ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 89

ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ

ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ

ಯೇಸು ಇಲ್ಲಿ ತುಂಬಾ ಕೋಪಗೊಂಡಿರುವಂತೆ ಕಾಣಿಸುತ್ತಾನೆ ಅಲ್ಲವೇ? ಅವನಷ್ಟು ಕೋಪಗೊಂಡಿರುವುದೇಕೆಂದು ನಿಮಗೆ ತಿಳಿದಿದೆಯೇ? ಏಕೆಂದರೆ ಯೆರೂಸಲೇಮಿನ ದೇವಾಲಯದಲ್ಲಿರುವ ಈ ಜನರು ಅತ್ಯಾಶೆಯುಳ್ಳವರಾಗಿದ್ದಾರೆ. ದೇವರನ್ನು ಆರಾಧಿಸುವುದಕ್ಕಾಗಿ ಇಲ್ಲಿಗೆ ಬರುವ ಜನರಿಂದ ತುಂಬಾ ಹಣಮಾಡಲು ಪ್ರಯತ್ನಿಸುತ್ತಿದ್ದಾರೆ.

ಅಲ್ಲಿರುವ ಎಳೆಯ ಹೋರಿಗಳು, ಕುರಿಗಳು ಮತ್ತು ಪಾರಿವಾಳಗಳು ನಿಮಗೆ ಕಾಣಿಸುತ್ತಿವೆಯೋ? ಈ ಜನರು ಆಲಯದೊಳಗೇ ಈ ಪ್ರಾಣಿಗಳನ್ನೆಲ್ಲಾ ಮಾರುತ್ತಿದ್ದಾರೆ. ಏಕೆಂದು ನಿಮಗೆ ಗೊತ್ತೋ? ಏಕೆಂದರೆ ದೇವರಿಗೆ ಯಜ್ಞಮಾಡಲು ಇಸ್ರಾಯೇಲ್ಯರಿಗೆ ಪ್ರಾಣಿಪಕ್ಷಿಗಳು ಬೇಕು.

ಒಬ್ಬ ಇಸ್ರಾಯೇಲ್ಯನು ಏನಾದರೂ ತಪ್ಪು ಮಾಡಿದಾಗ, ಅವನು ದೇವರಿಗೆ ಒಂದು ಯಜ್ಞವನ್ನು ಅರ್ಪಿಸಬೇಕೆಂದು ದೇವರ ನಿಯಮವು ಹೇಳಿದೆ. ಇಸ್ರಾಯೇಲ್ಯರು ಯಜ್ಞಗಳನ್ನು ಅರ್ಪಿಸಬೇಕಾಗಿದ್ದ ಬೇರೆ ಸಮಯಗಳೂ ಇದ್ದವು. ಆದರೆ ದೇವರಿಗೆ ಸಮರ್ಪಿಸುವುದಕ್ಕಾಗಿ ಪ್ರಾಣಿಪಕ್ಷಿಗಳನ್ನೂ ಇಸ್ರಾಯೇಲ್ಯನೊಬ್ಬನು ಎಲ್ಲಿಂದ ಪಡಕೊಳ್ಳಸಾಧ್ಯವಿತ್ತು?

ಕೆಲವು ಇಸ್ರಾಯೇಲ್ಯರು ಪ್ರಾಣಿಪಕ್ಷಿಗಳನ್ನು ಸಾಕಿದ್ದರು. ಹಾಗಾಗಿ ಅವರು ಅವನ್ನು ತಂದು ಅರ್ಪಿಸಸಾಧ್ಯವಿತ್ತು. ಆದರೆ ಹೆಚ್ಚಿನ ಇಸ್ರಾಯೇಲ್ಯರ ಬಳಿ ತಮ್ಮದೂ ಅಂತ ಯಾವುದೇ ಪ್ರಾಣಿಗಳಾಗಲಿ ಪಕ್ಷಿಗಳಾಗಲಿ ಇರಲಿಲ್ಲ. ಮಾತ್ರವಲ್ಲ, ಇತರರು ಯೆರೂಸಲೇಮಿನಿಂದ ಬಹಳಷ್ಟು ದೂರದಲ್ಲಿ ವಾಸಿಸುತ್ತಿದ್ದುದರಿಂದ ತಮ್ಮ ಪ್ರಾಣಿಗಳಲ್ಲೊಂದನ್ನು ಆಲಯಕ್ಕೆ ತೆಗೆದುಕೊಂಡು ಬರಲಾಗುತ್ತಿರಲಿಲ್ಲ. ಹಾಗಾಗಿ ಜನರು ಇಲ್ಲಿಗೆ ಬಂದು ತಮಗೆ ಬೇಕಾದ ಪ್ರಾಣಿ ಇಲ್ಲವೆ ಪಕ್ಷಿಗಳನ್ನು ಖರೀದಿಸುತ್ತಿದ್ದರು. ಆದರೆ ಈ ಮನುಷ್ಯರು ಅವರಿಂದ ಹೆಚ್ಚು ಹಣ ಕೇಳುತ್ತಿದ್ದರು. ಅವರು ಜನರಿಗೆ ಮೋಸಮಾಡುತ್ತಿದ್ದರು. ಅಷ್ಟಲ್ಲದೆ, ಅವರು ಇಲ್ಲಿ ದೇವರ ಆಲಯದಲ್ಲಿ ಮಾರಾಟ ಮಾಡಬಾರದಿತ್ತು.

ಈ ವಿಷಯವೇ ಯೇಸುವಿಗೆ ಸಿಟ್ಟುಬರಿಸುತ್ತದೆ. ಆದುದರಿಂದ ಅವನು ಜನರ ಹಣದ ಮೇಜುಗಳನ್ನು ಕೆಡವಿ, ಅವರ ನಾಣ್ಯಗಳನ್ನು ಚೆಲ್ಲಿಬಿಡುತ್ತಾನೆ. ಅಲ್ಲದೆ, ಅವನು ಹಗ್ಗಗಳಿಂದ ಕೊರಡೆಮಾಡಿ ಎಲ್ಲಾ ಪ್ರಾಣಿಗಳನ್ನು ಆಲಯದಿಂದ ಹೊರಗಟ್ಟುತ್ತಾನೆ. ಪಾರಿವಾಳ ಮಾರುವವರಿಗೆ ಅವನು ಆಜ್ಞಾಪಿಸುವುದು: ‘ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ! ನನ್ನ ತಂದೆಯ ಮನೆಯನ್ನು ಹಣಮಾಡುವ ಸ್ಥಳವಾಗಿ ಮಾಡಬೇಡಿರಿ.’

ಯೇಸುವಿನ ಹಿಂಬಾಲಕರಲ್ಲಿ ಕೆಲವರು ಇಲ್ಲಿ ಯೆರೂಸಲೇಮಿನ ಆಲಯದಲ್ಲಿ ಅವನೊಂದಿಗಿದ್ದಾರೆ. ಯೇಸು ಏನು ಮಾಡಿದನೋ ಅದನ್ನು ಕಂಡು ಅವರಿಗೆ ಆಶ್ಚರ್ಯವಾಗುತ್ತದೆ. ಆಗ, ‘ದೇವರ ಆಲಯಕ್ಕಾಗಿ ಪ್ರೀತಿಯು ಅವನಲ್ಲಿ ಬೆಂಕಿಯಂತೆ ದಹಿಸುತ್ತದೆ’ ಎಂದು ದೇವಕುಮಾರನ ಕುರಿತು ಬೈಬಲ್‌ ಹೇಳಿರುವ ಮಾತು ಅವರ ನೆನಪಿಗೆ ಬರುತ್ತದೆ.

ಯೇಸು ಪಸ್ಕಹಬ್ಬಕ್ಕೆ ಹಾಜರಾಗಲೆಂದು ಇಲ್ಲಿ ಯೆರೂಸಲೇಮಿನಲ್ಲಿ ಇರುವಾಗ ಅನೇಕ ಅದ್ಭುತಗಳನ್ನೂ ಮಾಡುತ್ತಾನೆ. ತದನಂತರ, ಯೇಸು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತೆರಳಲು ಪ್ರಯಾಣ ಬೆಳೆಸುತ್ತಾನೆ. ದಾರಿಯಲ್ಲಿ ಸಮಾರ್ಯ ಎಂಬ ಪ್ರದೇಶವನ್ನು ಹಾದುಹೋಗುತ್ತಾನೆ. ಅಲ್ಲಿ ಏನಾಗುತ್ತದೆಂದು ನಾವು ನೋಡೋಣ.