ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4

ಇಸ್ರಾಯೇಲ್ಯರ ಮೊದಲನೆಯ ಅರಸನಿಂದ ಬಾಬೆಲಿನಲ್ಲಿ ಬಂದಿವಾಸದ ತನಕ

ಇಸ್ರಾಯೇಲ್ಯರ ಮೊದಲನೆಯ ಅರಸನಿಂದ ಬಾಬೆಲಿನಲ್ಲಿ ಬಂದಿವಾಸದ ತನಕ

ಸೌಲನು ಇಸ್ರಾಯೇಲಿನ ಮೊದಲನೆಯ ಅರಸನಾದನು. ಆದರೆ ಯೆಹೋವನು ಅವನನ್ನು ತಿರಸ್ಕರಿಸಿ ಅವನಿಗೆ ಬದಲಾಗಿ ದಾವೀದನನ್ನು ಅರಸನಾಗಿ ಆರಿಸಿದನು. ದಾವೀದನ ಕುರಿತು ನಾವು ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಅವನು ಯುವಕನಾಗಿದ್ದಾಗ ದೈತ್ಯ ಗೊಲ್ಯಾತನೊಂದಿಗೆ ಹೋರಾಡಿದನು. ಅನಂತರ, ಅಸೂಯೆಪಟ್ಟ ಅರಸ ಸೌಲನಿಂದ ದೂರ ಪಲಾಯನಗೈದನು. ಆಮೇಲೆ ದಾವೀದನು ಅವಿವೇಕದ ಒಂದು ಕೃತ್ಯ ಮಾಡದಂತೆ ಸುಂದರಿ ಅಬೀಗೈಲಳು ಅವನನ್ನು ತಡೆದಳು.

ತದನಂತರ, ಇಸ್ರಾಯೇಲಿನ ಅರಸನಾಗಿ ದಾವೀದನ ಸ್ಥಾನವನ್ನು ಅಲಂಕರಿಸಿದ ದಾವೀದನ ಪುತ್ರ ಸೊಲೊಮೋನನ ಕುರಿತು ಅನೇಕ ವಿಷಯಗಳನ್ನು ನಾವು ಕಲಿಯುತ್ತೇವೆ. ಇಸ್ರಾಯೇಲಿನ ಆರಂಭದ ಮೂವರು ಅರಸರಲ್ಲಿ ಪ್ರತಿಯೊಬ್ಬರು 40 ವರ್ಷ ರಾಜ್ಯವಾಳಿದರು. ಸೊಲೊಮೋನನ ಮರಣಾನಂತರ ಇಸ್ರಾಯೇಲು ಉತ್ತರ ರಾಜ್ಯ ಮತ್ತು ದಕ್ಷಿಣ ರಾಜ್ಯವೆಂದು ಎರಡು ಭಾಗಗಳಾಗಿ ವಿಂಗಡಗೊಂಡಿತು.

ಉತ್ತರದ ಹತ್ತು ಕುಲಗಳ ರಾಜ್ಯವು 257 ವರ್ಷ ಆಳ್ವಿಕೆ ನಡೆಸಿತು. ಬಳಿಕ ಅಶ್ಶೂರ್ಯರಿಂದ ನಾಶವಾಯಿತು. 133 ವರ್ಷಗಳ ತರುವಾಯ ದಕ್ಷಿಣದ ಎರಡು ಕುಲಗಳ ರಾಜ್ಯವು ಸಹ ನಾಶಮಾಡಲ್ಪಟ್ಟಿತು. ಆಗ ಇಸ್ರಾಯೇಲ್ಯರು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಟ್ಟರು. ಹೀಗೆ ಭಾಗ ನಾಲ್ಕು ಇತಿಹಾಸದ 510 ವರ್ಷಗಳನ್ನು ಆವರಿಸುತ್ತದೆ. ಆ ಸಮಯದಲ್ಲಿ ನಡೆದ ಅನೇಕ ರೋಮಾಂಚಕ ಘಟನೆಗಳನ್ನು ನಾವೀಗ ನೋಡಲಿರುವೆವು.

 

ಈ ಭಾಗದಲ್ಲಿ

ಕಥೆ 56

ಸೌಲ—ಇಸ್ರಾಯೇಲಿನ ಮೊದಲನೆಯ ಅರಸ

ಸೌಲ ನಮಗೆ ಒಂದು ಒಳ್ಳೇ ಪಾಠ. ಮೊದಲು ಯೆಹೋವನು ಅವನನ್ನು ಆರಿಸುತ್ತಾನೆ ನಂತರ ತ್ಯಜಿಸುತ್ತಾನೆ.

ಕಥೆ 57

ದೇವರು ದಾವೀದನನ್ನು ಆರಿಸುತ್ತಾನೆ

ಸಾಮುವೇಲನು ನೋಡದ ಯಾವ ವಿಷಯವನ್ನು ದೇವರು ದಾವೀದನಲ್ಲಿ ನೋಡುತ್ತಾನೆ?

ಕಥೆ 58

ದಾವೀದ ಮತ್ತು ಗೊಲ್ಯಾತ

ದಾವೀನು ಗೊಲ್ಯಾತನ ವಿರುದ್ಧ ಒಂದು ಕವಣಿಯನ್ನು ಬಳಸಿ ಮಾತ್ರವಲ್ಲ ಅದಕ್ಕಿಂದ ಬಲಿಷ್ಠವಾದ ಆಯುದದ ಸಹಾಯದಿಂದ ಜಯಗಳಿಸಿದನು.

ಕಥೆ 59

ದಾವೀದನು ಓಡಿಹೋಗಲು ಕಾರಣ

ಸೌಲನು ಮೊದಲು ದಾವೀದನನ್ನು ಮೆಚ್ಚುತ್ತಾನೆ. ಆದರೆ ನಂತರ ದಾವೀದನನ್ನು ಹೊಟ್ಟೆಕಿಚ್ಚಿನಿಂದ ಕೊಲ್ಲುವಷ್ಟು ಸೌಲನು ಬದಲಾಗುತ್ತಾನೆ. ಯಾಕೆ?

ಕಥೆ 60

ಅಬೀಗೈಲ್‌ ಮತ್ತು ದಾವೀದ

ಅಬೀಗೈಲ್‌ ತನ್ನ ಗಂಡನನ್ನು ಮೂರ್ಖ ಎಂದು ಕರೆಯುತ್ತಾಳೆ. ಹೀಗೆ ಮಾಡಿದ್ದರಿಂದ ಅವನ ಪ್ರಾಣವನ್ನು ಉಳಿಸುತ್ತಾಳೆ.

ಕಥೆ 61

ದಾವೀದನು ಅರಸನಾಗುತ್ತಾನೆ

ದಾವೀದನು ಮಾಡಿದ ಮತ್ತು ಮಾಡಲು ನಿರಾಕರಿಸಿದ ವಿಷಯಗಳಿಂದ ಅವನು ಇಸ್ರಾಯೇಲಿನ ಅರಸನಾಗಲು ಯೋಗ್ಯನೆಂದು ತೋರಿಸಿಕೊಟ್ಟ.

ಕಥೆ 62

ದಾವೀದನ ಮನೆಯಲ್ಲಿ ತೊಂದರೆ

ದಾವೀದ ಒಂದು ತಪ್ಪು ಮಾಡಿದ್ದದಿಂದ ತನಗೆ ಮತ್ತು ತನ್ನ ಕುಟುಂಬದ ಮೇಲೆ ವರ್ಷಗಳ ತನಕ ತೊಂದರೆಯನ್ನು ತಂದುಕೊಳ್ಳುತ್ತಾನೆ.

ಕಥೆ 63

ವಿವೇಕಿ ಅರಸ ಸೊಲೊಮೋನ

ಸೊಲೊಮೋನನು ನಿಜವಾಗಲೂ ಮಗುವನ್ನು ಎರಡು ತುಂಡುಗಳಾಗಿ ಮಾಡುತ್ತಿದ್ದನಾ?

ಕಥೆ 64

ಸೊಲೊಮೋನ ದೇವಾಲಯ ಕಟ್ಟುತ್ತಾನೆ

ಸೊಲೊಮೋನನು ತುಂಬ ವಿವೇಕಿಯಾಗಿದ್ದರೂ ಮೂರ್ಖತನವಾದ ಮತ್ತು ತಪ್ಪಾದ ಕೆಲಸ ಮಾಡುವ ಒತ್ತಡಕ್ಕೆ ಬಲಿಬೀಳುತ್ತಾನೆ.

ಕಥೆ 65

ರಾಜ್ಯವು ಇಬ್ಭಾಗವಾಗುತ್ತದೆ

ಯಾರೊಬ್ಬಾಮ ರಾಜ್ಯವನ್ನು ಆಳಲು ಶುರುಮಾಡಿದಂದಿನಿಂದ ಜನರು ದೇವರ ನಿಯಮಗಳನ್ನು ಮುರಿಯುವಂತೆ ಮಾಡುತ್ತಾನೆ.

ಕಥೆ 66

ದುಷ್ಟ ರಾಣಿ-ಈಜಬೇಲ್‌

ತನಗೆ ಏನು ಬೇಕಿತ್ತೋ ಅದನ್ನುರಾಣಿ ಈಜಬೇಲ್‌ ಕೊಣೆಗೂ ಪಡೆದುಕೊಂಡಳು

ಕಥೆ 67

ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ

ಯಾವುದೇ ಅಸ್ತ್ರಗಳಿಲ್ಲದೆ ಕೇವಲ ಗಾಯಕರ ಜೊತೆ ಹೋಗಿ ಈ ಸೈನ್ಯ ಏನನ್ನು ಸಾಧಿಸಿತು?

ಕಥೆ 68

ಪುನಃ ಜೀವ ಪಡೆದ ಇಬ್ಬರು ಹುಡುಗರು

ಸತ್ತು ಹೋಗಿರುವವರು ಪುನಃ ಬದುಕಲು ಸಾಧ್ಯಾನಾ? ಈ ಮುಂಚೆ ಇದು ಸಂಬವಿಸಿದೆ!

ಕಥೆ 69

ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ

ಅವಳು ಧೈರ್ಯದಿಂದ ಮಾತಾಡಿದರಿಂದ ಅದ್ಭುತ ಆಗುತ್ತದೆ.

ಕಥೆ 70

ಯೋನ ಮತ್ತು ದೊಡ್ಡ ಮೀನು

ಯೆಹೋವನು ಹೇಳಿದಂತೆ ಮಾಡಬೇಕು ಎಂಬ ದೊಡ್ಡ ಪಾಠವನ್ನು ಯೋನ ಕಲೆತ

ಕಥೆ 71

ದೇವರು ವಾಗ್ದಾನಿಸುವ ಪರದೈಸ್‌

ಆರಂಭದ ಪರದೈಸ್‌ ಚಿಕ್ಕದ್ದಾಗಿತ್ತು; ಆದರೆ ಮುಂದಕ್ಕೆ ಇಡೀ ಭೂಮಿಯೇ ಪರದೈಸಾಗುತ್ತದೆ.

ಕಥೆ 72

ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ

ಒಂದೇ ರಾತ್ರಿಯಲ್ಲಿ ದೇವದೂತನು 1,85,000 ಮಂದಿ ಅಶ್ಯೂರ್ಯದ ಸೈನಿಕರನ್ನು ಕೊಲ್ಲುತ್ತಾನೆ.

ಕಥೆ 73

ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ

ಯೋಷೀಯ ತನ್ನ ಚಿಕ್ಕ ಪ್ರಾಯದಲ್ಲಿ ತುಂಬ ಚತುರನಾಗಿದ್ದನು.

ಕಥೆ 74

ಭಯಪಡದ ಒಬ್ಬ ಮನುಷ್ಯ

ತಾನು ಇನ್ನೂ ಚಿಕ್ಕ ಬಾಲಕ ಎಂದು ಯೆರೆಮೀಯ ನೆನಸಿದ್ದ, ಹಾಗಾಗಿಯೇ ಪ್ರವಾದಿಯಾಗಲು ಹೆದರಿದ. ಆದರೆ ಯೆಹೋವ ದೇವರಿಗೆ ಗೊತ್ತಿತ್ತು ಯೆರೆಮೀಯನಿಂದ ಇದು ಸಾಧ್ಯ ಅಂತ.

ಕಥೆ 75

ಬಾಬೆಲಿನಲ್ಲಿ ನಾಲ್ವರು ಹುಡುಗರು

ಅವರು ತಮ್ಮ ಕುಟುಂಬಗಳಿಂದ ದೂರ ಇದ್ದರೂ ಒತ್ತಡವನ್ನು ಜಯಿಸಿದರು.

ಕಥೆ 76

ಯೆರೂಸಲೇಮ್‌ ನಾಶವಾಗುತ್ತದೆ

ಇಸ್ರಾಯೇಲ್ಯರ ವಿರೋಧಿಗಳಾಗಿದ್ದ ಅನ್ಯ ಬಾಬೆಲಿನವರು ಬಂದು ನಾಶಮಾಡುವಂತೆ ಯೆಹೋವನು ಯಾಕೆ ಬಿಟ್ಟುಬಿಟ್ಟನು?