ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಟ್ಟ ಗುಣಗಳು

ಕೆಟ್ಟ ಗುಣಗಳು

ಯಾವ ಗುಣಗಳು ನಮ್ಮಲ್ಲಿ ಇರಬಾರದು?

ಕೋಪ

ಕೀರ್ತ 37:8, 9; ಜ್ಞಾನೋ 29:22; ಕೊಲೊ 3:8

ಇದನ್ನೂ ನೋಡಿ: ಜ್ಞಾನೋ 14:17; 15:18

  • ಬೈಬಲ್‌ ಉದಾಹರಣೆಗಳು:

    • ಆದಿ 37:18, 19, 23, 24, 31-35—ಯೋಸೇಫನ ಅಣ್ಣಂದಿರು ಅವನನ್ನ ಕೊಲ್ಲೋಕೆ ಸಂಚು ಮಾಡಿದ್ರು, ಅವನನ್ನ ಮಾರಿಬಿಟ್ರು, ಅವನು ಸತ್ತು ಹೋದ ಅಂತ ಯಾಕೋಬ ಅಂದ್ಕೊಳ್ಳೋ ತರ ಮಾಡಿದ್ರು

    • ಆದಿ 49:5-7—ಸಿಮೆಯೋನ ಮತ್ತು ಲೇವಿ ಕೋಪ-ರೋಷದಿಂದ ಮಾಡಿದ ಕೆಲಸದ ಪರಿಣಾಮ ಅನುಭವಿಸಬೇಕಾಯ್ತು

    • 1ಸಮು 20:30-34—ಸೌಲನಿಗೆ ಕೋಪ ನೆತ್ತಿಗೇರಿದ್ರಿಂದ ಮಗನಾದ ಯೋನಾತಾನನನ್ನ ಅವಮಾನ ಮಾಡಿದ, ಕೊಲ್ಲೋಕೆ ನೋಡಿದ

    • 1ಸಮು 25:14-17—ನಾಬಾಲ ಜೋರಾಗಿ ಕೂಗಾಡಿ ದಾವೀದನ ಜನ್ರನ್ನ ಅವಮಾನ ಮಾಡಿದ, ಇದ್ರಿಂದ ಅವನ ಮನೆಯವ್ರೆಲ್ಲ ಜೀವ ಕಳ್ಕೊಳ್ಳೋ ಪರಿಸ್ಥಿತಿ ಬಂತು

ಜಗಳ ಮಾಡೋ ಸ್ವಭಾವ

ಹೇಡಿತನ

ಕಲ್ಲುಹೃದಯ

ಧರ್ಮೋ 15:7, 8; ಮತ್ತಾ 19:8; 1ಯೋಹಾ 3:17

  • ಬೈಬಲ್‌ ಉದಾಹರಣೆಗಳು:

    • ಆದಿ 42:21-24—ಯೋಸೇಫನ ಅಣ್ಣಂದಿರು ಅವನ ಜೊತೆ ಸ್ವಲ್ಪನೂ ಕರುಣೆ ಇಲ್ಲದೆ ನಡ್ಕೊಂಡಿದ್ದನ್ನ ನೆನಸ್ಕೊಂಡು ಅವರು ಬೇಜಾರ್‌ ಮಾಡ್ಕೊಂಡ್ರು

    • ಮಾರ್ಕ 3:1-6—ಫರಿಸಾಯರ ಹೃದಯ ಕಲ್ಲು ತರ ಇರೋದನ್ನ ನೋಡಿ ಯೇಸುಗೆ ತುಂಬ ಬೇಜಾರಾಯ್ತು

ಅಗೌರವ

ಅಗೌರವ” ನೋಡಿ

ನಾನೇ ಮೇಲು ಅನ್ನೋ ಭಾವನೆ

ಗಲಾ 5:26; ಫಿಲಿ 2:3

ಇದನ್ನೂ ನೋಡಿ: ಜ್ಞಾನೋ 3:7; 26:12; ರೋಮ 12:16

  • ಬೈಬಲ್‌ ಉದಾಹರಣೆಗಳು:

    • 2ಸಮು 15:1-6—ಅಬ್ಷಾಲೋಮ ಕೊಚ್ಕೊಳ್ತಿದ್ದ, ಜನರು ದಾವೀದನಿಗಿಂತ ತನ್ನನ್ನ ಇಷ್ಟಪಡಬೇಕು ಅಂತ ಕುತಂತ್ರಗಳನ್ನ ಮಾಡಿದ

    • ದಾನಿ 4:29-32—ನೆಬೂಕದ್ನೆಚ್ಚರನಿಗೆ ತುಂಬ ಅಹಂಕಾರ ಇತ್ತು, ಅದಕ್ಕೆ ಯೆಹೋವ ಅವನಿಗೆ ಶಿಕ್ಷೆ ಕೊಡಬೇಕಾಯ್ತು

ಹೊಟ್ಟೆಕಿಚ್ಚು; ಬೇರೆಯವ್ರ ವಸ್ತು ಮೇಲೆ ಆಸೆ

ರೋಮ 13:9; 1ಪೇತ್ರ 2:1

ಇದನ್ನೂ ನೋಡಿ: ಗಲಾ 5:26; ತೀತ 3:3

  • ಬೈಬಲ್‌ ಉದಾಹರಣೆಗಳು:

    • ಆದಿ 26:12-15—ಕಷ್ಟಪಟ್ಟು ಕೆಲಸ ಮಾಡ್ತಿದ್ದ ಇಸಾಕನನ್ನ ಯೆಹೋವ ಆಶೀರ್ವದಿಸಿದನು, ಅದನ್ನ ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚು ಪಟ್ರು

    • 1ಅರ 21:1-19—ಅಹಾಬ ನಾಬೋತನ ದ್ರಾಕ್ಷಿತೋಟನ ಆಸೆ ಪಟ್ಟ, ಅದನ್ನ ಪಡ್ಕೊಳ್ಳೋಕೆ ನಾಬೋತನ ಮೇಲೆ ಆರೋಪ ಹಾಕಿ ಕೊಂದೇಬಿಟ್ಟ

ಮನುಷ್ಯರ ಭಯ

ಕೀರ್ತ 118:6; ಜ್ಞಾನೋ 29:25; ಮತ್ತಾ 10:28

  • ಬೈಬಲ್‌ ಉದಾಹರಣೆಗಳು:

    • ಅರ 13:25-33—ಇಸ್ರಾಯೇಲ್ಯರ 10 ಗೂಢಚಾರರು ಶತ್ರುಗಳಿಗೆ ಭಯಪಟ್ರು, ಅವ್ರ ಮಾತನ್ನ ಕೇಳಿ ಜನರೂ ಭಯಪಟ್ರು

    • ಮತ್ತಾ 26:69-75—ಅಪೊಸ್ತಲ ಪೇತ್ರ ಜನ್ರಿಗೆ ಭಯಪಟ್ಟು ಯೇಸು ಯಾರಂತಾನೇ ಗೊತ್ತಿಲ್ಲ ಅಂತ ಮೂರು ಸಲ ಸುಳ್ಳು ಹೇಳಿದ

ಅತಿಯಾಸೆ

ಅತಿಯಾಸೆ” ನೋಡಿ

ದ್ವೇಷ

1ಸಮು 30:6; ಜ್ಞಾನೋ 10:12; ಎಫೆ 4:31; ಕೊಲೊ 3:19; ತೀತ 3:3; 1ಯೋಹಾ 4:20

ಇದನ್ನೂ ನೋಡಿ: ಅರ 35:19-21; ಮತ್ತಾ 5:43, 44; ಯಾಕೋ 3:14

  • ಬೈಬಲ್‌ ಉದಾಹರಣೆ:

    • ಓಬ 10-14—ಎದೋಮ್ಯರು ತಮ್ಮ ಸಹೋದರರಾದ ಇಸ್ರಾಯೇಲ್ಯರ ಮೇಲೆ ಹಗೆ ಸಾಧಿಸಿದ್ದಕ್ಕೆ ದೇವರು ಅವ್ರಿಗೆ ಶಿಕ್ಷೆ ಕೊಟ್ಟನು

ಕಪಟತನ

ಕಪಟತನ” ನೋಡಿ

ಹೊಟ್ಟೆಕಿಚ್ಚು

ಸೋಮಾರಿತನ

ಹಣದಾಸೆ, ವಸ್ತುಗಳ ಮೇಲೆ ಆಸೆ

ಮತ್ತಾ 6:24; 1ತಿಮೊ 6:10; ಇಬ್ರಿ 13:5

ಇದನ್ನೂ ನೋಡಿ: 1ಯೋಹಾ 2:15, 16

  • ಬೈಬಲ್‌ ಉದಾಹರಣೆಗಳು:

    • ಯೋಬ 31:24-28—ಯೋಬ ಶ್ರೀಮಂತನಾಗಿದ್ರೂ ಹಣ-ಆಸ್ತಿಗಿಂತ ದೇವರನ್ನ ಜಾಸ್ತಿ ಪ್ರೀತಿಸಿದ

    • ಮಾರ್ಕ 10:17-27—ಒಬ್ಬ ಶ್ರೀಮಂತ ಯುವಕನಿಗೆ ಅವನ ಆಸ್ತಿ-ಪಾಸ್ತಿ ಮೇಲೆ ಎಷ್ಟು ಆಸೆ ಇತ್ತಂದ್ರೆ ಅದನ್ನೆಲ್ಲ ಬಿಟ್ಟು ಯೇಸುವಿನ ಶಿಷ್ಯನಾಗೋಕೆ ಅವನು ಒಪ್ಪಲಿಲ್ಲ

ಅಹಂಕಾರ

ಅಹಂಕಾರ” ನೋಡಿ

ಹೆಮ್ಮೆ; ಜಂಬ

ಹೆಮ್ಮೆ” ನೋಡಿ

ಜಗಳ

ಜ್ಞಾನೋ 26:20; 1ತಿಮೊ 3:2, 3; ತೀತ 3:2

ಇದನ್ನೂ ನೋಡಿ: ಜ್ಞಾನೋ 15:18; 17:14; 27:15; ಯಾಕೋ 3:17, 18

  • ಬೈಬಲ್‌ ಉದಾಹರಣೆಗಳು:

    • ಆದಿ 13:5-9—ಅಬ್ರಹಾಮ ಮತ್ತು ಲೋಟನ ದನ ಕಾಯೋರ ಮಧ್ಯ ಜಗಳ ಆದಾಗ ಅಬ್ರಹಾಮ ಆ ಸಮಸ್ಯೆಯನ್ನ ಬಗೆಹರಿಸಿದ

    • ನ್ಯಾಯ 8:1-3—ಎಫ್ರಾಯೀಮಿನ ಗಂಡಸ್ರು ಗಿದ್ಯೋನನ ಹತ್ರ ಜಗಳಕ್ಕೆ ಬಂದಾಗ ಅವನು ದೀನತೆಯಿಂದ ಅವ್ರ ಕೋಪನ ತಣ್ಣಗೆ ಮಾಡಿದ

ದಂಗೆ

ಅತಿ ನೀತಿವಂತಿಕೆ

ಪ್ರಸಂ 7:16; ಮತ್ತಾ 7:1-5; ರೋಮ 14:4, 10-13

ಇದನ್ನೂ ನೋಡಿ: ಯೆಶಾ 65:5; ಲೂಕ 6:37

  • ಬೈಬಲ್‌ ಉದಾಹರಣೆಗಳು:

    • ಮತ್ತಾ 12:1-7—ಅತಿ ನೀತಿವಂತರಾಗಿ ಫರಿಸಾಯರು ಮಾಡ್ತಿದ್ದ ತಪ್ಪನ್ನ ಯೇಸು ಬಯಲಿಗೆಳೆದ

    • ಲೂಕ 18:9-14—ತಾವೇ ನೀತಿವಂತ್ರು ಅಂದ್ಕೊಳ್ಳೋ ಜನರನ್ನ ದೇವರು ಮೆಚ್ಚಲ್ಲ ಅನ್ನೋದಕ್ಕೆ ಯೇಸು ಉದಾಹರಣೆ ಕೊಟ್ಟನು

ಹಟ

ಯೆರೆ 13:10

ಇದನ್ನೂ ನೋಡಿ: ಯೆರೆ 7:23-27; ಜೆಕ 7:11, 12

  • ಬೈಬಲ್‌ ಉದಾಹರಣೆಗಳು:

    • 2ಪೂರ್ವ 36:11-17—ಚಿದ್ಕೀಯ ಕೆಟ್ಟವನಾಗಿದ್ದ, ಹಟಮಾರಿ ಆಗಿದ್ದ. ಇದ್ರಿಂದ ಪ್ರಜೆಗಳೆಲ್ಲ ಕಷ್ಟ ಅನುಭವಿಸಬೇಕಾಯ್ತು

    • ಅಕಾ 19:8, 9—ದೇವರ ಸಂದೇಶನ ಕೇಳೋದೇ ಇಲ್ಲ ಅಂತ ಹಟ ಹಿಡಿದ ಜನ್ರಿಗೆ ಪೌಲ ಸಾರಲಿಲ್ಲ

ಮೂರ್ಖತನ

ಮಾರ್ಕ 7:21-23; ಎಫೆ 5:17

ಇದನ್ನೂ ನೋಡಿ: 1ಪೇತ್ರ 2:15

  • ಬೈಬಲ್‌ ಉದಾಹರಣೆಗಳು:

    • 1ಸಮು 8:10-20—ಜನ ತಮಗೆ ರಾಜ ಬೇಕು ಅಂತ ಕೇಳ್ತಿರೋದು ಮೂರ್ಖತನ ಅಂತ ಸಮುವೇಲ ಹೇಳಿದ್ರೂ ಅವರು ಕೇಳಲಿಲ್ಲ

    • 1ಸಮು 25:2-13, 34—ನಾಬಾಲ ದಾವೀದನ ಜನ್ರಿಗೆ ಸಹಾಯ ಮಾಡದೆ ಮೂರ್ಖತನ ತೋರಿಸಿದ್ದಕ್ಕೆ ಅವನ ಮನೆಯವರು ಜೀವ ಕಳ್ಕೊಳ್ಳೋ ಪರಿಸ್ಥಿತಿ ಬಂತು

ಕೆಟ್ಟ ಸಂಶಯ ಮತ್ತು ಸುಳ್ಳು ಆರೋಪ

ಯೋಬ 1:9-11; 1ತಿಮೊ 6:4

  • ಬೈಬಲ್‌ ಉದಾಹರಣೆ:

    • 1ಸಮು 18:6-9; 20:30-34—ಸೌಲ ದಾವೀದನ ಮೇಲೆ ಸಂಶಯ ಪಟ್ಟ, ಯೋನಾತಾನನಿಗೆ ಅವನ ಮೇಲೆ ದ್ವೇಷ ಬರಿಸೋಕೆ ಪ್ರಯತ್ನ ಪಟ್ಟ