ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 7

ಒಬ್ಬ ಧೀರ ಪುರುಷ

ಒಬ್ಬ ಧೀರ ಪುರುಷ

ಭೂಮಿಯಲ್ಲಿ ಜನರ ಸಂಖ್ಯೆಯು ಹೆಚ್ಚುತ್ತಾ ಬಂದ ಹಾಗೆ, ಹೆಚ್ಚಿನವರು ಕಾಯಿನನಂತೆಯೇ ಕೆಟ್ಟ ವಿಷಯಗಳನ್ನು ಮಾಡಿದರು. ಆದರೆ ಒಬ್ಬ ಮನುಷ್ಯನು ಮಾತ್ರ ಭಿನ್ನನಾಗಿದ್ದನು. ಅವನು ಹನೋಕನೆಂಬ ಈ ಪುರುಷನೇ. ಹನೋಕನು ಒಬ್ಬ ಧೀರ ಪುರುಷನಾಗಿದ್ದನು. ಅವನ ಸುತ್ತಮುತ್ತಲಿನ ಜನರು ತುಂಬಾ ಕೆಟ್ಟ ವಿಷಯಗಳನ್ನು ಮಾಡುತ್ತಿದ್ದರು. ಆದರೆ ಹನೋಕನು ದೇವರನ್ನು ಸೇವಿಸುತ್ತಾ ಮುಂದುವರಿದನು.

ಆಗಿನ ಜನರು ಅಷ್ಟು ಹೆಚ್ಚು ಕೆಟ್ಟ ಸಂಗತಿಗಳನ್ನು ಮಾಡಿದ್ದೇಕೆಂದು ನಿಮಗೆ ಗೊತ್ತೋ? ಇದರ ಕುರಿತು ಸ್ವಲ್ಪ ಯೋಚಿಸಿ, ಆದಾಮಹವ್ವರನ್ನು ದೇವರಿಗೆ ಅವಿಧೇಯರಾಗುವಂತೆ ಮಾಡಿದವನು ಯಾರು? ದೇವರು ತಿನ್ನಬಾರದೆಂದು ಹೇಳಿದ ಹಣ್ಣನ್ನು ಅವರು ತಿನ್ನುವಂತೆ ಮಾಡಿದವನು ಯಾರು? ಹೌದು, ಅವನು ಒಬ್ಬ ಕೆಟ್ಟ ದೇವದೂತನಾಗಿದ್ದನು. ಬೈಬಲ್‌ ಅವನನ್ನು ಸೈತಾನನೆಂದು ಕರೆಯುತ್ತದೆ. ಎಲ್ಲರನ್ನೂ ಕೆಟ್ಟವರನ್ನಾಗಿ ಮಾಡಲು ಅವನು ಪ್ರಯತ್ನಿಸುತ್ತಿದ್ದಾನೆ.

ಒಂದು ದಿನ ಯೆಹೋವ ದೇವರು ಹನೋಕನ ಮೂಲಕ ಜನರಿಗೆ ಒಂದು ವಿಷಯ ತಿಳಿಸಿದನು. ಅದು ಅವರಿಗೆ ಇಷ್ಟವಾಗಲಿಲ್ಲ. ಆ ವಿಷಯವೇನೆಂದರೆ, ‘ದೇವರು ಎಲ್ಲಾ ಕೆಟ್ಟ ಜನರನ್ನು ಒಂದು ದಿನ ನಾಶಮಾಡಲಿದ್ದಾನೆ’ ಎಂದಾಗಿತ್ತು. ಇದನ್ನು ಕೇಳಿದಾಗ ಜನರು ತುಂಬಾ ಕೋಪಗೊಂಡಿರಬಹುದು. ಅವರು ಹನೋಕನನ್ನು ಕೊಲ್ಲಲು ಕೂಡ ಪ್ರಯತ್ನಿಸಿರಬಹುದು. ಆದುದರಿಂದ ದೇವರೇನು ಮಾಡಲಿದ್ದನೆಂದು ಜನರಿಗೆ ತಿಳಿಸಲು ಹನೋಕನು ಅತಿ ಧೈರ್ಯವುಳ್ಳವನಾಗಿರಬೇಕಿತ್ತು.

ಹನೋಕನು ಆ ಕೆಟ್ಟ ಜನರೊಂದಿಗೆ ಬಹು ಕಾಲ ಜೀವಿಸುವಂತೆ ದೇವರು ಬಿಡಲಿಲ್ಲ. ಹನೋಕನು ಕೇವಲ 365 ವರ್ಷ ಜೀವಿಸಿದನು. ‘ಕೇವಲ 365 ವರ್ಷ’ ಎಂದು ನಾವು ಹೇಳುವುದೇಕೆ? ಯಾಕೆಂದರೆ ಆ ದಿನಗಳ ಮನುಷ್ಯರು ಇಂದಿರುವ ಜನರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು. ಆದುದರಿಂದ ಹೆಚ್ಚು ಕಾಲ ಜೀವಿಸುತ್ತಿದ್ದರು. ಅಷ್ಟೇಕೆ, ಹನೋಕನ ಮಗನಾದ ಮೆತೂಷೆಲಹನು 969 ವರ್ಷ ಬದುಕಿದನು!

ಹನೋಕನು ಸತ್ತ ಮೇಲೆ ಜನರು ಬಹಳ ಕೆಟ್ಟವರಾಗುತ್ತಾ ಬಂದರು. ‘ಅವರು ಯೋಚಿಸುವದೆಲ್ಲವು ಯಾವಾಗಲೂ ಕೆಟ್ಟದ್ದಾಗಿತ್ತು’ ಮತ್ತು ‘ಭೂಮಿಯು ಹಿಂಸಾಚಾರದಿಂದ ತುಂಬಿಹೋಗಿತ್ತು’ ಎಂದು ಬೈಬಲ್‌ ಹೇಳುತ್ತದೆ.

ಆ ದಿನಗಳಲ್ಲಿ ಭೂಮಿಯ ಮೇಲೆ ಅಷ್ಟೊಂದು ತೊಂದರೆಗಳಿರಲು ಒಂದು ಕಾರಣವೇನೆಂದು ನಿಮಗೆ ಗೊತ್ತೋ? ಅದು ಏನೆಂದರೆ, ಜನರು ಕೆಟ್ಟ ವಿಷಯಗಳನ್ನು ನಡಿಸುವಂತೆ ಮಾಡುವ ಒಂದು ಹೊಸ ವಿಧಾನವು ಸೈತಾನನಲ್ಲಿತ್ತು. ಇದರ ಕುರಿತು ನಾವು ಮುಂದೆ ಕಲಿಯಲಿದ್ದೇವೆ.