ಬೈಬಲ್ ಸಂದೇಶದ—ಒಂದು ಕಿರುನೋಟ
1 ಯೆಹೋವನು ಆದಾಮಹವ್ವರನ್ನು ಸೃಷ್ಟಿಸಿ ಪರದೈಸಿನಲ್ಲಿ ಸದಾಕಾಲ ಜೀವಿಸುವ ಅವಕಾಶ ಕೊಡುತ್ತಾನೆ. ಸೈತಾನನು ದೇವರ ನಾಮವನ್ನು ಕಳಂಕಗೊಳಿಸಿ ದೇವರ ಅಧಿಕಾರವನ್ನು ವಿವಾದಕ್ಕೊಳಪಡಿಸುತ್ತಾನೆ. ಆದಾಮಹವ್ವರು ಸೈತಾನನ ದಂಗೆಯಲ್ಲಿ ಭಾಗವಹಿಸಿ ತಮಗೂ ತಮ್ಮ ಸಂತತಿಗೂ ಪಾಪ-ಮರಣವನ್ನು ತಂದುಕೊಳ್ಳುತ್ತಾರೆ
2 ಯೆಹೋವನು ದಂಗೆಕೋರರಿಗೆ ಮರಣದಂಡನೆ ವಿಧಿಸುತ್ತಾನೆ. ಸಂತಾನ ಅಥವಾ ವಿಮೋಚಕನು ಬಂದು ಸೈತಾನನನ್ನು ನಾಶಪಡಿಸಿ ಪಾಪ ಹಾಗೂ ದಂಗೆಯ ಕೆಟ್ಟ ಪರಿಣಾಮವನ್ನು ಸರಿಪಡಿಸುವನೆಂದು ವಾಗ್ದಾನಿಸುತ್ತಾನೆ
3 ಯೆಹೋವನು ಅಬ್ರಹಾಮ ಮತ್ತು ದಾವೀದನಿಗೆ ವಚನ ನೀಡುತ್ತಾ ಅವರ ವಂಶದಲ್ಲಿ ಸಂತಾನ ಅಥವಾ ಮೆಸ್ಸೀಯನು ಹುಟ್ಟುವನೆಂದೂ ಸದಾಕಾಲ ರಾಜ್ಯಾಭಾರ ಮಾಡುವನೆಂದೂ ತಿಳಿಸುತ್ತಾನೆ
4 ಯೆಹೋವನು ಪ್ರವಾದಿಗಳನ್ನು ಪ್ರೇರಿಸಿ ಅವರ ಮೂಲಕ ಮೆಸ್ಸೀಯನ ಕುರಿತು ಭವಿಷ್ಯ ತಿಳಿಸುತ್ತಾನೆ. ಮೆಸ್ಸೀಯನು ಪಾಪ-ಮರಣವನ್ನು ನಿರ್ಮೂಲ ಮಾಡುವನೆಂದು, ಸಹರಾಜರೊಂದಿಗೆ ದೇವರ ರಾಜ್ಯವನ್ನು ಆಳುವನೆಂದು ಮತ್ತು ದೇವರ ರಾಜ್ಯವು ಯುದ್ಧ, ಕಾಯಿಲೆ ಹಾಗೂ ಮರಣವನ್ನು ಇಲ್ಲವಾಗಿಸುವುದೆಂದು ಆ ಪ್ರವಾದಿಗಳು ಭವಿಷ್ಯ ನುಡಿಯುತ್ತಾರೆ
5 ಯೆಹೋವನು ತನ್ನ ಮಗನನ್ನು ಭೂಮಿಗೆ ಕಳುಹಿಸಿ ಅವನೇ ಮೆಸ್ಸೀಯನೆಂದು ತೋರಿಸಿಕೊಡುತ್ತಾನೆ. ಯೇಸು ದೇವರ ರಾಜ್ಯದ ಸಂದೇಶವನ್ನು ಸಾರುತ್ತಾನೆ ಮತ್ತು ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸುತ್ತಾನೆ. ಬಳಿಕ ದೇವರು ಅವನನ್ನು ಆತ್ಮಜೀವಿಯಾಗಿ ಪುನರುತ್ಥಾನಗೊಳಿಸುತ್ತಾನೆ
6 ಯೆಹೋವನು ತನ್ನ ಮಗನನ್ನು ಸ್ವರ್ಗದಲ್ಲಿ ರಾಜನಾಗಿ ಸಿಂಹಾಸನಕ್ಕೇರಿಸುತ್ತಾನೆ. ಅದು ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳು ಆರಂಭವಾದವು ಎಂಬುದಕ್ಕೆ ಸೂಚನೆಯಾಗಿರುತ್ತದೆ. ತನ್ನ ಹಿಂಬಾಲಕರು ಭೂಮಿಯ ಮೂಲೆ ಮೂಲೆಗೂ ದೇವರ ರಾಜ್ಯದ ಸಂದೇಶವನ್ನು ಸಾರುವಂತೆ ಯೇಸು ನಿರ್ದೇಶಿಸುತ್ತಾನೆ
7 ಯೆಹೋವನು, ತನ್ನ ಮಗನಿಗೆ ನಿರ್ದೇಶನ ಕೊಡುತ್ತಾ ಭೂಮಿಯ ಮೇಲೆ ರಾಜ್ಯಾಳಿಕೆಯನ್ನು ತರುವಂತೆ ಹೇಳುತ್ತಾನೆ. ಆ ರಾಜ್ಯವು ಎಲ್ಲಾ ದುಷ್ಟ ಸರ್ಕಾರಗಳನ್ನು ನಾಶಗೊಳಿಸಿ ಪರದೈಸನ್ನು ಸ್ಥಾಪಿಸಿ ಸಕಲ ನಂಬಿಗಸ್ತರಿಗೂ ಪರಿಪೂರ್ಣತೆಯನ್ನು ತರುತ್ತದೆ. ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಟ್ಟು ಆತನ ನಾಮವು ನಿತ್ಯತೆಗೂ ಪವಿತ್ರೀಕರಿಸಲ್ಪಡುತ್ತದೆ