ಅಧ್ಯಾಯ ಹದಿನಾರು
ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಿರಿ
-
ವಿಗ್ರಹಗಳ ಮತ್ತು ಪೂರ್ವಿಕರ ಆರಾಧನೆಯ ವಿಷಯದಲ್ಲಿ ಬೈಬಲು ಏನು ಬೋಧಿಸುತ್ತದೆ?
-
ಕ್ರೈಸ್ತರು ಧಾರ್ಮಿಕ ಹಬ್ಬಗಳನ್ನು ಹೇಗೆ ವೀಕ್ಷಿಸುತ್ತಾರೆ?
-
ನೀವು ಇತರರನ್ನು ನೋಯಿಸದ ರೀತಿಯಲ್ಲಿ ನಿಮ್ಮ ನಂಬಿಕೆಗಳನ್ನು ಅವರಿಗೆ ಹೇಗೆ ವಿವರಿಸಬಲ್ಲಿರಿ?
1, 2. ಸುಳ್ಳುಧರ್ಮವನ್ನು ಬಿಟ್ಟುಬಂದ ಮೇಲೆ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳತಕ್ಕದ್ದು, ಮತ್ತು ಇದೇಕೆ ಪ್ರಾಮುಖ್ಯವೆಂದು ನೆನಸುತ್ತೀರಿ?
ನಿಮ್ಮ ಇಡೀ ನೆರೆಹೊರೆಯು ಮಲಿನಗೊಂಡಿದೆ ಎಂದು ನಿಮಗೆ ತಿಳಿದುಬರುತ್ತದೆಂದು ಭಾವಿಸೋಣ. ನಿಮ್ಮ ಪ್ರದೇಶದಲ್ಲಿ ಯಾರೊ ಗುಪ್ತವಾಗಿ ವಿಷಕರವಾದ ತ್ಯಾಜ್ಯವಸ್ತುಗಳನ್ನು ಎಸೆಯುತ್ತ ಬಂದಿದ್ದಾರೆ. ಮತ್ತು ಪರಿಸ್ಥಿತಿಯು ಈಗ ಜೀವಕ್ಕೆ ಅಪಾಯವನ್ನು ತರುವಷ್ಟು ಗಂಭೀರವಾಗಿದೆ. ನೀವೇನು ಮಾಡುವಿರಿ? ಸಾಧ್ಯವಿರುವಲ್ಲಿ ನೀವು ಬೇರೆ ಎಲ್ಲಿಗೊ ಹೋಗಿ ಜೀವಿಸುವಿರಿ ಎಂಬುದು ನಿಶ್ಚಯ. ಆದರೆ ಹಾಗೆ ಮಾಡಿದ ಮೇಲೆಯೂ ನಿಮ್ಮ ಮುಂದೆ, ‘ನನಗೆ ವಿಷ ತಗಲಿರಬಹುದೊ?’ ಎಂಬ ಗಂಭೀರ ಪ್ರಶ್ನೆ ಏಳುತ್ತದೆ.
2 ಸುಳ್ಳುಧರ್ಮದ ವಿಷಯದಲ್ಲಿಯೂ ಪರಿಸ್ಥಿತಿ ಹಾಗೆಯೇ ಇದೆ. ಇಂತಹ ಆರಾಧನೆಯು ಅಶುದ್ಧ ಬೋಧನೆಗಳಿಂದಲೂ ಆಚಾರಗಳಿಂದಲೂ ಮಲಿನಗೊಂಡಿದೆಯೆಂದು ಬೈಬಲ್ ಬೋಧಿಸುತ್ತದೆ. (2 ಕೊರಿಂಥ 6:17) ಈ ಕಾರಣದಿಂದಲೇ, ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲನ್ನು’ ನೀವು ಬಿಟ್ಟುಬರುವುದು ಪ್ರಾಮುಖ್ಯವಾಗಿದೆ. (ಪ್ರಕಟನೆ 18:2, 4) ನೀವು ಹಾಗೆ ಮಾಡಿದ್ದೀರಾ? ಮಾಡಿರುವಲ್ಲಿ ನೀವು ಪ್ರಶಂಸಾರ್ಹರು. ಆದರೆ ಸುಳ್ಳು ಧರ್ಮವೊಂದರಿಂದ ಪ್ರತ್ಯೇಕಿಸಿಕೊಂಡ ಬಳಿಕ ಅಥವಾ ಅದಕ್ಕೆ ರಾಜೀನಾಮೆ ಕೊಟ್ಟ ಬಳಿಕ ಇನ್ನೂ ಹೆಚ್ಚನ್ನು ಮಾಡಲಿಕ್ಕಿದೆ. ಇದನ್ನು ಮಾಡಿದ ಬಳಿಕ, ನೀವು ಹೀಗೆ ಕೇಳಿಕೊಳ್ಳತಕ್ಕದ್ದು: ‘ಮಿಥ್ಯಾರಾಧನೆಯ ಯಾವ ಸುಳಿವಾದರೂ ನನ್ನಲ್ಲಿ ಉಳಿದಿದೆಯೆ?’ ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ.
ವಿಗ್ರಹಗಳು ಮತ್ತು ಪೂರ್ವಿಕರ ಆರಾಧನೆ
3. (ಎ) ವಿಗ್ರಹಗಳ ಉಪಯೋಗದ ವಿಷಯದಲ್ಲಿ ಬೈಬಲು ಏನು ಹೇಳುತ್ತದೆ, ಮತ್ತು ದೇವರ ನೋಟವನ್ನು ಅಂಗೀಕರಿಸುವುದು ಕೆಲವರಿಗೆ ಏಕೆ ಕಷ್ಟಕರವಾಗಬಹುದು? (ಬಿ) ನಿಮ್ಮದ್ದಾಗಿದ್ದು, ಸುಳ್ಳು ಆರಾಧನೆಗೆ ಸಂಬಂಧಪಟ್ಟಿರುವ ಯಾವುದೇ ವಸ್ತುವನ್ನು ನೀವೇನು ಮಾಡಬೇಕು?
3 ಕೆಲವರ ಮನೆಗಳಲ್ಲಿ ವಿಗ್ರಹಗಳು ಅಥವಾ ಗುಡಿಗಳು ಬಹಳ ಕಾಲದಿಂದ ಇದ್ದಿರಬಹುದು. ಇದು ನಿಮ್ಮ ವಿಷಯದಲ್ಲಿಯೂ ಸತ್ಯವೊ? ಹಾಗಿರುವಲ್ಲಿ, ಅಂತಹ ದೃಶ್ಯ ಸಾಧನವಿಲ್ಲದೆ ದೇವರಿಗೆ ಪ್ರಾರ್ಥಿಸುವುದು ನಿಮಗೆ ವಿಚಿತ್ರವೆನಿಸಬಹುದು ಅಥವಾ ತಪ್ಪಾಗಿರುವಂತೆ ತೋರಬಹುದು. ಈ ವಸ್ತುಗಳಲ್ಲಿ ಕೆಲವಕ್ಕೆ ನೀವು ತೀರ ಅಂಟಿಕೊಂಡವರೂ ಆಗಿರಬಹುದು. ಆದರೆ ತನ್ನನ್ನು ಹೇಗೆ ಆರಾಧಿಸಬೇಕೆಂದು ಹೇಳುವ ಹಕ್ಕು ದೇವರಿಗಿದೆ, ಮತ್ತು ನಾವು ವಿಗ್ರಹಗಳನ್ನು ಉಪಯೋಗಿಸುವುದನ್ನು ಆತನು ಇಷ್ಟಪಡುವುದಿಲ್ಲ ಎಂದು ಬೈಬಲ್ ಬೋಧಿಸುತ್ತದೆ. (ವಿಮೋಚನಕಾಂಡ 20:4, 5; ಕೀರ್ತನೆ 115:4-8; ಯೆಶಾಯ 42:8; 1 ಯೋಹಾನ 5:21) ಆದಕಾರಣ ನಿಮ್ಮದಾಗಿದ್ದು, ಸುಳ್ಳು ಆರಾಧನೆಗೆ ಸಂಬಂಧಪಟ್ಟಿರುವ ಯಾವುದೇ ವಸ್ತುವನ್ನು ನಾಶಗೊಳಿಸುವ ಮೂಲಕ ಸತ್ಯ ಆರಾಧನೆಯ ಪಕ್ಷದಲ್ಲಿ ನಿಮ್ಮ ನಿಲುವನ್ನು ತೆಗೆದುಕೊಳ್ಳಸಾಧ್ಯವಿದೆ. ನಿಶ್ಚಯವಾಗಿ, ಅವುಗಳನ್ನು ಯೆಹೋವನು ವೀಕ್ಷಿಸುವ ಪ್ರಕಾರ ಅಂದರೆ “ಹೇಯ”ವಾದದ್ದಾಗಿ ವೀಕ್ಷಿಸಿರಿ.—ಧರ್ಮೋಪದೇಶಕಾಂಡ 27:15.
4. (ಎ) ಪೂರ್ವಿಕರ ಆರಾಧನೆಯು ವ್ಯರ್ಥವೆಂದು ನಮಗೆ ಹೇಗೆ ಗೊತ್ತು? (ಬಿ) ಪ್ರೇತವ್ಯವಹಾರದ ಯಾವುದೇ ರೂಪದಲ್ಲಿ ಭಾಗವಹಿಸುವ ವಿಷಯದಲ್ಲಿ ಯೆಹೋವನು ನಿಷೇಧವನ್ನು ಹಾಕಿದ್ದೇಕೆ?
4 ಅನೇಕ ಮಿಥ್ಯಾಧರ್ಮಗಳಲ್ಲಿ ಪೂರ್ವಿಕರ ಆರಾಧನೆಯೂ ಸಾಮಾನ್ಯವಾಗಿದೆ. 6ನೆಯ ಅಧ್ಯಾಯದಲ್ಲಿ ನೀವು ಕಲಿತಂತೆ, ಮೃತಜನರಿಗೆ ಪ್ರಜ್ಞಾಪೂರ್ವಕವಾದ ಅಸ್ತಿತ್ವವು ಎಲ್ಲಿಯೂ ಇರುವುದಿಲ್ಲ. ಆದುದರಿಂದ, ಅವರನ್ನು ಸಂಪರ್ಕಿಸುವ ಪ್ರಯತ್ನಗಳು ವ್ಯರ್ಥ. ಮೃತನಾಗಿರುವ ಒಬ್ಬ ಪ್ರಿಯ ವ್ಯಕ್ತಿಯಿಂದ ಬರುತ್ತವೆಂಬಂತೆ ತೋರುವ ಯಾವುದೇ ಸಂದೇಶಗಳು ನಿಜವಾಗಿಯೂ ದೆವ್ವಗಳಿಂದಲೇ ಬರುತ್ತವೆ. ಆದಕಾರಣ, ಇಸ್ರಾಯೇಲ್ಯರು ಮೃತರೊಂದಿಗೆ ಮಾತಾಡಲು ಪ್ರಯತ್ನಿಸಬಾರದೆಂದು ಮತ್ತು ಪ್ರೇತವ್ಯವಹಾರದ ಇತರ ರೂಪಗಳಲ್ಲಿ ಭಾಗವಹಿಸಬಾರದೆಂದು ಯೆಹೋವನು ಅವರ ಮೇಲೆ ನಿಷೇಧವನ್ನು ಹೊರಿಸಿದನು.—ಧರ್ಮೋಪದೇಶಕಾಂಡ 18:10-12.
ಬೈಬಲ್ ಸತ್ಯವನ್ನು ಕಲಿಯುವ ಮೊದಲು ಕೆಲವರು, ಮೃತಜನರು ಅದೃಶ್ಯ ಲೋಕವೊಂದರಲ್ಲಿ ಪ್ರಜ್ಞಾವಂತರಾಗಿದ್ದಾರೆಂದೂ ಅವರು ಜೀವಿತರಿಗೆ ಸಹಾಯವನ್ನು ಇಲ್ಲವೆ ಹಾನಿಯನ್ನು ಮಾಡಬಲ್ಲರೆಂದೂ ನಂಬುತ್ತಿದ್ದರು. ನಿಮ್ಮ ಮೃತ ಪೂರ್ವಿಕರನ್ನು ಸಮಾಧಾನಪಡಿಸಲು ನೀವು ಪ್ರಾಯಶಃ ಬಹಳ ಪ್ರಯತ್ನಗಳನ್ನು ಮಾಡುತ್ತಿದ್ದಿರಬಹುದು. ಆದರೆ ಈ ಪುಸ್ತಕದ5. ವಿಗ್ರಹಗಳ ಉಪಯೋಗ ಅಥವಾ ಪೂರ್ವಿಕರ ಆರಾಧನೆಯು ನಿಮ್ಮ ಹಿಂದಿನ ಆರಾಧನಾ ರೀತಿಯ ಭಾಗವಾಗಿದ್ದಲ್ಲಿ, ನೀವೇನು ಮಾಡಬಲ್ಲಿರಿ?
5 ವಿಗ್ರಹಗಳ ಉಪಯೋಗ ಅಥವಾ ಪೂರ್ವಿಕರ ಆರಾಧನೆಯು ನಿಮ್ಮ ಹಿಂದಿನ ಆರಾಧನಾ ರೀತಿಯ ಭಾಗವಾಗಿದ್ದಲ್ಲಿ ನೀವೇನು ಮಾಡಬಲ್ಲಿರಿ? ದೇವರು ಇಂತಹ ವಿಷಯಗಳನ್ನು ಹೇಗೆ ವೀಕ್ಷಿಸುತ್ತಾನೆಂದು ತೋರಿಸುವ ಬೈಬಲ್ ಭಾಗಗಳನ್ನು ಓದಿ, ಅವುಗಳ ಬಗ್ಗೆ ಪರ್ಯಾಲೋಚಿಸಿರಿ. ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಲು ನಿಮಗಿರುವ ಬಯಕೆಯ ಕುರಿತು ಪ್ರತಿದಿನ ಯೆಹೋವನಿಗೆ ಪ್ರಾರ್ಥಿಸಿ, ಆತನು ಯೋಚಿಸುವ ವಿಧದಲ್ಲಿ ನೀವೂ ಯೋಚಿಸುವಂತೆ ಸಹಾಯಮಾಡಲು ಆತನನ್ನು ಕೇಳಿಕೊಳ್ಳಿರಿ.—ಯೆಶಾಯ 55:9.
ಕ್ರಿಸ್ಮಸ್—ಆದಿ ಕ್ರೈಸ್ತರು ಆಚರಿಸುತ್ತಿರಲಿಲ್ಲ
6, 7. (ಎ) ಕ್ರಿಸ್ಮಸ್ ಯಾವುದರ ಜ್ಞಾಪಕಾರ್ಥವಾಗಿ ಆಚರಿಸಲ್ಪಡುತ್ತದೆಂದು ಹೇಳಲಾಗುತ್ತದೆ, ಮತ್ತು ಪ್ರಥಮ ಶತಮಾನದಲ್ಲಿದ್ದ ಯೇಸುವಿನ ಹಿಂಬಾಲಕರು ಅದನ್ನು ಆಚರಿಸಿದರೊ? (ಬಿ) ಯೇಸುವಿನ ಆದಿ ಶಿಷ್ಯರ ಸಮಯದಲ್ಲಿ ಜನ್ಮ ದಿನಾಚರಣೆಗಳು ಯಾವುದರೊಂದಿಗೆ ಸಂಬಂಧವನ್ನು ಹೊಂದಿದ್ದವು?
6 ಒಬ್ಬ ವ್ಯಕ್ತಿಯ ಆರಾಧನೆಯು ಜನಪ್ರಿಯ ಹಬ್ಬಗಳ ಮೂಲಕ ಮಿಥ್ಯಾಧರ್ಮದಿಂದ ಕಳಂಕಿತವಾಗಲು ಸಾಧ್ಯವಿದೆ. ದೃಷ್ಟಾಂತಕ್ಕೆ, ಕ್ರಿಸ್ಮಸ್ ಹಬ್ಬವನ್ನು ತೆಗೆದುಕೊಳ್ಳಿ. ಕ್ರಿಸ್ಮಸ್ ಹಬ್ಬ ಯೇಸು ಕ್ರಿಸ್ತನ ಜನನವನ್ನು ಜ್ಞಾಪಿಸಿಕೊಳ್ಳುವ ದಿನವೆಂದು ಹೇಳಲಾಗುತ್ತದೆ ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವ ಹೆಚ್ಚುಕಡಮೆ ಎಲ್ಲ ಧರ್ಮಗಳವರು ಅದನ್ನು ಆಚರಿಸುತ್ತಾರೆ. ಆದರೂ, ಒಂದನೆಯ ಶತಮಾನದಲ್ಲಿದ್ದ ಯೇಸುವಿನ ಶಿಷ್ಯರು ಅದನ್ನು ಆಚರಿಸುತ್ತಿದ್ದರೆಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಗಾಢ ವಿಷಯಗಳ ಪವಿತ್ರ ಮೂಲಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಕ್ರಿಸ್ತನ ಜನನ ನಂತರದ ಎರಡು
ಶತಮಾನಗಳಲ್ಲಿ, ಅವನು ನಿಷ್ಕೃಷ್ಟವಾಗಿ ಯಾವಾಗ ಹುಟ್ಟಿದನೆಂದು ಯಾರಿಗೂ ಗೊತ್ತಿರಲಿಲ್ಲ ಮತ್ತು ಕೇವಲ ಕೆಲವರೇ ಅದರ ಬಗ್ಗೆ ಆಸಕ್ತರಾಗಿದ್ದರು.”7 ಯೇಸುವಿನ ಶಿಷ್ಯರಿಗೆ ಅವನ ಜನನದ ಸರಿಯಾದ ತಾರೀಖು ಒಂದುವೇಳೆ ಗೊತ್ತಿರುತ್ತಿದ್ದರೂ ಅವರು ಅದನ್ನು ಆಚರಿಸುತ್ತಿರಲಿಲ್ಲ. ಏಕೆ? ಏಕೆಂದರೆ ಆದಿ ಕ್ರೈಸ್ತರ ವಿಷಯದಲ್ಲಿ ದ ವರ್ಲ್ಡ್ ಬುಕ್ ಎನ್ಸೈಕ್ಲಪೀಡಿಯ ಹೇಳುವುದು: ಅವರು “ಒಬ್ಬ ವ್ಯಕ್ತಿಯ ಜನನದ ಆಚರಣೆಯನ್ನು ವಿಧರ್ಮಿ ಪದ್ಧತಿಯೆಂದು ಎಣಿಸುತ್ತಿದ್ದರು.” ಬೈಬಲಿನಲ್ಲಿ ಹೇಳಲಾಗಿರುವ ಕೇವಲ ಎರಡು ಜನ್ಮ ದಿನಾಚರಣೆಗಳು ಯೆಹೋವನನ್ನು ಆರಾಧಿಸದಿದ್ದ ಇಬ್ಬರು ಪ್ರಭುಗಳದ್ದಾಗಿವೆ. (ಆದಿಕಾಂಡ 40:20; ಮಾರ್ಕ 6:21) ವಿಧರ್ಮಿ ದೇವತೆಗಳ ಗೌರವಾರ್ಥವಾಗಿಯೂ ಜನ್ಮ ದಿನಾಚರಣೆಗಳನ್ನು ನಡೆಸಲಾಗುತ್ತಿತ್ತು. ಉದಾಹರಣೆಗೆ, ರೋಮನರು ಮೇ 24ರಂದು ಡಯಾನ ದೇವತೆಯ ಹುಟ್ಟುದಿನವನ್ನು ಆಚರಿಸುತ್ತಿದ್ದರು. ಮರುದಿನ, ಅವರು ತಮ್ಮ ಸೂರ್ಯದೇವ ಅಪಾಲೋ ಎಂಬವನ ಜನ್ಮದಿನವನ್ನು ಆಚರಿಸುತ್ತಿದ್ದರು. ಹೀಗಿರುವುದರಿಂದ ಜನ್ಮ ದಿನಾಚರಣೆಗಳು ಕ್ರೈಸ್ತತ್ವದೊಂದಿಗಲ್ಲ, ವಿಧರ್ಮದೊಂದಿಗೆ ಸಂಬಂಧವನ್ನು ಹೊಂದಿದ್ದವು.
8. ಜನ್ಮ ದಿನಾಚರಣೆಗಳು ಮತ್ತು ಮೂಢನಂಬಿಕೆಯ ಮಧ್ಯೆ ಇರುವ ಸಂಬಂಧವನ್ನು ವಿವರಿಸಿರಿ.
8 ಒಂದನೆಯ ಶತಮಾನದ ಕ್ರೈಸ್ತರು ಯೇಸುವಿನ ಜನ್ಮದಿನವನ್ನು ಆಚರಿಸಿರಲಿಕ್ಕಿಲ್ಲವೆಂಬುದಕ್ಕೆ ಇನ್ನೊಂದು ಕಾರಣವಿದೆ. ಜನ್ಮ ದಿನಾಚರಣೆಗಳಿಗೂ ಮೂಢನಂಬಿಕೆಗೂ ಸಂಬಂಧವಿದೆ ಎಂದು ಶಿಷ್ಯರಿಗೆ ತಿಳಿದಿತ್ತೆಂಬುದು ಸಂಭವನೀಯ. ಉದಾಹರಣೆಗೆ, ಪುರಾತನಕಾಲಗಳ ಅನೇಕ ಗ್ರೀಕ್ ಮತ್ತು ರೋಮನ್ ಜನರು, ಪ್ರತಿಯೊಬ್ಬ ಮಾನವನ ಜನನದ ಸಮಯದಲ್ಲಿ ಒಂದು ಆತ್ಮವು ಉಪಸ್ಥಿತವಿದ್ದು ಅವನನ್ನು ಜೀವಮಾನವೆಲ್ಲ ಕಾಪಾಡುತ್ತದೆಂದು ನಂಬುತ್ತಿದ್ದರು. “ಆ ಆತ್ಮಕ್ಕೆ, ಯಾವ ದೇವತೆಯ ಜನ್ಮದಿನದಲ್ಲಿ ಈ ವ್ಯಕ್ತಿ ಹುಟ್ಟಿದನೊ ಆ ದೇವತೆಯೊಂದಿಗೆ ರಹಸ್ಯಾರ್ಥಕ ಸಂಬಂಧವಿತ್ತು” ಎಂದು ಜನ್ಮದಿನಗಳ ಸಂಪ್ರದಾಯಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಹೀಗಿರುವಲ್ಲಿ, ಯೇಸುವನ್ನು ಮೂಢನಂಬಿಕೆಯೊಂದಿಗೆ ಜೊತೆಗೂಡಿಸುವ ಯಾವುದೇ ಆಚರಣೆಯನ್ನು ಯೆಹೋವನು ಖಂಡಿತವಾಗಿಯೂ ಮೆಚ್ಚದಿರುವನು. (ಯೆಶಾಯ 65:11, 12) ಹಾಗಾದರೆ, ಇಷ್ಟೊಂದು ಜನರು ಕ್ರಿಸ್ಮಸನ್ನು ಆಚರಿಸುವಂತಾದದ್ದು ಹೇಗೆ?
ಕ್ರಿಸ್ಮಸ್ ಮೂಲ
9. ಡಿಸೆಂಬರ್ 25, ಯೇಸುವಿನ ಜನ್ಮ ದಿನಾಚರಣೆಯಾಗಿ ಪರಿಣಮಿಸಿದ್ದು ಹೇಗೆ?
9 ಜನರು ಯೇಸುವಿನ ಜನನವನ್ನು ಡಿಸೆಂಬರ್ 25ರಂದು ಆಚರಿಸಲು ಪ್ರಾರಂಭಿಸಿದ್ದು ಯೇಸು ಭೂಮಿಯಲ್ಲಿ ಜೀವಿಸಿ ನೂರಾರು ವರ್ಷಗಳು ಕಳೆದ ಬಳಿಕವೇ. ಆದರೆ ಅದು ಯೇಸುವಿನ ಜನನದ ತಾರೀಖು ಆಗಿರಲಿಲ್ಲ. ಏಕೆಂದರೆ ಯೇಸು ಹುಟ್ಟಿದ್ದು ಅಕ್ಟೋಬರ್ನಲ್ಲಿ ಎಂದು ವ್ಯಕ್ತವಾಗುತ್ತದೆ. * ಹಾಗಾದರೆ ಡಿಸೆಂಬರ್ 25ನೇ ತಾರೀಖನ್ನು ಏಕೆ ಆರಿಸಲಾಯಿತು? ಏಕೆಂದರೆ ತರುವಾಯ ತಾವು ಕ್ರೈಸ್ತರೆಂದು ಹೇಳಿಕೊಂಡ ಕೆಲವರು, “ಆ ದಿನವು, ‘ಅಜೇಯ ಸೂರ್ಯನ ಜನ್ಮದಿನ’ ಎಂಬ ವಿಧರ್ಮಿ ರೋಮನ್ ಹಬ್ಬಕ್ಕೆ ತಾಳೆಬೀಳುವಂತೆ ಬಯಸಿದ್ದರಿಂದಲೇ” ಆಗಿರಬೇಕು. (ದ ನ್ಯೂ ಎನ್ಸೈಕ್ಲಪೀಡಿಯ ಬ್ರಿಟ್ಯಾನಿಕಾ) ಚಳಿಗಾಲದಲ್ಲಿ, ಸೂರ್ಯನ ಶಕ್ತಿ ಅತಿ ಕಡಮೆಯಾಗಿ ಕಂಡುಬರುತ್ತಿದ್ದಾಗ, ಕಾವು ಮತ್ತು ಬೆಳಕನ್ನು ಕೊಡುವ ಈ ಸೂರ್ಯನು ತನ್ನ ದೂರದ ಪ್ರಯಾಣಗಳಿಂದ ಹಿಂದೆ ಬರುವಂತೆ ಪ್ರಚೋದಿಸಲು ವಿಧರ್ಮಿಗಳು ಉತ್ಸವಗಳನ್ನು ನಡೆಸುತ್ತಿದ್ದರು. ಮತ್ತು ಡಿಸೆಂಬರ್ 25ರಂದು ಸೂರ್ಯನು ಹಿಂದೆ ಬರಲಾರಂಭಿಸುತ್ತಾನೆ ಎಂದು ಪರಿಗಣಿಸಲಾಗುತ್ತಿತ್ತು. ವಿಧರ್ಮಿಗಳನ್ನು ಮತಾಂತರಿಸುವ ಪ್ರಯತ್ನದಲ್ಲಿ, ಧಾರ್ಮಿಕ ಮುಖಂಡರು ಈ ಹಬ್ಬವನ್ನು ತಮ್ಮದಾಗಿಸಿಕೊಂಡು, ಅದು “ಕ್ರೈಸ್ತ” ಹಬ್ಬವಾಗಿ ತೋರುವಂತೆ ಮಾಡಲು ಪ್ರಯತ್ನಿಸಿದರು. *
10. ಗತ ಸಮಯಗಳಲ್ಲಿ ಕೆಲವರು ಕ್ರಿಸ್ಮಸನ್ನು ಏಕೆ ಆಚರಿಸಲಿಲ್ಲ?
10 ಕ್ರಿಸ್ಮಸ್ನ ವಿಧರ್ಮಿ ಮೂಲಗಳನ್ನು ಬಹಳ ಸಮಯದ ಹಿಂದೆ ಗುರುತಿಸಲಾಗಿತ್ತು. 17ನೆಯ ಶತಮಾನದಲ್ಲಿ, ಕ್ರಿಸ್ಮಸ್ನ ಅಶಾಸ್ತ್ರೀಯ ಮೂಲದ ಕಾರಣದಿಂದ ಅದನ್ನು ಇಂಗ್ಲೆಂಡ್ ಮತ್ತು ಅಮೆರಿಕದ ಕೆಲವು ವಸಾಹತುಗಳಲ್ಲಿ ನಿಷೇಧಿಸಲಾಗಿತ್ತು. ಕ್ರಿಸ್ಮಸ್ ದಿನದಂದು ಯಾವನಾದರೂ ಕೆಲಸಕ್ಕೆ ಹೋಗದೆ ಮನೆಯಲ್ಲಿ ಉಳಿಯುತ್ತಿದ್ದಲ್ಲಿಯೂ ಅವನಿಗೆ ದಂಡ ತೆರಲಿಕ್ಕಿತ್ತು. ಆದರೆ ಬೇಗನೆ ಹಳೆಯ ಪದ್ಧತಿಗಳು ಪುನಃ ಜನಪ್ರಿಯವಾದವಲ್ಲದೆ, ಅವಕ್ಕೆ ಹೊಸತಾದ ಇನ್ನೂ ಕೆಲವು ಪದ್ಧತಿಗಳು ಕೂಡಿಸಲ್ಪಟ್ಟವು. ಹೀಗೆ ಕ್ರಿಸ್ಮಸ್ ಪುನಃ ಒಂದು ದೊಡ್ಡ ಹಬ್ಬವಾಗಿ ಪರಿಣಮಿಸಿತಲ್ಲದೆ, ಅನೇಕ ದೇಶಗಳಲ್ಲಿ ಅದು ಈಗಲೂ ತುಂಬ ಜನಪ್ರಿಯವಾಗಿದೆ. ಆದರೆ ಮಿಥ್ಯಾಧರ್ಮದೊಂದಿಗೆ ಕ್ರಿಸ್ಮಸ್ ಹಬ್ಬಕ್ಕಿರುವ ಸಂಬಂಧಗಳ ಕಾರಣ, ದೇವರನ್ನು ಮೆಚ್ಚಿಸಬಯಸುವವರು ವಿಧರ್ಮೀಯ ಆರಾಧನೆಯಲ್ಲಿ ಬೇರೂರಿರುವ ಈ ಹಬ್ಬವನ್ನಾಗಲಿ ಇನ್ನಾವ ಹಬ್ಬವನ್ನಾಗಲಿ ಆಚರಿಸುವುದಿಲ್ಲ. *
ಹಬ್ಬಗಳ ಮೂಲಗಳು ನಿಜವಾಗಿಯೂ ಪ್ರಾಮುಖ್ಯವೊ?
11. ಕೆಲವರು ಹಬ್ಬಗಳನ್ನು ಏಕೆ ಆಚರಿಸುತ್ತಾರೆ, ಆದರೆ ನಮ್ಮ ಮುಖ್ಯ ಚಿಂತೆ ಏನಾಗಿರಬೇಕು?
11 ಕ್ರಿಸ್ಮಸ್ನಂತಹ ರಜಾದಿನಗಳಿಗೆ ವಿಧರ್ಮಿ ಮೂಲಗಳಿರುವುದು ನಿಜವೆಂದು ಕೆಲವರು ಒಪ್ಪುತ್ತಾರಾದರೂ, ಅವುಗಳನ್ನು ಆಚರಿಸುವುದರಲ್ಲೇನೂ ತಪ್ಪಿಲ್ಲವೆಂದು ಅಭಿಪ್ರಯಿಸುತ್ತಾರೆ. ಎಷ್ಟೆಂದರೂ, ಹೆಚ್ಚಿನ ಜನರು ಈ ಹಬ್ಬಗಳನ್ನು ಆಚರಿಸುವಾಗ ಮಿಥ್ಯಾರಾಧನೆಯ ಕುರಿತು ಯೋಚಿಸುವುದಿಲ್ಲವಲ್ಲ. ಈ ಸಂದರ್ಭಗಳು ಕುಟುಂಬಗಳಿಗೆ ಆಪ್ತತೆಯನ್ನು ಬೆಳೆಸುವ ಅವಕಾಶಗಳನ್ನೂ ಒದಗಿಸುತ್ತವೆ. ನಿಮಗೂ ಹಾಗೆಯೇ ಅನಿಸುತ್ತದೆಯೆ? ಹಾಗಿರುವಲ್ಲಿ, ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲುವುದನ್ನು ಕಷ್ಟಕರವನ್ನಾಗಿ ಮಾಡುವಂಥದ್ದು ಸುಳ್ಳುಧರ್ಮದ ಮೇಲಿನ ಪ್ರೀತಿಯಲ್ಲ, ಬದಲಾಗಿ ಕುಟುಂಬದ ಮೇಲಿನ ಪ್ರೀತಿಯಾಗಿರುವುದು ಸಂಭವನೀಯ. ಕುಟುಂಬದ ಮೂಲಕರ್ತನಾಗಿರುವ ಯೆಹೋವನ ಇಚ್ಛೆಯು, ನಿಮಗೆ ನಿಮ್ಮ ಸಂಬಂಧಿಕರೊಂದಿಗೆ ಸುಸಂಬಂಧವಿರಬೇಕೆಂಬುದೇ ಆಗಿದೆ ಎಂಬ ಆಶ್ವಾಸನೆ ನಿಮಗಿರಲಿ. (ಎಫೆಸ 3:14, 15, NIBV) ಆದರೆ ಅಂಥ ಬಂಧಗಳನ್ನು ನೀವು ದೇವರಿಗೆ ಒಪ್ಪಿಗೆಯಾಗುವಂಥ ವಿಧಗಳಲ್ಲಿ ಬಲಪಡಿಸಬಲ್ಲಿರಿ. ನಮ್ಮ ಮುಖ್ಯ ಚಿಂತೆ ಏನಾಗಿರಬೇಕು ಎಂಬ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದುದು: “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ.”—ಎಫೆಸ 5:10.
12. ಅಶುದ್ಧ ಮೂಲಗಳಿರುವ ಪದ್ಧತಿಗಳು ಮತ್ತು ಆಚರಣೆಗಳಿಂದ ಏಕೆ ದೂರವಿರಬೇಕೆಂಬುದಕ್ಕೆ ದೃಷ್ಟಾಂತ ಕೊಡಿ.
12 ಈ ಹಬ್ಬಗಳ ಮೂಲಗಳಿಗೂ ಅವು ಇಂದು ಆಚರಿಸಲ್ಪಡುವ ರೀತಿಗೂ ಸಂಬಂಧವೇ ಇಲ್ಲವೆಂದು ನೀವು ಒಂದುವೇಳೆ ನೆನಸಬಹುದು. ಆದರೆ ಈ ಹಬ್ಬಗಳು ಎಲ್ಲಿಂದ ಆರಂಭವಾದವೊ ಅದರ ಮೂಲಗಳು ನಿಜವಾಗಿ ಪ್ರಾಮುಖ್ಯವೊ? ಹೌದು! ದೃಷ್ಟಾಂತಕ್ಕೆ: ಸಕ್ಕರೆ ಮಿಠಾಯಿಯೊಂದು ಚರಂಡಿಯಲ್ಲಿ ಬಿದ್ದಿರುವುದನ್ನು ನೀವು ನೋಡುತ್ತೀರಿ ಎಂದಿಟ್ಟುಕೊಳ್ಳಿ. ನೀವು ಆ ಮಿಠಾಯಿಯನ್ನು ಹೆಕ್ಕಿ ತಿನ್ನುವಿರೊ? ಇಲ್ಲ ಎಂಬುದು ನಿಶ್ಚಯ! ಏಕೆಂದರೆ ಆ ಮಿಠಾಯಿ ಕೊಳಕಾಗಿದೆ. ಆ ಮಿಠಾಯಿಯಂತೆಯೇ ಹಬ್ಬಗಳು ಅಪೇಕ್ಷಣೀಯವಾಗಿ ಕಂಡರೂ, ಅವನ್ನು ಅಶುದ್ಧ ಸ್ಥಳಗಳಿಂದ ಹೆಕ್ಕಲಾಗಿದೆ. ಆದುದರಿಂದ, ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಲು, ನಮಗೆ ಪ್ರವಾದಿ ಯೆಶಾಯನ ದೃಷ್ಟಿಕೋನವಿರಬೇಕು. ಅವನು ಸತ್ಯಾರಾಧಕರಿಗೆ ಹೇಳಿದ್ದು: “ಅಶುದ್ಧವಾದ ಯಾವದನ್ನೂ ಮುಟ್ಟದಿರಿ.”—ಯೆಶಾಯ 52:11.
ಇತರರೊಂದಿಗೆ ವ್ಯವಹರಿಸುವಾಗ ವಿವೇಚನೆಯನ್ನು ಉಪಯೋಗಿಸಿರಿ
13. ನೀವು ಹಬ್ಬಗಳಲ್ಲಿ ಭಾಗವಹಿಸದಿರುವಲ್ಲಿ ಯಾವ ಸವಾಲುಗಳು ಏಳಬಹುದು?
13 ನೀವು ಹಬ್ಬಗಳಲ್ಲಿ ಭಾಗವಹಿಸದೇ ಇರುವ ಆಯ್ಕೆಮಾಡುವಾಗ ಸವಾಲುಗಳು ಏಳಬಹುದು. ಉದಾಹರಣೆಗೆ, ಕೆಲಸಮಾಡುವ ಸ್ಥಳದಲ್ಲಿ ನೀವು ಕೆಲವು ಹಬ್ಬದ
ಚಟುವಟಿಕೆಗಳಲ್ಲಿ ಏಕೆ ಭಾಗವಹಿಸುವುದಿಲ್ಲವೆಂದು ಸಹೋದ್ಯೋಗಿಗಳು ಕುತೂಹಲಪಡಬಹುದು. ನಿಮಗೆ ಯಾರಾದರೂ ಕ್ರಿಸ್ಮಸ್ ಉಡುಗೊರೆ ಕೊಡುವಲ್ಲಿ ಏನು ಮಾಡುವಿರಿ? ಅದನ್ನು ತೆಗೆದುಕೊಳ್ಳುವದು ತಪ್ಪಾದೀತೊ? ನಿಮ್ಮ ವಿವಾಹ ಸಂಗಾತಿಯು ನಿಮ್ಮ ನಂಬಿಕೆಯಲ್ಲಿ ಭಾಗಿಯಾಗದಿರುವಲ್ಲಿ ಆಗೇನು? ನೀವು ಹಬ್ಬಗಳನ್ನು ಆಚರಿಸದೆ ಇರುವುದರಿಂದ ನಿಮ್ಮ ಮಕ್ಕಳಿಗೆ ಸಂತೋಷಸಂಭ್ರಮದಿಂದ ವಂಚಿತರಾಗಿರುವ ಅನಿಸಿಕೆಯಾಗದಂತೆ ನೀವು ಹೇಗೆ ಖಾತ್ರಿಪಡಿಸಿಕೊಳ್ಳಬಹುದು?14, 15. ಯಾರಾದರೂ ನಿಮಗೆ ಹಬ್ಬದ ಶುಭಾಶಯಗಳನ್ನು ತಿಳಿಸುವಲ್ಲಿ ಅಥವಾ ನಿಮಗೆ ಒಬ್ಬನು ಉಡುಗೊರೆಯನ್ನು ಕೊಡಲು ಬಯಸುವಲ್ಲಿ ನೀವೇನು ಮಾಡಸಾಧ್ಯವಿದೆ?
14 ಪ್ರತಿಯೊಂದು ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯಲು ವಿವೇಚನೆ ಅಗತ್ಯ. ಹಿತೈಷಿಯೊಬ್ಬನು ಅಕಸ್ಮಿಕವಾಗಿ ಆ ಹಬ್ಬದ ಸಂಬಂಧದಲ್ಲಿ ಶುಭಾಶಯಗಳನ್ನು ತಿಳಿಸುವಲ್ಲಿ, ನೀವು ಅವನಿಗೆ ಉಪಕಾರ ಹೇಳಬಹುದು. ಆದರೆ ನೀವು ಕ್ರಮವಾಗಿ ನೋಡುವ ಇಲ್ಲವೆ ಕೆಲಸಮಾಡುವ ಒಬ್ಬ ವ್ಯಕ್ತಿಯು ಹಾಗೆ ಹೇಳುವಲ್ಲಿ ಆಗೇನು? ಆಗ ನೀವು ಉಪಕಾರವನ್ನು ಹೇಳಿ, ಹೆಚ್ಚನ್ನು ತಿಳಿಸಬಹುದು. ಆದರೆ ಸಂದರ್ಭ ಯಾವುದೇ ಆಗಿರಲಿ, ಸಮಯೋಚಿತ ಜಾಣ್ಮೆಯನ್ನು ತೋರಿಸಿರಿ. ಬೈಬಲು ಸಲಹೆ ನೀಡುವುದು: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳಿದುಕೊಳ್ಳುವಿರಿ.” (ಕೊಲೊಸ್ಸೆ 4:6) ಇತರರಿಗೆ ಅಗೌರವ ತೋರಿಸದಂತೆ ಜಾಗರೂಕರಾಗಿರಿ. ಅದಕ್ಕೆ ಬದಲಾಗಿ, ನಿಮ್ಮ ನಿಲುವನ್ನು ಸಮಯೋಚಿತ ಜಾಣ್ಮೆಯಿಂದ ವಿವರಿಸಿರಿ. ಉಡುಗೊರೆ ಕೊಡುವುದನ್ನು ಮತ್ತು ಸಂತೋಷಸಮಾರಂಭಗಳನ್ನು ನೀವು ವಿರೋಧಿಸುವುದಿಲ್ಲವೆಂದೂ ಆದರೆ ಆ ಚಟುವಟಿಕೆಗಳಲ್ಲಿ ನೀವು ಬೇರೆ ಸಮಯದಲ್ಲಿ ಭಾಗವಹಿಸಲು ಇಷ್ಟಪಡುತ್ತೀರೆಂದೂ ಸ್ಪಷ್ಟವಾಗಿ ತಿಳಿಸಿರಿ.
15 ಯಾರಾದರೂ ನಿಮಗೆ ಒಂದು ಉಡುಗೊರೆ ಕೊಡಲು ಇಷ್ಟಪಡುವುದಾದರೆ ಆಗೇನು? ಪರಿಸ್ಥಿತಿಗಳ ಮೇಲೆ ಬಹಳಷ್ಟು ಹೊಂದಿಕೊಂಡಿದೆ. ಅದನ್ನು ಕೊಡುವ ವ್ಯಕ್ತಿ ಹೀಗೆ ಹೇಳಬಹುದು: “ನೀವು ಈ ಹಬ್ಬವನ್ನು ಆಚರಿಸುವುದಿಲ್ಲವೆಂದು ನನಗೆ ಗೊತ್ತು. ಆದರೂ, ನೀವು ಇದನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ.” ಇಂತಹ ಸಂದರ್ಭಗಳಲ್ಲಿ ಉಡುಗೊರೆಯನ್ನು ತೆಗೆದುಕೊಳ್ಳುವುದು ಆ ಹಬ್ಬದಲ್ಲಿ ಪಾಲ್ಗೊಂಡಂತಾಗುವುದಿಲ್ಲವೆಂಬ ನಿರ್ಣಯಕ್ಕೆ ನೀವು ಬರಬಹುದು. ಆದರೆ ಉಡುಗೊರೆ ಕೊಡುವ ಆ ವ್ಯಕ್ತಿಗೆ ನಿಮ್ಮ ಧಾರ್ಮಿಕ ನಂಬಿಕೆಗಳ ಪರಿಚಯವಿಲ್ಲದಿರುವಲ್ಲಿ, ನೀವು ಆ ಹಬ್ಬವನ್ನು ಆಚರಿಸುವುದಿಲ್ಲವೆಂದು ಅವರಿಗೆ ತಿಳಿಸಸಾಧ್ಯವಿದೆ. ಇದರಿಂದಾಗಿ ನೀವು ಆ ಉಡುಗೊರೆಯನ್ನು ತೆಗೆದುಕೊಳ್ಳುತ್ತೀರಾದರೂ ಆ ಸಂದರ್ಭದಲ್ಲಿ ಉಡುಗೊರೆಯನ್ನು ಏಕೆ ಕೊಡುವುದಿಲ್ಲ ಎಂಬುದನ್ನೂ ವಿವರಿಸಲು ಸಹಾಯವಾಗಬಹುದು. ಇನ್ನೊಂದು ಕಡೆಯಿಂದ ನೋಡುವುದಾದರೆ, ನೀವು ನಿಮ್ಮ ನಂಬಿಕೆಗಳಿಗೆ ಅಂಟಿಕೊಳ್ಳುವುದಿಲ್ಲವೆಂದು ತೋರಿಸುವ ಸ್ಪಷ್ಟ ಉದ್ದೇಶದಿಂದ ಇಲ್ಲವೆ ಪ್ರಾಪಂಚಿಕ ಲಾಭಕ್ಕಾಗಿ ನೀವು ರಾಜಿಮಾಡಿಕೊಳ್ಳಲು ಸಿದ್ಧರಿದ್ದೀರಿ
ಎಂದು ತೋರಿಸುವ ಉದ್ದೇಶದಿಂದ ಆ ಉಡುಗೊರೆಯು ಕೊಡಲ್ಪಡುವುದಾದರೆ, ಅದನ್ನು ಅಂಗೀಕರಿಸದಿರುವುದು ವಿವೇಕಪ್ರದ.ಕುಟುಂಬದ ಅವಿಶ್ವಾಸಿ ಸದಸ್ಯರೊಂದಿಗೆ ಹೇಗೆ ವ್ಯವಹರಿಸುವಿರಿ?
16. ಹಬ್ಬಗಳಿಗೆ ಸಂಬಂಧಪಟ್ಟಿರುವ ವಿಷಯಗಳನ್ನು ನಿರ್ವಹಿಸುವಾಗ ನೀವು ಹೇಗೆ ಸಮಯೋಚಿತ ಜಾಣ್ಮೆಯನ್ನು ತೋರಿಸಬಲ್ಲಿರಿ?
16 ನಿಮ್ಮ ಕುಟುಂಬ ಸದಸ್ಯರು ನಿಮ್ಮ ನಂಬಿಕೆಯಲ್ಲಿ ಪಾಲ್ಗೊಳ್ಳದಿರುವಲ್ಲಿ ಆಗೇನು? ಆಗ ಸಹ ಸಮಯೋಚಿತ ಜಾಣ್ಮೆಯನ್ನು ಉಪಯೋಗಿಸಿರಿ. ನಿಮ್ಮ ಸಂಬಂಧಿಕರು ಅನುಸರಿಸುವ ಪ್ರತಿಯೊಂದು ಪದ್ಧತಿ ಅಥವಾ ಆಚರಣೆಯನ್ನು ಒಂದು ದೊಡ್ಡ ವಿಷಯವಾಗಿ ಮಾಡುವ ಅಗತ್ಯವಿಲ್ಲ. ಇದಕ್ಕೆ ಬದಲಾಗಿ, ನಿಮಗೆ ನಿಮ್ಮ ಅಭಿಪ್ರಾಯಗಳನ್ನು ಇಟ್ಟುಕೊಳ್ಳಲು ಇರುವ ಹಕ್ಕನ್ನು ಅವರು ಗೌರವಿಸಬೇಕೆಂದು ನೀವು ಹೇಗೆ ಬಯಸುತ್ತೀರೊ ಹಾಗೆಯೇ ತಮ್ಮದೇ ಆದ ಅಭಿಪ್ರಾಯಗಳನ್ನು ಇಟ್ಟುಕೊಳ್ಳಲು ಅವರಿಗಿರುವ ಹಕ್ಕನ್ನು ಗೌರವಿಸಿರಿ. (ಮತ್ತಾಯ 7:12) ನೀವು ಆ ಹಬ್ಬದಲ್ಲಿ ಭಾಗಿಯಾಗಿದ್ದೀರೆಂದು ತೋರಿಸುವ ಯಾವುದೇ ಕಾರ್ಯಗಳಿಂದ ದೂರವಿರಿ. ಆದರೂ, ನಿಜವಾದ ಆಚರಣೆಗೆ ಸಂಬಂಧವಿರದ ವಿಷಯಗಳ ಕುರಿತು ನ್ಯಾಯಸಮ್ಮತತೆಯನ್ನು ತೋರಿಸಿರಿ. ಹೌದು, ನಿಮ್ಮ ಒಳ್ಳೇ ಮನಸ್ಸಾಕ್ಷಿಗೆ ಹಾನಿಯಾಗದ ರೀತಿಯಲ್ಲಿ ನೀವು ಸದಾ ವರ್ತಿಸಬೇಕೆಂಬುದು ನಿಶ್ಚಯ.—1 ತಿಮೊಥೆಯ 1:18, 19.
17. ಇತರರು ಹಬ್ಬಗಳನ್ನು ಆಚರಿಸುತ್ತಿರುವುದನ್ನು ನೋಡುವುದರಿಂದ ನಿಮ್ಮ ಮಕ್ಕಳಿಗೆ ತಾವು ಸಂತೋಷಸಂಭ್ರಮಗಳಿಂದ ವಂಚಿತರಾಗಿದ್ದೇವೆಂಬ ಅನಿಸಿಕೆಯಾಗದಂತೆ ಮಾಡಲು ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ?
17 ಬೈಬಲಿಗೆ ಅನುಸಾರವಾಗಿಲ್ಲದ ಹಬ್ಬಗಳನ್ನು ಆಚರಿಸದ ಕಾರಣ ತಾವು ಸಂತೋಷಸಂಭ್ರಮಗಳಿಂದ ವಂಚಿತರಾಗಿದ್ದೇವೆಂದು ನಿಮ್ಮ ಮಕ್ಕಳು ನೆನಸದಂತೆ ನೀವೇನು ಮಾಡಬಲ್ಲಿರಿ? ವರುಷದ ಬೇರೆ ಸಮಯಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಹೆಚ್ಚಿನದ್ದು ಹೊಂದಿಕೊಂಡಿರುತ್ತದೆ. ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಉಡುಗೊರೆಗಳನ್ನು ಕೊಡಲು ಬೇರೆ ಸಮಯಗಳನ್ನು ಬದಿಗಿಡುತ್ತಾರೆ. ನಿಮ್ಮ ಮಕ್ಕಳಿಗೆ ನೀವು ಕೊಡಸಾಧ್ಯವಿರುವ ಅತ್ಯಂತ ಉತ್ತಮ ಉಡುಗೊರೆಗಳಲ್ಲಿ ಒಂದು ನಿಮ್ಮ ಸಮಯ ಮತ್ತು ಪ್ರೀತಿಪೂರ್ವಕವಾದ ಗಮನವೇ ಆಗಿದೆ.
ಸತ್ಯಾರಾಧನೆಯನ್ನು ಆಚರಿಸಿರಿ
18. ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಿರುವುದು, ನೀವು ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲುವಂತೆ ಹೇಗೆ ಸಹಾಯಮಾಡಬಲ್ಲದು?
18 ದೇವರನ್ನು ಮೆಚ್ಚಿಸಲಿಕ್ಕಾಗಿ, ನೀವು ಮಿಥ್ಯಾರಾಧನೆಯನ್ನು ತ್ಯಜಿಸಿ ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲತಕ್ಕದ್ದು. ಇದರಲ್ಲಿ ಏನು ಸೇರಿದೆ? ಬೈಬಲ್ ಹೇಳುವುದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಇಬ್ರಿಯ 10:24, 25) ದೇವರನ್ನು ಆತನು ಒಪ್ಪುವ ರೀತಿಯಲ್ಲಿ ಆರಾಧಿಸಲು ಕ್ರೈಸ್ತ ಕೂಟಗಳು ಸಂತೋಷಕರವಾದ ಸಂದರ್ಭಗಳಾಗಿವೆ. (ಕೀರ್ತನೆ 22:22; 122:1) ಇಂತಹ ಕೂಟಗಳಲ್ಲಿ, ನಂಬಿಗಸ್ತ ಕ್ರೈಸ್ತರಿಗೆ “ಪರಸ್ಪರ ಪ್ರೋತ್ಸಾಹ” ದೊರೆಯುತ್ತದೆ.—ರೋಮಾಪುರ 1:12, NIBV.
ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (19. ನೀವು ಬೈಬಲಿನಿಂದ ಕಲಿತಿರುವ ವಿಷಯಗಳ ಬಗ್ಗೆ ಇತರರಿಗೆ ತಿಳಿಯಪಡಿಸುವುದು ಪ್ರಾಮುಖ್ಯವೇಕೆ?
19 ನೀವು ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಬಲ್ಲ ಇನ್ನೊಂದು ರೀತಿಯು, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಿರುವುದರಿಂದ ನೀವು ಕಲಿತುಕೊಂಡಿರುವ ವಿಷಯಗಳನ್ನು ಇತರರೊಂದಿಗೆ ಮಾತಾಡುವುದರ ಮೂಲಕವೇ. ಅನೇಕರು ಇಂದು ಲೋಕದಲ್ಲಿ ನಡೆಯುತ್ತಿರುವ ದುಷ್ಟತನದ ಕುರಿತು ನಿಜವಾಗಿಯೂ “ನರಳಿ ಗೋಳಾಡುತ್ತ” ಇದ್ದಾರೆ. (ಯೆಹೆಜ್ಕೇಲ 9:4) ಇಂಥ ಕೆಲವರ ಪರಿಚಯ ನಿಮಗಿದ್ದೀತು. ಭವಿಷ್ಯತ್ತಿನ ಕುರಿತಾದ ನಿಮ್ಮ ಬೈಬಲಾಧಾರಿತ ನಿರೀಕ್ಷೆಯ ಬಗ್ಗೆ ನೀವೇಕೆ ಅವರಿಗೆ ತಿಳಿಸಬಾರದು? ನೀವು ಸತ್ಯ ಕ್ರೈಸ್ತರ ಜೊತೆಯಲ್ಲಿ ಒಡನಾಟಮಾಡುತ್ತಾ ಇರುವಾಗ ಮತ್ತು ನೀವು ಕಲಿತಿರುವ ಅದ್ಭುತಕರವಾದ ಬೈಬಲ್ ಸತ್ಯಗಳನ್ನು ಇತರರಿಗೆ ತಿಳಿಸುತ್ತಾ ಇರುವಾಗ, ಮಿಥ್ಯಾರಾಧನೆಯ ಪದ್ಧತಿಗಳ ವಿಷಯದಲ್ಲಿ ನಿಮ್ಮ ಹೃದಯದಲ್ಲಿ ಉಳಿದಿದ್ದಿರಬಹುದಾದ ಯಾವುದೇ ಬಯಕೆಯು ಕ್ರಮೇಣ ಇಲ್ಲವಾಗುವುದನ್ನು ನೀವು ಕಂಡುಕೊಳ್ಳುವಿರಿ. ಸತ್ಯಾರಾಧನೆಯ ಪಕ್ಷದಲ್ಲಿ ನೀವು ಸ್ಥಿರವಾಗಿ ನಿಲ್ಲುವಲ್ಲಿ, ನೀವು ತುಂಬ ಸಂತೋಷಭರಿತರಾಗಿರುವಿರಿ ಮತ್ತು ಅನೇಕ ಆಶೀರ್ವಾದಗಳನ್ನು ಪಡೆದುಕೊಳ್ಳುವಿರಿ ಎಂಬ ಆಶ್ವಾಸನೆ ನಿಮಗಿರಲಿ.—ಮಲಾಕಿಯ 3:10.
^ ಪ್ಯಾರ. 9 ಡಿಸೆಂಬರ್ 25ರ ತಾರೀಖನ್ನು ಆಯ್ಕೆಮಾಡುವುದರಲ್ಲಿ ಸ್ಯಾಟರ್ನ್ ದೇವತೆಯ ಹಬ್ಬವು (ಸ್ಯಾಟರ್ನೇಲ್ಯ) ಒಂದು ಪಾತ್ರವನ್ನು ವಹಿಸಿತು. ರೋಮನ್ ಕೃಷಿ ದೇವತೆಯನ್ನು ಗೌರವಿಸುವ ಈ ಹಬ್ಬವು ಡಿಸೆಂಬರ್ 17-24ರಲ್ಲಿ ನಡೆಯುತ್ತಿತ್ತು. ಈ ಸ್ಯಾಟರ್ನೇಲ್ಯ ಹಬ್ಬದ ಸಮಯದಲ್ಲಿ ಭರ್ಜರಿ ಊಟ, ಮಜಾಮಾಡುವಿಕೆ ಮತ್ತು ಉಡುಗೊರೆಗಳ ಕೊಡುವಿಕೆಯು ನಡೆಯುತ್ತಿತ್ತು.
^ ಪ್ಯಾರ. 10 ಇತರ ಜನಪ್ರಿಯ ಹಬ್ಬಗಳನ್ನು ಸತ್ಯ ಕ್ರೈಸ್ತರು ಹೇಗೆ ವೀಕ್ಷಿಸುತ್ತಾರೆಂಬುದರ ಚರ್ಚೆಗಾಗಿ ಪರಿಶಿಷ್ಟದ 222-3ನೇ ಪುಟಗಳನ್ನು ನೋಡಿ.