ಡೇಟಿಂಗ್, ಪ್ರೇಮ, ಮತ್ತು ವಿರುದ್ಧ ಲಿಂಗದವರು
ವಿಭಾಗ 7
ಡೇಟಿಂಗ್, ಪ್ರೇಮ, ಮತ್ತು ವಿರುದ್ಧ ಲಿಂಗದವರು
ವಿರುದ್ಧ ಲಿಂಗದವರನ್ನು, ಬಹುಶಃ ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯನ್ನು ನೀವು ಗಮನಿಸತೊಡಗಿದ್ದೀರಿ. ಹೊಸ ಅನಿಸಿಕೆಗಳು ಮತ್ತು ಭಾವನೆಗಳು ನಿಮ್ಮ ದೇಹದಾದ್ಯಂತ ಚಿಮ್ಮುತ್ತವೆ. ಆದರೆ ನಿಮಗನಿಸುತ್ತಿರುವ ಭಾವನೆಯಾದರೊ ಯಾವುದು? ಅದು ಸದಾಕಾಲ ಬಾಳುವಂತಹ ರೀತಿಯ ಪ್ರೇಮವೊ ಅಥವಾ ಬೇರಾವುದೊ ವಿಷಯವೊ? ಮತ್ತು ಆ ಅನಿಸಿಕೆಗಳ ಕುರಿತು ನೀವು ಏನು ಮಾಡಬೇಕು? ಪ್ರಣಯದ ವಿಷಯದಲ್ಲಿ ನಿಮಗಿರುವ ಪ್ರಶ್ನೆಗಳಿಗೆ ಕೆಲವು ಸಮಂಜಸವಾದ ಉತ್ತರಗಳನ್ನು ನಾವೀಗ ಪರಿಶೀಲಿಸೋಣ.