ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಮಾಜಿಕ ಸ್ಥಾನಮಾನ

ಸಾಮಾಜಿಕ ಸ್ಥಾನಮಾನ

ದೇವರು ಜಾತಿ, ಮನೆತನ, ಆಸ್ತಿ-ಅಂತಸ್ತು ನೋಡಿ ಜನ್ರನ್ನ ಅಳೆಯುತ್ತಾನಾ?

ಅಕಾ 17:26, 27; ರೋಮ 3:23-27; ಗಲಾ 2:6; 3:28

  • ಬೈಬಲ್‌ ಉದಾಹರಣೆಗಳು:

    • ಯೋಹಾ 8:31-40—ಕೆಲವು ಯೆಹೂದ್ಯರು ತಾವು ಅಬ್ರಹಾಮನ ವಂಶದಿಂದ ಬಂದವರು ಅಂತ ಕೊಚ್ಕೊಂಡ್ರು, ಆದ್ರೆ ಅವರು ಅಬ್ರಹಾಮನ ತರ ಇಲ್ಲ ಅಂತ ಯೇಸು ಅವ್ರನ್ನ ತಿದ್ದಿದನು

ಬೇರೆ ದೇಶದ, ಜಾತಿಯ ಜನ್ರನ್ನ ನಾವು ಕೀಳಾಗಿ ನೋಡೋದು ಸರಿನಾ?

ಯೋಹಾ 3:16; ರೋಮ 2:11

  • ಬೈಬಲ್‌ ಉದಾಹರಣೆಗಳು:

    • ಯೋನ 4:1-11—ಪ್ರವಾದಿ ಯೋನ ಬೇರೆ ದೇಶದ ಜನ್ರಾದ ನಿನೆವೆಯವರಿಗೆ ಕರುಣೆ ತೋರಿಸಬೇಕು ಅಂತ ಯೆಹೋವ ತಾಳ್ಮೆಯಿಂದ ಕಲಿಸಿದನು

    • ಅಕಾ 10:1-8, 24-29, 34, 35—ಯೆಹೂದ್ಯರಲ್ಲದ ಜನ್ರನ್ನ ಕೀಳಾಗಿ ನೋಡಬಾರದು ಅಂತ ಪೇತ್ರನಿಗೆ ಗೊತ್ತಾಯ್ತು, ಆಮೇಲೆ ಅವನು ಕೊರ್ನೇಲ್ಯ ಮತ್ತು ಅವನ ಕುಟುಂಬದವ್ರಿಗೆ ಕ್ರೈಸ್ತರಾಗೋಕೆ ಸಹಾಯ ಮಾಡಿದ

ಶ್ರೀಮಂತ ಕ್ರೈಸ್ತರು ‘ತಾವು ದೊಡ್ಡವರು, ಬೇರೆಯವರು ತಮ್ಮನ್ನ ಹಾಗೇ ನೋಡಬೇಕು’ ಅಂತ ಅಂದ್ಕೊಬೇಕಾ?

ಮೇಲ್ವಿಚಾರಕರಾಗಿರೋ ಸಹೋದರರು ‘ತಾವು ಬೇರೆಯವ್ರಿಗಿಂತ ದೊಡ್ಡವರು, ದಬ್ಬಾಳಿಕೆ ಮಾಡಬಹುದು’ ಅಂತ ಅಂದ್ಕೊಳ್ಳೋದು ಸರಿನಾ?

2ಕೊರಿಂ 1:24; 1ಪೇತ್ರ 5:2, 3

  • ಬೈಬಲ್‌ ಉದಾಹರಣೆಗಳು:

    • ಧರ್ಮೋ 17:18-20—ಯೆಹೋವ ಇಸ್ರಾಯೇಲಿನ ರಾಜರಿಗೆ ‘ಅವರು ಪ್ರಜೆಗಳಿಗಿಂತ ಶ್ರೇಷ್ಠರಲ್ಲ, ಎಲ್ರೂ ಸಹೋದರರು’ ಅನ್ನೋದನ್ನ ಮನಸ್ಸಲ್ಲಿ ಇಡಬೇಕು ಅಂತ ಹೇಳಿದ್ದನು

    • ಮಾರ್ಕ 10:35-45—ಯೇಸುಗೆ ತನ್ನ ಶಿಷ್ಯರು ಅಧಿಕಾರ, ಸ್ಥಾನಮಾನಕ್ಕೆ ತುಂಬ ಪ್ರಾಮುಖ್ಯತೆ ಕೊಡ್ತಾರೆ ಅಂತ ಗೊತ್ತಾದಾಗ ಅವ್ರನ್ನ ತಿದ್ದಿದನು

ದೇವರು ನಮ್ಮನ್ನ ಇಷ್ಟ ಪಡಬೇಕಂದ್ರೆ ನಾವು ಏನು ಮಾಡೋದು ಮುಖ್ಯ?

ಸರ್ಕಾರ ಅನ್ಯಾಯ ಮಾಡ್ತಿದೆ ಅಂತ ಹೇಳಿ ಜನ್ರು ಮಾಡೋ ಪ್ರತಿಭಟನೆಯಲ್ಲಿ ನಾವು ಸೇರ್ಕೊಬಹುದಾ?

ಎಫೆ 6:5-9; 1ತಿಮೊ 6:1, 2

  • ಬೈಬಲ್‌ ಉದಾಹರಣೆ:

    • ಯೋಹಾ 6:14, 15—ಯೇಸು ಭೂಮಿಯಲ್ಲಿದ್ದಾಗ ಜನ ಆತನನ್ನ ರಾಜನಾಗಿ ಮಾಡಿ ಸಮಸ್ಯೆಗಳನ್ನ ಬಗೆಹರಿಸ್ಕೊಬಹುದು ಅಂದ್ಕೊಂಡ್ರು, ಆದ್ರೆ ಯೇಸು ಅದಕ್ಕೆ ಒಪ್ಪಲಿಲ್ಲ