ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದುವೆ

ಮದುವೆ

ಮದುವೆ ಅನ್ನೋ ಏರ್ಪಾಡು ಶುರು ಆಗಿದ್ದು ಹೇಗೆ?

ಕ್ರೈಸ್ತರು ಯಾರನ್ನ ಮದುವೆ ಮಾಡ್ಕೊಬೇಕು?

ಹೆತ್ತವರು ದೀಕ್ಷಾಸ್ನಾನ ಆಗಿರೋ ತಮ್ಮ ಮಗ ಅಥವಾ ಮಗಳು ಇನ್ನೂ ದೀಕ್ಷಾಸ್ನಾನ ಆಗದಿರೋ ಒಬ್ಬ ಯೆಹೋವನ ಆರಾಧಕನನ್ನ ಮದುವೆ ಆಗೋದಕ್ಕೆ ಒಪ್ಪಿಗೆ ಕೊಡಬಾರದು. ಯಾಕೆ?

1ಕೊರಿಂ 7:39; 2ಕೊರಿಂ 6:14, 15

  • ಬೈಬಲ್‌ ಉದಾಹರಣೆಗಳು:

    • ಆದಿ 24:1-4, 7—ಅಬ್ರಹಾಮ ಇಸಾಕನಿಗೆ ಬೇರೆ ದೇವರುಗಳನ್ನ ಆರಾಧನೆ ಮಾಡ್ತಿದ್ದ ಕಾನಾನ್ಯರಿಂದ ಹೆಣ್ಣು ತರಲಿಲ್ಲ, ಯೆಹೋವನನ್ನ ಆರಾಧನೆ ಮಾಡೋ ಹುಡುಗಿಯನ್ನೇ ಹುಡುಕಿ ತಂದ

    • ಆದಿ 28:1-4—ಇಸಾಕ ಯಾಕೋಬನ ಹತ್ರ ಕಾನಾನ್ಯ ಹುಡುಗಿಯನ್ನಲ್ಲ, ಯೆಹೋವ ದೇವರನ್ನ ಆರಾಧನೆ ಮಾಡೋ ಹುಡುಗಿಯನ್ನೇ ಮದುವೆ ಆಗಬೇಕು ಅಂತ ಹೇಳಿದ

ತನ್ನ ಜನರು ತನ್ನನ್ನ ಆರಾಧನೆ ಮಾಡದಿರೋ ವ್ಯಕ್ತಿಯನ್ನ ಮದುವೆ ಆದ್ರೆ ಯೆಹೋವನಿಗೆ ಹೇಗನಿಸುತ್ತೆ?

ಧರ್ಮೋ 7:3, 4

  • ಬೈಬಲ್‌ ಉದಾಹರಣೆಗಳು:

    • 1ಅರ 11:1-6, 9-11—ಬೇರೆ ದೇಶದ ಸ್ತ್ರೀಯರನ್ನ ಮದುವೆ ಆಗಬಾರದು ಅಂತ ದೇವರು ಹೇಳಿದ್ರೂ ಸೊಲೊಮೋನ ಅದನ್ನೇ ಮಾಡಿದ. ಅವರ ತರಾನೇ ಬೇರೆ ದೇವರುಗಳನ್ನ ಆರಾಧನೆ ಮಾಡಿದ. ಇದ್ರಿಂದ ಯೆಹೋವನಿಗೆ ತುಂಬ ಕೋಪ ಬಂತು

    • ನೆಹೆ 13:23-27—ಯೆಹೋವನನ್ನ ಆರಾಧನೆ ಮಾಡದಿರೋ ಹೆಂಗಸರನ್ನ ಇಸ್ರಾಯೇಲ್ಯರು ಮದುವೆ ಆದಾಗ ಯೆಹೋವನ ತರಾನೇ ನೆಹೆಮೀಯನಿಗೆ ಕೋಪ ಬಂತು, ಆ ಜನ್ರನ್ನ ಅವನು ತಿದ್ದಿದ

ಯೆಹೋವ ದೇವರಿಗೆ ನಿಯತ್ತಾಗಿರೋ, ಒಳ್ಳೇ ಹೆಸ್ರು ಸಂಪಾದಿಸಿರೋ ವ್ಯಕ್ತಿಯನ್ನೇ ಮದುವೆ ಆಗೋದು ಯಾಕೆ ಒಳ್ಳೇದು?

ಜ್ಞಾನೋ 18:22; 31:10, 28

ಇದನ್ನೂ ನೋಡಿ: ಎಫೆ 5:28-31, 33

  • ಬೈಬಲ್‌ ಉದಾಹರಣೆಗಳು:

    • 1ಸಮು 25:2, 3, 14-17—ನಾಬಾಲ ಶ್ರೀಮಂತನಾಗಿದ್ದ, ಆದ್ರೆ ಅಬೀಗೈಲಳಿಗೆ ಒಳ್ಳೇ ಗಂಡನಾಗಿರಲಿಲ್ಲ. ಯಾಕಂದ್ರೆ ಅವನು ಕೆಟ್ಟವನಾಗಿದ್ದ, ಒರಟಾಗಿ ನಡ್ಕೊಳ್ತಿದ್ದ

    • ಜ್ಞಾನೋ 21:9—ಒಳ್ಳೇಯವರನ್ನ ಮದುವೆ ಆಗಿಲ್ಲಾಂದ್ರೆ ಜೀವನದಲ್ಲಿ ಖುಷಿ, ನೆಮ್ಮದಿ ಇರಲ್ಲ

    • ರೋಮ 7:2—ಒಬ್ಬ ಹುಡುಗಿ ಮದುವೆ ಆದ್ಮೇಲೆ ಅವಳು ಗಂಡನ ಅಧಿಕಾರದ ಕೆಳಗೆ ಇರಬೇಕಾಗುತ್ತೆ, ಅದಕ್ಕೆ ಸರಿಯಾದ ವ್ಯಕ್ತಿನ ಅವಳು ಆರಿಸ್ಕೊಬೇಕು ಅಂತ ಪೌಲ ಹೇಳಿದ್ದಾನೆ

ಮದುವೆಗೆ ತಯಾರಿ

ಮದುವೆ ಆಗೋ ವ್ಯಕ್ತಿ ತನಗೆ ಹೆಂಡ್ತಿ-ಮಕ್ಕಳನ್ನ ಸಾಕೋ ಸಾಮರ್ಥ್ಯ ಇದ್ಯಾ ಅಂತ ಯೋಚ್ನೆ ಮಾಡಬೇಕು ಯಾಕೆ?

1ತಿಮೊ 5:8

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 24:27—ಒಬ್ಬ ವ್ಯಕ್ತಿ ಮದುವೆ ಆಗೋ ಮುಂಚೆ, ಮಕ್ಕಳು ಮಾಡ್ಕೊಳ್ಳೋ ಮುಂಚೆ ಕಷ್ಟಪಟ್ಟು ಕೆಲಸ ಮಾಡಿ ಅದಕ್ಕೆ ಬೇಕಾದ ತಯಾರಿ ಮಾಡ್ಕೊಬೇಕು

ಮದ್ವೆ ಆಗೋಕೂ ಮುಂಚೆ ಹುಡುಗ ಅಥವಾ ಹುಡುಗಿ ನೋಡೋಕೆ ಚೆನ್ನಾಗಿದ್ರೆ ಸಾಕು ಅಂತ ಅಂದ್ಕೊಳ್ಳದೆ, ಅವ್ರ ಬಗ್ಗೆ ಬೇರೆಯವ್ರ ಹತ್ರ ವಿಚಾರಿಸಬೇಕು ಮತ್ತು ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಬೇಕು. ಯಾಕೆ?

ಜ್ಞಾನೋ 13:10; 1ಪೇತ್ರ 3:3-6

  • ಬೈಬಲ್‌ ಉದಾಹರಣೆಗಳು:

    • ರೂತ್‌ 2:4-7, 10-12—ರೂತ್‌ ಹೇಗೆ ಕೆಲಸ ಮಾಡ್ತಾಳೆ, ಅವಳ ಬಗ್ಗೆ ಬೇರೆಯವ್ರಿಗೆ ಯಾವ ಅಭಿಪ್ರಾಯ ಇದೆ, ಅತ್ತೆ ಜೊತೆ ಹೇಗೆ ನಡ್ಕೊತಾಳೆ, ಯೆಹೋವನನ್ನ ಎಷ್ಟು ಪ್ರೀತಿಸ್ತಾಳೆ ಅಂತ ಬೋವಜ ತಿಳ್ಕೊಂಡ

    • ರೂತ್‌ 2:8, 9, 20—ಬೋವಜನಲ್ಲಿರೋ ದಯೆ, ಧಾರಾಳ ಮನಸ್ಸು ಮತ್ತು ಯೆಹೋವನ ಮೇಲಿರೋ ಪ್ರೀತಿಯನ್ನ ರೂತ್‌ ಗಮನಿಸಿದಳು

ಮದುವೆ ಆಗಬೇಕಂತ ಇರೋರು ಡೇಟಿಂಗ್‌ ಮಾಡುವಾಗ ಮತ್ತು ನಿಶ್ಚಿತಾರ್ಥ ಆದ್ಮೇಲೆ ನೈತಿಕವಾಗಿ ಶುದ್ಧವಾಗಿ ಇರಬೇಕು ಅಂತ ಯೆಹೋವ ಯಾಕೆ ಇಷ್ಟಪಡ್ತಾನೆ?

ಗಲಾ 5:19; ಕೊಲೊ 3:5; 1ಥೆಸ 4:4

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 5:18, 19—ಪ್ರೀತಿಯಿಂದ ಮಾಡೋ ಕೆಲವು ವಿಷ್ಯಗಳನ್ನ ಮದುವೆ ಆದ್ಮೇಲೆನೇ ಮಾಡಬೇಕು

    • ಪರಮ 1:2; 2:6—ಮದುವೆ ಆಗಬೇಕಂತ ಇದ್ದ ಕುರುಬನಾಗಿದ್ದ ಹುಡುಗ ಮತ್ತು ಶೂಲೇಮ್ಯ ಹುಡುಗಿ ತಮ್ಮ ಪ್ರೀತಿಯನ್ನ ತೋರಿಸುವಾಗ ಎಲ್ಲೆ ಮೀರಲಿಲ್ಲ, ನೈತಿಕವಾಗಿ ಶುದ್ಧವಾಗಿದ್ರು

    • ಪರಮ 4:12; 8:8-10—ಶೂಲೇಮ್ಯ ಹುಡುಗಿ ಶುದ್ಧವಾಗಿದ್ದಳು, ಸ್ವನಿಯಂತ್ರಣ ತೋರಿಸಿದಳು; ಅವಳು ಕದ ಹಾಕಿರೋ ಉದ್ಯಾನ ತರ ಇದ್ದಳು

ಗಂಡು-ಹೆಣ್ಣು ಕಾನೂನು ಪ್ರಕಾರ ಮದುವೆ ಆಗಬೇಕು ಯಾಕೆ?

ಗಂಡನ ಜವಾಬ್ದಾರಿ

ಗಂಡನಿಗೆ ಯಾವ ದೊಡ್ಡ-ದೊಡ್ಡ ಜವಾಬ್ದಾರಿ ಇದೆ?

ಕುಟುಂಬದ ಯಜಮಾನ ಆಗಿರೋ ಗಂಡ ಯಾರ ತರ ನಡ್ಕೊಬೇಕು?

ಗಂಡ ಹೆಂಡ್ತಿನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋದು, ಅವಳನ್ನ ಪ್ರೀತಿಸ್ತೀನಿ ಅಂತ ತೋರಿಸ್ಕೊಡೋದು ತುಂಬ ಮುಖ್ಯ ಯಾಕೆ?

ಕೊಲೊ 3:19; 1ಪೇತ್ರ 3:7

  • ಬೈಬಲ್‌ ಉದಾಹರಣೆಗಳು:

    • ಆದಿ 21:8-12—ಅಬ್ರಹಾಮನಿಗೆ ಸಾರ ಹೇಳಿದ್ದು ಇಷ್ಟ ಆಗಲಿಲ್ಲಾಂದ್ರೂ ಅವಳ ಮಾತನ್ನ ಕೇಳು ಅಂತ ಯೆಹೋವ ಹೇಳಿದನು

    • ಜ್ಞಾನೋ 31:10, 11, 16, 28—ಒಬ್ಬ ಒಳ್ಳೇ ಗಂಡ ಹೆಂಡ್ತಿನ ನಂಬ್ತಾನೆ, ಹೊಗಳ್ತಾನೆ. ಅವಳನ್ನ ತನ್ನ ಬಿಗಿಮುಷ್ಠಿಯಲ್ಲಿ ಇಟ್ಕೊಬೇಕು ಅಂತ ನೆನಸಲ್ಲ. ಅವಳ ತಪ್ಪನ್ನ ಎತ್ತಿ ಆಡಲ್ಲ

    • ಎಫೆ 5:33—ಗಂಡ ತನ್ನ ಹೆಂಡ್ತಿನ ಎಷ್ಟು ಪ್ರೀತಿಸ್ತಾನೆ ಅಂತ ಅವಳಿಗೆ ಗೊತ್ತಾಗಬೇಕು ಅಂತ ಪೌಲ ಬರೆದಿದ್ದಾನೆ

ಹೆಂಡತಿಯ ಜವಾಬ್ದಾರಿ

ಯೆಹೋವ ದೇವರು ಕುಟುಂಬದಲ್ಲಿ ಹೆಂಡ್ತಿಯರಿಗೆ ಯಾವ ಜವಾಬ್ದಾರಿಗಳನ್ನ ಕೊಟ್ಟಿದ್ದಾನೆ?

ಹೆಂಡ್ತಿ ಗಂಡನಿಗಿಂತ ಕೀಳಾ?

ಆದಿ 1:26-28, 31; 2:18

  • ಬೈಬಲ್‌ ಉದಾಹರಣೆಗಳು:

    • ಜ್ಞಾನೋ 1:8; 1ಕೊರಿಂ 7:4—ಹೆಂಡತಿಯರಿಗೆ, ಅಮ್ಮಂದಿರಿಗೆ ದೇವರು ಸ್ವಲ್ಪ ಅಧಿಕಾರ ಕೊಟ್ಟಿದ್ದಾನೆ

    • 1ಕೊರಿಂ 11:3—ಯೆಹೋವ ದೇವರನ್ನ ಬಿಟ್ಟು ಬೇರೆ ಎಲ್ರೂ ಒಂದಲ್ಲ ಒಂದು ರೀತೀಲಿ ಬೇರೆಯವ್ರ ಕೈಕೆಳಗಿದ್ದಾರೆ ಅಂತ ಪೌಲ ವಿವರಿಸಿದ್ದಾನೆ

    • ಇಬ್ರಿ 13:7, 17—ಸಭೆಯನ್ನ ನೋಡ್ಕೊಳ್ಳೋ ಸಹೋದರರಿಗೆ ಗಂಡಸರೂ ಹೆಂಗಸರೂ ಸಹಕಾರ ಕೊಡಬೇಕು, ಅವ್ರ ಮಾತನ್ನ ಕೇಳಬೇಕು

ಗಂಡ ಯೆಹೋವನನ್ನ ಆರಾಧನೆ ಮಾಡದಿದ್ರೂ ಒಬ್ಬ ಹೆಂಡ್ತಿ ಹೇಗೆ ಯೆಹೋವನಿಗೆ ಖುಷಿ ಆಗೋ ತರ ನಡ್ಕೊಬಹುದು?

ಹೆಂಡ್ತಿ ತನ್ನ ಗಂಡನಿಗೆ ಯಾವಾಗ್ಲೂ ಗೌರವ ಕೊಡಬೇಕು ಯಾಕೆ?

ಎಫೆ 5:33

  • ಬೈಬಲ್‌ ಉದಾಹರಣೆ:

    • ಆದಿ 18:12; 1ಪೇತ್ರ 3:5, 6—ಸಾರಗೆ ಅಬ್ರಹಾಮನ ಮೇಲೆ ತುಂಬ ಗೌರವ ಇತ್ತು, ಅವಳು ಅವನನ್ನ “ಯಜಮಾನ” ಅಂತ ಕರೀತಾ ಇದ್ದಳು

ಗುಣವತಿಯಾದ ಹೆಂಡ್ತಿನ ಬೈಬಲ್‌ ಹೇಗೆ ಹೊಗಳುತ್ತೆ?

ಜ್ಞಾನೋ 19:14; 31:10, 13-31

  • ಬೈಬಲ್‌ ಉದಾಹರಣೆಗಳು:

    • ಆದಿ 24:62-67—ಇಸಾಕ ಅಮ್ಮನನ್ನ ಕಳ್ಕೊಂಡು ದುಃಖದಲ್ಲಿದ್ದಾಗ ರೆಬೆಕ್ಕ ಅವನನ್ನ ಸಮಾಧಾನ ಮಾಡಿದಳು

    • 1ಸಮು 25:14-24, 32-38—ಅಬೀಗೈಲ್‌ ದೀನತೆಯಿಂದ ದಾವೀದನನ್ನ ಬೇಡ್ಕೊಂಡಿದ್ರಿಂದ ಅವನು ಅವಳ ಗಂಡನಿಗೆ ಮತ್ತು ಅವನ ಮನೆಯವ್ರಿಗೆ ದಯೆ ತೋರಿಸಿದ

    • ಎಸ್ತೇ 4:6-17; 5:1-8; 7:1-6; 8:3-6—ಎಸ್ತೇರ್‌ ರಾಣಿ ರಾಜ ಕರಿದೇ ಇದ್ರೂ ತನ್ನ ಜನ್ರಿಗೋಸ್ಕರ ಎರಡು ಸಲ ತನ್ನ ಪ್ರಾಣವನ್ನ ಅಪಾಯಕ್ಕೆ ಒಡ್ಡಿದಳು

ಸಮಸ್ಯೆಗಳನ್ನ ಬಗೆಹರಿಸೋದು

ಗಂಡ-ಹೆಂಡ್ತಿಗೆ ಅವ್ರ ಮಧ್ಯ ಬರೋ ಸಮಸ್ಯೆಗಳನ್ನ ಬಗೆಹರಿಸ್ಕೊಳ್ಳೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ?

ದುಡ್ಡಿನ ವಿಷ್ಯದಲ್ಲಿ ಸರಿಯಾದ ತೀರ್ಮಾನಗಳನ್ನ ತಗೊಳ್ಳೋಕೆ ಗಂಡ-ಹೆಂಡ್ತಿಗೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ?

ಅತ್ತೆ-ಮಾವ ಮತ್ತು ಸಂಬಂಧಿಕರ ವಿಷ್ಯದಲ್ಲಿ ಬರೋ ಸಮಸ್ಯೆಗಳನ್ನ ಬಗೆಹರಿಸೋಕೆ ಯಾವ ಬೈಬಲ್‌ ತತ್ವಗಳು ಗಂಡ-ಹೆಂಡ್ತಿಗೆ ಸಹಾಯ ಮಾಡುತ್ತೆ?

ಲೈಂಗಿಕ ವಿಷ್ಯಗಳ ಬಗ್ಗೆ ಯಾವ ಬೈಬಲ್‌ ತತ್ವಗಳು ಗಂಡ-ಹೆಂಡ್ತಿಗೆ ಸಹಾಯ ಮಾಡುತ್ತೆ?

ಸಂಗಾತಿಯ ತಪ್ಪುಗಳ ಕಡೆಗಲ್ಲ, ಅವ್ರಲ್ಲಿರೋ ಒಳ್ಳೇ ಗುಣಗಳ ಕಡೆ ಗಮನಕೊಡೋದು ಯಾಕೆ ಮುಖ್ಯ?

ಜಗಳ, ಬೇಜಾರನ್ನ ಮನಸ್ಸಲ್ಲಿ ಇಟ್ಕೊಳ್ಳದೆ ಅದನ್ನ ಪ್ರೀತಿಯಿಂದ ಬೇಗ ಬಗೆಹರಿಸ್ಕೊಳ್ಳೋದು ಯಾಕೆ ಒಳ್ಳೇದು?

ಕೋಪ, ಕಿರಿಚಾಟ, ಬೈಯೋದು, ಹೊಡೆಯೋದು ಇದನ್ನೆಲ್ಲ ಕ್ರೈಸ್ತರು ಮಾಡಬಾರದು ಯಾಕೆ?

ಗಂಡ-ಹೆಂಡ್ತಿ ಮಧ್ಯ ಭಿನ್ನಾಭಿಪ್ರಾಯ ಬಂದ್ರೆ ಅವರು ಏನು ಮಾಡಬೇಕು?

ಗಂಡ-ಹೆಂಡ್ತಿ ಯೆಹೋವನಿಗೆ ಮೊದಲ ಸ್ಥಾನ ಕೊಟ್ರೆ ಯಾವ ಆಶೀರ್ವಾದಗಳು ಸಿಗುತ್ತೆ?

ಮದುವೆ ಜೀವನಕ್ಕಿರೋ ನಿಯಮಗಳು

ಲೈಂಗಿಕತೆ ಮತ್ತು ಮದ್ವೆ ಬಗ್ಗೆ ಯೆಹೋವ ದೇವರು ಏನು ಹೇಳಿದ್ದಾನೆ?

ಕ್ರೈಸ್ತರು ಒಂದಕ್ಕಿಂತ ಜಾಸ್ತಿ ಮದುವೆ ಮಾಡ್ಕೊಬಹುದಾ?

ಗಂಡು-ಹೆಣ್ಣು ಮದುವೆ ಆಗೋದೇ ಸರಿ ಅಂತ ನಮಗೆ ಹೇಗೆ ಗೊತ್ತು?

ಮದುವೆ ಆದ್ಮೇಲೆ ಗಂಡ-ಹೆಂಡ್ತಿ ಯಾಕೆ ಒಟ್ಟಿಗೆ ಇರಬೇಕು?

ಕ್ರೈಸ್ತರು ಯಾವ ಒಂದೇ ಒಂದು ಕಾರಣಕ್ಕೆ ವಿಚ್ಛೇದನ ಕೊಡಬಹುದು?

ಸರಿಯಾದ ಕಾರಣ ಇಲ್ಲದೆ ವಿಚ್ಛೇದನ ಕೊಟ್ರೆ ಯೆಹೋವನಿಗೆ ಹೇಗನಿಸುತ್ತೆ?

ಗಂಡ ಅಥವಾ ಹೆಂಡತಿ ತೀರಿಕೊಂಡಾಗ ಬೇರೆ ಮದುವೆ ಆಗಬಹುದಾ?