ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿರುದುಗಳು

ಬಿರುದುಗಳು

ಕ್ರೈಸ್ತರು ಧಾರ್ಮಿಕ ಬಿರುದುಗಳನ್ನ ಬಳಸೋದು ಸರಿನಾ?

ಯೋಹಾ 5:41

  • ಬೈಬಲ್‌ ಉದಾಹರಣೆಗಳು:

    • ಲೂಕ 18:18, 19—ಯೇಸು ಒಳ್ಳೆಯವನಾಗಿದ್ರೂ “ಒಳ್ಳೇ ಬೋಧಕ” ಅಂತ ಕರೆಸ್ಕೊಳ್ಳೋಕೆ ಇಷ್ಟಪಡಲಿಲ್ಲ. ಯೆಹೋವ ದೇವರು ಮಾತ್ರ ಒಳ್ಳೆಯವನು ಅಂತ ಹೇಳಿದನು

“ಫಾದರ್‌,” “ನಾಯಕ” ಇಂಥ ಬಿರುದುಗಳನ್ನ ನಾವ್ಯಾಕೆ ಬಳಸಲ್ಲ?

  • ಬೈಬಲ್‌ ಉದಾಹರಣೆಗಳು:

    • ಮತ್ತಾ 23:9-12—“ತಂದೆ” ಅಥವಾ “ನಾಯಕ” ಅಂತ ಕರೆಸ್ಕೊಬಾರದು ಅಂತ ಯೇಸು ಹೇಳಿದ್ದಾನೆ

    • 1ಕೊರಿಂ 4:14-17—ಅಪೊಸ್ತಲ ಪೌಲ ತುಂಬ ಜನ್ರಿಗೆ ತಂದೆ ತರ ಇದ್ರೂ ಯಾರೂ ಅವನನ್ನ ಫಾದರ್‌ ಪೌಲ ಅಂತನೋ ಅಥವಾ ಬೇರೆ ಇನ್ಯಾವುದೋ ಬಿರುದಿಂದನೋ ಕರೀಲಿಲ್ಲ

ನಾವು ಒಬ್ರನ್ನೊಬ್ರು ಸಹೋದರ ಸಹೋದರಿ ಅಂತ ಕರೀತಿವಿ, ಅದೇ ತರ ನಡ್ಕೊತೀವಿ. ಇದ್ಯಾಕೆ ಸರಿ?

ಮತ್ತಾ 23:8

ಇದನ್ನೂ ನೋಡಿ: ಅಕಾ 12:17; 18:18; ರೋಮ 16:1

  • ಬೈಬಲ್‌ ಉದಾಹರಣೆಗಳು:

    • ಮತ್ತಾ 12:46-50—ಯೆಹೋವ ದೇವರನ್ನ ಆರಾಧನೆ ಮಾಡೋರನ್ನ ಯೇಸು ತನ್ನ ಸಹೋದರ ಸಹೋದರಿಯರ ತರ ನೋಡಿದ

ರಾಜಕಾರಣಿಗಳಿಗೆ, ನ್ಯಾಯಾಧೀಶರಿಗೆ ಮತ್ತು ಬೇರೆ ಅಧಿಕಾರಿಗಳಿಗೆ ಇರೋ ಬಿರುದನ್ನ ಬಳಸಿ ಅವ್ರನ್ನ ಕರೆಯೋದು ತಪ್ಪಲ್ಲ ಯಾಕೆ?

ರೋಮ 13:1, 7; 1ಪೇತ್ರ 2:17

  • ಬೈಬಲ್‌ ಉದಾಹರಣೆಗಳು:

    • ಅಕಾ 26:1, 2, 25—ಅಪೊಸ್ತಲ ಪೌಲ ಸರ್ಕಾರಿ ಅಧಿಕಾರಿಗಳ ಹತ್ರ ಮಾತಾಡುವಾಗ ಉದಾಹರಣೆಗೆ ಅಗ್ರಿಪ್ಪ ಮತ್ತು ಫೆಸ್ತನ ಹತ್ರ ಮಾತಾಡುವಾಗ ಅವ್ರಿಗಿರೋ ಬಿರುದನ್ನ ಬಳಸಿದ