ಮದುವೆ ಆಗದಿರೋದು, ಅವಿವಾಹಿತ ಸ್ಥಿತಿ
ಮದುವೆ ಆಗದೇ ಇರೋದು ಕೂಡ ಒಂದು ವರ ಯಾಕೆ?
ಮದುವೆ ಆಗದೇ ಇರೋರನ್ನ ‘ಮದುವೆ ಆಗಿ’ ಅಂತ ಒತ್ತಾಯ ಮಾಡಬಾರದು ಯಾಕೆ?
ಬೈಬಲ್ ಉದಾಹರಣೆಗಳು:
ರೋಮ 14:10-12—ಒಬ್ಬ ಸಹೋದರ ಅಥವಾ ಸಹೋದರಿ ಬಗ್ಗೆ ತೀರ್ಪು ಮಾಡೋದು ಯಾಕೆ ತಪ್ಪು ಅಂತ ಪೌಲ ವಿವರಿಸಿದ್ದಾನೆ
1ಕೊರಿಂ 9:3-5—ಪೌಲನಿಗೆ ಮದುವೆ ಆಗೋ ಹಕ್ಕು ಇದ್ರೂ ಅವನು ಮದುವೆ ಆಗಲಿಲ್ಲ, ಇದ್ರಿಂದ ಅವನು ಜಾಸ್ತಿ ಸೇವೆ ಮಾಡಕ್ಕಾಯ್ತು
ಮದುವೆ ಆಗದೇ ಇರೋರು ‘ಜೀವನದಲ್ಲಿ ಸಂತೋಷವಾಗಿ ಇರಬೇಕಂದ್ರೆ ಮದುವೆ ಆಗಬೇಕು’ ಅಂತ ನೆನಸಬೇಕಾ?
ಬೈಬಲ್ ಉದಾಹರಣೆಗಳು:
ನ್ಯಾಯ 11:30-40 —ಯೆಫ್ತಾಹನ ಮಗಳು ಮದುವೆ ಆಗಲಿಲ್ಲ, ಆದ್ರೂ ಅವಳು ಸಂತೋಷವಾಗಿ ಇದ್ದಳು
ಅಕಾ 20:35—ಯೇಸು ಮದುವೆ ಆಗಿಲ್ಲಾಂದ್ರೂ ಖುಷಿಯಾಗಿದ್ದನು. ಯಾಕಂದ್ರೆ ಬೇರೆಯವ್ರಿಗೆ ಸಹಾಯ ಮಾಡೋದ್ರಿಂದ ಖುಷಿ ಸಿಗುತ್ತೆ ಅಂತ ಆತನು ಹೇಳಿದ್ದಾನೆ
1ಥೆಸ 1:2-9; 2:12 —ಪೌಲ ಮದುವೆ ಆಗದೇ ಇದ್ದಿದ್ರಿಂದ ತುಂಬ ಜನ್ರಿಗೆ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡೋಕಾಯ್ತು, ಇದ್ರಿಂದ ಅವನಿಗೆ ಸಂತೋಷ ಸಿಕ್ತು
ಎಲ್ಲಾ ದೇವರ ಸೇವಕರ ತರ ಮದುವೆ ಆಗದೇ ಇರೋರು ಕೂಡ ನೈತಿಕವಾಗಿ ಶುದ್ಧವಾಗಿ ಇರಬೇಕು. ಯಾಕೆ?
1ಕೊರಿಂ 6:18; ಗಲಾ 5:19-21; ಎಫೆ 5:3, 4
ಬೈಬಲ್ ಉದಾಹರಣೆಗಳು:
ಜ್ಞಾನೋ 7:7-23—ಕೆಟ್ಟ ಹೆಂಗಸಿನ ಬಲೆಗೆ ಬಿದ್ದ ಒಬ್ಬ ಯುವಕನಿಗೆ ಆದ ಗತಿ ಬಗ್ಗೆ ಸೊಲೊಮೋನ ವಿವರಿಸಿದ್ದಾನೆ
ಪರಮ 4:12; 8:8-10—ಶೂಲೇಮ್ಯ ಹುಡುಗಿ ನೈತಿಕ ನಿಯಮಗಳನ್ನ ಪಾಲಿಸಿದ್ರಿಂದ ಅವಳನ್ನ ಬೈಬಲಲ್ಲಿ ಹೊಗಳಿದ್ದಾರೆ
ಒಬ್ಬ ಯುವಕ ಅಥವಾ ಯುವತಿ ಮದುವೆ ಬಗ್ಗೆ ಯಾವಾಗ ಯೋಚ್ನೆ ಮಾಡಬೇಕು?
ಇದನ್ನೂ ನೋಡಿ: 1ಥೆಸ 4:4, 5