ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 9-ಪರಿಚಯ

ಭಾಗ 9-ಪರಿಚಯ

ಈ ಭಾಗದಲ್ಲಿ ಚಿಕ್ಕವರು, ಪ್ರವಾದಿಗಳು ಮತ್ತು ರಾಜರು ಯೆಹೋವನಿಗೆ ತೋರಿಸಿದ ಅಸಾಧಾರಣ ನಂಬಿಕೆಯ ಬಗ್ಗೆ ನಾವು ಕಲಿಯುತ್ತೇವೆ. ಸಿರಿಯದಲ್ಲಿದ್ದ ಇಸ್ರಾಯೇಲ್‌ನ ಚಿಕ್ಕ ಹುಡುಗಿಗೆ ನಾಮಾನನನ್ನು ಯೆಹೋವನ ಪ್ರವಾದಿ ವಾಸಿ ಮಾಡುತ್ತಾನೆಂಬ ನಂಬಿಕೆ ಇತ್ತು. ಪ್ರವಾದಿ ಎಲೀಷನಿಗೆ ಶತ್ರು ಸೈನ್ಯದಿಂದ ತನ್ನನ್ನು ಯೆಹೋವನು ಕಾಪಾಡುತ್ತಾನೆಂಬ ಸಂಪೂರ್ಣ ಭರವಸೆಯಿತ್ತು. ಯುವ ಯೆಹೋವಾಷನನ್ನು ಅವನ ದುಷ್ಟ ಅಜ್ಜಿ ಅತಲ್ಯಳಿಂದ ಕಾಪಾಡಲು ಮಹಾಯಾಜಕ ಯೆಹೋಯಾದಾವ ತನ್ನ ಜೀವವನ್ನು ಪಣಕ್ಕಿಟ್ಟ. ಯೆರೂಸಲೇಮನ್ನು ಯೆಹೋವನು ಕಾಪಾಡುತ್ತಾನೆ ಎಂಬ ಭರವಸೆ ರಾಜ ಹಿಜ್ಕೀಯನಿಗಿತ್ತು. ಅವನು ಅಶ್ಶೂರದವರ ಬೆದರಿಕೆಗೆ ಅಂಜಲಿಲ್ಲ. ರಾಜ ಯೋಷೀಯ ದೇಶದಿಂದ ವಿಗ್ರಹಾರಾಧನೆಯನ್ನು ತೆಗೆದುಹಾಕಿ, ದೇವಾಲಯವನ್ನು ಪುನಸ್ಥಾಪಿಸಿ ಜನರು ಸತ್ಯಾರಾಧನೆಗೆ ಹಿಂದಿರುಗುವಂತೆ ಮಾಡಿದ.

ಈ ಭಾಗದಲ್ಲಿ

ಪಾಠ 51

ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ

ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ತನ್ನ ಯಜಮಾನಿಗೆ ಯೆಹೋವನ ಅಪಾರ ಶಕ್ತಿ ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ಹೇಳಿದಳು.

ಪಾಠ 52

ಯೆಹೋವನ ಅಗ್ನಿಮಯ ಸೈನ್ಯ

ಎಲೀಷನ ಸೇವಕನಿಗೆ ‘ಅವರ ಕಡೆಯವರಿಗಿಂತ ನಮ್ಮ ಕಡೆಯವರು ಹೆಚ್ಚಿದ್ದಾರೆ’ ಎಂದು ಹೇಗೆ ಗೊತ್ತಾಯಿತು?

ಪಾಠ 53

ಧೀರ ಯೆಹೋಯಾದಾವ

ಒಬ್ಬ ನಂಬಿಗಸ್ತ ಯಾಜಕ ದುಷ್ಟ ರಾಣಿಯ ವಿರುದ್ದ ನಿಲ್ಲುತ್ತಾನೆ.

ಪಾಠ 54

ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ

ದೇವರ ಪ್ರವಾದಿಯೊಬ್ಬನನ್ನು ಮೀನು ಏಕೆ ನುಂಗಿತು? ಅದರಿಂದ ಅವನು ಹೇಗೆ ಹೊರಗೆ ಬಂದನು? ಯೆಹೋವನು ಅವನಿಗೆ ಯಾವ ಪಾಠಗಳನ್ನು ಕಲಿಸಿದನು?

ಪಾಠ 55

ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ

ಯೆಹೋವನು ತನ್ನ ವೈರಿಗಳನ್ನು ಕಾಪಾಡುವುದಿಲ್ಲ ಎಂದು ಯೆಹೂದದ ವೈರಿಗಳು ಹೇಳಿದ್ದರು, ಆದರೆ ಅವರ ಅನಿಸಿಕೆ ತಪ್ಪು!

ಪಾಠ 56

ಯೋಷೀಯ ಧರ್ಮಶಾಸ್ತ್ರವನ್ನು ಪ್ರೀತಿಸಿದ

ಯೋಷೀಯ ರಾಜನಾದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು ಮತ್ತು ಅವನು ಜನರು ಯೆಹೋವನನ್ನು ಆರಾಧಿಸಲು ಸಹಾಯ ಮಾಡಿದನು.