ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಸ್ತು

ಶಿಸ್ತು

ಬೈಬಲ್‌ ಮೂಲಕ ಶಿಸ್ತು ಕೊಡೋದು ಯಾಕೆ ಒಳ್ಳೇದು?

ನಮ್ಮೆಲ್ರಿಗೂ ಶಿಸ್ತು ಮತ್ತು ಮಾರ್ಗದರ್ಶನ ಬೇಕು ಯಾಕೆ?

ಯೆಹೋವ ನಮಗೆ ಶಿಸ್ತು ಕೊಡೋಕೆ ಕಾರಣ ಏನು?

ಜ್ಞಾನೋ 3:11, 12; ಇಬ್ರಿ 12:7-9

ಇದನ್ನೂ ನೋಡಿ: ಧರ್ಮೋ 8:5; ಜ್ಞಾನೋ 13:24; ಪ್ರಕ 3:19

  • ಬೈಬಲ್‌ ಉದಾಹರಣೆಗಳು:

    • 2ಸಮು 12:9-13; 1ಅರ 15:5; ಅಕಾ 13:22—ದಾವೀದ ದೊಡ್ಡ ದೊಡ್ಡ ತಪ್ಪುಗಳನ್ನ ಮಾಡಿದ್ರೂ ಯೆಹೋವ ಪ್ರೀತಿಯಿಂದ ಅವನನ್ನ ತಿದ್ದಿದನು, ಕ್ಷಮಿಸಿದನು

    • ಯೋನ 1:1-4, 15-17; 3:1-3—ಯೋನ ಯೆಹೋವ ದೇವರು ಕೊಟ್ಟ ನೇಮಕನಾ ಮಾಡದೇ ಓಡಿ ಹೋದಾಗ ದೇವರು ಅವನಿಗೆ ಶಿಕ್ಷೆ ಕೊಟ್ಟನು, ಆದ್ರೆ ಮತ್ತೆ ಆ ನೇಮಕ ಮಾಡೋಕೆ ಅವಕಾಶ ಕೊಟ್ಟನು

ದೇವರು ಕೊಡೋ ಶಿಸ್ತನ್ನ ತಗೊಳ್ಳೋದು ಯಾಕೆ ಒಳ್ಳೇದು?

ದೇವರು ಕೊಡೋ ಶಿಸ್ತನ್ನ ಬೇಡ ಅಂದ್ರೆ ಏನಾಗುತ್ತೆ?

ಜ್ಞಾನೋ 1:24-26; 13:18; 15:32; 29:1

ಇದನ್ನೂ ನೋಡಿ: ಯೆರೆ 7:27, 28, 32-34

  • ಬೈಬಲ್‌ ಉದಾಹರಣೆಗಳು:

    • ಯೆರೆ 5:3-7—ಯೆಹೋವನ ಆರಾಧಕರು ಆತನ ಮಾತಿಗೆ ಕಿವಿಗೊಟ್ಟು ಬದಲಾವಣೆ ಮಾಡ್ಕೊಳ್ಳೋಕೆ ರೆಡಿ ಇರಲಿಲ್ಲ, ಇದ್ರಿಂದ ದೇವರು ಅವ್ರಿಗೆ ಕಟುವಾಗಿ ತಿದ್ದಬೇಕಾಯ್ತು

    • ಚೆಫ 3:1-8—ಯೆರೂಸಲೇಮಿನ ಜನ ಯೆಹೋವ ಕೊಟ್ಟ ಶಿಸ್ತನ್ನ ಬೇಡ ಅಂತ ಹೇಳಿದ್ರಿಂದ ತುಂಬಾ ಕಷ್ಟ ಅನುಭವಿಸಬೇಕಾಯ್ತು

ಯೆಹೋವನ ಶಿಸ್ತನ್ನ ಪಡ್ಕೊಳ್ಳೋದ್ರಿಂದ ನಮಗೆ ಏನು ಪ್ರಯೋಜನ ಆಗುತ್ತೆ?

ಜ್ಞಾನೋ 4:13; 1ಕೊರಿಂ 11:32; ತೀತ 1:13; ಇಬ್ರಿ 12:10, 11

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 30:1-6—ಯೆಹೋವ ದೇವರ ಮಾತು ಕೇಳಿದ್ರೆ ಆಶೀರ್ವಾದ ಸಿಗುತ್ತೆ ಅಂತ ಮೋಶೆ ಜನ್ರಿಗೆ ಹೇಳಿದ

    • 2ಪೂರ್ವ 7:13, 14—ತನ್ನ ಶಿಸ್ತನ್ನ ಸ್ವೀಕರಿಸಿದ್ರೆ ಏನೆಲ್ಲಾ ಒಳ್ಳೇದು ಆಗುತ್ತೆ ಅಂತ ಯೆಹೋವ ರಾಜ ಸೊಲೊಮೋನನಿಗೆ ಹೇಳಿದನು

ಬೇರೆಯವ್ರಿಗೆ ಶಿಸ್ತು ಸಿಕ್ಕಾಗ ಅದ್ರಿಂದ ನಾವು ಪಾಠ ಕಲಿಯೋದು ಒಳ್ಳೇದು ಯಾಕೆ?

ಬೇರೆಯವ್ರಿಗೆ ಶಿಸ್ತು ಸಿಕ್ಕಾಗ ಅದನ್ನ ನೋಡಿ ನಾವು ಖುಷಿ ಪಡಬಾರದು ಯಾಕೆ?

ದೇವರು ಕೊಡೋ ಶಿಸ್ತು ಮತ್ತೆ ಸಲಹೆಯಿಂದ ಪ್ರಯೋಜನ ಪಡ್ಕೊಬೇಕಾದ್ರೆ ನಾವು ಏನು ಮಾಡಬೇಕು?

ಯೆಹೋ 1:8; ಯಾಕೋ 1:25

ಇದನ್ನೂ ನೋಡಿ: ಧರ್ಮೋ 17:18, 19; ಕೀರ್ತ 119:97

  • ಬೈಬಲ್‌ ಉದಾಹರಣೆಗಳು:

    • 1ಪೂರ್ವ 22:11-13—ರಾಜ ದಾವೀದ ತನ್ನ ಮಗ ಸೊಲೊಮೋನನಿಗೆ ನಾವು ಎಲ್ಲಿವರೆಗೂ ಯೆಹೋವನ ಮಾರ್ಗದರ್ಶನ ಪಾಲಿಸ್ತೀವೋ ಅಲ್ಲಿವರೆಗೂ ಆತನು ಆಶೀರ್ವದಿಸ್ತಾನೆ ಅಂತ ಹೇಳಿದ

    • ಕೀರ್ತ 1:1-6—ತನ್ನ ವಾಕ್ಯನ ಓದಿ ಅದ್ರ ಬಗ್ಗೆ ಯೋಚ್ನೆ ಮಾಡೋರನ್ನ ಆಶೀರ್ವದಿಸ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ

ಪ್ರೀತಿ ಇರೋ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಯಾಕೆ ಶಿಸ್ತು ಕೊಡ್ತಾರೆ?

ಅಪ್ಪಅಮ್ಮ” ನೋಡಿ

ಅಪ್ಪ-ಅಮ್ಮ ಶಿಸ್ತು ಕೊಟ್ಟಾಗ ಮಕ್ಕಳು ಏನು ಮಾಡಬೇಕು?