ಗೃಹ ರಂಗ: ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುವುದು
ವಿಭಾಗ 1
ಗೃಹ ರಂಗ: ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುವುದು
“ಮನೆ ಮುದ್ದು ಮನೆ.” ಈ ಪರಿಚಿತ ಹೇಳಿಕೆಯು, ಈಗಿನ ದಿನಗಳಲ್ಲಿ ಆಶಾರಹಿತವಾಗಿ ರೂಢಿಯಲ್ಲಿಲ್ಲದಿರುವಂತೆ ತೋರುವ ಒಂದು ಚಿತ್ತವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಕಡಮೆಯಾಗದ ಕುಟುಂಬ ಘರ್ಷಣೆಗಳು ಅನೇಕ ಮನೆಗಳನ್ನು ಸಾಕ್ಷಾತ್ ರಣರಂಗಗಳನ್ನಾಗಿ ಪರಿವರ್ತಿಸುತ್ತವೆ. ಅಗಲವಾಗಿ ಬಿರುಕುಬಿಟ್ಟಿರುವ ಸಂವಾದ ಅಂತರವು, ಅನೇಕ ವೇಳೆ ಸಮಾಧಾನವನ್ನು ತರಲಿಕ್ಕಾಗಿರುವ ಯಾವುದೇ ಪ್ರಯತ್ನಗಳನ್ನು ಭಂಗಗೊಳಿಸುತ್ತದೆ.
ನಿಮ್ಮ ಮನೆಯು, ದ್ವೇಷಕ್ಕೆ ಸಹಾಯಕ ಸ್ಥಳವಾಗಿರುವ ಬದಲಿಗೆ ಶಾಂತಿಯ ಒಂದು ಸ್ಥಾನವಾಗಿರುವಂತೆ ನೀವು ಬಯಸುತ್ತೀರೊ? ಕುಟುಂಬದ ಇತರ ಸದಸ್ಯರೂ ತಮ್ಮ ಪಾತ್ರವನ್ನು ಪೂರೈಸಬೇಕೆಂಬುದು ನಿಜ. ಆದರೆ ಕೆಲವು ಬೈಬಲ್ ತತ್ತ್ವಗಳಲ್ಲಿ ಪಾರಂಗತರಾಗುವ ಮೂಲಕ, ನಿಮ್ಮ ಮನೆಯ ಶಾಂತಿಗೆ ನೆರವನ್ನು ನೀಡಲು ನೀವು ಮಾಡಸಾಧ್ಯವಿರುವ ವಿಷಯಗಳೊ ಅನೇಕ.