ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2

ಜಲಪ್ರಳಯದಿಂದ ಹಿಡಿದು ಐಗುಪ್ತದಿಂದ ಬಿಡುಗಡೆಹೊಂದುವ ತನಕ

ಜಲಪ್ರಳಯದಿಂದ ಹಿಡಿದು ಐಗುಪ್ತದಿಂದ ಬಿಡುಗಡೆಹೊಂದುವ ತನಕ

ಕೇವಲ ಎಂಟು ಮಂದಿ ಜಲಪ್ರಳಯವನ್ನು ಪಾರಾದರು. ಆದರೆ ಕಾಲಾನಂತರ ಅವರು ಸಾವಿರಾರು ಮಂದಿಯಷ್ಟು ವೃದ್ಧಿಯಾದರು. ಜಲಪ್ರಳಯವಾಗಿ 352 ವರ್ಷಗಳಾದ ಬಳಿಕ ಅಬ್ರಹಾಮನು ಹುಟ್ಟಿದನು. ಅಬ್ರಹಾಮನಿಗೆ ಇಸಾಕನೆಂಬ ಹೆಸರಿನ ಮಗನನ್ನು ಕೊಡುವ ಮೂಲಕ ದೇವರು ತನ್ನ ವಾಗ್ದಾನವನ್ನು ಹೇಗೆ ಪಾಲಿಸಿದನೆಂದು ನಾವು ಕಲಿಯುತ್ತೇವೆ. ಅನಂತರ, ಇಸಾಕನ ಇಬ್ಬರು ಮಕ್ಕಳಲ್ಲಿ ದೇವರು ಯಾಕೋಬನನ್ನು ಆರಿಸಿಕೊಂಡನು.

ಯಾಕೋಬನಿಗೆ 12 ಪುತ್ರರು ಮತ್ತು ಕೆಲವು ಪುತ್ರಿಯರಿದ್ದ ದೊಡ್ಡ ಕುಟುಂಬವಿತ್ತು. ಯಾಕೋಬನ 10 ಪುತ್ರರು ಅವರ ಕಿರಿಯ ತಮ್ಮನಾದ ಯೋಸೇಫನನ್ನು ದ್ವೇಷಿಸಿದ್ದರಿಂದ ಅವನನ್ನು ಐಗುಪ್ತದ ದಾಸತ್ವಕ್ಕೆ ಮಾರಿಬಿಟ್ಟರು. ತದನಂತರ, ಯೋಸೇಫನು ಐಗುಪ್ತದ ಒಬ್ಬ ಪ್ರಧಾನ ಅಧಿಪತಿಯಾದನು. ಒಂದು ಘೋರ ಕ್ಷಾಮವು ಬಂದಾಗ, ಅವನ ಸಹೋದರರ ಮನಸ್ಸು ಬದಲಾಗಿದೆಯೋ ಇಲ್ಲವೋ ಎಂದು ನೋಡಲು ಯೋಸೇಫನು ಅವರನ್ನು ಪರೀಕ್ಷಿಸಿದನು. ಕೊನೆಗೆ, ಯಾಕೋಬನ ಇಡೀ ಕುಟುಂಬ ಅಂದರೆ ಇಸ್ರಾಯೇಲ್ಯರೆಲ್ಲರು ಐಗುಪ್ತಕ್ಕೆ ಹೋದರು. ಇದು ಅಬ್ರಹಾಮನು ಹುಟ್ಟಿ 290 ವರ್ಷಗಳ ನಂತರ ಸಂಭವಿಸಿತು.

ಮುಂದಿನ 215 ವರ್ಷಗಳ ತನಕ ಇಸ್ರಾಯೇಲ್ಯರು ಐಗುಪ್ತದಲ್ಲಿ ವಾಸಿಸಿದರು. ಯೋಸೇಫನು ತೀರಿಹೋದ ಮೇಲೆ ಅವರು ಅಲ್ಲಿ ದಾಸರಾದರು. ಸಮಯಾನಂತರ ಮೋಶೆ ಹುಟ್ಟಿದನು. ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಲು ದೇವರು ಅವನನ್ನು ಉಪಯೋಗಿಸಿದನು. ಮೊತ್ತದಲ್ಲಿ, 857 ವರ್ಷಗಳ ಇತಿಹಾಸವು ಭಾಗ ಎರಡರಲ್ಲಿ ಆವರಿತವಾಗಿದೆ.

 

ಈ ಭಾಗದಲ್ಲಿ

ಕಥೆ 11

ಮೊದಲ ಮುಗಿಲುಬಿಲ್ಲು

ಮಳೆಬಿಲ್ಲನ್ನು ನೋಡಿದಾಗ ನಿಮಗೆ ಏನು ನೆನಪಾಗಬೇಕು?

ಕಥೆ 12

ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ

ದೇವರಿಗೆ ಇದು ಇಷ್ಟವಾಗಲಿಲ್ಲ, ಆ ಜನರಿಗೆ ಕೊಟ್ಟ ಶಿಕ್ಷೆಯ ಪರಿಣಾಮ ಇಂದಿನವರೆಗೂ ಇದೆ.

ಕಥೆ 13

ಅಬ್ರಹಾಮ—ದೇವರ ಸ್ನೇಹಿತ

ಅಬ್ರಹಾಮನು ಸುಖ-ಸೌಕರ್ಯಗಳಿದ್ದ ತನ್ನ ಮನೆಯನ್ನು ಬಿಟ್ಟುಬಂದು ಉಳಿದ ಜೀವಮಾನವೆಲ್ಲ ಡೇರೆಗಳಲ್ಲಿ ವಾಸ ಮಾಡಿದ್ದೇಕೆ?

ಕಥೆ 14

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ

ದೇವರು ಅಬ್ರಹಾಮವಿಗೆ ಇಸಾಕನನ್ನು ಯಜ್ಞ ಅರ್ಪಿಸಲು ಕೇಳಿದ್ದು ಯಾಕೆ?

ಕಥೆ 15

ಲೋಟನ ಪತ್ನಿ ಹಿಂದೆ ನೋಡಿದಳು

ಆಕೆ ಏನು ಮಾಡಿದಳೋ ಅದು ನಮಗೆ ಪ್ರಾಮುಖ್ಯ ಪಾಠ ಕಲಿಸುತ್ತದೆ.

ಕಥೆ 16

ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ

ರೆಬೆಕ್ಕಳನ್ನು ಒಳ್ಳೇ ಪತ್ನಿ ಎಂದು ಏಕೆ ಹೇಳಲಾಗಿದೆ? ಅವಳ ಸೌಂದರ್ಯಕ್ಕಾಗಿಯಾ, ಅಥವಾ ಬೇರೆ ಯಾವುದೋ ಕಾರಣಕ್ಕಾಗಿಯೋ

ಕಥೆ 17

ಭಿನ್ನರಾಗಿದ್ದ ಅವಳಿಗಳು

ಅವರ ತಂದೆ, ಇಸಾಕ, ಏಸಾವನನ್ನು ಹೆಚ್ಚು ಪ್ರೀತಿಸಿದನು, ಆದರೆ ಅವರ ತಾಯಿ, ರೆಬೆಕ್ಕ, ಯಾಕೋಬನನ್ನು ಹೆಚ್ಚು ಪ್ರೀತಿಸಿದಳು.

ಕಥೆ 18

ಯಾಕೋಬನು ಖಾರಾನಿಗೆ ಹೋಗುತ್ತಾನೆ

ಯಾಕೋಬನು ರಾಹೇಲಳನ್ನು ಪ್ರೀತಿಸಿದನಾದರೂ ಮೊದಲು ಲೇಯಳನ್ನು ಮದುವೆಯಾಗುತ್ತಾನೆ.

ಕಥೆ 19

ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ

ಯಾಕೋಬನ 12 ಮಂದಿ ಗಂಡುಮಕ್ಕಳ ಹೆಸರೇ ಆ ಜನಾಂಗದ 12 ಕುಲಗಳಿಗೆ ಬಂತಾ?

ಕಥೆ 20

ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ

ಎಲ್ಲದಕ್ಕೂ ಕೆಟ್ಟವರ ಸ್ನೇಹ ಮಾಡಿದ್ದೇ ಕಾರಣ.

ಕಥೆ 21

ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ

ಕೆಲವರು ತಮ್ಮ ಸ್ವಂತ ಸಹೋದರನನ್ನೇ ಕೊಲ್ಲುವ ಮಟ್ಟಿಗೆ ಹೋಗಲು ಯಾವುದು ಕಾರಣವಾಗಿರುತ್ತದೆ?

ಕಥೆ 22

ಯೋಸೇಫನನ್ನು ಸೆರೆಮನೆಗೆ ಹಾಕುತ್ತಾರೆ

ಅವನು ಅಲ್ಲಿರುವುದು ಕಾನೂನನ್ನು ಮೀರಿದ್ದಕ್ಕಲ್ಲ, ಸರಿಯಾದದ್ದನ್ನು ಮಾಡಿದ್ದಕ್ಕಾಗಿ.

ಕಥೆ 23

ಫರೋಹನ ಕನಸುಗಳು

ಏಳು ಹಸುಗಳು ಮತ್ತು ಏಳು ತೆನೆಗಳ ವಿಷಯದಲ್ಲಿ ಯಾವುದೋ ಒಂದು ಸಮಾನ ಅಂಶವಿದೆ.

ಕಥೆ 24

ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ

ತನ್ನನ್ನು ದಾಸನಾಗಿ ಮಾರಿದ ಅಣ್ಣಂದಿರು ಈಗ ಬದಲಾಗಿದ್ದಾರಾ ಇಲ್ಲವಾ ಎಂದು ಯೋಸೇಫನು ತಿಳಿದುಕೊಳ್ಳುವುದು ಹೇಗೆ?

ಕಥೆ 25

ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ

ಯಾಕೋಬನ ಕುಟುಂಬವನ್ನು ಯಾಕೋಬ್ಯರು ಎಂದು ಕರೆಯದೆ ಇಸ್ರಾಯೇಲ್ಯರು ಎಂದು ಕರೆಯುವುದೇಕೆ?

ಕಥೆ 26

ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ

ಯೋಬನು ತನ್ನ ಸಂಪತ್ತು, ಆರೋಗ್ಯ, ಎಲ್ಲ ಮಕ್ಕಳನ್ನು ಕಳೆದುಕೊಳ್ಳುತ್ತಾನೆ. ದೇವರು ಈ ರೀತಿ ಯೋಬನಿಗೆ ಶಿಕ್ಷೆ ಕೊಡುತ್ತಿದ್ದನಾ?

ಕಥೆ 27

ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ

ಅವನು ತನ್ನ ಜನರಿಗೆ ಇಸ್ರಾಯೇಲ್ಯರ ಎಲ್ಲ ಗಂಡು ಕೂಸುಗಳನ್ನು ಕೊಲ್ಲುವಂತೆ ಹೇಳಿದ್ದೇಕೆ?

ಕಥೆ 28

ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ

ಇಸ್ರಾಯೇಲ್ಯರ ಎಲ್ಲ ಗುಂಡು ಕೂಸುಗಳನ್ನು ಕೊಲ್ಲಬೇಕೆಂಬ ಆಜ್ಞೆ ಮೋಶೆಯ ತಾಯಿಗೆ ಗೊತ್ತಿತ್ತು. ಮೋಶೆಯನ್ನು ಅದರಿಂದ ರಕ್ಷಿಸಲು ಆಕೆ ಒಂದು ಉಪಾಯ ಮಾಡುತ್ತಾಳೆ.

ಕಥೆ 29

ಮೋಶೆ ಓಡಿಹೋಗಲು ಕಾರಣ

ಮೋಶೆ 40 ವರ್ಷದವನಾದಾಗ ತಾನು ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಲು ಸಿದ್ಧನಾಗಿದ್ದೇನೆಂದು ನೆನಸಿದನು, ಆದರೆ ಅವನು ನಿಜವಾಗಿಯೂ ಸಿದ್ಧನಾಗಿರಲಿಲ್ಲ.

ಕಥೆ 30

ಉರಿಯುತ್ತಿರುವ ಪೊದೆ

ಅನೇಕ ಅದ್ಭುತಗಳನ್ನು ತೋರಿಸಿ ದೇವರು ಮೋಶೆಗೆ, ಇಸ್ರಾಯೇಲ್ಯರನ್ನು ಈಜಿಪ್ಟಿನಿಂದ ಬಿಡಿಸಿ ತರುವ ಸಮಯ ಬಂದಿದೆಯೆಂದು ಹೇಳುತ್ತಾನೆ.

ಕಥೆ 31

ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ

ಫರೋಹನು ಮೋಶೆಯ ಮಾತಿಗೆ ಯಾಕೆ ಕಿವಿಗೊಡುವುದಿಲ್ಲ? ಯಾಕೆ ಇಸ್ರಾಯೇಲ್ಯರನ್ನು ಕಳುಹಿಸುವುದಿಲ್ಲ?

ಕಥೆ 32

ಹತ್ತು ಬಾಧೆಗಳು

ಈಜಿಪ್ಟಿನ ಅರಸ ಫರೋಹನು ಹಠಮಾರಿತನದಿಂದ ಇಸ್ರಾಯೇಲ್ಯರನ್ನು ಕಳುಹಿಸಿ ಕೊಡದ ಕಾರಣದಿಂದಲೇ ದೇವರು ಈಜಿಪ್ಟಿನ ಮೇಲೆ 10 ವಿಪತ್ತುಗಳನ್ನು ತಂದನು.

ಕಥೆ 33

ಕೆಂಪು ಸಮುದ್ರವನ್ನು ದಾಟುವುದು

ಮೋಶೆಯು ದೇವರ ಶಕ್ತಿಯಿಂದ ಕೆಂಪು ಸಮುದ್ರವನ್ನು ಇಬ್ಭಾಗ ಮಾಡುತ್ತಾನೆ. ಇಸ್ರಾಯೇಲ್ಯರು ಒಣನೆಲದಲ್ಲಿ ನಡೆದು ಸಮುದ್ರವನ್ನು ದಾಟುತ್ತಾರೆ.