ಅಧ್ಯಾಯ 11
ಯಾಕಿಷ್ಟು ಕಷ್ಟ?
1, 2. ಅನೇಕರಿಗೆ ಯಾವ ಪ್ರಶ್ನೆ ಬರುತ್ತದೆ?
ಹಳ್ಳಿಗೆ ಹಳ್ಳಿಯನ್ನೇ ಕೊಚ್ಚಿಕೊಂಡು ಹೋದ ಸುನಾಮಿ, ಚರ್ಚಿಗೆ ನುಗ್ಗಿ ಎಲ್ಲಿ ಬೇಕೆಂದರಲ್ಲಿ ಗುಂಡು ಹಾರಿಸಿ ತುಂಬ ಜನರ ಪ್ರಾಣ ತೆಗೆದು ಅನೇಕರನ್ನು ಗಂಭೀರವಾಗಿ ಗಾಯಗೊಳಿಸಿದ ಪಾತಕಿ, ತಾಯಿಯನ್ನು ಬಲಿ ತೆಗೆದುಕೊಂಡು ಐದು ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಮಹಾಮಾರಿ ಕ್ಯಾನ್ಸರ್. ದಿನಬೆಳಗಾದರೆ ಇಂಥ ಮನಕಲಕುವಂಥ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ.
2 ಇಂಥ ಕೆಟ್ಟ ಘಟನೆಗಳು ನಡೆದಾಗ “ಈ ಪ್ರಪಂಚ ಯಾಕಿಷ್ಟು ಹಾಳಾಗಿದೆ?” ಎಂಬ ಪ್ರಶ್ನೆ ಅನೇಕರಿಗೆ ಬರುತ್ತದೆ. ನಿಮಗೂ ಇಂಥ ಪ್ರಶ್ನೆ ಬಂದಿದೆಯಾ?
3, 4. (ಎ) ಹಬಕ್ಕೂಕನು ಏನೆಂದು ಕೇಳಿದನು? (ಬಿ) ಅದಕ್ಕೆ ಯೆಹೋವನು ಏನೆಂದು ಉತ್ತರಕೊಟ್ಟನು?
3 ದೇವರಲ್ಲಿ ತುಂಬ ನಂಬಿಕೆಯಿದ್ದ ವ್ಯಕ್ತಿಗಳಿಗೂ ಇಂಥ ಪ್ರಶ್ನೆ ಬಂದಿತ್ತೆಂದು ಬೈಬಲ್‌ನಿಂದ ಗೊತ್ತಾಗುತ್ತದೆ. ಹಬಕ್ಕೂಕ ಎಂಬ ಪ್ರವಾದಿ ಯೆಹೋವ ದೇವರನ್ನು ಹೀಗೆ ಕೇಳಿದ: “ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ.”—ಹಬಕ್ಕೂಕ 1:3.
4 ಅವನ ಪ್ರಶ್ನೆಗೆ ಯೆಹೋವನು ಉತ್ತರಕೊಟ್ಟನು. ಅಷ್ಟೇ ಅಲ್ಲ ಪರಿಸ್ಥಿತಿಯನ್ನು ಸರಿಪಡಿಸುತ್ತೇನೆ ಎಂದು ಮಾತು ಸಹ ಕೊಟ್ಟನು. ಇದನ್ನು ನಾವು ಹಬಕ್ಕೂಕ 2:2, 3ರಲ್ಲಿ ನೋಡಬಹುದು. ಮನುಷ್ಯರೆಂದರೆ ಯೆಹೋವನಿಗೆ ತುಂಬ ಪ್ರೀತಿ. ‘ಆತನು ನಮಗೋಸ್ಕರ ಚಿಂತಿಸುತ್ತಾನೆ’ ಎಂದು ಬೈಬಲ್ ತಿಳಿಸುತ್ತದೆ. (1 ಪೇತ್ರ 5:7) ಕೆಟ್ಟ ವಿಷಯಗಳನ್ನು ನಾವೆಷ್ಟು ದ್ವೇಷಿಸುತ್ತೇವೋ, ಅದಕ್ಕಿಂತ ಹೆಚ್ಚಾಗಿ ಯೆಹೋವನು ದ್ವೇಷಿಸುತ್ತಾನೆ. (ಯೆಶಾಯ 55:8, 9) ಹಾಗೆಂದ ಮೇಲೆ ಪ್ರಪಂಚದಲ್ಲಿ ಯಾಕಿಷ್ಟು ಕಷ್ಟ ತುಂಬಿಕೊಂಡಿದೆ? ಬನ್ನಿ, ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳೋಣ.
ಯಾಕಿಷ್ಟು ಕಷ್ಟ?
5. (ಎ) ನಮಗೆ ಬರುವ ಕಷ್ಟಗಳ ಬಗ್ಗೆ ಅನೇಕ ಧರ್ಮ ಗುರುಗಳು ಏನೆಂದು ಹೇಳುತ್ತಾರೆ? (ಬಿ) ಆದರೆ ಇದರ ಬಗ್ಗೆ ಬೈಬಲ್ ಏನು ಕಲಿಸುತ್ತದೆ?
5 ನಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಅದು ದೇವರ ಇಚ್ಛೆ ಎಂದು ಯೋಬ 34:12.
ಹೆಚ್ಚಾಗಿ ಪಾದ್ರಿಗಳು, ಪೂಜಾರಿಗಳು ಮತ್ತು ಧರ್ಮ ಗುರುಗಳು ಹೇಳುತ್ತಾರೆ. ಇನ್ನು ಕೆಲವರು, ಮನುಷ್ಯರ ಜೀವನದಲ್ಲಿ ಒಳ್ಳೇದಾಗಲಿ, ಕೆಟ್ಟದ್ದಾಗಲಿ ಎಲ್ಲವನ್ನು ದೇವರು ಮೊದಲೇ ಅವರ ಹಣೆಯಲ್ಲಿ ಬರೆದಿರುತ್ತಾನೆ. ಆದರೆ ದೇವರು ಯಾಕೆ ಹಾಗೆ ಮಾಡುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೆ, ಯಾರೇ ತೀರಿಹೋಗಲಿ ಅವರು ಮಕ್ಕಳೇ ಆಗಿರಲಿ, ದೇವರು ಅವರನ್ನು ತನ್ನ ಬಳಿ ಇರಲಿಕ್ಕಾಗಿ ಕರೆದುಕೊಂಡಿದ್ದಾನೆ ಎನ್ನುತ್ತಾರೆ. ಆದರೆ ಇದು ಯಾವುದೂ ನಿಜ ಅಲ್ಲ. ಯೆಹೋವ ದೇವರು ಯಾವುದೇ ಕಾರಣಕ್ಕೂ ಕೆಟ್ಟದ್ದನ್ನು ಮಾಡುವುದೂ ಇಲ್ಲ, ಬಯಸುವುದೂ ಇಲ್ಲ. ಹಾಗಾಗಿಯೇ “ದೇವರು ಕೆಟ್ಟದ್ದನ್ನು ನಡಿಸುವದೇ ಇಲ್ಲ, ಸರ್ವಶಕ್ತನು ನೀತಿಯನ್ನು ಡೊಂಕುಮಾಡುವದೇ ಇಲ್ಲ” ಎಂದು ಬೈಬಲಿನಲ್ಲಿ ಹೇಳಲಾಗಿದೆ.—6. ಪ್ರಪಂಚದಲ್ಲಿರುವ ಕಷ್ಟಕ್ಕೆ ಅನೇಕರು ದೇವರನ್ನೇಕೆ ದೂರುತ್ತಾರೆ?
6 ಪ್ರಪಂಚದಲ್ಲಿರುವ ಕಷ್ಟಕ್ಕೆಲ್ಲ ದೇವರೇ ಕಾರಣನೆಂದು ಅನೇಕರು ದೂರುತ್ತಾರೆ. ಏಕೆಂದರೆ, ಈ ಪ್ರಪಂಚವನ್ನು ದೇವರು ನಡೆಸುತ್ತಿದ್ದಾನೆಂದು ಅವರು ಅಂದುಕೊಂಡಿದ್ದಾರೆ. ಆದರೆ ನಾವು ಅಧ್ಯಾಯ 3ರಲ್ಲಿ ಕಲಿತಂತೆ ಈ ಪ್ರಪಂಚ ಇರುವುದು ದೇವರ ಕೈಯಲ್ಲಿ ಅಲ್ಲ, ಸೈತಾನನ ಕೈಯಲ್ಲಿ.
7, 8. ಪ್ರಪಂಚದಲ್ಲಿರುವ ಕಷ್ಟಗಳಿಗೆಲ್ಲಾ ಕಾರಣಗಳೇನು?
7 “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್ ತಿಳಿಸುತ್ತದೆ. (1 ಯೋಹಾನ 5:19) ಈ ಪ್ರಪಂಚವನ್ನು ನಡೆಸುತ್ತಿರುವ ಸೈತಾನ ಬಹಳ ದುಷ್ಟ ಮತ್ತು ಕ್ರೂರಿ. ಅಲ್ಲದೆ, ‘ಇಡೀ ಭೂಮಿಯಲ್ಲಿರುವ ಜನರನ್ನು ತಪ್ಪುದಾರಿಗೆ ನಡಿಸುತ್ತಿದ್ದಾನೆ.’ (ಪ್ರಕಟನೆ 12:9) ‘ಯಥಾ ರಾಜ ತಥಾ ಪ್ರಜಾ’ ಎನ್ನುವಂತೆ ಸೈತಾನನ ಹಾಗೆಯೇ ಜನರು ಆಡುತ್ತಿದ್ದಾರೆ. ಆದ್ದರಿಂದಲೇ ಈ ಪ್ರಪಂಚದಲ್ಲಿ ಇಷ್ಟು ಸುಳ್ಳು, ಹಿಂಸೆ, ಕ್ರೂರತನ ತುಂಬಿ ತುಳುಕುತ್ತಿದೆ. ಆದರೆ ಈಗಿರುವ ಕೆಟ್ಟತನಕ್ಕೆ ಇದೊಂದೇ ಕಾರಣವಲ್ಲ.
8 ಮತ್ತೊಂದು ಕಾರಣ ಏನು ಗೊತ್ತಾ? ಆದಾಮ ಮತ್ತು ಹವ್ವ ದೇವರ ಮಾತು ಕೇಳದೆ ಆತನಿಗೆ ತಿರುಗಿಬಿದ್ದು ಪಾಪಿಗಳಾದರು, ಆ ಪಾಪವನ್ನು ತಮ್ಮ ಮಕ್ಕಳಾದ ನಮ್ಮೆಲ್ಲರಿಗೂ ದಾಟಿಸಿದರು. ಪಾಪವು ಮನುಷ್ಯನಲ್ಲಿ ‘ನಾನೇ ಮುಖ್ಯ, ಎಲ್ಲದರಲ್ಲೂ ಬೇರೆಯವರಿಗಿಂತ ನಾನೇ ಮುಂದಿರಬೇಕು’ ಎನ್ನುವ ಭಾವನೆಯನ್ನು ಹುಟ್ಟಿಸಿದೆ. ಹಾಗಾಗಿಯೇ ಮನುಷ್ಯ ಮನುಷ್ಯರ ನಡುವೆ ಹೋರಾಟಗಳು, ಯುದ್ಧಗಳು ನಡೆಯುತ್ತಿವೆ. ಒಬ್ಬರ ಮೇಲೊಬ್ಬರು ಗೂಂಡಾಗಿರಿ ಮಾಡುತ್ತಿದ್ದಾರೆ. ಹೀಗೆ ಮನುಷ್ಯರಿಂದಲೇ ಮನುಷ್ಯರಿಗೆ ಕಷ್ಟ ಬರುತ್ತಿದೆ. (ಪ್ರಸಂಗಿ 4:1; 8:9) ನಮ್ಮ ಕಷ್ಟಗಳಿಗೆ ಮತ್ತೊಂದು ಕಾರಣ ಏನೆಂದರೆ ಬೈಬಲ್ ಹೇಳುವಂತೆ “ಕಾಲವೂ ಅನಿರೀಕ್ಷಿತ ಘಟನೆಗಳೂ ಎಲ್ಲರಿಗೂ ಬಂದೇ ಬರುತ್ತವೆ.” (ಪ್ರಸಂಗಿ 9:11, NW) ಇದರರ್ಥ ನಾವು ಗೊತ್ತಿಲ್ಲದೆ ಅಪಾಯದ ಸ್ಥಳದಲ್ಲಿದ್ದರೆ ಸಮಸ್ಯೆಗೆ ಸಿಕ್ಕಿಹಾಕಿಕೊಂಡು ಕಷ್ಟವನ್ನು ಅನುಭವಿಸುತ್ತೇವೆ.
9. ಕೆಟ್ಟದ್ದನ್ನು ದೇವರು ತಡೆಯದೆ ಇರುವುದಕ್ಕೆ ಸರಿಯಾದ ಕಾರಣ ಇರಲೇಬೇಕೆಂದು ನಾವು ಹೇಗೆ ಹೇಳಬಹುದು?
9 ನಮಗಿರುವ ಯಾವ ಕಷ್ಟಗಳಿಗೂ ದೇವರು ಕಾರಣನಲ್ಲ. ಯುದ್ಧ, ಪಾತಕ ಅಥವಾ ಅನ್ಯಾಯವಾದಾಗ ದೇವರನ್ನು ದೂರುವುದು ಸರಿಯಲ್ಲ. ಈಗ ಆಗುತ್ತಿರುವ ಭೂಕಂಪ, ಚಂಡಮಾರುತ ಮತ್ತು ನೆರೆಹಾವಳಿಗಳ ಹಿಂದೆ ದೇವರ ಕೈವಾಡ ಖಂಡಿತವಾಗಿಯೂ ಇಲ್ಲ. ನೀವು ಹೀಗೆ ಯೋಚಿಸಬಹುದು, ‘ಯೆಹೋವನು ಇಡೀ ಜಗತ್ತಿನಲ್ಲೇ ತುಂಬ ಶಕ್ತಿಶಾಲಿ ಅಂದಮೇಲೆ, ಯಾಕೆ ಇದನ್ನೆಲ್ಲಾ ನಿಲ್ಲಿಸುತ್ತಿಲ್ಲ? ಸುಮ್ಮನೆ ಕೈಕಟ್ಟಿ ಕೂತಿದ್ದಾನಾ?’ ನಮ್ಮ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿರುವ ದೇವರು ಸುಮ್ಮನಿದ್ದಾನೆಂದರೆ ಅದರ ಹಿಂದೆ ಸರಿಯಾದ ಕಾರಣ ಇರಲೇಬೇಕು! ಅದು ಏನೆಂದು ನೋಡೋಣ.—1 ಯೋಹಾನ 4:8.
ಇಷ್ಟೆಲ್ಲ ಆಗುತ್ತಿದ್ದರೂ ದೇವರು ಯಾಕೆ ಸುಮ್ಮನಿದ್ದಾನೆ?
10. ಸೈತಾನನು ಯೆಹೋವನ ಮೇಲೆ ಯಾವ ಆರೋಪವನ್ನು ಹೊರಿಸಿದನು?
10 ಪಿಶಾಚನಾದ ಸೈತಾನನು ಏದೆನ್ ತೋಟದಲ್ಲಿ ಆದಾಮ ಮತ್ತು ಹವ್ವಳಿಗೆ ಮೋಸಮಾಡಿದನು. ದೇವರು ಒಬ್ಬ ಒಳ್ಳೆ ನಾಯಕನಲ್ಲ, ಸರಿಯಾಗಿ ಆಳ್ವಿಕೆ ನಡೆಸುವುದಿಲ್ಲ ಮತ್ತು ಆದಾಮಹವ್ವರಿಗೆ ಸಿಗಬೇಕಾದ ಯಾವುದೋ ಒಂದು ಒಳ್ಳೆಯ ವಿಷಯವನ್ನು ದೇವರು ತಡೆದು ಹಿಡಿದಿದ್ದಾನೆ ಎಂದು ಆರೋಪ ಹೊರಿಸಿದನು. ಅವನು ಹೀಗೆಲ್ಲಾ ಮಾಡುವುದರ ಹಿಂದೆ ಒಂದು ಕೆಟ್ಟ ಉದ್ದೇಶವಿತ್ತು. ಆದಾಮ ಮತ್ತು ಹವ್ವಳಿಗೆ ದೇವರ ಅವಶ್ಯಕತೆಯೇ ಇಲ್ಲವೆಂದು ಮತ್ತು ದೇವರಿಗಿಂತ ತಾನೇ ಒಳ್ಳೆಯ ನಾಯಕನೆಂದು ಅವರು ನಂಬುವಂತೆ ಮಾಡುವುದೇ ಆ ಉದ್ದೇಶವಾಗಿತ್ತು.—ಆದಿಕಾಂಡ 3:2-5. ಟಿಪ್ಪಣಿ 26ನ್ನು ನೋಡಿ.
11. ಯಾವ ಪ್ರಶ್ನೆಗೆ ನಮಗೆ ಉತ್ತರ ಸಿಗಬೇಕಾಗಿದೆ?
11 ಆದಾಮ ಮತ್ತು ಹವ್ವ ಯೆಹೋವನ ಮಾತು ಕೇಳದೆ ಆತನ ವಿರುದ್ಧ ದಂಗೆಯೆದ್ದರು. ಯಾವುದು ಸರಿ, ಯಾವುದು ತಪ್ಪೆಂದು ನಿರ್ಧಾರ ಮಾಡುವ ಹಕ್ಕು ತಮಗಿದೆ ಅಂದುಕೊಂಡರು. ಆದರೆ ಆ ದಂಗೆಕೋರರ ಯೋಚನೆ ತಪ್ಪಾಗಿತ್ತೆಂದು ಮತ್ತು ಅವರಿಗೆ ಯಾವುದು ಒಳ್ಳೇದು ಅಂತ ತನಗೆ ಗೊತ್ತೆಂದು ಯೆಹೋವನು ಹೇಗೆ ರುಜುಪಡಿಸಲಿದ್ದನು? ಈ ಪ್ರಶ್ನೆಗೆ ನಮಗೆ ಉತ್ತರ ಸಿಗಬೇಕಾಗಿದೆ.
12, 13. (ಎ) ತಪ್ಪು ಮಾಡಿದ ತಕ್ಷಣ ಆದಾಮ ಹವ್ವರನ್ನು ಯೆಹೋವನು ಏಕೆ ನಾಶ ಮಾಡಲಿಲ್ಲ? (ಬಿ) ಸೈತಾನನಿಗೆ ಮತ್ತು ಮನುಷ್ಯರಿಗೆ ಯೆಹೋವನು ಏಕೆ ಸಮಯಕೊಟ್ಟನು?
12 ಆದಾಮಹವ್ವರನ್ನು ತಪ್ಪು ಮಾಡಿದ ತಕ್ಷಣ ಯೆಹೋವನು ನಾಶ ಮಾಡಬಹುದಿತ್ತು. ಆದಿಕಾಂಡ 1:28; ಯೆಶಾಯ 55:10, 11.
ಆದರೆ ಹಾಗೆ ಮಾಡಲಿಲ್ಲ. ಬದಲಿಗೆ ಅವರಿಗೆ ಮಕ್ಕಳಾಗುವಂತೆ, ಆ ಮಕ್ಕಳು ತಮ್ಮನ್ನು ಆಳಲು ಯಾರು ಸರಿಯಾದವರು ಎಂದು ಆರಿಸಿಕೊಳ್ಳುವಂತೆ ಅವಕಾಶವನ್ನು ದೇವರು ಕೊಟ್ಟನು. ಈ ಭೂಮಿಯಲ್ಲೆಲ್ಲ ಯಾವುದೇ ಕುಂದುಕೊರತೆಯಿಲ್ಲದ, ಪಾಪವಿಲ್ಲದ ಜನರು ತುಂಬಿಕೊಳ್ಳಬೇಕು ಎನ್ನುವುದು ಯೆಹೋವನ ಆಸೆಯಾಗಿತ್ತು. ಆ ಆಸೆ ಖಂಡಿತ ನೆರವೇರುತ್ತದೆ. ಸೈತಾನ ಎಷ್ಟೇ ಪ್ರಯತ್ನ ಮಾಡಿದರೂ ದೇವರ ಆ ಆಸೆಯನ್ನು ಹಾಳುಮಾಡಲು ಸಾಧ್ಯವಿಲ್ಲ.—13 ಸೈತಾನನು ಯೆಹೋವನ ಮೇಲೆ ಆರೋಪ ಹಾಕುವುದನ್ನು ಕೋಟ್ಯನುಕೋಟಿ ದೇವದೂತರೂ ನೋಡಿದ್ದರು. (ಯೋಬ 38:6, 7; ದಾನಿಯೇಲ 7:10) ಹಾಗಾಗಿ ಆ ಆರೋಪ ಸರಿಯೋ, ತಪ್ಪೋ ಎಂದು ರುಜುಪಡಿಸಲು ದೇವರು ಸೈತಾನನಿಗೆ ಸಮಯಕೊಟ್ಟನು. ಮನುಷ್ಯರಿಗೆ ಸಹ ಯೆಹೋವನು ಸಮಯಕೊಟ್ಟಿದ್ದಾನೆ. ದೇವರ ಸಹಾಯವಿಲ್ಲದೆ ಸೈತಾನನ ಮಾರ್ಗದರ್ಶನದ ಕೆಳಗೆ ತಮ್ಮದೇ ಸರ್ಕಾರಗಳನ್ನು ಮಾಡಿಕೊಂಡು ಯಶಸ್ಸಾಗಲು ಸಾಧ್ಯವಾಗುತ್ತದಾ ಎಂದು ಮನುಷ್ಯರು ತೋರಿಸಿಕೊಡಬೇಕು.
14. ದೇವರು ಸಮಯಕೊಟ್ಟಿದ್ದರಿಂದ ಯಾವ ವಿಷಯ ಸಾಬೀತಾಯಿತು?
14 ಸಾವಿರಾರು ವರ್ಷಗಳಿಂದ ಮನುಷ್ಯರನ್ನು ಮನುಷ್ಯರೇ ಆಳಿಕೊಳ್ಳುತ್ತಿದ್ದಾರೆ. ಆದರೆ ಅವರು ಅದರಲ್ಲಿ ಯಶಸ್ಸು ಕಂಡಿಲ್ಲ. ಇದರಿಂದಾಗಿ ಸೈತಾನನು ಒಬ್ಬ ಮಹಾ ಸುಳ್ಳುಗಾರ ಎಂದು ಸಾಬೀತಾಗಿದೆ. ಮನುಷ್ಯರಿಗೆ ದೇವರ ಸಹಾಯ ಬೇಕೇಬೇಕು. ಪ್ರವಾದಿ ಯೆರೆಮೀಯನು “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂದು ಹೇಳಿದನು. ಈ ಮಾತು ನೂರಕ್ಕೆ ನೂರರಷ್ಟು ಸತ್ಯ.—ಯೆರೆಮೀಯ 10:23.
ಯಾಕೆ ಇಷ್ಟು ವರ್ಷಗಳಾದರೂ ಸುಮ್ಮನಿದ್ದಾನೆ?
15, 16. (ಎ) ಇಷ್ಟು ವರ್ಷಗಳಾದರೂ ಕೆಟ್ಟ ವಿಷಯಗಳು ಮುಂದುವರಿಯುವಂತೆ ಯೆಹೋವನು ಯಾಕೆ ಬಿಟ್ಟಿದ್ದಾನೆ? (ಬಿ) ಯಾಕೆ ಅವುಗಳನ್ನು ಸರಿಪಡಿಸುತ್ತಿಲ್ಲ?
15 ಇಷ್ಟು ವರ್ಷಗಳಾದರೂ ಕೆಟ್ಟ ವಿಷಯಗಳು ಮುಂದುವರಿಯುವಂತೆ ಯೆಹೋವನು ಯಾಕೆ ಬಿಟ್ಟಿದ್ದಾನೆ? ಯಾಕೆ ಸರಿಪಡಿಸುತ್ತಿಲ್ಲ? ಯಾಕೆಂದರೆ ಸೈತಾನನು ಒಳ್ಳೆಯ ನಾಯಕನಲ್ಲ, ಅವನು ಸರಿಯಾಗಿ ಆಳ್ವಿಕೆ ಮಾಡಲಾರ ಎಂದು ರುಜುವಾಗಲು ಸಮಯ ಬೇಕಿತ್ತು. ಮನುಷ್ಯರು ಬೇರೆ ಬೇರೆ ವಿಧದ ಸರ್ಕಾರಗಳನ್ನು ಮಾಡಿ ನೋಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಸೋತು ಹೋಗಿದ್ದಾರೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಎಷ್ಟೇ ಬೆಳವಣಿಗೆಯಾಗಿದ್ದರೂ ಅನ್ಯಾಯ, ಬಡತನ, ಪಾತಕ
ಮತ್ತು ಯುದ್ಧಗಳ ಸಂಖ್ಯೆ ಮುಂಚೆಗಿಂತ ಹೆಚ್ಚಾಗಿದೆ. ದೇವರ ಸಹಾಯವಿಲ್ಲದೆ ನಮ್ಮನ್ನು ನಾವೇ ಆಳಿಕೊಳ್ಳಲು ಸಾಧ್ಯವೇ ಇಲ್ಲ.16 ಸೈತಾನನಿಂದ ಇಷ್ಟೆಲ್ಲ ಸಮಸ್ಯೆಗಳು ಆಗುತ್ತಿದ್ದರೂ ಯೆಹೋವನು ಅವುಗಳನ್ನು ಸರಿಪಡಿಸಿಲ್ಲ. ಒಂದುವೇಳೆ ಸರಿಪಡಿಸಿದರೆ ಆತನೇ ಸೈತಾನನ ಆಳ್ವಿಕೆಯನ್ನು ಬೆಂಬಲಿಸಿದಂತೆ ಆಗಿಬಿಡುತ್ತದೆ. ಅಂಥ ಕೆಲಸವನ್ನು ಯೆಹೋವ ದೇವರು ಯಾವುದೇ ಕಾರಣಕ್ಕೂ ಮಾಡುವುದಿಲ್ಲ. ದೇವರು ಸಮಸ್ಯೆಗಳನ್ನೆಲ್ಲಾ ಸರಿಪಡಿಸಿಬಿಟ್ಟರೆ, ಮನುಷ್ಯರು ಸಹ ‘ನಮ್ಮನ್ನು ನಾವೇ ಚೆನ್ನಾಗಿ ಆಳಿಕೊಳ್ಳಲು ಸಾಧ್ಯ’ ಅಂದುಕೊಳ್ಳುತ್ತಾರೆ. ಆದರೆ ಅದು ಅಪ್ಪಟ ಸುಳ್ಳು. ಆ ಸುಳ್ಳನ್ನು ದೇವರು ಬೆಂಬಲಿಸುವುದಿಲ್ಲ. ಕಾರಣ ದೇವರು ಸುಳ್ಳು ಹೇಳುವುದಿಲ್ಲ.—ಇಬ್ರಿಯ 6:18.
17, 18. ಸೈತಾನನು ಮಾಡಿರುವ ಎಲ್ಲ ಹಾನಿಯನ್ನು ಯೆಹೋವನು ಹೇಗೆ ಸರಿಪಡಿಸುತ್ತಾನೆ?
17 ಸೈತಾನನು ಮತ್ತು ಮನುಷ್ಯರು ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಅವೆಲ್ಲವನ್ನು ಸರಿಪಡಿಸಲು ಯೆಹೋವನಿಗೆ ಸಾಧ್ಯನಾ? ಖಂಡಿತ ಸಾಧ್ಯ. ಯೆಹೋವನ ಕೈಯಲ್ಲಿ ಆಗದೆ ಇರುವಂಥದ್ದು ಒಂದೂ ಇಲ್ಲ. ಸೈತಾನನು ಹಾಕಿರುವ ಪ್ರತಿಯೊಂದು ಆರೋಪ ಸುಳ್ಳೆಂದು ಸಂಪೂರ್ಣವಾಗಿ ಯಾವಾಗ ರುಜುವಾಗುತ್ತದೆಂದು ಯೆಹೋವನಿಗೆ ಚೆನ್ನಾಗಿ ಗೊತ್ತು. ಸೈತಾನನ ಆರೋಪಗಳನ್ನು ಸುಳ್ಳೆಂದು ರುಜುಪಡಿಸಿದ ನಂತರ ದೇವರು ಈ ಭೂಮಿಯನ್ನು ತಾನು ಅಂದುಕೊಂಡಂತೆಯೇ ಸುಂದರ ತೋಟವನ್ನಾಗಿ ಮಾಡುತ್ತಾನೆ. ಆಗ “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ” ಎದ್ದು ಬರುತ್ತಾರೆ. (ಯೋಹಾನ 5:28, 29) ನಮಗೆ ಆರೋಗ್ಯ ಸಮಸ್ಯೆಯೂ ಇರುವುದಿಲ್ಲ, ನಾವು ಸಾಯುವುದೂ ಇಲ್ಲ. ‘ಪಿಶಾಚನ ಕೆಲಸಗಳನ್ನು ಭಂಗಗೊಳಿಸುವ’ ಅಧಿಕಾರವನ್ನು ಯೆಹೋವನು ಯೇಸುವಿಗೆ ಕೊಟ್ಟಿದ್ದಾನೆ. (1 ಯೋಹಾನ 3:8) ಹಾಗಾಗಿ ಸೈತಾನನು ಮಾಡಿರುವ ಎಲ್ಲ ಹಾನಿಯನ್ನು ಯೇಸು ಸರಿಪಡಿಸುತ್ತಾನೆ. ಅಷ್ಟರೊಳಗೆ ನಾವು ಯೆಹೋವನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಆತನೇ ನಮ್ಮನ್ನು ಆಳಲು ಸರಿಯಾದವನು ಎಂದು ನಿರ್ಧರಿಸಬೇಕು ಎನ್ನುವುದು ಯೆಹೋವನ ಆಸೆ. ಹಾಗಾಗಿ ಆತನು ನಮಗೋಸ್ಕರ ತಾಳ್ಮೆಯಿಂದ ಕಾಯುತ್ತಿದ್ದಾನೆ. (2 ಪೇತ್ರ 3:9, 10 ಓದಿ.) ಅಲ್ಲದೆ ಅಷ್ಟರವರೆಗೆ ನಾವು ಎದುರಿಸುವ ಕಷ್ಟಗಳನ್ನು ತಾಳಿಕೊಳ್ಳಲು ಸಹ ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ಇದಕ್ಕೆಲ್ಲ ನಾವು ಯೆಹೋವನಿಗೆ ಋಣಿಗಳಾಗಿರಬೇಕು.—ಯೋಹಾನ 4:23; 1 ಕೊರಿಂಥ 10:13 ಓದಿ.
18 ನಮ್ಮನ್ನು ಆಳಲು ಯೆಹೋವನೇ ಸರಿಯಾದವನು ಎಂದು ನಿರ್ಧರಿಸುವಂತೆ ಆತನು ನಮ್ಮನ್ನು ಒತ್ತಾಯಿಸುವುದಿಲ್ಲ. ನಮಗೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಇದು ಯೆಹೋವನು ನಮಗೆ ಕೊಟ್ಟಿರುವ ಒಂದು ವರವಾಗಿದೆ. ಬನ್ನಿ ಅದು ಹೇಗೆಂದು ನೋಡೋಣ.
ನಿಮ್ಮ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತೀರಿ?
19. (ಎ) ಯಾವ ಅದ್ಭುತ ವರವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ? (ಬಿ) ಅದಕ್ಕಾಗಿ ನಾವು ಯಾಕೆ ಆಭಾರಿಗಳಾಗಿರಬೇಕು?
19 ಯೆಹೋವನು ಕೊಟ್ಟಿರುವ ಈ ಆಯ್ಕೆ ಮಾಡುವ ಸ್ವಾತಂತ್ರ್ಯದಿಂದಾಗಿ ನಾವು ಪ್ರಾಣಿಗಳಿಗಿಂತ ಭಿನ್ನರಾಗಿದ್ದೇವೆ. ಯಾವ ವಿಷಯವನ್ನು ಮಾಡುವಂತೆ ದೇವರು ಪ್ರಾಣಿಗಳನ್ನು ರಚಿಸಿದ್ದಾನೋ ಅದನ್ನು ಮಾತ್ರ ಅವು ಮಾಡುತ್ತವೆ. ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸುವ ಸಾಮರ್ಥ್ಯ ಅವುಗಳಿಗಿಲ್ಲ. ದೇವರು ನಮ್ಮನ್ನು ಯಂತ್ರದಂತೆ ಸಹ ಸೃಷ್ಟಿ ಮಾಡಿಲ್ಲ. ಯಂತ್ರವನ್ನು ಯಾವುದಕ್ಕಾಗಿ ತಯಾರಿಸಿದ್ದಾರೋ ಆ ಕೆಲಸವನ್ನು ಮಾತ್ರ ಅದು ಮಾಡುತ್ತದೆ. ಆದರೆ ನಮ್ಮ ವಿಷಯವೇ ಬೇರೆ. ನಾವು ಹೇಗೆ ಜೀವಿಸಬೇಕೆಂದು ಆಯ್ಕೆ ಮಾಡಬಹುದು, ನಾವು ಯೆಹೋವನನ್ನು ಮೆಚ್ಚಿಸಬೇಕೋ ಬೇಡವೋ ಎಂದು ನಿರ್ಧರಿಸಬಹುದು. (ಜ್ಞಾನೋಕ್ತಿ 30:24-28) ನಾವು ಎಂಥ ವ್ಯಕ್ತಿಗಳಾಗಬೇಕು, ಯಾರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ನಾವು ನಮ್ಮ ಜೀವನದಲ್ಲಿ ಏನು ಮಾಡಬೇಕು ಹೀಗೆ ಯಾವುದೇ ವಿಷಯವಾಗಿರಲಿ ಆಯ್ಕೆ ಮಾಡುವವರು ನಾವೇ. ನಾವು ನಮ್ಮ ಜೀವನವನ್ನು ಸಂತೋಷದಿಂದ ಕಳೆಯಬೇಕೆಂದೇ ಯೆಹೋವನು ನಮಗೆ ಈ ವರವನ್ನು ಕೊಟ್ಟಿದ್ದಾನೆ.
20, 21. ಯಾವ ಉತ್ತಮ ಆಯ್ಕೆಯನ್ನು ನೀವೀಗ ಮಾಡಬೇಕು?
20 ಯೆಹೋವನನ್ನು ನಾವು ಪ್ರೀತಿಸಬೇಕೆಂದು ಆತನು ಇಷ್ಟಪಡುತ್ತಾನೆ. (ಮತ್ತಾಯ 22:37, 38) ‘ಅಪ್ಪಾ ನೀವು ಅಂದ್ರೆ ನಂಗೆ ತುಂಬ ಇಷ್ಟ’ ಅಂತ ಮಗುವೊಂದು ತಂದೆಗೆ ಹೃದಯದಾಳದಿಂದ ಹೇಳಿದರೆ ಆ ತಂದೆಗೆ ಎಷ್ಟು ಖುಷಿಯಾಗುತ್ತದಲ್ವಾ? ಅದನ್ನೇ ಒತ್ತಾಯದಿಂದ ಹೇಳಿದರೆ ಖುಷಿಯಾಗುತ್ತಾ? ಆ ಅಪ್ಪನಂತೆಯೇ ಯೆಹೋವನು ಸಹ ನಾವು ಆತನನ್ನು ಒತ್ತಾಯದಿಂದಲ್ಲ, ಮನಸಾರೆ ಪ್ರೀತಿಸಬೇಕೆಂದು ಬಯಸುತ್ತಾನೆ. ಆತನ ಸೇವೆ ಮಾಡಬೇಕೋ ಬೇಡವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟಿದ್ದಾನೆ. ಸೈತಾನ, ಆದಾಮ, ಹವ್ವ ಯೆಹೋವನಿಂದ ದೂರ ಹೋಗುವ ಆಯ್ಕೆ ಮಾಡಿದರು. ಆದರೆ ನೀವು ಆ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತೀರಿ?
21 ಯೆಹೋವನ ಸೇವೆಮಾಡುವ ಆಯ್ಕೆ ಮಾಡಿ. ದೇವರನ್ನು ಮೆಚ್ಚಿಸಲು ನಿರ್ಧರಿಸಿ ಸೈತಾನನನ್ನು ದೂರ ತಳ್ಳಿರುವ ಲಕ್ಷಾಂತರ ಜನರಿದ್ದಾರೆ. (ಜ್ಞಾನೋಕ್ತಿ 27:11) ಈಗಾಗಲೇ ನಾವು ಕಲಿತಿರುವಂತೆ ದೇವರು ಕಷ್ಟಗಳನ್ನೆಲ್ಲಾ ತೆಗೆದುಹಾಕಿ ಈ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಲಿದ್ದಾನೆ. ನೀವು ಅದರಲ್ಲಿ ಜೀವಿಸಬೇಕಾದರೆ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ಮುಂದಿನ ಅಧ್ಯಾಯದಲ್ಲಿ ಪಡೆಯೋಣ.