ನು ಪ್ರದರ್ಶಿಸಿತು.

ತಾನೇನು ಯೋಚಿಸಿದ್ದನೋ ಅದನ್ನು ಯೇಸು ಕ್ರಿಸ್ತನು ಕೂಡ ತಿಳಿದಿದ್ದನು ಮತ್ತು ಸ್ಪಷ್ಟವಾದ ಶಬ್ದಗಳಲ್ಲಿ ತಿಳಿಯಪಡಿಸಿದನು. ತನ್ನ ಸಂದೇಶವನ್ನು ಧಿಕ್ಕರಿಸಿದ ಧಾರ್ಮಿಕ ವ್ಯಕ್ತಿಗಳಿಗಿಂತ “ನ್ಯಾಯವಿಚಾರಣೆಯ ದಿನದಲ್ಲಿ ಸೊದೋಮ್‌ ಸೀಮೆಯ ಗತಿಯು ಮೇಲಾಗಿರುವದು” ಎಂದು ಆತನು ಹೇಳಿದ್ದನು. (ಮತ್ತಾಯ 11:23, 24) ಯೇಸುವು ಇಲ್ಲಿ, ಮನುಷ್ಯ ಕುಮಾರನನ್ನು ಮತ್ತು ಆತನ ಕಲಿಸುವಿಕೆಯನ್ನು ನಿರಾಕರಿಸಿದ ಆ ಧಾರ್ಮಿಕ ಮುಖಂಡರ ಗತಿಯು ಸೊದೋಮ್ಯರಿಗಿಂತ ಇನ್ನೂ ಹೆಚ್ಚು ದೂಷಣೀಯವಾಗಲಿರುವುದೆಂದು ತೋರಿಸಲು ಅತ್ಯುಕ್ತಿಯನ್ನು ಉಪಯೋಗಿಸಿದ್ದನು. ಆ ಸೊದೋಮ್ಯರು “ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು” ಅಂದರೆ ನಿತ್ಯ ನಾಶನವನ್ನು ಅನುಭವಿಸಿದರು ಎಂಬುದಾಗಿ ಯೂದ 7 ತಿಳಿಸುತ್ತದೆ. (ಮತ್ತಾಯ 25:41, 46) ಹಾಗಾದರೆ, ದೇವರ ರಾಜ್ಯದ ಉಚ್ಚ ನೈತಿಕ ಮಟ್ಟಗಳಿಂದ ಈ ಲೋಕದ ಸ್ವೇಚ್ಛಾಚಾರದ, ವಿಷಯಲಂಪಟತನದ ದಾರಿಗಳೊಳಗೆ ತಮ್ಮ ನೀತಿಪರಿಜ್ಞಾನವಿಲ್ಲದ ಮಂದೆಗಳನ್ನು ಅಂಧತೆಯಿಂದ ನಡಿಸಿದ ಕ್ರೈಸ್ತ ಮುಖಂಡರೆಂದು ಕರೆಸಿಕೊಳ್ಳುವವರ ಮೇಲೆ ಬರಲಿರುವ ನ್ಯಾಯತೀರ್ಪು ಎಷ್ಟು ಕಠಿನವಾಗಿರುವುದು! (ಮತ್ತಾಯ 15:14) ಸುಳ್ಳು ಧರ್ಮದ ಯಾ ಮಹಾ ಬಾಬೆಲಿನ ಕುರಿತು, ಪರಲೋಕದಿಂದ ಬಂದ ಶಬ್ದವು ಜರೂರಿಯಿಂದ ಕರೆನೀಡುವುದು: “ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ಪಡೆಯಲು ನೀವು ಬಯಸದಿದ್ದರೆ, ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ.”—ಪ್ರಕಟನೆ 18:2, 4, NW.

[ಪುಟ 386 ರಲ್ಲಿರುವ ಚಿತ್ರಗಳು]

ಮಹಾ ಬಾಬೆಲಿನ ಮೇಲೆ ಅವನ ಅಂತಿಮ ವಿಜಯಕ್ಕಾಗಿ ಯಾಹುವನ್ನು ಸ್ತುತಿಸುವ ನಾಲ್ಕು ಹಲ್ಲೆಲೂಯಾಗಳು ಪರಲೋಕದಲ್ಲಿ ಘಣಘಣಿಸುತ್ತವೆ