ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 5-ಪರಿಚಯ

ಭಾಗ 5-ಪರಿಚಯ

ಕೆಂಪು ಸಮುದ್ರ ದಾಟಿ 2 ತಿಂಗಳು ಆದ ಮೇಲೆ ಇಸ್ರಾಯೇಲ್ಯರು ಸೀನಾಯಿ ಬೆಟ್ಟಕ್ಕೆ ಬಂದರು. ಅಲ್ಲಿ ಯೆಹೋವನು, ಇಸ್ರಾಯೇಲ್ಯರು ತನಗೆ ವಿಶೇಷ ಜನಾಂಗವಾಗಲು ಅವರೊಟ್ಟಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅವರನ್ನು ಸಂರಕ್ಷಿಸಿ ಅವರಿಗೆ ಬೇಕಾದ ಎಲ್ಲವನ್ನೂ ಕೊಟ್ಟನು. ಉದಾಹರಣೆಗೆ ತಿನ್ನಲು ಮನ್ನ ಕೊಟ್ಟ, ಅವರ ಬಟ್ಟೆ ಹರಿದು ಹೋಗದಂತೆ ನೋಡಿಕೊಂಡ, ವಾಸಿಸಲು ಸುರಕ್ಷಿತವಾದ ಸ್ಥಳವನ್ನೂ ಕೊಟ್ಟ. ನೀವೊಬ್ಬ ಹೆತ್ತವರಾಗಿದ್ದರೆ, ಯೆಹೋವನು ಯಾಕೆ ಇಸ್ರಾಯೇಲ್ಯರಿಗೆ ನಿಯಮಗಳನ್ನು ಕೊಟ್ಟನು? ಗುಡಾರ ಮತ್ತು ಯಾಜಕರ ಏರ್ಪಾಡು ಯಾಕೆ ಮಾಡಿದನು? ಎಂದು ನಿಮ್ಮ ಮಕ್ಕಳು ಅರ್ಥಮಾಡಿಕೊಳ್ಳಲು ಸಹಾಯಮಾಡಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ದೀನರಾಗಿರುವುದು ಮತ್ತು ಯಾವಾಗಲೂ ಯೆಹೋವನಿಗೆ ನಿಷ್ಠರಾಗಿರುವುದರ ಮಹತ್ವವನ್ನು ಒತ್ತಿಹೇಳಿ.

ಈ ಭಾಗದಲ್ಲಿ

ಪಾಠ 23

ಯೆಹೋವನಿಗೆ ಕೊಟ್ಟ ಮಾತು

ಇಸ್ರಾಯೇಲ್ಯರು ಸೀನಾಯಿ ಬೆಟ್ಟದ ಹತ್ತಿರ ಇದ್ದಾಗ ದೇವರಿಗೆ ಒಂದು ವಿಶೇಷವಾದ ಮಾತು ಕೊಟ್ಟರು.

ಪಾಠ 24

ಅವರು ಕೊಟ್ಟ ಮಾತನ್ನು ತಪ್ಪಿದರು

ಮೋಶೆ ಹತ್ತು ಆಜ್ಞೆಗಳನ್ನು ತರುವಷ್ಟರಲ್ಲಿ ಜನರು ಘೋರ ಪಾಪವನ್ನು ಮಾಡಿದರು.

ಪಾಠ 25

ಆರಾಧೆನೆಗಾಗಿ ಒಂದು ಗುಡಾರ

ಈ ವಿಶೇಷ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷವಿತ್ತು.

ಪಾಠ 26

ಹನ್ನೆರಡು ಗೂಢಚಾರರು

ಕಾನಾನ್‌ ದೇಶವನ್ನು ನೋಡಿ ಬರಲು ಹೋದ ಗೂಢಚಾರರಲ್ಲಿ ಯೆಹೋಶುವ ಕಾಲೇಬರು ಉಳಿದ ಹತ್ತು ಮಂದಿಗಿಂತ ಭಿನ್ನರಾಗಿದ್ದರು.

ಪಾಠ 27

ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು

ಕೋರಹ, ದಾತಾನ್‌, ಅಬೀರಾಮ, ಮತ್ತು ಇತರ 250 ಮಂದಿ ಯೆಹೋವನ ಬಗ್ಗೆ ಒಂದು ಮುಖ್ಯ ವಿಷಯವನ್ನು ತಿಳಿದುಕೊಳ್ಳಲು ತಪ್ಪಿಹೋದರು.

ಪಾಠ 28

ಬಿಳಾಮನ ಕತ್ತೆ ಮಾತಾಡಿತು

ಬಿಳಾಮನಿಗೆ ಕಾಣದಿದ್ದ ದೇವದೂತ ಕತ್ತೆಗೆ ಕಾಣಿಸಿದನು.