ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 45

ದೇವರ ರಾಜ್ಯ ಅಂದರೇನು? ಅದನ್ನು ಬೆಂಬಲಿಸುವುದು ಹೇಗೆ?

ದೇವರ ರಾಜ್ಯ ಅಂದರೇನು? ಅದನ್ನು ಬೆಂಬಲಿಸುವುದು ಹೇಗೆ?

ಯೋಸು ತನ್ನ ಹಿಂಬಾಲಕರಿಗೆ ಕಲಿಸಿಕೊಟ್ಟ ಪ್ರಾರ್ಥನೆ ನಿನಗೆ ನೆನಪಿದೆಯಾ?— ನೆನಪಿಲ್ಲದಿದ್ದರೆ ಅದನ್ನು ಮತ್ತಾಯ 6:9-13 ರಲ್ಲಿ ನಾವು ಓದಿ ನೋಡೋಣ. ಅನೇಕರು ಇದನ್ನು ‘ಕರ್ತನ ಪ್ರಾರ್ಥನೆ’ ಎಂದು ಕರೆಯುತ್ತಾರೆ. ಈ ಪ್ರಾರ್ಥನೆಯಲ್ಲಿ “ನಿನ್ನ ರಾಜ್ಯವು ಬರಲಿ” ಎಂಬ ಬೇಡಿಕೆಯನ್ನು ನೀನು ಗಮನಿಸಬಹುದು. ದೇವರ ರಾಜ್ಯ ಅಂದರೇನು?—

ಸರಿ, ಅರಸ ಅಥವಾ ರಾಜ ಅಂದರೆ ನಿನಗೆ ಗೊತ್ತು. ಒಂದು ಊರನ್ನೋ ಅಥವಾ ದೇಶವನ್ನೋ ಆಳುವವನು. ಅವನ ಕೈಕೆಳಗೆ ಒಂದು ರಾಜ್ಯ ಅಥವಾ ಸರಕಾರ ಇರುತ್ತದೆ. ಕೆಲವು ದೇಶಗಳಲ್ಲಿ ಸರಕಾರದ ಆಡಳಿತ ನಡೆಸುವವನನ್ನು ರಾಷ್ಟ್ರಪತಿ ಅಂತ ಕರೆಯುತ್ತಾರೆ. ದೇವರ ಸರಕಾರದಲ್ಲಿ ಆಡಳಿತ ನಡೆಸುವವನನ್ನು ರಾಜ ಎಂದು ಬೈಬಲ್‌ ಕರೆಯುತ್ತದೆ. ಹಾಗಾಗಿ ದೇವರ ಸರಕಾರವನ್ನು ದೇವರ ರಾಜ್ಯ ಎಂದು ಕರೆಯಲಾಗುತ್ತದೆ.

ಯೆಹೋವ ದೇವರು ತನ್ನ ರಾಜ್ಯದ ರಾಜನಾಗಿ ಯಾರನ್ನು ಆರಿಸಿಕೊಂಡಿದ್ದಾನೆ ಗೊತ್ತಾ?— ತನ್ನ ಮಗನಾದ ಯೇಸು ಕ್ರಿಸ್ತನನ್ನೇ. ಮಾನವರು ಆಯ್ಕೆಮಾಡುವ ನಾಯಕರಿಗಿಂತ ಅಥವಾ ರಾಜರಿಗಿಂತ ಯೇಸು ಒಳ್ಳೆಯ ರಾಜ. ಏಕೆ?— ಯೇಸುವಿಗೆ ತನ್ನ ತಂದೆಯಾದ ಯೆಹೋವನ ಮೇಲೆ ಅಪಾರ ಪ್ರೀತಿಯಿದೆ. ಆದುದರಿಂದ ಯಾವಾಗಲೂ ನ್ಯಾಯವಾದದ್ದನ್ನೇ ಮಾಡುತ್ತಾನೆ.

ಯೇಸು ಬೇತ್ಲೆಹೇಮಿನಲ್ಲಿ ಹುಟ್ಟುವ ಬಹಳ ಮುಂಚೆಯೇ ಬೈಬಲ್‌ ಅವನ ಜನನದ ಕುರಿತು ಹಾಗೂ ದೇವರು ನೇಮಿಸಿದ ಅರಸನು ಅವನಾಗುವನು ಅನ್ನೋದರ ಕುರಿತು ತಿಳಿಸಿತ್ತು. ಅದನ್ನು ನಾವು ಯೆಶಾಯ 9:6, 7 ರಲ್ಲಿ ಓದೋಣ. ಅಲ್ಲಿ ಹೀಗಿದೆ: ‘ಒಂದು ಮಗು ನಮಗಾಗಿ ಹುಟ್ಟಿದೆ. ವರದ ಮಗನು ನಮಗೆ ದೊರೆತನು. ಆಡಳಿತವು ಅವನ ಬಾಹುವಿನ ಮೇಲಿರುವುದು. . . . ಸಮಾಧಾನದ ಪ್ರಭು ಅವನ ಹೆಸರಾಗಿರುವುದು. ಅವನ ಆಡಳಿತವು ಅಭಿವೃದ್ಧಿಯಾಗುವುದು. ರಾಜ್ಯದಲ್ಲಿ ನಿತ್ಯ ಸಮಾಧಾನವಿರುವುದು.’

ಈ ವಚನದಲ್ಲಿ ಯೇಸುವನ್ನು “ಪ್ರಭು” ಎಂದು ಕರೆಯಲಾಗಿದೆ. ಅವನು ಮಹಾ ರಾಜನಾದ ಯೆಹೋವನ ಮಗನಾಗಿದ್ದಾನೆ. ಒಬ್ಬ ರಾಜನ ಮಗನನ್ನು ಏನೆಂದು ಕರೆಯುತ್ತಾರೆ?— ಹೌದು, ರಾಜಕುಮಾರ ಅಂತ ಕರೆಯುತ್ತಾರೆ. ರಾಜಕುಮಾರನಾಗಿರುವ ಯೇಸುವನ್ನು ಯೆಹೋವನು ತನ್ನ ರಾಜ್ಯದ ರಾಜನನ್ನಾಗಿಯೂ ನೇಮಿಸಿದ್ದಾನೆ. ಅವನು ರಾಜನಾಗಿ ಈ ಭೂಮಿಯನ್ನು ಸಾವಿರ ವರ್ಷಗಳ ವರೆಗೆ ಆಳುವನು. (ಪ್ರಕಟನೆ 20:6) ಯೇಸು ದೀಕ್ಷಾಸ್ನಾನ ಪಡೆದುಕೊಂಡ ನಂತರ, “ಜನರೇ ಪಶ್ಚಾತ್ತಾಪಪಡಿರಿ, ಸ್ವರ್ಗದ ರಾಜ್ಯವು ಸಮೀಪಿಸಿದೆ ಎಂದು ಸಾರಿಹೇಳಲು” ಆರಂಭಿಸಿದನು.—ಮತ್ತಾಯ 4:17.

ರಾಜ್ಯವು ಸಮೀಪಿಸಿದೆ ಅಂತ ಯೇಸು ಜನರಿಗೆ ಸಾರಿದ್ದೇಕೆ?— ಏಕೆಂದರೆ ದೇವರ ರಾಜ್ಯದ ರಾಜನಾಗಲಿದ್ದ ಯೇಸು ಆ ಜನರೊಡನೆ ಜೀವಿಸುತ್ತಿದ್ದನು. ರಾಜನೇ ಅವರೊಂದಿಗೆ ಇರುವಾಗ ಆ ರಾಜ್ಯ ಕೂಡ ಅವರ ಹತ್ತಿರನೇ ಇದ್ದಂತಾಯಿತಲ್ವಾ. ಆದುದರಿಂದಲೇ, “ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿಯೇ ಇದೆ” ಎಂದು ಯೇಸು ಜನರಿಗೆ ಹೇಳಿದನು. (ಲೂಕ 17:21) ಸ್ವಲ್ಪ ಯೋಚಿಸು ಪುಟ್ಟು, ಯೆಹೋವನು ನೇಮಿಸಿದ ರಾಜನನ್ನು ಮುಖಾಮುಖಿ ನೋಡಿ ಮಾತಾಡುವ ಅವಕಾಶ ನಿನಗೆ ಸಿಕ್ಕಿದ್ದಿದ್ದರೆ ನಿನಗೆ ಹೇಗಾಗುತ್ತಿತ್ತು?—

ಈಗ ಹೇಳು, ಯೇಸು ಯಾವ ಪ್ರಾಮುಖ್ಯ ಕೆಲಸ ಮಾಡಲು ಭೂಮಿಗೆ ಬಂದನು?— ಈ ಪ್ರಶ್ನೆಗೆ ಯೇಸು ಏನೆಂದು ಉತ್ತರ ಕೊಟ್ಟನು ಗೊತ್ತಾ. ‘ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ. ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ’ ಅಂದನು. (ಲೂಕ 4:43) ಸಾರುವ ಕೆಲಸವನ್ನು ತನ್ನೊಬ್ಬನಿಂದ ಮಾಡಿ ಮುಗಿಸಲು ಸಾಧ್ಯವಿಲ್ಲ ಅಂತ ಯೇಸುವಿಗೆ ಗೊತ್ತಿತ್ತು. ಅವನು ಏನು ಮಾಡಿದನು ಗೊತ್ತಾ?—

ಯಾವ ಕೆಲಸವನ್ನು ಮಾಡಲಿಕ್ಕಾಗಿ ಯೇಸು ಭೂಮಿಗೆ ಬಂದನು?

ಅವನು ಇತರರಿಗೂ ತರಬೇತಿ ನೀಡಿದನು. ಸಾರುವ ಕೆಲಸವನ್ನು ಹೇಗೆ ಮಾಡುವುದೆಂದು ತೋರಿಸಿಕೊಟ್ಟನು. ಮೊದಲು ತನ್ನ 12 ಮಂದಿ ಅಪೊಸ್ತಲರಿಗೆ ತರಬೇತಿ ಕೊಟ್ಟನು. (ಮತ್ತಾಯ 10:5, 7) ಅಪೊಸ್ತಲರಿಗೆ ಮಾತ್ರವಲ್ಲ ಬೇರೆ ಅನೇಕರಿಗೂ ತರಬೇತಿ ನೀಡಿದ್ದನ್ನು ನಾವು ಬೈಬಲ್‌ನಲ್ಲಿ ಓದುತ್ತೇವೆ. ಹೀಗೆ ತರಬೇತಿ ಕೊಟ್ಟು 70 ಮಂದಿ ಶಿಷ್ಯರನ್ನು ಇಬ್ಬಿಬ್ಬರಾಗಿ ಸಾರಲು ಕಳುಹಿಸಿದನು. ಅವರು ಯಾವ ವಿಷಯದ ಕುರಿತು ಸಾರಿದರು?— ‘ದೇವರ ರಾಜ್ಯವು ಸಮೀಪಿಸುತ್ತಿದೆ’ ಎಂದು ಸಾರುವಂತೆ ಯೇಸು ಕಲಿಸಿಕೊಟ್ಟನು. (ಲೂಕ 10:9) ಹೀಗೆ ಜನಸಾಮಾನ್ಯರು ಸಹ ದೇವರ ಸರಕಾರದ ಕುರಿತು ಕಲಿತರು.

ಹಿಂದಿನ ಕಾಲದಲ್ಲಿ, ಇಸ್ರಾಯೇಲ್‌ನಲ್ಲಿ ಹೊಸ ರಾಜರು ಸಿಂಹಾಸನಕ್ಕೇರಿದಾಗ ಕತ್ತೆಮರಿಯ ಮೇಲೆ ಪಟ್ಟಣವನ್ನು ಸವಾರಿಮಾಡುತ್ತಿದ್ದ ಪದ್ಧತಿಯಿತ್ತು. ಯೇಸುನೂ ಹಾಗೆಯೇ ಮಾಡಿದನು. ಯೆರೂಸಲೇಮಿಗೆ ಕೊನೆಯ ಬಾರಿ ಭೇಟಿ ನೀಡಿದ ಸಮಯದಲ್ಲಿ ಅವನು ಕತ್ತೆಮರಿಯ ಮೇಲೆ ಆಗಮಿಸಿದನು. ಏಕೆಂದರೆ ಅವನು ದೇವರ ರಾಜ್ಯದ ರಾಜನಾಗಲಿದ್ದನು. ಅದು ಜನರಿಗೆ ಇಷ್ಟವಿತ್ತಾ?— ನೋಡೋಣ.

ಅವನು ಯೆರೂಸಲೇಮಿಗೆ ಆಗಮಿಸಿದಂತೆ ಜನರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿ ಸ್ವಾಗತ ನೀಡಿದರು. ಇನ್ನು ಕೆಲವರು ಖರ್ಜೂರ ಮರದ ಗರಿಗಳನ್ನು ದಾರಿಯಲ್ಲಿ ಹಾಸಿದರು. ಹೀಗೆ ಯೇಸು ರಾಜನಾಗುವುದು ತಮಗೆ ಇಷ್ಟವೆಂದು ತೋರಿಸಿಕೊಟ್ಟರು. ಅಷ್ಟೇ ಅಲ್ಲ, “ಯೆಹೋವನ ನಾಮದಲ್ಲಿ ಅರಸನಾಗಿ ಬರುವವನಿಗೆ ಆಶೀರ್ವಾದ!” ಎಂದು ಒಕ್ಕೊರಳಿನಿಂದ ಕೂಗಿದರು. ಆದರೆ ಯೇಸು ರಾಜನಾಗುವುದನ್ನು ಇಷ್ಟಪಡದ ಕೆಲವರೂ ಇದ್ದರು. ಕೆಲವು ಧಾರ್ಮಿಕ ಮುಖಂಡರಂತೂ ‘ನಿನ್ನ ಶಿಷ್ಯರಿಗೆ ಸುಮ್ಮನಿರಲು ಹೇಳು’ ಎಂದು ಯೇಸುವಿಗೆ ದಮ್ಕಿ ಹಾಕಿದರು.—ಲೂಕ 19:28-40.

ಯೇಸುವನ್ನು ರಾಜನಾಗಿ ಅಂಗೀಕರಿಸಿದ ಜನರು ನಂತರ ಏಕೆ ಮನಸ್ಸು ಬದಲಾಯಿಸಿದರು?

ಯೇಸುವನ್ನು ಬಂಧಿಸಿ ವಿಚಾರಣೆಮಾಡಿದ್ದು ಇದಾದ ಐದು ದಿನಗಳ ನಂತರವೇ. ಆಗ ಅವನನ್ನು ಅರಮನೆಗೆ ಕರೆದೊಯ್ದು ಗವರ್ನರ್‌ ಪೊಂತ್ಯ ಪಿಲಾತನ ಮುಂದೆ ಹಾಜರುಪಡಿಸುತ್ತಾರೆ. ಅವನ ಮೇಲೆ ಸುಳ್ಳಾರೋಪ ಹೊರಿಸುತ್ತಾರೆ. ಅವನು ತನ್ನನ್ನು ರಾಜನೆಂದು ಹೇಳಿಕೊಳ್ಳುತ್ತಾನೆಂದು ಹೇಳುತ್ತಾರೆ. ಮಾತ್ರವಲ್ಲ, ರೋಮನ್‌ ಸರಕಾರದ ವಿರುದ್ಧ ಪಿತೂರಿ ಹೂಡಿದ್ದಾನೆಂದು ಪಿಲಾತನಿಗೆ ದೂರುತ್ತಾರೆ. ಆ ಅರೋಪದ ಕುರಿತು ಪಿಲಾತನೇ ಯೇಸುವನ್ನು ಖಾಸಗಿಯಾಗಿ ವಿಚಾರಿಸುತ್ತಾನೆ. ಆಗ ಯೇಸು ರೋಮನ್‌ ಸರಕಾರವನ್ನು ಉರುಳಿಸಿ ತಾನು ರಾಜನಾಗಲು ಪ್ರಯತ್ನಿಸುತ್ತಿಲ್ಲ ಎಂಬ ವಿಷಯವನ್ನು ಪಿಲಾತನಿಗೆ ಸ್ಪಷ್ಟಪಡಿಸುತ್ತಾನೆ. “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಅಂತ ಖಡಾಖಂಡಿತವಾಗಿ ಹೇಳುತ್ತಾನೆ.—ಯೋಹಾನ 18:36.

ಆಗ ಪಿಲಾತನು ಹೊರಗೆ ನೆರೆದಿದ್ದ ಜನರ ಬಳಿ ಬಂದು ಯೇಸುವಿನಲ್ಲಿ ಯಾವ ತಪ್ಪೂ ಕಾಣಲಿಲ್ಲವೆಂದು ಹೇಳುತ್ತಾನೆ. ಆದರೆ ಯೇಸುವನ್ನು ರಾಜನಾಗಿ ಅಂಗೀಕರಿಸಲು ಜನರಿಗೀಗ ಮನಸ್ಸಿಲ್ಲ. ಅವನನ್ನು ಬಿಡುಗಡೆಮಾಡುವುದೂ ಅವರಿಗೆ ಇಷ್ಟವಿಲ್ಲ. (ಯೋಹಾನ 18:37-40) ಪಿಲಾತನು ಯೇಸುವನ್ನು ಇನ್ನೊಮ್ಮೆ ವಿಚಾರಣೆ ಮಾಡುತ್ತಾನೆ. ಯೇಸು ಯಾವ ತಪ್ಪನ್ನೂ ಮಾಡಿಲ್ಲ ಅಂತ ಅವನಿಗೆ ಖಚಿತವಾಗುತ್ತದೆ. ಅವನು ಮತ್ತೆ ಜನರ ಮುಂದೆ ಯೇಸುವನ್ನು ಕರೆದುಕೊಂಡು ಬಂದು, “ನೋಡಿ! ನಿಮ್ಮ ಅರಸ!” ಎಂದು ಹೇಳುತ್ತಾನೆ. ಅದಕ್ಕೆ ಜನರು, “ಅವನನ್ನು ಕೊಲ್ಲಿಸು! ಅವನನ್ನು ಕೊಲ್ಲಿಸು! ಅವನನ್ನು ಶೂಲಕ್ಕೇರಿಸು!” ಎಂದು ಕಿರಿಚುತ್ತಾರೆ.

ಆಗ ಪಿಲಾತನು, “ನಿಮ್ಮ ಅರಸನನ್ನು ನಾನು ಶೂಲಕ್ಕೇರಿಸಲೊ?” ಎಂದು ಕೇಳುತ್ತಾನೆ. ಮುಖ್ಯ ಯಾಜಕರು, “ನಮಗೆ ಕೈಸರನನ್ನು ಬಿಟ್ಟರೆ ಬೇರೆ ಅರಸನಿಲ್ಲ” ಎಂದು ಉತ್ತರಿಸುತ್ತಾರೆ. ದುಷ್ಟ ಯಾಜಕರ ನಯವಂಚನೆ ನೋಡು! ಜನರನ್ನು ಉದ್ರೇಕಿಸಿ ಯೇಸುವಿನ ವಿರುದ್ಧ ರೊಚ್ಚಿಗೇಳುವಂತೆ ಮಾಡಿಬಿಟ್ಟರು.—ಯೋಹಾನ 19:1-16.

ಅಂದಿನಂತೆ ಇಂದೂ ಇದೆ. ಯೇಸು ರಾಜನಾಗಿ ಆಳುವುದು ಹೆಚ್ಚಿನವರಿಗಿಂದು ಇಷ್ಟವಿಲ್ಲ. ದೇವರನ್ನು ನಂಬುವುದಾಗಿ ಹೇಳುವುದಾದರೂ ದೇವರ ಹಾಗೂ ಕ್ರಿಸ್ತನ ಮಾರ್ಗದರ್ಶನ ಅವರಿಗೆ ಬೇಡವೇ ಬೇಡ. ಮಾನವ ಸರಕಾರಗಳೇ ಅವರಿಗೆ ಸರ್ವಸ್ವ. ಅವುಗಳನ್ನೇ ನೆಚ್ಚಿಕೊಳ್ಳುತ್ತಾರೆ.

ನಮ್ಮ ಕುರಿತೇನು? ದೇವರ ರಾಜ್ಯದ ಕುರಿತು ಕಲಿತಾಗ ಮತ್ತು ಅದು ತರಲಿರುವ ಆಶೀರ್ವಾದಗಳ ಕುರಿತು ಕೇಳಿದಾಗ ಯೆಹೋವ ದೇವರ ಬಗ್ಗೆ ನಮಗೆ ಯಾವ ಭಾವನೆ ಉಂಟಾಗುತ್ತದೆ?— ದೇವರೆಡೆಗೆ ಪ್ರೀತಿ ಉಕ್ಕುತ್ತೆ ಅಲ್ವಾ?— ದೇವರ ಮೇಲೆ ನಮಗೆ ಪ್ರೀತಿಯಿದೆ ಎಂದೂ ಆತನ ರಾಜ್ಯಭಾರವನ್ನು ನಾವು ಇಷ್ಟಪಡುತ್ತೇವೆಂದೂ ಹೇಗೆ ತೋರಿಸಬಲ್ಲೆವು?—

ಯೇಸು ದೀಕ್ಷಾಸ್ನಾನ ಪಡೆದುಕೊಂಡದ್ದು ಏಕೆ? ಅದನ್ನು ಮೆಚ್ಚಿದನೆಂದು ದೇವರು ಹೇಗೆ ತೋರಿಸಿದನು?

ಯೇಸುವಿನ ಮಾದರಿಯನ್ನು ಅನುಸರಿಸುವ ಮೂಲಕ ತೋರಿಸಬಲ್ಲೆವು. ಯೆಹೋವನನ್ನು ಪ್ರೀತಿಸುತ್ತೇನೆಂದು ಯೇಸು ಹೇಗೆ ತೋರಿಸಿದನು?— ‘ದೇವರಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ’ ಎಂದು ಯೇಸು ನುಡಿದನು. (ಯೋಹಾನ 8:29) ಹೌದು, ಯೇಸು ‘ದೇವರ ಚಿತ್ತವನ್ನು ಮಾಡಲೆಂದೇ,’ ‘ಆತನ ಕೆಲಸವನ್ನು ಪೂರೈಸಲೆಂದೇ’ ಭೂಮಿಗೆ ಬಂದನು. (ಇಬ್ರಿಯ 10:7; ಯೋಹಾನ 4:34) ಸಾರುವ ಕೆಲಸವನ್ನು ಆರಂಭಿಸುವುದಕ್ಕೆ ಮುಂಚೆ ಯೇಸು ಏನು ಮಾಡಿದನೆಂದು ಗಮನಿಸು.

ಯೋರ್ದನ್‌ ನದಿ ತೀರದಲ್ಲಿದ್ದ ಸ್ನಾನಿಕನಾದ ಯೋಹಾನನ ಬಳಿಗೆ ದೀಕ್ಷಾಸ್ನಾನ ಪಡೆದುಕೊಳ್ಳಲು ಹೋಗುತ್ತಾನೆ. ಅವರಿಬ್ಬರೂ ನದಿ ನೀರಿನಲ್ಲಿ ಸ್ವಲ್ಪ ದೂರ ಹೋಗುತ್ತಾರೆ. ಯೋಹಾನನು ಯೇಸುವನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ಮೇಲೆತ್ತುತ್ತಾನೆ. ಯೋಹಾನನು ಏಕೆ ದೀಕ್ಷಾಸ್ನಾನ ಮಾಡಿಸಿದನು ಗೊತ್ತಾ?—

ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತಾಡಲು ನಮಗೆ ಯಾವ ಸಂದರ್ಭಗಳು ಸಿಗುತ್ತವೆ?

ದೀಕ್ಷಾಸ್ನಾನ ಮಾಡಿಸುವಂತೆ ಯೇಸುವೇ ಕೇಳಿಕೊಂಡನು. ಯೇಸುವಿನ ದೀಕ್ಷಾಸ್ನಾನದಲ್ಲಿ ದೇವರಿಗೆ ಇಷ್ಟವಿತ್ತಾ?— ಹೌದು, ಯೇಸು ದೀಕ್ಷಾಸ್ನಾನ ಪಡೆದಾಗ, “ನೀನು ಪ್ರಿಯನಾಗಿರುವ ನನ್ನ ಮಗನು; ನಾನು ನಿನ್ನನ್ನು ಮೆಚ್ಚಿದ್ದೇನೆ” ಎಂದು ಸ್ವರ್ಗದಿಂದ ದೇವರು ಹೇಳಿದನು. ಅಷ್ಟೇ ಅಲ್ಲ, ದೇವರು ತನ್ನ ಪವಿತ್ರಾತ್ಮವನ್ನು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಕಳುಹಿಸಿದನು. ಆದುದರಿಂದ, ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ಯೇಸು, ತನ್ನ ಜೀವನ ಪೂರ್ತಿ ಅಂದರೆ ನಿತ್ಯಕ್ಕೂ ಯೆಹೋವನ ಸೇವೆಮಾಡಲು ಇಷ್ಟಪಡುತ್ತೇನೆ ಎಂದು ತೋರಿಸಿಕೊಟ್ಟನು.—ಮಾರ್ಕ 1:9-11.

ನಿನಗೀಗ ಚಿಕ್ಕ ಪ್ರಾಯ ಅಲ್ವಾ. ಮುಂದೆ ಏನು ಮಾಡುತ್ತೀಯಾ?— ಯೇಸುವಿನಂತೆ ದೀಕ್ಷಾಸ್ನಾನ ಪಡೆದುಕೊಳ್ಳುತ್ತೀಯಾ?— ನೀನು ಅವನು ಮಾಡಿದಂತೆ ಮಾಡಬೇಕು. ಏಕೆಂದರೆ “ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ಅವನು ನಿಮಗೋಸ್ಕರ ಮಾದರಿಯನ್ನು” ಇಟ್ಟಿದ್ದಾನೆಂದು ಬೈಬಲ್‌ ತಿಳಿಸುತ್ತದೆ. (1 ಪೇತ್ರ 2:21) ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ದೇವರ ರಾಜ್ಯದ ರಾಜ್ಯಭಾರವನ್ನು ನೀನು ಇಷ್ಟಪಡುತ್ತೀ ಅಂತ ತೋರಿಸುತ್ತಿ. ನಾವು ಬರೀ ದೀಕ್ಷಾಸ್ನಾನ ಪಡೆದುಕೊಂಡರೆ ಸಾಲದು.

ಯೇಸು ಬೋಧಿಸಿದ ಎಲ್ಲಾ ವಿಷಯಗಳಿಗೆ ನಾವು ವಿಧೇಯರಾಗಬೇಕು. “ಲೋಕದ ಭಾಗವಾಗಿ” ಇರಬಾರದು ಎಂದು ಯೇಸು ನಮಗೆ ಹೇಳಿದನು. ನಾವು ಲೋಕದ ವಿಷಯಗಳಲ್ಲಿ ಸೇರಿಕೊಂಡರೆ, ಯೇಸುವಿನ ಈ ಮಾತಿಗೆ ವಿಧೇಯತೆ ತೋರಿಸಿದಂತಾಗುತ್ತಾ? ಯೇಸು ಮತ್ತವನ ಅಪೊಸ್ತಲರು ಲೋಕದ ವಿಷಯಗಳಿಂದ ದೂರವಿದ್ದರು. (ಯೋಹಾನ 17:14) ಅವರು ಯಾವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದರು?— ದೇವರ ರಾಜ್ಯದ ಕುರಿತು ಸಾರುವ ಕೆಲಸದಲ್ಲಿ. ಈ ಕೆಲಸವು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾವೂನೂ ಈ ಕೆಲಸವನ್ನು ಮಾಡಬೇಕಲ್ವಾ?— ಹೌದು. ದೇವರ ರಾಜ್ಯ ಬರಲಿ ಎಂದು ನಾವು ಮನಸ್ಸಾರೆ ಪ್ರಾರ್ಥಿಸುತ್ತಿರುವುದಾದರೆ ಖಂಡಿತ ಈ ಕೆಲಸವನ್ನು ಮಾಡುವೆವು.

ದೇವರ ರಾಜ್ಯ ಬರಬೇಕೆನ್ನುವುದು ನಮ್ಮ ಇಚ್ಛೆ ಅಂತ ಕ್ರಿಯೆಯಲ್ಲಿ ತೋರಿಸಲು ಈ ವಚನಗಳು ನಮಗೆ ಸಹಾಯ ಮಾಡುತ್ತವೆ: ಮತ್ತಾಯ 6:24-33; 24:14; 1 ಯೋಹಾನ 2:15-17 ಮತ್ತು 5:3.