ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 8

ಬೈಬಲ್‌ ಏನನ್ನು ಮುಂತಿಳಿಸುತ್ತದೋ ಅದು ಸತ್ಯವಾಗುತ್ತದೆ

ಬೈಬಲ್‌ ಏನನ್ನು ಮುಂತಿಳಿಸುತ್ತದೋ ಅದು ಸತ್ಯವಾಗುತ್ತದೆ

ಬೈಬಲ್‌ ಗತಕಾಲದಲ್ಲಿ ನಡೆದ ಘಟನೆಗಳ ಕುರಿತು ನಿಜ ಕಥೆಯನ್ನು ತಿಳಿಸುತ್ತದಲ್ಲದೆ, ಭವಿಷ್ಯತ್ತಿನಲ್ಲಿ ಏನು ನಡೆಯಲಿದೆಯೋ ಅದನ್ನೂ ತಿಳಿಸುತ್ತದೆ. ಆದರೆ, ಮನುಷ್ಯರು ಭವಿಷ್ಯತ್ತನ್ನು ಮುಂತಿಳಿಸಲಾರರು. ಆದುದರಿಂದಲೇ ಬೈಬಲ್‌ ದೇವರಿಂದ ಬಂದದ್ದೆಂದು ನಮಗೆ ಗೊತ್ತಿದೆ. ಭವಿಷ್ಯತ್ತಿನ ಕುರಿತು ಬೈಬಲ್‌ ಏನು ಹೇಳುತ್ತದೆ?

ದೇವರು ಮಾಡಲಿರುವ ಒಂದು ಮಹಾ ಯುದ್ಧದ ಕುರಿತು ಅದು ತಿಳಿಸುತ್ತದೆ. ಈ ಯುದ್ಧದಲ್ಲಿ ದೇವರು ಭೂಮಿಯಲ್ಲಿರುವ ಎಲ್ಲಾ ಕೆಟ್ಟತನ ಮತ್ತು ಕೆಟ್ಟ ಜನರನ್ನು ನಾಶಮಾಡುವನು. ಆದರೆ ತನ್ನನ್ನು ಆರಾಧಿಸುವವರನ್ನು ಕಾಪಾಡಿ ಉಳಿಸುವನು. ದೇವರ ಸೇವಕರು ಶಾಂತಿ-ಸಮಾಧಾನದಿಂದ ಮತ್ತು ಸಂತೋಷದಿಂದ ಜೀವಿಸುವಂತೆ ರಾಜನಾದ ಯೇಸು ಕ್ರಿಸ್ತನು ನೋಡಿಕೊಳ್ಳುವನು. ಅಷ್ಟೇ ಅಲ್ಲ, ಇನ್ನು ಮುಂದೆ ಅವರಿಗೆ ಯಾವುದೇ ಕಾಯಿಲೆ ಬರದಂತೆ ಮತ್ತು ಅವರು ಸಾಯದಂತೆಯೂ ನೋಡಿಕೊಳ್ಳುವನು.

ದೇವರು ಭೂಮಿಯನ್ನು ಒಂದು ಹೊಸ ಪರದೈಸ್‌ ಆಗಿ ಮಾಡಲಿರುವುದಕ್ಕಾಗಿ ನಾವು ಸಂತೋಷಪಡುತ್ತೇವೆ ಅಲ್ಲವೇ? ಆದರೆ ಈ ಪರದೈಸಿನಲ್ಲಿ ನಾವು ಜೀವಿಸಬೇಕಾದರೆ ಏನನ್ನೋ ಮಾಡಬೇಕು. ತನ್ನನ್ನು ಆರಾಧಿಸುವವರಿಗಾಗಿ ದೇವರು ಕಾದಿರಿಸಿರುವ ಆಶ್ಚರ್ಯಕರವಾದ ವಿಷಯಗಳಲ್ಲಿ ಆನಂದಿಸಬೇಕಾದರೆ ನಾವೇನು ಮಾಡಬೇಕೆಂಬದನ್ನು ಈ ಪುಸ್ತಕದ ಕೊನೆಯ ಕಥೆಯಲ್ಲಿ ನಾವು ಕಲಿಯುತ್ತೇವೆ. ಆದುದರಿಂದ ಭಾಗ ಎಂಟನ್ನು ಓದಿ, ಬೈಬಲ್‌ ಭವಿಷ್ಯತ್ತಿಗಾಗಿ ಏನನ್ನು ಮುಂತಿಳಿಸಿದೆಯೆಂದು ಕಂಡುಕೊಳ್ಳಿರಿ.

 

ಈ ಭಾಗದಲ್ಲಿ

ಕಥೆ 114

ಎಲ್ಲಾ ದುಷ್ಟತನಗಳ ಅಂತ್ಯ

ತನ್ನ ಸೈನ್ಯವನ್ನು ಅರ್ಮಗೆದೋನ್‌ ಯುದ್ಧದಲ್ಲಿ ಯೇಸು ನಡೆಸಲಿಕ್ಕೆ ದೇವರು ಯಾಕೆ ಕಳುಹಿಸಿದನು?

ಕಥೆ 115

ಭೂಮಿಯ ಮೇಲೆ ಹೊಸ ಪರದೈಸ್‌

ಒಮ್ಮೆ ಜನರೆಲ್ಲರೂ ಪರದೈಸ್‌ ಭೂಮಿಯಲ್ಲಿ ಜೀವಿಸಿದ್ದರು, ಮತ್ತೊಮ್ಮೆ ಮುಂದೆ ಹಾಗೆ ಆಗಲಿದೆ.

ಕಥೆ 116

ನಾವು ಹೇಗೆ ಸದಾಕಾಲ ಜೀವಿಸಬಲ್ಲೆವು?

ಸದಾಕಾಲ ಜೀವಿಸಬೇಕಾದರೆ ನಾವೇನನ್ನು ಕಲಿಯುವ ಅಗತ್ಯವಿದೆ? ಯೆಹೋವ ದೇವರು ಮತ್ತು ಯೇಸು ಬಗ್ಗೆ ತಿಳಿದುಕೊಂಡರೆ ಮಾತ್ರ ಸಾಕಾಗುತ್ತದಾ? ಬೇರೆ ಇನ್ನೇನು ಬೇಕು?