ಅಮಲೌಷಧಗಳಿಗೆ ಬೇಡ ಎಂದು ಏಕೆ ಹೇಳಬೇಕು?
ಅಧ್ಯಾಯ 34
ಅಮಲೌಷಧಗಳಿಗೆ ಬೇಡ ಎಂದು ಏಕೆ ಹೇಳಬೇಕು?
“ನಾನೊಬ್ಬ ಭಾವನಾತ್ಮಕ ಮಗು,” ಎಂಬುದಾಗಿ 24 ವರ್ಷ ವಯಸ್ಸಿನ ಮೈಕ್ ಎಂಬ ಯುವ ಪುರುಷನೊಬ್ಬನು ಹೇಳುತ್ತಾನೆ. “ಕೆಲವೊಮ್ಮೆ ನನಗೆ ಭಯವಾಗುತ್ತದೆ ಮತ್ತು ನನ್ನ ಸ್ವಂತ ವಯಸ್ಸಿನ ಇತರರಿಂದಲೂ ಹೆದರಿಸಲ್ಪಡುತ್ತೇನೆ. ನಾನು ಖಿನ್ನತೆ, ಅಭದ್ರತೆಯಿಂದ ಕಷ್ಟಾನುಭವಿಸುತ್ತೇನೆ, ಮತ್ತು ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತಾಗಿಯೂ ನಾನು ಯೋಚಿಸಿದ್ದೇನೆ.”
36 ವರ್ಷ ವಯಸ್ಸಿನ ಆ್ಯನ್, ತನ್ನನ್ನು “ಭಾವನಾತ್ಮಕವಾಗಿ ಬಹಳ ಎಳೆಯಳು,” “ಕೀಳಾದ ಆತ್ಮಾಭಿಮಾನ”ವುಳ್ಳವಳಾಗಿ ವರ್ಣಿಸಿಕೊಳ್ಳುತ್ತಾಳೆ. ಆಕೆ ಕೂಡಿಸುವುದು: “ಒಂದು ಸಾಮಾನ್ಯ ಜೀವಿತವನ್ನು ನಡೆಸುವುದನ್ನು ನಾನು ಬಹಳ ಕಷ್ಟಕರವಾಗಿ ಕಂಡುಕೊಳ್ಳುತ್ತೇನೆ.”
ಮೈಕ್ ಮತ್ತು ಆ್ಯನ್ ಬಹಳ ಎಳೆಯವರಾಗಿದ್ದಾಗ ತಾವು ಮಾಡಿದ ಒಂದು ನಿರ್ಣಯದ—ಅಂದರೆ, ಅಮಲೌಷಧಗಳೊಂದಿಗೆ ಪ್ರಯೋಗ ನಡಿಸುವುದರ—ಫಲಿತಾಂಶಗಳನ್ನು ಕೊಯ್ಯುತ್ತಿದ್ದಾರೆ. ಇಂದು ಲಕ್ಷಾಂತರ ಯುವ ಜನರು ಅಂತೆಯೇ ಮಾಡುತ್ತಿದ್ದಾರೆ—ಕೋಕೇನ್‌ನಿಂದ ಹಿಡಿದು ಮಾರಿವಾನದ ವರೆಗೆ ಎಲ್ಲವನ್ನು ಚುಚ್ಚಿ ಒಳಹೋಗಿಸುವುದು, ನುಂಗುವುದು, ಮೂಸುವುದು, ಮತ್ತು ಧೂಮಪಾನ ಮಾಡುವುದು. ಕೆಲವು ಯುವ ಜನರಿಗೆ, ‘ಅಮಲೌಷಧಗಳನ್ನು ಸೇವಿಸುವುದು’ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಇತರರು ತಮ್ಮ ಕುತೂಹಲವನ್ನು ತೃಪ್ತಿಗೊಳಿಸಿಕೊಳ್ಳಲಿಕ್ಕಾಗಿ ಸಿಲುಕಿಕೊಳ್ಳುತ್ತಾರೆ. ಇನ್ನೂ ಇತರರು ಖಿನ್ನತೆ ಅಥವಾ ಬೇಸರವನ್ನು ಶಮನಗೊಳಿಸಿಕೊಳ್ಳಲು ಅಮಲೌಷಧಗಳನ್ನು ಉಪಯೋಗಿಸುತ್ತಾರೆ. ಮತ್ತು ಒಮ್ಮೆ ಆರಂಭಿಸಿದ ನಂತರ, ಅನೇಕರು ಕೇವಲ ಅದರ ಸುಖಾನುಭವಕ್ಕಾಗಿ ಅಮಲೌಷಧಗಳ ಉಪಯೋಗವನ್ನು ಮುಂದುವರಿಸುತ್ತಾರೆ. 17 ವರ್ಷ ಪ್ರಾಯದ ಗ್ರ್ಯಾಂಟ್ ಹೇಳುವುದು: “ನಾನು [ಮಾರಿವಾನ]ವನ್ನು ಸೇದುವುದು ಅದರ ಪರಿಣಾಮಗಳಿಗಾಗಿ ಮಾತ್ರ. ಸಮಚಿತ್ತನಾಗಿರಲು ಅಥವಾ ಸಾಮಾಜಿಕ ಕಾರಣಗಳಿಗಾಗಿ ಅಲ್ಲ. . . . ನಾನೆಂದೂ ಸಮಾನಸ್ಥರ ಒತ್ತಡದಿಂದಾಗಿ ಸೇದಲಿಲ್ಲ, ಬದಲಿಗೆ ನಾನು ಇಷ್ಟಪಟ್ಟದ್ದರಿಂದಲೇ.”
ಏನೇ ಆದರೂ, ಇಂದೊ ಮುಂದೊ ನೀವು ಅಮಲೌಷಧಗಳಿಗೆ ಒಡ್ಡಲ್ಪಡುವ ಇಲ್ಲವೆ ನೇರವಾಗಿ ನೀಡಲ್ಪಡುವ ಸಾಧ್ಯತೆಗಳು ಬಹಳಷ್ಟಿವೆ. “ನಮ್ಮ ಶಾಲೆಯಲ್ಲಿರುವ ಕಾವಲುಗಾರರೂ ಪಾಟ್ [ಮಾರಿವಾನ]ಅನ್ನು ಮಾರುತ್ತಿದ್ದಾರೆ,” ಎಂಬುದಾಗಿ ಯೌವನಸ್ಥನೊಬ್ಬನು ಹೇಳುತ್ತಾನೆ. ಅಮಲೌಷಧ ಸಾಧನ ಸಾಮಗ್ರಿಗಳು ಮುಕ್ತವಾಗಿ ಪ್ರದರ್ಶಿಸಲ್ಪಡುತ್ತವೆ ಮತ್ತು ಮಾರಲ್ಪಡುತ್ತವೆ. ಅವುಗಳ ಜನಪ್ರಿಯತೆಯ ಹೊರತೂ, ಅಮಲೌಷಧಗಳಿಗೆ ಬೇಡ ಎಂದು ಹೇಳಲು ನಿಮಗೆ ಸಕಾರಣವಿದೆ. ಅದು ಹೇಗೆ?
ಅಮಲೌಷಧಗಳು ಬೆಳವಣಿಗೆಯನ್ನು ತಡೆಯುತ್ತವೆ
ಮೈಕ್ ಮತ್ತು ಆ್ಯನ್‌ರಂತೆ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಅಮಲೌಷಧಗಳನ್ನು ಉಪಯೋಗಿಸುವ ಯುವ ಜನರನ್ನು ಪರಿಗಣಿಸಿರಿ. ನಮ್ಮ ಹಿಂದಿನ ಅಧ್ಯಾಯದಲ್ಲಿ ತೋರಿಸಲ್ಪಟ್ಟಂತೆ, ಭಾವನಾತ್ಮಕ ಬೆಳವಣಿಗೆಯು ಜೀವನದ ಸವಾಲುಗಳನ್ನು ಎದುರಿಸುವುದರಿಂದ, ಯಶಸ್ಸನ್ನು ನಿರ್ವಹಿಸುವುದರಿಂದ, ವೈಫಲ್ಯವನ್ನು ಪಾರಾಗುವುದರಿಂದ ಬರುತ್ತದೆ. ಸಮಸ್ಯೆಗಳಿಂದ ದೂರವಿರಲು ಒಂದು ರಾಸಾಯನಿಕ ಆಶ್ರಯದ ಮೇಲೆ ಅವಲಂಬಿಸುವ ಯುವ ಜನರು, ತಮ್ಮ ಭಾವನಾತ್ಮಕ ವಿಕಾಸವನ್ನು ತಡೆಯುತ್ತಾರೆ. ಸಮಸ್ಯೆಗಳನ್ನು ನಿಭಾಯಿಸಲು ಬೇಕಾಗಿರುವ ಕೌಶಲಗಳನ್ನು ವಿಕಸಿಸಿಕೊಳ್ಳಲು ಅವರು ತಪ್ಪಿಹೋಗುತ್ತಾರೆ.
ಬೇರೆ ಯಾವುದೇ ಕೌಶಲದ ವಿಷಯದಲ್ಲಿರುವಂತೆ, ನಿಭಾಯಿಸುವ ಸಾಮರ್ಥ್ಯವು ಅಭ್ಯಾಸವನ್ನು ಕೇಳಿಕೊಳ್ಳುತ್ತದೆ. ದೃಷ್ಟಾಂತಕ್ಕೆ: ನೀವು ಎಂದಾದರೂ ಒಬ್ಬ ಕುಶಲ ಕಾಲ್ಚೆಂಡಾಟಗಾರನನ್ನು ಗಮನಿಸಿದ್ದೀರೊ? ಅವನು ತನ್ನ ತಲೆ ಮತ್ತು ಕಾಲುಗಳನ್ನು ಬಹಳ ವಿಸ್ಮಯಕರವಾದ ವಿಧಗಳಲ್ಲಿ ಉಪಯೋಗಿಸಲು ಶಕ್ತನಾಗಿರುತ್ತಾನೆ! ಆದರೂ, ಈ ಆಟಗಾರನು ಇಂತಹ ಕೌಶಲವನ್ನು ಹೇಗೆ ವಿಕಸಿಸಿಕೊಂಡನು? ಅನೇಕ ವರ್ಷಗಳ ಅಭ್ಯಾಸದಿಂದಲೇ. ಅವನು ಆಟದಲ್ಲಿ ಪ್ರವೀಣನಾಗುವ ವರೆಗೆ, ಚೆಂಡನ್ನು ಒದೆಯಲು, ಅದರೊಂದಿಗೆ ಓಡಲು, ಹುಸಿದಾಳಿ ಮಾಡಲು, ಮತ್ತು ಮುಂತಾದವುಗಳನ್ನು ಕಲಿತುಕೊಂಡನು.
ನಿಭಾಯಿಸುವ ಕೌಶಲಗಳನ್ನು ವಿಕಸಿಸಿಕೊಳ್ಳುವುದು ಬಹುಮಟ್ಟಿಗೆ ಅದರಂತೆಯೇ ಇದೆ. ಅದು ಅಭ್ಯಾಸವನ್ನು—ಅನುಭವವನ್ನು ಕೇಳಿಕೊಳ್ಳುತ್ತದೆ! ಆದರೂ, ಜ್ಞಾನೋಕ್ತಿ 1:22ರಲ್ಲಿ ಬೈಬಲು ಹೀಗೆ ಕೇಳುತ್ತದೆ: “ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? . . . ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರ ವರೆಗೆ ಹಗೆ ಮಾಡುವರು?” ಅಮಲೌಷಧ-ಪ್ರೇರಿತ ಕ್ಷೇಮಭಾವದ ಮರೆಯಲ್ಲಿ ಅಡಗಿಕೊಳ್ಳುವ ಯೌವನಸ್ಥನು, ‘ಮೂಢತನವನ್ನು ಪ್ರೀತಿಸುತ್ತಾನೆ’; ಜೀವಿತದೊಂದಿಗೆ ವ್ಯವಹರಿಸಲು ಬೇಕಾಗಿರುವ ಜ್ಞಾನ ಮತ್ತು ನಿಭಾಯಿಸುವ ಕೌಶಲಗಳನ್ನು ವಿಕಸಿಸಿಕೊಳ್ಳಲು ಅವನು ತಪ್ಪಿಹೋಗುತ್ತಾನೆ. ನಿಮ್ಮ ಹದಿವಯಸ್ಕನೊಂದಿಗೆ ಮಾತಾಡುವುದು (ಇಂಗ್ಲಿಷ್) ಎಂಬ ಪುಸ್ತಕವು, ಅಮಲೌಷಧವನ್ನು ಉಪಯೋಗಿಸುವ ಹದಿವಯಸ್ಕರ ಕುರಿತು ಹೇಳುವುದು: “ಈ ಪದಾರ್ಥಗಳಿಲ್ಲದೆಯೇ ಜೀವನದ ವೇದನಾಮಯ ಕ್ಷಣಗಳನ್ನು ಪಾರಾಗಿ ಉಳಿಯಸಾಧ್ಯವಿದೆ ಎಂಬ ಪಾಠವು ಎಂದಿಗೂ ಕಲಿಯಲ್ಪಡುವುದಿಲ್ಲ.”
ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಅಮಲೌಷಧಗಳನ್ನು ಉಪಯೋಗಿಸಿದ ಆ್ಯನ್ ಹೀಗೆ ತಪ್ಪೊಪ್ಪಿಕೊಳ್ಳುತ್ತಾಳೆ: “14 ವರ್ಷಗಳ ವರೆಗೆ ನಾನು ನನ್ನ ಸಮಸ್ಯೆಗಳೊಂದಿಗೆ ವ್ಯವಹರಿಸಿಲ್ಲ.” ಮೈಕ್ ಹೀಗೆ ಹೇಳುತ್ತಾ, ತದ್ರೀತಿಯ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದನು: “ನಾನು 11 ವರ್ಷ ಪ್ರಾಯದವನಾಗಿದ್ದ ಸಮಯದಿಂದ ಅಮಲೌಷಧಗಳನ್ನು ಉಪಯೋಗಿಸಿದ್ದೆ. ನಾನು 22ರ ಪ್ರಾಯದಲ್ಲಿ ಅದನ್ನು ನಿಲ್ಲಿಸಿದಾಗ, ನನಗೆ ಒಂದು ಮಗುವಿನಂತೆ ಭಾಸವಾಯಿತು. ಭದ್ರತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ ನಾನು ಇತರರಿಗೆ ಅಂಟಿಕೊಂಡೆ. ನಾನು ಅಮಲೌಷಧಗಳನ್ನು ಉಪಯೋಗಿಸಲು ತೊಡಗಿದಾಗ ನನ್ನ ಭಾವನಾತ್ಮಕ ವಿಕಸನವು ನಿಂತುಹೋಯಿತೆಂಬುದನ್ನು ನಾನು ಗ್ರಹಿಸಿದೆ.”
13 ವರ್ಷ ಪ್ರಾಯದಿಂದ ಅಮಲೌಷಧಗಳನ್ನು ಅಪಪ್ರಯೋಗಿಸಿದ ಫ್ರ್ಯಾಂಕ್ ಕೂಡಿಸುವುದು, “ಬೆಳವಣಿಗೆಯ ಆ ಎಲ್ಲ ವರ್ಷಗಳನ್ನು ನಾನು ವ್ಯರ್ಥವಾಗಿ ಕಳೆದೆ. ನಾನು ಅಮಲೌಷಧ ಉಪಯೋಗವನ್ನು ನಿಲ್ಲಿಸಿದಾಗ, ಜೀವಿತದೊಂದಿಗೆ ವ್ಯವಹರಿಸಲು ಸಂಪೂರ್ಣವಾಗಿ ಅಸಜ್ಜಿತನಾಗಿದ್ದೇನೆಂಬ ವೇದನಾಮಯ ಗ್ರಹಿಕೆಯು ನನಗಾಯಿತು. ಬೇರೆ ಯಾವನೇ ತರುಣನನ್ನು ಎದುರಿಸುವ ಅದೇ ಭಾವನಾತ್ಮಕ ಸಂಕ್ಷೋಭೆಯೊಂದಿಗೆ, ನಾನು ಮತ್ತೆ 13 ವರ್ಷ ಪ್ರಾಯದ ಹುಡುಗನಾಗಿದ್ದೆ.”
ಅಮಲೌಷಧಗಳು ನನ್ನ ಆರೋಗ್ಯವನ್ನು ಕೆಡಿಸಬಲ್ಲವೊ?
ಇದು ಚಿಂತೆಯ ಮತ್ತೊಂದು ಕ್ಷೇತ್ರವಾಗಿದೆ. ಗಡುಸು ಅಮಲೌಷಧಗಳೆಂದು ಕರೆಯಲ್ಪಡುವ ಅಮಲೌಷಧಗಳು, ನಿಮ್ಮನ್ನು ಕೊಲ್ಲಬಲ್ಲವೆಂದು ಹೆಚ್ಚಿನ ಯುವ ಜನರು ಗ್ರಹಿಸುತ್ತಾರೆ. ಆದರೆ, ಮಾರಿವಾನದಂತಹ ಮೃದುವಾದ ಅಮಲೌಷಧಗಳೆಂದು ಕರೆಯಲ್ಪಡುವ ಅಮಲೌಷಧಗಳ ಕುರಿತೇನು? ಅವುಗಳ ಕುರಿತು ನೀವು ಕೇಳುವಂತಹ ಎಲ್ಲ ಎಚ್ಚರಿಕೆಗಳು ಬರಿಯ ಹೆದರಿಸುವ ತಂತ್ರಗಳೊ? ಉತ್ತರವಾಗಿ, ನಾವು ಮಾರಿವಾನ ಅಮಲೌಷಧದ ಮೇಲೆ ಗಮನವನ್ನು ಕೇಂದ್ರೀಕರಿಸೋಣ.
ಮಾರಿವಾನ (ಪಾಟ್, ರೀಫರ್, ಹುಲ್ಲು, ಗಾಂಜಾ, ಅಥವಾ ಕಳೆ ಎಂಬುದಾಗಿಯೂ ಜ್ಞಾತವಾಗಿದೆ) ಪರಿಣತರ ಮಧ್ಯೆ ಬಹಳಷ್ಟು ವಾಗ್ವಾದದ ವಿಷಯವಾಗಿದೆ. ಮತ್ತು ಸರ್ವಸಮ್ಮತವಾಗಿ, ಈ ಜನಪ್ರಿಯ ಅಮಲೌಷಧದ ಕುರಿತು ಬಹಳಷ್ಟು ವಿಷಯವು ಅಜ್ಞಾತವಾಗಿದೆ. ಒಂದು ವಿಷಯವೇನೆಂದರೆ, ಮಾರಿವಾನ ವಿಪರೀತವಾಗಿ ಜಟಿಲವಾಗಿದೆ; ಒಂದು ಮಾರಿವಾನ ಸಿಗರೇಟಿನ ಹೊಗೆಯಲ್ಲಿ 400ಕ್ಕಿಂತಲೂ ಅಧಿಕ ರಾಸಾಯನಿಕ ಪದಾರ್ಥಗಳಿವೆ. ಸಿಗರೇಟಿನ ಹೊಗೆಯು ಕ್ಯಾನ್ಸರನ್ನು ಉಂಟುಮಾಡುತ್ತದೆ ಎಂಬುದನ್ನು ಗ್ರಹಿಸಲು ವೈದ್ಯರುಗಳಿಗೆ
60ಕ್ಕಿಂತಲೂ ಹೆಚ್ಚಿನ ವರ್ಷಗಳು ಬೇಕಾದವು. ಅಂತೆಯೇ, ಮಾರಿವಾನದ 400 ಪದಾರ್ಥಗಳು ಮಾನವ ದೇಹಕ್ಕೆ ಏನನ್ನು ಮಾಡುತ್ತವೆ ಎಂಬುದು ಯಾರಿಗಾದರೂ ಖಚಿತವಾಗಿ ಗೊತ್ತಾಗುವ ಮೊದಲು ದಶಕಗಳು ಬೇಕಾಗಬಹುದು.ಹಾಗಿದ್ದರೂ, ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಅಭ್ಯಾಸಿಸಿದ ತರುವಾಯ, ಹೆಸರಾಂತ ಯು.ಎಸ್. ಇನ್ಸ್‌ಟಿಟ್ಯೂಟ್ ಆಫ್ ಮೆಡಿಸಿನ್‌ನ ಪರಿಣತರ ಗುಂಪೊಂದು ತೀರ್ಮಾನಿಸಿದ್ದು: “ಇದುವರೆಗೆ ಪ್ರಕಾಶಿಸಲ್ಪಟ್ಟ ವೈಜ್ಞಾನಿಕ ಪ್ರಮಾಣವು ಸೂಚಿಸುವುದೇನೆಂದರೆ, ಮಾರಿವಾನಕ್ಕೆ ವಿಶಾಲವಾದ ವ್ಯಾಪ್ತಿಯ ಮನಶ್ಶಾಸ್ತ್ರೀಯ ಹಾಗೂ ಜೀವಿವಿಜ್ಞಾನದ ಪರಿಣಾಮಗಳಿವೆ, ಅವುಗಳಲ್ಲಿ ಕೆಲವು, ಕಡಿಮೆಪಕ್ಷ ನಿರ್ದಿಷ್ಟವಾದ ಪರಿಸ್ಥಿತಿಗಳಲ್ಲಿ ಮಾನವ ಆರೋಗ್ಯಕ್ಕೆ ಹಾನಿಕರವಾಗಿವೆ.” ಈ ಹಾನಿಕಾರಕ ಪರಿಣಾಮಗಳಲ್ಲಿ ಕೆಲವು ಯಾವುವು?
ಮಾರಿವಾನ—ಅದು ನಿಮ್ಮ ದೇಹಕ್ಕೆ ಮಾಡುವ ವಿಷಯ
ಉದಾಹರಣೆಗಾಗಿ, ಶ್ವಾಸಕೋಶಗಳನ್ನು ಪರಿಗಣಿಸಿರಿ. ಹೊಗೆಯನ್ನು ಒಳಕ್ಕೆ ಸೇದಿಕೊಳ್ಳುವುದು ನಿಮಗೆ ಒಳ್ಳೆಯದಾಗಿರಲು ಸಾಧ್ಯವಿಲ್ಲವೆಂದು ಮಾರಿವಾನದ ಅತಿನಿಷ್ಠೆಯ ಬೆಂಬಲಿಗರು ಕೂಡ ಒಪ್ಪಿಕೊಳ್ಳುತ್ತಾರೆ. ಮಾರಿವಾನದ ಹೊಗೆಯಲ್ಲಿ, ತಂಬಾಕುವಿನ ಹೊಗೆಯಂತೆ, ಟಾರುಗಳಂತಹ ಹಲವಾರು ವಿಷಮಯ ಪದಾರ್ಥಗಳಿವೆ.
ಡಾ. ಫಾರೆಸ್ಟ್ ಎಸ್. ಟೆನಂಟ್, ಜೂನಿಯರ್, ಮಾರಿವಾನವನ್ನು ಉಪಯೋಗಿಸಿದ್ದ ಅಮೆರಿಕ ದಳದ 492 ಸೈನಿಕರ ಸಮೀಕ್ಷೆ ನಡೆಸಿದರು. ಅವರಲ್ಲಿ ಬಹುಮಟ್ಟಿಗೆ 25 ಪ್ರತಿಶತ ಜನರು, “ಗಾಂಜಾವನ್ನು ಸೇದಿದ ಕಾರಣ ಹುಣ್ಣಾದ ಗಂಟಲುಗಳಿಂದ ಕಷ್ಟಾನುಭವಿಸಿದರು, ಮತ್ತು 6 ಪ್ರತಿಶತ ಮಂದಿ, ತಾವು ಶ್ವಾಸನಾಳಗಳ ಒಳಪೊರೆಯ ಉರಿಯೂತದಿಂದ ಕಷ್ಟಾನುಭವಿಸಿದ್ದರೆಂದು ವರದಿಸಿದರು.” ಮತ್ತೊಂದು ಅಧ್ಯಯನದಲ್ಲಿ 30 ಮಾರಿವಾನ ಬಳಕೆದಾರರಲ್ಲಿ 24 ವ್ಯಕ್ತಿಗಳಿಗೆ “ಕ್ಯಾನ್ಸರಿನ ಆರಂಭಿಕ ಹಂತಗಳಿಗೆ ವಿಶಿಷ್ಟವಾಗಿರುವ” ಶ್ವಾಸನಾಳಗಳ “ಗಾಯಗಳು” ಇದ್ದವು.
ಅ. ಕೃತ್ಯಗಳು 17:25) ಶ್ವಾಸಕೋಶಗಳು ಮತ್ತು ಗಂಟಲನ್ನು ಹಾನಿಗೊಳಿಸುವ ಯಾವುದೊ ಪದಾರ್ಥವನ್ನು ನೀವು ಉದ್ದೇಶಪೂರ್ವಕವಾಗಿ ಒಳಕ್ಕೆ ಸೇದಿಕೊಳ್ಳುವುದಾದರೆ, ಜೀವದಾತನಿಗೆ ನೀವು ಗೌರವವನ್ನು ತೋರಿಸುತ್ತಿರುವಿರೊ?
ಅಂತಹವರು ತದನಂತರ ನಿಜವಾಗಿಯೂ ಕ್ಯಾನ್ಸರನ್ನು ವಿಕಸಿಸಿಕೊಳ್ಳುವರೆಂದು ಯಾರೂ ಖಾತರಿಕೊಡಸಾಧ್ಯವಿಲ್ಲ, ನಿಜ. ಆದರೆ ಆ ಗಂಡಾಂತರಕ್ಕೆ ನೀವು ಈಡಾಗಬಯಸುತ್ತೀರೊ? ಅಲ್ಲದೆ, ದೇವರು “ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿ”ದ್ದಾನೆಂದು ಬೈಬಲು ಹೇಳುತ್ತದೆ. (ಪ್ರಸಂಗಿ 12:6ರಲ್ಲಿ, ಮಾನವ ಮಿದುಳು ಕಾವ್ಯಾತ್ಮಕವಾಗಿ “ಚಿನ್ನದ ಬಟ್ಟಲು” ಎಂಬುದಾಗಿ ಕರೆಯಲ್ಪಟ್ಟಿದೆ. ನಿಮ್ಮ ಮುಷ್ಟಿಗಿಂತ ಒಂದಿಷ್ಟು ದೊಡ್ಡದಾಗಿದ್ದು, ಕೇವಲ ಮೂರು ಪೌಂಡುಗಳಷ್ಟು ತೂಕವುಳ್ಳ ಮಿದುಳು, ನಿಮ್ಮ ಸ್ಮರಣೆಗಳ ಅಮೂಲ್ಯ ಸಂಪುಟವಾಗಿದೆ ಮಾತ್ರವಲ್ಲ ನಿಮ್ಮ ಇಡೀ ನರವ್ಯೂಹದ ವ್ಯವಸ್ಥೆಗೆ ಆದೇಶಕೇಂದ್ರವಾಗಿದೆ. ಅದನ್ನು ಮನಸ್ಸಿನಲ್ಲಿಡುತ್ತಾ, ಇನ್ಸ್‌ಟಿಟ್ಯೂಟ್ ಆಫ್ ಮೆಡಿಸಿನ್‌ನ ಈ ಎಚ್ಚರಿಕೆಯ ಕಡೆಗೆ ಗಮನನೀಡಿ: “ಮಾರಿವಾನ—ರಾಸಾಯನಿಕ ಹಾಗೂ ವಿದ್ಯುತ್‌ಶಾರೀರಿಕ ಬದಲಾವಣೆಗಳನ್ನು ಸೇರಿಸಿ—ಮಿದುಳಿನ ಮೇಲೆ ತೀವ್ರವಾದ ಪರಿಣಾಮಗಳನ್ನು ಉತ್ಪಾದಿಸುತ್ತದೆ ಎಂಬುದಾಗಿ ನಾವು ಭರವಸೆಯಿಂದ ಹೇಳಬಲ್ಲೆವು.” ಮಾರಿವಾನ ಶಾಶ್ವತವಾಗಿ ಮಿದುಳನ್ನು ಹಾನಿಗೊಳಿಸುತ್ತದೆ ಎಂಬುದಕ್ಕೆ ಪ್ರಸ್ತುತದಲ್ಲಿ ಯಾವ ನಿರ್ಣಾಯಕ ಪುರಾವೆಯೂ ಇರುವುದಿಲ್ಲ. ಆದರೂ, ಮಾರಿವಾನ ಯಾವುದೇ ವಿಧದಲ್ಲಿ ‘ಚಿನ್ನದ ಬಟ್ಟಲಿಗೆ’ ಹಾನಿಯನ್ನುಂಟುಮಾಡಬಹುದು ಎಂಬ ಸಾಧ್ಯತೆಯನ್ನು ಲಘುವಾಗಿ ಎಣಿಸಬಾರದು.
ಮತ್ತು ಒಂದು ದಿನ ನೀವು ವಿವಾಹವಾಗಿ, ಮಕ್ಕಳನ್ನು ಪಡೆಯುವ ಪ್ರತೀಕ್ಷೆಯ ಕುರಿತೇನು? ಇನ್ಸ್‌ಟಿಟ್ಯೂಟ್ ಆಫ್ ಮೆಡಿಸಿನ್ ವರದಿಸಿದ್ದೇನೆಂದರೆ, ಮಾರಿವಾನವು “ಪ್ರಾಯೋಗಿಕ ಪ್ರಾಣಿಗಳಿಗೆ ದೊಡ್ಡ ಪ್ರಮಾಣಗಳಲ್ಲಿ ನೀಡಲ್ಪಟ್ಟಾಗ, ಜನನ ದೋಷಗಳನ್ನು ಉಂಟುಮಾಡುವುದಾಗಿ” ತೋರಿಬಂದಿದೆ. ಮಾನವರ ಮೇಲೆ ಅವೇ ಪರಿಣಾಮಗಳು ಇವೆಯೊ ಇಲ್ಲವೊ ಎಂಬುದು ಇಷ್ಟರ ವರೆಗೆ ರುಜುವಾಗಿಲ್ಲ. ಆದರೂ (ಡಿಈಎಸ್ ಎಂಬ ಹಾರ್ಮೋನ್‌ನಿಂದ ಉಂಟುಮಾಡಲ್ಪಟ್ಟಂತಹ) ಜನನ ದೋಷಗಳು ಅನೇಕ ವೇಳೆ ತಮ್ಮನ್ನು ಕೀರ್ತನೆ 127:3.
ವ್ಯಕ್ತಪಡಿಸಿಕೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಆದುದರಿಂದ, ಮಾರಿವಾನ ಸೇದುಗರ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ಕಾದುನೋಡಬೇಕಾಗಿದೆ. ಮಾರಿವಾನವನ್ನು ಸೇದುವುದು “ಆನುವಂಶೀಯ ಜೂಜಿನ ಆಟ”ವಾಗಿರಬಹುದೆಂದು ಡಾ. ಗೇಬ್ರಿಯಲ್ ನಹಾಸ್ ಹೇಳುತ್ತಾರೆ. ಮಕ್ಕಳನ್ನು “ಯೆಹೋವನಿಂದ ಬಂದ ಸ್ವಾಸ್ತ್ಯ”ವೆಂದು ವೀಕ್ಷಿಸುವ ಯಾವನಾದರೂ ಇಂತಹ ಗಂಡಾಂತರಗಳನ್ನು ತೆಗೆದುಕೊಳ್ಳಸಾಧ್ಯವೊ?—ಅಮಲೌಷಧಗಳು—ಬೈಬಲಿನ ನೋಟ
ನಿಶ್ಚಯವಾಗಿಯೂ ಮಾರಿವಾನ ಅನೇಕ ಜನಪ್ರಿಯ ಅಮಲೌಷಧಗಳಲ್ಲಿ ಕೇವಲ ಒಂದಾಗಿದೆ. ಆದರೆ ಸುಖಾನುಭವಕ್ಕಾಗಿ ಮನಸ್ಸನ್ನು ಮಾರ್ಪಡಿಸುವ ಯಾವುದೇ ಪದಾರ್ಥಗಳ ಸೇವನೆಯನ್ನು ತ್ಯಜಿಸಲು ಸಾಕಷ್ಟು ಕಾರಣವಿದೆಯೆಂಬುದನ್ನು ಅದು ಚೆನ್ನಾಗಿ ದೃಷ್ಟಾಂತಿಸುತ್ತದೆ. ಬೈಬಲ್ ಹೇಳುವುದು: “ಯುವಕರಿಗೆ ಬಲವು ಭೂಷಣ.” (ಜ್ಞಾನೋಕ್ತಿ 20:29) ಒಬ್ಬ ಯುವ ವ್ಯಕ್ತಿಯೋಪಾದಿ, ನೀವು ನಿಸ್ಸಂದೇಹವಾಗಿ ಒಳ್ಳೆಯ ಆರೋಗ್ಯವನ್ನು ಅನುಭವಿಸುತ್ತೀರಿ. ಅದನ್ನು ತೊರೆದುಬಿಡುವ ಗಂಡಾಂತರಕ್ಕಾದರೂ ಏಕೆ ಈಡಾಗಬೇಕು?
ಆದರೆ ಹೆಚ್ಚು ಪ್ರಾಮುಖ್ಯವಾಗಿ, ಈ ವಿಷಯದ ಕುರಿತಾಗಿ ನಮಗೆ ಬೈಬಲಿನ ನೋಟವಿದೆ. ಅದು ನಮಗೆ “ಬುದ್ಧಿಯನ್ನು ಭದ್ರವಾಗಿಟ್ಟು”ಕೊಳ್ಳುವಂತೆ, ರಾಸಾಯನಿಕ ಅಪಪ್ರಯೋಗದ ಮುಖಾಂತರ ಅದನ್ನು ಹಾಳುಮಾಡದಂತೆ ಹೇಳುತ್ತದೆ. (ಜ್ಞಾನೋಕ್ತಿ 3:21) ಅದು ಇನ್ನೂ ಪ್ರೋತ್ಸಾಹಿಸುವುದು: “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ” ಇರೋಣ. ಯಾರು ಅಮಲೌಷಧದ ಅಪಪ್ರಯೋಗದಂತಹ ಆಚರಣೆಗಳನ್ನು ತ್ಯಜಿಸುತ್ತಾ, ನಿಜವಾಗಿಯೂ ‘ತಮ್ಮನ್ನು ಕಲ್ಮಶದಿಂದ ಶುಚಿಮಾಡಿಕೊಂಡಿ’ದ್ದಾರೊ, ಅವರನ್ನು ಕುರಿತು ಮಾತ್ರ ದೇವರು ಹೀಗೆ ವಾಗ್ದಾನಿಸುತ್ತಾನೆ: “ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು.”—2 ಕೊರಿಂಥ 6:17–7:1.
ಹಾಗಿದ್ದರೂ, ಅಮಲೌಷಧಗಳನ್ನು ನಿರಾಕರಿಸುವುದು ಸುಲಭವಾಗಿರಲಿಕ್ಕಿಲ್ಲ.
ಸಮಾನಸ್ಥರು ಮತ್ತು ಅವರ ಒತ್ತಡ
ಬೇಸಗೆಯ ಒಂದು ತಣ್ಣನೆಯ ಸಂಜೆಯಂದು, ರಕ್ತಸಂಬಂಧಿಗಳೂ ಆಪ್ತ ಮಿತ್ರರೂ ಆದ ಜೋ ಮತ್ತು ಫ್ರ್ಯಾಂಕ್ ಒಂದು ಒಪ್ಪಂದವನ್ನು ಮಾಡಿಕೊಂಡರು. “ಬೇರೆಯವರು ಏನಾದರೂ ಮಾಡಿಕೊಳ್ಳಲಿ, ನಾವೆಂದೂ ಅಮಲೌಷಧಗಳೊಂದಿಗೆ ಹುಡುಗಾಟಿಕೆ ಮಾಡುವುದು ಬೇಡ,” ಎಂಬುದಾಗಿ ಅವರಿಬ್ಬರಲ್ಲಿ ಚಿಕ್ಕವನಾದ ಜೋ ಸೂಚಿಸಿದನು. ಇಬ್ಬರೂ ಯೌವನಸ್ಥರು ಒಪ್ಪಂದಕ್ಕೆ ಸಮ್ಮತಿಸಿದರು. ಕೇವಲ ಐದು ವರ್ಷಗಳ ನಂತರ, ಒಂದು ಅಮಲೌಷಧ ಸಂಬಂಧಿತ ಅಪಘಾತದ ಪರಿಣಾಮವಾಗಿ ಜೋ ತನ್ನ ಕಾರಿನಲ್ಲಿ ಸತ್ತುಹೋಗಿದ್ದು ಕಂಡುಬಂತು. ಮತ್ತು ಫ್ರ್ಯಾಂಕ್ ಅಮಲೌಷಧಗಳ ವ್ಯಸನಕ್ಕೆ ತೀವ್ರವಾಗಿ ಒಳಪಟ್ಟಿದ್ದನು.
ಆದ ತಪ್ಪೇನು? ಉತ್ತರವು ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಈ ತುರ್ತಿನ ಎಚ್ಚರಿಕೆಯಲ್ಲಿ ಅಡಕವಾಗಿದೆ: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಜೋ ಮತ್ತು ಫ್ರ್ಯಾಂಕ್ ಇಬ್ಬರೂ ಕೆಟ್ಟ ಸಮೂಹದೊಂದಿಗೆ ಸೇರಿಕೊಂಡರು. ಅಮಲೌಷಧಗಳನ್ನು ಉಪಯೋಗಿಸಿದವರೊಂದಿಗೆ ಅವರು ಹೆಚ್ಚೆಚ್ಚು ಸಹವಸಿಸಿದಂತೆ, ಅವರು ಸ್ವತಃ ಅಮಲೌಷಧಗಳೊಂದಿಗೆ ಪ್ರಯೋಗ ನಡೆಸಲು ತೊಡಗಿದರು.
ಮಕ್ಕಳಲ್ಲಿ ಮತ್ತು ತರುಣರಲ್ಲಿ ಸ್ವ-ನಾಶಕಾರಿ ವರ್ತನೆ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ಯುವ ಜನರು ಅನೇಕ ವೇಳೆ ಒಬ್ಬ ಆಪ್ತ ಮಿತ್ರನಿಂದ ಹಲವಾರು ಅಮಲೌಷಧಗಳಿಗೆ ಪರಿಚಯಿಸಲ್ಪಡುತ್ತಾರೆ ಇಲ್ಲವೆ ‘ಅವಲಂಬಿಸುವಂತೆ ಮಾಡಲ್ಪಡುತ್ತಾರೆ’ . . . [ಅವನ] ಉದ್ದೇಶಗಳು ಒಂದು ಉತ್ತೇಜಕ ಅಥವಾ ಆಹ್ಲಾದಕರ ಅನುಭವವನ್ನು ಹಂಚಿಕೊಳ್ಳುವುದಾಗಿರಬಹುದು.” ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಮೈಕ್ ಹೀಗೆ ಹೇಳುತ್ತಾ ಇದನ್ನು ದೃಢಪಡಿಸುತ್ತಾನೆ: “ನನಗೆ ವ್ಯವಹರಿಸಲು ಅತಿ ಕಷ್ಟಕರವಾದ ವಿಷಯಗಳಲ್ಲೊಂದು ಸಮಾನಸ್ಥರ ಒತ್ತಡವಾಗಿತ್ತು. . . . ನಾನು ಮೊದಲ ಬಾರಿ ಮಾರಿವಾನವನ್ನು ಸೇದಿದ್ದು, ನಾನು ಯಾರೊಟ್ಟಿಗೆ ಇದ್ದೆನೊ ಆ ಎಲ್ಲ ಮಕ್ಕಳು ಸೇದಿದ್ದರಿಂದಲೇ, ಮತ್ತು ಅವರೊಂದಿಗೆ ಹೊಂದಿಕೊಳ್ಳಲು ನಾನು ಬಯಸಿದೆ.”
ಖಡಾಖಂಡಿತವಾಗಿ ಹೇಳುವಲ್ಲಿ, ನಿಮ್ಮ ಮಿತ್ರರು ಅಮಲೌಷಧಗಳನ್ನು ಬಳಸಲು ಆರಂಭಿಸುವುದಾದರೆ, ಅನುವರ್ತಿಸಲು, ಹೊಂದಿಕೊಳ್ಳಲು ನೀವು ಬಲವಾದ ಭಾವನಾತ್ಮಕ ಒತ್ತಡದ ಕೆಳಗಿರುವಿರಿ. ನಿಮ್ಮ ಮಿತ್ರವೃಂದವನ್ನು ನೀವು ಬದಲಾಯಿಸದಿದ್ದರೆ, ನೀವೂ ಕಟ್ಟಕಡೆಗೆ ಬಹುಶಃ ಒಬ್ಬ ಅಮಲೌಷಧ ಉಪಯೋಗಿ ಆಗುವಿರಿ.
‘ವಿವೇಕಿಗಳೊಂದಿಗೆ ನಡೆದಾಡುವುದು’
“ವಿವೇಕಿಗಳೊಂದಿಗೆ ನಡೆದಾಡುವವನು ವಿವೇಕಿಯಾಗುವನು, ಆದರೆ ಮೂರ್ಖರೊಂದಿಗೆ ವ್ಯವಹರಿಸುವವನು ಸಂಕಟಪಡುವನು,” ಎಂಬುದಾಗಿ ಜ್ಞಾನೋಕ್ತಿ 13:20 (NW) ಹೇಳುತ್ತದೆ. ವಿಷಯವನ್ನು ದೃಷ್ಟಾಂತಿಸಲು, ನೀವು ನೆಗಡಿ ಹಿಡಿಯುವುದರಿಂದ ದೂರವಿರಲು ಪ್ರಯತ್ನಿಸುತ್ತಿದ್ದಲ್ಲಿ, ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕವನ್ನಿಡುವುದನ್ನು ನೀವು ದೂರವಿರಿಸುತ್ತಿರಲಿಲ್ಲವೊ? “ತದ್ರೀತಿಯಲ್ಲಿ, ನಾವು . . . ಅಮಲೌಷಧದ ದುರುಪಯೋಗವನ್ನು . . . ತಡೆಗಟ್ಟಬೇಕಾದಲ್ಲಿ . . . , ನಾವು ಆರೋಗ್ಯಕರ ಸಮತೂಕದ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಹಾನಿಕಾರಕ ಪ್ರಭಾವಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆಮಾಡಬೇಕು” ಎಂಬುದಾಗಿ ತರುಣ ಸಮಾನಸ್ಥರ ಒತ್ತಡ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಯಪಡಿಸುತ್ತದೆ.
ಆದುದರಿಂದ ನೀವು ಅಮಲೌಷಧಗಳಿಗೆ ಬೇಡ ಎಂದು ಹೇಳಲು ಬಯಸುತ್ತೀರೊ? ಹಾಗಾದರೆ ನೀವು ಸಹವಸಿಸುವ ಜನರ ವಿಷಯದಲ್ಲಿ ಎಚ್ಚರವಾಗಿರಿ. ಅಮಲೌಷಧಗಳಿಂದ ಮುಕ್ತರಾಗಿರಲು ನೀವು ಮಾಡಿರುವ ನಿರ್ಧಾರವನ್ನು ಸಮರ್ಥಿಸುವ, ದೇವಭಯವುಳ್ಳ ಕ್ರೈಸ್ತರ ಮಿತ್ರತ್ವವನ್ನು ಹುಡುಕಿರಿ. (ಹೋಲಿಸಿ 1 ಸಮುವೇಲ 23:15, 16.) ವಿಮೋಚನಕಾಂಡ 23:2ರಲ್ಲಿರುವ ಮಾತುಗಳನ್ನೂ ಗಮನಿಸಿರಿ. ಮೂಲಭೂತವಾಗಿ, ಪ್ರಮಾಣಪೂರ್ವಕವಾಗಿ ಸಾಕ್ಷ್ಯನೀಡುವ ಸಾಕ್ಷಿಗಳಿಗೆ ನಿರ್ದೇಶಿಸಲ್ಪಟ್ಟಿರುವುದಾದರೂ, ಅವು ಯುವ ಜನರಿಗೆ ಒಳ್ಳೆಯ ಬುದ್ಧಿವಾದವಾಗಿವೆ: “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.”
ನಿರ್ವಿವಾದವಾಗಿ ತನ್ನ ಸಮಾನಸ್ಥರನ್ನು ಹಿಂಬಾಲಿಸುವ ಯಾವನೇ ವ್ಯಕ್ತಿಯು, ಒಂದು ದಾಸನಿಗಿಂತ ಹೆಚ್ಚಿನವನಾಗಿರುವುದಿಲ್ಲ. ಬೈಬಲು ರೋಮಾಪುರ 6:16ರಲ್ಲಿ ಹೀಗೆ ಹೇಳುತ್ತದೆ: “ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ?” ಆದುದರಿಂದಲೇ “ಯೋಚನಾ ಸಾಮರ್ಥ್ಯ”ವನ್ನು (NW) ವಿಕಸಿಸಿಕೊಳ್ಳುವಂತೆ ಬೈಬಲು ಯುವ ಜನರಿಗೆ ಉತ್ತೇಜನ ನೀಡುತ್ತದೆ. (ಜ್ಞಾನೋಕ್ತಿ 2:10-12) ಸ್ವತಃ ಯೋಚಿಸಲು ಕಲಿತುಕೊಳ್ಳಿರಿ, ಮತ್ತು ನೀವು ಮೊಂಡು ಯುವ ಜನರನ್ನು ಅನುಸರಿಸುವ ಒಲವುಳ್ಳವರಾಗಿರದಿರುವಿರಿ.
ನಿಜ, ನೀವು ಅಮಲೌಷಧಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಕುತೂಹಲವುಳ್ಳವರಾಗಿರಬಹುದು. ಆದರೆ ಅಮಲೌಷಧಗಳು ಜನರಿಗೆ ಏನು ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಲು ನೀವು ನಿಮ್ಮ ಸ್ವಂತ ಮನಸ್ಸು ಮತ್ತು ದೇಹವನ್ನು ಮಲಿನಗೊಳಿಸಿಕೊಳ್ಳಬೇಕಾಗಿಲ್ಲ. ನಿಮ್ಮ ಪ್ರಾಯದ, ಅಮಲೌಷಧ ದುರುಪಯೋಗಿಗಳನ್ನು—ವಿಶೇಷವಾಗಿ ಒಂದು ದೀರ್ಘ ಸಮಯಾವಧಿಯಿಂದ ದುರುಪಯೋಗಿಸುವವರಾಗಿರುವ ಜನರನ್ನು—ಕೇವಲ ಗಮನಿಸಿರಿ. ಅವರು ಜಾಗರೂಕರೂ ತೀಕ್ಷ್ಣಬುದ್ಧಿಯುಳ್ಳವರೂ ಆಗಿ ತೋರುತ್ತಾರೊ? ಅವರು ತಮ್ಮ ದರ್ಜೆಗಳನ್ನು ಕಾಪಾಡಿಕೊಂಡಿದ್ದಾರೊ? ಅಥವಾ ಅವರು ತಮ್ಮ ಸುತ್ತಲೂ ಸಂಭವಿಸುತ್ತಿರುವ ವಿಷಯದ ಕುರಿತು ಕೆಲವೊಮ್ಮೆ ಅರಿವಿಲ್ಲದವರಾಗಿಯೂ ಇರುತ್ತಾ, ಕಳೆಗುಂದಿದವರೂ ಅಜಾಗರೂಕರೂ ಆಗಿದ್ದಾರೊ? ಇಂತಹವರನ್ನು ವರ್ಣಿಸಲು ಸ್ವತಃ ಅಮಲೌಷಧ ಉಪಯೋಗಿಗಳಿಂದ ಒಂದು ಶಬ್ದವು ರಚಿಸಲ್ಪಟ್ಟಿತು: “ನಿಷ್ಕ್ರಿಯರು.” ಆದರೂ, ಅನೇಕ “ನಿಷ್ಕ್ರಿಯರು” ಅಮಲೌಷಧಗಳನ್ನು ಬಹುಶಃ ಕುತೂಹಲದ ಕಾರಣ ಉಪಯೋಗಿಸಲು ತೊಡಗಿದರು. ಆದಕಾರಣ ಅಹಿತಕರವಾದ ಕುತೂಹಲತೆಯನ್ನು ನಿಗ್ರಹಿಸಲು ಮತ್ತು “ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿ” ಇರುವಂತೆ ಬೈಬಲು ಕ್ರೈಸ್ತರನ್ನು ಪ್ರೇರೇಪಿಸುವುದು ಆಶ್ಚರ್ಯಕರವೇನೂ ಅಲ್ಲ.—1 ಕೊರಿಂಥ 14:20.
ನೀವು ಇಲ್ಲವೆಂದು ಹೇಳಬಲ್ಲಿರಿ!
ಅಮೆರಿಕದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆನ್ ಡ್ರಗ್ ಅಬ್ಯೂಸ್ ಅವರಿಂದ ಪ್ರಕಾಶಿಸಲ್ಪಟ್ಟ ಒಂದು ಪುಸ್ತಿಕೆಯು ನಮಗೆ ಮರುಜ್ಞಾಪನ ನೀಡುವುದು: “ಅಮಲೌಷಧವೊಂದನ್ನು ಉಪಯೋಗಿಸುವ ಅವಕಾಶವನ್ನು ತಿರಸ್ಕರಿಸುವುದು . . . ನಿಮ್ಮ ಹಕ್ಕು. ನಿಮ್ಮ ನಿರ್ಣಯದ ಮೇಲೆ ಒತ್ತಡ ಹೇರುವ ಮಿತ್ರರು, ಒಬ್ಬ ಮುಕ್ತ ವ್ಯಕ್ತಿಯೋಪಾದಿ ನಿಮ್ಮ ಹಕ್ಕುಗಳ ಕುಚೋದ್ಯ ಮಾಡುತ್ತಿದ್ದಾರೆ.” ಅಮಲೌಷಧಗಳನ್ನು ನಿಮಗೆ ಯಾರಾದರೂ ನೀಡುವಲ್ಲಿ ನೀವು ಏನು ಮಾಡಬಲ್ಲಿರಿ? ಬೇಡವೆಂದು ಹೇಳುವ ಧೈರ್ಯ ನಿಮ್ಮಲ್ಲಿರಲಿ! ಇದು ಅಮಲೌಷಧದ ದುರುಪಯೋಗದ ಕುರಿತು ಒಂದು ಪ್ರಸಂಗ ಕೊಡುವುದು ಆವಶ್ಯಕವೆಂಬುದನ್ನು ಅರ್ಥೈಸುವುದಿಲ್ಲ. ಕೇವಲ ಹೀಗೆ ಉತ್ತರಿಸುವುದನ್ನು ಅದೇ ಪುಸ್ತಿಕೆಯು ಸೂಚಿಸಿತು, “ಬೇಡ ಉಪಕಾರ, ನಾನು ಸೇದಲು ಬಯಸುವುದಿಲ್ಲ” ಅಥವಾ “ಬೇಡ, ಆ ಕ್ಷೋಭೆಯನ್ನು ಬಯಸುವುದಿಲ್ಲ,”
ಅಥವಾ ವ್ಯಂಗ್ಯವಾಗಿಯೂ, “ದೇಹ ಮಾಲಿನ್ಯದಿಂದ ನಾನು ದೂರ.” ತಮ್ಮ ನೀಡಿಕೆಯಲ್ಲಿ ಅವರು ಪಟ್ಟುಹಿಡಿಯುವುದಾದರೆ, ನೀವು ದೃಢನಿಶ್ಚಯದಿಂದ ಬೇಡ ಎಂದು ಹೇಳಬೇಕಾಗಬಹುದು! ನೀವು ಕ್ರೈಸ್ತರೆಂದು ಇತರರಿಗೆ ತಿಳಿಯಪಡಿಸುವುದೂ ಒಂದು ಸಂರಕ್ಷಣೆಯಾಗಿ ಪರಿಣಮಿಸಬಹುದು.ಬೆಳೆದು ದೊಡ್ಡವರಾಗುವುದು ಸುಲಭವಲ್ಲ. ಆದರೆ ಅಮಲೌಷಧಗಳನ್ನು ಉಪಯೋಗಿಸುವ ಮೂಲಕ ನೀವು ಬೆಳೆಯುವ ವೇದನೆಗಳಿಂದ ದೂರವಿರಲು ಪ್ರಯತ್ನಿಸುವಲ್ಲಿ, ಒಬ್ಬ ಜವಾಬ್ದಾರ, ಪಕ್ವ ವಯಸ್ಕನಾಗುವ ನಿಮ್ಮ ಅವಕಾಶಗಳನ್ನು ನೀವು ಗುರುತರವಾಗಿ ತಡೆಯಬಲ್ಲಿರಿ. ಸಮಸ್ಯೆಗಳನ್ನು ನೇರವಾಗಿ ಎದುರಿಸಲು ಕಲಿಯಿರಿ. ಒತ್ತಡಗಳು ಅತಿಶಯವಾಗಿ ತೋರುವಲ್ಲಿ, ಒಂದು ರಾಸಾಯನಿಕ ಪಲಾಯನವನ್ನು ಆಶ್ರಯಿಸದಿರಿ. ವಿಷಯಗಳನ್ನು ಸರಿಪಡಿಸಲು ನಿಮಗೆ ಸಹಾಯಮಾಡಬಲ್ಲ ಹೆತ್ತವರಲ್ಲೊಬ್ಬರೊಂದಿಗೆ ಅಥವಾ ಬೇರೆ ಜವಾಬ್ದಾರ ವಯಸ್ಕರೊಂದಿಗೆ ಮಾತಾಡಿರಿ. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು” ಎಂಬ ಬೈಬಲಿನ ಪ್ರಚೋದನೆಯನ್ನೂ ಜ್ಞಾಪಕದಲ್ಲಿಡಿ.—ಫಿಲಿಪ್ಪಿ 4:6, 7.
ಹೌದು, ಬೇಡ ಎಂದು ಹೇಳಲು ಯೆಹೋವ ದೇವರು ನಿಮಗೆ ಬಲವನ್ನು ಕೊಡುವನು! ನಿಮ್ಮ ನಿರ್ಧಾರದಲ್ಲಿ ಬಲಹೀನಗೊಳ್ಳುವಂತೆ ಯಾರೂ ನಿಮ್ಮನ್ನು ಒತ್ತಾಯಿಸಲು ಎಂದಿಗೂ ಬಿಡಬೇಡಿ. ಮೈಕ್ ಪ್ರೇರೇಪಿಸುವಂತೆ: “ಅಮಲೌಷಧಗಳೊಂದಿಗೆ ಪ್ರಯೋಗ ನಡಿಸಬೇಡಿ. ನೀವು ನಿಮ್ಮ ಜೀವನದ ಉಳಿದ ಸಮಯವೆಲ್ಲ ಕಷ್ಟಾನುಭವಿಸುವಿರಿ!”
ಚರ್ಚೆಗಾಗಿ ಪ್ರಶ್ನೆಗಳು
◻ ಅನೇಕ ಯುವ ಜನರು ಅಮಲೌಷಧಗಳಲ್ಲಿ ಸಿಲುಕಿಕೊಳ್ಳುತ್ತಾರೆ ಏಕೆ?
◻ ಅಮಲೌಷಧಗಳನ್ನು ತೆಗೆದುಕೊಳ್ಳುವುದು ನಿಮ್ಮ ಭಾವನಾತ್ಮಕ ಬೆಳವಣಿಗೆಯನ್ನು ಹೇಗೆ ತಡೆಯಬಲ್ಲದು?
◻ ಮಾರಿವಾನ ದೇಹವನ್ನು ಹೇಗೆ ಬಾಧಿಸುತ್ತದೆಂಬುದರ ಕುರಿತು ಯಾವ ವಿಷಯವು ಜ್ಞಾತವಾಗಿದೆ?
◻ ಸುಖಾನುಭವಕ್ಕಾಗಿ ಅಮಲೌಷಧಗಳನ್ನು ತೆಗೆದುಕೊಳ್ಳುವುದರ ಕುರಿತು ಬೈಬಲಿನ ನೋಟವೇನು?
◻ ಅಮಲೌಷಧಗಳಿಂದ ಮುಕ್ತರಾಗಿ ಉಳಿಯಲು, ನಿಮ್ಮ ಸಹವಾಸಿಗಳ ಕಡೆಗೆ ಗಮನಕೊಡುವುದು ಏಕೆ ಪ್ರಾಮುಖ್ಯವಾದದ್ದು?
◻ ಅಮಲೌಷಧಗಳಿಗೆ ಬೇಡವೆಂದು ಹೇಳುವ ಕೆಲವು ವಿಧಗಳಾವುವು?
[ಪುಟ 274 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಮ್ಮ ಶಾಲೆಯಲ್ಲಿನ ಕಾವಲುಗಾರರೂ ಪಾಟ್ ಅನ್ನು ಮಾರುತ್ತಿದ್ದಾರೆ,” ಎಂಬುದಾಗಿ ಒಬ್ಬ ಯುವಕನು ಹೇಳುತ್ತಾನೆ
[ಪುಟ 279 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಾನು ಅಮಲೌಷಧಗಳನ್ನು ಉಪಯೋಗಿಸಲು ತೊಡಗಿದಾಗ ನನ್ನ ಭಾವನಾತ್ಮಕ ವಿಕಸನವು ನಿಂತುಹೋಯಿತೆಂಬುದನ್ನು ನಾನು ಗ್ರಹಿಸಿದೆ.”—ಮಾಜಿ ಅಮಲೌಷಧ ಉಪಯೋಗಿ, ಮೈಕ್
[ಪುಟ 278 ರಲ್ಲಿರುವ ಚೌಕ]
ಮಾರಿವಾನ—ನವೀನವಾದ ಒಂದು ಅದ್ಭುತ ಅಮಲೌಷಧವೊ?
ಮಾರಿವಾನಕ್ಕೆ ಗ್ಲುಕೋಮ ಮತ್ತು ಉಬ್ಬಸವನ್ನು ನಿರ್ವಹಿಸುವುದರಲ್ಲಿ ಮತ್ತು ಕಿಮೋಥೆರಪಿಯ ಸಮಯದಲ್ಲಿ ಕ್ಯಾನ್ಸರಿನ ರೋಗಿಗಳು ಅನುಭವಿಸುವ ಪಿತ್ತೋದ್ರೇಕವನ್ನು ಶಮನಗೊಳಿಸುವುದರಲ್ಲಿ ಚಿಕಿತ್ಸಕ ಮೌಲ್ಯವಿದೆಯೆಂಬ ವಾದಗಳ ಕುರಿತು ಬಹಳಷ್ಟು ಗೊಂದಲವಿದೆ. ಈ ವಾದಗಳಿಗೆ ಒಂದಿಷ್ಟು ಸತ್ಯವಿದೆಯೆಂದು ಯು.ಎಸ್. ಇನ್ಸ್‌ಟಿಟ್ಯೂಟ್ ಆಫ್ ಮೆಡಿಸಿನ್‌ನ ಒಂದು ವರದಿಯು ಅಂಗೀಕರಿಸುತ್ತದೆ. ಆದರೆ ಇದು, ಹತ್ತಿರದ ಭವಿಷ್ಯತ್ತಿನಲ್ಲಿ ವೈದ್ಯರು, ಮಾರಿವಾನ ಸಿಗರೇಟುಗಳನ್ನು ಸೇದಲು ಹೇಳುವರೆಂಬುದನ್ನು ಅರ್ಥೈಸುತ್ತದೊ?
ಬಹುಶಃ ಇಲ್ಲ, ಏಕೆಂದರೆ ಮಾರಿವಾನದ 400ಕ್ಕಿಂತಲೂ ಹೆಚ್ಚಿನ ರಾಸಾಯನಿಕ ಪದಾರ್ಥಗಳಲ್ಲಿ ಕೆಲವು ಪ್ರಯೋಜನಕಾರಿಯಾಗಿ ಪರಿಣಮಿಸಬಹುದಾದರೂ, ಮಾರಿವಾನ ಸೇದುವುದು, ಅಂತಹ ಔಷಧಗಳನ್ನು ತೆಗೆದುಕೊಳ್ಳುವ ಒಂದು ತರ್ಕಬದ್ಧ ವಿಧವಾಗಿರಲಾರದು. “ಮಾರಿವಾನವನ್ನು ಉಪಯೋಗಿಸುವುದು, ಪೆನಿಸಿಲಿನ್ ಅನ್ನು ಪಡೆದುಕೊಳ್ಳಲಿಕ್ಕಾಗಿ ಜನರಿಗೆ ತಿನ್ನಲು ಅಚ್ಚೊತ್ತಿದ ರೊಟ್ಟಿಯನ್ನು ಕೊಡುವಂತಿದೆ,” ಎಂಬುದಾಗಿ ಪ್ರಖ್ಯಾತ ಅಧಿಕಾರಿ ಡಾ. ಕಾರ್ಲ್‌ಟನ್ ಟರ್ನರ್ ಹೇಳುತ್ತಾರೆ. ಆದುದರಿಂದ ಮಾರಿವಾನದ ಯಾವುದೇ ಪದಾರ್ಥಗಳು ವಿಶ್ವಾಸಯೋಗ್ಯ ಔಷಧಗಳಾಗುವುದಾದರೆ, ಅವು ವೈದ್ಯರು ಸೇವಿಸುವಂತೆ ಹೇಳುವ ಮಾರಿವಾನದ “ಉತ್ಪನ್ನಗಳು ಇಲ್ಲವೆ ಸ್ವರೂಪಗಳು,” ಅವುಗಳಿಗೆ ಸಮಾನವಾಗಿರುವ ರಾಸಾಯನಿಕ ಪದಾರ್ಥಗಳಾಗಿರುವವು. ಆದುದರಿಂದ ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಸೆಕ್ರಿಟರಿ, ಹೀಗೆ ಬರೆದುದರಲ್ಲಿ ಆಶ್ಚರ್ಯವೇನೂ ಇಲ್ಲ: “ಸಂಭವನೀಯ ಚಿಕಿತ್ಸಕ ಪ್ರಯೋಜನಗಳು, ಯಾವುದೇ ವಿಧದಲ್ಲಿ ಮಾರಿವಾನದ ನೇತ್ಯಾತ್ಮಕ ಆರೋಗ್ಯ ಪರಿಣಾಮಗಳ ಮಹತ್ವವನ್ನು ಮಾರ್ಪಡಿಸುವುದಿಲ್ಲ ಎಂಬುದನ್ನು ಒತ್ತಿಹೇಳಬೇಕಾಗುತ್ತದೆ.”
[ಪುಟ 275 ರಲ್ಲಿರುವ ಚಿತ್ರಗಳು]
ಅಮಲೌಷಧಗಳಿಗೆ ಬೇಡವೆಂದು ಹೇಳುವ ಧೈರ್ಯ ನಿಮ್ಮಲ್ಲಿರಲಿ!
[ಪುಟ 276,277 ರಲ್ಲಿರುವ ಚಿತ್ರಗಳು]
ಅಮಲೌಷಧಗಳ ಮೂಲಕ ಈಗ ನಿಮ್ಮ ಸಮಸ್ಯೆಗಳಿಂದ ಪಾರಾಗುವಲ್ಲಿ . . . ಒಬ್ಬ ವಯಸ್ಕನೋಪಾದಿ ಸಮಸ್ಯೆಗಳನ್ನು ಎದುರಿಸುವುದು ಕಷ್ಟಕರವೆಂದು ನೀವು ಕಂಡುಕೊಳ್ಳಬಹುದು