ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಸೋದರ ಸೋದರಿಯೊಂದಿಗೆ ಹೊಂದಿಕೊಂಡು ಹೋಗುವುದು ಇಷ್ಟು ಕಷ್ಟಕರವೇಕೆ?

ನನ್ನ ಸೋದರ ಸೋದರಿಯೊಂದಿಗೆ ಹೊಂದಿಕೊಂಡು ಹೋಗುವುದು ಇಷ್ಟು ಕಷ್ಟಕರವೇಕೆ?

ಅಧ್ಯಾಯ 6

ನನ್ನ ಸೋದರ ಸೋದರಿಯೊಂದಿಗೆ ಹೊಂದಿಕೊಂಡು ಹೋಗುವುದು ಇಷ್ಟು ಕಷ್ಟಕರವೇಕೆ?

 ಒಡಹುಟ್ಟಿದವರ ಪ್ರತಿಸ್ಪರ್ಧೆ—ಅದು ಕಾಯಿನ ಹೇಬೆಲರ ಕಾಲದಷ್ಟು ಹಳೆಯ ವಿಷಯವಾಗಿದೆ. ನೀವು ನಿಮ್ಮ ಒಡಹುಟ್ಟಿದವನನ್ನು (ಸೋದರ ಅಥವಾ ಸೋದರಿ) ದ್ವೇಷಿಸುತ್ತೀರೆಂದಲ್ಲ. ಒಬ್ಬ ಯುವಕನು ಒಪ್ಪಿಕೊಂಡದ್ದು: “ನನ್ನ ಹೃದಯದಾಳದಲ್ಲಿ, ಎಲ್ಲಿ ನಾನು ಅದನ್ನು ಈಗ ಭಾವಿಸಲಾರೆನೋ ಅಲ್ಲಿ, ನಾನು ನನ್ನ ಸೋದರನನ್ನು ಪ್ರೀತಿಸುತ್ತೇನೆಂದು ಊಹಿಸುತ್ತೇನೆ. ಒಂದು ರೀತಿಯಲ್ಲಿ ನಾನು ಪ್ರೀತಿಸುತ್ತೇನೆ.”

ಒಡಹುಟ್ಟಿದವರ ಸಂಬಂಧಗಳ ಮೇಲ್ಮೈಯ ಕೆಳಗೆ ಅನೇಕ ವೇಳೆ ಬದ್ಧದ್ವೇಷವು ಏಕೆ ಅಡಗಿರುತ್ತದೆ? ಕುಟುಂಬ ಚಿಕಿತ್ಸಕರಾದ ಕ್ಲಾಡಿಯಾ ಶ್ವೈಟ್ಸರ್‌ ಹೀಗೆ ಹೇಳಿರುವುದಾಗಿ ಲೇಖಕಿ ಹ್ಯಾರಿಯೆಟ್‌ ವೆಬ್ಸ್‌ಟರ್‌ ಉದ್ಧರಿಸುತ್ತಾರೆ: “ಪ್ರತಿಯೊಂದು ಕುಟುಂಬದಲ್ಲಿ ಒಂದು ನಿರ್ದಿಷ್ಟ ಮೊತ್ತದ ಬಂಡವಾಳ ಇದೆ, ಕೆಲವು ಭಾವನಾತ್ಮಕ ಮತ್ತು ಕೆಲವು ಭೌತಿಕವಾದವುಗಳು.” ವೆಬ್ಸ್‌ಟರ್‌ ಕೂಡಿಸುವುದು: “ಒಡಹುಟ್ಟಿದವರು ಜಗಳವಾಡುವಾಗ, ಅವರು ಸಾಮಾನ್ಯವಾಗಿ ಈ ಬಂಡವಾಳಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಹೆತ್ತವರ ಪ್ರೀತಿಯಿಂದ ಹಿಡಿದು, ಹಣ ಮತ್ತು ಬಟ್ಟೆಗಳ ತನಕ ಪ್ರತಿಯೊಂದನ್ನೂ ಒಳಗೊಂಡಿರುತ್ತದೆ.” ಉದಾಹರಣೆಗಾಗಿ, ಕಮೀಲ್‌ ಮತ್ತು ಅವಳ ಐವರು ಸೋದರಸೋದರಿಯರು, ಮೂರು ಮಲಗುವ ಕೋಣೆಗಳನ್ನು ಹಂಚಿಕೊಳ್ಳುತ್ತಾರೆ. “ಕೆಲವೊಮ್ಮೆ ನಾನು ನನ್ನಷ್ಟಕ್ಕೆ ಇರಲು ಮತ್ತು ಅವರನ್ನು ಹೊರಗಿಡಲು ಬಯಸುತ್ತೇನೆ, ಆದರೆ ಅವರು ಯಾವಾಗಲೂ ಅಲ್ಲಿರುತ್ತಾರೆ” ಎಂದು ಕಮೀಲ್‌ ಹೇಳುತ್ತಾಳೆ.

ಸುಯೋಗಗಳನ್ನು ಮತ್ತು ಮನೆವಾರ್ತೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರ ಕುರಿತಾಗಿಯೂ ಜಗಳಗಳೇಳಬಹುದು. ಮನೆಕೆಲಸದ ಅತ್ಯಧಿಕ ಭಾಗವನ್ನು ಮಾಡುವಂತೆ ಅಪೇಕ್ಷಿಸಲ್ಪಡುವುದರ ವಿಷಯದಲ್ಲಿ, ಮಕ್ಕಳಲ್ಲಿ ದೊಡ್ಡವರು ತೀವ್ರ ಅಸಮಾಧಾನವನ್ನು ತೋರಿಸಬಹುದು. ಕಿರಿಯ ಮಕ್ಕಳು, ಒಬ್ಬ ಹಿರಿಯ ಒಡಹುಟ್ಟಿದವನು ತಮ್ಮ ಮೇಲೆ ಆಜ್ಞೆ ಚಲಾಯಿಸುತ್ತಿರುವುದನ್ನು ಉಪೇಕ್ಷಿಸಬಹುದು ಅಥವಾ ಹಿರಿಯ ಒಡಹುಟ್ಟಿದವರಿಗೆ ಆಶಾರ್ಹ ಸುಯೋಗಗಳು ಸಿಗುವಾಗ ಈರ್ಷ್ಯೆಯುಳ್ಳವರಾಗಬಹುದು. ‘ನನ್ನ ಅಕ್ಕ ವಾಹನ ಚಲಾಯಿಸುವುದನ್ನು ಕಲಿಯುತ್ತಾಳೆ, ಆದರೆ ನನಗಾಗುವುದಿಲ್ಲ,’ ಎಂದು ಇಂಗ್ಲೆಂಡಿನ ಒಬ್ಬ ಹದಿವಯಸ್ಕ ಹುಡುಗಿಯು ಪ್ರಲಾಪಿಸುತ್ತಾಳೆ. ‘ನನಗೆ ತೀವ್ರ ಅಸಮಾಧಾನವಾಗುತ್ತದೆ ಮತ್ತು ನಾನು ಅವಳಿಗೆ ವಿಷಯಗಳನ್ನು ಕಷ್ಟಕರವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ.’

ಕೆಲವೊಮ್ಮೆ ಒಡಹುಟ್ಟಿದವರ ಅಸಾಂಗತ್ಯವು, ಕೇವಲ ವ್ಯಕ್ತಿತ್ವ ಘರ್ಷಣೆಗಳ ಪರಿಣಾಮವಾಗಿರುತ್ತದೆ. ಹದಿನೇಳು ವರ್ಷ ಪ್ರಾಯದ ಡಆ್ಯನ್‌ ತನ್ನ ಒಡಹುಟ್ಟಿದವರ ಕುರಿತಾಗಿ ಹೇಳುವುದು: “ನೀವು ಒಬ್ಬರನ್ನೊಬ್ಬರು ಪ್ರತಿ ದಿನ, ಹಗಲೂರಾತ್ರಿ ನೋಡುವುದಾದರೆ . . . ಮತ್ತು ಅದೇ ವ್ಯಕ್ತಿ, ನಿಮಗೆ ಸಿಟ್ಟುಬರಿಸುವ ಅದೇ ವಿಷಯವನ್ನು ಪ್ರತಿ ದಿನ ಮಾಡುವುದನ್ನು ನೋಡುವಲ್ಲಿ—ಅದು ನಿಮ್ಮನ್ನು ರೇಗಿಸಬಲ್ಲದು.” ಯುವ ಆಂಡ್ರೆ ಕೂಡಿಸುವುದು: “ನೀವು ಮನೆಯಲ್ಲಿರುವಾಗ . . . , ನೀವು ನಿಜವಾಗಿ ಏನಾಗಿದ್ದೀರೊ ಆ ರೀತಿಯಲ್ಲಿ ವರ್ತಿಸುತ್ತೀರಿ.” ಅಸಂತೋಷಕರವಾಗಿ ಅನೇಕ ವೇಳೆ, ‘ನೀವು ನಿಜವಾಗಿ ಏನಾಗಿದ್ದೀರೊ ಆ ರೀತಿಯಲ್ಲಿ ವರ್ತಿಸುವುದು’ ಸೌಮ್ಯಭಾವ, ದಯೆ ಮತ್ತು ಜಾಣ್ಮೆಯನ್ನು ಬಿಟ್ಟುಬಿಟ್ಟು ವರ್ತಿಸುವುದು ಎಂದು ಅರ್ಥೈಸಲ್ಪಡುತ್ತದೆ.

ಹೆತ್ತವರ ಇಷ್ಟಪಡುವಿಕೆಗಳು (‘ಅಮ್ಮ ನಿನ್ನನ್ನು ಹೆಚ್ಚು ಇಷ್ಟಪಡುತ್ತಾಳೆ!’), ಒಡಹುಟ್ಟಿದವರ ನಡುವಿನ ವಿವಾದಕ್ಕೆ ಕಾರಣವಾದ ಇನ್ನೊಂದು ವಿಷಯವಾಗಿರುತ್ತವೆ. ಮನಶ್ಶಾಸ್ತ್ರದ ಪ್ರೊಫೆಸರರಾದ ಲೀ ಸಾಕ್‌ ಒಪ್ಪಿಕೊಳ್ಳುವುದು: “ಒಬ್ಬ ಹೆತ್ತವಳು ತನ್ನ ಎಲ್ಲಾ ಮಕ್ಕಳನ್ನು ನಿಷ್ಕೃಷ್ಟವಾಗಿ ಒಂದೇ ರೀತಿಯಲ್ಲಿ ಪ್ರೀತಿಸುವುದು ಅಸಾಧ್ಯ, ಯಾಕಂದರೆ ಅವರು ಭಿನ್ನ ಮಾನವ ಜೀವಿಗಳಾಗಿದ್ದಾರೆ ಮತ್ತು ನಮ್ಮಿಂದ [ಹೆತ್ತವರಿಂದ] ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಅನಿವಾರ್ಯವಾಗಿ ಹೊರಸೆಳೆಯುತ್ತಾರೆ.” ಇದು ಬೈಬಲ್‌ ಸಮಯಗಳಲ್ಲಿ ಸತ್ಯವಾಗಿತ್ತು. ಮೂಲಪಿತೃವಾದ ಯಾಕೋಬ (ಇಸ್ರಾಯೇಲ)ನು, “ಅವನನ್ನು [“ಯೋಸೇಫನನ್ನು,” NW] ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ”ಸಿದನು. (ಆದಿಕಾಂಡ 37:3) ಯೋಸೇಫನ ಸೋದರರು ಅವನ ವಿಷಯದಲ್ಲಿ ಕಟುವಾಗಿ ಈರ್ಷ್ಯೆಯುಳ್ಳವರಾದರು.

ಬೆಂಕಿಯನ್ನು ಆರಿಸುವುದು

“ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು.” ಜ್ಞಾನೋಕ್ತಿ 26:20 ಹೀಗೆ ಹೇಳುತ್ತದೆ. ಕಾಡ್ಗಿಚ್ಚುಗಳ ಹರಡುವಿಕೆಯು ಅನೇಕವೇಳೆ, ಬೆಂಕಿಬಿರಿತಗಳ—ಎಲ್ಲಾ ಮರಗಳು ಕಡಿದುಹಾಕಲ್ಪಟ್ಟಿರುವ ಜಮೀನುಗಳು—ಅಡ್ಡಹಾಯುವಿಕೆಯ ಮೂಲಕ ತಡೆಯಲ್ಪಡುತ್ತದೆ. ಬೆಂಕಿ ಆರಂಭವಾದರೂ, ಅದು ಸಾಮಾನ್ಯವಾಗಿ ಆ ಹಂತದ ವರೆಗೆ ಮುಂದುವರಿದು, ಅನಂತರ ಆರಿಹೋಗುತ್ತದೆ. ಅದೇ ರೀತಿಯಲ್ಲಿ, ಭಿನ್ನಾಭಿಪ್ರಾಯಗಳನ್ನು ತಡೆಗಟ್ಟುವ—ಅಥವಾ ಕಡಿಮೆಪಕ್ಷ ಸೀಮಿತಗೊಳಿಸುವ—ವಿಧಗಳಿವೆ. ಒಂದು ವಿಧವು, ಸಂವಾದ ಮಾಡಿ, ವಿವಾದವು ಹೊತ್ತಿಕೊಳ್ಳುವ ಮುಂಚೆಯೇ ಸಂಧಾನಮಾಡಿಕೊಳ್ಳುವುದಾಗಿದೆ.

ಉದಾಹರಣೆಗಾಗಿ, ಸಮಸ್ಯೆಯು ಏಕಾಂತತೆಯ ಕೊರತೆಯಾಗಿದೆಯೊ? ಹಾಗಿರುವಲ್ಲಿ, ವಿವಾದಾಂಶವು ಅತ್ಯುಗ್ರವಾಗಿಲ್ಲದಿರುವಾಗ, ಒಟ್ಟಿಗೆ ಕುಳಿತುಕೊಂಡು, ಒಂದು ವಾಸ್ತವವಾದ ಕಾರ್ಯತಖ್ತೆಯನ್ನು ತಯಾರಿಸಲು ಪ್ರಯತ್ನಿಸಿರಿ. (‘ಇಂಥಿಂಥ ದಿನಗಳು/ತಾಸುಗಳಲ್ಲಿ ಕೋಣೆ ನನಗೆ ಇರುವುದು, ಮತ್ತು ಇಂಥಿಂಥ ದಿನಗಳಂದು ನಿನಗೆ ಸಿಗುವುದು.’) ಅನಂತರ, ಒಪ್ಪಂದವನ್ನು ಮಾನ್ಯಮಾಡುವ ಮೂಲಕ “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ.” (ಓರೆಅಕ್ಷರಗಳು ನಮ್ಮವು.) (ಮತ್ತಾಯ 5:37) ಒಂದು ಅಳವಡಿಸುವಿಕೆಯನ್ನು ಕೇಳಿಕೊಳ್ಳುವ ಯಾವುದಾದರೂ ವಿಷಯವು ಉದ್ಭವಿಸುವಲ್ಲಿ, ಬದಲಾವಣೆಯನ್ನು ಸೂಚನೆ ಇಲ್ಲದೆ ಇನ್ನೊಬ್ಬ ವ್ಯಕ್ತಿಯ ಮೇಲೆ ಹೇರುವುದರ ಬದಲಿಗೆ, ವಿಷಯವನ್ನು ಮುಂಗಡವಾಗಿಯೇ ಅವನಿಗೆ ಅಥವಾ ಅವಳಿಗೆ ತಿಳಿಸಿರಿ.

ಸ್ವತ್ತು ಹಕ್ಕುಗಳ ಕುರಿತಾಗಿ ನೀವು ಹೋರಾಡುತ್ತಿದ್ದೀರೊ? ಒಬ್ಬ ಹದಿವಯಸ್ಕಳು ದೂರಿದ್ದು: “ನನ್ನ ಮಲಸೋದರಿ ಯಾವಾಗಲೂ ನನ್ನನ್ನು ಕೇಳದೆ ನನ್ನ ವಸ್ತುಗಳನ್ನು ಉಪಯೋಗಿಸುತ್ತಾಳೆ. ಅವಳು ನನ್ನ ಪ್ರಸಾಧನವನ್ನೂ ಉಪಯೋಗಿಸಿ, ನಾನು ಒಳ್ಳೆಯ ಪ್ರಸಾಧನವನ್ನು ಖರೀದಿಸಲಿಲ್ಲವೆಂದು ಅನಂತರ ನನಗೆ ಹೇಳುವ ಧೈರ್ಯಮಾಡಿದಳು!” ನೀವು ನಿಮ್ಮ ಹೆತ್ತವರನ್ನು ಕೊನೆಯ ತೀರ್ಪುಗಾರರಾಗಿ ಕರೆಯಬಹುದು. ಆದರೆ ಇನ್ನೂ ಉತ್ತಮವಾಗಿ, ಒಂದು ಶಾಂತ ಸಮಯದಲ್ಲಿ ನಿಮ್ಮ ಸೋದರ ಅಥವಾ ಸೋದರಿಯೊಂದಿಗೆ ಕುಳಿತುಕೊಂಡು ಮಾತಾಡಿರಿ. ವೈಯಕ್ತಿಕ “ಹಕ್ಕುಗಳ” ಕುರಿತಾಗಿ ಕುತರ್ಕಮಾಡುವ ಬದಲಿಗೆ, “ಹಂಚಿಕೊಳ್ಳಲು ಸಿದ್ಧರಾಗಿರಿ” (NW). (1 ತಿಮೊಥೆಯ 6:18) ಎರವಲುಪಡೆದುಕೊಳ್ಳುವ ವಿಷಯದಲ್ಲಿ ಕೆಲವು ನಿಯಮಗಳಿಗೆ ಸಮ್ಮತಿಸಲು ಪ್ರಯತ್ನಿಸಿರಿ. ಅವುಗಳಲ್ಲಿ ಒಂದು, ಯಾವುದೇ ವಸ್ತುವನ್ನು ತೆಗೆದುಕೊಳ್ಳುವ ಮುಂಚೆ ಯಾವಾಗಲೂ ಕೇಳುವುದು ಆಗಿರಬಹುದು. ಅವಶ್ಯವಿದ್ದಲ್ಲಿ ಸಂಧಾನಗಳನ್ನು ಮಾಡಿಕೊಳ್ಳಿರಿ. ಈ ರೀತಿಯಲ್ಲಿ, ‘ಬೆಂಕಿಯು’ ಆರಂಭಗೊಳ್ಳುವ ಮುಂಚೆಯೇ ‘ಆರಿಹೋಗುವುದನ್ನು’ ನೀವು ನೋಡಸಾಧ್ಯವಿದೆ!

ಆದರೆ ಒಡಹುಟ್ಟಿದವನೊಬ್ಬನ ವ್ಯಕ್ತಿತ್ವವು ನಿಮ್ಮನ್ನು ಕೆರಳಿಸಿ ಎದುರುಹಾಕಿಕೊಳ್ಳುವುದಾದರೆ ಆಗೇನು? ನಿಜವಾಗಿಯೂ, ಅಂಥವನನ್ನು ಬದಲಾಯಿಸಲು ನೀವು ಏನನ್ನೂ ಮಾಡಸಾಧ್ಯವಿಲ್ಲ. ಆದುದರಿಂದ, ‘ಪ್ರೀತಿಯಿಂದ ಒಬ್ಬರನೊಬ್ಬರು ಸಹಿಸಿಕೊಳ್ಳಲು’ ಕಲಿಯಿರಿ. (ಎಫೆಸ 4:2) ಒಡಹುಟ್ಟಿದವರಲ್ಲೊಬ್ಬರ ಲೋಪದೋಷಗಳನ್ನು ದೊಡ್ಡದು ಮಾಡಿ ತೋರಿಸುವ ಬದಲಾಗಿ, ಕ್ರೈಸ್ತ ಪ್ರೀತಿಯನ್ನು ಅನ್ವಯಿಸಿರಿ. ಅದು “ಬಹು ಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ನೋಯಿಸುವವರು ಅಥವಾ ದಯಾರಹಿತರಾಗಿರುವ ಬದಲಾಗಿ, “ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ” ಇವುಗಳನ್ನು ದೂರಮಾಡಿರಿ ಮತ್ತು “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ.”—ಕೊಲೊಸ್ಸೆ 3:8; 4:6.

‘ಅದು ತರವಲ್ಲ!’

“ನನ್ನ ಸೋದರಿಗೆ ಅವಳು ಬಯಸಿದ್ದೆಲ್ಲವೂ ಸಿಗುತ್ತದೆ,” ಎಂದು ಒಬ್ಬ ಯುವ ವ್ಯಕ್ತಿಯು ಪ್ರಲಾಪಿಸುತ್ತಾನೆ. “ಆದರೆ ನನ್ನ ವಿಷಯದಲ್ಲಿ, ನನ್ನನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಗುತ್ತದೆ.” ಚಿರಪರಿಚಿತವಾಗಿ ಧ್ವನಿಸುತ್ತದೊ? ಆದರೆ ‘ಎಲ್ಲವೂ’ ಮತ್ತು “ಸಂಪೂರ್ಣವಾಗಿ” ಎಂಬ ಆ ಎರಡು ಪೂರ್ಣತೆಗಳನ್ನು ಗಮನಿಸಿರಿ. ಪರಿಸ್ಥಿತಿಯು ನಿಜವಾಗಿಯೂ ಅಷ್ಟು ಉಗ್ರವಾಗಿದೆಯೊ? ಸಂಭವನೀಯವಾಗಿ ಇಲ್ಲ. ಮತ್ತು ಹಾಗಿರುವುದಾದರೂ, ಇಬ್ಬರು ಭಿನ್ನ ವ್ಯಕ್ತಿಗಳಿಗೆ ಸಮಗ್ರವಾಗಿ ಸಮಾನವಾದ ಉಪಚಾರವನ್ನು ಅಪೇಕ್ಷಿಸುವುದು ವಾಸ್ತವಿಕವೊ? ಖಂಡಿತವಾಗಿಯೂ ಇಲ್ಲ! ನಿಮ್ಮ ಹೆತ್ತವರು ಕೇವಲ ನಿಮ್ಮ ವ್ಯಕ್ತಿಗತ ಅಗತ್ಯಗಳು ಮತ್ತು ಚಿತ್ತವೃತ್ತಿಗಳಿಗೆ ಪ್ರತಿಕ್ರಿಯಿಸುತ್ತಿರಬಹುದು.

ಆದರೆ ಹೆತ್ತವರು ಒಂದು ನಿರ್ದಿಷ್ಟ ಮಗುವಿಗೆ ಅನುಗ್ರಹ ತೋರಿಸುವುದು ತರವಲ್ಲದ್ದಾಗಿರುವುದಿಲ್ಲವೊ? ಹಾಗಿರಬೇಕೆಂದಿಲ್ಲ. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಅನುಗ್ರಹ ತೋರಿಸಿದ ವಿಧವನ್ನು ಜ್ಞಾಪಿಸಿಕೊಳ್ಳಿರಿ. ಕಾರಣವೇನು? ಯೋಸೇಫನು, ಯಾಕೋಬನ ಪ್ರಿಯ ಹೆಂಡತಿಯಾದ—ಸತ್ತುಹೋಗಿದ್ದ—ರಾಹೇಲಳ ಮಗನಾಗಿದ್ದನು. ಯಾಕೋಬನು ಈ ಮಗನ ಕಡೆಗೆ ವಿಶೇಷವಾಗಿ ಆಪ್ತನಾದದ್ದು ಸಂಪೂರ್ಣವಾಗಿ ಗ್ರಾಹ್ಯವಲ್ಲವೊ? ಆದಾಗಲೂ ಯೋಸೇಫನ ಕಡೆಗಿದ್ದ ಯಾಕೋಬನ ಪ್ರೀತಿಯು, ಅವನ ಇತರ ಪುತ್ರರನ್ನು ಒಳಗೂಡಿಸದೆ ಇರಲಿಲ್ಲ, ಯಾಕಂದರೆ ಅವರ ಕ್ಷೇಮದ ಕುರಿತಾಗಿ ಅವನು ನಿಜವಾದ ಚಿಂತೆಯನ್ನು ವ್ಯಕ್ತಪಡಿಸಿದನು. (ಆದಿಕಾಂಡ 37:13, 14) ಹೀಗೆ, ಯೋಸೇಫನ ವಿಷಯದಲ್ಲಿ ಅವರಿಗಿದ್ದ ಈರ್ಷ್ಯೆಯು ನಿರಾಧಾರವಾಗಿತ್ತು!

ಪ್ರಾಯಶಃ ಸಾಮಾನ್ಯವಾದ ಅಭಿರುಚಿಗಳು, ಹೋಲುವಂತಹ ವ್ಯಕ್ತಿತ್ವ, ಅಥವಾ ಇತರ ಅಂಶಗಳ ಕಾರಣದಿಂದ, ನಿಮ್ಮ ಹೆತ್ತವರು ನಿಮ್ಮ ಸೋದರ ಅಥವಾ ಸೋದರಿಯ ಕಡೆಗೆ ತದ್ರೀತಿಯಲ್ಲಿ ಸೆಳೆಯಲ್ಪಟ್ಟಿರಬಹುದು. ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೆಂಬುದನ್ನು ಇದು ಅರ್ಥೈಸುವುದಿಲ್ಲ. ನಿಮಗೆ ತೀವ್ರ ಅಸಮಾಧಾನ ಅಥವಾ ಈರ್ಷ್ಯೆ ಆಗುವಲ್ಲಿ, ನಿಮ್ಮ ಅಪರಿಪೂರ್ಣ ಹೃದಯವು ಮೇಲುಗೈಯನ್ನು ಸಾಧಿಸಿದೆಯೆಂಬುದನ್ನು ಗ್ರಹಿಸಿರಿ. ಅಂತಹ ಅನಿಸಿಕೆಗಳನ್ನು ಜಯಿಸಲು ಕಾರ್ಯನಡಿಸಿರಿ. ನಿಮ್ಮ ಅಗತ್ಯಗಳು ಪೂರೈಸಲ್ಪಡುವಷ್ಟು ಸಮಯ, ಒಬ್ಬ ಒಡಹುಟ್ಟಿದವನು ಸ್ವಲ್ಪ ಹೆಚ್ಚು ಗಮನವನ್ನು ಪಡೆಯುತ್ತಿರುವಂತೆ ತೋರುವಲ್ಲಿ ನೀವೇಕೆ ಕ್ಷೋಭೆಗೊಳ್ಳಬೇಕು?

ಸೋದರ ಸೋದರಿಯರು—ಒಂದು ಆಶೀರ್ವಾದ

ಕೆಲವೊಮ್ಮೆ ಇದನ್ನು ನಂಬುವುದು ಕಷ್ಟಕರವಾಗಿ ತೋರಬಹುದು—ವಿಶೇಷವಾಗಿ ಅವರು ನಿಮಗೆ ಸಿಟ್ಟುಬರಿಸುತ್ತಿರುವಾಗ. ಆದರೆ ಯುವ ಡಆ್ಯನಳು ನಮಗೆ ಜ್ಞಾಪಿಸುವುದು: “ಸೋದರಸೋದರಿಯರು ಇರುವುದು ವಿನೋದಕರ.” ಅವಳಿಗೆ ಏಳು ಮಂದಿ ಸೋದರಸೋದರಿಯರು ಇದ್ದಾರೆ. “ಮಾತಾಡಲಿಕ್ಕಾಗಿ ಮತ್ತು ನಿಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಲಿಕ್ಕಾಗಿ ಯಾರೊ ನಿಮಗಿದ್ದಾರೆ.”

ಆ್ಯನ್‌ ಮರೀ ಮತ್ತು ಅವಳ ಸೋದರ ಆಂಡ್ರೆ ಕೂಡಿಸುವುದು: “ನೀವು ನಿಮ್ಮ ಸ್ನೇಹಿತರೊಂದಿಗೆ ಅನೇಕ ಸ್ಥಳಗಳಿಗೆ ಹೋಗಸಾಧ್ಯವಿರುವುದಾದರೂ, ನಿಮಗೆ ಯಾವಾಗಲೂ ನಿಮ್ಮ ಸೋದರಸೋದರಿಯರಿದ್ದಾರೆ. ನೀವು ಒಂದು ಆಟವನ್ನು ಆಡಲು ಅಥವಾ ಕ್ರೀಡೆಯನ್ನು ಆಡಲು ಅಥವಾ ಉದ್ಯಾನವನಕ್ಕೆ ಹೋಗಲು ಬಯಸುವಲ್ಲಿ, ಅವರು ಯಾವಾಗಲೂ ಇರುತ್ತಾರೆ.” ಡಾನಾ ಇನ್ನೊಂದು ವ್ಯಾವಹಾರಿಕ ಪ್ರಯೋಜನವನ್ನು ಕಾಣುತ್ತಾಳೆ: “ಮನೆಕೆಲಸಗಳನ್ನು ಹಂಚಿಕೊಳ್ಳಲು ನಿಮಗೆ ಯಾರಾದರೂ ಇದ್ದಾರೆ.” ಇತರರು ತಮ್ಮ ಸೋದರ ಅಥವಾ ಸೋದರಿಯನ್ನು “ಒಬ್ಬ ವಿಶೇಷ ಸಲಹೆಗಾರರು ಮತ್ತು ಆಲಿಸುವವರು” ಮತ್ತು “ಅರ್ಥಮಾಡಿಕೊಳ್ಳುವವ”ರೋಪಾದಿ ವರ್ಣಿಸಿದ್ದಾರೆ.

ಈಗ ನಿಮಗೆ ನಿಮ್ಮ ಸೋದರ ಅಥವಾ ಸೋದರಿಯೊಂದಿಗಿರುವ ಸಮಸ್ಯೆಗಳಲ್ಲಿಯೇ ಕೆಲವನ್ನು, ನೀವು ಜೀವನದಲ್ಲಿ ಅನಂತರ ಅನುಭವಿಸುವಿರಿ. ಈರ್ಷ್ಯೆ, ಸ್ವತ್ತು ಹಕ್ಕುಗಳು, ಅಸಮಾನವಾದ ಉಪಚಾರ, ಏಕಾಂತತೆಯ ಕೊರತೆ, ಸ್ವಾರ್ಥತೆ, ವ್ಯಕ್ತಿತ್ವ ಭಿನ್ನತೆಗಳು—ಇಂತಹ ಸಮಸ್ಯೆಗಳು ಜೀವನದ ಒಂದು ಭಾಗವಾಗಿವೆ. ನಿಮ್ಮ ಸೋದರಸೋದರಿಯರೊಂದಿಗೆ ಹೊಂದಿಕೊಂಡುಹೋಗಲು ಕಲಿಯುವುದು, ಮಾನವ ಸಂಬಂಧಗಳ ಕ್ಷೇತ್ರದಲ್ಲಿ ಉತ್ತಮ ತರಬೇತಿಯಾಗಿದೆ.

ಹದಿನೇಳು ವರ್ಷ ಪ್ರಾಯದ ಆಂಡ್ರೆ ಹೀಗೆ ಹೇಳುವಾಗ 1 ಯೋಹಾನ 4:20ರಲ್ಲಿರುವ ಬೈಬಲಿನ ಮಾತುಗಳನ್ನು ಪ್ರತಿಧ್ವನಿಸುತ್ತಾನೆ: “ನೀವು ನೋಡಸಾಧ್ಯವಿರುವ ಜನರೊಂದಿಗೆ ನೀವು ಹೊಂದಿಕೊಂಡು ಹೋಗಲಾರಿರಾದರೆ, ನೀವು ನೋಡಸಾಧ್ಯವಿಲ್ಲದ ಯೆಹೋವನೊಂದಿಗೆ ಹೇಗೆ ಹೊಂದಿಕೊಂಡು ಹೋಗಬಲ್ಲಿರಿ?” ನಿಮ್ಮ ಸೋದರಸೋದರಿಯರೊಂದಿಗಿನ ಭಿನ್ನಾಭಿಪ್ರಾಯಗಳು ಆಗಿಂದಾಗ್ಗೆ ಸಂಭವಿಸುವವು. ಆದರೆ ನೀವು ಹಂಚಿಕೊಳ್ಳಲು, ಸಂವಾದ ಮಾಡಲು ಮತ್ತು ಸಂಧಾನ ಮಾಡಿಕೊಳ್ಳಲು ಕಲಿಯಸಾಧ್ಯವಿದೆ. ಅಂತಹ ಪ್ರಯತ್ನದ ಫಲಿತಾಂಶವೇನು? ಒಬ್ಬ ಸೋದರ ಅಥವಾ ಒಬ್ಬ ಸೋದರಿಯನ್ನು ಪಡೆದಿರುವುದು, ಅಷ್ಟೇನೂ ಕೆಟ್ಟದ್ದಾಗಿಲ್ಲವೆಂದು ನೀವು ನಿರ್ಣಯಿಸಬಹುದು.

ಚರ್ಚೆಗಾಗಿ ಪ್ರಶ್ನೆಗಳು

◻ ಸೋದರಸೋದರಿಯರಲ್ಲಿ ಅನೇಕ ವೇಳೆ ಏಕೆ ಘರ್ಷಣೆಯುಂಟಾಗುತ್ತದೆ?

◻ ಏಕಾಂತತೆ ಮತ್ತು ಸ್ವತ್ತು ಹಕ್ಕುಗಳ ಕುರಿತಾದ ಜಗಳಗಳನ್ನು ನೀವು ಹೇಗೆ ತಡೆಗಟ್ಟಬಲ್ಲಿರಿ?

◻ ಹೆತ್ತವರು ಕೆಲವೊಮ್ಮೆ ಒಬ್ಬ ನಿರ್ದಿಷ್ಟ ಮಗುವಿಗೆ ಅನುಗ್ರಹ ತೋರಿಸುವುದೇಕೆ? ಇದು ಅವಶ್ಯವಾಗಿ ತರವಲ್ಲವೆಂದು ನಿಮಗನಿಸುತ್ತದೊ?

◻ ಒಬ್ಬ ಏಕಮಾತ್ರ ಮಗುವು ಅನನುಕೂಲಕರವಾದ ಸ್ಥಿತಿಯಲ್ಲಿರುತ್ತದೊ?

◻ ಸೋದರಸೋದರಿಯರನ್ನು ಪಡೆದಿರುವುದರಲ್ಲಿನ ಕೆಲವು ಪ್ರಯೋಜನಗಳು ಯಾವುವು?

[ಪುಟ 52 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಒಬ್ಬ ಹೆತ್ತವಳು ತನ್ನ ಎಲ್ಲಾ ಮಕ್ಕಳನ್ನು ನಿಷ್ಕೃಷ್ಟವಾಗಿ ಒಂದೇ ರೀತಿಯಲ್ಲಿ ಪ್ರೀತಿಸುವುದು ಅಸಾಧ್ಯ, ಯಾಕಂದರೆ ಅವರು ಭಿನ್ನ ಮಾನವ ಜೀವಿಗಳಾಗಿದ್ದಾರೆ.”—ಮನಶ್ಶಾಸ್ತ್ರದ ಪ್ರೊಫೆಸರರಾದ ಲೀ ಸಾಕ್‌

[ಪುಟ 54 ರಲ್ಲಿರುವ ಚೌಕ]

‘ನಾನೊಬ್ಬ ಏಕಮಾತ್ರ ಸಂತಾನ’

ಇದು ನಿಮ್ಮ ಪರಿಸ್ಥಿತಿಯಾಗಿರುವಲ್ಲಿ, ನೀವು ಅವಶ್ಯವಾಗಿ ಪ್ರತಿಕೂಲ ಸ್ಥಿತಿಯಲ್ಲಿರುವುದಿಲ್ಲ. ಒಂದು ವಿಷಯವೇನಂದರೆ, ಬೇರೆ ಯುವ ಜನರಿಗೆ ತಮ್ಮ ಒಡಹುಟ್ಟಿದವರೊಂದಿಗೆ ಹೊಂದಿಕೊಂಡು ಹೋಗುವದು ಕಷ್ಟಕರವಾಗಿರುವಾಗ, ನೀವು ನಿಮ್ಮ ಆಪ್ತ ಸ್ನೇಹಿತರನ್ನು (ಖಂಡಿತವಾಗಿಯೂ ನಿಮ್ಮ ಹೆತ್ತವರ ಸಮ್ಮತಿಯೊಂದಿಗೆ) ವೈಯಕ್ತಿಕವಾಗಿ ಆರಿಸಿಕೊಳ್ಳಸಾಧ್ಯವಿದೆ. ಅಭ್ಯಾಸ, ಮನನ ಮಾಡುವಿಕೆ, ಅಥವಾ ನಿರ್ದಿಷ್ಟ ಕೌಶಲಗಳು ಅಥವಾ ಸಹಜಶಕ್ತಿಗಳ ವಿಕಸನಕ್ಕಾಗಿ ನಿಮಗೆ ಹೆಚ್ಚು ಸಮಯವೂ ಇರಬಹುದು.—ಒಂಟಿತನದ ವಿಷಯದ ಮೇಲಿರುವ ಅಧ್ಯಾಯ 14ನ್ನು ನೋಡಿರಿ.

ಯುವ ತಾಮಸ್‌ ಹೀಗೆ ಹೇಳುವಾಗ ಇನ್ನೊಂದು ಪ್ರಯೋಜನದ ಕಡೆಗೆ ಕೈತೋರಿಸುತ್ತಾನೆ: “ಒಬ್ಬ ಏಕಮಾತ್ರ ಸಂತಾನದೋಪಾದಿ, ನಾನು ನನ್ನ ಹೆತ್ತವರ ಪೂರ್ತಿ ಗಮನವನ್ನು ಪಡೆದೆ.” ಹೆತ್ತವರ ಮಿತಿಮೀರಿದ ಗಮನವು, ಒಬ್ಬ ಯುವ ವ್ಯಕ್ತಿಯನ್ನು ಸ್ವಾರ್ಥಿಯನ್ನಾಗಿ ಮಾಡಬಲ್ಲದು, ನಿಜ. ಆದರೆ ಅದನ್ನು ಕೊಡುವುದರಲ್ಲಿ ಹೆತ್ತವರು ಸಮತೋಲನವನ್ನು ತೋರಿಸುವಲ್ಲಿ, ಹೆತ್ತವರ ಗಮನವು ನಿಮ್ಮನ್ನು ಹೆಚ್ಚು ಶೀಘ್ರವಾಗಿ ಪ್ರೌಢರಾಗಲು ಮತ್ತು ವಯಸ್ಕರ ನಡುವೆ ಇರುವಾಗ ಆರಾಮವಾಗಿರಲು ಸಹಾಯಮಾಡಬಲ್ಲದು.

ಆದಾಗಲೂ, ವಸ್ತುಗಳನ್ನು ಹಂಚಿಕೊಳ್ಳಲಿಕ್ಕಾಗಿ ನಿಮಗೆ ಸೋದರಸೋದರಿಯರು ಇಲ್ಲದಿರುವುದರಿಂದ, ಸ್ವಾರ್ಥಿಗಳಾಗುವ ಅಪಾಯವಿದೆ. ಯೇಸು ಬುದ್ಧಿವಾದ ಕೊಟ್ಟದ್ದು: “ಕೊಡುವುದನ್ನು ಅಭ್ಯಾಸಿಸಿರಿ.” (ಲೂಕ 6:38, NW) ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿರಿ. ಇತರರ ಅಗತ್ಯಗಳ ಮೇಲೆ ಒಂದು ನೋಟವನ್ನಿಡುವ ರೂಢಿಯನ್ನು ಬೆಳೆಸಿಕೊಳ್ಳುತ್ತಾ, ಸಾಧ್ಯವಿರುವಲ್ಲೆಲ್ಲಾ ನಿಮ್ಮ ಸಹಾಯವನ್ನು ನೀಡಿರಿ. ಜನರು ಅಂತಹ ಉದಾರತೆಗೆ ಪ್ರತಿಕ್ರಿಯಿಸುವರು. ಮತ್ತು ನೀವು ಏಕಮಾತ್ರ ಮಗುವಾಗಿರುವುದಾದರೂ, ನಿಶ್ಚಯವಾಗಿಯೂ ಒಂಟಿಗರಾಗಿಲ್ಲವೆಂಬುದನ್ನು ಕಂಡುಕೊಳ್ಳಬಹುದು.

[ಪುಟ 53 ರಲ್ಲಿರುವ ಚಿತ್ರ]

ನನಗೆ ಒಬ್ಬ ಸೋದರಿಯಿಲ್ಲದಿರುವುದಕ್ಕೆ ನಾನು ಅನೇಕವೇಳೆ ವಿಷಾದಿಸುತ್ತೇನೆ; ಆದರೂ ನನಗೆ ನಿಶ್ಚಯವಾಗಿಯೂ ನಿರ್ದಿಷ್ಟ ಪ್ರಯೋಜನಗಳಿವೆ