ಮೃತರಿಗೊಂದು ಖಾತ್ರಿಯಾದ ನಿರೀಕ್ಷೆ
ಒಬ್ಬಾಕೆ 25 ವರ್ಷ ವಯಸ್ಸಿನ ಮಹಿಳೆ ಬರೆದುದು: “ನನ್ನ ದತ್ತು ತಾಯಿ 1981 ರಲ್ಲಿ ಕ್ಯಾನ್ಸರಿನಿಂದ ಸತ್ತುಹೋದರು. ಅವರ ಮರಣ ನನಗೆ ಮತ್ತು ನನ್ನ ದತ್ತು ತಮ್ಮನಿಗೆ ಸಹಿಸಲು ಕಷ್ಟಕರವಾದದ್ದಾಗಿತ್ತು. ನಾನು 17 ಮತ್ತು ನನ್ನ ತಮ್ಮ 11 ವರ್ಷ ಪ್ರಾಯದವರಾಗಿದ್ದೆವು. ಅವರ ಇಲ್ಲದಿರುವಿಕೆಯಿಂದ ನಾನು ತುಂಬ ಪೀಡಿತಳಾದೆ. ಅವರು ಸ್ವರ್ಗದಲ್ಲಿದ್ದಾರೆಂದು ಕಲಿಸಲ್ಪಟ್ಟಿದ್ದ ನಾನು ಅವರ ಬಳಿ ಇರಲಿಕ್ಕಾಗಿ ನನ್ನ ಸ್ವಂತ ಜೀವವನ್ನು ತೆಗೆದುಕೊಳ್ಳಲು ಬಯಸಿದೆ. ಅವರು ನನ್ನ ಅತ್ಯುತ್ತಮ ಸ್ನೇಹಿತೆಯಾಗಿದ್ದರು.”
ನೀವು ಪ್ರೀತಿಸುವ ಒಬ್ಬರನ್ನು ಕೊಂಡೊಯ್ಯುವ ಶಕ್ತಿ ಮರಣಕ್ಕಿರುವುದು ಎಷ್ಟೋ ಅನ್ಯಾಯವಾದ ವಿಷಯವೆಂದು ತೋರುತ್ತದೆ. ಮತ್ತು ಅದು ಸಂಭವಿಸುವಾಗ, ಇನ್ನೊಮ್ಮೆ ನಿಮ್ಮ ಪ್ರಿಯನೊಂದಿಗೆ ಮಾತಾಡುವ, ನಗಾಡುವ ಅಥವಾ ಅವನನ್ನು ಹಿಡಿಯುವ ಸಂದರ್ಭವು ಎಂದಿಗೂ ಇಲ್ಲದಿರುವ ಯೋಚನೆಯು ಸಹಿಸಲು ಅತಿ ಕಷ್ಟಕರವಾದದ್ದಾಗಿರುವುದು ಸಾಧ್ಯ. ನಿಮ್ಮ ಪ್ರಿಯನು ಸ್ವರ್ಗದಲ್ಲಿದ್ದಾನೆಂದು ಹೇಳಲ್ಪಡುವುದು ಆ ವೇದನೆಯನ್ನು ಅವಶ್ಯವಾಗಿ ಅಳಿಸಿಬಿಡುವುದೂ ಇಲ್ಲ.
ಆದರೆ ಬೈಬಲು ಎಷ್ಟೋ ಭಿನ್ನವಾದ ಒಂದು ನಿರೀಕ್ಷೆಯನ್ನು ಎತ್ತಿ ಹಿಡಿಯುತ್ತದೆ. ನಾವು ಈ ಹಿಂದೆ ಗಮನಿಸಿರುವಂತೆ, ನಿಮ್ಮ ಮೃತನಾದ ಪ್ರಿಯನೊಂದಿಗೆ ಸಮೀಪ ಭವಿಷ್ಯದಲ್ಲಿ—ಅಜ್ಞಾತವಾದ ಒಂದು ಸ್ವರ್ಗದಲ್ಲಿ ಅಲ್ಲ, ಬದಲಿಗೆ ಶಾಂತಿಭರಿತವಾದ ನೀತಿಯ ಪರಿಸ್ಥಿತಿಗಳ ಕೆಳಗೆ ಇಲ್ಲಿಯೇ ಭೂಮಿಯಲ್ಲಿ—ಪುನರ್ಮಿಲನವಾಗುವುದು ಸಾಧ್ಯವೆಂದು ಶಾಸ್ತ್ರಗಳು ಸೂಚಿಸುತ್ತವೆ. ಮತ್ತು ಆ ಸಮಯದಲ್ಲಿ ಮನುಷ್ಯರಿಗೆ ಪರಿಪೂರ್ಣ ಆರೋಗ್ಯವನ್ನು ಅನುಭವಿಸುವ ಪ್ರತೀಕ್ಷೆಯಿರುವುದು, ಮತ್ತು ಅವರು ಎಂದಿಗೂ ಪುನಃ ಸಾಯಬೇಕೆಂದಿರುವುದಿಲ್ಲ. ‘ಆದರೆ ಇದು ನಿಶ್ಚಯವಾಗಿಯೂ ಹಾರೈಕೆಯನ್ನು ಅವಲಂಬಿಸಿದ ವಿಶ್ವಾಸ!’ ಎಂದು ಕೆಲವರು ಹೇಳಿಯಾರು.
ಇದು ಖಾತ್ರಿಯಾದ ನಿರೀಕ್ಷೆ ಎಂದು ಮನವರಿಕೆ ಮಾಡಲು ನಿಮಗೆ ಯಾವುದರ ಅವಶ್ಯವಿದ್ದೀತು? ಒಂದು ವಾಗ್ದಾನವನ್ನು ನಂಬಲು, ಆ ವಾಗ್ದಾನವನ್ನು ಮಾಡುವಾತನು ಅದನ್ನು ನೆರವೇರಿಸಲು ಇಚ್ಫಿಸುವಾತನೂ ಶಕ್ತನೂ ಆಗಿದ್ದಾನೆಂಬ ವಿಷಯದಲ್ಲಿ ನೀವು ಖಾತ್ರಿಯಾಗಿರುವುದು ಆವಶ್ಯಕ. ಹಾಗಾದರೆ ಮೃತರು ಪುನಃ ಬದುಕುವರು ಎಂದು ವಾಗ್ದಾನ ಮಾಡುವಾತನು ಯಾರು?
ಸಾ.ಶ. 31ರ ವಸಂತ ಕಾಲದಲ್ಲಿ ಯೇಸು ಕ್ರಿಸ್ತನು ಧೈರ್ಯದಿಂದ ವಾಗ್ದಾನ ಮಾಡಿದ್ದು: “ತಂದೆಯು ಮೃತರನ್ನು ಎಬ್ಬಿಸಿ ಜೀವಿಸುವಂತೆ ಮಾಡುವ ಪ್ರಕಾರವೇ ಪುತ್ರನು ಸಹ ತಾನು ಬಯಸುವವರನ್ನು ಜೀವಿಸುವಂತೆ ಮಾಡುತ್ತಾನೆ. ಇದಕ್ಕೆ ಆಶ್ಚರ್ಯಪಡಬೇಡಿರಿ, ಏಕೆಂದರೆ ಸ್ಮರಣೆಯ ಸಮಾಧಿಗಳಲ್ಲಿರುವವರೆಲ್ಲರು ಅವನ [ಯೇಸುವಿನ] ಧ್ವನಿಯನ್ನು ಕೇಳಿ ಹೊರಬರುವ ಕಾಲ ಬರುತ್ತಿದೆ.” (ಯೋಹಾನ 5:21,28, 29, NW) ಹೌದು, ಈಗ ಸತ್ತಿರುವ ಲಕ್ಷಾಂತರ ಜನರು ಈ ಭೂಮಿಯ ಮೇಲೆ ಪುನಃ ಜೀವಿಸುವರು ಮತ್ತು ಶಾಂತಿಭರಿತವಾದ ಪ್ರಮೋದವನೀಯ ಪರಿಸ್ಥಿತಿಗಳಡಿ ಸದಾಕಾಲ ಉಳಿಯುವ ಪ್ರತೀಕ್ಷೆಯುಳ್ಳವರಾಗುವರೆಂದು ಯೇಸು ಕ್ರಿಸ್ತನು ವಾಗ್ದಾನ ಮಾಡಿದನು. (ಲೂಕ 23:43; ಯೋಹಾನ 3:16; 17:3; ಹೋಲಿಸಿ ಕೀರ್ತನೆ 37:29 ಮತ್ತು ಮತ್ತಾಯ 5:5.) ಯೇಸು ಈ ವಾಗ್ದಾನವನ್ನು ಮಾಡಿದುದರಿಂದ, ಅವನು ಇದನ್ನು ನೆರವೇರಿಸಲು ಇಷ್ಟಪಡುವನೆಂದು ಭಾವಿಸುವುದು ವಿಶ್ವಸನೀಯ. ಆದರೆ ಹಾಗೆ ಮಾಡಲು ಅವನ ಶಕ್ತನೊ?
ಆ ವಾಗ್ದಾನವನ್ನು ಮಾಡಿದ ಬಳಿಕ ಎರಡು ವರ್ಷಗಳಿಗಿಂತಲೂ ಕಡಮೆ ಸಮಯದಲ್ಲಿ, ಯೇಸು ಪ್ರಬಲವಾದ ಒಂದು ವಿಧದಲ್ಲಿ ತಾನು ಪುನರುತ್ಥಾನವನ್ನು ಇಚ್ಫಿಸುತ್ತೇನೆಂದೂ ಅದನ್ನು ಮಾಡಲು ಶಕ್ತನೆಂದೂ ಪ್ರದರ್ಶಿಸಿದನು.
“ಲಾಜರನೇ, ಹೊರಗೆ ಬಾ”
ಅದೊಂದು ಹೃದಯದ್ರಾವಕ ದೃಶ್ಯವಾಗಿತ್ತು. ಲಾಜರನು ಗುರುತರವಾಗಿ ಕಾಯಿಲೆ ಬಿದ್ದಿದ್ದನು. ಅವನ ಇಬ್ಬರು ಅಕ್ಕಂದಿರಾದ ಮಾರ್ಥ ಮತ್ತು ಮರಿಯ ಯೊರ್ದನ್ ಹೊಳೆಯ ಆ ಬದಿಯಲ್ಲಿದ್ದ ಯೇಸುವಿಗೆ, “ಸ್ವಾಮೀ, ನಿನ್ನ ಪ್ರಿಯ ಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಕಳುಹಿಸಿದರು. (ಯೋಹಾನ 11:3) ಯೇಸು ಲಾಜರನನ್ನು ಪ್ರೀತಿಸಿದನೆಂದು ಅವರಿಗೆ ಗೊತ್ತಿತ್ತು. ಯೇಸು ರೋಗಿಯಾದ ತನ್ನ ಮಿತ್ರನನ್ನು ನೋಡಲು ಬಯಸಲಿಕ್ಕಿಲ್ಲವೆ? ಕುತೂಹಲಕರವಾಗಿ, ಯೇಸು ಒಡನೆ ಬೇಥಾನ್ಯಕ್ಕೆ ಹೋಗುವ ಬದಲಾಗಿ, ಮುಂದಿನ ಎರಡು ದಿನ ತಾನು ಇದ್ದಲ್ಲಿಯೇ ತಂಗಿದನು.—ಯೋಹಾನ 11:5, 6.
ಲಾಜರನು ಅವನ ಕಾಯಿಲೆಯ ಸುದ್ದಿ ಕಳುಹಿಸಲ್ಪಟ್ಟ ಬಳಿಕ ಕೊಂಚ ಕಾಲದಲ್ಲಿ ಸತ್ತನು. ಲಾಜರನು ಸತ್ತ ಸಮಯ ಯೇಸುವಿಗೆ ತಿಳಿದಿತ್ತು ಮತ್ತು ಅವನು ಅದರ ಬಗೆಗೆ ಏನೋ ಮಾಡಲಿಕ್ಕಿದ್ದನು. ಯೇಸು ಕೊನೆಗೆ ಬೇಥಾನ್ಯಕ್ಕೆ ಬಂದು ಮುಟ್ಟುವುದರೊಳಗೆ ಅವನ ಪ್ರಿಯ ಮಿತ್ರನು ಸತ್ತು ನಾಲ್ಕು ದಿನಗಳಾಗಿದ್ದವು. (ಯೋಹಾನ 11:17, 39) ಅಷ್ಟು ದೀರ್ಘ ಕಾಲ ಸತ್ತಿದ್ದವನನ್ನು ಪುನರ್ಜೀವಿಸುವಂತೆ ಮಾಡಲು ಯೇಸು ಶಕ್ತನೊ?
ಯೇಸು ಬರುತ್ತಿದ್ದಾನೆಂಬುದನ್ನು ಕೇಳಿ ಕಾರ್ಯನಿಷ್ಠ ಸ್ತ್ರೀಯಾಗಿದ್ದ ಮಾರ್ಥಳು ಅವನನ್ನು ಭೇಟಿಯಾಗಲು ಓಡಿದಳು. (ಲೂಕ 10:38-42 ಹೋಲಿಸಿ.) ಆಕೆಯ ಶೋಕದಿಂದ ಸ್ಪರ್ಶಿತನಾಗಿ ಯೇಸು, “ನಿನ್ನ ತಮ್ಮನು ಎದ್ದುಬರುವನು,” ಎಂದು ಆಶ್ವಾಸನೆ ನೀಡಿದನು. ಆಕೆ ಭಾವೀ ಪುನರುತ್ಥಾನವೊಂದರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದಾಗ, ಯೇಸು ಸ್ಪಷ್ಟ ಮಾತುಗಳಲ್ಲಿ ಅವಳಿಗಂದದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.”—ಯೋಹಾನ 11:20-25.
ಸಮಾಧಿಯ ಬಳಿ ಬಂದಾಗ, ಅದರ ಬಾಗಿಲಿಗೆ ಹಾಕಿದ್ದ ಕಲ್ಲನ್ನು ಸರಿಸುವಂತೆ ಯೇಸು ನಿರ್ದೇಶಿಸಿದನು. ಬಳಿಕ, ಗಟ್ಟಿಯಾಗಿ ಪ್ರಾರ್ಥಿಸಿದ ತರುವಾಯ ಯೇಸು ಆಜ್ಞಾಪಿಸಿದ್ದು: “ಲಾಜರನೇ, ಹೊರಗೆ ಬಾ.”—ಯೋಹಾನ 11:38-43.
ಎಲ್ಲರ ಕಣ್ಣುಗಳು ಸಮಾಧಿಯ ಮೇಲೆ ಕೇಂದ್ರೀಕರಿಸಿದ್ದವು. ಆಗ, ಕತ್ತಲೆಯೊಳಗಿಂದ ಒಂದು ಮನುಷ್ಯಾಕೃತಿ ಹೊರಗೆ ಬಂತು. ಅವನ ಕೈಕಾಲುಗಳು ಸುತ್ತಿದ ಬಟ್ಟೆಯಿಂದ ಕಟ್ಟಲ್ಪಟ್ಟಿದ್ದವು, ಅವನ ಮುಖ ಯೋಹಾನ 11:44.
ಬಟ್ಟೆಯಿಂದ ಹೊದಿಸಲ್ಪಟ್ಟಿತ್ತು. “ಅವನನ್ನು ಬಿಚ್ಚಿರಿ, ಹೋಗಲಿ,” ಎಂದು ಯೇಸು ಆಜ್ಞಾಪಿಸಿದನು. ಬಿಚ್ಚಲ್ಪಟ್ಟ ಕಟ್ಟುಗಳಲ್ಲಿ ಕೊನೆಯದ್ದು ನೆಲಕ್ಕೆ ಬಿತ್ತು. ಹೌದು, ಅವನು ಲಾಜರನಾಗಿದ್ದನು, ಯಾರು ಸತ್ತು ನಾಲ್ಕು ದಿವಸಗಳಾಗಿದ್ದವೋ ಆ ಪುರುಷನಾಗಿದ್ದನು!—ಅದು ನಿಜವಾಗಿ ಸಂಭವಿಸಿತೊ?
ಲಾಜರನನ್ನು ಎಬ್ಬಿಸಿದ ಈ ವೃತ್ತಾಂತವನ್ನು ಯೋಹಾನನ ಸುವಾರ್ತೆಯಲ್ಲಿ ಒಂದು ಐತಿಹಾಸಿಕ ನಿಜತ್ವವಾಗಿ ಕೊಡಲಾಗಿದೆ. ಅದೊಂದು ಕೇವಲ ಅನ್ಯೋಕ್ತಿಯಾಗಿರಲು ವಿವರಗಳು ತೀರ ಸ್ಪಷ್ಟವಾಗಿ ವರ್ಣಿತವಾಗಿವೆ. ಇದರ ಐತಿಹಾಸಿಕತೆಯನ್ನು ಸಂಶಯಿಸುವುದು ಬೈಬಲಿನ ಸಕಲ ಅದ್ಭುತಗಳನ್ನು—ಯೇಸು ಕ್ರಿಸ್ತನ ಪುನರುತ್ಥಾನವನ್ನು ಸಹ ಸೇರಿಸಿ—ಸಂಶಯಿಸಿದಂತೆಯೆ. ಮತ್ತು ಯೇಸುವಿನ ಪುನರುತ್ಥಾನವನ್ನು ಅಲ್ಲಗಳೆಯುವುದೆಂದರೆ ಸಮಗ್ರ ಕ್ರೈಸ್ತ ನಂಬಿಕೆಯನ್ನೇ ಅಲ್ಲಗಳೆಯುವುದೆಂದರ್ಥ.—1 ಕೊರಿಂಥ 15:13-15.
ವಾಸ್ತವವಾಗಿ, ನೀವು ದೇವರ ಅಸ್ತಿತ್ವವನ್ನು ಅಂಗೀಕರಿಸುವುದಾದರೆ ಪುನರುತ್ಥಾನದಲ್ಲಿ ನಂಬುವುದು ನಿಮಗೆ ಸಮಸ್ಯೆಯಾಗಿರಬಾರದು. ದೃಷ್ಟಾಂತ: ಒಬ್ಬ ವ್ಯಕ್ತಿ ತನ್ನ ಅಂತಿಮ ಮರಣ ಶಾಸನವನ್ನು ವಿಡಿಯೊಟೇಪ್ ಮಾಡಬಲ್ಲನು, ಮತ್ತು ಅವನು ಸತ್ತ ಬಳಿಕ ಅವನ ಸಂಬಂಧಿಗಳೂ ಮಿತ್ರರೂ, ಅವನು ತನ್ನ ಆಸ್ತಿಯು ಹೇಗೆ ನಿರ್ವಹಿಸಲ್ಪಡಬೇಕು ಎಂದು ವಿವರಿಸುವಾಗ ಕಾರ್ಯತಃ ಅದನ್ನು ನೋಡಬಲ್ಲರು, ಕೇಳಬಲ್ಲರು. ಒಂದು ನೂರು ವರ್ಷಗಳ ಹಿಂದೆ ಇಂತಹ ಸಂಗತಿಯು ಅಚಿಂತ್ಯವಾಗಿತ್ತು. ಮತ್ತು ಜಗತ್ತಿನ ದೂರದ ಮೂಲೆಗಳಲ್ಲಿ ಈಗ ಜೀವಿಸುತ್ತಿರುವ ಕೆಲವರಿಗೆ ವಿಡಿಯೊ ರೆಕಾರ್ಡಿಂಗ್ ಸಂಬಂಧದ ಯಂತ್ರಕಲಾ ವಿಜ್ಞಾನವು ಅದ್ಭುತವಾಗಿ ತೋರುವಷ್ಟು ಅಗ್ರಾಹ್ಯವಾಗಿರುತ್ತದೆ. ಸೃಷ್ಟಿಕರ್ತನು ಸ್ಥಾಪಿಸಿದ ವೈಜ್ಞಾನಿಕ ಮೂಲತತ್ವಗಳನ್ನು ಇಂತಹ ದೃಗ್ಗೋಚರವಾಗುವ ಮತ್ತು ಕರ್ಣಗೋಚರವಾಗುವ ದೃಶ್ಯಗಳನ್ನು ಪುನಾರಚಿಸಲು ಮಾನವರು ಉಪಯೋಗಿಸುವುದಾದರೆ, ಸೃಷ್ಟಿಕರ್ತನು ಅದಕ್ಕಿಂತಲೂ ಎಷ್ಟೋ ಹೆಚ್ಚಿನದನ್ನು ಮಾಡಶಕ್ತನಾಗಬಾರದೊ? ಹಾಗಾದರೆ, ಜೀವವನ್ನು ಸೃಷ್ಟಿಸಿದಾತನಿಗೆ ಅದನ್ನು ಪುನಃ ಸೃಪ್ಟಿಸುವ ಸಾಮರ್ಥ್ಯವಿರುವುದು ನ್ಯಾಯಸಮ್ಮತವಲ್ಲವೆ?
ಲಾಜರನ ಜೀವ ಪುನಃ ಸ್ಥಾಪನೆಯ ಅದ್ಭುತವು ಯೇಸುವಿನಲ್ಲಿ ಮತ್ತು ಪುನರುತ್ಥಾನದಲ್ಲಿ ನಂಬಿಕೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಿತು. (ಯೋಹಾನ 11:41, 42; 12:9-11, 17-19) ಹೃದಯ ಸ್ಪರ್ಶಿಸುವ ವಿಧದಲ್ಲಿ, ಅದು ಪುನರುತ್ಥಾನವನ್ನು ನಿರ್ವಹಿಸಲು ಯೆಹೋವನಿಗೂ ಆತನ ಪುತ್ರನಿಗೂ ಇರುವ ಇಷ್ಟವನ್ನು ಮತ್ತು ಬಯಕೆಯನ್ನು ಸಹ ಪ್ರಕಟಪಡಿಸುತ್ತದೆ.
‘ದೇವರಿಗೊಂದು ಹಂಬಲವಿರುವುದು’
ಲಾಜರನ ಮರಣಕ್ಕೆ ಯೇಸು ತೋರಿಸಿದ ಪ್ರತಿವರ್ತನೆಯು ದೇವಕುಮಾರನ ಒಂದು ಅತಿ ಕೋಮಲವಾದ ಪಕ್ಕವನ್ನು ತಿಳಿಯಪಡಿಸುತ್ತದೆ. ಈ ಸಂದರ್ಭದಲ್ಲಿ ಅವನಿಗಿದ್ದ ಆಳವಾದ ಅನಿಸಿಕೆಗಳು ಮೃತರನ್ನು ಪುನರುತ್ಥಾನ ಮಾಡಲು ಅವನಿಗಿರುವ ತೀವ್ರ ಬಯಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ನಾವು ಓದುವುದು: “ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಕ್ಕೆ ಬಿದ್ದು—ಸ್ವಾಮೀ, ನೀನು ಇಲ್ಲಿ ಇರುತ್ತಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ ಅಂದಳು. ಆಕೆ ಗೋಳಾಡುವದನ್ನೂ ಆಕೆಯ ಸಂಗಡ ಬಂದ ಯೆಹೂದ್ಯರು ಗೋಳಾಡುವದನ್ನೂ ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ—ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದನು. ಅವರು—ಸ್ವಾಮೀ, ಬಂದು ನೋಡು ಅಂದರು. ಯೇಸು ಕಣ್ಣೀರು ಬಿಟ್ಟನು. ಯೆಹೂದ್ಯರು ನೋಡಿ—ಆಹಾ, ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದನು ಅಂದುಕೊಂಡರು.”—ಯೋಹಾನ 11:32-36.
ಯೇಸುವಿನ ಹೃತ್ಪೂರ್ವಕವಾದ ಕನಿಕರವನ್ನು ಇಲ್ಲಿ ಮೂರು ಪದ ವಿನ್ಯಾಸಗಳು ಸೂಚಿಸುತ್ತವೆ: “ನೊಂದುಕೊಂಡು,” “ತತ್ತರಿಸಿ,” ಮತ್ತು “ಕಣ್ಣೀರು ಬಿಟ್ಟನು.” ಈ ಹೃದಯದ್ರಾವಕವಾದ ದೃಶ್ಯವನ್ನು ದಾಖಲಿಸುವುದರಲ್ಲಿ ಬಳಸಿದ ಮೂಲ ಭಾಷೆಯ ಪದಗಳು ಸೂಚಿಸುವುದೇನಂದರೆ ತನ್ನ ಪ್ರಿಯ ಮಿತ್ರನ ಮರಣದಿಂದ ಮತ್ತು ಲಾಜರನ ಅಕ್ಕ ಅಳುವುದನ್ನು ನೋಡಿದ್ದರಿಂದ ಯೇಸು ಎಷ್ಟು ಆಳವಾಗಿ ಪ್ರಚೋದಿತನಾದನೆಂದರೆ ಅವನ ಕಣ್ಣುಗಳು ಕಣ್ಣೀರಿನಿಂದ ತುಂಬಿ ತುಳುಕಿದವು. *
ಅತಿ ಗಮನಾರ್ಹವಾದ ವಿಷಯವೇನಂದರೆ ಯೇಸು ಈ ಹಿಂದೆ ಯೋಹಾನ 11:11, 23, 25) ಆದರೂ ಅವನು “ಕಣ್ಣೀರು ಬಿಟ್ಟನು.” ಹಾಗಾದರೆ ಮಾನವರನ್ನು ಜೀವಕ್ಕೆ ಪುನಃ ಸ್ಥಾಪಿಸುವುದು ಯೇಸುವಿಗೆ ಕೇವಲ ಒಂದು ಕಾರ್ಯ ವಿಧಾನವಾಗಿರುವುದಿಲ್ಲ. ಈ ಸಂದರ್ಭದಲ್ಲಿ ತೋರಿಸಲ್ಪಟ್ಟ ಅವನ ಕೋಮಲವಾದ ಮತ್ತು ಆಳವಾದ ಅನಿಸಿಕೆಗಳು ಮರಣದ ಹಾವಳಿಗಳನ್ನು ತೊಡೆದುಹಾಕಲು ಅವನಿಗಿರುವ ತೀಕ್ಷೈ ಬಯಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ.
ಇನ್ನಿಬ್ಬರನ್ನು ಪುನರ್ಜೀವಿಸುವಂತೆ ಮಾಡಿದ್ದನು. ಮತ್ತು ಲಾಜರನಿಗೆ ಸಹ ಹಾಗೆ ಮಾಡಲು ಪೂರ್ತಿಯಾಗಿ ಉದ್ದೇಶಿಸಿದನು. (ಲಾಜರನನ್ನು ಪುನರುತ್ಥಾನಗೊಳಿಸುತ್ತಿದ್ದಾಗ ತೋರಿಸಲಾದ ಯೇಸುವಿನ ಕೋಮಲ ಅನಿಸಿಕೆಗಳು ಮರಣದ ಹಾವಳಿಗಳನ್ನು ತೊಡೆದು ಹಾಕುವ ಅವನ ತೀವ್ರ ಬಯಕೆಯನ್ನು ಪ್ರತಿಬಿಂಬಿಸಿದವು
ಯೇಸು, “ಯೆಹೋವ ದೇವರ ಸಾಕ್ಷಾತ್ ಅಸ್ತಿತ್ವದ ನಿಷ್ಕೃಷ್ಟ ಪ್ರಾತಿನಿಧ್ಯ” ಆಗಿರುವುದರಿಂದ, ನಮ್ಮ ಸ್ವರ್ಗೀಯ ಪಿತನಿಂದ ನಾವು ಯೋಗ್ಯವಾಗಿಯೆ ಅದಕ್ಕಿಂತ ಕಡಮೆಯನ್ನು ನಿರೀಕ್ಷಿಸುವುದಿಲ್ಲ. (ಇಬ್ರಿಯ 1:3) ಪುನರುತ್ಥಾನವನ್ನು ಮಾಡಲು ಯೆಹೋವನಿಗಿರುವ ಸ್ವಂತ ಇಷ್ಟದ ಕುರಿತು ನಂಬಿಗಸ್ತ ಯೋಬನು ಹೇಳಿದ್ದು: “ಒಬ್ಬ ದೃಢ ಕಾಯದ ಮನುಷ್ಯನು ಸತ್ತರೆ ಅವನು ಪುನಃ ಜೀವಿಸುವುದು ಸಾಧ್ಯವೆ? . . . ನೀನು ಕರೆಯುವಿ, ಮತ್ತು ನಾನೇ ನಿನಗೆ ಉತ್ತರ ಕೊಡುವೆನು. ನಿನ್ನ ಕೈಗಳ ಕೆಲಸಕ್ಕೆ ನಿನಗೆ ಹಂಬಲವಿರುವುದು.” (ಯೋಬ 14:14, 15, NW) ಇಲ್ಲಿ “ನಿನಗೆ ಹಂಬಲವಿರುವುದು,” ಎಂದು ತರ್ಜುಮೆಯಾಗಿರುವ ಮೂಲ ಭಾಷೆಯ ಪದವು, ದೇವರ ಶ್ರದ್ಧಾಪೂರ್ವಕವಾದ ಹಾರೈಕೆ ಮತ್ತು ಬಯಕೆಯನ್ನು ಸೂಚಿಸುತ್ತದೆ. (ಆದಿಕಾಂಡ 31:30; ಕೀರ್ತನೆ 84:2) ಯೆಹೋವನು ಪುನರುತ್ಥಾನವನ್ನು ಉತ್ಸಾಹದಿಂದ ನಿರೀಕ್ಷಿಸುತ್ತಿರಬೇಕೆಂಬುದು ಸ್ಪಷ್ಟ.
ನಾವು ನಿಜವಾಗಿಯೂ ಪುನರುತ್ಥಾನದ ವಾಗ್ದಾನವನ್ನು ನಂಬಸಾಧ್ಯವಿದೆಯೊ? ಹೌದು, ಯೆಹೋವನು ಮತ್ತು ಆತನ ಪುತ್ರನು, ಇವರಿಬ್ಬರೂ ಅದನ್ನು ನೆರವೇರಿಸಲು ಇಷ್ಟವುಳ್ಳವರೂ ಶಕ್ತರೂ ಆಗಿದ್ದಾರೆಂಬುದಕ್ಕೆ ಯಾವ ಸಂಶಯವೂ ಇಲ್ಲ. ಇದು ನಿಮಗೆ ಯಾವ ಅರ್ಥದಲ್ಲಿದೆ? ಇಲ್ಲಿ ಭೂಮಿಯ ಮೇಲೆಯೇ ನಿಮಗೆ ಮೃತರಾಗಿರುವ ಪ್ರಿಯರೊಂದಿಗೆ—ಆದರೆ ಅತಿ ಭಿನ್ನವಾದ ಪರಿಸ್ಥಿತಿಗಳಡಿಯಲ್ಲಿ—ಪುನರ್ಮಿಲನವಾಗುವ ಪ್ರತೀಕ್ಷೆಯಿದೆ.
ಒಂದು ಸುಂದರವಾದ ಉದ್ಯಾನವನದಲ್ಲಿ ಮಾನವಸಂತತಿಯನ್ನು ಆರಂಭಿಸಿದ ಯೆಹೋವ ದೇವರು ಈ ಭೂಮಿಯಲ್ಲಿ, ಈಗ ಮಹಿಮಾಭರಿತನಾದ ಯೇಸು ಕ್ರಿಸ್ತನ ಕೈಗಳಲ್ಲಿರುವ ಸ್ವರ್ಗೀಯ ರಾಜ್ಯದ ಆಳಿಕೆಯಲ್ಲಿ ಪ್ರಮೋದವನವನ್ನು ಪುನಃ ಸ್ಥಾಪಿಸಲು ವಾಗ್ದಾನಿಸಿದ್ದಾನೆ. (ಆದಿಕಾಂಡ 2:7-9; ಮತ್ತಾಯ 6:10; ಲೂಕ 23:42, 43) ಆ ಪುನಃ ಸ್ಥಾಪಿತವಾದ ಪ್ರಮೋದವನದಲ್ಲಿ ಮಾನವ ಕುಟುಂಬಕ್ಕೆ ಸಕಲ ಅಸ್ವಸ್ಥ ಮತ್ತು ರೋಗದಿಂದ ವಿಮುಕ್ತವಾಗಿರುವ ಅನಂತ ಜೀವನವನ್ನು ಅನುಭವಿಸುವ ಪ್ರತೀಕ್ಷೆಯಿರುವುದು. (ಪ್ರಕಟನೆ 21:1-4; ಹೋಲಿಸಿ ಯೋಬ 33:25; ಯೆಶಾಯ 35:5-7.) ಹಗೆತನ, ಜಾತೀಯ ಅವಿಚಾರಾಭಿಪ್ರಾಯ, ಕುಲ ಸಂಬಂಧವಾದ ಬಲಾತ್ಕಾರ ಮತ್ತು ಆರ್ಥಿಕ ದಬ್ಬಾಳಿಕೆಗಳೂ ಹೋಗಿರುವುವು. ಯೆಹೋವ ದೇವರು ಯೇಸು ಕ್ರಿಸ್ತನ ಮೂಲಕ ಮೃತರನ್ನು ಪುನರುತ್ಥಾನಗೊಳಿಸುವುದು ಇಂತಹ ಶುಚಿಗೊಳಿಸಲ್ಪಟ್ಟ ಭೂಮಿಯಲ್ಲಿಯೇ.
ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೇಲೆ ಆಧಾರಿತವಾದ ಪುನರುತ್ಥಾನವು ಸಕಲ ಜನಾಂಗಗಳಿಗೆ ಸಂತೋಷವನ್ನು ತರುವುದು
ಈ ವಿಭಾಗದ ಆರಂಭದಲ್ಲಿ ಹೇಳಲ್ಪಟ್ಟ ಆ ಕ್ರೈಸ್ತ ಸ್ತ್ರೀಯ ನಿರೀಕ್ಷೆಯು ಈಗ ಇದೇ. ಆಕೆಯ ತಾಯಿ ತೀರಿಕೊಂಡು ಅನೇಕ ವರ್ಷಗಳಾದ ಬಳಿಕ, ಆಕೆ ಜಾಗರೂಕತೆಯಿಂದ ಬೈಬಲ್ ಅಧ್ಯಯನ ಮಾಡುವಂತೆ ಯೆಹೋವನ ಸಾಕ್ಷಿಗಳು ಆಕೆಗೆ ಸಹಾಯ ಮಾಡಿದರು. ಆಕೆ ಜ್ಞಾಪಿಸಿಕೊಳ್ಳುವುದು: “ಪುನರುತ್ಥಾನದ ನಿರೀಕ್ಷೆಯ ಕುರಿತು ಕಲಿತ ಬಳಿಕ ನಾನು ಅತ್ತೆ. ನಾನು ನನ್ನ ತಾಯಿಯನ್ನು ಪುನಃ ನೋಡುವೆನೆಂದು ತಿಳಿಯುವುದು ಆಶ್ಚರ್ಯಕರವಾಗಿತ್ತು.“
ನಿಮ್ಮ ಹೃದಯವು ತದ್ರೀತಿ ಒಬ್ಬ ಪ್ರಿಯನನ್ನು ನೋಡಲು ಹಂಬಲಿಸುವಲ್ಲಿ, ಈ ಖಾತ್ರಿಯಾದ ನಿರೀಕ್ಷೆಯನ್ನು ನೀವು ಸ್ವಂತದ್ದಾಗಿ ಹೇಗೆ ಮಾಡಬಲ್ಲಿರಿ ಎಂದು ಕಲಿಯುವರೆ ಯೆಹೋವನ ಸಾಕ್ಷಿಗಳು ನಿಮಗೆ ಸಂತೋಷದಿಂದ ಸಹಾಯ ಮಾಡುವರು. ನಿಮಗೆ ಸಮೀಪವಿರುವ ರಾಜ್ಯ ಸಭಾಗೃಹವೊಂದರಲ್ಲಿ ಅಥವಾ 32 ನೆಯ ಪುಟದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಅತಿ ಹತ್ತಿರದ ವಿಳಾಸದಲ್ಲಿ ಅವರನ್ನು ಏಕೆ ಸಂಪರ್ಕಿಸಬಾರದು?
^ ಪ್ಯಾರ. 20 “ನೊಂದುಕೊಂಡು” ಎಂದು ಭಾಷಾಂತರಿತವಾದ ಗ್ರೀಕ್ ಪದವು ವೇದನಮಯವಾಗಿ, ಅಥವಾ ಆಳವಾಗಿ ಪ್ರಚೋದಿಸಲ್ಪಡುವುದು ಎಂದು ಸೂಚಿಸುವ ಕ್ರಿಯಾಪದ (ಎಂಬ್ರಿಮೇಒಮಾಯ್) ದಿಂದ ಬರುತ್ತದೆ. ಒಬ್ಬ ಬೈಬಲ್ ತಜ್ಞನು ಗಮನಿಸುವುದು: “ಎಂತಹ ಆಳವಾದ ಭಾವೋದ್ರೇಕ ಯೇಸುವನ್ನು ವಶಪಡಿಸಿಕೊಂಡಿತೆಂದರೆ ಒಂದು ಅನೈಚ್ಫಿಕ ನರಳಾಟವು ಅವನ ಹೃದಯದಿಂದ ಬಲಾತ್ಕಾರಕ್ಕೊಳಪಟ್ಟು ಹೊರಬಂತು ಎಂದು ಮಾತ್ರ ಇಲ್ಲಿ ಅರ್ಥವಾಗಬಲ್ಲದು. “ತತ್ತರಿಸಿ” ಎಂಬ ಪದವು ಕಲುಕುವಿಕೆಯನ್ನು ಸೂಚಿಸುವ ಗ್ರೀಕ್ ಪದ (ಟರಾಸೊ) ದಿಂದ ಬಂದಿದೆ. ಒಬ್ಬ ನಿಘಂಟುಕಾರನಿಗನುಸಾರ, ಇದರ ಅರ್ಥವು “ಆಂತರಿಕ ಕ್ಷೋಭೆಯನ್ನು ಆಗಿಸು, . . . ಮಹಾ ವೇದನೆ ಮತ್ತು ಶೋಕಪೀಡಿತನಾಗು,” ಎಂದಾಗಿದೆ. “ಕಣ್ಣೀರು ಬಿಟ್ಟನು” ಎಂಬ ಪದ ವಿನ್ಯಾಸವು, “ಕಣ್ಣೀರು ಬಿಡುವುದು, ಮೌನವಾಗಿ ಅಳುವುದು,” ಎಂಬರ್ಥದ ಗ್ರೀಕ್ ಪದ (ಡ್ಯಾಕ್ರಿಯೊ) ದಿಂದ ಬರುತ್ತದೆ.