ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 11-ಪರಿಚಯ

ಭಾಗ 11-ಪರಿಚಯ

ಈ ಭಾಗದಿಂದ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿರುವ ಮಾಹಿತಿ ಶುರುವಾಗುತ್ತದೆ. ಯೇಸು ಒಂದು ಪುಟ್ಟ ಊರಿನ ಬಡ ಕುಟುಂಬದಲ್ಲಿ ಜನಿಸಿದನು. ಬಡಗಿಯಾದ ತನ್ನ ತಂದೆಯೊಟ್ಟಿಗೆ ಕೆಲಸ ಮಾಡಿದನು. ಮನುಷ್ಯರನ್ನು ರಕ್ಷಿಸುವ ರಕ್ಷಕ ಯೇಸುವಾಗಿದ್ದನು. ಯೆಹೋವನು ಯೇಸುವನ್ನು ದೇವರ ರಾಜ್ಯದ ರಾಜನಾಗಿ ಆರಿಸಿಕೊಂಡಿದ್ದನು. ಯೇಸು ಯಾವ ಕುಟುಂಬದಲ್ಲಿ, ಎಂಥ ವಾತಾವರಣದಲ್ಲಿ ಬೆಳೆಯಬೇಕೆಂದು ಯೆಹೋವನು ಆರಿಸಿದನು. ನೀವು ಹೆತ್ತವರಾಗಿರುವಲ್ಲಿ, ಇದರ ಬಗ್ಗೆ ಗಣ್ಯತೆ ಬೆಳೆಸಿಕೊಳ್ಳಲು ಮಗುವಿಗೆ ಸಹಾಯ ಮಾಡಿ. ಕೊಲೆಗಡುಕ ಹೆರೋದನಿಂದ ಯೆಹೋವನು ಯೇಸುವನ್ನು ಹೇಗೆ ಕಾಪಾಡಿದನು ಮತ್ತು ಯೆಹೋವನ ಉದ್ದೇಶವನ್ನು ತಪ್ಪಿಸಲು ಯಾರಿಂದಲೂ ಯಾಕೆ ಸಾಧ್ಯವಿಲ್ಲ ಎನ್ನುವುದನ್ನು ಪರಿಗಣಿಸಿ. ಯೇಸುವಿಗಾಗಿ ದಾರಿ ಸಿದ್ಧಮಾಡುವಂತೆ ಯೆಹೋವನು ಯೋಹಾನನನ್ನು ಹೇಗೆ ಬಳಸಿದನೆಂದು ತಿಳಿಸಿ. ಯೇಸು ತನಗೆ ದೈವೀಕ ಜ್ಞಾನ ಇಷ್ಟವೆಂದು ಚಿಕ್ಕವಯಸ್ಸಿನಿಂದಲೇ ಹೇಗೆ ತೋರಿಸಿದನೆಂದು ಮಗುವಿಗೆ ಒತ್ತಿ ಹೇಳಿ.

ಈ ಭಾಗದಲ್ಲಿ

ಪಾಠ 68

ಎಲಿಸಬೇತಳಿಗೆ ಮಗುವಾಯಿತು

ಮಗು ಹುಟ್ಟುವ ತನಕ ಎಲಿಸಬೇತಳ ಗಂಡನಿಗೆ ಮಾತಾಡಲು ಆಗುವುದಿಲ್ಲ ಎಂದು ಏಕೆ ಹೇಳಲಾಯಿತು?

ಪಾಠ 69

ಗಬ್ರಿಯೇಲನು ಮರಿಯಳನ್ನು ಭೇಟಿಯಾಗುತ್ತಾನೆ

ಅವನು ಅವಳ ಜೀವನವನ್ನೇ ಬದಲಾಯಿಸುವಂಥ ಸಂದೇಶವನ್ನು ತಿಳಿಸಿದನು.

ಪಾಠ 70

ಯೇಸು ಹುಟ್ಟಿದನೆಂದು ದೇವದೂತರು ತಿಳಿಸುತ್ತಾರೆ

ದೇವದೂತರು ಹೇಳಿದ್ದನ್ನು ಕೇಳಿದ ಕುರುಬರು ತಕ್ಷಣ ಕ್ರಿಯೆಗೈದರು.

ಪಾಠ 71

ಯೆಹೋವನು ಯೇಸುವನ್ನು ಕಾಪಾಡಿದನು

ಯೇಸುವನ್ನು ಕೊಲ್ಲಬೇಕೆಂದು ಒಬ್ಬ ಕೆಟ್ಟ ರಾಜ ಬಯಸಿದನು.

ಪಾಠ 72

ಬಾಲಕ ಯೇಸು

ಯೇಸು ದೇವಾಲದಲ್ಲಿದ್ದ ಬೋಧಕರಿಗೆ ಆಶ್ಚರ್ಯ ಆಗುವಂಥದ್ದೇನು ಮಾಡಿದ?

ಪಾಠ 73

ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು

ಯೋಹಾನ ದೊಡ್ಡವನಾದಾಗ ಒಬ್ಬ ಪ್ರವಾದಿಯಾಗುತ್ತಾನೆ. ಮೆಸ್ಸೀಯನು ಬರುತ್ತಾನೆ ಎಂದು ಅವನು ಜನರಿಗೆ ಕಲಿಸಿದನು. ಅವನು ಹೇಳಿದ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?