ಅಧ್ಯಾಯ ಹದಿನಾಲ್ಕು
ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ
-
ಒಬ್ಬ ಒಳ್ಳೆಯ ಗಂಡನಾಗಿರಲು ಏನು ಅಗತ್ಯ?
-
ಸ್ತ್ರೀಯೊಬ್ಬಳು ಹೆಂಡತಿಯ ಪಾತ್ರದಲ್ಲಿ ಹೇಗೆ ಯಶಸ್ಸನ್ನು ಪಡೆಯಬಲ್ಲಳು?
-
ಒಬ್ಬ ಉತ್ತಮ ತಂದೆ ಅಥವಾ ತಾಯಿಯಾಗಿರುವುದರಲ್ಲಿ ಏನು ಒಳಗೂಡಿದೆ?
-
ಮಕ್ಕಳು ಕುಟುಂಬ ಜೀವನವು ಸಂತೋಷಕರವಾಗಿರುವಂತೆ ಹೇಗೆ ಸಹಾಯಮಾಡಬಲ್ಲರು?
1. ಸಂತೋಷಕರವಾದ ಕುಟುಂಬ ಜೀವನಕ್ಕಿರುವ ಕೀಲಿಕೈ ಯಾವುದು?
ನಿಮ್ಮ ಕುಟುಂಬ ಜೀವನವು ಸಂತೋಷಕರವಾಗಿರಬೇಕೆಂದು ಯೆಹೋವ ದೇವರು ಬಯಸುತ್ತಾನೆ. ಆತನ ವಾಕ್ಯವಾದ ಬೈಬಲು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಮಾರ್ಗದರ್ಶನವನ್ನು ಒದಗಿಸಿ, ಪ್ರತಿಯೊಬ್ಬನು ಯಾವ ಪಾತ್ರವನ್ನು ವಹಿಸುವಂತೆ ದೇವರು ಬಯಸುತ್ತಾನೆಂಬುದನ್ನು ವರ್ಣಿಸುತ್ತದೆ. ಕುಟುಂಬದ ಸದಸ್ಯರು ದೇವರ ಸಲಹೆಗೆ ಹೊಂದಿಕೆಯಲ್ಲಿ ತಮ್ಮತಮ್ಮ ಪಾತ್ರಗಳನ್ನು ನಿರ್ವಹಿಸುವಾಗ, ಫಲಿತಾಂಶಗಳು ತುಂಬ ತೃಪ್ತಿಕರವಾಗಿರುತ್ತವೆ. “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು,” ಅಂದರೆ ಸಂತೋಷಿತರು ಎಂದು ಯೇಸು ಹೇಳಿದನು.—ಲೂಕ 11:28.
2. ನಾವು ಏನನ್ನು ಒಪ್ಪಿಕೊಳ್ಳುವುದರ ಮೇಲೆ ಕುಟುಂಬ ಸಂತೋಷವು ಆಧಾರಿತವಾಗಿರುತ್ತದೆ?
2 ಕುಟುಂಬದ ಸಂತೋಷವು ಮುಖ್ಯವಾಗಿ, ಯೇಸು ಯಾರನ್ನು “ನಮ್ಮ ತಂದೆಯೇ” ಎಂದು ಕರೆದನೊ ಆ ಯೆಹೋವನೇ ಕುಟುಂಬದ ಮೂಲನಾಗಿದ್ದಾನೆಂದು ಒಪ್ಪಿಕೊಳ್ಳುವುದರ ಮೇಲೆ ಹೊಂದಿಕೊಂಡಿದೆ. (ಮತ್ತಾಯ 6:9) ಭೂಮಿಯ ಮೇಲಿರುವ “ಪ್ರತಿ ಕುಟುಂಬವೂ” ನಮ್ಮ ಸ್ವರ್ಗೀಯ ಪಿತನಿಂದ ‘ಹೆಸರನ್ನು ಪಡೆದಿದೆ’ ಇಲ್ಲವೆ ಅಸ್ತಿತ್ವದಲ್ಲಿದೆ, ಮತ್ತು ಯಾವುದು ಕುಟುಂಬಗಳನ್ನು ಸಂತೋಷಕರವನ್ನಾಗಿ ಮಾಡುತ್ತದೆಂದು ಆತನು ಖಂಡಿತ ಬಲ್ಲನು. (ಎಫೆಸ 3:14, 15, NIBV) ಹಾಗಿರುವಲ್ಲಿ, ಪ್ರತಿಯೊಬ್ಬ ಕುಟುಂಬ ಸದಸ್ಯನು ವಹಿಸಿಕೊಳ್ಳತಕ್ಕ ಪಾತ್ರದ ಕುರಿತು ಬೈಬಲು ಏನು ಬೋಧಿಸುತ್ತದೆ?
ಕುಟುಂಬದ ಮೂಲನು ದೇವರು
3. ಕುಟುಂಬ ಜೀವನದ ಆರಂಭವನ್ನು ಬೈಬಲು ಹೇಗೆ ವರ್ಣಿಸುತ್ತದೆ, ಮತ್ತು ಅದು ಏನು ಹೇಳುತ್ತದೊ ಅದು ಸತ್ಯವೆಂದು ನಮಗೆ ಗೊತ್ತಿರುವುದೇಕೆ?
3 ಯೆಹೋವನು ಪ್ರಥಮ ಮಾನವರಾದ ಆದಾಮಹವ್ವರನ್ನು ಸೃಷ್ಟಿಸಿ ಅವರನ್ನು ಗಂಡಹೆಂಡತಿಯನ್ನಾಗಿ ಜೊತೆಗೂಡಿಸಿದನು. ಆತನು ಅವರನ್ನು ಸುಂದರವಾದ ಭೂಪರದೈಸೀಯ ಬೀಡಾದ ಏದೆನ್ ಉದ್ಯಾನವನದಲ್ಲಿ ಇಟ್ಟನು ಮತ್ತು ಅವರು ಮಕ್ಕಳನ್ನು ಪಡೆಯುವಂತೆ ಹೇಳಿದನು. “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ,” ಎಂದನು ಯೆಹೋವನು. (ಆದಿಕಾಂಡ 1:26-28; 2:18, 21-24) ಇದು ಕೇವಲ ಒಂದು ಕಥೆ ಅಥವಾ ಮಿಥ್ಯೆ ಆಗಿರುವುದಿಲ್ಲ, ಏಕೆಂದರೆ ಆದಿಕಾಂಡ ಪುಸ್ತಕವು ಕುಟುಂಬ ಜೀವನದ ಪ್ರಾರಂಭದ ಕುರಿತು ಏನು ಹೇಳುತ್ತದೊ ಅದು ಸತ್ಯವೆಂದು ಯೇಸು ತೋರಿಸಿದನು. (ಮತ್ತಾಯ 19:4, 5) ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಈಗ ಜೀವನವು ದೇವರು ಉದ್ದೇಶಿಸಿದಂತೆ ಇಲ್ಲವಾದರೂ, ಕುಟುಂಬದೊಳಗೆ ಏಕೆ ಸಂತೋಷವಿರಲು ಸಾಧ್ಯವಿದೆಯೆಂಬುದನ್ನು ನಾವು ನೋಡೋಣ.
4. (ಎ) ಕುಟುಂಬದ ಪ್ರತಿಯೊಬ್ಬ ಸದಸ್ಯನು ಕುಟುಂಬದ ಸಂತೋಷವನ್ನು ಹೇಗೆ ಹೆಚ್ಚಿಸಬಲ್ಲನು? (ಬಿ) ಯೇಸುವಿನ ಜೀವನದ ಕುರಿತಾದ ಅಧ್ಯಯನವು ಕುಟುಂಬದ ಸಂತೋಷಕ್ಕೆ ಅಷ್ಟು ಪ್ರಾಮುಖ್ಯವಾಗಿರುವುದೇಕೆ?
4 ಕುಟುಂಬದ ಸದಸ್ಯರಲ್ಲಿ ಪ್ರತಿಯೊಬ್ಬನು ಪ್ರೀತಿಯನ್ನು ತೋರಿಸುವುದರಲ್ಲಿ ದೇವರನ್ನು ಅನುಕರಿಸುವ ಮೂಲಕ ಕುಟುಂಬ ಜೀವನವನ್ನು ಸಂತೋಷಕರವಾಗಿ ಮಾಡಲು ಸಹಾಯಮಾಡಬಲ್ಲನು. (ಎಫೆಸ 5:1, 2) ಆದರೆ ನಾವು ದೇವರನ್ನು ನೋಡಲು ಸಾಧ್ಯವಿಲ್ಲದಿರುವಾಗ ಆತನನ್ನು ಹೇಗೆ ಅನುಕರಿಸಬಲ್ಲೆವು? ಯೆಹೋವನು ಹೇಗೆ ವರ್ತಿಸುತ್ತಾನೆಂಬುದನ್ನು ನಾವು ಕಲಿತುಕೊಳ್ಳಬಲ್ಲೆವು, ಏಕೆಂದರೆ ಆತನು ತನ್ನ ಏಕಜಾತ ಪುತ್ರನನ್ನು ಸ್ವರ್ಗದಿಂದ ಭೂಮಿಗೆ ಕಳುಹಿಸಿದನು. (ಯೋಹಾನ 1:14, 18) ಈ ಪುತ್ರನಾದ ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ ತನ್ನ ಸ್ವರ್ಗೀಯ ಪಿತನನ್ನು ಎಷ್ಟು ಉತ್ತಮವಾಗಿ ಅನುಕರಿಸಿದನೆಂದರೆ, ಯೇಸುವನ್ನು ನೋಡುವುದು ಮತ್ತು ಅವನಿಗೆ ಕಿವಿಗೊಡುವುದು ಯೆಹೋವನೊಂದಿಗೇ ಇದ್ದು, ಆತನಿಗೇ ಕಿವಿಗೊಡುವುದಕ್ಕೆ ಸಮಾನವಾಗಿತ್ತು. (ಯೋಹಾನ 14:9) ಆದಕಾರಣ, ಯೇಸು ತೋರಿಸಿದ ಪ್ರೀತಿಯ ಕುರಿತು ಕಲಿತು, ಅವನ ಮಾದರಿಯನ್ನು ಅನುಸರಿಸುವ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರೂ ಕುಟುಂಬ ಜೀವನವು ಹೆಚ್ಚು ಸಂತೋಷಕರವಾಗುವಂತೆ ಸಹಾಯಮಾಡಬಲ್ಲೆವು.
ಗಂಡಂದಿರಿಗೆ ಒಂದು ಆದರ್ಶ
5, 6. (ಎ) ಯೇಸು ಸಭೆಯನ್ನು ಉಪಚರಿಸುವ ವಿಧವು ಗಂಡಂದಿರಿಗೆ ಹೇಗೆ ಒಂದು ಮಾದರಿಯಾಗಿದೆ? (ಬಿ) ಪಾಪಗಳ ಕ್ಷಮಾಪಣೆಯನ್ನು ಪಡೆಯಲಿಕ್ಕಾಗಿ ಏನು ಮಾಡಲೇಬೇಕಾಗಿದೆ?
5 ಯೇಸು ತನ್ನ ಶಿಷ್ಯರನ್ನು ಉಪಚರಿಸಿದ ವಿಧದಲ್ಲಿಯೇ ಗಂಡಂದಿರು ತಮ್ಮ ಹೆಂಡತಿಯರನ್ನು ಉಪಚರಿಸಬೇಕೆಂದು ಬೈಬಲು ಹೇಳುತ್ತದೆ. ಬೈಬಲಿನ ಈ ನಿರ್ದೇಶನವನ್ನು ಎಫೆಸ 5:23, 25-30.
ಪರಿಗಣಿಸಿ: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು . . . ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ . . . [ಸಭೆಯನ್ನು] ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.”—6 ಯೇಸು, ಶಿಷ್ಯರಿಂದ ಕೂಡಿದ ತನ್ನ ಸಭೆಗೆ ತೋರಿಸಿದ ಪ್ರೀತಿಯು ಗಂಡಂದಿರಿಗೆ ಒಂದು ಪರಿಪೂರ್ಣ ಮಾದರಿಯಾಗಿದೆ. ತನ್ನ ಶಿಷ್ಯರು ಅಪರಿಪೂರ್ಣರಾಗಿದ್ದರೂ ಯೇಸು ಅವರಿಗಾಗಿ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿ, “ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು.” (ಯೋಹಾನ 13:1; 15:13) ತದ್ರೀತಿಯಲ್ಲೇ, ಗಂಡಂದಿರಿಗೆ ಹೀಗೆ ಪ್ರೋತ್ಸಾಹಿಸಲಾಗಿದೆ: “ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, [“ಪ್ರೀತಿಸುತ್ತಾ ಇರಿ,” NW] ಅವರಿಗೆ ನಿಷ್ಠುರವಾಗಿರಬೇಡಿರಿ.” (ಕೊಲೊಸ್ಸೆ 3:19) ವಿಶೇಷವಾಗಿ ಹೆಂಡತಿಯು ಕೆಲವು ಬಾರಿ ವಿವೇಚನೆಯಿಲ್ಲದೆ ವರ್ತಿಸುವಲ್ಲಿ ಇಂತಹ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ಗಂಡನಿಗೆ ಯಾವುದು ನೆರವಾಗುವುದು? ಅವನೂ ತಪ್ಪುಗಳನ್ನು ಮಾಡುತ್ತಾನೆಂಬುದನ್ನು ಮತ್ತು ದೇವರ ಕ್ಷಮಾಪಣೆ ಪಡೆಯಲು ಅವನೇನು ಮಾಡಬೇಕೆಂಬುದನ್ನು ಅವನು ನೆನಪಿಸಿಕೊಳ್ಳಬೇಕು. ಅವನೇನು ಮಾಡಬೇಕು? ಅವನು ತನ್ನ ವಿರುದ್ಧವಾಗಿ ಪಾಪಮಾಡಿದವರನ್ನು—ತನ್ನ ಹೆಂಡತಿಯನ್ನು ಸಹ—ಕ್ಷಮಿಸತಕ್ಕದ್ದು. ಆಕೆಯೂ ಹಾಗೆಯೇ ಮಾಡಬೇಕೆಂಬುದು ನಿಶ್ಚಯ. (ಮತ್ತಾಯ 6:12, 14, 15) ಒಂದು ಯಶಸ್ವೀ ವಿವಾಹವು, ಉದಾರವಾಗಿ ಕ್ಷಮಿಸುವ ಇಬ್ಬರು ವ್ಯಕ್ತಿಗಳ ಸಂಮಿಲನವಾಗಿದೆಯೆಂದು ಕೆಲವರು ಏಕೆ ಹೇಳುತ್ತಾರೆಂಬುದನ್ನು ನೀವು ಈಗ ಗ್ರಹಿಸಬಲ್ಲಿರೊ?
7. ಯೇಸು ಯಾವುದನ್ನು ಗಣನೆಗೆ ತೆಗೆದುಕೊಂಡನು, ಮತ್ತು ಹೀಗೆ ಗಂಡಂದಿರಿಗೆ ಯಾವ ಮಾದರಿಯನ್ನಿಟ್ಟನು?
7 ಯೇಸು ಸದಾ ತನ್ನ ಶಿಷ್ಯರಿಗೆ ಪರಿಗಣನೆ ತೋರಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನು ಎಂಬುದನ್ನು ಸಹ ಗಂಡಂದಿರು ಗಮನಿಸಬೇಕು. ಅವರ ಇತಿಮಿತಿಗಳನ್ನು ಮತ್ತು ಶಾರೀರಿಕ ಆವಶ್ಯಕತೆಗಳನ್ನು ಯೇಸು ಗಣನೆಗೆ ತೆಗೆದುಕೊಂಡನು. ಉದಾಹರಣೆಗಾಗಿ, ಅವರು ದಣಿದಿದ್ದಾಗ ಯೇಸು ಹೇಳಿದ್ದು: “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ.” (ಮಾರ್ಕ 6:30-32) ಹೆಂಡತಿಯರು ಸಹ ಇಂತಹ ಹಿತಚಿಂತನೆಯುಳ್ಳ ಪರಿಗಣನೆಗೆ ಅರ್ಹರು. ಬೈಬಲು ಅವರನ್ನು ‘ಬಲಹೀನರು’ ಎಂದು ವರ್ಣಿಸಿದೆ ಮತ್ತು ಅವರಿಗೆ “ಮಾನ” ಸಲ್ಲಿಸಬೇಕೆಂದು ಗಂಡಂದಿರಿಗೆ ಆಜ್ಞಾಪಿಸಲಾಗಿದೆ. ಏಕೆ? ಏಕೆಂದರೆ ಗಂಡಂದಿರು ಹಾಗೂ ಹೆಂಡತಿಯರು ಇಬ್ಬರೂ “ಜೀವವರ”ದಲ್ಲಿ ಸಮಾನವಾಗಿ ಪಾಲುಗಾರರಾಗುತ್ತಾರೆ. (1 ಪೇತ್ರ 3:7) ದೇವರಿಗೆ ಒಬ್ಬ ವ್ಯಕ್ತಿಯನ್ನು ಅಮೂಲ್ಯವಾಗಿ ಮಾಡುವಂಥದು ನಂಬಿಗಸ್ತಿಕೆಯೇ ಹೊರತು ಅವರು ಸ್ತ್ರೀಯಾಗಿದ್ದಾರೊ ಪುರುಷರಾಗಿದ್ದಾರೊ ಎಂಬುದಲ್ಲವೆಂದು ಗಂಡಂದಿರು ನೆನಪಿನಲ್ಲಿಡಬೇಕು.—ಕೀರ್ತನೆ 101:6.
8. (ಎ) ‘ತನ್ನ ಹೆಂಡತಿಯನ್ನು ಪ್ರೀತಿಸುವ ಗಂಡನು ತನ್ನನ್ನೇ ಪ್ರೀತಿಸಿಕೊಳ್ಳುವುದು’ ಹೇಗೆ? (ಬಿ) “ಒಂದೇ ಶರೀರ” ಆಗಿರುವುದು ಒಬ್ಬ ಗಂಡನಿಗೂ ಅವನ ಹೆಂಡತಿಗೂ ಯಾವ ಅರ್ಥದಲ್ಲಿದೆ?
ಮತ್ತಾಯ 19:6) ಆದಕಾರಣ ಅವರು ತಮ್ಮ ಲೈಂಗಿಕಾಸಕ್ತಿಯನ್ನು ಪರಸ್ಪರರಿಗೆ ಮಾತ್ರ ಸೀಮಿತಗೊಳಿಸಬೇಕು. (ಜ್ಞಾನೋಕ್ತಿ 5:15-21; ಇಬ್ರಿಯ 13:4) ಇದನ್ನು ಅವರು, ಪರಸ್ಪರರ ಆವಶ್ಯಕತೆಗಳ ವಿಷಯದಲ್ಲಿ ನಿಸ್ವಾರ್ಥ ಚಿಂತೆತೋರಿಸುವ ಮೂಲಕ ಮಾಡಬಲ್ಲರು. (1 ಕೊರಿಂಥ 7:3-5) ಈ ಮರುಜ್ಞಾಪನವೂ ಗಮನಾರ್ಹ: “ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” ಗಂಡಂದಿರು, ತಾವು ತಮ್ಮ ಶಿರಸ್ಸಾದ ಅಥವಾ ತಲೆಯಾಗಿರುವ ಯೇಸು ಕ್ರಿಸ್ತನಿಗೆ ಲೆಕ್ಕ ಒಪ್ಪಿಸಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಂಡು ತಮ್ಮ ಹೆಂಡತಿಯರನ್ನು ತಮ್ಮಂತೆಯೇ ಪ್ರೀತಿಸಬೇಕು.—ಎಫೆಸ 5:29; 1 ಕೊರಿಂಥ 11:3.
8 ಬೈಬಲ್ ಹೇಳುವುದೇನೆಂದರೆ, ‘ತನ್ನ ಹೆಂಡತಿಯನ್ನು ಪ್ರೀತಿಸುವ [ಗಂಡನು] ತನ್ನನ್ನೇ ಪ್ರೀತಿಸುವವನಾಗಿದ್ದಾನೆ.’ ಏಕೆಂದರೆ ಯೇಸು ಹೇಳಿದಂತೆ, ಒಬ್ಬ ಪುರುಷನು ಮತ್ತು ಅವನ ಹೆಂಡತಿಯು “ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.” (9. ಫಿಲಿಪ್ಪಿ 1:8 ರಲ್ಲಿ ಯೇಸುವಿನ ಯಾವ ಗುಣವನ್ನು ತಿಳಿಸಲಾಗಿದೆ, ಮತ್ತು ಈ ಗುಣವನ್ನು ಗಂಡಂದಿರು ತಮ್ಮ ಹೆಂಡತಿಯರಿಗೆ ಏಕೆ ತೋರಿಸಬೇಕು?
9 ‘ಯೇಸು ಕ್ರಿಸ್ತನ [ಕೋಮಲ] ವಾತ್ಸಲ್ಯದ’ ಕುರಿತು ಅಪೊಸ್ತಲ ಪೌಲನು ಮಾತಾಡಿದನು. (ಫಿಲಿಪ್ಪಿ 1:8, NIBV) ಯೇಸುವಿನ ಕೋಮಲಭಾವವು ಒಂದು ಚೈತನ್ಯದಾಯಕ ಗುಣವಾಗಿತ್ತು ಮತ್ತು ಅವನ ಶಿಷ್ಯರಾಗಿದ್ದ ಸ್ತ್ರೀಯರಿಗೆ ಹಿಡಿಸಿದಂಥ ಗುಣವಾಗಿತ್ತು. (ಯೋಹಾನ 20:1, 11-13, 16) ಹೆಂಡತಿಯರು ಸಹ ತಮ್ಮ ಗಂಡಂದಿರಿಂದ ಕೋಮಲ ವಾತ್ಸಲ್ಯಕ್ಕಾಗಿ ಹಂಬಲಿಸುತ್ತಾರೆ.
ಹೆಂಡತಿಯರಿಗೆ ಮಾದರಿ
10. ಯೇಸು ಹೆಂಡತಿಯರಿಗೆ ಹೇಗೆ ಮಾದರಿಯನ್ನು ಇಡುತ್ತಾನೆ?
10 ಕುಟುಂಬವು ಒಂದು ಸಂಘಟನೆಯಾಗಿದೆ ಮತ್ತು ಅದು ಸರಾಗವಾಗಿ ಕಾರ್ಯನಡೆಸಬೇಕಾದರೆ ಅದಕ್ಕೆ ಒಂದು ತಲೆ ಅಗತ್ಯ. ಯೇಸುವಿಗೂ ಒಬ್ಬ ತಲೆ ಇದ್ದಾನೆ ಮತ್ತು ಅವನು ಆತನಿಗೆ ಅಧೀನನಾಗಿದ್ದಾನೆ. “ಸ್ತ್ರೀಗೆ ಪುರುಷನು ತಲೆ” ಆಗಿರುವಂತೆಯೇ, “ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ದೇವರ ತಲೆತನಕ್ಕೆ ಯೇಸು ತೋರಿಸಿದ ಅಧೀನತೆಯು ಉತ್ತಮ ಮಾದರಿಯಾಗಿದೆ, ಏಕೆಂದರೆ ನಮಗೆಲ್ಲರಿಗೂ ನಾವು ಅಧೀನರಾಗಿರಬೇಕಾದಂಥ ಶಿರಸ್ಸು ಅಥವಾ ತಲೆ ಇದೆ.
11. ಹೆಂಡತಿಗೆ ತನ್ನ ಗಂಡನ ವಿಷಯದಲ್ಲಿ ಯಾವ ಮನೋಭಾವವಿರಬೇಕು, ಮತ್ತು ಆಕೆಯ ನಡತೆಯ ಪರಿಣಾಮ ಏನಾಗಬಹುದು?
11 ಅಪರಿಪೂರ್ಣರಾದ ಪುರುಷರು ತಪ್ಪುಮಾಡುತ್ತಾರೆ ಮತ್ತು ಅನೇಕವೇಳೆ ಕುಟುಂಬದ ಆದರ್ಶ ತಲೆಗಳಾಗಿರುವುದಿಲ್ಲ. ಹೀಗಿರುವಾಗ ಹೆಂಡತಿಯು ಏನು ಮಾಡಬೇಕು? ತನ್ನ ಗಂಡನು ಮಾಡುವುದನ್ನು ಆಕೆ ಹೀನೈಸಬಾರದು ಇಲ್ಲವೆ ಅವನ ತಲೆತನವನ್ನು 1 ಪೇತ್ರ 3:4) ಇಂಥ ಮನೋಭಾವವನ್ನು ಪ್ರದರ್ಶಿಸುವ ಮೂಲಕ, ಕಷ್ಟಕರವಾದ ಪರಿಸ್ಥಿತಿಗಳಲ್ಲೂ ದೈವಿಕ ಅಧೀನತೆಯನ್ನು ತೋರಿಸಲು ಆಕೆಗೆ ಹೆಚ್ಚು ಸುಲಭವಾಗುವುದು. ಇದಲ್ಲದೆ, ಬೈಬಲ್ ಹೇಳುವುದು: “ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ [“ಆಳವಾದ ಗೌರವದಿಂದ,” NW] ನಡೆದುಕೊಳ್ಳಬೇಕು.” (ಎಫೆಸ 5:33) ಆದರೆ ಅವನು ಕ್ರಿಸ್ತನನ್ನು ತಲೆಯೆಂದು ಒಪ್ಪಿಕೊಳ್ಳದಿರುವಲ್ಲಿ ಆಗೇನು? ಬೈಬಲು ಹೆಂಡತಿಯರನ್ನು ಪ್ರೋತ್ಸಾಹಿಸುವುದು: “ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ [“ಆಳವಾದ ಗೌರವದಿಂದ,” NW] ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1, 2.
ಆಕೆ ವಹಿಸಿಕೊಳ್ಳಬಾರದು. ದೇವರ ದೃಷ್ಟಿಯಲ್ಲಿ ಸಾತ್ವಿಕ ಮತ್ತು ಶಾಂತ ಮನೋಭಾವವು ಅತಿ ಬೆಲೆಯುಳ್ಳದ್ದಾಗಿದೆ ಎಂಬುದನ್ನು ಹೆಂಡತಿಯೊಬ್ಬಳು ಜ್ಞಾಪಕದಲ್ಲಿಡುವುದು ಒಳ್ಳೇದು. (12. ಹೆಂಡತಿಯು ತನ್ನ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ತಿಳಿಯಪಡಿಸುವುದು ತಪ್ಪಲ್ಲವೇಕೆ?
12 ಹೆಂಡತಿಯೊಬ್ಬಳು, ತನ್ನ ಗಂಡನು ಜೊತೆವಿಶ್ವಾಸಿಯಾಗಿರಲಿ ಇಲ್ಲದಿರಲಿ ಅವನ ಅಭಿಪ್ರಾಯಕ್ಕೆ ಭಿನ್ನವಾದ ಅಭಿಪ್ರಾಯವನ್ನು ಸಮಯೋಚಿತ ನಯದಿಂದ ತಿಳಿಯಪಡಿಸಿದರೆ ಅದು ಅಗೌರವವನ್ನು ತೋರಿಸಿದಂತಾಗುವುದಿಲ್ಲ. ಒಂದುವೇಳೆ ಆಕೆಯ ದೃಷ್ಟಿಕೋನ ಸರಿಯಾಗಿರಬಹುದು ಮತ್ತು ಆಕೆಗೆ ಕಿವಿಗೊಡುವುದರಿಂದ ಇಡೀ ಕುಟುಂಬವು ಪ್ರಯೋಜನಹೊಂದಬಲ್ಲದು. ಸಾರಳು ತನ್ನ ಮನೆತನದಲ್ಲಿನ ಸಮಸ್ಯೆಯೊಂದಕ್ಕೆ ಪ್ರಾಯೋಗಿಕ ಪರಿಹಾರವನ್ನು ಶಿಫಾರಸ್ಸು ಮಾಡಿದಾಗ ಅಬ್ರಹಾಮನು ತನ್ನ ಹೆಂಡತಿಯ ಮಾತನ್ನು ಒಪ್ಪದಿದ್ದರೂ, “ಸಾರಳು ಹೇಳಿದಂತೆಯೇ ಮಾಡು” ಎಂದು ದೇವರು ಅವನಿಗೆ ಹೇಳಿದನು. (ಆದಿಕಾಂಡ 21:9-12) ಆದರೆ, ಗಂಡನು ದೇವರ ನಿಯಮದೊಂದಿಗೆ ಘರ್ಷಿಸದಿರುವ ಒಂದು ಅಂತಿಮ ನಿರ್ಣಯವನ್ನು ಮಾಡುವಲ್ಲಿ ಹೆಂಡತಿಯು ಅದನ್ನು ಬೆಂಬಲಿಸುವ ಮೂಲಕ ತನ್ನ ಅಧೀನತೆಯನ್ನು ತೋರಿಸಬೇಕೆಂಬುದು ನಿಶ್ಚಯ.—ಅ. ಕೃತ್ಯಗಳು 5:29; ಎಫೆಸ 5:24.
13. (ಎ) ವಿವಾಹಿತ ಸ್ತ್ರೀಯರು ಏನು ಮಾಡಬೇಕೆಂದು ತೀತ 2:4, 5 ಪ್ರೋತ್ಸಾಹಿಸುತ್ತದೆ? (ಬಿ) ಪ್ರತ್ಯೇಕವಾಸ ಮತ್ತು ವಿವಾಹ ವಿಚ್ಛೇದದ ಕುರಿತು ಬೈಬಲ್ ಏನು ಹೇಳುತ್ತದೆ?
13 ಕುಟುಂಬವನ್ನು ಪರಾಮರಿಸುವ ತನ್ನ ಪಾತ್ರವನ್ನು ಹೆಂಡತಿಯು ಅನೇಕ ವಿಧಗಳಲ್ಲಿ ನೆರವೇರಿಸಬಲ್ಲಳು. ದೃಷ್ಟಾಂತಕ್ಕಾಗಿ, ವಿವಾಹಿತ ಸ್ತ್ರೀಯರು, ‘ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲಿ ಕೆಲಸಮಾಡುವವರೂ ಸುಶೀಲೆಯರೂ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು’ ಬೈಬಲು ತೋರಿಸುತ್ತದೆ. (ತೀತ 2:4, 5) ಈ ರೀತಿಯಲ್ಲಿ ವರ್ತಿಸುವ ಹೆಂಡತಿಯೂ ತಾಯಿಯೂ ತನ್ನ ಕುಟುಂಬದಿಂದ ಬಾಳುವಂಥ ಪ್ರೀತಿ ಮತ್ತು ಗೌರವವನ್ನು ಸಂಪಾದಿಸುವಳು. (ಜ್ಞಾನೋಕ್ತಿ 31:10, 28) ಆದರೂ, ವಿವಾಹವು ಇಬ್ಬರು ಅಪರಿಪೂರ್ಣ ವ್ಯಕ್ತಿಗಳ ಸಂಮಿಲನವಾಗಿರುವುದರಿಂದ, ಕೆಲವು ವಿಪರೀತ ಸನ್ನಿವೇಶಗಳು ಪ್ರತ್ಯೇಕವಾಸ ಇಲ್ಲವೆ ವಿವಾಹ ವಿಚ್ಛೇದಗಳಲ್ಲಿ ಅಂತ್ಯಗೊಳ್ಳಬಹುದು. ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಬೈಬಲು ಪ್ರತ್ಯೇಕವಾಸವನ್ನು ಅನುಮತಿಸುತ್ತದಾದರೂ, ಪ್ರತ್ಯೇಕವಾಸವನ್ನು ಅಲ್ಪವಾದ ವಿಷಯವೆಂದು ಭಾವಿಸಬಾರದು, ಏಕೆಂದರೆ ಬೈಬಲು ಬುದ್ಧಿಹೇಳುವುದು: “ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು; . . . ಮತ್ತು ಗಂಡನು ಹೆಂಡತಿಯನ್ನು ಬಿಡಬಾರದು.” (1 ಕೊರಿಂಥ 7:10, 11) ವಿವಾಹ ದಂಪತಿಯಲ್ಲಿ ಒಬ್ಬ ಸಂಗಾತಿಯು ಹಾದರಮಾಡಿದರೆ ಮಾತ್ರ ಶಾಸ್ತ್ರಾಧಾರಿತವಾದ ವಿವಾಹ ವಿಚ್ಛೇದಕ್ಕೆ ಆಧಾರವಿರುತ್ತದೆ.—ಮತ್ತಾಯ 19:9.
ಹೆತ್ತವರಿಗೊಂದು ಪರಿಪೂರ್ಣ ಮಾದರಿ
14. ಯೇಸು ಮಕ್ಕಳನ್ನು ಹೇಗೆ ಉಪಚರಿಸಿದನು, ಮತ್ತು ಮಕ್ಕಳಿಗೆ ಹೆತ್ತವರಿಂದ ಯಾವುದರ ಆವಶ್ಯಕತೆಯಿದೆ?
14 ಯೇಸು ಮಕ್ಕಳನ್ನು ಹೇಗೆ ಉಪಚರಿಸಿದನೊ ಅದರ ಮೂಲಕ ಹೆತ್ತವರಿಗೆ ಒಂದು ಪರಿಪೂರ್ಣ ಮಾದರಿಯನ್ನಿಟ್ಟನು. ಮಕ್ಕಳು ಯೇಸುವನ್ನು ಸಮೀಪಿಸುವುದನ್ನು ಇತರರು ತಡೆಯಲು ಪ್ರಯತ್ನಿಸಿದಾಗ ಅವನು ಹೇಳಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ಬಳಿಕ ಅವನು “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು” ಎಂದು ಬೈಬಲ್ ಹೇಳುತ್ತದೆ. (ಮಾರ್ಕ 10:13-16) ಯೇಸುವೇ ಮಕ್ಕಳಿಗಾಗಿ ತನ್ನ ಸಮಯವನ್ನು ಬದಿಗಿರಿಸಿರುವಾಗ, ನೀವು ನಿಮ್ಮ ಸ್ವಂತ ಗಂಡುಹೆಣ್ಣು ಮಕ್ಕಳಿಗಾಗಿ ಹಾಗೆಯೇ ಮಾಡಬಾರದೊ? ಅವರಿಗೆ ನಿಮ್ಮ ಸಮಯದ ಚಿಕ್ಕಪುಟ್ಟ ತುಣುಕುಗಳಲ್ಲ, ಬದಲಾಗಿ ದೊಡ್ಡ ಪ್ರಮಾಣದ ಆವಶ್ಯಕತೆಯಿದೆ. ಅವರಿಗೆ ಬೋಧಿಸಲು ನೀವು ಸಮಯವನ್ನು ಬದಿಗಿರಿಸುವುದು ಅಗತ್ಯ, ಏಕೆಂದರೆ ಹೆತ್ತವರು ಮಕ್ಕಳಿಗೆ ಹಾಗೆ ಬೋಧಿಸಬೇಕೆಂದು ಯೆಹೋವನು ಹೇಳುತ್ತಾನೆ.—ಧರ್ಮೋಪದೇಶಕಾಂಡ 6:4-9.
15. ತಮ್ಮ ಮಕ್ಕಳನ್ನು ಕಾಪಾಡಲು ಹೆತ್ತವರು ಏನು ಮಾಡಬಲ್ಲರು?
ಯೋಹಾನ 13:33; 18:7-9) ನಿಮ್ಮ ಚಿಕ್ಕ ಮಕ್ಕಳಿಗೆ ಕೇಡು ಬಗೆಯಲು ಪಿಶಾಚನು ಮಾಡುವ ಪ್ರಯತ್ನಗಳಿಗೆ ಹೆತ್ತವರಾದ ನೀವು ಎಚ್ಚರಿಕೆಯಿಂದಿರಬೇಕು. ನೀವು ಅವರಿಗೆ ಮುಂದಾಗಿಯೇ ಎಚ್ಚರಿಕೆಯನ್ನು ನೀಡಬೇಕು. * (1 ಪೇತ್ರ 5:8) ಅವರ ಶಾರೀರಿಕ, ಆಧ್ಯಾತ್ಮಿಕ ಮತ್ತು ನೈತಿಕ ಸುರಕ್ಷೆಗೆ ಹಾನಿಯನ್ನು ಉಂಟುಮಾಡುವ ಬೆದರಿಕೆಯು ಇಂದು ಇರುವಷ್ಟು ಹಿಂದೆಂದೂ ಇರಲಿಲ್ಲ.
15 ಈ ಲೋಕವು ಹೆಚ್ಚೆಚ್ಚು ದುಷ್ಟವಾಗುತ್ತ ಹೋಗುವಾಗ, ಮಕ್ಕಳಿಗೆ ಕೇಡು ಬಗೆಯಲು ಪ್ರಯತ್ನಿಸುವಂಥ, ಉದಾಹರಣೆಗೆ ಮಕ್ಕಳನ್ನು ದುರುಪಯೋಗಿಸುವ ಲೈಂಗಿಕ ದುರುಳರಂಥ ಜನರಿಂದ ಅವರನ್ನು ಸಂರಕ್ಷಿಸುವ ಜವಾಬ್ದಾರಿ ಹೆತ್ತವರಿಗಿದೆ. ಯೇಸು ಯಾರನ್ನು ವಾತ್ಸಲ್ಯದಿಂದ “ಪ್ರಿಯ ಮಕ್ಕಳೇ” ಎಂದು ಕರೆದನೊ ಆ ಶಿಷ್ಯರನ್ನು ಅವನು ಹೇಗೆ ಕಾಪಾಡಿದನೆಂಬುದನ್ನು ಪರಿಗಣಿಸಿರಿ. ಅವನು ದಸ್ತಗಿರಿ ಮಾಡಲ್ಪಟ್ಟು, ಇನ್ನೇನು ಕೊಲ್ಲಲ್ಪಡಲಿದ್ದಾಗ ಅವರು ತಪ್ಪಿಸಿಕೊಳ್ಳುವಂತೆ ಯೇಸು ದಾರಿಮಾಡಿಕೊಟ್ಟನು. (16. ಯೇಸು ತನ್ನ ಶಿಷ್ಯರೊಂದಿಗೆ ವ್ಯವಹರಿಸಿದ ರೀತಿಯಿಂದ ಹೆತ್ತವರು ಏನನ್ನು ಕಲಿಯಬಲ್ಲರು?
16 ಯೇಸು ಸಾಯುವುದಕ್ಕೆ ಹಿಂದಿನ ರಾತ್ರಿ, ಅವನ ಶಿಷ್ಯರು ತಮ್ಮಲ್ಲಿ ಯಾರು ಹೆಚ್ಚು ಶ್ರೇಷ್ಠರೆಂಬ ವಿಷಯದಲ್ಲಿ ವಾದಿಸಿದರು. ಅವರ ಮೇಲೆ ಕೋಪಿಸಿಕೊಳ್ಳುವ ಬದಲಿಗೆ ಯೇಸು ತನ್ನ ಮಾತು ಮತ್ತು ಮಾದರಿಯ ಮೂಲಕ ಅವರಿಗೆ ಪ್ರೀತಿಪೂರ್ವಕವಾಗಿ ಮನವಿ ಮಾಡುತ್ತ ಹೋದನು. (ಲೂಕ 22:24-27; ಯೋಹಾನ 13:3-8) ನೀವು ಒಬ್ಬ ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳನ್ನು ತಿದ್ದುವ ರೀತಿಯಲ್ಲಿ ನೀವು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಹುದೆಂಬುದನ್ನು ನೋಡಬಲ್ಲಿರೊ? ಅವರಿಗೆ ಶಿಸ್ತು ಅಗತ್ಯವೆಂಬುದು ನಿಜ, ಆದರೆ ಅದನ್ನು ‘ತಕ್ಕ ಪ್ರಮಾಣದಲ್ಲಿ’ ನೀಡಬೇಕು ಮತ್ತು ಎಂದಿಗೂ ಕೋಪದಿಂದ ನೀಡಬಾರದು. ನೀವು ಯೋಚಿಸದೇ “ಕತ್ತಿತಿವಿದ ಹಾಗೆ” ಮಾತಾಡಬಾರದು. (ಯೆರೆಮೀಯ 30:11, NW; ಜ್ಞಾನೋಕ್ತಿ 12:18) ಶಿಕ್ಷೆಯನ್ನು ಯಾವ ರೀತಿಯಲ್ಲಿ ಕೊಡಬೇಕೆಂದರೆ, ನಿಮ್ಮ ಮಗು ಆ ಬಳಿಕ ಅದೆಷ್ಟು ತಕ್ಕದಾಗಿತ್ತೆಂಬುದನ್ನು ಮನಗಾಣಬೇಕು.—ಎಫೆಸ 6:4; ಇಬ್ರಿಯ 12:9-11.
ಮಕ್ಕಳಿಗೆ ಆದರ್ಶ
17. ಯೇಸು ಮಕ್ಕಳಿಗೆ ಯಾವ ವಿಧದಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು?
17 ಯೇಸುವಿನಿಂದ ಮಕ್ಕಳು ಪಾಠವನ್ನು ಕಲಿಯಬಲ್ಲರೊ? ಹೌದು, ಕಲಿಯಬಲ್ಲರು! ಯೇಸು ತನ್ನ ಸ್ವಂತ ಮಾದರಿಯಿಂದಲೇ ಮಕ್ಕಳು ಹೆತ್ತವರಿಗೆ ಹೇಗೆ ವಿಧೇಯರಾಗಬೇಕೆಂದು ತೋರಿಸಿದನು. “ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದು” ಅವನು ಹೇಳಿದನು. ಅವನು ಕೂಡಿಸಿದ್ದು: ‘ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ.’ (ಯೋಹಾನ 8:28, 29) ಯೇಸು ತನ್ನ ಸ್ವರ್ಗೀಯ ಪಿತನಿಗೆ ವಿಧೇಯನಾಗಿದ್ದನು ಮತ್ತು ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿಧೇಯರಾಗಬೇಕೆಂದು ಬೈಬಲು ಹೇಳುತ್ತದೆ. (ಎಫೆಸ 6:1-3) ಯೇಸು ಪರಿಪೂರ್ಣ ಮಗನಾಗಿದ್ದರೂ, ತನ್ನ ಅಪರಿಪೂರ್ಣ ಹೆತ್ತವರಾದ ಯೋಸೇಫ ಮತ್ತು ಮರಿಯಳಿಗೆ ವಿಧೇಯನಾದನು. ಅದು ಯೇಸುವಿನ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಸಂತೋಷವನ್ನು ತಂದಿರುವುದು ನಿಸ್ಸಂದೇಹ!—ಲೂಕ 2:4, 5, 51, 52.
18. ಯೇಸು ತನ್ನ ಸ್ವರ್ಗೀಯ ತಂದೆಗೆ ಯಾವಾಗಲೂ ವಿಧೇಯನಾಗಿದ್ದದ್ದು ಏಕೆ, ಮತ್ತು ಇಂದು ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗುವಾಗ ಯಾರಿಗೆ ಸಂತೋಷವಾಗುತ್ತದೆ?
18 ತಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಯೇಸುವಿನಂತಾಗಲು ಪ್ರಯತ್ನಿಸುವ ಮೂಲಕ ತಮ್ಮ ತಂದೆತಾಯಿಗಳಿಗೆ ಸಂತೋಷವನ್ನು ತರುವ ವಿಧಗಳನ್ನು ಮಕ್ಕಳು ಗಮನಿಸಬಲ್ಲರೊ? ಚಿಕ್ಕವರಿಗೆ ಕೆಲವು ಬಾರಿ ತಮ್ಮ ಹೆತ್ತವರಿಗೆ ವಿಧೇಯತೆ ತೋರಿಸುವುದು ಜ್ಞಾನೋಕ್ತಿ 1:8; 6:20) ಯೇಸು ಯಾವಾಗಲೂ, ಕಷ್ಟಕರವಾದ ಪರಿಸ್ಥಿತಿಗಳಲ್ಲಿಯೂ, ತನ್ನ ಸ್ವರ್ಗೀಯ ತಂದೆಗೆ ವಿಧೇಯತೆ ತೋರಿಸಿದನು. ಒಮ್ಮೆ, ವಿಶೇಷವಾಗಿ ಕಷ್ಟಕರವಾಗಿದ್ದ ವಿಷಯವನ್ನು ಯೇಸು ಮಾಡಬೇಕೆಂಬುದು ದೇವರ ಚಿತ್ತವಾಗಿದ್ದಾಗ, “ಈ ಪಾತ್ರೆಯನ್ನು [ಒಂದು ನಿರ್ದಿಷ್ಟ ಅಗತ್ಯ ಕರ್ತವ್ಯ] ನನ್ನಿಂದ ತೊಲಗಿಸು,” ಎಂದು ಅವನು ಕೇಳಿಕೊಂಡನು. ಆದರೂ, ಯೇಸು ದೇವರು ಹೇಳಿದಂತೆ ಮಾಡಿದನು, ಏಕೆಂದರೆ ಅತ್ಯುತ್ತಮವಾದದ್ದು ಯಾವುದೆಂದು ತನ್ನ ತಂದೆಗೆ ತಿಳಿದಿದೆಯೆಂಬುದನ್ನು ಅವನು ಮನಗಂಡನು. (ಲೂಕ 22:42) ಮಕ್ಕಳು ವಿಧೇಯರಾಗಿರಲು ಕಲಿಯುವ ಮೂಲಕ ತಮ್ಮ ಹೆತ್ತವರನ್ನೂ ತಮ್ಮ ಸ್ವರ್ಗೀಯ ತಂದೆಯನ್ನೂ ತುಂಬ ಸಂತೋಷಪಡಿಸುವರು. *—ಜ್ಞಾನೋಕ್ತಿ 23:22-25.
ಕಷ್ಟಕರವಾಗಬಹುದೆಂಬುದು ನಿಜವಾದರೂ, ಮಕ್ಕಳು ಹಾಗೆ ಮಾಡಬೇಕೆಂಬುದು ದೇವರ ಬಯಕೆಯಾಗಿದೆ. (19. (ಎ) ಸೈತಾನನು ಮಕ್ಕಳನ್ನು ಹೇಗೆ ಪ್ರಲೋಭಿಸುತ್ತಾನೆ? (ಬಿ) ಮಕ್ಕಳ ಅನೈತಿಕ ನಡವಳಿಕೆ ಹೆತ್ತವರ ಮೇಲೆ ಯಾವ ಪರಿಣಾಮವನ್ನು ತರಬಲ್ಲದು?
19 ಪಿಶಾಚನು ಯೇಸುವನ್ನು ಪ್ರಲೋಭಿಸಿದನು, ಮತ್ತು ಎಳೆಯರು ತಪ್ಪನ್ನು ಮಾಡುವಂತೆ ಅವನು ಅವರನ್ನೂ ಪ್ರಲೋಭಿಸುವನೆಂಬುದು ನಮಗೆ ಖಂಡಿತವಾಗಿ ತಿಳಿದಿದೆ. (ಮತ್ತಾಯ 4:1-10) ಪಿಶಾಚನಾದ ಸೈತಾನನು ಸಮಾನಸ್ಥರ ಒತ್ತಡವನ್ನು ಉಪಯೋಗಿಸುತ್ತಾನೆ ಮತ್ತು ಇದನ್ನು ಪ್ರತಿರೋಧಿಸುವುದು ಕಷ್ಟಕರವಾಗಿರಸಾಧ್ಯವಿದೆ. ಆದುದರಿಂದ ಮಕ್ಕಳು ತಪ್ಪಿತಸ್ಥರೊಂದಿಗೆ ಸಹವಾಸವನ್ನು ಮಾಡದಿರುವುದು ಅದೆಷ್ಟು ಮಹತ್ವದ್ದಾಗಿದೆ! (1 ಕೊರಿಂಥ 15:33) ಯಾಕೋಬನ ಪುತ್ರಿಯಾಗಿದ್ದ ದೀನಳು ಯೆಹೋವನನ್ನು ಆರಾಧಿಸದಿದ್ದವರೊಂದಿಗೆ ಒಡನಾಟ ಮಾಡಿದಳು, ಮತ್ತು ಇದು ಬಹಳಷ್ಟು ತೊಂದರೆಗಳಿಗೆ ನಡೆಸಿತು. (ಆದಿಕಾಂಡ 34:1, 2) ಕುಟುಂಬದ ಸದಸ್ಯರಲ್ಲಿ ಒಬ್ಬನು ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವಲ್ಲಿ, ಕುಟುಂಬಕ್ಕೆ ಆಗಬಲ್ಲ ಹಾನಿಯ ಕುರಿತು ಯೋಚಿಸಿರಿ!—ಜ್ಞಾನೋಕ್ತಿ 17:21, 25.
ಕುಟುಂಬ ಸಂತೋಷದ ಕೀಲಿಕೈ
20. ಸಂತೋಷಕರವಾದ ಕುಟುಂಬ ಜೀವನವನ್ನು ಅನುಭವಿಸಲು ಕುಟುಂಬದ ಪ್ರತಿ ಸದಸ್ಯನು ಏನು ಮಾಡತಕ್ಕದ್ದು?
20 ಬೈಬಲ್ ಸಲಹೆಯನ್ನು ಅನ್ವಯಿಸಿಕೊಳ್ಳುವಾಗ ಕುಟುಂಬದ ಸಮಸ್ಯೆಗಳನ್ನು ನಿಭಾಯಿಸುವುದು ಹೆಚ್ಚು ಸುಲಭವಾಗುತ್ತದೆ. ವಾಸ್ತವದಲ್ಲಿ, ಅಂತಹ ಸಲಹೆಯನ್ನು ಅನ್ವಯಿಸಿಕೊಳ್ಳುವುದೇ ಕುಟುಂಬ ಸಂತೋಷಕ್ಕಿರುವ ಕೀಲಿಕೈ. ಆದುದರಿಂದ ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿ, ಯೇಸು ಸಭೆಯನ್ನು ಉಪಚರಿಸುವಂತೆಯೇ ಅವರನ್ನು ಉಪಚರಿಸಿರಿ. ಹೆಂಡತಿಯರೇ, ನಿಮ್ಮ ಗಂಡಂದಿರ ತಲೆತನಕ್ಕೆ ಅಧೀನರಾಗಿದ್ದು, ಜ್ಞಾನೋಕ್ತಿ 31:10-31 ರಲ್ಲಿ ವರ್ಣಿಸಲ್ಪಟ್ಟಿರುವ ಸಮರ್ಥಳಾದ ಹೆಂಡತಿಯ ಮಾದರಿಯನ್ನು ಅನುಸರಿಸಿರಿ. ಹೆತ್ತವರೇ, ನಿಮ್ಮ ಮಕ್ಕಳಿಗೆ ತರಬೇತಿಯನ್ನು ನೀಡಿರಿ. (ಜ್ಞಾನೋಕ್ತಿ 22:6) ತಂದೆಗಳೇ, ‘ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವರಾಗಿರಿ.’ (1 ತಿಮೊಥೆಯ 3:4, 5; 5:8) ಮತ್ತು ಮಕ್ಕಳೇ, ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ. (ಕೊಲೊಸ್ಸೆ 3:20) ಕುಟುಂಬದಲ್ಲಿ ಯಾರೂ ಪರಿಪೂರ್ಣರಲ್ಲ, ಎಲ್ಲರೂ ತಪ್ಪುಮಾಡುತ್ತಾರೆ. ಆದಕಾರಣ, ಪರಸ್ಪರ ಕ್ಷಮೆಯಾಚಿಸುತ್ತ, ದೀನಭಾವವನ್ನು ತೋರಿಸಿರಿ.
21. ಆಶ್ಚರ್ಯಕರವಾದ ಯಾವ ಪ್ರತೀಕ್ಷೆಗಳು ನಮ್ಮ ಮುಂದಿವೆ, ಮತ್ತು ನಾವು ಈಗ ಸಂತೋಷಕರವಾದ ಕುಟುಂಬ ಜೀವನವನ್ನು ಹೇಗೆ ಅನುಭವಿಸಬಲ್ಲೆವು?
21 ಬೈಬಲಿನಲ್ಲಿ ಕುಟುಂಬ ಜೀವನದ ವಿಷಯದಲ್ಲಿ ಬೆಲೆಬಾಳುವ ಧಾರಾಳ ಸಲಹೆಯೂ ಸೂಚನೆಯೂ ಅಡಕವಾಗಿದೆ. ಅಲ್ಲದೆ, ಅದು ನಮಗೆ ಯೆಹೋವನನ್ನು ಆರಾಧಿಸುವ ಸಂತೋಷಭರಿತ ಜನರಿಂದ ತುಂಬಿಕೊಳ್ಳುವ ದೇವರ ನೂತನ ಲೋಕ ಮತ್ತು ಭೂಪರದೈಸಿನ ಕುರಿತು ಬೋಧಿಸುತ್ತದೆ. (ಪ್ರಕಟನೆ 21:3, 4) ನಮ್ಮ ಮುಂದೆ ಎಷ್ಟು ಆಶ್ಚರ್ಯಕರವಾದ ಪ್ರತೀಕ್ಷೆಗಳಿವೆ! ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಆತನ ಆದೇಶಗಳನ್ನು ಅನ್ವಯಿಸುವಲ್ಲಿ ನಾವು ಈಗ ಕೂಡ ಸಂತೋಷಕರವಾದ ಕುಟುಂಬ ಜೀವನವನ್ನು ಅನುಭವಿಸಬಲ್ಲೆವು.
^ ಪ್ಯಾರ. 15 ಮಕ್ಕಳನ್ನು ಕಾಪಾಡುವುದರ ಕುರಿತಾದ ಸಹಾಯವನ್ನು, ಯೆಹೋವನ ಸಾಕ್ಷಿಗಳ ಪ್ರಕಾಶನವಾದ ಮಹಾ ಬೋಧಕನಿಂದ ಕಲಿತುಕೊಳ್ಳಿರಿ (ಇಂಗ್ಲಿಷ್) ಎಂಬ ಪುಸ್ತಕದ 32ನೆಯ ಅಧ್ಯಾಯದಲ್ಲಿ ಕಂಡುಕೊಳ್ಳುವಿರಿ.
^ ಪ್ಯಾರ. 18 ಹೆತ್ತವರು ಮಗುವಿಗೆ ದೇವರ ನಿಯಮವನ್ನು ಮುರಿಯುವಂತೆ ಕೇಳಿಕೊಳ್ಳುವಾಗ ಮಾತ್ರ ಆ ಮಗು ಅವರಿಗೆ ಅವಿಧೇಯತೆ ತೋರಿಸುವುದು ಸಮಂಜಸವಾಗಿದೆ.—ಅ. ಕೃತ್ಯಗಳು 5:29.