ನಿಯತ್ತು, ನಿರ್ದೋಷಿ
ನಿಯತ್ತು ಅಂದ್ರೆ ಏನು?
ಕೀರ್ತ 18:23-25; 26:1, 2; 101:2-7; 119:1-3, 80
-
ಬೈಬಲ್ ಉದಾಹರಣೆಗಳು:
-
ಯಾಜ 22:17-22—ಇಸ್ರಾಯೇಲ್ಯರು ಪ್ರಾಣಿ ಬಲಿ ಕೊಡೋವಾಗ “ದೋಷ ಇಲ್ಲದ” ಪ್ರಾಣಿಗಳನ್ನ ಕೊಡಬೇಕಿತ್ತು; “ದೋಷ ಇಲ್ಲದ” ಅನ್ನೋದಕ್ಕಿರೋ ಹೀಬ್ರು ಪದಕ್ಕೂ “ನಿಯತ್ತು, ನಿರ್ದೋಷಿ” ಅನ್ನೋದಕ್ಕಿರೋ ಹೀಬ್ರು ಪದಕ್ಕೂ ಸಂಬಂಧ ಇದೆ. ಹಾಗಾಗಿ ನಾವು ಯೆಹೋವನಿಗೆ ‘ನಿಯತ್ತಾಗಿ ಇರಬೇಕು’ ಅನ್ನೋದ್ರ ಅರ್ಥ ನಮಗೆ ಯೆಹೋವನ ಮೇಲೆ ಅರೆಮನಸ್ಸಿನ ಭಕ್ತಿ ಅಲ್ಲ, ಪೂರ್ಣ ಮನಸ್ಸಿನ ಭಕ್ತಿ ಇರಬೇಕು
-
ಯೋಬ 1:1, 4, 5, 8; 2:3—ನಾವು ಯೆಹೋವನಿಗೆ ನಿಯತ್ತಾಗಿ ಇರಬೇಕಂದ್ರೆ ಯೋಬನ ತರ ಆತನಿಗೆ ಗೌರವ ಕೊಡಬೇಕು, ಆತನನ್ನ ಮಾತ್ರ ಆರಾಧನೆ ಮಾಡಬೇಕು, ಆತನಿಗೆ ಇಷ್ಟ ಇಲ್ಲದಿರೋ ವಿಷ್ಯಗಳಿಂದ ದೂರ ಇರಬೇಕು
-
ನಾವು ಯಾಕೆ ಯೆಹೋವನಿಗೆ ನಿಯತ್ತಾಗಿ ಇರಬೇಕು?
ಕೀರ್ತ 7:8, 9; 25:21; 41:12; ಜ್ಞಾನೋ 10:9; 11:3
ಇದನ್ನೂ ನೋಡಿ: ಮಾರ್ಕ 12:30
ಯೆಹೋವನಿಗೆ ನಿಯತ್ತಾಗಿ, ಪ್ರಾಮಾಣಿಕರಾಗಿ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
ಇದನ್ನೂ ನೋಡಿ: ಜ್ಞಾನೋ 27:11; 1ಯೋಹಾ 5:3
ನಾವು ದೇವರಿಗೆ ಯಾವಾಗ್ಲೂ ನಿಯತ್ತಿಂದ ಇರೋಕೆ ಏನು ಮಾಡಬೇಕು?
ಇದನ್ನೂ ನೋಡಿ: ಧರ್ಮೋ 5:29; ಯೆಶಾ 48:17, 18
-
ಬೈಬಲ್ ಉದಾಹರಣೆಗಳು:
-
ಯೋಬ 31:1-11, 16-33—ಯೋಬ ಯಾವಾಗ್ಲೂ ಬೇರೆವ್ರನ್ನ ಕರುಣೆಯಿಂದ ನೋಡ್ಕೊತಿದ್ದ, ಗೌರವಿಸ್ತಿದ್ದ, ಅನೈತಿಕತೆಯಿಂದ ದೂರ ಇದ್ದ, ಯೆಹೋವನನ್ನ ಮಾತ್ರ ಆರಾಧನೆ ಮಾಡಿದ, ಹಣ-ಆಸ್ತಿಗಿಂತ ಯೆಹೋವ ದೇವರ ಜೊತೆ ಇರೋ ಸ್ನೇಹಕ್ಕೆ ತುಂಬಾ ಬೆಲೆ ಕೊಟ್ಟ. ಹೀಗೆ ಆತನಿಗೆ ನಿಯತ್ತಾಗಿ ಇದ್ದೀನಿ ಅಂತ ತೋರಿಸ್ಕೊಟ್ಟ
-
ದಾನಿ 1:6-21—ತಮ್ಮ ಸುತ್ತಮುತ್ತ ಬೇರೆ ದೇವರುಗಳನ್ನ ಆರಾಧಿಸೋರು ಇದ್ರೂ ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ಎಲ್ಲ ವಿಷ್ಯದಲ್ಲೂ ಯೆಹೋವನ ಮಾತನ್ನ ಕೇಳಿದ್ರು, ತಿನ್ನೋ-ಕುಡಿಯೋ ವಿಷ್ಯದಲ್ಲೂ ಅವರು ದೇವರ ಮಾತು ಮೀರಲಿಲ್ಲ
-
ಒಬ್ಬ ವ್ಯಕ್ತಿ ಪದೇ ಪದೇ ತಪ್ಪು ಮಾಡಿದ ಮೇಲೂ ಅವನು ಮತ್ತೆ ದೇವರಿಗೆ ನಿಯತ್ತಾಗಿರೋಕೆ ಆಗುತ್ತಾ?
-
ಬೈಬಲ್ ಉದಾಹರಣೆಗಳು:
-
1ಅರ 9:2-5; ಕೀರ್ತ 78:70-72—ರಾಜ ದಾವೀದ ಪಶ್ಚಾತ್ತಾಪ ಪಟ್ಟಿದ್ರಿಂದ ದೇವರು ಅವನನ್ನ ಕ್ಷಮಿಸಿದನು, ಅವನು “ಪೂರ್ಣ ಹೃದಯದಿಂದ, ಶುದ್ಧ ಹೃದಯದಿಂದ” ನಡೆದ ಅಂತ ಹೇಳಿದನು
-
ಯೆಶಾ 1:11-18—ತನ್ನ ಜನರ ಪಾಪಗಳು ಕಡುಗೆಂಪಾಗಿದ್ರೂ ಅವರು ಪಶ್ಚಾತ್ತಾಪ ಪಟ್ರೆ, ತಪ್ಪು ಮಾಡೋದನ್ನ ಬಿಟ್ಟುಬಿಟ್ರೆ ಅದನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ ಅಂತ ಯೆಹೋವ ಹೇಳಿದ್ದಾನೆ
-