ಅಪ್ಪಂದಿರು
ಅಪ್ಪಂದಿರ ಜವಾಬ್ದಾರಿ ಏನು?
ಧರ್ಮೋ 6:6, 7; ಎಫೆ 6:4; 1ತಿಮೊ 5:8; ಇಬ್ರಿ 12:9, 10
ಬೈಬಲ್ ಉದಾಹರಣೆಗಳು:
ಆದಿ 22:2; 24:1-4—ಅಬ್ರಹಾಮನಿಗೆ ಇಸಾಕನ ಮೇಲೆ ತುಂಬ ಪ್ರೀತಿ ಇತ್ತು, ಅದಕ್ಕೆ ತನ್ನ ಮಗನಿಗೋಸ್ಕರ ಯೆಹೋವನನ್ನ ಆರಾಧನೆ ಮಾಡೋ ಹುಡುಗಿನೇ ಹುಡುಕಿ ತಂದ
ಮತ್ತಾ 13:55; ಮಾರ್ಕ 6:3—ಯೇಸುನ ಜನ “ಬಡಗಿ ಮಗ”, “ಬಡಗಿ” ಅಂತ ಕರೆದ್ರು; ಹಾಗಾಗಿ ಯೋಸೇಫ ತನ್ನ ಮಗನಿಗೆ ಒಂದು ಕೈಕೆಲಸ ಕಲಿಸಿದ್ದ ಅಂತ ಗೊತ್ತಾಗುತ್ತೆ
ಅಪ್ಪಂದಿರಿಗೆ ಪ್ರೀತಿ, ಗೌರವ ಕೊಡಬೇಕು ಯಾಕೆ?
ಇದನ್ನೂ ನೋಡಿ: ಮತ್ತಾ 6:9
ಬೈಬಲ್ ಉದಾಹರಣೆಗಳು:
ಹೋಶೇ 11:1, 4—ಒಬ್ಬ ಅಪ್ಪ ತನ್ನ ಮಕ್ಕಳನ್ನ ಚೆನ್ನಾಗಿ ನೋಡ್ಕೊಳ್ಳೋ ತರಾನೇ ಯೆಹೋವ ತನ್ನ ಜನ್ರಿಗೆ ಮೃದುವಾಗಿ ಕಲಿಸ್ತಾನೆ, ಅವ್ರನ್ನ ಕಣ್ಮಣಿಗಳ ಹಾಗೆ ನೋಡ್ಕೊಳ್ತಾನೆ. ಹೀಗೆ ಅಪ್ಪಂದಿರಿಗೆ ತನ್ನ ದೃಷ್ಟಿಯಲ್ಲಿ ತುಂಬ ಬೆಲೆ ಇದೆ ಅಂತ ತೋರಿಸಿದ್ದಾನೆ
ಲೂಕ 15:11-32—ಪಾಪ ಮಾಡಿ ಪಶ್ಚಾತ್ತಾಪ ಪಡೋರಿಗೆ ಯೆಹೋವ ಕರುಣೆ ತೋರಿಸ್ತಾನೆ ಅನ್ನೋದಕ್ಕೆ ಯೇಸು ಒಂದು ಉದಾಹರಣೆ ಹೇಳಿದನು. ಅದ್ರಲ್ಲಿ ಯೆಹೋವ ದೇವರನ್ನ ಅಪ್ಪಂದಿರಿಗೆ ಹೋಲಿಸಿದ್ದಾನೆ. ಇದ್ರಿಂದ ಅಪ್ಪಂದಿರ ಮೇಲೆ ಯೇಸುಗೆ ಎಷ್ಟು ಗೌರವ ಇದೆ ಅಂತ ಗೊತ್ತಾಗುತ್ತೆ