ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ ಆರಾಧನೆಯಲ್ಲಿ ಸುಳ್ಳು ಆರಾಧನೆ ಸೇರಿಸೋದು

ಸತ್ಯ ಆರಾಧನೆಯಲ್ಲಿ ಸುಳ್ಳು ಆರಾಧನೆ ಸೇರಿಸೋದು

ಎಲ್ಲಾ ಧರ್ಮದ ಜನರು ಆರಾಧನೆ ಮಾಡೋದು ಒಂದೇ ದೇವರನ್ನಾ?

ಬೇರೆ ಬೇರೆ ಧರ್ಮದವರು ಬೇರೆ ಬೇರೆ ವಿಷ್ಯಗಳನ್ನ ಕಲಿಸ್ತಾರೆ, ಇವ್ರ ಆರಾಧನೆಯನ್ನ ಯೆಹೋವ ಒಪ್ಕೊತಾನಾ?

ಮತ್ತಾ 7:13, 14; ಯೋಹಾ 17:3; ಎಫೆ 4:4-6

  • ಬೈಬಲ್‌ ಉದಾಹರಣೆಗಳು:

    • ಯೆಹೋ 24:15—ಯೆಹೋವನನ್ನ ಆರಾಧಿಸಬೇಕಾ ಬೇಡ್ವಾ ಅನ್ನೋದು ಅವರವ್ರಿಗೆ ಬಿಟ್ಟ ವಿಷ್ಯ ಅಂತ ಯೆಹೋಶುವ ಹೇಳಿದ

    • 1ಅರ 18:19-40—ಯೆಹೋವನ ಆರಾಧಕರು ಬೇರೆ ದೇವರುಗಳನ್ನ ಆರಾಧನೆ ಮಾಡಬಾರದು ಅಂತ ಯೆಹೋವ ಎಲೀಯನ ಮೂಲಕ ತೋರಿಸ್ಕೊಟ್ಟನು

ಬೇರೆ ದೇವರುಗಳ ಬಗ್ಗೆ ಮತ್ತು ಜನ ಅವ್ರನ್ನ ಆರಾಧನೆ ಮಾಡೋದ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?

ಯೆಹೋವನನ್ನ ಆರಾಧನೆ ಮಾಡ್ತಿದ್ದೀನಿ ಅಂತ ಹೇಳ್ತಾ ಆತನಿಗೆ ಇಷ್ಟ ಇಲ್ಲದ ಆಚಾರಗಳನ್ನ ಮಾಡಿದ್ರೆ ಯೆಹೋವನಿಗೆ ಹೇಗನಿಸುತ್ತೆ?

ಯೆಶಾ 1:13-15; 1ಕೊರಿಂ 10:20-22; 2ಕೊರಿಂ 6:14, 15, 17

  • ಬೈಬಲ್‌ ಉದಾಹರಣೆಗಳು:

    • ವಿಮೋ 32:1-10—ಆರೋನ ಇಸ್ರಾಯೇಲ್ಯರ ಒತ್ತಾಯಕ್ಕೆ ಬಿದ್ದು ಕರುವಿನ ಮೂರ್ತಿ ಮಾಡಿ ‘ಯೆಹೋವನಿಗಾಗಿ ಹಬ್ಬ ಮಾಡ್ತಾ ಇದ್ದೀವಿ’ ಅಂತ ಹೇಳಿದ, ಆಗ ಯೆಹೋವನಿಗೆ ತುಂಬಾ ಕೋಪ ಬಂತು

    • 1ಅರ 12:26-30—ರಾಜ ಯಾರೊಬ್ಬಾಮನಿಗೆ ಇಸ್ರಾಯೇಲ್ಯರು ಯೆರೂಸಲೇಮಿನ ದೇವಾಲಯಕ್ಕೆ ಹೋಗೋದು ಇಷ್ಟ ಇರಲಿಲ್ಲ, ಅದಕ್ಕೆ ಅವನು ಮೂರ್ತಿಗಳನ್ನ ಮಾಡಿ ಇದು ಯೆಹೋವನನ್ನ ಪ್ರತಿನಿಧಿಸುತ್ತೆ ಅಂದ, ಇದ್ರಿಂದ ತುಂಬಾ ಜನ ಪಾಪ ಮಾಡಿದ್ರು

ಬೇರೆ ದೇವರುಗಳನ್ನ ಆರಾಧನೆ ಮಾಡೋರಿಂದ ಪ್ರತ್ಯೇಕವಾಗಿರಬೇಕು ಅಂತ ಯೆಹೋವ ಇಸ್ರಾಯೇಲ್ಯರಿಗೆ ಹೇಗೆ ಕಲಿಸಿದನು?

ತನ್ನ ಆರಾಧಕರು ಬೇರೆ ದೇವರುಗಳನ್ನ ಆರಾಧನೆ ಮಾಡಿದಾಗ ಯೆಹೋವ ಏನು ಮಾಡಿದನು?

ನ್ಯಾಯ 10:6, 7; ಕೀರ್ತ 106:35-40; ಯೆರೆ 44:2, 3

  • ಬೈಬಲ್‌ ಉದಾಹರಣೆಗಳು:

    • 1ಅರ 11:1-9—ರಾಜ ಸೊಲೊಮೋನ ಬೇರೆ ದೇಶದ ಹೆಂಡತಿಯರ ಮಾತು ಕೇಳಿ ಬೇರೆ ದೇವರುಗಳನ್ನ ಆರಾಧನೆ ಮಾಡ್ದ, ಜನನೂ ಅವನ ದಾರಿನೇ ಹಿಡಿದು ಯೆಹೋವನ ಕೋಪಕ್ಕೆ ಗುರಿಯಾದ್ರು

    • ಕೀರ್ತ 78:40, 41, 55-62—ಇಸ್ರಾಯೇಲ್ಯರು ಯೆಹೋವನ ವಿರುದ್ಧ ದಂಗೆ ಎದ್ದು ಮೂರ್ತಿಪೂಜೆ ಮಾಡಿದ್ರಿಂದ ಯೆಹೋವನಿಗೆ ತುಂಬಾ ಬೇಜಾರಾಯ್ತು, ಇದ್ರಿಂದ ಆತನು ಅವ್ರ ಕೈಬಿಟ್ಟ ಅಂತ ಆಸಾಫ ಹೇಳಿದ್ದಾನೆ

ಬೈಬಲಿಗೆ ವಿರುದ್ಧವಾಗಿರೋ ಬೋಧನೆಗಳ ಬಗ್ಗೆ ಯೇಸುಗೆ ಹೇಗನಿಸ್ತು?

  • ಬೈಬಲ್‌ ಉದಾಹರಣೆಗಳು:

    • ಮತ್ತಾ 16:6, 12—ಫರಿಸಾಯರು ಮತ್ತು ಸದ್ದುಕಾಯರು ಕಲಿಸ್ತಿದ್ದ ವಿಷ್ಯಗಳನ್ನ ಯೇಸು ಹುಳಿಹಿಟ್ಟಿಗೆ ಹೋಲಿಸಿದನು, ಯಾಕಂದ್ರೆ ಈ ವಿಷ್ಯಗಳನ್ನ ನಂಬಿದ್ರೆ ಯೆಹೋವನ ಜೊತೆ ಇರೋ ಸ್ನೇಹ ಹಾಳಾಗುತ್ತೆ ಅಂತ ಆತನಿಗೆ ಗೊತ್ತಿತ್ತು

    • ಮತ್ತಾ 23:5-7, 23-33—ಪಂಡಿತರು ಮತ್ತು ಫರಿಸಾಯರು ಕಲಿಸ್ತಿದ್ದ ವಿಷ್ಯಗಳನ್ನ ಮತ್ತು ಅವ್ರ ಕಪಟತನವನ್ನ ಯೇಸು ಖಂಡಿಸಿದನು

    • ಮಾರ್ಕ 7:5-9—ಫರಿಸಾಯರು ಮತ್ತು ಪಂಡಿತರು ದೇವರ ವಾಕ್ಯದಲ್ಲಿರೋ ವಿಷ್ಯಗಳಿಗಿಂತ ತಾವು ಮಾಡ್ಕೊಂಡಿರೋ ಸಂಪ್ರದಾಯಗಳಿಗೆ ಜಾಸ್ತಿ ಬೆಲೆ ಕೊಟ್ಟಿದ್ದನ್ನ ಯೇಸು ಖಂಡಿಸಿದನು

ತನ್ನ ಶಿಷ್ಯರು ಬೇರೆ ಬೇರೆ ಧರ್ಮ ಮತ್ತು ಪಂಗಡಗಳಾಗಿ ವಿಭಾಗ ಆಗಬೇಕು ಅಂತ ಯೇಸು ಹೇಳಿದ್ನಾ?

  • ಬೈಬಲ್‌ ಉದಾಹರಣೆಗಳು:

    • ಯೋಹಾ 15:4, 5—ಯೇಸು ಒಂದು ದ್ರಾಕ್ಷಿ ಬಳ್ಳಿಯ ಉದಾಹರಣೆ ಕೊಟ್ಟು ತನ್ನ ಶಿಷ್ಯರು ಯಾವಾಗ್ಲೂ ಒಗ್ಗಟ್ಟಾಗಿರಬೇಕು ಅಂತ ಹೇಳಿದನು

    • ಯೋಹಾ 17:1, 6, 11, 20-23—ಯೇಸು ಸಾಯೋದಕ್ಕೆ ಹಿಂದಿನ ರಾತ್ರಿ ತನ್ನ ಶಿಷ್ಯರು ಒಗ್ಗಟ್ಟಾಗಿ ಇರೋದಕ್ಕೆ ಸಹಾಯ ಮಾಡು ಅಂತ ದೇವರನ್ನ ಬೇಡ್ಕೊಂಡನು

ಒಂದನೇ ಶತಮಾನದಲ್ಲಿದ್ದ ಎಲ್ಲಾ ಸಭೆಯವ್ರ ನಂಬಿಕೆ ಒಂದೇ ತರ ಇತ್ತಾ? ಎಲ್ರೂ ಯೆಹೋವನನ್ನ ಒಂದೇ ತರ ಆರಾಧನೆ ಮಾಡ್ತಿದ್ರಾ?

ಅಕಾ 16:4, 5; ರೋಮ 12:4, 5

  • ಬೈಬಲ್‌ ಉದಾಹರಣೆಗಳು:

    • ಅಕಾ 11:20-23, 25, 26—ಅಂತಿಯೋಕ್ಯ ಮತ್ತು ಯೆರೂಸಲೇಮಿನಲ್ಲಿದ್ದ ಸಭೆಗಳವರು ಒಗ್ಗಟ್ಟಾಗಿದ್ರು, ಒಬ್ರಿಗೊಬ್ರು ಸಹಕಾರ ಕೊಡ್ತಿದ್ರು

    • ರೋಮ 15:25, 26; 2ಕೊರಿಂ 8:1-7—ಒಂದನೇ ಶತಮಾನದಲ್ಲಿದ್ದ ಸಭೆಗಳು ಕಷ್ಟದಲ್ಲಿದ್ದಾಗ ಒಬ್ರಿಗೊಬ್ರು ಸಹಾಯ ಮಾಡೋದ್ರ ಮೂಲಕ ತಮಗೆ ಪ್ರೀತಿ ಒಗ್ಗಟ್ಟಿದೆ ಅಂತ ತೋರಿಸ್ಕೊಟ್ರು

ಯೇಸುನಾ ಆರಾಧನೆ ಮಾಡೋರ ಆರಾಧನೆನಾ ದೇವರು ಮೆಚ್ತಾನಾ?

ಯೇಸು ಮತ್ತು ಅಪೊಸ್ತಲರು ಕಲಿಸಿದ ವಿಷ್ಯಗಳನ್ನ ಒಪ್ಕೊಳ್ಳದೇ ಇರೋರ ಆರಾಧನೆನಾ ದೇವರು ಮೆಚ್ತಾನಾ?

ಅಕಾ 20:29, 30; 1ತಿಮೊ 4:1-3

  • ಬೈಬಲ್‌ ಉದಾಹರಣೆಗಳು:

    • ಮತ್ತಾ 13:24-30, 36-43—ಯೇಸು ಸುಳ್ಳು ಕ್ರೈಸ್ತರನ್ನ ಕಳೆಗಳಿಗೆ ಹೋಲಿಸಿದನು, ಅವರು ಸ್ವಲ್ಪ ಸಮಯ ಸಭೆಲಿ ಇರ್ತಾರೆ ಅಂತ ಹೇಳಿದನು

    • 1ಯೋಹಾ 2:18, 19—ಯೇಸು ಹುಟ್ಟಿ ಬರೀ 100 ವರ್ಷದೊಳಗೆ ಕ್ರಿಸ್ತನ ಶತ್ರುಗಳು ಸಭೆಯೊಳಗೆ ನುಸುಳಿದ್ರು ಅಂತ ಅಪೊಸ್ತಲ ಯೋಹಾನ ಹೇಳಿದ

ಬೈಬಲಿಗೆ ವಿರುದ್ಧವಾದ ವಿಷ್ಯಗಳನ್ನ ಕಲಿಸೋರನ್ನ, ಅದಕ್ಕೆ ವಿರುದ್ಧವಾಗಿ ನಡ್ಕೊಳ್ಳೋರನ್ನ ಸಭೆ ಇರೋಕೆ ಬಿಟ್ರೆ ಏನಾಗುತ್ತೆ?

ಕ್ರೈಸ್ತರು ಒಗ್ಗಟ್ಟಾಗಿ ಇರೋಕೆ ಏನು ಮಾಡಬೇಕು?

ಕ್ರೈಸ್ತರು ಸುಳ್ಳು ಆರಾಧನೆಯಲ್ಲಿ ಯಾಕೆ ಭಾಗವಹಿಸಬಾರದು?

ತಪ್ಪಾದ ಆರಾಧನೆ ಬಗ್ಗೆ ಜನ ತಿಳ್ಕೊಳ್ಳೋಕೆ ನಾವು ಸಹಾಯ ಮಾಡೋದು ಯಾಕೆ ಒಳ್ಳೇದು?

ಸುಳ್ಳು ಧರ್ಮದವರು ನಮ್ಮ ಮೇಲೆ ದಾಳಿ ಮಾಡಿ ಹಿಂಸೆ ಕೊಟ್ಟಾಗ ನಾವು ಯಾಕೆ ಆಶ್ಚರ್ಯಪಡಬಾರದು?